Tag: puppies

  • ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ಹೈದರಾಬಾದ್: 2 ನಾಯಿಮರಿಗಳನ್ನು (Puppies) ಕೊಂದು, ಕೃತ್ಯದ ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ (Hyderabad) ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಮೂಕ ಪ್ರಾಣಿಗಳ ಮೇಲೆ ಕ್ರೂರ ಕೃತ್ಯ ಎಸಗಿದ ವ್ಯಕ್ತಿ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ, ಎರಡನೆಯದನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಬಳಿಕ ಅದು ಜೀವಂತವಾಗಿದೆಯೇ ಎಂಬುದನ್ನು ನೋಡಲು ಕಾಲಿನಿಂದ ಒದ್ದಿದ್ದಾನೆ. ಕೃತ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಕಟ್ಟೇಡನ್ ಪ್ರದೇಶದ ನಿವಾಸಿ ರೇ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಚಿರತೆ ಕಣ್ಣಾಮುಚ್ಚಾಲೆ, 15 ದಿನಗಳಿಂದ ಬೃಂದಾವನ ಕ್ಲೋಸ್ – ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

     

    ನವೆಂಬರ್ 15ರಂದು ವೀಡಿಯೋವನ್ನು ಆರೋಪಿ ಅಪ್ಲೋಡ್ ಮಾಡಿದ್ದಾನೆ. ಕೃತ್ಯ ಬೆಳಕಿಗೆ ಬಂದಂತೆ ಮೈಲಾರ್‌ದೇವಪಲ್ಲಿ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಮೂಲಕ ದುಷ್ಕೃತ್ಯಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 11 (ಎಲ್) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್

    Live Tv
    [brid partner=56869869 player=32851 video=960834 autoplay=true]

  • ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

    ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

    ಮುಂಬೈ: ಮಂಗ, ನಾಯಿ ಗ್ಯಾಂಗ್‍ವಾರ್‍ನಲ್ಲಿ 80 ನಾಯಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡದಿದೆ.

    ಬೀದಿ ನಾಯಿಗಳ ಮೇಲಿನ ಪ್ರತೀಕಾರದಿಂದ ಕೋತಿಗಳ ಗುಂಪು ಸಿಕ್ಕ ಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈಬಿಟ್ಟು ಕೊಂದು ಹಾಕಿವೆ.  ಇದನ್ನೂ ಓದಿ:  ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಸ್ಥಳೀಯರ ಪ್ರಕಾರ ಇಲ್ಲಿನ ಮಜಲ್‍ಗಾವ್‍ನಲ್ಲಿ ನಾಯಿಗಳು ಕೋತಿಮರಿಯ ಮೇಲೆ ದಾಳಿ ಮಾಡಿ ಕೊಂದಿದ್ದವು. ಆಗಿನಿಂದಲೂ ಕೋತಿಗಳ ಗುಂಪು ಕಂಡ ಕಂಡ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಮನೆ ಅಥವಾ ಮರದಿಂದ ಕೈ ಬೊಟ್ಟು ಕೊಂದು ಹಾಕಿವೆ. ಕೋತಿಗಳ ಕೃತ್ಯಕ್ಕೆ ಈಗಾಗಲೇ 80 ನಾಯಿಮರಿಗಳು ಬಲಿಯಾಗಿವೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ಮುಜಲ್‍ಗಾವ್‍ನಲ್ಲಿ ಅಂದಾಜು 5000 ನಿವಾಸಿಗಳಿದ್ದಾರೆ. ಆದರೆ ಮಂಗಳ ದಾಳಿಯಿಂದಾಗಿ ಒಂದೂ ನಾಯಿಮರಿಗಳು ಇಲ್ಲದಂತಾಗಿದೆ. ಮಂಗಗಳ ಇಂಥ ರಾಕ್ಷಸೀ ಕೃತ್ಯದಿಂದ ಬೇಸತ್ತ ನಿವಾಸಿಗಳು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯವರು ಬಹುತೇಕ ಕೋತಿಗಳನ್ನು ಸೆರೆ ಹಿಡಿದಿದ್ದಾರೆ. ಮಂಗಗಳು ಶಾಲೆಗೆ ಹೋಗುವ ಮಕ್ಕಳ ಮೇಲೂ ದಾಳಿಗೆ ಮೂಂದಾಗುತ್ತಿವೆ ಎಂದು ನಿವಾಸಿಗಳು ಆತಂಕಿತರಾಗಿದ್ದಾರೆ.

  • ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಈಗ ಮುಖದ ಮೇಲೆ ಬಾಲವಿರುವ ಕ್ಯೂಟ್ ನಾಯಿ ಮರಿ ಸಖತ್ ವೈರಲ್ ಆಗಿದ್ದು. ಈ ನಾಯಿ ಮರಿಯನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

    ಒಂದು ಬಾಲವಿರುವ ನಾಯಿಯನ್ನು ನೋಡಿರುತ್ತೇವೆ. ಆದರೆ ಅಮೆರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿ ಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಚಿತ್ರವೆಂದರೆ ನಾಯಿ ಮರಿಗೆ ಮುಖದ ಮೇಲೆ ಬಾಲವಿದೆ. ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗುತ್ತಿದ್ದು, ಸದ್ಯ ಎಲ್ಲೆಡೆ ಈ ನಾಯಿ ಮರಿಯದ್ದೇ ಚರ್ಚೆ ಶುರುವಾಗಿದೆ.

    ನಾಯಿ ಮರಿಯನ್ನು ಕಂಡ ಜನರು ಇದಕ್ಕೆ ಕ್ಯೂಟ್ ಯೂನಿಕಾರ್ನ್ ಎಂದು ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ. ಮಕ್ಕಳ ಕಥೆಗಳಲ್ಲಿ ಬರುವ ಯೂನಿಕಾರ್ನ್‍ಗೆ ಕೊಡಿರುವಂತೆ ಈ ನಾಯಿ ಮರಿಗೆ ಹಣೆಯ ಮೇಲೆ ಬಾಲವಿದೆ. ಆದರೆ ಈ ನಾಯಿ ಮರಿಯ ಅಸಲಿ ಹೆಸರು ನಾರ್ವಲ್. ನಾಯಿ ಮರಿಯನ್ನು ಬೀದಿಯಲ್ಲಿ ಕಂಡು ಎನ್‍ಜಿಓವೊಂದು ಇದನ್ನು ರಕ್ಷಿಸಿದೆ.

    https://twitter.com/dog_rates/status/1194660457451159552

    ಈ ನಾಯಿ ಮರಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಮ್ಯಾಕ್ ಮಿಷನ್ಸ್ ಚಾರಿಟಿ ರಕ್ಷಣೆ ಮಾಡಿತ್ತು. ಈ ವೇಳೆ ಈ ಪುಟ್ಟ ನಾಯಿ ಮರಿಯ ಹಣೆಯ ಭಾಗದಲ್ಲಿ ಪುಟ್ಟ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.

    ಅಲ್ಲಿ ವೈದ್ಯರು ನಾರ್ವಲ್‍ನನ್ನು ತಪಾಸಣೆ ನಡೆಸಿದ ಬಳಿಕ ನಾಯಿ ಮರಿಯ ಮುಖದ ಮೇಲಿರುವ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಬಾಲವನ್ನು ಕತ್ತರಿಸದೇ ಸುಮ್ಮನೆ ಬಿಟ್ಟಿದ್ದಾರೆ.

    ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ‘ವಿ ರೇಟ್ ಡಾಗ್ಸ್’ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪರೂಪದ ನಾಯಿ ಮರಿಗೆ ಕ್ಯೂಟ್‍ನೆಸ್‍ಗೆ ಪ್ರಾಣಿ ಪ್ರೀಯರು ಫಿದಾ ಆಗಿದ್ದಾರೆ. ಯೂನಿಕಾರ್ನ್ ತರಹ ಈ ನಾಯಿ ಮರಿಗೆ ಪಪ್ಪಿಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.

  • ನಾಯಿಮರಿಗಳ ಮೇಲೆ ಲೈಂಗಿಕ ದೌರ್ಜನ್ಯ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ನಾಯಿಮರಿಗಳ ಮೇಲೆ ಲೈಂಗಿಕ ದೌರ್ಜನ್ಯ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಚೆನ್ನೈ: ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ 30 ವರ್ಷದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಘಟನೆ ನಡೆದ ಎರಡು ವಾರಗಳ ನಂತರ ಸಿಸಿಟಿವಿ ಆಧಾರಿಸಿ ದೂರು ನೀಡಿದ್ದರು. ಆರೋಪಿಯನ್ನು ಚೆನ್ನೈನ ಮಾಧವರಾಮ್ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ.

    ಈತ ಮಾರ್ಚ್ 14 ರಂದು ಮಾಧವರಾಮ್ ಸಮೀಪದ ಮಾರ್ಥೂರಿನ ಖಾಲಿ ಮೈದಾನದಲ್ಲಿ ನಾಲ್ಕು ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧವರಾಮ ಮಿಲ್ಕ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಪ್ರಾಣಿ ಹಕ್ಕುಗಳ ಕಾರ್ಯಕರ್ತ ಸಾಯಿ ವಿಘ್ನೇಶ್ ನೀಡಿದ ದೂರಿನ ಆಧಾರದ ಮೇರೆಗೆ ನಗರದ ಪೊಲೀಸರು ಭಾಸ್ಕರ್ ಮೇಲೆ ಅಶ್ಲೀಲ ಕೃತ್ಯಗಳನ್ನು ಎಸಗುವ ಆರೋಪಗಳಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ಭಾಸ್ಕರ್ ನನ್ನು ಜೈಲಿಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಕಾನೂನಿನ ತಜ್ಞರನ್ನು ಸಂಪರ್ಕಿಸಿದ ನಂತರ ಈ ಕುರಿತು ಎಫ್‍ಐಆರ್ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    ಕಳೆದ ತಿಂಗಳು ಎಮ್‍ಎಂಡಿಎ ಕಾಲೋನಿಯ ಅಡ್ಡ ರಸ್ತೆಯಲ್ಲಿ ನಾಯಿಮರಿಗಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಒಂದು ತಿಂಗಳ ಅಂತರದಲ್ಲಿ ಮತ್ತೆ ಖಾಲಿ ಪ್ರದೇಶದಲ್ಲಿ ನಾಯಿಮರಿಗಳಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆರೋಪಿ ಅಲ್ಲಿಂದ ಓಡಿಹೋಗಿದ್ದನು. ನಾನು ದೂರು ಸಲ್ಲಿಸುವವರೆಗೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವಿಘ್ನೇಶ್ ಹೇಳಿದ್ದಾರೆ.

    https://www.facebook.com/almightyanimalcaretrust/posts/1247765012041725

    ಈ ಬಗ್ಗೆ ವಿಘ್ನೇಶ್ ಅವರು ಎರಡು ವಾರಗಳ ಹಿಂದೆಯೇ Almighty Animal Care Trust ಎಂಬ ಫೇಸ್‍ಬುಕ್ ಪೇಜಿನಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದರು. ಆರೋಪಿ ಭಾಸ್ಕರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ಸಾಕ್ಷಿಗಾಗಿ ಆ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಆರೋಪಿಯ ಕೃತ್ಯ ಸೆರೆಯಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಎರಡು ಮುದ್ದಾದ ನಾಯಿಮರಿಗಳಿಗೆ ಜನ್ಮ ನೀಡಿದ ಕೋಟಿ ಬೆಲೆ ಬಾಳುವ ರಾಯಲ್ ಡಾಗ್

    ಎರಡು ಮುದ್ದಾದ ನಾಯಿಮರಿಗಳಿಗೆ ಜನ್ಮ ನೀಡಿದ ಕೋಟಿ ಬೆಲೆ ಬಾಳುವ ರಾಯಲ್ ಡಾಗ್

    ಬೆಂಗಳೂರು: ನಾಯಿ ಬೆಲೆ ಅಬ್ಬಬ್ಬಾ ಅಂದ್ರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಇರುತ್ತೆ. ಆದ್ರೇ ಇದು ಕೋಟಿ ಬೆಲೆಬಾಳೋ ಫಾರಿನ್ ಬ್ರೀಡ್ ನಾಯಿ. ಬೆಂಗಳೂರಿನಲ್ಲಿರುವ ಕೋಟಿ ಬೆಲೆಬಾಳೋ ನಾಯಿ ಈಗ ತಾಯಿ ಆಗಿದೆ.

    ಕೊರಿಯನ್ ಮ್ಯಾಸ್ಟಿಪ್ ಅನ್ನೋ ಅಪರೂಪದ ದುಬಾರಿ ನಾಯಿಯನ್ನು ಬೆಂಗಳೂರಿನ ಸತೀಶ್ ಎಂಬವರು ವಿದೇಶದಿಂದ ತರಿಸಿದ್ರು. ಒಂದು ಹೆಣ್ಣು ಮತ್ತು ಒಂಡು ಗಂಡು ಮರಿಯನ್ನು ಬರೋಬ್ಬರಿ ಎರಡು ಕೋಟಿ ಕೊಟ್ಟು ಖರೀದಿಸಿದ್ರು. ಆದ್ರೆ ಗಂಡು ನಾಯಿ ಕೆಲವು ದಿನಗಳ ನಂತರ ಸತ್ತು ಹೋಗಿತ್ತು. ಬಳಿಕ ಹೆಣ್ಣು ನಾಯಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗಿತ್ತು. ಹೀಗಾಗಿ ಇದೀಗ ಕೊರಿಯನ್ ಮ್ಯಾಸ್ಟಿಪ್ ತಳಿಯ ನಾಯಿ ಮುದ್ದು ಮರಿಗಳಿಗೆ ಜನ್ಮನೀಡಿದೆ.

    ಸದ್ಯ 20 ದಿನದ ಈ ನಾಯಿ ಮರಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಒಂದು ನಾಯಿ ಮರಿಗೆ 20 ಲಕ್ಷ ರೂ. ನಷ್ಟು ಬೇಡಿಕೆ ಇದೆ ಸತೀಶ್ ಹೇಳುತ್ತಾರೆ. ಅಂದಹಾಗೆ ಕೋಟಿ ರೂ. ಬೆಲೆಯ ನಾಯಿಯನ್ನು ಸಾಕೋಕೆ ತಿಂಗಳಿಗೆ ಏನಿಲ್ಲ ಅಂದ್ರೂ ಇಪ್ಪತ್ತರಿಂದ ಮೂವತ್ತು ಸಾವಿರ ಖರ್ಚಾಗಲಿದೆ.