Tag: Pushpa film

  • ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ಕಠಿಣ ಶಿಕ್ಷೆಯಾಗಲಿ ಎಂದ ರಶ್ಮಿಕಾ ಮಂದಣ್ಣ

    ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ಕಠಿಣ ಶಿಕ್ಷೆಯಾಗಲಿ ಎಂದ ರಶ್ಮಿಕಾ ಮಂದಣ್ಣ

    ಣಿಪುರದ (Manipur) ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನು (Womens) ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದೆ. ತಪ್ಪು ಮಾಡಿರುವ ದುಷ್ಟರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ ಎಂದು ಬಾಲಿವುಡ್ ಕಲಾವಿದರು ಕೂಡ ಆಗ್ರಹ ಮಾಡಿದ್ದಾರೆ. ಈ ಬೆನ್ನಲ್ಲೇ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪುಷ್ಪ 2, ಅನಿಮಲ್, ಟೈಗರ್ ಶ್ರಾಫ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.

    ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಾಲಿವುಡ್ ಸ್ಟಾರ್ಸ್ ಪ್ರತಿಕ್ರಿಯೆ ನೀಡಿದ್ದರು. ಈಗ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಓದಿದ್ದನ್ನು ನಂಬಲು ಆಗುತ್ತಿಲ್ಲ. ಕ್ಷಮಿಸಿ, ದೇಶದಲ್ಲಿ ಏನು ನಡೆಯುತ್ತಿದೆ. ಮಣಿಪುರದ ಮಹಿಳೆಯರ ಪರ ನಟಿ ಮಾತನಾಡಿದ್ದಾರೆ. ದುಷ್ಟರಿಗೆ ತಕ್ಕ ಶಿಕ್ಷೆಯಾಗಲಿ. ಅಪರಾಧಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:‘ಹಿರಣ್ಯಕಶ್ಯಪ’ನಾಗಿ ಎಂಟ್ರಿ ಕೊಟ್ಟ ರಾಣಾ ದಗ್ಗುಬಾಟಿ ಮೇಲೆ ಶಾಕುಂತಲಂ ನಿರ್ದೇಶಕ ಗರಂ

    ಖ್ಯಾತ ನಟರಾದ ಸಂಜಯ್ ದತ್, ಅಕ್ಷಯ್ ಕುಮಾರ್, ರಿತೇಶ್ ದೇಶಮುಖ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣರಾದ ದುರುಳರಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯು ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನನಗೆ ಅತ್ಯಂತ ನೋವು ತಂದಿದೆ. ತಪ್ಪು ಮಾಡಿದರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ನೋವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ

    ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ

    ಸ್ಟಾರ್ ನಟಿ ಸಮಂತಾ ಅವರು ಚಿತ್ರರಂಗದಲ್ಲಿ ಯಾರ ಸಹಾಯವಿಲ್ಲದೇ ತನ್ನ ಶ್ರಮದಿಂದ ನೆಲೆಗಿಟ್ಟಿಸಿಕೊಂಡ ಪ್ರತಿಭಾನ್ವಿತ ನಟಿ. ಸದ್ಯ ‘ಶಾಕುಂತಲಂ’ ಚಿತ್ರದ ನಟನೆಗಾಗಿ ಸ್ಯಾಮ್ ಗಮನ ಸೆಳೆಯುತ್ತಿದ್ದಾರೆ. ಚಿತ್ರಕ್ಕೆ ಬರುತ್ತಿರುವ ಕಾಮೆಂಟ್ಸ್‌ನಿಂದಾಗಿ ಖುಷಿಯಲ್ಲಿರುವ ಸಮಂತಾ ಬಗ್ಗೆ ನಿರ್ಮಾಪಕನೊಬ್ಬ ಕಟುವಾಗಿ ಮಾತನಾಡಿದ್ದಾರೆ. ಸಮಂತಾಳದ್ದು ಅಜ್ಜಿ ಮುಖ, ಅವಳ ವೃತ್ತಿ ಜೀವನ ಮುಗಿದಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

    ಅನಾರೋಗ್ಯದ ವಿರುದ್ಧ ನಟಿ ಹೋರಾಡುತ್ತಿದ್ದಾರೆ. ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡ್ತಿದ್ದಾರೆ. ಈ ನಡುವೆ ತೆಲುಗಿನ ನಿರ್ಮಾಪಕ ಚಿಟ್ಟಿಬಾಬು ಸಮಂತಾ ವಿರುದ್ಧ ಮಾತನಾಡಿದ್ದಾರೆ. ‘ಶಾಕುಂತಲಂ’ ಸಿನಿಮಾ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಶಾಕುಂತಲೆ ಅಪ್ರತಿಮ ಸೌಂದರ್ಯವತಿ, ಆದರೆ ಸಮಂತಾಗೆ ಆ ಪಾತ್ರ ಸೂಟ್‌ ಆಗಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಅದೂ ಇದು ಎಂದು ಹೈ ಡ್ರಾಮಾ ಮಾಡ್ತಿದ್ದಾರೆ. ಈ ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲಾ ಅವರ ಪ್ರಚಾರ ಗಿಮಿಕ್. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಚಿಟ್ಟಿಬಾಬು ಕಿಡಿಕಾರಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಸಮಂತಾಗೆ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ ಎಂದಿದ್ದಾರೆ ಚಿಟ್ಟಿಬಾಬು. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಪಟ್ಟ ಅನುಭವಿಸಿದ್ದಾಳೆ. ಈಗ ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ‘ಶಾಕುಂತಲಂ’ ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲಂ ಅಂತಹ ಅಂದಗಾತಿಯ ಪಾತ್ರಕ್ಕೆ ಹೇಗೆ ಸೂಟ್ ಆಗುತ್ತಾಳೆ ಎಂಬುದಷ್ಟೆ ಎಂದಿದ್ದಾರೆ ಚಿಟ್ಟಿಬಾಬು.

    ನಿರ್ಮಾಪಕ ಚಿಟ್ಟಿಬಾಬು ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವಿರೋಧ ವ್ಯಕ್ತವಾಗಿದೆ. ಹಿರಿಯ ನಿರ್ಮಾಪಕನಾಗಿ ನಟಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ. ಚಿಟ್ಟಿಬಾಬು ಇಷ್ಟೆಲ್ಲಾ ಮಾತನಾಡಿದ್ರು ಕೂಡ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ನ್ನಡದ ಲಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾನ್ ಬಗ್ಗೆ ನಟರಾಕ್ಷಸ ಡಾಲಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ರಶ್ಮಿಕಾ ಕನ್ನಡದ ಹುಡುಗಿ, ಯಾಕೆ ಬ್ಯಾನ್ ಮಾಡಬೇಕು ಎಂದು ನಟ ಧನಂಜಯ್ (Actor Dhananjay) ಪ್ರಶ್ನಿಸಿದ್ದಾರೆ.

    ಕಿರಿಕ್ ಬ್ಯೂಟಿ ರಶ್ಮಿಕಾ ಸದ್ಯ ಸೌತ್ ಮತ್ತು ಬಾಲಿವುಡ್‌ನಲ್ಲಿ ಬೆಳಗುತ್ತಿರುವ ನಟಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚೊಚ್ಚಲ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರನ್ನ ರಶ್ಮಿಕಾ ಹೇಳಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಶ್ಮಿಕಾರನ್ನ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಮಾಡಲೇಬೇಕು ಎಂಬ ಕೂಗು ಕೇಳಿ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯಾನ್ (Ban) ಎಂಬ ಅಭಿಯಾನ ಕೂಡ ಆಗಿತ್ತು. ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಡಾಲಿಗೆ (Dali) ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ

    ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಸಿನಿಮಾರಂಗ ಎಲ್ಲರಿಗೂ ಓಪನ್ ಆಗಿದೆ. ಯಾರು ಯಾರನ್ನು ಇಲ್ಲಿ ಬರಬೇಡಿ ಎಂದು ಹೇಳೋದಕ್ಕೆ ಆಗಲ್ಲ. ಸಣ್ಣ ಪುಟ್ಟ ತಪ್ಪಾಯ್ತು ಅಂದಾಕ್ಷಣ ಮನೆ ಮಕ್ಕಳನ್ನ ಮನೆಯಿಂದ ಹೊರಗೆ ಹಾಕ್ತೀರಾ? ಇಲ್ಲಾವಲ್ಲಾ, ಆ ಜೀವನೂ ಅಷ್ಟೇ ಅವರು ಎಲ್ಲಿದ್ದರೂ ಕೂಡ ಕನ್ನಡದ ಹುಡುಗಿನೇ ಎಂದು ರಶ್ಮಿಕಾ ಪರ ಧನಂಜಯ್ ಖಡಕ್ ಉತ್ತರ ನೀಡಿದ್ದಾರೆ. ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿಯಾಗಿ ಬೆಳೆದಿರುವ ಬಗ್ಗೆ ಡಾಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ’ (Pushpa) ಚಿತ್ರದಲ್ಲಿ ಡಾಲಿ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೊತೆ ನಟಿಸಿದ್ದರು. ಇದೀಗ `ಪುಷ್ಪ 2’ನಲ್ಲೂ ಡಾಲಿ ಇರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಡಿಸೆಂಬರ್‌ನಲ್ಲಿ ಬಿಗ್‌ ಸರ್ಪ್ರೈಸ್

    ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಡಿಸೆಂಬರ್‌ನಲ್ಲಿ ಬಿಗ್‌ ಸರ್ಪ್ರೈಸ್

    ಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ `ಪುಷ್ಪ’ ಗೆಲುವಿನ ಪಟ್ಟದ ಜೊತೆ ಗಲ್ಲಾಪೆಟ್ಟಿಗೆಯನ್ನು ಕೂಡ ಲೂಟಿ ಮಾಡಿತ್ತು. `ಪುಷ್ಪ 2′ ಶೂಟಿಂಗ್‌ಗೆ ಸಿನಿಮಾ ಸಜ್ಜಾಗಿದೆ. `ಪುಷ್ಪ’ ಪಾರ್ಟ್ 1 ಬಂದು ಒಂದು ವರ್ಷವಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ.

    ಕನ್ನಡದ ಕೆಜಿಎಫ್‌ 2 ನಂತರ `ಪುಷ್ಪ’ ಸಿನಿಮಾ ಕೂಡ ಸದ್ದು ಮಾಡಿತ್ತು. ಇದೀಗ `ಪುಷ್ಪ ಪಾರ್ಟ್ 2’ಗೆ ಅಭಿಮಾನಿಗಳು ಕಾಯ್ತಿದ್ದಾರೆ. `ಕೆಜಿಎಫ್ 2′ ಕೂಡ 1000 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿತ್ತು. ಈಗ `ಪುಷ್ಪ 2′ ಕೂಡ ಅದೇ ದಾರಿ ಹಿಡಿದಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ: ಮಹೇಶ್‌ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    `ಪುಷ್ಪ’ ಚಿತ್ರದ ಸಕ್ಸಸ್ ನಂತರ ನಿರ್ದೇಶಕ ಸುಕುಮಾರ್ ಮತ್ತೆ ಸ್ಕ್ರಿಪ್ಟ್  ತುಸು ಬದಲಾವಣೆ ಮಾಡಿದ್ದಾರೆ. ಪುಷ್ಪ ಪಾರ್ಟ್‌ 2 ಕೂಡ ಬಿಗ್ ಸಕ್ಸಸ್ ಕಾಣಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಇದೀಗ ʻಪುಷ್ಪ 2ʼ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಬ್ಯಾಂಕಾಕ್‌ನಲ್ಲಿ 40 ದಿನಗಳ ಕಾಲ ದುಬಾರಿ ಬಜೆಟ್‌ನಲ್ಲಿ ಶೂಟಿಂಗ್ ನಡೆಯಲಿದೆ.

    ಇದೇ ಡಿಸೆಂಬರ್ 17ಕ್ಕೆ ಪುಷ್ಪ ತೆರೆಗೆ ಬಂದು ಒಂದು ವರ್ಷವಾಗಲಿದ್ದು, ಈ ವೇಳೆ ಚಿತ್ರದ ವಿಶೇಷ ಟೀಸರ್ ಜೊತೆ ರಿಲೀಸ್ ಕೂಡ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಫ್ಯಾನ್ಸ್‌ಗೆ ಅಚ್ಚರಿಯ ಸಿಹಿ ಸುದ್ದಿ ಕಾದಿದೆ.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಟಾಲಿವುಡ್‌ನ ಪ್ರತಿಭಾನ್ವಿತ ನಟಿ ಸಮಂತಾ (Samantha) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗುವುದರ ಜತೆಗೆ ಬೋಲ್ಡ್ ಫೋಟೋಶೂಟ್ ಮೂಲಕ ಆಗಾಗ ಸ್ಯಾಮ್ ಸದ್ದು ಮಾಡುತ್ತಾರೆ. ಇದೀಗ ಸಮಂತಾ ನಯಾ ಫೋಟೋಶೂಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಡಿವೋರ್ಸ್ (Divorce) ನಂತರ ಮತ್ತೆ ಚಿತ್ರರಂಗದಲ್ಲಿ ಮತ್ತಷ್ಟು ಆಕ್ಟೀವ್ ಆಗಿರುವ ನಟಿ ಸಮಂತಾ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ಸಮಂತಾ ತೊಡುವ ಡ್ರೆಸ್ ಶೈಲಿ ನೋಡಿ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. `ಪುಷ್ಪ’ ಚಿತ್ರದಲ್ಲಿ ಸಮಂತಾ ಬೋಲ್ಡ್ ಅವತಾರ ನೋಡಿ, ಫ್ಯಾನ್ಸ್ ಸುಸ್ತಾಗಿದ್ದರು. ಈಗ ಸಮಂತಾ ಅವರ ಹೊಸ ಫೋಟೋಶೂಟ್ ನೋಡಿ, ನಟಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಹಾಲಕ್ಷ್ಮಿ ನನಗೆ ದೇವರು ಕೊಟ್ಟ ಗಿಫ್ಟ್ : ಪತಿ ರವೀಂದರ್ ಮೊದಲ ಪ್ರತಿಕ್ರಿಯೆ

    ಹಳದಿ ಬಣ್ಣದ ಡ್ರೆಸ್‌ನಲ್ಲಿ ಸಮಂತಾ, ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಸಮಂತಾ ಹಾಟ್ ಪೋಸ್ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಯಾಮ್ ಡಿವೋರ್ಸ್ ಆಗಿದ್ದೆ ತಡ, ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇನ್ನು ನಟಿಗೆ ಸೂಕ್ತ ಉಡುಗೆ ಧರಿಸಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ. ಅಭಿಮಾನಿಗಳ ಯಾವುದೇ ಮನವಿಗೂ ಸಮಂತಾ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಕ್ಷಿಣದ ಸಿನಿಮಾರಂಗದಲ್ಲಿ ಹವಾ ಕ್ರಿಯೇಟ್ ಮಾಡಿರುವ `ಪುಷ್ಪ’ ಸಿನಿಮಾ. ಈ ಚಿತ್ರ ರಿಲೀಸ್ ಆದ್ಮೇಲೆ ಪ್ರೇಕ್ಷಕರಿಗೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಇದೀಗ ಮತ್ತೆ ಪುಷ್ಪ ಪಾರ್ಟ್ ಜತೆ ಬರೋದಕ್ಕೆ ಸಿನಿಮಾ ಟೀಂ ಸಜ್ಜಾಗಿದೆ.

    ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ನಟನೆಯ `ಪುಷ್ಪ’ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಸಿನಿಮಾ. ರಿಲೀಸ್ ಬಳಿಕ ಪುಷ್ಪ ಅಂದ್ರೆ ಫ್ಲವರ್ ಅಲ್ಲಾ, ಫೈಯರ್ ಎಂಬುದನ್ನ ತೆರೆಯ ಮೇಲೆ ತೋರಿಸಿಕೊಟ್ಟಿತ್ತು. ಇದೀಗ `ಪುಷ್ಪ’ ಪಾರ್ಟ್ 2ಗಾಗಿ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

    ಸುಕುಮಾರ್ ನಿರ್ದೇಶನದ `ಪುಷ್ಪ 2’ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ರಶ್ಮಿಕಾ ಸೇರಿದಂತೆ ಹಲವರು ಚಿತ್ರದ ಮುಹೂರ್ತಕ್ಕೆ ಭಾಗಿಯಾಗಿದ್ದರು. ಅಲ್ಲು ಅರ್ಜುನ್‌ ಮುಹೂತದ ವೇಳೆ ಗೈರಾಗಿದ್ದರು. ಇನ್ನು ಈ  ಸಿನಿಮಾದ ಚಿತ್ರೀಕರಣ  ಭರದಿಂದ ಸಾಗಲಿದೆ. ಪುಷ್ಪ 2ನಲ್ಲಿ ಅಲ್ಲು ಅರ್ಜುನ್ ಅವರ ಡಾನ್‌ನ ಖಡಕ್ ಲುಕ್ ನೋಡಲು, ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    Tv
    [brid partner=56869869 player=32851 video=960834 autoplay=true]

  • ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್

    ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್

    `ಪುಷ್ಪ’ ಬ್ಯೂಟಿ ಸಮಂತಾ ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿದ ಮೇಲೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು, ದುಬೈ ತನ್ನ ಸ್ನೇಹಿತೆಯ ಕುಟುಂಬದ ಜತೆ ಸಮಂತಾ ಕಾಲ ಕಳೆದಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಸೌತ್ ಚಿತ್ರರಂಗದ ಖ್ಯಾತ ನಟಿ ಸಮಂತಾ ಈಗ ಏನೇ ಮಾಡಿದ್ದರು ಸುದ್ದಿ. ಚಿತ್ರರಂಗದಲ್ಲೂ ಸಿಕ್ಕಾಪಟ್ಟೆ ಬೇಡಿಕೆಯಿರುವ ನಾಯಕಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾಜಿ ಪತಿಯ ಜತೆ ಬ್ರೇಕ್ ಆಪ್ ನಂತರ ತುಂಬಾನೇ ಟ್ರಾವೆಲ್ ಮಾಡುವ ನಟಿ ಸಮಂತಾ ಈಗ ಸಮಂತಾ ಈಗ ದುಬೈಗೆ ಹಾರಿದ್ದಾರೆ. ಸ್ನೇಹಿತೆಯರ ಜತೆ ನೈಟ್ ಔಟ್ ಏಂಜಾಯ್ ಮಾಡ್ತಿದ್ದಾರೆ.ಇದನ್ನೂ ಓದಿ:ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

     

    View this post on Instagram

     

    A post shared by Shilpa Reddy (@shilpareddy.official)

    ದುಬೈನ ಖ್ಯಾತ ಫ್ಯಾಷನ್ ಡಿಸೈನರ್ ಶಿಲ್ಪಾ ರೆಡ್ಡಿ ಮತ್ತು ಆಕೆಯ ಕುಟುಂಬದ ಜತೆ ನಟಿ ಸಮಂತಾ ಸಮಯ ಕಳೆದಿದ್ದಾರೆ. ರಾತ್ರಿ ವೇಳೆಯಲ್ಲಿ ಸ್ನೇಹಿತೆಯ ಕುಟುಂಬದ ಜತೆ ನೈಟ್ ಔಟ್ ಮಾಡಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೀವನದ ಕಹಿ ಘಟನೆಯಿಂದ ಹೊರ ಬರೋಕೆ ಪ್ರಯತ್ನಿಸುತ್ತಿರುವ ಸಮಂತಾ ನಡೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    Live Tv

  • ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಈಗ `ಪುಷ್ಪ’ ಹಾಡಿಗೆ ಹೆಜ್ಜೆ ಹಾಕಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ’ ಚಿತ್ರದ ಸಾಮಿ ಸಾಮಿ ಹಾಡಿಗೆ ʻಲೈಗರ್ʼ ಚಿತ್ರದ ನಟಿ ಅನನ್ಯಾ ಸೊಂಟ ಬಳುಕಿಸಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಅನನ್ಯಾ ಪಾಂಡೆ ಈಗ ದಕ್ಷಿಣದ ʻಪುಷ್ಪʼ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ಸೂಪರ್ ಹಿಟ್ ಸಾಂಗ್ ಸಾಮಿ ಸಾಮಿ ಹಾಡಿಗೆ ಲೈಗರ್ ನಟಿ ಅನನ್ಯಾ ಭರ್ಜರಿ ಆಗಿ ಕುಣಿದು ಕುಪ್ಪಳಿದಿದ್ದಾರೆ. ಅನನ್ಯಾ ಡ್ಯಾನ್ಸ್ ಸಾರಾ ಆಲಿ ಖಾನ್ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

    ಅನನ್ಯಾ ಮಾಡಿರೋ ಜಬರ್‌ದಸ್ತ್ ಡ್ಯಾನ್ಸ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಅನನ್ಯಾ ಸೊಂಟ ಬಳುಕಿಸಿರೋ ಪರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಬೆಂಗಳೂರು: ಇತ್ತೀಚೆಗೆ ತೆರೆ ಕಂಡ ತೆಲುಗು ಭಾಷೆಯ ಪುಷ್ಪ ಸಿನಿಮಾದ ಮಾದರಿಯಲ್ಲೇ ಸ್ಮಗ್ಲರ್ ಗಳಿಂದಲೇ ಪೊಲೀಸರು ದರೋಡೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ದರೋಡೆ ಮಾಡಿಸಿ ಸಿಕ್ಕಿಬಿದ್ದ ಇಬ್ಬರು ಹೆಡ್ ಕಾನ್‍ಸ್ಟೇಬಲ್‍ಗಳನ್ನು ಅಮಾನತು ಮಾಡಲಾಗಿದೆ.

    ಗಿರಿನಗರ ಹೆಡ್ ಕಾನ್‍ಸ್ಟೇಬಲ್ ಮೋಹನ್, ಮಹದೇವಪುರ ಹೆಡ್ ಕಾನ್‍ಸ್ಟೇಬಲ್ ಮಮತೇಶ್ ಗೌಡ ಅಮಾನತುಗೊಂಡಿದ್ದಾರೆ. ಇವರಿಬ್ಬರು 2018 ರಿಂದ ಸಿಸಿಬಿಯಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಸಿಸಿಬಿಯಿಂದ ಗಿರಿನಗರ ಹಾಗೂ ಮಹಾದೇವಪುರ ಠಾಣೆಗೆ ವರ್ಗಾವಣೆಯಾಗಿದ್ದರು. ಸಿಸಿಬಿಯಲ್ಲಿ ಇದ್ದ ವೇಳೆ ರಕ್ತ ಚಂದನದ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಅವರಿಬ್ಬರಿಗೆ ರಕ್ತಚಂದನ ದರೋಡೆ ಅಡ್ಡೆ ಹಾಗೂ ಗ್ಯಾಂಗ್‍ಗಳ ಬಗ್ಗೆ ತಿಳಿದಿತ್ತು. ಇದನ್ನೂ ಓದಿ: ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

    ಮೋಹನ್, ಮಮತೇಶ್ ಡಿಸೆಂಬರ್ 15 ರಂದು ಕಾರಿನಲ್ಲಿ ಹೊಸಕೋಟೆ ಸಂತೆ ಸರ್ಕಲ್ ಬಳಿ ದಾಳಿ ಮಾಡಿದ್ದರು. ಈ ವೇಳೆ ಟಾಟಾ ಏಸ್‍ನಲ್ಲಿ ತರುತ್ತಿದ್ದ ರಕ್ತ ಚಂದನವನ್ನು ಸೀಜ್ ಮಾಡಿದ್ದರು. ಅವರು ಸೀಜ್ ಮಾಡಿದ ರಕ್ತಚಂದನದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಆದರೆ 5 ದಿನಗಳ ನಂತರ ಸ್ಥಳೀಯರು ಹೊಸಕೋಟೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹೊಸಕೋಟೆ ಪೊಲೀಸರು ಎಫ್‍ಐಆರ್ ಹಾಕಿ, ಹುಡುಕುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಇಬ್ಬರೂ ಪರಾರಿಯಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್, ಮಮತೇಶ್ ಅವರನ್ನು ಅಮಾನತು ಮಾಡಲಾಗಿದೆ. ಐಜಿಪಿ ಚಂದ್ರಶೇಖರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅಮಾನತುಗೊಂಡು 20 ದಿನ ಕಳೆದರೂ ಹೆಡ್ ಕಾನ್‍ಸ್ಟೇಬಲ್‍ಗಳ ಬಂಧನವಾಗಿಲ್ಲ.

    ಕೃತ್ಯ ಹೇಗೆ ಎಸಗುತ್ತಿದ್ದರು?
    ಮೋಹನ್, ಮಮತೇಶ್‍ಗೆ ಸಿಸಿಬಿಯಲ್ಲಿದ್ದ ವೇಳೆ ರಕ್ತ ಚಂದನದ ಸ್ಮಗ್ಲಿಂಗ್ ಅಡ್ಡೆಗಳ ಪರಿಚಯ ಆಗುತ್ತದೆ. ಅಲ್ಲದೇ ಆಂಧ್ರದಲ್ಲಿ ರಕ್ತಚಂದನದ ಮರಕಡಿಯಲು ಬೆಂಗಳೂರಿನಿಂದ ಕೂಲಿಗೆ ಜನ ಹೋಗುತ್ತಿರುತ್ತಾರೆ. ಅಂತಹವರನ್ನು ಮೋಹನ್, ಮಮತೇಶ್ ಪೊಲೀಸ್ ಬಾತ್ಮೀದಾರರಾಗಿ ಬಳಸಿಕೊಳ್ಳುತ್ತಿರುತ್ತಾರೆ. ರಕ್ತಚಂದನದ ಮರ ಕಡಿಯಲು ಬೆಂಗಳೂರಿನಿಂದ ಹೋದವರು ಮರ ಕಡಿದು ಲಾರಿಗೆ ತುಂಬಿಸುತ್ತಿದ್ದಂತೆ, ಲಾರಿಯ ನಂಬರ್ ಹಾಗೂ ಲಾರಿಯಲ್ಲಿ ಎಷ್ಟು ಲೋಡ್ ಇದೆ? ವಾಹನ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಸ್ಮಗ್ಲರ್‌ ಗಳು ಈ ಇಬ್ಬರು ಪೊಲೀಸರಿಗೆ ನೀಡುತ್ತಿದ್ದರು. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ರಕ್ತ ಚಂದನ ವಶಕ್ಕೆ ಪಡೆಯುತ್ತಿದ್ದರು. ನಂತರ ಅದನ್ನು ಯಾರಿಗೂ ತೋರಿಸದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ರೀತಿ ಹಣಗಳಿಸಿರುವ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.

  • ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ

    ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ

    ಹೈದರಾಬಾದ್: ಅಲಾ ವೈಕುಂಠಪುಮುಲೊ ಸಕ್ಸಸ್ ಬಳಿಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳು ಸಹ ಈ ಚಿತ್ರದ ಕುರಿತು ಅಷ್ಟೇ ಕುತೂಹಲ ಇಟ್ಟುಕೊಂಡಿದ್ದಾರೆ. ತಮ್ಮ ವಿಶಿಷ್ಟ ಸಿನಿಮಾ ಮೂಲಕವೇ ಅಭಿಮಾನಿಗಳನ್ನು ರಂಜಿಸುವ ಅಲ್ಲು, ಈ ಬಾರಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿದ್ದಾರೆ.

    ಈಗಾಗಲೇ ಪುಷ್ಪ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪೋಸ್ಟರ್ ಸಹ ಅಷ್ಟೇ ಕ್ಯೂರಿಯಾಸಿಟಿ ಹುಟ್ಟಿಸುತ್ತಿದ್ದು, ಅಲ್ಲು ಇದರಲ್ಲಿ ಫುಲ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಚಂದನದ ಜೊತೆಗೆ ಅರಣ್ಯಾಧಿಕಾರಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಹೌದು ಹಿಂದೆಲ್ಲ ರಕ್ತ ಚಂದನದವಿದ್ದು, ಪೊಲೀಸರ ಮಧ್ಯದಲ್ಲಿ ಅಲ್ಲು ಕುಳಿತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಚಾಲಕನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಯಾವ ರೀತಿಯ ಕಥೆ ಇರಬಹುದು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

    ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಖುಷಿಪಡಿಸಿದ್ದರು. ಇದೀಗ ಬೇಸರಗೊಳಿಸುವ ಸುದ್ದಿಯೊಂದು ಹರಿದಾಡುತ್ತಿದ್ದು, ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡುತ್ತಿಲ್ಲ. ಅಲ್ಲು ಅರ್ಜುನ್ ಉತ್ತಮ ಡ್ಯಾನ್ಸರ್. ಪ್ರತಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟೆಪ್‍ಗಳನ್ನು ಹಾಕಿದ್ದಾರೆ. ಅಲ್ಲು ಅರ್ಜುನ್ ಹೊಸ ಡ್ಯಾನ್ಸ್ ಸ್ಟೆಪ್ಸ್ ನೋಡಲಿಕ್ಕಾಗಿಯೇ ಎಷ್ಟೋ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಆದರೆ ಪುಷ್ಪ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡುವುದಿಲ್ಲವಂತೆ.

    ಲಾರಿ ಚಾಲಕ ಪಾತ್ರ ನಿರ್ವಹಿಸುತ್ತಿರುವುದರಿಂದ ಅಲ್ಲು ಈ ಸಿನಿಮಾದಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಸುಕುಮಾರ್ ಈ ಸಿನಿಮಾವನ್ನು ನೈಜವಾಗಿ ಚಿತ್ರೀಕರಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಅಲ್ಲು ಬಳಸುವ ಬಟ್ಟೆಗಳು ನೈಜವಾಗಿ ಕಾಣಲೆಂದು ಟೀಯಲ್ಲಿ ನೆನೆಸಿ, ನಂತರ ಎರಡು ದಿನ ಬಿಟ್ಟು ತೊಳೆಸುವಂತೆ ಸುಕುಮಾರ್ ತಿಳಿಸಿದ್ದಾರಂತೆ. ಅಷ್ಟು ಸೂಕ್ಷ್ಮವಾಗಿ ನೈಜತೆಗೆ ಒತ್ತು ನೀಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಕನ್ನಡ, ತೆಲುಗು ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿದ್ದು, ಚಿತ್ರತಂಡ ಪೋಸ್ಟರ್ ನ್ನು  5 ಭಾಷೆಗಳಲ್ಲಿ ಬಿಡುಗಡೆ ಮಾಡಿತ್ತು.

    ಈಗಾಗಲೇ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರೇ ಖಚಿತಪಡಿಸಿದ್ದರು. ಇನ್ನು ಕನ್ನಡಿಗರಾದ ಸುನಿಲ್ ಶೆಟ್ಟಿ ಹಾಗೂ ಡಾಲಿ ಧನಂಜಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜಗಪತಿ ಬಾಬು, ಪ್ರಕಾಶ್ ರೈ ಪ್ರಮುಖ ಪಾತ್ರಗಳ್ಳುತ್ತಿದ್ದು, ಚಿತ್ರದ ಸಾಹಸ ಸನ್ನಿವೇಶವೊಂದಕ್ಕೆ 6 ಕೋಟಿ ರೂ. ಖರ್ಚು ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆಯಂತೆ.