Tag: Pushpa: The Rise

  • ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ

    ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಮಗಳು ಅರ್ಹ ಅಪ್ಪನನ್ನು ಮುದ್ದಾಗಿ ಸ್ವಾಗತಿಸಿದ್ದಾಳೆ. ಈ ಫೋಟೋಗಳನ್ನು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Allu Arjun (@alluarjunonline)

    ಶೂಟಿಂಗ್‍ಗಾಗಿ ವಿದೇಶಕ್ಕೆ ಹೋಗಿದ್ದ ಅಲ್ಲು ಅರ್ಜುನ್ 16 ದಿನಗಳ ನಂತರ ಮತ್ತೆ ಮನೆಗೆ ಮರಳಿದ್ದಾರೆ. ಅಪ್ಪನಿಗೆ ಸರ್‌ಪ್ರೈಸ್ ಕೊಡಬೇಕು ಎಂದು ಮಗಳು ಅರ್ಹ, ವಿಶೇಷವಾಗಿ ತಯಾರಿ ಮಾಡಿಕೊಂಡಿದ್ದಳು. ಮಗಳು ಮುದ್ದಾಗಿ ಸ್ವಾಗತ ಮಾಡಿದ ಫೋಟೋವನ್ನು ಅಲ್ಲು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಈ ಫೊಟೋದಲ್ಲಿ ಮಗಳು ಅರ್ಹ, ಹೂಗಳಿಂದ ನೆಲದ ಮೇಲೆ ‘ಸುಸ್ವಾಗತ ಅಪ್ಪ’ ಎಂದು ಬರೆದಿದ್ದಾಳೆ. ಈ ಫೋಟೋಗೆ ಅಲ್ಲು ಅರ್ಜುನ್, 16 ದಿನಗಳ ವಿದೇಶಿ ಪ್ರವಾಸದಿಂದ ಹಿಂತಿರುಗಿದಾಗ ಸ್ವೀಟೆಸ್ಟ್ ಸ್ವಾಗತ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಮಕ್ಕಳ ಜೊತೆಗೆ ಕಾಲಕಳೆಯುವ ವೀಡಿಯೋ-ಫೋಟೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಮಗ ಅಲ್ಲು ಅಯಾನ್ ಮತ್ತು ಮಗಳು ಅಲ್ಲು ಅರ್ಹ ಜೊತೆಗಿನ ವಿಶೇಷ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

    ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದು, ಸಿನಿಮಾ ಯಶಸ್ಸನ್ನು ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

  • ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

    ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

    ಹೈದರಾಬಾದ್: ಅಮುಲ್ ತನ್ನ ಜಾಹಿರಾತಿಗಾಗಿ ‘ಪುಷ್ಪಾ:ದಿ ರೈಸ್’ ಸಿನಿಮಾದ ಪಾತ್ರಗಳನ್ನು ಬಳಸಿಕೊಂಡಿದೆ.

    ಸಿನಿಮಾ ತಾರೆಗಳಿಗೆ ತಮ್ಮ ಅಭಿಮಾನವನ್ನು ಗೌರವ ಸಲ್ಲಿಸಲು ಹಲವು ರೀತಿ ಶ್ರಮಪಡುತ್ತಾರೆ. ಅದರಂತೆ ದೇಶದ ಪ್ರಮುಖ ಗ್ರಾಹಕ ಉತ್ಪನ್ನ ಬ್ರಾಂಡ್‍ಗಳಲ್ಲೊಂದಾದ ಅಮುಲ್ ತನ್ನ ಜಾಹೀರಾತುಗಳ ಮೂಲಕ ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವವನ್ನು ಸಲ್ಲಿಸಿದೆ. ಈ ಜಾಹೀರಾತು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಪುಷ್ಪಾ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಪಾತ್ರಗಳನ್ನು ಅಮುಲ್ ತನ್ನ ಹೊಸ ಜಾಹೀರಾತಿನಲ್ಲಿ ಬಳಸಿಕೊಂಡಿದೆ.

    ಫೋಟೋದಲ್ಲಿ ಏನಿದೆ?
    ‘ಸಾಮಿ ಸಾಮಿ’ ಸಾಂಗ್ ಟ್ರ್ಯಾಕ್ ನಲ್ಲಿ ರಶ್ಮಿಕಾ ಹೆಜ್ಜೆಯನ್ನು ಸ್ತ್ರೀ ಕಾರ್ಟೂನ್ ಪಾತ್ರಕ್ಕೆ ನೀಡಲಾಗಿದೆ. ಶ್ರೀವಲ್ಲಿಯ ಪಾತ್ರದ ಕಾರ್ಟೂನ್ ಸ್ಟೈಲಿಷ್ ಆಗಿದೆ. ಶ್ರೀವಲ್ಲಿ ಕೈಯಲ್ಲಿ ಬೆಣ್ಣೆ ಇಟ್ಟುಕೊಂಡಿದ್ದು, ಪುಷ್ಪನನ್ನು ಬೆಣ್ಣೆ ತಿನ್ನಲು ಕರೆಯುವ ಸಂಭಾಷಣೆ ನಡೆಯುವ ರೀತಿ ಕಾರ್ಟೂನ್ ರೆಡಿ ಮಾಡಲಾಗಿದೆ.

    ತಮ್ಮ ಸೃಜನಾತ್ಮಕ ಶೀರ್ಷಿಕೆಗಳಿಗೆ ಹೆಸರುವಾಸಿಯಾದ ಅಮುಲ್, ಚಿತ್ರವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲು ‘ಪುಷ್ಪ್ಯಾಕ್ ದಿ ಸ್ಲೈಸ್’ ಎಂಬ ಪದವನ್ನು ಬಳಸಿದ್ದಾರೆ. ಅದರಲ್ಲಿಯೂ ಅಲ್ಲು ಅರ್ಜುನ್ ಅವರ ಹೆಸರನ್ನು ಸೃಜನಾತ್ಮಕವಾಗಿ ಬಳಸಿದೆ. ‘ಅಮುಲ್ಲು’ ಎಂದು ಬಳಸಿದ್ದು ‘ಅಮುಲ್’ ಹಾಗೂ ‘ಅಲ್ಲು’ ಪದ ಸೇರಿದೆ.

    ಪುಷ್ಪಾ: ದಿ ರೈಸ್ ತಂಡ ಅಮುಲ್‍ನ ಈ ಜಾಹಿರಾತಿನಿಂದ ಫುಲ್ ಖುಷ್ ಆಗಿದ್ದು, ಪುಷ್ಪಾ ಸಿನಿಮಾದ ಕಾರ್ಟೂನ್ ಫೋಟೋವನ್ನು ಟ್ವೀಟ್ ಮಾಡಿದೆ.

    ಪುಷ್ಪಾ: ದಿ ರೈಸ್ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಕಳೆದ ಡಿಸೆಂಬರ್ 17 ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗ ಪಾತ್ರವಾಗಿದೆ. ಈ ಚಿತ್ರವು ವಿಶ್ವಾದ್ಯಂತ 350 ಕೋಟಿ ರೂ. ಗೂ ಹೆಚ್ಚು ಗಳಿಸಿದೆ. ಈ ಸಿನಿಮಾ ಜನವರಿ 7 ರಂದು ಓಟಿಟಿಯಲ್ಲಿಯೂ ರಿಲೀಸ್ ಆಗಿದೆ. ಈ ಸಿನಿಮಾದ ಮುಂದುವರೆದ ಭಾಗ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.