Tag: Punyakoti

  • ತಮ್ಮದೇ ನಿರ್ದೇಶನದ 2 ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

    ತಮ್ಮದೇ ನಿರ್ದೇಶನದ 2 ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

    ಟ ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸದಲ್ಲೇ ಕಳೆದು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಮುಂದಿನ ಅವರ ಸಿನಿಮಾಗಳು ಯಾವವು? ಏನು ಮಾಡಲಿದ್ದಾರೆ? ನಿರ್ದೇಶನವಾ ಅಥವಾ ಬೇರೆ ನಿರ್ದೇಶಕರ (Directer) ಸಿನಿಮಾದಲ್ಲಿ ನಟನೆಯಾ ಎನ್ನುವ ಪ್ರಶ್ನೆಗಳು ಮೂಡಿದ್ದವು. ಇದೀಗ ರಕ್ಷಿತ್ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

    ಗುರು ಪೂರ್ಣಿಮೆಯ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ರಕ್ಷಿತ್, ತಮ್ಮ ಮುಂದಿನ ಕನಸು ಮತ್ತು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸ್ಪೂರ್ತಿ ತುಂಬಬಲ್ಲಂತಹ ಕೆಲವು ಮಾತುಗಳನ್ನೂ ರಕ್ಷಿತ್ ಆಡಿದ್ದಾರೆ.

    ಮುಂದಿನ ನಾಲ್ಕು ವರ್ಷಗಳ ಒಳಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿರುವ ರಕ್ಷಿತ್, ರಿಚರ್ಡ್ ಆಂಟನಿ (Richard Antony) ಮತ್ತು ಪುಣ್ಯಕೋಟಿ (Punyakoti) ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಸಿನಿಮಾಗಳ ಕುರಿತಂತೆ ನಾಲ್ಕು ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ

    ಯಶಸ್ಸು ಎನ್ನುವುದು ಕೆಲವರಿಗೆ ರಾತ್ರೋರಾತ್ರಿ ಸಿಕ್ಕಿದೆ. ಇನ್ನೂ ಕೆಲವರು ತಪಸ್ಸು ಮಾಡಬೇಕು ಎನ್ನುತ್ತಾ ತಾವು ನಡೆದು ಬಂದು ಹಾದಿಯನ್ನು ರಕ್ಷಿತ್ ನೆನಪಿಸಿಕೊಂಡಿದ್ದಾರೆ. ನಿರ್ದೇಶನ ಎನ್ನುವುದು ಎಂತಹದ್ದು ಎಂದೂ ತಿಳಿಸಿರುವ ಅವರು, ಅದನ್ನು ತಾವು ಎಂಜಾಯ್ ಮಾಡಬೇಕು ಎನ್ನುವ ಮಾತುಗಳನ್ನೂ ಆಡಿದ್ದಾರೆ.

     

    ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಪ್ರೇರಣೆ ಏನು? ತಮಗೆ ಕಥೆ ಹುಟ್ಟಿದ್ದು ಎಲ್ಲಿ? ತಾವು ಬೆಳೆದು ಬಂದ ಪರಿಸರ ಎಂತಹದ್ದು ಎಂದೂ ಹೇಳಿಕೊಂಡಿರುವ ರಕ್ಷಿತ್, ಪರಶುರಾಮ ಮತ್ತು ಆತನ ಕೊಡಲಿಯೇ ತಮ್ಮ ನಿರ್ದೇಶನದ ಎರಡು ಸಿನಿಮಾಗಳಿಗೆ ಸ್ಫೂರ್ತಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

    ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

    ಕ್ಷಿತ್ ಶೆಟ್ಟಿ (Rakshit Shetty) ಅವರ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಅವರೇ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ದಿಲ್ಲದೇ ರಕ್ಷಿತ್ ತಮಿಳಿಗೆ ಹಾರಲಿದ್ದಾರೆ ಎನ್ನುವ ಸುದ್ದಿಗೆ ಗುದ್ದು ಕೊಟ್ಟಿರುವ ಅವರು, ಕನ್ನಡದಲ್ಲೇ ಕೈತುಂಬಾ ಕೆಲಸ ಇರುವಾಗ ಬೇರೆ ಭಾಷೆಗೆ ನಾನ್ಯಾಕೆ ಹೋಗಲಿ ಎನ್ನುವ ಅರ್ಥದಲ್ಲಿ ಅವರು ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ಕಿರಿಕ್ ಪಾರ್ಟಿ 2 (Kirik Part 2) ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮುನ್ನ ಅವರು ರಿಚರ್ಡ್ ಆಂಟನಿ (Richard Antony) ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಂತೆ.

    ದಳಪತಿ ವಿಜಯ್ ಜೊತೆ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಅವರು ಸಮಗ್ರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ. ‘ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ’ ಎಂದು ಅಭಿಮಾನಿಗಳು ಹೇಳುವಂತೆ  ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ‌ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್

    ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA), ಆನಂತರ ಪುಣ್ಯಕೋಟಿ ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್‍ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.

    ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಏನೇ ಹರಿದಾಡಿದರೂ ಅದೆಲ್ಲವೂ ಎಂದಿಗೂ ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ದಳಪತಿ ವಿಜಯ್ ಜೊತೆಗಿನ ಸಿನಿಮಾದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳು ಸಿನಿಮಾ ಮಾಡುತ್ತಿಲ್ಲ: ಗಾಬರಿ ಹುಟ್ಟುವಂತೆ ಹೇಳಿದ ರಕ್ಷಿತ್ ಶೆಟ್ಟಿ

    ತಮಿಳು ಸಿನಿಮಾ ಮಾಡುತ್ತಿಲ್ಲ: ಗಾಬರಿ ಹುಟ್ಟುವಂತೆ ಹೇಳಿದ ರಕ್ಷಿತ್ ಶೆಟ್ಟಿ

    ಮಿಳಿನ ಹೆಸರಾಂತ ನಟ ದಳಪತಿ ವಿಜಯ್ (Dalpati Vijay) ಜೊತೆ ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಮಾಡಲಿದ್ದಾರೆ ಎನ್ನುವ ವಿಚಾರ ಹಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇತ್ತು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾತ್ರವಲ್ಲ, ಬಾಲಿವುಡ್ ನಿಂದ ಸಂಜಯ್ ದತ್, ತಮಿಳಿನ ಮತ್ತೋರ್ವ ಹೆಸರಾಂತ ನಟ ಕಮಲ್ ಹಾಸನ್ ಕೂಡ ಇರಲಿದ್ದಾರೆ ಎನ್ನುವುದು ಭಾರೀ ಸುದ್ದಿಗೆ ಕಾರಣವೂ ಆಗಿತ್ತು. ತಮಿಳು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಅಷ್ಟೊಂದು ಸುದ್ದಿಯಾದರೂ, ರಕ್ಷಿತ್ ಈವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಇದಕ್ಕೊಂದು ಉತ್ತರ ನೀಡಿದ್ದಾರೆ.

    ‘ದಳಪತಿ ವಿಜಯ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲ’ ಎನ್ನುವ ವಿಚಾರವನ್ನು ಸಿಂಪಲ್ ಆಗಿ ಹೇಳದೇ ಭಯ ಹುಟ್ಟುವ ರೀತಿಯಲ್ಲಿ ಅವರು ಬರೆದುಕೊಂಡಿದ್ದಾರೆ. ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ. ‘ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ’ ಎಂದು ಅಭಿಮಾನಿಗಳು ಹೇಳುವಂತೆ  ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA) (Richard Antony), ಆನಂತರ ಪುಣ್ಯಕೋಟಿ (Punyakoti) ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್‍ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.

    ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) (Kirik Part 2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಏನೇ ಹರಿದಾಡಿದರೂ ಅದೆಲ್ಲವೂ ಎಂದಿಗೂ ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ದಳಪತಿ ವಿಜಯ್ ಜೊತೆಗಿನ ಸಿನಿಮಾದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುದೀಪ್ ಪ್ರೇರಣೆಯಿಂದ ಗೋವು ದತ್ತು ಪಡೆದ ಯುವ ಉದ್ಯಮಿ ವೀರಕಪುತ್ರ ಶ್ರೀನಿವಾಸ್

    ಸುದೀಪ್ ಪ್ರೇರಣೆಯಿಂದ ಗೋವು ದತ್ತು ಪಡೆದ ಯುವ ಉದ್ಯಮಿ ವೀರಕಪುತ್ರ ಶ್ರೀನಿವಾಸ್

    ಕಿಚ್ಚ ಸುದೀಪ್ ನಿನ್ನೆಯಷ್ಟೇ ಗೋಪೂಜೆ ನೆರವೇರಿಸಿ 31 ಗೋವುಗಳನ್ನು ದತ್ತು ಪಡೆದಿದ್ದರು. ಸುದೀಪ್ ಅವರ ಈ ಕೆಲಸದ ಪ್ರೇರಣೆಯಿಂದಾಗಿ ಯುವ ಉದ್ಯಮಿ, ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರೂ ಆಗಿರುವ ವೀರಕಪುತ್ರ ಶ್ರೀನಿವಾಸ್ ಕೂಡ ಗೋವುಗಳನ್ನು ದತ್ತು ಪಡೆದಿದ್ದಾರೆ. ಅಲ್ಲದೇ, ಇತರರು ಈ ಕೆಲಸಕ್ಕೆ ಮುಂದಾಗಿ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದ್ದಾರೆ. ನಿನ್ನೆ ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ನನ್ನನ್ನು ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನನ್ನು ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚವ್ಹಾಣ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಸುದೀಪ್ ಮನವಿ ಮಾಡಿದ್ದರು. ಈ ಮನವಿಯ ಬೆನ್ನಲ್ಲೇ ವೀರಕಪುತ್ರ ಅವರು ಐದು ಹಸುಗಳನ್ನು ದತ್ತು ಪಡೆದು ಮಾದರಿಯಾಗಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವು ದತ್ತು ಪಡೆದು, ತಮ್ಮ ಕನಸಿನ ಕೂಸಾದ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿದ್ದಾರೆ. ಸಚಿವ ಪ್ರಭು ಚವ್ಹಾನ್ ಕೂಡ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದಿದ್ದಾರೆ.

    ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ರೂ.11,000/- (ರೂಪಾಯಿ ಹನ್ನೊಂದು ಸಾವಿರ ಮಾತ್ರ)ಗಳು, ಜಾನುವಾರುಗಳಿಗಾಗಿ ಆಹಾರ ಪೂರೈಕೆಗೆ ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ) ರಾಸುಗಳಿಗೆ ಒಂದು ದಿನಕ್ಕೆ ರೂ.70ಗಳು, ಗೋಶಾಲೆಗಳಿಗೆ ದೇಣಿಗೆ ಮತ್ತು ಗೋಶಾಲೆ ನಿರ್ವಹಣೆ ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂ.10/- ಯಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು.

    Live Tv
    [brid partner=56869869 player=32851 video=960834 autoplay=true]

  • ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ರಾಯಭಾರಿ: 31 ಗೋವು ದತ್ತು ಪಡೆದ ಸುದೀಪ್

    ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ರಾಯಭಾರಿ: 31 ಗೋವು ದತ್ತು ಪಡೆದ ಸುದೀಪ್

    ಗಾಗಲೇ ಸಾಕಷ್ಟು ಸಮಾಜಸೇವೆ ಮಾಡಿರುವ ಕಿಚ್ಚ ಸುದೀಪ್ ಅವರನ್ನು ಕರ್ನಾಟಕ ಸರಕಾರವು ‘ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ’ಯನ್ನಾಗಿ ನೇಮಕ ಮಾಡಿದೆ. ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರವನ್ನು ಇಲಾಖೆ ಸಚಿವ ಪ್ರಭು ಚೌಹಾಣ್, ಇಂದು ಬೆಂಗಳೂರಿನ ಸುದೀಪ್ ಅವರ ನಿವಾಸದಲ್ಲಿ ರಾಯಭಾರಿ‌ ನೇಮಕಾತಿ ಪತ್ರ ನೀಡಿ ಸನ್ಮಾನಿಸಿದರು.

    ನೇಮಕಾತಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸುದೀಪ್, ಇದೇ ವೇಳೆ 31 ಗೋವುಗಳನ್ನು ದತ್ತು ಪಡೆವುದಾಗಿ ಅವರು ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಿಂದ ಗೋವುಗಳನ್ನು ದತ್ತು ಪಡೆಯಲು‌ ನಿರ್ಧಾರ ಮಾಡಿರುವುದಾಗಿ ಸುದೀಪ್ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ಅವರು ದತ್ತು ಪಡೆಯಲಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    ಸುದೀಪ್ ಅವರು ಸರಕಾರದ ಕಾರ್ಯಕ್ರಮಗಳಿಗೆ ರಾಯಭಾರಿ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅವರು ಹಲವಾರು ಕಾರ್ಯಕ್ರಮಗಳ ಜೊತೆ ಕೈ ಜೋಡಿಸಿದ್ದಾರೆ. ಅಲ್ಲದೇ, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿಯೂ ಅವರು ಸಹಕಾರಿ ಆಗಿದ್ದಾರೆ. ಈ ಸಲ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗುವ ಮೂಲಕ ಪುಣ್ಯಕೋಟಿ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರದ ‘ಪುಣ್ಯಕೋಟಿ’ ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್

    ಸರ್ಕಾರದ ‘ಪುಣ್ಯಕೋಟಿ’ ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್

    ರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ  ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ  ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ  ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ. ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್‌ ಅವರಿಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್‌ ಪಶು ಸಂಗೋಪನೆ ಇಲಾಖೆಯ ರಾಯಭಾರಿ ಕೆಲಸ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಇಂದು ಅವರ ಜನ್ಮದಿನದ ಅಂಗವಾಗಿ  ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಸುದೀಪ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿರುವುದಾಗಿ ಪ್ರಭು ಚವ್ಹಾಣ್ ವಿವರಿಸಿ, ಜನ್ಮದಿನಕ್ಕೆ ಶುಭ ಕೋರಿದ್ದಾರೆ.

    ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ, 100 ಸರ್ಕಾರಿ ಗೋಶಾಲೆಗಳು, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮನಿರ್ಭರ ಗೋಶಾಲೆ, ಸಂಚಾರಿ ಪಶು ಚಿಕಿತ್ಸಾ ವಾಹನಗಳು, ಪಶು ಜಿಲ್ಲಾಸ್ಪತ್ರೆಗಳ ನಿರ್ಮಾಣ, ಸ್ಪೇಷಲ್, ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು, 100 ಪಶು ಚಿಕಿತ್ಸಾಲಯಗಳು, 400 ಪಶು ವೈದ್ಯರ ನೇಮಕಾತಿ, 250 ಕಿರಿಯ ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ಕಿಚ್ಚ ಸುದೀಪ್ ರಾಯಭಾರಿಯಾಗಲು ಒಪ್ಪಿರುವುದು ಗೋಸೇವೆಯಲ್ಲಿ ತೋಡಗಿರುವ ನಮಗೆ ಆನೆಬಲ ಬಂದಂತಾಗಿದೆ ಎಂದು ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]