Tag: puri jagnath

  • ʻವಾಟ್ ಲಗಾ ದೇಂಗೆ’ ಎಂದು ಮತ್ತೆ ಅಬ್ಬರಿಸಿ ಬೊಬ್ಬಿರಿದ ವಿಜಯ್ ದೇವರಕೊಂಡ

    ʻವಾಟ್ ಲಗಾ ದೇಂಗೆ’ ಎಂದು ಮತ್ತೆ ಅಬ್ಬರಿಸಿ ಬೊಬ್ಬಿರಿದ ವಿಜಯ್ ದೇವರಕೊಂಡ

    ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ `ಲೈಗರ್’ ಸಿನಿಮಾ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಟ್ರೇಲರ್ ಮೂಲಕ ಧೂಳ್ ಎಬ್ಬಿಸ್ತಿರುವ `ಲೈಗರ್’ ಅಂಗಳದಿಂದ ಥೀಮ್ ಸಾಂಗ್ ರಿಲೀಸ್ ಆಗಿದೆ. ಅಕಡಿ ಪಕಡಿ ಸಾಂಗ್ ಭರ್ಜರಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ `ವಾಟ್ ಲಗಾ ದೇಂಗೆ’ ಎಂಬ ಮಾಸ್ ಹಾಡು ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಾಂಗ್ ಸೌಂಡ್ ಮಾಡುತ್ತಿದೆ.

    ವಿಜಯ್ ದೇವರಕೊಂಡ & ಅನನ್ಯಾ ಪಾಂಡೆ ನಟನೆಯ ನಿರೀಕ್ಷಿತ `ಲೈಗರ್’ ಸಿನಿಮಾದ ಹೊಸ ಸಾಂಗ್‌ವೊಂದು ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ನಾಯಕನನ್ನು ವರ್ಣಿಸುವ ಹಾಡು ಇದಾಗಿದೆ. ವಿಜಯ್ ಮಾಸ್ ಡೈಲಾಗ್‌ನಿಂದ ಶುರುವಾಗುವ ಈ ಸಾಂಗ್‌ ನೋಡಿ, ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ನಾಗಿಣಿ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ ಸಂಗೀತಾ ಭಟ್

    ಈ ಮೊದಲು ರಿಲೀಸ್ ಆಗಿದ್ದ ಅಕ್ಡಿ ಪಕ್ಡಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ರಿಲೀಸ್ ಆಗಿರುವ ಮೋಟಿವೇಷನಲ್ ಸಿಂಗಿಂಗೂ ಅದ್ಭುತ ವಿಷ್ಯೂವಲ್ ಹಾಗೂ ಮ್ಯೂಸಿಕಲ್ ಟ್ರೀಟ್ ನೀಡಿದೆ. ಪುರಿ ಜಗನ್ನಾಥ್ ನಿರ್ದೇಶನ `ಲೈಗರ್’ ಸಿನಿಮಾ ಮೂಲಕ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಲೈಗರ್‌ಗೆ ಜೋಡಿಯಾಗಿ ಅನನ್ಯಾ ಪಾಂಡೇ ನಟಿಸಿದ್ದು, ರಮ್ಯಾಕೃಷ್ಣ ವಿಜಯ್‌ಗೆ ತಾಯಿಯಾಗಿ ಅಬ್ಬರಿಸಿದ್ದಾರೆ. ಸ್ಲಂ ಹುಡುಗನೊಬ್ಬ ವಿಶ್ವ ಬಾಕ್ಸಿಂಗ್‌ನಲ್ಲಿ ಮಿಂಚುವ ಕಥೆಯನ್ನ ಹೇಳಲು ವಿಜಯ್ ಹೊರಟಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    ಪುರಿ ಕನೆಕ್ಟ್ಸ್ ಹಾಗೂ ಧರ್ಮ ಪ್ರೊಡಕ್ಷನ್ ಅಡಿ ಚಾರ್ಮಿ ಕೌರ್, ಕರಣ್ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ `ಲೈಗರ್’ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ `ಲೈಗರ್’ ಮುಂದಿನ 25ಕ್ಕೆ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.

    Live Tv
    [brid partner=56869869 player=32851 video=960834 autoplay=true]

  • ರೋಸ್ ಹಿಡಿದು ಬಂದ `ಲೈಗರ್’ ವಿಜಯ್‌ಗೆ ವಸ್ತ್ರಾಲಂಕಾರ

    ರೋಸ್ ಹಿಡಿದು ಬಂದ `ಲೈಗರ್’ ವಿಜಯ್‌ಗೆ ವಸ್ತ್ರಾಲಂಕಾರ

    ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಲೈಗರ್ ಪೋಸ್ಟರ್ ರಿವೀಲ್ ಆಗಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ `ಲೈಗರ್’ ಚಿತ್ರದಲ್ಲಿನ ವಿಜಯ್ ದೇವರಕೊಂಡ ಅರೆ ನಗ್ನ ಲುಕ್ಕಿಗೆ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    ಪುರಿ ಜಗನ್ನಾಥ್ ನಿರ್ದೇಶನದ `ಲೈಗರ್’ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ನಿನ್ನೇಯಷ್ಟೇ ಲೈಗರ್ ಚಿತ್ರದ ವಿಜಯ್ ದೇವರಕೊಂಡ ಲುಕ್ ರಿವೀಲ್ ಆಗಿ ಮೆಚ್ಚುಗೆ ಮಹಾಪೂರವೇ ಹರಿಬಂದಿತ್ತು. ಬಟ್ಟೆಯಿಲ್ಲದೇ ರೋಸ್ ಹಿಡಿದು ಬಂದ ಲೈಗರ್ ವಿಜಯ್ ಲುಕ್ ನೋಡಿ ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ. ಬಳಿಕ ಪೋಸ್ಟರ್ ಅನ್ನ ಮರುಸೃಷ್ಟಿ ಮಾಡಿ ವೈರಲ್ ಮಾಡ್ತಿದ್ದಾರೆ.

    ಲೈಗರ್ ಸಿನಿಮಾ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಸಂಪೂರ್ಣ ವಿವಸ್ತ್ರವಾಗಿ, ಕೈಯಲ್ಲಿ ರೋಸ್ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಇದೆ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಲುಕ್ ಮರುಸೃಷ್ಠಿ ಮಾಡಲಾಗಿದೆ. ತಮಗೆ ಇಷ್ಟ ಬಂದ ಉಡುಗೆಗಳನ್ನು ಪೋಸ್ಟರ್‌ಗೆ ಜೋಡಿಸಿ ಹರಿ ಬಿಡುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಬೆತ್ತಲೆ ಚಿತ್ರಕ್ಕೆ ಭಾರತದಾದ್ಯಂತ ತಾಪಮಾನ ಹೆಚ್ಚಿದೆ ಎಂದ ನಟಿ ಅನನ್ಯ ಪಾಂಡೆ

     

    View this post on Instagram

     

    A post shared by Telugu Swaggers (@telugu_swaggers)

    ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಟ್ ತೊಡಿಸಿದರೆ ಮತ್ತೆ ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಂಟು, ಶರ್ಟ್‌ ಎರಡನ್ನೂ ತೊಡಿಸಲಾಗಿದೆ. ಬೇರೊಂದು ಪೋಸ್ಟರ್‌ನಲ್ಲಿ ನಟ ಬಾಲಯ್ಯ ವಿಜಯ್ ಶಾಲು ಹೊದಿಸುತ್ತಿರುವ ಹಾಗೇ ಮರುಸೃಷ್ಟಿ ಮಾಡಿ ಹರಿಬಿಟ್ಟಿದ್ದಾರೆ. ಒಟ್ನಲ್ಲಿ ಲೈಗರ್ ಹೊಸ ಲುಕ್ ಈಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

    Live Tv

  • ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಡ್ಯುಯೇಟ್ ಹಾಡಲು ಮಂಗಳೂರು ಬೆಡಗಿ ಪೂಜಾ ಹೆಗ್ಡೆ ರೆಡಿಯಾಗಿದ್ದಾರೆ.

    vijaydevarakonda

    ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ `ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ನಾಯಕಿಯ ಆಯ್ಕೆ ಆಗಿದೆ. ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನ ಕಾಪಿ ಹೊಡೆದ ಸ್ಟಾರ್ ನಟ ಕಮಲ್ ಹಾಸನ್

    ಇದೊಂದು ಆಕ್ಷನ್ ಕಥೆಯಾಗಿದ್ದು, ಜೂನ್ ಮೊದಲ ವಾರದಲ್ಲಿಯೇ ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ.

    ಪೂಜಾ ಹೆಗ್ಡೆ ಅವರಿಗೆ ಸಾಲು ಸಾಲು ಸಿನಿಮಾ ಸೋತಿದೆ. ಗೆಲುವಿಗಾಗಿ ಕಾಯುತ್ತಿರುವ ಪೂಜಾ ಈ ಚಿತ್ರದಲ್ಲಿಯಾದರೂ ಅವರು ಗೆಲುವು ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಪದೇ ಪದೇ ಸೋಲು ಸಿಕ್ಕಿದ್ದಕ್ಕೆ ಪೂಜಾ ಹೆಗ್ಡೆ ಅವರಿಗೆ ಐರನ್ ಲೆಗ್ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮುಂಬರುವ ಚಿತ್ರದ ಮೂಲಕ ಪೂಜಾ ಹೆಗ್ಡೆ ಅದೃಷ್ಟ ಖುಲಾಯಿಸುತ್ತಾ ಅಂತಾ ಕಾದು ನೋಡಬೇಕಿದೆ.

  • ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಟಿ ಪೂಜಾ ಹೆಗ್ಡೆ ಟಾಲಿವುಡ್‌ನ ಪ್ರತಿಭಾವಂತ ಕಲಾವಿದೆ, ಇತ್ತೀಚೆಗೆ ಈ ನಟಿಯ ಸಾಲು ಸಾಲು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋತಿತ್ತು. ಆದರೆ ಈಗ ಬಂಪರ್ ಆಫರ್‌ಗಳು ಪೂಜಾಗೆ ಅರಸಿ ಬರುತ್ತಿವೆ. ಇದೀಗ ನಟ ವಿಜಯ್ ದೇವರಕೊಂಡ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ.

    ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ಪ್ರತಿಭಾವಂತ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಅದ್ಯಾಕೋ ಅವರಿಗೆ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದ್ರರಲ್ಲಿ ಸೋತಿದೆ. ಆದರೂ ಪೂಜಾಗೆ ಭರ್ಜರಿ ಆಫರ್‌ಗಳು ಅರಸಿ ಬರುತ್ತಿದೆ. ಇದೀಗ ನಟ ವಿಜಯ್ ದೇವರಕೊಂಡ ಜತೆ ರೊಮ್ಯಾನ್ಸ್ ಮಾಡಲು ಪೂಜಾ ರೆಡಿಯಾಗಿದ್ದಾರೆ.

    ಪೂಜಾ ಹೆಗ್ಡೆ ನಟಿಸಿರೋ ಚಿತ್ರಗಳು ಸೋಲು ಕಂಡಿವೆ ಆದರೂ ಅವರ ಡಿಮ್ಯಾಂಡ್ ಎನು ಕಮ್ಮಿಲ್ಲ ಆಗಿಲ್ಲ. ಸಿನಿಮಂದಿ ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೀತಾ ಇದ್ರು. ನಿರ್ಮಾಪಕರು ಕ್ಯಾರೆ ಎನ್ನದೇ ಪೂಜಾನೇ ಬೇಕು ಅಂತಾ ಅಫರ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ಚಿತ್ರ `ಜನಗಣಮನ’ ಸಿನಿಮಾಗೆ ನಾಯಕಿಯಾಗಿ ಪೂಜಾ ಅವರನ್ನೇ ಫೈನಲ್ ಮಾಡಲಾಗಿದೆ. ಇದನ್ನೂ ಓದಿ: ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    `ಜನಗಣಮನ’ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಚಿತ್ರಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಾರ್ಮಿ ಕೌರ್ ಪ್ರೋಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಜಯ್ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಲು ಸಾಲು ಸೋಲುಗಳನ್ನೇ ಕಂಡಿರೋ ಪೂಜಾಗೆ ಈ ಪ್ರಾಜೆಕ್ಟ್ನಿಂದ ಲಕ್ ಬದಲಾಗುತ್ತಾ ಅಂತಾ ಕಾದು ನೋಡಬೇಕಿದೆ.

  • `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ನಟನೆಯ `ಅಪ್ಪು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಪುನೀತ್ ನಟಿಸಿದ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ರು. ಇದೀಗ `ಅಪ್ಪು’ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಇದೇ ವೇಳೆ ನಟಿ ರಕ್ಷಿತಾ ಪುನೀತ್ ನಪಿನಲ್ಲಿ `ಅಪ್ಪು’ ಚಿತ್ರದ ಕುರಿತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಪವರ್ ಸ್ಟಾರ್ ಪುನೀತ್ `ಅಪ್ಪು’ ಚಿತ್ರದ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ವಿಭಿನ್ನ ಪ್ರೇಮಕಥೆಯೊಂದಿಗೆ ಸಿನಿಪ್ರಿಯರಿಗೆ ಪುನೀತ್ ಮತ್ತು ರಕ್ಷಿತಾ ಮೋಡಿ ಮಾಡಿದ್ರು. ಪುರಿ ಜಗನ್ನಾಥ್ ನಿರ್ದೇಶನದ `ಅಪ್ಪು’ ಚಿತ್ರ ತೆರೆಕಂಡು ಬರೋಬ್ಬರಿ ಇಂದಿಗೆ 20 ವರ್ಷಗಳು ಕಳೆದಿದೆ. ಇದೇ ವೇಳೆ ‌ʻಅಪ್ಪುʼ ಚಿತ್ರದ ನೆನಪಿನ ಬುತ್ತಿಯನ್ನ ಬರವಣಿಗೆಯ ಮೂಲಕ ನಟಿ ರಕ್ಷಿತಾ  ಎಮೋಷನಲ್ ಆಗಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Rakshitha ???? (@rakshitha__official)

    `ಅಪ್ಪು’ ಸಿನಿಮಾ ಎಂತಹ ಸುಂದರ ಮತ್ತು ಅದ್ಭುತ ಸಿನಿಮಾ, ಈ ಮೂಲಕ ಎಂತಹ ಸ್ಟ್ರಾಂಗ್ ಮತ್ತು ಮಾದರಿ ವ್ಯಕ್ತಿಯನ್ನ  ಪಾರ್ವತಮ್ಮ ರಾಜ್‌ಕುಮಾರ್ ಭೇಟಿಯಾದೆ, ಅವರಿಲ್ಲದೇ ನಾನಿಲ್ಲ. ಇಂದು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಅವರ ನಗು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಇನ್ನೂ ಈ ವೇಳೆ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ಅಸೋಸಿಯೇಟ್‌ ಆಗಿದ್ದ ದಿನೇಶ್ ಬಾಬು ಅವರಿಗೆ ನನ್ನ ಕಲಿಕೆಗೆ ನೆರವಾಗಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರ ಅರ್ಧ ಜೀವನದ ಅನುಭವ ತಿಳಿಸಿಕೊಟ್ಟಿದೆ. ನನ್ನ ಅಭಿಮಾನಿಗಳಿಗೂ, ಸ್ನೇಹಿತರಿಗೂ ಧನ್ಯವಾದಗಳು ಎಂದು ಎಮೋಷನಲ್ ಆಗಿ `ಅಪ್ಪು’ ಚಿತ್ರದ ಕುರಿತು ಪುನೀತ್ ಅವರ ನೆನಪಿನಲ್ಲಿ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.