Tag: pushpa 3

  • `ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?

    `ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?

    ಅಲ್ಲು ಅರ್ಜುನ್‌ (Allu Arjun) ನಟನೆಯ `ಪುಷ್ಪ ದಿ ರೈಸ್’ ಹಾಗೂ ‘ಪುಷ್ಪ ದಿ ರೂಲ್’ ಸರಣಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದ ದಕ್ಷಿಣ ಭಾರತದ ಹೆಸರಾಂತ ಸೀಕ್ವೆಲ್ ಸಿನಿಮಾ. ಈ ಹಿಟ್ ಸರಣಿ ಮುಂದುವರೆಯುವ ಸುಳಿವನ್ನ ಎರಡನೇ ಭಾಗದ ಅಂತ್ಯದಲ್ಲಿ ಚಿತ್ರತಂಡ ತೋರಿಸಿತ್ತು. ಆದರೆ ಯಾವಾಗ ಪುಷ್ಪ 3 ಬರುತ್ತೆ..? ಸ್ಕ್ರೀಪ್ಟ್‌ ಪ್ರಗತಿಯಲ್ಲಿದೆಯಾ ಇಲ್ವಾ? ಅಥವಾ ಚಮಕ್ ಕೊಟ್ಟಿರೋದಾ..? ಹೀಗೆ ಪುಷ್ಪ ಅಭಿಮಾನಿಗಳ ಯಾವುದೇ ಪ್ರಶ್ನೆಗೂ ಪುಷ್ಪ ರಿಲೀಸ್ ಬಳಿಕ ಚಿತ್ರತಂಡ ಉತ್ತರಿಸಿರಲಿಲ್ಲ. ಆದರೆ ಮೊದಲ ಬಾರಿಗೆ ಪುಷ್ಪ 3 ಸಿನಿಮಾ ಬಗ್ಗೆ ಹಾಗೂ ರೆಡಿಯಾಗುತ್ತಿರುವ ಸ್ಕ್ರೀಪ್ಟ್‌ ಬಗ್ಗೆ ಅಲ್ಲು ಅರ್ಜುನ್‌ ಮಾತನಾಡಿದ್ದಾರೆ.

    ಪ್ರಸಕ್ತ ಸಾಲಿನ ಸೈಮಾ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಲಭಿಸಿದ್ದು, ದುಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲೇ `ಪುಷ್ಪ 3′ ಖಂಡಿತ ಬರುತ್ತೆ ಎಂದಿದ್ದಾರೆ ಅಲ್ಲು ಅರ್ಜುನ್‌. ಈ ಮೂಲಕ ಪುಷ್ಪರಾಜ್ ಅಭಿಮಾನಿಗಳಿಗೆ ಬಿಸಿ ಬಿಸಿ ಸುದ್ದಿ ಪುಷ್ಪ ಕಡೆಯಿಂದಲೇ ಬಂದಿದೆ. ಈ ವೇಳೆ ಚಿತ್ರದ ನರ‍್ದೇಶಕ ಸುಕುಮಾರ್ ಉಪಸ್ಥಿತರಿದ್ದರು. ಇಬ್ಬರೂ ಒಟ್ಟಿಗೆ ಪುಷ್ಪ3 ತಯಾರಾಗ್ತಿರೋ ಬಗ್ಗೆ ಕನ್ಫರ್ಮೇಷನ್‌ ಕೊಟ್ಟಿದ್ದಾರೆ. `ಪುಷ್ಪ 3′ ಖಂಡಿತವಾಗಲೂ ಬರುತ್ತೆ. ಸ್ಕ್ರೀಪ್ಟ್‌ ಪ್ರಗತಿಯಲ್ಲಿದೆ ಎಂದು ಅಲ್ಲು ಅರ್ಜುನ್‌  ಪುಷ್ಪ 3ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಅಲ್ಲಿಗೆ ಪಾರ್ಟಿ ಇಲ್ವಾ ಪುಷ್ಪ ಎಂದು ಕೇಳುತ್ತಿದ್ದ ಪುಷ್ಪನ ಫ್ಯಾನ್ಸ್‌ಗೆ ಖುಷಿಯೋ ಖುಷಿ.

  • ಫ್ಯಾನ್ಸ್‌ಗೆ ಸಿಹಿಸುದ್ದಿ-‌ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 3’ ಬಗ್ಗೆ ಸಿಕ್ತು ಬಿಗ್‌ ನ್ಯೂಸ್

    ಫ್ಯಾನ್ಸ್‌ಗೆ ಸಿಹಿಸುದ್ದಿ-‌ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 3’ ಬಗ್ಗೆ ಸಿಕ್ತು ಬಿಗ್‌ ನ್ಯೂಸ್

    ಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಭರ್ಜರಿ ಸಕ್ಸಸ್ ಕಂಡಿದೆ. ಇದರ ಮೂರನೇ ಪಾರ್ಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ‘ಪುಷ್ಪ 3’ ಬರುವ ಬಗ್ಗೆ ನಿರ್ಮಾಪಕ ರವಿ ಶಂಕರ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

    ‘ಪುಷ್ಪ 2’ನಲ್ಲಿ ರಕ್ತಚಂದನ ಕಳ್ಳಸಾಗಣೆಯಲ್ಲಿ ದೊಡ್ಡ ಡಾನ್ ಆಗಿ ಪುಷ್ಪರಾಜ್ ಬೆಳೆದಿದ್ದಾರೆ. ಶ್ರೀವಲ್ಲಿಗಾಗಿ ಸಿಎಂ ಅನ್ನೇ ಬದಲಿಸುವಷ್ಟು ಹಣ, ತಾಕತ್ತು ಪುಷ್ಪರಾಜ್‌ಗೆ ಇದೆ. ವಿಲನ್‌ಗೂ ಪುಷ್ಪರಾಜ್‌ಗೂ ನಡುವಿನ ಜಿದ್ದಾಜಿದ್ದಿಯಲ್ಲಿ 3ನೇ ಭಾಗ ಬರುವ ಬಗ್ಗೆ ಚಿತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿರುವಾಗ ‘ಪುಷ್ಪ 3’ ಚಿತ್ರವು 2028ರಲ್ಲಿ ನಿರೀಕ್ಷಿಸಬಹುದು ಎಂದು ನಿರ್ಮಾಪಕ ತಿಳಿಸಿದ್ದಾರೆ.

    ಸದ್ಯ ಅಲ್ಲು ಅರ್ಜುನ್ (Allu Arjun) ಅವರು ಅಟ್ಲಿ ಹಾಗೂ ತ್ರಿವಿಕ್ರಮ್ ಜೊತೆ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಈ ಎರಡು ಚಿತ್ರಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಇದರ ಬಳಿಕವೇ ‘ಪುಷ್ಪ 3’ ಅನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಇತ್ತ ಡೈರೆಕ್ಟರ್ ಸುಕುಮಾರ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಕೂಡ ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಮುಂದಿನ 3 ವರ್ಷಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ. 2028ರ ವೇಳೆಗೆ ಚಿತ್ರ ರಿಲೀಸ್ ಆಗಲಿದೆ ಎಂದು ರವಿ ಶಂಕರ್ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿದ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಇನ್ನೂ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದರು. ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದರು. ಪಾರ್ಟ್ 3ರಲ್ಲೂ ಫಹಾದ್ ಹವಾ ಮುಂದುವರೆಯಲಿದೆ.

  • ಅಲ್ಲು ಅರ್ಜುನ್, ರಶ್ಮಿಕಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿಲನ್?

    ಅಲ್ಲು ಅರ್ಜುನ್, ರಶ್ಮಿಕಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿಲನ್?

    ಲ್ಲು ಅರ್ಜುನ್‌ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ‘ಪುಷ್ಪ 3’ ಬರೋದು ಪಕ್ಕಾ ಆಗಿದೆ. ಇದರ ನಡುವೆ ಹೊಸದೊಂದು ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಪುಷ್ಪ 3’ನಲ್ಲಿ ಸ್ಟಾರ್ ನಟ ವಿಜಯ್ ದೇವರಕೊಂಡ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:UI: ಕಂಟೆಂಟ್ ಇರುವ ಸಿನಿಮಾವನ್ನು ಜನ ಕೈಬಿಡಲ್ಲ: ನಟ ಉಪೇಂದ್ರ

    ಪವರ್‌ಫುಲ್‌ ಪಾತ್ರಗಳನ್ನು ಸೃಷ್ಟಿಸಿ ಪ್ರತಿಭಾವಂತ ನಟರಿಗೆ ಅವಕಾಶ ಕೊಡೋದ್ರಲ್ಲಿ ಸುಕುಮಾರ್ ಯಾವಾಗಲೂ ಮುಂದು. ಪುಷ್ಪ 2ನಲ್ಲಿ ಈಗಾಗಲೇ ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ‘ಪುಷ್ಪ 3’ನಲ್ಲಿ (Pushpa 3) ವಿಜಯ್ ದೇವರಕೊಂಡ (Vijay Devarakonda) ಅವರು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಂದೆ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ಇನ್ನೂ ಡಿ.5ರಂದು ‘ಪುಷ್ಪ 2’ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಅನಸೂಯ, ಫಹಾದ್ ಫಾಸಿಲ್, ಶ್ರೀಲೀಲಾ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

    ‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

    ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ‘ಪುಷ್ಪ’ ಸಿನಿಮಾದ ಜರ್ನಿ ನೆನೆದು ಭಾವುಕರಾಗಿದ್ದಾರೆ. ‘ಪುಷ್ಪ’ ಪಾರ್ಟ್ 3 ಬಗ್ಗೆ ಹಿಂಟ್ ಕೊಟ್ಟಿರೋದಲ್ಲದೇ, 5 ವರ್ಷಗಳ ಈ ಚಿತ್ರದ ಜರ್ನಿ ಕೊನೆ ಆಗಿದೆ. ಎಂಥ ಅದ್ಭುತ ಜರ್ನಿ ಎಂದು ನಟಿ ಎಮೋಷನಲ್ ಆಗಿದ್ದಾರೆ. ಇದನ್ನೂ ಓದಿ:ಮದುವೆಗೆ ಸಜ್ಜಾದ ನಟಿ- ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಕೀರ್ತಿ ಸುರೇಶ್‌

    ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಪುಷ್ಪ 2’ ಸಿನಿಮಾ ಬಗ್ಗೆ ಸ್ಪೆಷಲ್ ನೋಟ್ ಬರೆದಿದ್ದಾರೆ. ನ.25ರಂದು ಪುಷ್ಪ 2 ಚಿತ್ರ ಸಂಪೂರ್ಣ ಆಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೆರಿಯರ್‌ನ ಏಳೆಂಟು ವರ್ಷದಲ್ಲಿ ಕಳೆದ 5 ವರ್ಷ ‘ಪುಷ್ಪ 2’ ಸೆಟ್ ನನ್ನ ಮನೆಯಾಗಿತ್ತು. ಅಂತೂ ಇದು ನನ್ನ ಕೊನೆಯ ದಿನ. ಪಾರ್ಟ್ 3 (Pushpa 3) ಸಂಬಂಧಿಸಿ ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ಆದರೂ ನನಗೆ ಇದು ವಿಶೇಷವಾಗಿ ಅನಿಸುತ್ತಿದೆ. ಇದು ಕೊನೆಯಾಗುತ್ತಿದೆ ಎನ್ನುವ ಭಾವನೆ ಬಂದಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಈ ಮೂಲಕ ಪಾರ್ಟ್ -3 ಬರೋದು ಸ್ಪಷ್ಟವಾಗಿದೆ.

    ನನಗೂ ಅರ್ಥವಾಗದಂತಹ ನೋವು ನನ್ನನ್ನು ಕಾಡುತ್ತಿದೆ. ಎಲ್ಲಾ ಭಾವನೆಗಳು ಈಗ ಒಟ್ಟಾಗಿವೆ. ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ದಿನಗಳು ನೆನಪಾಗುತ್ತಿವೆ. ಆ ದಿನಗಳಲ್ಲಿ ನಾನು ತುಂಬಾ ದಣಿದಿದ್ದೆ. ಈಗ ಎಲ್ಲಾ ನೆನಪಿಸಿಕೊಂಡರೆ ಎಲ್ಲಾ ಅದ್ಭುತ ಎನಿಸುತ್ತಿದೆ ಎಂದಿದ್ದಾರೆ. ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ (Allu Arjun) ಮತ್ತು ಇಡೀ ತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ. ನಟಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

    ಅಂದಹಾಗೆ, ಇತ್ತೀಚೆಗೆ ‘ಪುಷ್ಪ 3’ ಬರೋದಾಗಿ ಚಿತ್ರದ ನಿರ್ಮಾಪಕ ಸುಳಿವು ನೀಡಿದ್ದರು. ರಶ್ಮಿಕಾ ಪೋಸ್ಟ್‌ನಿಂದ ಮತ್ತೊಮ್ಮೆ ಅಧಿಕೃತ ಮಾಹಿತಿ ಸಿಕ್ಕಿದೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಪುಷ್ಪರಾಜ್ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾ ಜೀವತುಂಬಿದ್ದರು. ಇದೇ ಡಿ.5ಕ್ಕೆ ‘ಪುಷ್ಪ 2’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಶ್ರೀಲೀಲಾ (Sreeleela) ‘ಕಿಸ್ಸಿಕ್’ ಸಿನಿಮಾದಲ್ಲಿನ ಮತ್ತೊಂದು ಹೈಲೆಟ್ ಆಗಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

  • ‘ಪುಷ್ಪ 3’ ಬರೋದು ಖಚಿತ ಎಂದ ನಿರ್ಮಾಪಕ ರವಿಶಂಕರ್

    ‘ಪುಷ್ಪ 3’ ಬರೋದು ಖಚಿತ ಎಂದ ನಿರ್ಮಾಪಕ ರವಿಶಂಕರ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2)  ಸಿನಿಮಾದ ರಿಲೀಸ್‌ಗೂ ಮುನ್ನವೇ ನಿರ್ಮಾಪಕ ಮತ್ತೊಂದು ಕ್ರೇಜಿ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಪುಷ್ಪ 3’ (Pushpa 3) ಬರೋದು ಖಚಿತ ಎಂದು ನಿರ್ಮಾಪಕ ರವಿಶಂಕರ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ನ.8ರಂದು ದರ್ಶನ್ ನಟನೆಯ ‘ನವಗ್ರಹ’ ಚಿತ್ರ ರೀ ರಿಲೀಸ್

    ಇಂದು (ಅ.22) ನಡೆದ ಪುಷ್ಪ 2 ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಡಿ.5ರಂದು ಸಿನಿಮಾ ಬರೋದಾಗಿ ಚಿತ್ರತಂಡ ತಿಳಿಸಿದೆ. ಈ ವೇಳೆ, ನಿರ್ಮಾಪಕ ರವಿಶಂಕರ್ (Ravishankar) ಮಾತನಾಡಿ, ಪುಷ್ಪ 2 ಸಿನಿಮಾದಲ್ಲಿ ಪುಷ್ಪ 3ಗೆ ಬೇಕಾದ ಎಲ್ಲಾ ಗಟ್ಟಿ ಅಂಶಗಳಿವೆ. ಹೀಗಾಗಿ ಭಾಗ 3 ಬರೋದು ಬಹುತೇಕ ಖಚಿತ ಎಂದು ತಿಳಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸದ್ಯದ ಮಟ್ಟಿಗೆ ವಿವರಿಸಲು ಸಾಧ್ಯವಿಲ್ಲ ಎಂದು ನಿರ್ಮಾಪಕ ತಿಳಿಸಿದ್ದಾರೆ.

    ಆ.15ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಆ ನಂತರ ಡಿ.6ರಂದು ಸಿನಿಮಾ ಬರೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಈ ಆ ಡೇಟ್‌ಗೂ ಸಿನಿಮಾ ರಿಲೀಸ್ ಆಗ್ತಿಲ್ಲ. ಬದಲಾಗಿ ಈ ವರ್ಷದ ಅಂತ್ಯ ಡಿಸೆಂಬರ್ 5ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಒಂದು ದಿನ ಮುಂಚಿತವಾಗಿ ಪುಷ್ಪರಾಜ್, ಶ್ರೀವಲ್ಲಿ ದರ್ಶನ ನೀಡಲಿದ್ದಾರೆ. ಈ ಕುರಿತು ಇಂದಿನ ಪ್ರೆಸ್ ಮೀಟ್‌ನಲ್ಲಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

    ಸಿನಿಮಾ ಮುಂದಕ್ಕೆ ಹಾಕದೆ ಒಂದು ದಿನ ಮುಂಚಿತವಾಗಿ ಪುಷ್ಪ 2 ಬರುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಪುಷ್ಪರಾಜ್ (ಅಲ್ಲು ಅರ್ಜುನ್) ಅಬ್ಬರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  • ‘ಪುಷ್ಪ 3’ ಖಂಡಿತಾ ಬರುತ್ತೆ ಎಂದು ಸಿಹಿಸುದ್ದಿ ಕೊಟ್ರು ಅಲ್ಲು ಅರ್ಜುನ್

    ‘ಪುಷ್ಪ 3’ ಖಂಡಿತಾ ಬರುತ್ತೆ ಎಂದು ಸಿಹಿಸುದ್ದಿ ಕೊಟ್ರು ಅಲ್ಲು ಅರ್ಜುನ್

    ಕಾನ್ ಸ್ಟಾರ್ ಅಲ್ಲು ಅರ್ಜುನ್- ಸುಕುಮಾರ್ (Sukumar) ಕಾಂಬಿನೇಷನ್ ಪುಷ್ಪ ಸಿನಿಮಾ ಭರ್ಜರಿಯಾಗಿ ಹಿಟ್ ಆದ್ಮೇಲೆ ಪಾರ್ಟ್ 2ಗಾಗಿ ಕಾಯುತ್ತಿರುವಾಗಲೇ ಅಭಿಮಾನಿಗಳಿಗೆ ಈಗ ಸಿಹಿಸುದ್ದಿಯೊಂದು ಸಿಕ್ಕಿದೆ. ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪುಷ್ಪ 2 ಬರುವ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ.

    ‘ಪುಷ್ಪ 2’ (Pushpa 2) ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಇತ್ತೀಚೆಗೆ ಪುಷ್ಪ 3 ಬರುವ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈಗ ಸ್ವತಃ ನಟ ಅಲ್ಲು ಅರ್ಜುನ್ ಪಾರ್ಟ್ 3 ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪುಷ್ಪ ಪಾರ್ಟ್ 2 ಸಿನಿಮಾ ಎಲ್ಲರೂ ಅಂದುಕೊಂಡಂತೆ, ಮೊದಲ ಭಾಗಕ್ಕಿಂತ ಹೆಚ್ಚು ಅದ್ಧೂರಿತನದಿಂದ ಕೂಡಿರುತ್ತದೆ. ಪುಷ್ಪ 1ರಲ್ಲಿ ಪುಷ್ಪರಾಜ್ ಲೋಕಲ್ ಲೆವೆಲ್‌ನಲ್ಲಿ ತನ್ನ ಸ್ಥಾನ ಕಂಡುಕೊಂಡಿದ್ದು, ಅದನ್ನು ಭದ್ರಪಡಿಸಿಕೊಂಡಿದ್ದು ನೋಡಿದ್ದೀರಿ. ಈಗ ಅವನು ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ವ್ಯವಹಾರ ಮಾಡುತ್ತಾನೆ ಎಂದು ಅಲ್ಲು ಅರ್ಜುನ್ (Allu Arjun) ಹೇಳಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬೆನ್ನಲ್ಲೇ ರಾಜಕೀಯದತ್ತ ಹೇಮಾ ಮಾಲಿನಿ ಪುತ್ರಿ

    ಪುಷ್ಪ ಚಿತ್ರದ ಮೇಲೆ ದೊಡ್ಡ ಮಟ್ಟ ಕ್ರೇಜ್ ಕ್ರಿಯೇಟ್ ಆಗಿದೆ. ಬೇರೆಯದ್ದೇ ಹಂತದ ಸಿನಿಮಾ ಜರ್ನಿ ಶುರುವಾಗಿದೆ. ಫಾಹದ್ ನಿರ್ವಹಿಸಿದ್ದ ಪೊಲೀಸ್ ಪಾತ್ರ ಕೂಡಾ ‘ಪುಷ್ಪ 2’ನಲ್ಲಿ ಹೆಚ್ಚು ವಿಜೃಂಭಿಸಿದೆ. ಇಲ್ಲಿ ಆ ಪಾತ್ರಕ್ಕೆ ಬೇರೆಯದ್ದೇ ಶೇಡ್ ನೀಡಲಾಗಿದೆ. ಪುಷ್ಪರಾಜ್ ಎಲ್ಲರ ಊಹೆಗೂ ಮೀರಿ ಬೆಳೆದಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

    ‘ಪುಷ್ಪ- 3’ (Pushpa 3) ಖಂಡಿತಾ ಬರುತ್ತೆ ಎಂದಿದ್ದಾರೆ. ಜನರ ನಿರೀಕ್ಷೆಯ ಮಟ್ಟ ದೊಡ್ಡದೇ ಇರೋದ್ರಿಂದ ಪ್ರತಿ ಸಿನಿಮಾ ಕೂಡಾ ಹಿಂದಿನ ಚಿತ್ರಕ್ಕಿಂತ ಮೇಲಿನ ಹಂತದಲ್ಲೇ ಇರಬೇಕಾಗುತ್ತದೆ. ಆ ಜವಾಬ್ದಾರಿ ಜೊತೆಗೆ ಸಿನಿಮಾಗಳನ್ನು ಆಯ್ಕೆ ಮಾಡ್ತಿದ್ದೀನಿ. ‘ಪುಷ್ಪ’ ಸರಣಿ ಜೊತೆಗೆ ಬೇರೆ ಚಿತ್ರಗಳ ಮಾತುಕತೆ ನಡೆಯುತ್ತಿದೆ ಎಂದು ಅಲ್ಲು ಅರ್ಜುನ್ ಮಾತನಾಡಿದ್ದಾರೆ.

    ಇಷ್ಟು ದಿನ ಪುಷ್ಪ- 3 ಬರುತ್ತೆ ಎಂದು ಅಂತೆ ಕಂತೆ ಸುದ್ದಿಗಳು ಹರಿದಾಡಿತ್ತು. ಈಗ ಸ್ವತಃ ಅಲ್ಲು ಅರ್ಜುನ್ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರೋದ್ರಿಂದ ಅಭಿಮಾನಿಗಳಿಗೆ ಖುಷಿಯಾಗಿದೆ. ಒಟ್ನಲ್ಲಿ ಪುಷ್ಪರಾಜ್‌ ಈ ಬಾರಿ ಯಾವ ರೀತಿ ಆರ್ಭಟಿಸಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕೌತುಕ ಹೆಚ್ಚಿಸಿದೆ.

    ಅಲ್ಲು ಅರ್ಜುನ್‌ ಜೊತೆ ರಶ್ಮಿಕಾ ಮಂದಣ್ಣ, ಕನ್ನಡದ ನಟ ಡಾಲಿ, ಅನಸೂಯ, ಫಾಹದ್‌ ಫಾಸಿಲ್‌ ಸೇರಿದಂತೆ ಅನೇಕರು ಪುಷ್ಪ 2ನಲ್ಲಿ ನಟಿಸಿದ್ದಾರೆ.

  • ಅಲ್ಲು ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ನಂತರ ಬರಲಿದೆ ಪಾರ್ಟ್‌ 3

    ಅಲ್ಲು ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ನಂತರ ಬರಲಿದೆ ಪಾರ್ಟ್‌ 3

    ಲ್ಲು ಅರ್ಜುನ್- ಸುಕುಮಾರ್ (Sukumar) ಕಾಂಬಿನೇಷನ್ ಸಿನಿಮಾ ಈಗಾಗಲೇ ಮೋಡಿ ಮಾಡಿದೆ. ‘ಪುಷ್ಪ’ ಸಿನಿಮಾ ಗೆದ್ದು ಬೀಗಿದ ಬೆನ್ನಲ್ಲೇ ‘ಪುಷ್ಪ 2’ (Pushpa 2) ಚಿತ್ರ ಕೂಡ ಬೆಳ್ಳಿಪರದೆಯಲ್ಲಿ ರಾರಾಜಿಸಲು ಸಜ್ಜಾಗುತ್ತಿದೆ. ಹೀಗಿರುವಾಗ ಅಲ್ಲು ಫಾನ್ಸ್‌ಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಪುಷ್ಪ ಪಾರ್ಟ್ 3 (Pushpa 3) ಕೂಡ ಬರಲಿದೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದೆ.

    ಬಾಹುಬಲಿ, ಕೆಜಿಎಫ್ (KGF) ಸಿನಿಮಾಗಳು ಬಂದ್ಮೇಲೆ ಪಾರ್ಟ್‌ಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಈ ರೀತಿಯ ಕಥೆಗಳನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಳ್ತಿದ್ದಾರೆ. ಹಾಗಾಗಿ ‘ಪುಷ್ಪ’ ಪಾರ್ಟ್ 3 ಕೂಡ ಮಾಡುವ ಪ್ಲ್ಯಾನ್‌ನಲ್ಲಿದ್ದಾರಂತೆ ನಿರ್ದೇಶಕ ಸುಕುಮಾರ್. ಇದನ್ನೂ ಓದಿ:ವಿಜಯ್ ರಾಜಕಾರಣಕ್ಕೆ ಎಂಟ್ರಿ: ಅಭಿನಂದನೆ ಸಲ್ಲಿಸಿದ ತಲೈವ

    2021ರಲ್ಲಿ ತೆರೆಕಂಡ ‘ಪುಷ್ಪ ದಿ ರೈಸ್’ ಸಿನಿಮಾದಲ್ಲಿ ಪುಷ್ಪರಾಜ್- ಶ್ರೀವಲ್ಲಿ ಕಾಂಬೋ ಮೋಡಿ ಮಾಡಿತ್ತು. ಅಲ್ಲು ಅರ್ಜುನ್ ಯೂನಿಕ್ ಸ್ಟೈಲ್‌, ಶ್ರೀವಲ್ಲಿ ಅಭಿನಯ ಮತ್ತು ಡ್ಯಾನ್ಸ್ ಎಲ್ಲವೂ ಟ್ರೆಂಡ್ ಕ್ರಿಯೆಟ್ ಮಾಡಿತ್ತು. ಈಗ ಅದೇ ಹುರುಪಿನಲ್ಲಿ ‘ಪುಷ್ಪ 2’ ಚಿತ್ರ ಆಗಸ್ಟ್ 15ಕ್ಕೆ ರಿಲೀಸ್ ಮಾಡುತ್ತಿದ್ದಾರೆ. ಅದಕ್ಕಾಗಿ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.‌ ಇದನ್ನೂ ಓದಿ:ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

    ಪುಷ್ಪ ಪಾರ್ಟ್ 2ಗೆ ‘ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಸಾಗಲಿದೆ. ಪುಷ್ಪ 3ಗೆ ಕಥೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಪಾರ್ಟ್ 3ಗೆ ‘ಪುಷ್ಪ ದಿ ರೋರ್’ ಎಂದು ಟೈಟಲ್ ಇಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ? ಚಿತ್ರತಂಡದಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾಯಬೇಕಿದೆ.

    ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪುಷ್ಪ 2 ರಿಲೀಸ್ ಆದ್ಮೇಲೆ ಕ್ಲೈಮ್ಯಾಕ್ಸ್ ನೋಡಿ ಪಾರ್ಟ್ 3 ಬಗ್ಗೆ ಮತ್ತಷ್ಟು ಸ್ಪಷ್ಟನೆ ಸಿಗಲಿದೆ.