Tag: Puri Jagannath Rath Yatra

  • ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ!

    ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ!

    ಭುವನೇಶ್ವರ: ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ (Puri Jagannath Rath Yatra) ರಥ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಉಸಿರುಗಟ್ಟಿ ಓರ್ವ ಭಕ್ತ (Devotee) ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

    ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲು ಆಗದೇ ಓರ್ವ ಭಕ್ತ ಮೃತಪಟ್ಟಿದ್ದಾರೆ. ನೂಕುನುಗ್ಗಲು ಬಳಿಕ ಕಾಲ್ತುಳಿತವೂ (Stampede) ಉಂಟಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

    ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ, ಭಕ್ತನೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಮತ್ತೆ ಕ್ಯಾತೆ – ಕೇಂದ್ರದಿಂದ ‘ಪ್ರವಾಹ್’ ತಂಡ ರಚನೆ

    ಕಾಲ್ತುಳಿತದ ಬಳಿಕ ಸುಮಾರು 300 ಜನರನ್ನ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಶ್ಚಾರ್ಜ್‌ ಮಾಡಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಕಾಲ್ತುಳಿತದ ಬಳಿಕವೂ ರಥಯಾತ್ರೆಯು ಸುಗಮವಾಗಿ ಸಾಗಿದೆ ಎಂದು ಒಡಿಶಾ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

    ರಥಯಾತ್ರೆ ವೀಕ್ಷಿಸಿದ ರಾಷ್ಟ್ರಪತಿ:
    ಪ್ರಸಿದ್ಧ ಜಗನ್ನಾಥ ದೇಗುಲದ ವಾರ್ಷಿಕ ರಥಯಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದು, ಅವರು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಹೊಸ ಕ್ರಿಮಿನಲ್‌ ಕಾನೂನಿನಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಸ್‌ ದಾಖಲು

  • ಪುರಿ ಜಗನ್ನಾಥ ರಥಯಾತ್ರೆಗೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ಕೊಟ್ಟ ಸುಪ್ರೀಂ

    ಪುರಿ ಜಗನ್ನಾಥ ರಥಯಾತ್ರೆಗೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ಕೊಟ್ಟ ಸುಪ್ರೀಂ

    ನವದೆಹಲಿ: ಕೊರೊನಾ ರಣಕೇಕೆ ಮಧ್ಯೆಯೂ ಐತಿಹಾಸಿಕ ಪುರಿಯ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.

    ಜೂನ್ 23ರಂದು ದೇವಾಲಯದ ಆವರಣದ ಒಳಗಡೆ ಮಾತ್ರ ಯಾತ್ರೆ ನಡೆಸಲು ಅವಕಾಶ ನೀಡಿದೆ. ಯಾತ್ರೆಗೆ ಅವಕಾಶ ನೀಡುವಂತೆ ಇಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಲು ಅನುಮತಿ ಕೊಡುವಂತೆ ಅರ್ಜಿಯಲ್ಲಿ ತಿಳಿಸಿತ್ತು.

    ಪುರಿ ಜಗನ್ನಾಥ ದೇವಾಲಯದ ಆಡಳಿತದ ಅಧ್ಯಕ್ಷರು ಪುರಿಯ ಗಜಪತಿ ಮಹಾರಾಜ್ ಪ್ರಸ್ತಾಪಿಸಿದಂತೆ, ಪುರಿಗೆ ಸೀಮಿತವಾಗಿ, ಸಾರ್ವಜನಿಕರ ಹಾಜರಾತಿ ಇಲ್ಲದೇ ಯಾತ್ರೆ ನಡೆಯಬೇಕು. ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಒಂದು ವೇಳೆ ಸೋಂಕು ಹರಡಿದರೆ ರಾಜ್ಯ ಸರ್ಕಾರವೇ ಇದಕ್ಕೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

    ಸಾರ್ವಜನಿಕರ ಆರೋಗ್ಯ ಮತ್ತು ನಾಗರಿಕ ಸುರಕ್ಷತೆಯ ಹಿತಾಸಕ್ತಿಯ ಕಾರಣದಿಂದ ಈ ವರ್ಷ ಪುರಿ ರಥಾ ಯಾತ್ರೆಯನ್ನು ಅನುಮತಿ ನೀಡುವುದಿಲ್ಲ ಜೂನ್ 18ರ ಆದೇಶದಲ್ಲಿ ತಿಳಿಸಿತ್ತು. ‘ಯಾತ್ರೆಗೆ ಅವಕಾಶ ನೀಡಿದರೆ ಅದನ್ನು ಜಗನ್ನಾಥ ಕ್ಷಮಿಸುವುದಿಲ್ಲ ಎಂದು ಸಿಜೆಐ ಬೊಬ್ಡೆ ಅವರು ಹೇಳಿದ್ದರು.

    ಈ ಆದೇಶದ ಬೆನ್ನಲ್ಲೇ ಒಡಿಶಾ ಸರ್ಕಾರ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಕೆಲವು ಮುನ್ನೆಚ್ಚರಿಕ ಕ್ರಮಗಳೊಂದಿಗೆ ಮೆರವಣಿಗೆಯನ್ನು ನಡೆಸಲು ಸಿದ್ಧ ಎಂದು ಒಡಿಶಾ ಸರ್ಕಾರ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯನ್ನು ಪುರಸ್ಕರಿಸಿ ಈಗ ಷರತ್ತುಬದ್ಧ ಅನುಮತಿ ನೀಡಿದೆ.