Tag: Purple Cap

  • IPL 2025: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಇವರೇ.. – ಶಾನ್‌ ಮಾರ್ಷ್‌ನಿಂದ ಕಿಂಗ್‌ ಕೊಹ್ಲಿ ವರೆಗೆ

    IPL 2025: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಇವರೇ.. – ಶಾನ್‌ ಮಾರ್ಷ್‌ನಿಂದ ಕಿಂಗ್‌ ಕೊಹ್ಲಿ ವರೆಗೆ

    ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2025) 18ನೇ ಆವೃತ್ತಿ ಇದೇ ಮಾರ್ಚ್‌ 22ರಿಂದ ಆರಂಭವಾಗುತ್ತಿದೆ.

    shubman gill

    ಐಪಿಎಲ್‌ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ತೋರಿದ ಅಸಾಧಾರಣ ಪ್ರತಿಭಾವಂತರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. 2023, 2024ರ ಐಪಿಎಲ್‌ ಬಳಿಕ‌ ವರುಣ್‌ ಚಕ್ರವರ್ತಿ, ಯಶಸ್ವಿ ಜೈಸ್ವಾಲ್‌ (Yashasvi Jaiswal), ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸಾಯಿ ಸುದರ್ಶನ್‌, ಸರ್ಫರಾಜ್‌ ಖಾನ್‌ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿರೋದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಕಳೆದ ವರ್ಷವಷ್ಟೇ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವರುಣ್‌ ಚಕ್ರವರ್ತಿ ಈಗಾಗಲೇ ಚಾಂಪಿಯನ್‌ ಆಟಗಾರನಾಗಿ ಗುರುತಿಸಿಕೊಂಡಿರುವುದು ವಿಶೇಷ.

    ಈ ಐಪಿಎಲ್‌ ಟೂರ್ನಿಯಲ್ಲಿ ಪ್ರತಿ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಿಗೆ ಆರೆಂಜ್‌ ಕ್ಯಾಪ್‌ (Orange Cap), ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ಗೆ ಪರ್ಪಲ್‌ ಕ್ಯಾಪ್‌ನೊಂದಿಗೆ (Purple Cap) ನಗದು ಬಹುಮಾನ ನೀಡಲಾಗುತ್ತದೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ತಂಡದಲ್ಲಿದ್ದ ಶಾನ್‌ ಮಾರ್ಷ್‌ 616 ರನ್‌ ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದರು. ಆ ನಂತರ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ವಿರಾಟ್‌ ಕೊಹ್ಲಿ ​ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್‌ ಕ್ಯಾಪ್‌ ವಿಜೇತರ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.

    ಐಪಿಎಲ್‌ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ವಿನ್ನರ್ಸ್‌:
    2024 -ಆರ್‌ಸಿಬಿ – ವಿರಾಟ್‌ ಕೊಹ್ಲಿ – 741 ರನ್‌
    2023 – ಗುಜರಾತ್‌ ಟೈಟಾನ್ಸ್ – ಶುಭಮನ್‌ ಗಿಲ್‌ – 890 ರನ್‌
    2022 – ರಾಜಸ್ಥಾನ್‌ ರಾಯಲ್ಸ್‌ – ಜೋಸ್‌ ಬಟ್ಲರ್‌ – 863 ರನ್‌
    2021 – ಚೆನ್ನೈ ಸೂಪರ್‌ಕಿಂಗ್ಸ್‌ – ಋತುರಾಜ್‌ ಗಾಯಕ್ವಾಡ್‌ – 635 ರನ್‌
    2020 – ಕಿಂಗ್ಸ್‌ ಪಂಜಾಬ್‌ – ಕೆ.ಎಲ್‌ ರಾಹುಲ್‌ – 670 ರನ್‌
    2019 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 692 ರನ್‌
    2018 – ಸನ್‌ ರೈಸರ್ಸ್‌ ಹೈದರಾಬಾದ್‌ – ಕೇನ್‌ ವಿಲಿಯಮ್ಸನ್‌ – 735 ರನ್
    2017 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌‌ – 641 ರನ್‌
    2016 – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ವಿರಾಟ್‌ ಕೊಹ್ಲಿ – 973 ರನ್‌
    2015 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 562 ರನ್‌
    2014 – ಕೋಲ್ಕತ್ತಾ ನೈಟ್‌ರೈಡರ್ಸ್‌ – ರಾಬಿನ್‌ ಉತ್ತಪ್ಪ – 660 ರನ್‌
    2013 – ಚೆನ್ನೈ ಸೂಪರ್‌ ಕಿಂಗ್ಸ್‌ – ಮೈಕಲ್ ಹಸ್ಸಿ – 733 ರನ್‌
    2012 – ಆರ್‌ಸಿಬಿ – ಕ್ರಿಸ್‌ ಗೇಲ್‌ – 733 ರನ್‌
    2011 – ಆರ್‌ಸಿಬಿ – ಕ್ರಿಸ್‌ ಗೇಲ್‌ – 608 ರನ್‌
    2010 – ಮುಂಬೈ ಇಂಡಿಯನ್ಸ್‌ – ಸಚಿನ್‌ ತೆಂಡೂಲ್ಕರ್‌ – 618 ರನ್‌
    2009 – ಸಿಎಸ್‌ಕೆ – ಮ್ತಾಥ್ಯೂ ಹೇಡನ್‌ – 572 ರನ್‌
    2008 – ಕಿಂಗ್ಸ್‌ ಪಂಜಾಬ್‌ – ಶಾನ್‌ ಮಾರ್ಷ್‌ – 616 ರನ್‌

    ಪರ್ಪಲ್‌ ಕ್ಯಾಪ್‌ – ಯಾವ ವರ್ಷ ಯಾರ ಮುಡಿಗೆ?
    2024 – ಪಂಜಾಬ್‌ – ಹರ್ಷಲ್‌ ಪಟೇಲ್‌ – 24 ವಿಕೆಟ್‌
    2023 – ಜಿಟಿ – ಮೊಹಮ್ಮದ್‌ ಶಮಿ – 28 ವಿಕೆಟ್‌
    2022 – ಆರ್‌ಆರ್‌ – ಯಜ್ವೇಂದ್ರ ಚಾಹಲ್‌
    2021 – ಆರ್‌ಸಿಬಿ – ಹರ್ಷಲ್‌ ಪಟೇಲ್‌
    2020 – ಡೆಲ್ಲಿ ಕ್ಯಾಪಿಟಲ್ಸ್‌ – ರಬಾಡ
    2019 – ಸಿಎಸ್‌ಕೆ – ಇಮ್ರಾನ್‌ ತಾಹಿರ್‌
    2018 – ಪಂಜಾಬ್‌ – ಎ ತಾಯ್
    2017 – ಹೈದರಾಬಾದ್‌ – ಭುವನೇಶ್ವರ್‌ ಕುಮಾರ್
    2016 – ಹೈದರಾಬಾದ್‌ – ಭುವನೇಶ್ವರ್
    2015 – ಸಿಎಸ್‌ಕೆ – ಬ್ರಾವೋ
    2014 – ಸಿಎಸ್‌ಕೆ – ಮೋಹಿತ್‌ ಶರ್ಮ
    2013 – ಸಿಎಸ್‌ಕೆ – ಬ್ರಾವೋ
    2012 – ಡೆಲ್ಲಿ ಡೇರ್‌ಡೆವಿಲ್ಸ್ – ಮೊರ್ನೆ ಮಾರ್ಕೆಲ್‌
    2011 – ಮುಂಬೈ – ಲಸಿತ್‌ ಮಾಲಿಂಗ
    2010 – ಡೆಕ್ಕನ್‌ ಚಾರ್ಜಸ್‌ – ಪಿ. ಓಜಾ
    2009 – ಡೆಕ್ಕನ್‌ ಚಾರ್ಜಸ್‌ – ಆರ್‌ಪಿ ಸಿಂಗ್‌
    2008 – ಆರ್‌ಆರ್‌ – ಎಸ್‌. ತನ್ವೀರ್

  • IPL 2024: ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಗಿಲ್‌ ವರೆಗೆ

    IPL 2024: ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಗಿಲ್‌ ವರೆಗೆ

    ಮುಂಬೈ: ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2024) 17ನೇ ಆವೃತ್ತಿ ಇಂದಿನಿಂದ (ಮಾ.22) ಆರಂಭಗೊಳ್ಳುತ್ತಿದೆ.

    ಐಪಿಎಲ್‌ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ತೋರಿದ ಅಸಾಧಾರಣ ಪ್ರತಿಭಾವಂತರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. 2023ರ ಐಪಿಎಲ್‌ ಬಳಿಕ ಯಶಸ್ವಿ ಜೈಸ್ವಾಲ್‌ (Yashasvi Jaiswal), ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸಾಯಿ ಸುದರ್ಶನ್‌, ಸರ್ಫರಾಜ್‌ ಖಾನ್‌ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿರೋದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಅಲ್ಲದೇ ಪ್ರತಿ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಿಗೆ ಆರೆಂಜ್‌ ಕ್ಯಾಪ್‌ (Orange Cap), ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ಗೆ ಪರ್ಪಲ್‌ ಕ್ಯಾಪ್‌ನೊಂದಿಗೆ (Purple Cap) ನಗದು ಬಹುಮಾನ ನೀಡಲಾಗುತ್ತದೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ತಂಡದಲ್ಲಿದ್ದ ಶಾನ್‌ ಮಾರ್ಷ್‌ 616 ರನ್‌ ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದರು. ಆ ನಂತರ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭಮನ್‌ ಗಿಲ್‌ ​ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್‌ ಕ್ಯಾಪ್‌ ವಿಜೇತರ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.

    ಐಪಿಎಲ್‌ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ವಿನ್ನರ್ಸ್‌:
    2023 – ಗುಜರಾತ್‌ ಟೈಟಾನ್ಸ್ – ಶುಭಮನ್‌ ಗಿಲ್‌ – 890 ರನ್‌
    2022 – ರಾಜಸ್ಥಾನ್‌ ರಾಯಲ್ಸ್‌ – ಜೋಸ್‌ ಬಟ್ಲರ್‌ – 863 ರನ್‌
    2021 – ಚೆನ್ನೈ ಸೂಪರ್‌ಕಿಂಗ್ಸ್‌ – ಋತುರಾಜ್‌ ಗಾಯಕ್ವಾಡ್‌ – 635 ರನ್‌
    2020 – ಕಿಂಗ್ಸ್‌ ಪಂಜಾಬ್‌ – ಕೆ.ಎಲ್‌ ರಾಹುಲ್‌ – 670 ರನ್‌
    2019 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 692 ರನ್‌
    2018 – ಸನ್‌ ರೈಸರ್ಸ್‌ ಹೈದರಾಬಾದ್‌ – ಕೇನ್‌ ವಿಲಿಯಮ್ಸನ್‌ – 735 ರನ್
    2017 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌‌ – 641 ರನ್‌
    2016 – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ವಿರಾಟ್‌ ಕೊಹ್ಲಿ – 973 ರನ್‌
    2015 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 562 ರನ್‌
    2014 – ಕೋಲ್ಕತ್ತಾ ನೈಟ್‌ರೈಡರ್ಸ್‌ – ರಾಬಿನ್‌ ಉತ್ತಪ್ಪ – 660 ರನ್‌
    2013 – ಚೆನ್ನೈ ಸೂಪರ್‌ ಕಿಂಗ್ಸ್‌ – ಮೈಕಲ್ ಹಸ್ಸಿ – 733 ರನ್‌
    2012 – ಆರ್‌ಸಿಬಿ – ಕ್ರಿಸ್‌ ಗೇಲ್‌ – 733 ರನ್‌
    2011 – ಆರ್‌ಸಿಬಿ – ಕ್ರಿಸ್‌ ಗೇಲ್‌ – 608 ರನ್‌
    2010 – ಮುಂಬೈ ಇಂಡಿಯನ್ಸ್‌ – ಸಚಿನ್‌ ತೆಂಡೂಲ್ಕರ್‌ – 618 ರನ್‌
    2009 – ಸಿಎಸ್‌ಕೆ – ಮ್ತಾಥ್ಯೂ ಹೇಡನ್‌ – 572 ರನ್‌
    2008 – ಕಿಂಗ್ಸ್‌ ಪಂಜಾಬ್‌ – ಶಾನ್‌ ಮಾರ್ಷ್‌ – 616 ರನ್‌

    ಪರ್ಪಲ್‌ ಕ್ಯಾಪ್‌ – ಯಾವ ವರ್ಷ ಯಾರ ಮುಡಿಗೆ?

  • ಒಂದಲ್ಲ ಎರಡು ಪ್ರಶಸ್ತಿ ಗೆದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌

    ಒಂದಲ್ಲ ಎರಡು ಪ್ರಶಸ್ತಿ ಗೆದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌

    ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಆರ್‌ಸಿಬಿ (RCB) ಪರ ಅತ್ಯುತ್ತಮ ಆಟ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಈ ಟೂರ್ನಿಯಲ್ಲಿ ಒಟ್ಟು13 ವಿಕೆಟ್‌ ಪಡೆಯುವ ಮೂಲಕ ನೇರಳೆ ಕ್ಯಾಪ್‌ (Purple Cap) ಪಡೆದಿದ್ದಾರೆ. ಕೈಗೆ ಗಾಯಗೊಂಡ ಪರಿಣಾಮ ಶ್ರೇಯಾಂಕಾ ಪಾಟೀಲ್‌ 2 ಪಂದ್ಯ ಆಡಿರಲಿಲ್ಲ. ಹೀಗಾಗಿ ಕೇವಲ 8 ಪಂದ್ಯವಾಡಿ 13 ವಿಕೆಟ್‌ ಕಿತ್ತು ವಿಶೇಷ ಸಾಧನೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಈ ಟೂರ್ನಿಯ ಉದಯೋನ್ಮುಖ ಆಟಗಾರ್ತಿ (Emerging Player) ಎಂಬ ಪ್ರಶಸ್ತಿಯನ್ನು 21 ವರ್ಷದ ಶ್ರೇಯಾಂಕಾ ಪಾಟೀಲ್‌ ಗೆದ್ದುಕೊಂಡಿದ್ದಾರೆ. ಈ ಪ್ರಶಸ್ತಿ ಸಿಗಲು ಕಾರಣ ಇದೆ. ಆರಂಭದ ಪಂದ್ಯಗಳಲ್ಲಿ ಶ್ರೇಯಾಂಕಾ ಪಾಟೀಲ್‌ ಬೌಲಿಂಗ್‌ ಲಯ ಕಂಡುಕೊಳ್ಳಲು ವಿಫಲರಾಗಿದ್ದರೂ ಕೊನೆ ಕೊನೆಗೆ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದರು.  ಇದನ್ನೂ ಓದಿ: ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಮುಂಬೈ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ 4 ಓವರ್‌ ಎಸೆದು 16 ರನ್‌ ನೀಡಿ 2 ವಿಕೆಟ್‌ ಪಡೆದಿದ್ದರು. ಈ ಪಂದ್ಯದಲ್ಲಿ ಮುಂಬೈ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ವಿಕೆಟ್‌ ಪಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು.

    ಫೈನಲ್‌ ಪಂದ್ಯದಲ್ಲಿ 6ನೇ ಅವರಾಗಿ ಬೌಲಿಂಗ್‌ಗೆ ಇಳಿದ ಶ್ರೇಯಾಂಕಾ 3.3 ಓವರ್‌ ಎಸೆದು 12 ರನ್‌ ನೀಡಿ 4 ವಿಕೆಟ್‌ ಪಡೆದರು. ಅದರಲ್ಲೂ ಡೆಲ್ಲಿ ನಾಯಕಿ ಮೆಗ್‌ ಲ್ಯಾನಿಂಗ್‌ ಅವರನ್ನು ಎಲ್‌ಬಿಗೆ ಕೆಡವು ಮೂಲಕ ಆರ್‌ಸಿಬಿಗೆ ಮುನ್ನಡೆ ತಂದುಕೊಟ್ಟರು. ಆರ್‌ಸಿಬಿಗೆ ಗೆಲುವಿನ ಹಿಂದಿನ ಈ ಸಾಧನೆಗೆ ಅರ್ಹವಾಗಿಯೇ ಶ್ರೇಯಾಂಕಾ ಪಾಟೀಲ್‌ಗೆ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

    ಸಾಮಾಜಿಕ ಜಾಲತಾಣದಲ್ಲಿ ಶ್ರೇಯಾಂಕಾ ಪರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಆರ್‌ಸಿಬಿ ತನ್ನ ಮೊದಲ ಐಪಿಎಲ್‌ ಪಂದ್ಯವಾಡಿದಾಗ ಅವರಿಗೆ 5 ವರ್ಷವಾಗಿತ್ತು. ಆದರೆ ವಿರಾಟ್‌ ಕೊಹ್ಲಿಗಿಂತ ಮೊದಲು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

  • ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಮುಂಬೈ: 2014ರ ಐಪಿಎಲ್‍ನಲ್ಲಿ ಪರ್ಪಲ್ ಕ್ಯಾಪ್ ವಿಜೇತ ಬೌಲರ್, ಐಪಿಎಲ್‍ನಲ್ಲಿ ಮಿಂಚಿ ಸ್ಟಾರ್ ಆಟಗಾರ ಎನಿಸಿಕೊಂಡಿದ್ದ ಮೋಹಿತ್ ಶರ್ಮಾ ಇದೀಗ ಗುಜರಾತ್ ಟೈಟಾನ್ಸ್‌ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.

    ಐಪಿಎಲ್ ಅದೇಷ್ಟೋ ಪ್ರತಿಭಾವಂತ ಆಟಗಾರರನ್ನು ಭಾರತ ತಂಡಕ್ಕೆ ಪರಿಚಯಿಸಿದ ಕೀರ್ತಿ ಹೊಂದಿದೆ. ಕೆಲ ಆಟಗಾರರು ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡು ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡರೆ, ಕೆಲ ಆಟಗಾರರು ಮಿಂಚಿ ಮರೆಯಾಗಿದ್ದಾರೆ. ಅಂತವರ ಸಾಲಿನಲ್ಲಿ ಇದೀಗ ಹರಿಯಾಣ ಮೂಲದ ವೇಗಿ ಮೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮೋಹಿತ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೇಸ್ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದರು. ಎಂಎಸ್ ಧೋನಿ ಗರಡಿಯಲ್ಲಿ ನಂಬಿಕಸ್ಥ ಬೌಲರ್ ಆಗಿದ್ದ ಮೋಹಿತ್ ಯಶಸ್ಸಿನ ತುತ್ತತುದಿಯಲ್ಲಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಮೋಹಿತ್ ತನ್ನ ಸ್ಲೋವರ್ ಬೌಲಿಂಗ್‍ನಿಂದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾಗಿದ್ದರು. ಐಪಿಎಲ್‍ನಲ್ಲಿ ಒಟ್ಟು 86 ಪಂದ್ಯಗಳಲ್ಲಿ 92 ವಿಕೆಟ್ ಪಡೆದಿದ್ದು, 2014ರ ಐಪಿಎಲ್‍ನಲ್ಲಿ ಸಿಎಸ್‍ಕೆ ಪರ ಒಟ್ಟು 16 ಪಂದ್ಯಗಳನ್ನು ಆಡಿದ ಮೋಹಿತ್ ಶರ್ಮಾ ಒಟ್ಟು 23 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಈ ಪ್ರದರ್ಶನದಿಂದಲೇ ಮೋಹಿತ್ ಶರ್ಮಾ 2014ರ ಟಿ20 ವಿಶ್ವಕಪ್ ಹಾಗೂ 2015ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ಆದರೆ ದುರದೃಷ್ಟ ವೆಂಬಂತೆ ಸಿಎಸ್‍ಕೆ ತಂಡ ಐಪಿಎಲ್‍ನಿಂದ 2 ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಮೋಹಿತ್ ಫಾರ್ಮ್ ಕೂಡ ಕೈಕೊಟ್ಟಿತು. ಆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಕಾಣಿಸಿಕೊಂಡರು ಕೂಡ ಈ ಹಿಂದಿನ ಚಾರ್ಮ್ ಅವರಲ್ಲಿ ಕಾಣಸಿಗಲಿಲ್ಲ.

    ಮೋಹಿತ್ ಶರ್ಮಾ ನಂತರ ಪಂಜಾಬ್‍ಕಿಂಗ್ಸ್ ಮತ್ತು ಡೆಲ್ಲಿ ತಂಡದ ಪರ ಆಡಿದರು ಕೂಡ ಈ ಹಿಂದಿನ ರೀತಿಯ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗಲಿಲ್ಲ. 2022ರ ಐಪಿಎಲ್ ಹರಾಜಿನಲ್ಲಿ ಮೋಹಿತ್ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಖರೀದಿಸಲು ಯಾವ ತಂಡ ಕೂಡ ಮುಂದೆ ಬಂದಿರಲಿಲ್ಲ. ಇದೀಗ ಮೋಹಿತ್ ಐಪಿಎಲ್‍ನ ನೂತನ ತಂಡ ಗುಜರಾತ್ ಸೂಪರ್ ಜೈಂಟ್ಸ್ ಪರ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.