Tag: punjab

  • ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪಂಜಾಬ್‍ನ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಅವರನ್ನು ಬೆಂಬಲಿಸಿ ಭಾರತೀಯ ತಂಡದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಹರ್ಜಿತ್ ಸಿಂಗ್ ಅವರ ಶೌರ್ಯ ಮತ್ತು ಉತ್ಸಾಹಕ್ಕೆ ಧನ್ಯವಾದ ತಿಳಿಸಲು ಪಂಜಾಬ್ ಪೊಲೀಸರು ಸೋಮವಾರ ‘ಮೇನ್ ಭೀ ಹರ್ಜಿತ್ ಸಿಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಹರ್ಜಿತ್ ಸಿಂಗ್ ಹೆಸರಿರುವ ಬ್ಯಾಡ್ಜ್ ಅನ್ನು ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡಿದ್ದರು.

    ಇದೇ ಅಭಿಯಾನದಲ್ಲಿ ಅಡಿ 2011ರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ತಂಡದ ಆಲ್‍ರೌಂಡರ್ ಯುವಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಪಂಜಾಬ್ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ತಮ್ಮ ಜೀವನವನ್ನು ಲೆಕ್ಕಿಸದೇ ನಮ್ಮನ್ನು ರಕ್ಷಿಸುತ್ತಿದ್ದಾರೆ. ಪಂಜಾಬ್‍ನ ಪ್ರತಿಯೊಬ್ಬರು ಹರ್ಜಿತ್ ಸಿಂಗ್ ಅವರೊಂದಿಗಿದೆ. ನಾನು ಕೂಡ ಅವರೊಂದಿಗೆ ಇದ್ದೇನೆ” ಎಂದು ಯುವರಾಜ್ ಹೇಲಿದ್ದಾರೆ.

    “ಹರ್ಜಿತ್ ಸಿಂಗ್ ಅವರ ಧೈರ್ಯ ಮತ್ತು ಪರಿಶ್ರಮ ದೇಶಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದೆ. ಎಲ್ಲಾ ಪೊಲೀಸ್ ಪಡೆಗಳಿಗೆ ತುಂಬು ಹೃದಯದ ಧನ್ಯವಾದಗಳು. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಯುವಿ ತಿಳಿಸಿದ್ದಾರೆ.

    https://twitter.com/YUVSTRONG12/status/1255164717854715904

    ಏನಿದು ಪ್ರಕರಣ?
    ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಏಪ್ರಿಲ್ 12ರಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.

    ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.

    ಇತ್ತೀಚಿಗೆ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿದ್ದ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ಕೊಂಡಿದ್ದರು.

  • ಎಸ್‍ಐ ಹರ್ಜಿತ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ- ವಿಡಿಯೋ ಟ್ವೀಟ್ ಮಾಡಿದ ಪಂಜಾಬ್ ಸಿಎಂ

    ಎಸ್‍ಐ ಹರ್ಜಿತ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ- ವಿಡಿಯೋ ಟ್ವೀಟ್ ಮಾಡಿದ ಪಂಜಾಬ್ ಸಿಎಂ

    ಚತ್ತೀಸ್‍ಗಢ: ಕೊರೊನಾ ವಿರುದ್ಧ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಗುಣಮುಖರಾಗುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಹರ್ಜಿತ್ ಸಿಂಗ್ ಅವರ ಕೈಗೆ ಮಾಡಲಾಗಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಕೆಯಾದ ಬಳಿಕ ಅವರ ಕೈ ಮೊದಲಿನಂತೆ ಕಾರ್ಯನಿರ್ವಹಿಸುವ ವಿಶ್ವಾಸವನ್ನು ಅಮರಿಂದರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಅಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.

    ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.

    ಸದ್ಯ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಹರ್ಜಿತ್ ಸಿಂಗ್ ಅವರು ತುಂಡಾಗಿದ್ದ ಕೈ ಬೆರಳುಗಳನ್ನು ಯಶಸ್ವಿಯಾಗಿ ಅಲುಗಾಡಿಸಿರುವುದು ಕಾಣಬಹುದಾಗಿದೆ.

  • ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    – ಗುರುದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ 9 ಮಂದಿ ಅರೆಸ್ಟ್
    – ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ವಶ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಓರ್ವ ಅಧಿಕಾರಿಯ ಕೈ ಕತ್ತರಿಸಿದ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದಾನೆ. ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಜೇಬಿನಿಂದ ಕರವಸ್ತ್ರವನ್ನು ತೆಗೆದುಕೊಂಡು ಅವರ ಕೈಗೆ ಕಟ್ಟಿದ್ದರು. ಗಾಯವಾಗಿದ್ದರೂ ಹರ್ಜಿತ್ ಸಿಂಗ್ ದೀರ್ಘಕಾಲ ಸ್ಥಳದಲ್ಲಿಯೇ ಇದ್ದರು. ಸ್ವಲ್ಪ ಸಮಯದ ನಂತರ ಓರ್ವ ಕತ್ತರಿಸಿ ಬಿದ್ದಿದ್ದ ಕೈಯನ್ನು ಅವರಿಗೆ ಕೊಟ್ಟನು. ಆಗ ಹರ್ಜಿತ್ ಸಿಂಗ್ ಅವರು ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ದ್ವಿಚಕ್ರದಲ್ಲಿ ಆಸ್ಪತ್ರೆಗೆ ಹೋದರು ಎಂದು ವರದಿಯಾಗಿದೆ.

    ಎಎಸ್‍ಐ ಹರ್ಜಿತ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಪಿ ಮಂದೀಪ್ ಸಿಂಗ್ ಸಿಧು, ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಇಂದು ಬೆಳಗ್ಗೆ ಆರು ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು ಎಂದು ತಿಳಿಸಿದ್ದಾರೆ.

    ನಿಹಾಂಗ್ ಬಾಲ್‍ಬರಾ ಪ್ರದೇಶದ ಗುರುದ್ವಾರದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬೆನ್ನಟ್ಟುವ ಮೂಲಕ ಗುರುದ್ವಾರವನ್ನು ತಲುಪಿದರು. ಪಟಿಯಾಲ ವಲಯದ ಐ.ಜಿ.ಜತೀಂದರ್ ಸಿಂಗ್ ಅವರು ನಿಹಾಂಗ್‍ಗಳನ್ನು ಶರಣಾಗುವಂತೆ ಎಚ್ಚರಿಸಿದರು. ಆದರೆ ಅವರು ಗುರುದ್ವಾರದ ಒಳಗಿನಿಂದ ಪೊಲೀಸರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು ಒಳಗಿನಿಂದಲೂ ಗುಂಡು ಹಾರಿಸಿದರು. ನಂತರ ಕಮಾಂಡೋ ತಂಡವನ್ನು ಗುರುದ್ವಾರದೊಳಗೆ ಕಳುಹಿಸಲಾಯಿತು.

    ಗುರುದ್ವಾರದ ಒಳಗೆ ಸ್ಥಳೀಯ ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ಮತ್ತು ದೊಡ್ಡ ಪ್ರಮಾಣದ ರಾಸಾಯನಿಕ ತರಹದ ದ್ರವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 9 ಜನರನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಮಂದೀಪ್ ಸಿಂಗ್ ಸಿಧು ಹೇಳಿದ್ದಾರೆ. ಶಸ್ತ್ರಾಸ್ತ್ರಗಳಲ್ಲದೆ, ಅವರಿಂದಲೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 35 ಲಕ್ಷ ರೂ.ಗಳು ಸಿಕ್ಕಿದ್ದು, ಇನ್ನೂ ಕಾರ್ಯಾಚರಣೆ ನಡೆದಿದೆ.

    ಪಟಿಯಾಲದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಗಾಯಗೊಂಡ ಎಎಸ್‍ಐಗೆ ಚಿಕಿತ್ಸೆ ನೀಡಲು ಪಿಜಿಐಎಂಆರ್ ನ ಉನ್ನತ ಪ್ಲಾಸ್ಟಿಕ್ ಸರ್ಜನ್ ಅವರನ್ನು ನೇಮಿಸಲಾಗಿದೆ.

  • ಕೊರೊನಾದಿಂದ ಮೃತಪಟ್ಟ ತಾಯಿ – ಅಂತ್ಯಕ್ರಿಯೆ ಮಾಡಲು ಒಪ್ಪದ ಮಗ

    ಕೊರೊನಾದಿಂದ ಮೃತಪಟ್ಟ ತಾಯಿ – ಅಂತ್ಯಕ್ರಿಯೆ ಮಾಡಲು ಒಪ್ಪದ ಮಗ

    ಚಂಡೀಗಢ: ತನಗೆ ಕೊರೊನಾ ಸೋಂಕು ತಗಲುತ್ತದೆ ಎಂಬ ಭಯದಿಂದ ಕೊರೊನಾದಿಂದ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆ ಮಾಡಲು ಮಗ ಒಪ್ಪದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಪಂಜಾಬ್ ರಾಜ್ಯದ ಶಿಮ್ಲಾಪುರಿ ಗ್ರಾಮದ 69 ವರ್ಷದ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಮಾರ್ಚ್ 31ರಂದು ದಾಖಲು ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ತೀವ್ರವಾದ ಕಾರಣ ಅವರು ಕಳೆದ ಭಾನುವಾರ ಮೃತಪಟ್ಟಿದ್ದಾರೆ.

    ಭಾನುವಾರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೃತಪಟ್ಟ ನಂತರ ಆಸ್ಪತ್ರೆಯವರು ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಲು ನೋಡಿದ್ದಾರೆ. ಆದರೆ ಮನೆಯವರು ಮೃತದೇಹವನ್ನು ನೋಡಲು ಹತ್ತಿರ ಸಹ ಬಂದಿಲ್ಲ. ಇನ್ನೊಂದು ವಿಪರ್ಯಾಸವೆಂದರೆ ಅಂತ್ಯಕ್ರಿಯೆ ನಡೆಸಲು ಬೇಕಾದ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ ಎಂದರೂ ಆಕೆಯ ಮಗ ಅಂತಿಮ ವಿಧಿವಿಧಾನ ನಡೆಸಲು ಮುಂದೆ ಬರಲಿಲ್ಲ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಇಕ್ಬಾಲ್ ಸಿಂಗ್ ಸಂಧು ಅವರು, ಅಂತ್ಯಕ್ರಿಯೆ ಮಾಡಲು ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ. ಜೊತೆಗೆ ಸೋಂಕು ನಿಮಗೆ ತಗುಲದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರೂ ಆಕೆಯ ಮಗ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಇದನ್ನು ಕಂಡು ನಮಗೆ ಶಾಕ್ ಆಯ್ತು. ಕೊನೆಗೆ ಜಿಲ್ಲಾಡಳಿತದ ಕಡೆಯಿಂದ ಅಂತ್ಯಕ್ರಿಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

    ಜಿಲ್ಲಾಡಳಿತದಿಂದ ಸೋಮವಾರ ರಾತ್ರಿ ಕೊರೊನಾ ಸೋಂಕಿತಳ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ಈ ಸಮಯದಲ್ಲೂ ಆಕೆಯ ಕುಟುಂಬದವರು ಮತ್ತು ಮಗ ಹತ್ತಿರ ಕೂಡ ಬರಲಿಲ್ಲ. ಕೊನೆಯದಾಗಿ ಆಕೆಯ ಮುಖವನ್ನು ಅವರು ನೋಡಲಿಲ್ಲ. 100 ಮೀಟರ್ ದೂರದಲ್ಲಿ ನಿಂತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಎಂದು ಇಕ್ಬಾಲ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ. ಇದೇ ರೀತಿಯ ಘಟನೆ ಪಂಜಾಬ್‍ನಲ್ಲಿ ಇನ್ನೊಂದು ನಡೆದಿದ್ದು, ಕೊರೊನಾದಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಆ ಊರಿನವರು ಸ್ಮಶಾನಕ್ಕೆ ಸ್ಥಳವನ್ನು ನೀಡಿರಲಿಲ್ಲ.

  • ಕೊರೊನಾ ಸೋಂಕು- ಪದ್ಮಶ್ರೀ  ಪುರಸ್ಕೃತ ನಿರ್ಮಲ್ ಸಿಂಗ್ ಸಾವು

    ಕೊರೊನಾ ಸೋಂಕು- ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಸಾವು

    ಚಂಡೀಗಢ: ಕೊರೊನಾ ಸೋಂಕಿಗೆ ಒಳಗಾಗಿದ್ದ ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ.

    ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ 62 ವರ್ಷದ ನಿರ್ಮಲ್ ಸಿಂಗ್ ಪಂಜಾಬ್‍ನ ಅಮೃತಸರ್ ನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

    ಸಿಂಗ್ ಅವರು ಇತ್ತೀಚೆಗೆ ವಿದೇಶದಿಂದ ಮರಳಿದ್ದರು, ಮಾರ್ಚ್ 30ರಂದು ಉಸಿರಾಟದ ತೊಂದರೆ, ತಲೆ ತಿರುಗುವುದರಿಂದಾಗಿ ಗುರು ನಾನಕ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ನಿರ್ಮಲ್ ಸಿಂಗ್ ವಾಸಿಸುತ್ತಿದ್ದ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.

    ವಿದೇಶದಿಂದ ಮರಳಿದ ನಂತರ ಸಿಂಗ್ ಅವರು ದೆಹಲಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಲವು ಜನರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ನಿರ್ಮಲ್ ಸಿಂಗ್ ಅವರಿಗೆ 2009ರಲ್ಲಿ ಪದ್ಮಿಶ್ರೀ ಗೌರವ ನೀಡಲಾಗಿದೆ.

  • ಪೌರ ಕಾರ್ಮಿಕರಿಗೆ ಹೂ ಮಳೆಯ ಧನ್ಯವಾದ

    ಪೌರ ಕಾರ್ಮಿಕರಿಗೆ ಹೂ ಮಳೆಯ ಧನ್ಯವಾದ

    -ನೋಟುಗಳ ಹಾರ ಹಾಕಿದ ಜನತೆ

    ಚಂಡೀಗಢ: ರಸ್ತೆಯಲ್ಲಿ ಸಾಗುತ್ತಿದ್ದ ಪೌರ ಕಾರ್ಮಿಕರಿಬ್ಬರಿಗೆ ಜನರು ಹೂಮಳೆಗೈಯುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

    ಪಂಜಾಬ್ ರಾಜ್ಯದ ಪಟಿಯಾಲಾದ ನಭಾ ಪ್ರದೇಶದ ಜನತೆ ಪೌರ ಕಾರ್ಮಿಕರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬಡಾವಣೆಯೊಂದರ ರಸ್ತೆಯಲ್ಲಿ ತಮ್ಮ ವಾಹನದಲ್ಲಿ ಪೌರಕಾರ್ಮಿಕರು ಹೋಗುತ್ತಿರುವಾಗ ಕಟ್ಟಡಗಳ ಮೇಲಿದ್ದ ಜನ ಹೂ ಮಳೆ ಸುರಿಸಿದ್ದಾರೆ. ಕೆಳಗಿದ್ದ ಇಬ್ಬರು ಬಂದು ಹಣದಿಂದ ಮಾಡಲ್ಪಟ್ಟ ಹಾರವನ್ನು ಹಾಕಿ ಅಭಿನಂದನೆ ಸಲ್ಲಿಸಿದ್ರೆ, ಸುತ್ತಲಿನ ಜನತೆ ಚಪ್ಪಾಳೆ ತಟ್ಟುವ ಮೂಲಕ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ನೀವು ಸಹ ನಿಮ್ಮ ಏರಿಯಾಗಳಲ್ಲಿ ಕೊರೊನಾ ಭೀತಿ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಧನ್ಯವಾದ ಸಲ್ಲಿಸಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

  • ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ನವದೆಹಲಿ: ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಪಂಜಾಬ್ ನಲ್ಲಿ ಮೊದಲ ಬಲಿಯಾಗಿದ್ದು ದೇಶದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿನಿಂದ ವ್ಯಕ್ತಿ ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮೃತ ವ್ಯಕ್ತಿ 70 ವರ್ಷದವರಾಗಿದ್ದು ಜಪಾನ್ ನಿಂದ ಭಾರತಕ್ಕೆ ವಾಪಸ್ ಆಗಿದ್ದರು. ತಪಾಸಣೆ ವೇಳೆ ಇವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು.

    ಮೃತ ವೃದ್ಧನಿಗೆ ಕೊರೊನಾ ಸೊಂಕಿನ ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು. ಇಂದು ಅವರು ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

    ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 142 ಮಂದಿ ಭಾರತೀಯರು 25 ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ 15 ಮಂದಿ ಸಂಪೂರ್ಣ ಗುಣ ಮುಖರಾಗಿದ್ದಾರೆ.

    ಕರ್ನಾಟಕದಲ್ಲಿ 14 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

  • ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    – ಡ್ರಗ್ಸ್ ನಶೆಗೆ ದಾಸನಾಗಿದ್ದ ಮಗನಿಂದ ಕೃತ್ಯ
    – ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ತಂದೆ ಜೀವ ತೆಗೆದ

    ಚಂಡೀಗಢ: ಡ್ರಗ್ಸ್ ಖರೀದಿಸಲು ಹಣ ನೀಡದ್ದಕ್ಕೆ ತಂದೆಯ ತಲೆಯನ್ನೇ ಮಗ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ ಮಾಡಿದ ಭಯಾಕನ ಘಟನೆ ಪಂಜಾಬ್ ರಾಜ್ಯದ ಮಂಡಿ ಖರಾರ್ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಮಗನನ್ನು ರಿಂಕು ಎಂದು ಗುರುತಿಸಲಾಗಿದ್ದು, ಹಂಸ್ ರಾಜ್(50) ಮಗನಿಂದಲೇ ಭೀಕರವಾಗಿ ಕೊಲೆಯಾದ ದುರ್ದೈವಿ. ಹಂಸ್ ರಾಜ್‍ಗೆ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಾದ ರಿಂಕು, ಸೋನು ಜೊತೆ ಹಂಸ್ ರಾಜ್ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ರಿಂಕು ತಾಯಿ ಮೃತಪಟ್ಟಿದ್ದು, ತಂದೆಯೇ ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

    ಅತ್ತ ತಂದೆ ಕಷ್ಟಪಟ್ಟು ದುಡಿದು ಕುಟುಂಬವನ್ನು ಸಾಕುತ್ತಿದ್ದರೆ, ಇತ್ತ ಮಗ ರಿಂಕು ಡ್ರಗ್ಸ್ ಹಾಗೂ ಕೆಟ್ಟ ಚಟಗಳಿಗೆ ದಾಸನಾಗಿ ಹಣ ಕೊಡು ಎಂದು ಸದಾ ತಂದೆಯನ್ನು ಪೀಡಿಸುತ್ತಿದ್ದನು. ಗುರುವಾರ ಕೂಡ ಡ್ರಗ್ಸ್ ನಶೆಯಲ್ಲಿದ್ದ ರಿಂಕು ಮತ್ತಷ್ಟು ಡ್ರಗ್ಸ್ ಖರೀದಿಸಲು ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ತಂದೆ, ಮಗನ ಮಧ್ಯೆ ಜಗಳ ನಡೆದಿದೆ. ಇದರಿಂದ ಸಿಟ್ಟಿಗೆದ್ದ ರಿಂಕು ತಂದೆ ಮೇಲೆ ಹಲ್ಲೆ ಮಾಡಿದನು. ಇಟ್ಟಿಗೆ ತಂದು ತಂದೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

    ಇಷ್ಟಾದ ಮೇಲೂ ಸುಮ್ಮನಿರದ ರಿಂಕು ಮತ್ತೆ ಮತ್ತೆ ತಂದೆ ತಲೆಗೆ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ-ಪುಡಿ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಕಣ್ಣಾರೆ ಕಂಡ ಸೋನು ಪೊಲೀಸರಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹೋದರ ರಿಂಕು ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ರಿಂಕು ಡ್ರಗ್ಸ್‌ಗೆ ದಾಸನಾಗಿದ್ದನು. ಡ್ರಗ್ಸ್ ನಶೆಯಲ್ಲಿಯೇ ತಂದೆಯನ್ನು ಕೊಲೆ ಮಾಡಿದ್ದಾನೆ. ಹಂಸ್ ರಾಜ್ ಅವರ ಗುರುತು ಸಿಗದಿರುವ ಹಾಗೆ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಜಜ್ಜಿ, ತಲೆಬುರುಡೆಯನ್ನು ಪುಡಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

  • ಪಂಜಾಬ್ ನೋಂದಣಿ ಕಾರಿಗೆ ರಾಜ್ಯದ ನಂಬರ್ ಪ್ಲೇಟ್ ಹಾಕಿ ಆರ್‌ಟಿಓ  ಬಲೆಗೆ ಬಿದ್ದ

    ಪಂಜಾಬ್ ನೋಂದಣಿ ಕಾರಿಗೆ ರಾಜ್ಯದ ನಂಬರ್ ಪ್ಲೇಟ್ ಹಾಕಿ ಆರ್‌ಟಿಓ ಬಲೆಗೆ ಬಿದ್ದ

    ಬೆಂಗಳೂರು: ರೆನಾಲ್ಟ್ ಡಸ್ಟರ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ತೆರಿಗೆ ವಂಚನೆ ಮಾಡುತ್ತಿದ್ದ ಆಸಾಮಿ ಯಶವಂತಪುರ ಆರ್.ಟಿ.ಓ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    ಅನ್ನಪೂರ್ಣೇಶ್ವರಿ ನಗರದ ಡಿ. ಸತೀಶ್ ಕುಮಾರ್ ಎಂಬುವವರಿಗೆ ಸೇರಿದ ಕೆಎ-01 ಎಫ್‍ಎನ್-6223 ಸಂಖ್ಯೆಯ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ವಾಹನವನ್ನು ಪಂಜಾಬ್‍ನಿಂದ ಬೆಂಗಳೂರಿಗೆ ತರಲಾಗಿದೆ. ತೆರಿಗೆ ಹಣ ಜಾಸ್ತಿ ಇರುವುದರಿಂದ ಸ್ನೇಹಿತ ನೀಡಿದ ಐಡಿಯಾ ಬಳಸಿ, ಪಿಎ ಇದ್ದ ನಂಬರ್ ಪ್ಲೇಟ್ ಅನ್ನು ಕೆಎ ಎಂದು ಚೆಂಚ್ ಮಾಡಿರುವುದಾಗಿ ಆರ್.ಟಿ.ಓ ಅಧಿಕಾರಿಗಳ ಮುಂದೆ ಕಾರಿನ ಮಾಲೀಕ ಸತ್ಯವನ್ನ ಬಿಚ್ಚಿಟ್ಟಿದ್ದಾನೆ.

    ನಂಬರ್ ಪ್ಲೇಟ್ ನಲ್ಲಿ ಪಿಬಿ-01, ಎಫ್‍ಎನ್-6223 ಇದ್ದ ಜಾಗದಲ್ಲಿ ಪಿಬಿ ತೆಗೆದು ಕೆಎ ಎಂದು ಮಾಡಿ ಕೆಎ-01, ಎಫ್‍ಎನ್-6223 ಎಂದು ಬದಲಿಸಿ ನಕಲಿ ನಂಬರ್ ಪ್ಲೇಟ್ ಮಾಡಿಸಿದ್ದಾನೆ ಕಾರಿನ ಮಾಲೀಕ ಸತೀಶ್. ಅನ್ನಪೂರ್ಣೇಶ್ವರಿ ನಗರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಯಶವಂತಪುರ ಆರ್.ಟಿ.ಓ ಹಿರಿಯ ಇನ್ಸ್ ಪೆಕ್ಟರ್ ರಾಜಣ್ಣ ಅವರ ಕಣ್ಣಿಗೆ ಈ ನಕಲಿ ನಂಬರ್ ಪ್ಲೇಟ್ ಕಾರು ಬಿದ್ದಿದೆ.

    ಬೆಂಗಳೂರು ಆರ್.ಟಿ.ಓ ವ್ಯಾಪ್ತಿಯಲ್ಲಿ ಎಫ್‍ಎನ್ ಸಿರೀಸ್ ನಂಬರ್ ಇಲ್ಲ ಎಂದು ಯೋಚಿಸಿದ ರಾಜಣ್ಣ, ಕೂಡಲೇ ಕಾರನ್ನ ತಡೆದು ಪರಿಶೀಲನೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಬೆಳಕಿಗೆ ಬಂದಿದೆ. ಕಾರ್ ಮಾಲೀಕ ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಬರಿ ಮಲೆಗೆ ಹೋಗಿ ಬಂದ ಬಳಿಕ ಕಾರಿನ ದಾಖಲೆಗಳನ್ನು ಆರ್.ಟಿ.ಓ ಅಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದಾನೆ.

  • ಚಡ್ಡಿ ಹಾಕಿ ತರಗತಿಗೆ ಬಂದಿದ್ದಕ್ಕೆ ಶಿಕ್ಷಕರಿಂದ ಅವಮಾನ – ವಿದ್ಯಾರ್ಥಿ ನೇಣಿಗೆ ಶರಣು

    ಚಡ್ಡಿ ಹಾಕಿ ತರಗತಿಗೆ ಬಂದಿದ್ದಕ್ಕೆ ಶಿಕ್ಷಕರಿಂದ ಅವಮಾನ – ವಿದ್ಯಾರ್ಥಿ ನೇಣಿಗೆ ಶರಣು

    ಚಂಡೀಗಢ: ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಶಿಕ್ಷಕ ಕ್ಲಾಸಿನಲ್ಲಿ ಹೊಡೆದು ಅವಮಾನಿಸಿದ್ದಕ್ಕೆ ಬೇಸರಗೊಂಡು 11ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಪಂಜಾಬಿನ ಲುಧಿಯಾನ ಜಿಲ್ಲೆಯ ಗುರ್ಮೆಲ್ ನಗರದ ಮನೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಚಡ್ಡಿ ಹಾಕಿಕೊಂಡು ಬಂದಿದ್ದ ಎಂದು ಶಿಕ್ಷಕರು ವಿದ್ಯಾರ್ಥಿಯನ್ನು ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ 11ನೇ ತರಗತಿ ವಿದ್ಯಾರ್ಥಿ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಗನಿಗೆ ರಾತ್ರಿ ಊಟ ಮಾಡುವಂತೆ ತಾಯಿ ಹೇಳಿದ್ದಾರೆ. ಊಟ ಬೇಡವೆಂದು ವಿದ್ಯಾರ್ಥಿ ತನ್ನ ರೂಂಗೆ ತೆರಳಿದ್ದಾನೆ. ನಂತರ ತಾಯಿ ರೂಂಗೆ ಹೋಗಿ ನೋಡಿದ್ದು, ಬಾಗಿಲು ತೆರೆಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ. ಮಗನ ದೇಹ ಸೀಲಿಂಗ್ ಫ್ಯಾನಿಗೆ ನೇತಾಡುತ್ತಿದ್ದುದನ್ನು ಕಂಡು ಕುಸಿದಿದ್ದಾರೆ. ನಂತರ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಸಾವನ್ನಪ್ಪಿರುವ ಕುರಿತು ದೃಢಪಡಿಸಿದ್ದಾರೆ.

    ವಿದ್ಯಾರ್ಥಿ ಲುಧಿಯಾನ ನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದು, ಶಿಕ್ಷಕ ಮಾಡಿದ ಅವಮಾನದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಪಂಜಾಬ್ ಪೊಲೀಸರು ಈ ಕುರಿತು ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಆತ್ಮಹತ್ಯೆ ಪ್ರೇರಣೆ ನೀಡಿದ ಕುರಿತು ಈ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ ಪ್ರಕರಣದ ಕುರಿತು ಗಮನ ಹರಿಸಿದ್ದು, ದುಃಖದ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದನ್ನು ಅರಿಯುವಂತೆ ಆದೇಶಿಸಿದ್ದಾರೆ.

    ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರನ್ನು ಬಂಧಿಸುತ್ತೇವೆ. ಸಂತ್ರಸ್ತನ ತಂದೆಯ ಹೇಳಿಕೆಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಂತ್ರಸ್ತನ ತಂದೆ ಬ್ರಿಕ್ ರಾಜ್ ತಿವಾರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅವರು, ಚಡ್ಡಿ ಧರಿಸಿ ವಿದ್ಯಾರ್ಥಿ ಶಾಲೆಗೆ ಹಾಜರಾಗಿದ್ದಾನೆ. ಈ ಕುರಿತು ವಿದ್ಯಾರ್ಥಿಯ ವಿರುದ್ಧ ಶಿಕ್ಷಕ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ನಂತರ ಪ್ರಾಂಶುಪಲರ ಆದೇಶದ ಮೇರೆಗೆ ಶಿಕ್ಷಕ ವಿದ್ಯಾರ್ಥಿಯ ಕೈಗಳನ್ನು ಟೈಯಿಂದ ಕಟ್ಟಿ, ಹಲವು ಬಾರಿ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

    ಶಿಕ್ಷಕ ಇಡೀ ತರಗತಿಯ ಮುಂದೆ ಮಗನ ಬಟ್ಟೆಯನ್ನು ಬಿಚ್ಚಿಸಿ ನಿಲ್ಲಿಸುವ ಮೂಲಕ ಅವಮಾನಿಸಿದ್ದಾರೆ ಎಂದು ದೂರಿದ್ದಾರೆ. ವಿದ್ಯಾರ್ಥಿಯ ತಾಯಿ ಪ್ರತಿಕ್ರಿಯಿಸಿ, ಘಟನೆ ನಡೆದ ನಂತರ ವಿದ್ಯಾರ್ಥಿ ಶಾಲೆಗೆ ಹೋಗುತ್ತಿರಲಿಲ್ಲ. ಅಲ್ಲದೆ, ಊಟವನ್ನು ಸಹ ಮಾಡುತ್ತಿರಲಿಲ್ಲ ಎಂದು ದೂರಿದ್ದಾರೆ.