Tag: pushpa raj

  • Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    ಕೇವಲ ಟಾಲಿವುಡ್‌ ಮಾತ್ರವಲ್ಲ, ಇಡೀ ಭಾರತ ಚಿತ್ರರಂಗವೇ ಪುಷ್ಪ-2 (Pushpa 2) ಚಿತ್ರ ರಿಲೀಸ್‌ ಆಗುವ ದಿನಕ್ಕಾಗಿ ತುದಿಗಾಲಲ್ಲಿ ನಿಂತಿದೆ.

    ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಹುಟ್ಟಿದೆ. ಪುಷ್ಪರಾಜ್‌ ಪಾತ್ರದಲ್ಲಿ ಅಲ್ಲು ಅರ್ಜುನ್‌ ಖದರ್‌ ಲುಕ್‌ಗಳು ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಸ್‌ ಹೆಚ್ಚಿಸಿದೆ. ಇದೀಗ ʻಪುಷ್ಪ 2; ದಿ ರೂಲ್‌ʼ ಚಿತ್ರದ ಟ್ರೇಲರ್‌ (Pushpa 2 The Rule Trailer) ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕುತೂಹಲಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದಂತಿದೆ ಟ್ರೇಲರ್.‌

    ಇಂದು ಬಿಡುಗಡೆಯಾದ ಟ್ರೈಲರ್‌ನಲ್ಲಿ ಅಲ್ಲು ಅರ್ಜುನ್‌ (Allu Arjun) ಜೊತೆಗೆ ಫಹಾದ್ ಫಾಸಿಲ್ ಖದರ್‌ (Fahadh Faasil) ಲುಕ್‌ನಲ್ಲಿ ಕಾಣಿಸಿಕೊಂಡರೆ, ರಶ್ಮೀಕಾ ಮಂದಣ್ಣ ಕೂಡ ಶೈನ್‌ ಆಗಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

    ಕಾಡಾನೆಯ ಜೋರು ಸೌಂಡು, ಯಾರವನು? ಹಣ ಎಂದರೆ ಲೆಕ್ಕಕ್ಕಿಲ್ಲ. ಅಧಿಕಾರ ಅಂದ್ರೆ ಭಯ ಇಲ್ಲ ಎನ್ನುವ ಜಗಪತಿ ಬಾಬು ಡೈಲಾಗ್‌ನೊಂದಿಗೆ ಟ್ರೈಲರ್‌ ತೆರೆದುಕೊಳ್ಳುತ್ತದೆ. ಅಲ್ಲಿಂದ ಶುರುವಾಗುವ ಟ್ರೈಲರ್‌ ತನ್ನದೇ ಆದ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡ ಪುಷ್ಪರಾಜ್‌ನ ಇನ್ನೊಂದು ಮುಖದ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಪೊಲೀಸ್‌ ಇಲಾಖೆ ಮಾತ್ರವಲ್ಲದೆ, ರಾಜಕಾರಣಿಗಳಿಗೂ ಈ ಪುಷ್ಪರಾಜ್‌ ನಡುಕ ಹುಟ್ಟಿಸಿದ್ದಾನೆ. ಹೇಳಿ ಕೇಳಿ ಅಲ್ಲು ಅರ್ಜುನ್‌ ಮಾಸ್‌ ಹೀರೋ. ಆ ಪ್ರಭಾವಳಿಗೆ ತಕ್ಕಂತೆಯೇ ಅವರನ್ನೇ ಟ್ರೇಲರ್‌ನಲ್ಲಿ ಎತ್ತಿ ಮೆರೆಸಲಾಗಿದೆ.

    ಪುಷ್ಪರಾಜ್‌ನ ಬಾಲ್ಯದ ಕಹಿ ಅನುಭವಗಳನ್ನು ಸೀಕ್ವೆಲ್‌ನಲ್ಲಿ ಕೊಂಚ ಎಳೆದು ತಂದಿರುವ ನಿರ್ದೇಶಕ ಸುಕುಮಾರ್.‌ ಅದಕ್ಕೆ ತಕ್ಕಂತೆ, ‘ನಾಮ್ ಚೋಟಾ ಹೈ.. ಲೇಕಿನ್ ಸೌಂಡ್ ಬಡಾ ಹೈ’ ಎಂದು ಪುಷ್ಪರಾಜ್‌ ಹೇಳುವ ಎಲಿವೇಶನ್ ದೃಶ್ಯಗಳೂ ಟ್ರೇಲರ್‌ನಲ್ಲಿವೆ. ಇದೆಲ್ಲದರ ಜತೆಗೆ ಶ್ರೀವಲ್ಲಿ ಜತೆಗಿನ ದೃಶ್ಯಗಳು ಟ್ರೇಲರ್‌ನಲ್ಲಿವೆ. ಭನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಫಹಾದ್‌ ಫಾಸಿಲ್‌ ಖದರ್‌ ಕ್ರೇಜಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ಅದೇ ಗತ್ತು ಎರಡನೇ ಭಾಗದಲ್ಲಿಯೂ ಮುಂದುವರಿದಿದೆ. ಇದನ್ನೂ ಓದಿ: ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ

    ಮೊದಲ ಭಾಗಕ್ಕಿಂತ ದೊಡ್ಡ ಕ್ಯಾನ್ವಾಸ್‌ನಲ್ಲಿ ಪುಷ್ಪ 2 ಮೂಡಿಬಂದಿದೆ. ಅದಕ್ಕೆ ತಕ್ಕಂತೆ ಪುಷ್ಪರಾಜ್ ಬಾಯಿಂದ ಡೈಲಾಗ್‌ವೊಂದು ಹೊರಡಿದೆ. “ಈ ಪುಷ್ಪರಾಜ್‌ ನ್ಯಾಶನಲ್‌ ಅಲ್ಲ, ಇಂಟರ್‌ನ್ಯಾಶನಲ್” ಎಂದಿದ್ದಾನೆ. ಅಲ್ಲಿಗೆ ಅದೇ ಇಂಟರ್‌ನ್ಯಾಶನಲ್‌ ಮಟ್ಟದಲ್ಲಿಯೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್.‌ ಇಡೀ ಟ್ರೇಲರ್‌ನಲ್ಲಿ ಸಾಹಸ ದೃಶ್ಯಗಳು ಮೇಳೈಸಿವೆ. ಮೈಚಳಿ ಬಿಟ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.‌ ಕೊನೆಯಲ್ಲಿ ಅಲ್ಲು ಅರ್ಜುನ್‌ ಬೆಂಬಲಿಗರು ʻಪುಷ್ಪ ಅಂದ್ರೆ ಫ್ಲವರ್‌ ಅನ್ಕೊಂಡ್ರಾʼ ಎನ್ನುತ್ತಾರೆ? ಅದಕ್ಕೆ ಗನ್‌ ಸೌಂಡಿನೊಂದಿಗೆ ಫೈಯರ್‌ ಅಲ್ವಾ? ಎನ್ನುತ್ತಾರೆ ಫಾಸಿಲ್‌, ಅದಕ್ಕೆ ಪುಷ್ಪಾ ಬೆಂಬಲಿಗರು ʻಅಲ್ಲ ಅಲ್ಲ ಎನ್ನುತ್ತಿದ್ದಂತೆ ಅಲ್ಲು ಅರ್ಜುನ್‌ ವೈಲ್ಡ್‌ ಫೈಯರ್‌ʼ ಎನ್ನುವುದರೊಂದಿಗೆ ಟ್ರೈಲರ್‌ ಕೊನೆಗೊಳ್ಳುತ್ತದೆ.

    ಇಡೀ ಭಾರತವೇ ಎದುರು ನೋಡುತ್ತಿರುವ ʻಪುಷ್ಪ-2; ದಿರೂಲ್‌ʼ ಖದರ್‌ ಟ್ರೈಲ್‌ನೊಂದಿಗೆ ಭಾರಿ ಕುತೂಹಲ ಹೆಚ್ಚಿಸಿದೆ. ಸಿನಿಮಾ ಹೇಗೆ ಸೌಂಡು ಮಾಡುತ್ತದೆ ಎಂಬುದನ್ನ ಕಾಡುನೋಡ್ಬೇಕಿದೆ. ಇದನ್ನೂ ಓದಿ:  ಗುಡ್​ನ್ಯೂಸ್​​ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

  • ʼಪುಷ್ಪʼ ಸ್ಟೈಲ್‌ನಲ್ಲಿ ಮಿಂಚಿದ ಗಣಪ

    ʼಪುಷ್ಪʼ ಸ್ಟೈಲ್‌ನಲ್ಲಿ ಮಿಂಚಿದ ಗಣಪ

    ಮುಂಬೈ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ. ಹಬ್ಬ ಆಚರಿಸಲು ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಭಕ್ತರು ಮನೆಗಳಿಗೆ ತಂದಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಕೆಲವರು ಜನಪ್ರಿಯ ಸಿನಿಮಾಗಳ ಸ್ಟೈಲ್‌ ಮಾದರಿಯ ಗಣೇಶ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದಾರೆ.

    ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಗಡ್ಡ ಸವರುವ ಸ್ಟೈಲ್‌ ದೇಶವಷ್ಟೇ ಅಲ್ಲ ವಿದೇಶದಲ್ಲೂ ಜನಪ್ರಿಯತೆ ಗಳಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವವರೂ ಈ ಸ್ಟೈಲ್‌ ಅನುಕರಿಸಿ ಖುಷಿಪಟ್ಟಿದ್ದರು. ಅದೇ ಮಾದರಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಂಬೈನಲ್ಲಿ ಭಕ್ತರು ಸುದ್ದಿಯಾಗಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಕುರ್ತಾ-ಪೈಜಾಮ್‌ ಧರಿಸಿ ಗಡ್ಡ ಸವರುವ ಮಾದರಿಯಲ್ಲೇ ಗಣೇಶ ಮೂರ್ತಿ ರೂಪಿಸಲಾಗಿದೆ. ಮೂರ್ತಿಯ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು

    ಕಲಾವಿದರ ಪ್ರತಿಭೆ ಹಾಗೂ ಅಭಿಮಾನಿಗಳ ಫ್ಯಾನ್ಸ್‌ ಕ್ರೇಜ್‌ನ್ನು ಕೆಲವರು ಹೊಗಳಿದ್ದಾರೆ. ವಿಗ್ರಹ ತಯಾರಕರ ಸೃಜನಶೀಲತೆಯನ್ನು ಹಲವರು ಇಷ್ಟಪಡದೇ ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ.

    ದೇವ ಗಣಪನನ್ನು ನಾವು ದೇವರಂತೆಯೇ ಭಾವಿಸಬೇಕು. ದೇವರು ಎಂದು ಭಾವಿಸುವವರು ಈ ರೀತಿ ಮಾಡುವುದಿಲ್ಲ. ನೀವು ಅಲ್ಲು ಅರ್ಜುನ್‌ ಅಭಿಮಾನಿಗಳಾಗಿದ್ದರೆ, ದಯವಿಟ್ಟು ಅಭಿಮಾನವನ್ನು ಹಾಗೆಯೇ ಇಟ್ಟುಕೊಳ್ಳಿ. ಈ ರೀತಿಯ ಕೆಲಸಗಳನ್ನು ಮಾಡಬೇಡಿ ಎಂದು ಸಿನಿಮಾ ಮಾದರಿ ಗಣಪ ಮೂರ್ತಿ ಪ್ರತಿಷ್ಠಾಪಿಸಿರುವವರ ಕುರಿತು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ದೇವರು ಗಣಪತಿಯನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದ ‘ಪುಷ್ಪʼ ಡಿಸೆಂಬರ್ 2021ರಲ್ಲಿ ತೆರೆ ಕಂಡಿತು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಚಿತ್ರವು ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿತು.

    Live Tv
    [brid partner=56869869 player=32851 video=960834 autoplay=true]