Tag: push ups

  • ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

    ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

    * 73 ವಯಸ್ಸಿನ ರಾಜ್ಯಪಾಲರ ಸಾಮರ್ಥ್ಯ, ಉತ್ಸಾಹ ಕಂಡು ಪ್ರೇಕ್ಷಕರು ನಿಬ್ಬೆರಗು!

    ಚೆನ್ನೈ: ಯೋಗ ದಿನದಲ್ಲಿ 51 ಪುಷ್‌ ಅಪ್‌ ಪೂರ್ಣಗೊಳಿಸುವ ಮೂಲಕ ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ (R.N.Ravi) ಅವರು ನೆರೆದಿದ್ದವರನ್ನು ಬೆರಗುಗೊಳಿಸಿದ್ದಾರೆ.

    ಮಧುರೈನ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (International Yoga Day) ತಮಿಳುನಾಡು ರಾಜ್ಯಪಾಲರ ಪುಷ್‌ ಅಪ್‌ ಕಂಡು ಸಾವಿರಾರು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ | ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

    ವೇಲಮ್ಮಳ್‌ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆಗಾಗಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರ ಸಮ್ಮುಖದಲ್ಲಿ 73 ವಯಸ್ಸಿನ ರಾಜ್ಯಪಾಲ ರವಿ ಅವರು 51 ಪುಷ್‌ ಅಪ್‌ ಪೂರ್ಣಗೊಳಿಸಿದರು. ಯೋಗ, ವ್ಯಾಯಾಮಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದರು.

    ರವಿ ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು. ಅಲ್ಲಿಯ ತರಬೇತಿ ಆಧರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಂದು ಯೋಗಾಸನವನ್ನು ನಿಖರತೆ ಮತ್ತು ಸಮತೋಲದಿಂದ ಮಾಡಿದರು. ಇದನ್ನೂ ಓದಿ: Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

    ಯೋಗಾಸನದ ನಂತರ 51 ಪುಷ್-ಅಪ್‌ಗಳನ್ನು ಸಲೀಸಾಗಿ ಪೂರ್ಣಗೊಳಿಸಿದರು. ಇದನ್ನು ಕಂಡು ಪ್ರೇಕ್ಷಕರು ಹರ್ಷೋದ್ಘಾರ ವ್ಯಕ್ತಪಡಿಸಿದರು.

  • ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾದ ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ 3,182 ಪುಷ್‌-ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ತಮ್ಮ ವಿಶಿಷ್ಟ ಸಾಧನೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿ ಅಥ್ಲೀಟ್‌ ಸ್ಕಾಲಿ ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯನ್ ಜರಾಡ್ ಯಂಗ್ ಅವರು ಗಂಟೆಗೆ 3,054 ಪುಷ್‌-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದರು. ಈಗ ಸ್ಕಾಲಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಜಿಡಬ್ಲ್ಯೂಆರ್‌ ತಿಳಿಸಿದೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ

    GWR ಶುಕ್ರವಾರ ತನ್ನ ಅಧಿಕೃತ ಯೂಟ್ಯೂಬ್‌ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸ್ಕಾಲಿ ಅವರು ತಮ್ಮ ಜೀವನ ಮತ್ತು ಸಾಧನೆ ಕುರಿತು ಹೇಳಿಕೊಂಡಿದ್ದಾರೆ.

    ಸ್ಕಾಲಿ ತನ್ನ 12 ನೇ ವಯಸ್ಸಿನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗಿನಿಂದ ಸಿಆರ್‌ಪಿಎಸ್‌ (ಕಾಂಪ್ಲೆಕ್ಸ್ ರೀಜನಲ್ ಪೇಯ್ನ್‌ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ನೋವಿನಿಂದಾಗಿ ಅವರು ಆಗಾಗ್ಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು GWR ತಿಳಿಸಿದೆ.

    Live Tv

  • ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಜಿಮ್‍ನಲ್ಲಿ ವರ್ಕೌಟ್ ಮಾಡುವವರನ್ನು ನಾವು ನೋಡಿರುತ್ತೇವೆ. ಆದರೆ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‍ನಲ್ಲಿ ಪುಷ್-ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೊರನಾ ಲಾಕ್‍ಡೌನ್ ವೇಳೆ ಮನೆಯಲ್ಲಿಯೇ ಇದ್ದು, ವ್ಯಾಯಾಮ ಮಾಡದೇ ಸೋಮಾರಿಯಂತೆ ಹಲವಾರು ಮಂದಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಆದರೆ ಆರೋಗ್ಯಕರವಾಗಿದ್ದು, ಫಿಟ್ ಆಗಿ ಕಾಣಬೇಕು ಅಂದರೆ ವ್ಯಾಯಾಮಾ ದೇಹಕ್ಕೆ ಬಹಳ ಮುಖ್ಯ. ಹೀಗಾಗಿ ಬಿಡುವಿದ್ದಾಗಲೆಲ್ಲಾ ಫಿಟ್ನೆಸ್ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದು ಉತ್ತಮ.

    ಸದ್ಯ ಪುಣೆ ಮೂಲದ ಡಾ. ಶಾರ್ವರಿ ಇಮಾಮ್ದಾರ್ ಎಂಬವರು ಸೀರೆಯುಟ್ಟು ಬಹಳ ಸಲೀಸಾಗಿ ಪುಷ್ ಅಪ್ಸ್ ಮಾಡಿದ್ದಾರೆ. ಈ ವೀಡಿಯೋ ವ್ಯಾಯಾಮ ಮಾಡಲು ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಿದ್ದು, ಶಾರ್ವರಿ ಇಮಾಮ್ದಾರ್ ರವರು ಕಳೆದ 5 ವರ್ಷದಿಂದ ಪ್ರತಿನಿತ್ಯ ಪುಷ್-ಅಪ್ಸ್ ಹಾಗೂ ಪುಲ್ ಆಪ್ಸ್, ಲಿಫ್ಟ್, ಭಾರವಾದ ಡಂಬಲ್ಸ್‌ಗಳನ್ನು ಎತ್ತುವ ಮೂಲಕ ಫಿಟ್ನೆಸ್ ಮೈಂಟೈನ್ ಮಾಡುತ್ತಿದ್ದಾರೆ.

    ಸದ್ಯ ಈ ವೀಡಿಯೋವನ್ನು ಶಾರ್ವರಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಸೀರೆತೊಟ್ಟು ನಡೆಯುವುದಕ್ಕೆ ಕಷ್ಟ, ಸೀರೆ ಅನ್ ಕಂಫರ್ಟ್‍ಟೇಬಲ್ ಎನ್ನುವ ಇಂದಿನ ಮಹಿಳೆಯರ ಮಧ್ಯೆ, ಸಂಪ್ರದಾಯಿಕ ಉಡುಗೆ ತೊಟ್ಟು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಈ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಮಹಿಳೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಾರೆ ಪ್ರೀತಿ, ಛಲ, ಆಸಕ್ತಿ, ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ಎಂದೇ ಹೇಳಬಹುದು. ಇದನ್ನೂ ಓದಿ:  ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ

  • ಮಾಸ್ಕ್ ಧರಿಸದಿದ್ದರೆ 50 ಪುಶ್ ಅಪ್ಸ್ – ಇಂಡೋನೇಷ್ಯಾದಲ್ಲಿ ವಿಭಿನ್ನ ಶಿಕ್ಷೆ

    ಮಾಸ್ಕ್ ಧರಿಸದಿದ್ದರೆ 50 ಪುಶ್ ಅಪ್ಸ್ – ಇಂಡೋನೇಷ್ಯಾದಲ್ಲಿ ವಿಭಿನ್ನ ಶಿಕ್ಷೆ

    ಜಕಾರ್ತಾ: ಮಾಸ್ಕ್ ಧರಿಸದ ವಿದೇಶಿಗರಿಗೆ ಪೊಲೀಸರು ಪುಶ್ ಅಪ್ಸ್ ಮಾಡಿಸುವ ಮೂಲಕ ಶಿಕ್ಷೆ ನೀಡಿರುವ ಘಟನೆ ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿಯಲ್ಲಿ ನಡೆದಿದೆ.

    ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದ್ದು, ದೃಶ್ಯದಲ್ಲಿ ಭದ್ರತಾ ಅಧಿಕಾರಿಗಳು ಟಿ-ಶರ್ಟ್ ಧರಿಸಿರುವ ಪ್ರವಾಸಿಗರಿಗೆ ಬಿಸಿಲಿನಲ್ಲಿ ವ್ಯಾಯಾಮ ಮಾಡಿಸುತ್ತಿರುವುದು ಕಂಡು ಬಂದಿದೆ.

    ಇಂಡೋನೇಷ್ಯಾದಲ್ಲಿ ಕಳೆದ ವರ್ಷ ಕೋವಿಡ್-19 ಹೆಚ್ಚಾಗುತ್ತಿದ್ದಂತೆ ಬಾಲಿಯ ಅಧಿಕಾರಿಗಳು ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಧರಿಸಬೇಕೆಂದು ಘೋಷಿಸಿದ್ದರು.

    ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿದೇಶಿಗರು ಮಾಸ್ಕ್ ಧರಿಸದೆ ಸಿಕ್ಕಿಬಿದ್ದಾರೆ. ಸುಮಾರು 70 ಜನ 100 ಸಾವಿರ ರೂಗಳಷ್ಟು ದಂಡ ಪಾವತಿಸಿದ್ದಾರೆ. ಇನ್ನೂ 30 ಜನರು ನಮ್ಮ ಬಲಿ ಹಣವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರಿಗೆ ಪುಶ್ ಅಪ್ಸ್ ಮಾಡಲು ಆದೇಶಿಸಲಾಗಿದೆ ಎಂದು ಬಾಲಿ ಭದ್ರತಾ ಅಧಿಕಾರಿ ಗುಸ್ಟಿ ಅಗುಂಗ್ ಕೇತುತ್ ಸೂರ್ಯನೇಗರ ತಿಳಿಸಿದ್ದಾರೆ.

    ಮಾಸ್ಕ್ ಹಾಳಾಗಿದೆ, ಮಾಸ್ಕ್ ಒದ್ದೆಯಾಗಿದೆ, ಈ ವಿಚಾರವಾಗಿ ತಿಳಿದಿಲ್ಲ ಎಂದು ಹಲವು ಕಾರಣಗಳನ್ನು ನೀಡಿದರೂ ಮಾಸ್ಕ್ ತರದೇ ಇರುವವರಿಗೆ 50 ಪುಶ್ ಅಪ್ಸ್ ಮಾಡಿಸಲಾಗುತ್ತದೆ. ಮಾಸ್ಕ್ ಇದ್ದು ಸರಿಯಾಗಿ ಧರಿಸದವರಿಗೆ 15 ಪುಶ್ ಅಪ್ಸ್ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಹೇಳಿದರು.

  • ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿಯ ವೀಡಿಯೋ ವೈರಲ್

    ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿಯ ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಮಂದಿರಾ ಬೇಡಿ ಬಳಿಕ ಇದೀಗ ಮತ್ತೊಬ್ಬ ನಟಿ ಸೀರೆಯಲ್ಲಿ ಪುಶ್ ಅಪ್ ಮಾಡಿ ಸುದ್ದಿಯಾಗಿದ್ದಾರೆ.

    ಹೌದು. ನಟಿ ಗುಲ್ ಪನಾಗ್ ಅವರು ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪುಶ್ ಅಪ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಂದಾದರೂ, ಎಲ್ಲಾದರೂ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಗುಲ್ ಪಾನಗ್ ಅಭಿಮಾನಿಗಳನ್ನು ಸ್ಫೂರ್ತಿಗೊಳಿಸಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.

     

    View this post on Instagram

     

    A post shared by Gul Panag (@gulpanag)

    ಪನಾಗ್ ಮಾತ್ರವಲ್ಲ ಇದಕ್ಕಿಂತ ಮೊದಲು ಕೆಲ ನಟಿಯರು ಕೂಡ ಸೀರೆಯಲ್ಲಿ ಪುಶ್ ಅಪ್ ಮಾಡಿದ್ದಾರೆ. ನಟಿ ಮಂದಿರಾ ಬೇಡಿ ಈ ಹಿಂದೆ ಸೀರೆಯಲ್ಲಿ ಪುಶ್ ಅಪ್ ಮಾಡಿ ವೀಡಿಯೋ ಮಾಡಿದ್ದರು. ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಮಂದಿರಾ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, ”ಉಡುಪು ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಅದು ಆಗಬೇಕು” ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿರಾಗೆ ನಿರೂಪಕ ಪುಶ್ ಅಪ್ ಮಾಡಲು ಸವಾಲು ನೀಡಿದ್ದರು. ಈ ವೇಳೆ ಮಂದಿರಾ ಏನೂ ಯೋಚಿಸದೇ ಸವಾಲನ್ನು ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದ್ದರು. ಕೆಲಸ ಏನೇ ಇರಲಿ, ಬಟ್ಟೆ ಯಾವುದೇ ಇರಲಿ, ಅದರ ಬಗ್ಗೆ ಯೋಚಿಸಬಾರದು ಎಂಬುದನ್ನು ತಿಳಿಸಿದ್ದರು.

     

    View this post on Instagram

     

    A post shared by Mandira Bedi (@mandirabedi)

  • 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಗೆದ್ದ 6ರ ಪೋರ

    3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

    ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ.

    ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್ ಮಾಡಿದ್ದಾನಾ ಅಂತ ಶಾಕ್ ಆಗೋದು ಸಾಮಾನ್ಯ. ಆದರೆ ಆಶ್ಚರ್ಯ ಎನಿಸಿದರು ಇದು ಸತ್ಯ. ರಷ್ಯಾದ ನೋವಿ ರೆದಾಂತ್ ನಿವಾಸಿ ಇಬ್ರಾಹಿಂ ಲ್ಯೋನೋವ್(6) ಬಿಡುವಿಲ್ಲದೇ ಬರೋಬ್ಬರಿ 3,270 ಪುಶ್ ಅಪ್ಸ್ ಮಾಡಿ, ಐಷಾರಾಮಿ  ಅಪಾರ್ಟ್‌ಮೆಂಟ್‌  ಗಳಿಸಿದ್ದಾನೆ. ಸದ್ಯ ಬಾಲಕ ಬ್ರೇಕ್ ಫ್ರೀ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಲಕನ ಫಿಟ್ನೆಸ್ ಗೆ ಫಿದಾ ಆಗಿಬಿಟ್ಟಿದ್ದಾರೆ.

    ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ರೀಡಾ ಕ್ಲಬ್‍ನ ಸದಸ್ಯರಾಗಿದ್ದು, ಈ ಪುಶ್ ಅಪ್ಸ್ ಸ್ಪರ್ಧೆಗಾಗಿಯೇ ಬಹಳಷ್ಟು ಶ್ರಮಿಸಿದ್ದರು ಎನ್ನಲಾಗಿದೆ. ಇಬ್ರಾಹಿಂ ಲ್ಯೋನೋವ್ ತನಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸತತ 3,270 ಪುಶ್ ಅಪ್ಸ್ ಮಾಡಿ ತನ್ನ ಫಿಟ್ನೆಸ್ ನಿಂದಲೇ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆದಿದ್ದಾನೆ. ಬಾಲಕನ ಫಿಟ್ನೆಸ್ ಕಂಡು ಆಶ್ಚರ್ಯಪಟ್ಟ ಕ್ರೀಡಾ ಸಂಸ್ಥೆ ಇಬ್ರಾಹಿಂಗೆ ದೊಡ್ಡ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದೆ.

    ಚಿಕ್ಕ ವಯಸ್ಸಿನಲ್ಲೆ ಈ ರೀತಿ ಅಸಾಮಾನ್ಯ ಸಾಧನೆ ಮಾಡಿರುವ ಬಾಲಕನ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲೆ ನಿರ್ಮಿಸಿದ್ದಾನೆ. ಇನ್ನೂ ಆಚ್ಚರಿಯ ಸಂಗತಿ ಏನೆಂದರೆ ಕೇವಲ ಇಬ್ರಾಹಿಂ ಮಾತ್ರವಲ್ಲ ಇಲ್ಲಿನ ಹಲವು ಮಕ್ಕಳು ಈ ರೀತಿ ಪುಶ್ ಅಪ್ಸ್ ಸ್ಪರ್ಧೆಯಲ್ಲಿ ಗೆದ್ದು ಐಶಾರಾಮಿ ಉಡುಗೊರೆಯನ್ನು ಪಡೆದಿದ್ದಾರೆ.

    2018ರಲ್ಲಿ 5 ವರ್ಷದ ಬಾಲಕನೊಬ್ಬ ಬರೋಬ್ಬರಿ 4,150 ಪುಶ್ ಅಪ್ಸ್ ಮಾಡುವ ಮೂಲಕ ಮರ್ಸಿಡೀಸ್ ಕಾರನ್ನು ಗೆದ್ದಿದ್ದನು. ಈ ವೇಳೆ ರಷ್ಯಾದ ಪ್ರಧಾನಿ ಅವರು ಬಾಲಕನಿಗೆ ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು.

  • ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ

    ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ

    ನವದೆಹಲಿ: ಇವತ್ತು ವಿಶ್ವ ತಾಯಂದಿರ ದಿನ ಈ ದಿನದ ಅಂಗವಾಗಿ ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೊಮಾನ್ ಅವರು ತನ್ನ 80 ವರ್ಷದ ತಾಯಿಗೆ ಪುಶ್ ಅಪ್ಸ್ ಮಾಡಿಸಿ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

    ನಟ ಮಿಲಿಂದ್ ಅವರು ತನ್ನ ತಾಯಿ ಉಷಾ ಸೊಮಾನ್ ಅವರನ್ನು ಬೀಚ್‍ಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ತಾಯಿಯ ಜೊತೆ ಪುಶ್ ಅಪ್ಸ್ ಮಾಡಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

    ತನ್ನ ತಾಯಿ ಜೊತೆ ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ಹಾಕಿ “ತಡವಾಗಿಲ್ಲ. ನನ್ನ ತಾಯಿಗೆ ಈಗ 80 ವರ್ಷ, ಪ್ರತಿ ದಿನವನ್ನು ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು”ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಇದಾದ ಬಳಿಕ 53 ವರ್ಷದ ಮಿಲಿಂದ್ ಅವರು, “ಈ ಸಂದೇಶ ಎಲ್ಲಾ ತಾಯಂದಿರಿಗೆ ಸಲ್ಲಬೇಕು. ಪ್ರತಿದಿನ ಕನಿಷ್ಠ 5 ನಿಮಿಷವಾದರೂ ತಾಯಂದಿರ ಜೊತೆ ಸಮಯ ಕಳೆಯಬೇಕು. ನಾವು ಎಲ್ಲರೂ ತಾಯಂದಿರನ್ನು ಫಿಟ್ ಆಗಿ ನೋಡಿಕೊಳ್ಳೊಣ” ಹ್ಯಾಪಿ ಮದರ್ಸ್ ಡೇ ಎಂದು ಹೇಳಿದ್ದಾರೆ.

    ಉಷಾ ಅವರು 2017 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮ್ಯಾರಥಾನ್‍ನಲ್ಲಿ ಬರಿಗಾಲಿನಲ್ಲಿ ಓಡಿದ್ದರು ಮತ್ತು 100 ಕಿ.ಮೀ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

  • ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಮುಂಬೈ: ಫಿಟ್‍ನೆಸ್‍ನಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಮಂದಿರಾ ಈಗ ಇನ್‍ಸ್ಟಾಗ್ರಾಂ ಪೋಸ್ಟ್ ನಿಂದ ಮತ್ತೇ ಸುದ್ದಿಯಾಗಿದ್ದಾರೆ.

    ಮಂದಿರಾ ಕಾರ್ಯಕ್ರಮವೊಂದರಲ್ಲಿ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ಉಡುಪು ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಅದು ಆಗಬೇಕು” ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಂದಿರಾಗೆ ನಿರೂಪಕ ಪುಶ್ ಅಪ್ ಮಾಡಲು ಸವಾಲು ನೀಡಿದ್ದರು. ಮಂದಿರಾ ಏನೂ ಯೋಚಿಸದೇ ಸವಾಲನ್ನು ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದ್ದರು. ಕೆಲಸ ಏನೇ ಇರಲಿ, ಬಟ್ಟೆ ಯಾವುದೇ ಇರಲಿ, ಅದರ ಬಗ್ಗೆ ಯೋಚಿಸಬಾರದು ಎಂಬುದನ್ನು ತಿಳಿಸಿದ್ದಾರೆ.

    ಈ ಹಿಂದೆ ಕೂಡ ಮಂದಿರಾ ಬೇಡಿ ತನ್ನ ವರ್ಕೌಟ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್‍ವಾಲೇ ದುಲ್ಹಾನಿಯಾ ಲೇ ಜಾಯಾಂಗೆ ಸಿನಿಮಾದಲ್ಲಿ ಕಾಣಿಸಿಕೊಂಡ ಈ ನಟಿ ಹಲವು ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಐಪಿಎಲ್‍ನಲ್ಲಿ ನಿರೂಪಣೆ ಮಾಡಿದ್ದಾರೆ.

  • ವಿಡಿಯೋ: 62 ಅಂತಸ್ತಿನ ಕಟ್ಟಡದ ಮೇಲೆ ಪುಶ್ ಅಪ್ಸ್ ಮಾಡುವಾಗ ಕೆಳಗೆ ಬಿದ್ದು ಸಾಹಸಿಗ ಸಾವು

    ವಿಡಿಯೋ: 62 ಅಂತಸ್ತಿನ ಕಟ್ಟಡದ ಮೇಲೆ ಪುಶ್ ಅಪ್ಸ್ ಮಾಡುವಾಗ ಕೆಳಗೆ ಬಿದ್ದು ಸಾಹಸಿಗ ಸಾವು

    ಬೀಜಿಂಗ್: ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡುವ ಮೂಲಕ ಫೇಮಸ್ ಆಗಿದ್ದ ಚೀನಾದ ವ್ಯಕ್ತಿಯೊಬ್ಬ 62 ಅಂತಸ್ತಿನ ಕಟ್ಟಡದ ಮೇಲೆ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    26 ವರ್ಷದ ವೂ ಯೊಂಗ್‍ನಿಂಗ್ ಸಾವನ್ನಪ್ಪಿರೋ ವ್ಯಕ್ತಿ. ಈತ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಭಾರೀ ಸಂಖ್ಯೆಯ ಫಾಲೋವರ್‍ಗಳನ್ನ ಹೊಂದಿದ್ದ. ಯಾವುದೇ ಸುರಕ್ಷಾ ಸಲಕರಣೆಗಳಿಲ್ಲದೆ ಎತ್ತರದ ಕಟ್ಟಡಗಳ ಮೇಲೆ ಸಾಹಸ ಮಾಡಿ ತನ್ನ ಸಾಹಸದ ವಿಡಿಯೋಗಳನ್ನ ಪೋಸ್ಟ್ ಮಾಡ್ತಿದ್ದ. ಈತನ ಕೊನೆಯ ಪೋಸ್ಟ್ ಅಪ್‍ಲೋಡ್ ಆಗಿರುವುದು ನವೆಂಬರ್ 8ರಂದು.

    ವೂ ಪ್ರೇಯಸಿ ಆತನ ಸಾವಿನ ಬಗ್ಗೆ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ 8ರಂದು ವೀಬೋದಲ್ಲಿ ದೃಢಪಡಿಸಿದ್ದಾಳೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಇಲ್ಲಿನ ಹುನಾನ್ ಪ್ರಾಂತ್ಯದ ಚಾಂಗ್ಸಾದಲ್ಲಿನ ಹುವಾಯಾನ್ ಹುವಾ ಸೆಂಟರ್ ಮೇಲೆ ಸಾಹಸ ಮಾಡುವಾಗ ಈ ದುರಂತ ಸಂಭವಿಸಿದೆ. ಕಟ್ಟಡದ ತುತ್ತ ತುದಿಯಲ್ಲಿ ವೂ ಪುಶ್‍ಅಪ್ಸ್ ಮಾಡಲು ಹೋಗಿದ್ದಾನೆ. ಮೊದಲಿಗೆ ಗ್ರಿಪ್ ಸಿಗದೆ ಒದ್ದಾಡಿದ್ದಾನೆ. ಬಳಿಕ ಮೂರ್ನಾಲ್ಕು ಬಾರಿ ಪುಶ್ ಅಪ್ಸ್ ಮಾಡಿದ್ದು ನೋಡ ನೋಡ್ತಿದ್ದಂತೆ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ.

    ವೂ ತನ್ನ ಈ ಸಾಹಸದಿಂದ ಗೆದ್ದ ಹಣವನ್ನ ತನ್ನ ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಾಗೂ ತನ್ನ ತಾಯಿಯ ಚಿಕಿತ್ಸೆಗಾಗಿ ಬಳಸಬೇಕೆಂದಿದ್ದ ಎಂದು ಆತನ ಸಂಬಂಧಿಕರು ತಿಳಿಸಿರುವುದಾಗಿ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    https://www.youtube.com/watch?v=NMN4986slUA

  • ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಮಾಲೀಕರು ಹೇಳಿದಂತೆ ಕೈ ಮುಗಿಯೋದು, ಕೇಳಿದ ವಸ್ತುಗಳನ್ನ ತೆಗೆದುಕೊಡೋದು ಹೀಗೆ ಮುಂತಾದ ಕೆಲಸಗಳನ್ನ ಮಾಡೋದನ್ನ ನೋಡಿರ್ತೀರ. ಆದ್ರೆ ಎಲ್ಲಾದ್ರೂ ನಾಯಿ ವರ್ಕೌಟ್ ಮಾಡೋದನ್ನ ನೋಡಿದ್ದೀರಾ?

    ಹಾಗಿದ್ರೆ ಇಲ್ನೋಡಿ. ಪೊಲೀಸ್ ನಾಯಿಯೊಂದು ಅಧಿಕಾರಿಗಳ ಜೊತೆಗೂಡಿ ಪುಶ್ ಅಪ್ಸ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇಬ್ಬರು ಅಧಿಕಾರಿಗಳು ಪುಶ್ ಅಪ್ಸ್ ಮಾಡ್ತಿದ್ರೆ ನಾಯಿ ಕೂಡ ಅವರ ಮಧ್ಯೆ ಕುಳಿತು ಪುಶ್ ಅಪ್ಸ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಹಿಟ್ ಆಗಿದೆ.

    ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ನಾಯಿಯ ಹೆಸರು ನಿತ್ರೋ. 2 ವರ್ಷದ ಈ ಡಚ್ ಶೆಫರ್ಡ್ ನಾಯಿ ಇದೇ ವರ್ಷ ಅಲಬಾಮಾದ ಗಲ್ಫ್ ಶೋರ್ಸ್ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.

    ಅಧಿಕಾರಿ ಕೋವನ್ ಹಾಗೂ ಹ್ಯಾನ್‍ಕಾಕ್ ಅವರೊಂದಿಗೆ ಕೆ9 ನಿತ್ರೋ ಕೂಡ ಕಾನೂನು ಉಲ್ಲಂಘಿಸೋ ಕಿಡಿಗೇಡಿಗಳನ್ನ ಮಟ್ಟ ಹಾಕಲು ರೆಡಿಯಾಗ್ತಿದೆ ಅಂತ ಪೊಲೀಸ್ ಇಲಾಖೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಂಚಿಕೊಂಡಿದೆ.

    ಭಾನುವಾರದಂದು ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು ಈವರೆಗೆ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 31 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದವರು ನಾಯಿಯ ವರ್ಕೌಟ್ ಕಂಡು ಹುಬ್ಬೇರಿಸಿದ್ದಾರೆ. ಅಧಿಕಾರಿಗಳೇ ನೀವಿನ್ನೂ ಇಂಪ್ರೂವ್ ಆಗ್ಬೇಕು. ನಾಯಿ ಚಲಿಸುತ್ತಾ ಪುಶ್ ಅಪ್ಸ್ ಮಾಡ್ತಿರೋದು ಕಾಣ್ತಿಲ್ವಾ ಅಂತ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

    https://www.facebook.com/gulfshorespolice/videos/1725293160814732/