Tag: punjab

  • ಅಪಘಾತದಲ್ಲಿ ಗಾಯಕ ದಿಲ್‍ಜಾನ್ ಸಾವು- ಸಿಎಂ ಸಂತಾಪ

    ಅಪಘಾತದಲ್ಲಿ ಗಾಯಕ ದಿಲ್‍ಜಾನ್ ಸಾವು- ಸಿಎಂ ಸಂತಾಪ

    ಚಂಡೀಗಢ: ಪಂಜಾಬಿ ಗಾಯಕ ದಿಲ್‍ಜಾನ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಿಎಂ ಅಮರೀಂದರ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿ ಬಳಿ ದಿಲ್‍ಜಾನ್ ಪ್ರಯಾಣಿಸುತ್ತಿದ್ದ ಕಾರ್ ಮುಂದಿನ ಟ್ರಕ್ ಗುದ್ದಿದೆ. ಪರಿಣಾಮ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಿಲ್‍ಜಾನ್ ಸಾವನ್ನಪ್ಪಿದ್ದಾರೆ.

    ಕರ್ತಾರಪುರ ಮೂಲದ 31 ವರ್ಷದ ದಿಲ್‍ಜಾನ್ ಜಲಂಧರ್ ನಿಂದ ಅಮೃತಸರ್ ನತ್ತ ಪ್ರಯಾಣ ಬೆಳೆಸುತ್ತಿದ್ದರು. ಬೆಳಗಿನ ಜಾವ ಸುಮಾರು 2.30ಕ್ಕೆ ಅಪಘಾತ ಸಂಭವಿಸಿದೆ. ಈ ವೇಳೆ ಸ್ಥಳೀಯರು ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ದಿಲ್‍ಜಾನ್ ಅವರನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ವೈದ್ಯರು ದಿಲ್‍ಜಾನ್ ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೆದ್ದಾರಿ ಬದಿ ನಿಂತಿದ್ದ ಟ್ರಕ್‍ಗೆ ದಿಲ್‍ಜಾನ್ ಕಾರ್ ಡಿಕ್ಕಿಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಲವರು ಡಿವೈಡರ್ ಡಿಕ್ಕಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆ ನಡೆಸಿ ಆಸ್ಪತ್ರೆಯಲ್ಲಿರಿಸಲಾಗಿದೆ. ಮೃತ ದಿಲ್‍ಜಾನ್ ಪತ್ನಿ ಮತು ಮಕ್ಕಳು ಕೆನಡಾದಲ್ಲಿರುವ ಬಗ್ಗೆ ವರದಿಯಾಗಿದೆ.

  • ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಚಂಡೀಗಢ: ಮುಕ್ತಸರ್ ಜಿಲ್ಲೆಯ ಮಾಲೌಟ್‍ನಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಪಂಜಾಬ್‍ನ ಬಿಜೆಪಿ ಶಾಸಕ ಅರುಣ್ ನಾರಂಗ್ ಬಟ್ಟೆ ಹರಿದು ಹೋಗುವಂತೆ ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ನಾಯಕರೊಂದಿಗೆ ಸುದ್ದಿಗೋಷ್ಠಿಗೆಂದು ಅಬೋಹರ್ ಶಾಸಕ ಅರುಣ್ ನಾರಂಗ್ ಮಾಲೌಟ್‍ಗೆ ಆಗಮಿಸಿದ್ದ ವೇಳೆ, ರೈತರು ಶಾಸಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಬಳಿಕ ಪೊಲೀಸರು ಅರುಣ್ ನಾರಂಗ್‍ರನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್, ರೈತರು ಬಿಜೆಪಿ ಶಾಸಕ ಅರುಣ್ ನಾರಂಗ್‍ರವರಿಗೆ ಸುದ್ದಿಗೋಷ್ಠಿ ನಡೆಸಲು ಬಿಡಲಿಲ್ಲ ಎಂದು ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಬಟ್ಟೆ ಹರಿದು ಹೋಗಿದ್ದ ಶಾಸಕರನ್ನು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದಯ್ಯುತ್ತಿವುದನ್ನು ಕಾಣಬಹುದಾಗಿದೆ. ಸದ್ಯ ಘಟನೆ ಕುರಿತಂತೆ 7 ಮಂದಿ ಹೆಸರಿನಲ್ಲಿ ಹಾಗೂ 200-250 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಸೇವೆಗೆ ಅಡ್ಡಿ, ಕೊಲೆ, ಹಲ್ಲೆ, ಜೀವ ಬೆದರಿಕೆ ಮತ್ತು ಗಲಭೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆ ಕುರಿತಂತೆ ಮಾತನಾಡಿದ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಠಿಗೆಂದು ನಾನು ಮಾಲೌಟ್‍ಗೆ ಹೋಗಿದ್ದೆ. ಈ ವೇಳೆ ಪ್ರತಿಭಟನಕಾರರು ನನಗೆ ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. ನನ್ನನ್ನು ಸುತ್ತುವರೆದರು. ನನ್ನ ಮೇಲೆ ಕೆಲವರು ಹಲ್ಲೆ ಮಾಡಿ ಹಿಂಸಾಕೃತ್ಯವನ್ನು ಎಸಗಿದರು ಎಂದು ಹೆಳಿದರು.

    ಈ ವಿಚಾರವಾಗಿ ಯಾರ ಮೇಲೆ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದರು.

    ಸದ್ಯ ಶಾಸಕರ ಮೇಲಿನ ಹಲ್ಲೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದು, ಶಾಂತಿಯತೆಯನ್ನು ಹಾಳು ಮಾಡಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರು ಹಿಂಸೆ ಮಾರ್ಗದತ್ತ ತೆರಳಬಾರದು ಹಾಗೂ ನೂತನ ಕೃಷಿ ಕಾಯಿದೆ ವಿಚಾರವಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

  • ಶಸ್ತ್ರಾಸ್ತ್ರ ಸ್ವಚ್ಛಗೊಳಿಸುವಾಗ ಗುಂಡು ಸಿಡಿದು ಪೇದೆ ಸಾವು

    ಶಸ್ತ್ರಾಸ್ತ್ರ ಸ್ವಚ್ಛಗೊಳಿಸುವಾಗ ಗುಂಡು ಸಿಡಿದು ಪೇದೆ ಸಾವು

     ಚಂಡೀಗಢ: ಶಸ್ತ್ರಾಸ್ತ್ರ ಸ್ವಚ್ಛಗೊಳಿಸುವ ವೇಳೆ ಗುಂಡು ಸಿಡಿದು ಪೇದೆ ಸಾವನ್ನಪ್ಪಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಜೋಗಿಂದ್ರ ಸಿಂಗ್ ಸಾವನ್ನಪ್ಪಿದ ಪೇದೆ. ಇವರು ಪಂಜಾಬ್ ಬಿಜೆಪಿ ವಕ್ತಾರ ಅನಿಲ್ ಸರೀನ್ ಅವರ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಈ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

    ಪೋಲಿಸ್ ಪೇದೆ ಆಗೋರ್ ನಗರಲ್ಲಿ ಅನಿಲ್ ಅರೀನ್ ಅವರ ನಿವಾಸದಲ್ಲಿ ಭದ್ರತಾ ಕಾರ್ಯದಲ್ಲಿದ್ದರು. ಈ ಸಮಯದಲ್ಲಿ ಎಕೆ-47 ಶಸ್ತ್ರಾಸ್ತ್ರವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಗುಂಡು ಹಾರಿದೆ. ಈ ವೇಳೆ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಆಯುಕ್ತ ಜಿತೇಂದ್ರ ಕುಮಾರ್ ಹೇಳಿದ್ದಾರೆ.

  • 13 ವರ್ಷದ ಬಾಲಕನನ್ನು ಮದುವೆಯಾದ ಟ್ಯೂಷನ್ ಟೀಚರ್!

    13 ವರ್ಷದ ಬಾಲಕನನ್ನು ಮದುವೆಯಾದ ಟ್ಯೂಷನ್ ಟೀಚರ್!

    ಚಂಡೀಗಢ: ವಿಜ್ಞಾನ ಹಾಗೂ ಆಧುನಿಕತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೂ ಜನ ಕೆಲವು ಮೂಢನಂಬಿಕೆಗಳಿಂದ ಹೊರಗೆ ಬಂದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಂಗಲ್ಯ ದೋಷ ಹೊಂದಿದ್ದ ಟ್ಯೂಷನ್ ಟೀಚರ್ ತನ್ನ ಬಳಿ ಪಾಠ ಕಲಿಯಲು ಬರುತ್ತಿದ್ದ, 13 ವರ್ಷದ ಬಾಲಕನನ್ನು ವಿವಾಹವಾಗಿರುವ ಘಟನೆ ಪಂಜಾಬ್ ಜಲಂಧರ್‍ನ ಬಸ್ತಿ ಬಾವಾ ಖೇಲ್ ಪ್ರದೇಶದಲ್ಲಿ ನಡೆದಿದೆ. ಮಾಂಗಲ್ಯ ದೋಷ ಹೊಂದಿರುವುದರಿಂದ ಮಹಿಳೆಗೆ ಮದುವೆಯಾಗುತ್ತಿಲ್ಲ ಎಂದು ಆಕೆಯ ಪೋಷಕರು ಆತಂಕಗೊಂಡಿದ್ದರು.

    ಒಮ್ಮೆ ಕುಟುಂಬದ ಜ್ಯೋತಿಷಿಯೊಬ್ಬರು ಮಹಿಳೆ ಜಾತಕದಲ್ಲಿ ಮಾಂಗಲ್ಯ ದೋಷವಿರುವುದರಿಂದ ಅವಳು ಮೊದಲಿಗೆ ಅಪ್ರಾಪ್ತ ಹುಡುಗನೊಂದಿಗೆ ಸಾಂಕೇತಿಕವಾಗಿ ವಿವಾಹ ಮಾಡಬೇಕೆಂದು ಸಲಹೆ ನೀಡಿದ್ದರು. ಹೀಗಾಗಿ ಟ್ಯೂಷನ್ ಟೀಚರ್ ಬಾಲಕನ ಪೋಷಕರಿಗೆ ನಿಮ್ಮ ಮಗ ಒಂದು ವಾರ ಟ್ಯೂಷನ್‍ಗಾಗಿ ನಮ್ಮ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ಉಳಿಸಿಕೊಂಡಿದ್ದಾಳೆ. ಬಳಿಕ ಬಾಲಕನೊಂದಿಗೆ ಅಂತಿಮವಾಗಿ ವಿವಾಹವಾಗಿದ್ದಾಳೆ.

    ಬಳಿಕ ಮನೆಗೆ ಹಿಂದಿರುಗಿದ ಬಾಲಕ ತನ್ನ ಪೋಷಕರಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಟೀಚರ್ ಮನೆಯವರು ಹಳದಿ- ಮೆಹಂದಿ ಕಾರ್ಯಕ್ರಮ ಮತ್ತು ‘ಸುಹಾಗ್ರಾತ್’ (ಮದುವೆಯ ರಾತ್ರಿ) ಹೀಗೆ ಮದುವೆಯ ಹಲವಾರು ವಿಧಿವಿಧಾನವನ್ನು ಬಲವಂತವಾಗಿ ಮಾಡಿದರು ಎಂದು ಆರೋಪಿಸಿದ್ದಾನೆ. ನಂತರ ಟೀಚರ್ ಕೈ ಬಳೆಗಳನ್ನು ಹೊಡೆದು ವಿಧವೆಯೆಂದು ಘೋಷಿಸಿ, ಸಂತಾಪ ಸಭೆಯನ್ನು ನಡೆಸಿದರು. ಜೊತೆಗೆ ಒಂದು ವಾರ ನನ್ನನ್ನು ಅವರ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾನೆ.

    ಇದರಿಂದ ಬಾಲಕನ ಪೋಷಕರು ಘಟನೆ ಬಗ್ಗೆ ವಿವರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಈ ಕುರಿತಂತೆ ಬಸ್ತಿ ಬಾವಾ ಖೇಲ್ ಪೊಲೀಸ್ ಠಾಣೆಯ ಅಧಿಕಾರಿ ಗಗನ್‍ದೀಪ್ ಸಿಂಗ್, ಬಾಲಕನ ಪೋಷಕರು ಘಟನೆ ವಿಚಾರವಾಗಿ ದೂರು ದಾಖಲಿಸಿದ್ದು, ಎರಡು ಕಡೆಯವರು ಇದೀಗ ರಾಜಿಯಾಗಿ ದೂರು ಹಿಂಪಡೆದಿದ್ದಾರೆ ಎಂದು ತಿಳಿಸಿದರು.

  • ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಚಂಡೀಗಢ: ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಜಲಂಧರ್ ಜಿಲ್ಲೆಯಲ್ಲಿ ರಾತ್ರಿ 11 ರಿಂದ ಮುಂಜಾನೆ 5ರವರೆಗೂ ನೈಟ್ ಕರ್ಫ್ಯೂ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಘನಾಶ್ಯಾಮ್ ಥೋರಿ ತಿಳಿಸಿದ್ದಾರೆ.

    ಶುಕ್ರವಾರ ಜಿಲ್ಲೆಯಲ್ಲಿ ಸುಮಾರು 134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 856 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕಳೆದ ತಿಂಗಳು ಪಂಜಾಬ್ ಸರ್ಕಾರ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ನಡೆಸಲು ಆದೇಶಿಸಿತ್ತು. ಪಂಜಾಬ್‍ನಲ್ಲಿ ಶುಕ್ರವಾರ 818ಕ್ಕೂ ಹೊಸ ಪ್ರಕರಣಗಳು ದಾಖಲಾಗಿದ್ದು, 1,86,189ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ. ಅಲ್ಲದೆ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,898ಕ್ಕೆ ಏರಿಕೆಯಾಗಿದೆ.

    ಮಹಾರಾಷ್ಟ್ರದ ನಂತರ ನಾಲ್ಕು ವಾರಗಳಲ್ಲಿ ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು, 6,264 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 6661ಕ್ಕೆ ಏರಿಕೆಯಾಗಿದೆ. ಜಲಂಧರ್ ಬಳಿಕ ಲುಧಿನಾದಲ್ಲಿ 105 ಪ್ರಕರಣಗಳು, ಪಟಿಯಾಲದಲ್ಲಿ 104 ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡು 400 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಒಟ್ಟಾರೆ ಈವರೆಗೂ 1,73,630 ಸೋಂಕಿನಿಂದ ಗುಣಮುಕ್ತರಾಗಿದ್ದಾರೆ.

    ಇನ್ನೂ ಚಂಡೀಗಢದಲ್ಲಿ 76 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೀಗ 22,116ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ.

  • ಕೆಲಸಕ್ಕಾಗಿ ಮನೆಯಿಂದ ಹೊರ ಹೋದ ಯುವತಿ ಸುಟ್ಟು ಭಸ್ಮ

    ಕೆಲಸಕ್ಕಾಗಿ ಮನೆಯಿಂದ ಹೊರ ಹೋದ ಯುವತಿ ಸುಟ್ಟು ಭಸ್ಮ

    – ಬೆಂಕಿ ತಗುಲಿದ್ರೂ ಸಹಾಯಕ್ಕೆ ಬಾರದ ಜನ
    – ಹೆದ್ದಾರಿ ಬಳಿಯ ಮೇಲ್ಸೇತುವೆ ಮೇಲೆ ಸಜೀವ ದಹನ

    ಚಂಡಿಗಢ: 31 ವರ್ಷದ ಯುವತಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೇಲ್ಸೇತುವೆ ಮೇಲೆ ಸುಟ್ಟು ಭಸ್ಮವಾಗಿರುವ ಘಟನೆ ಪಂಜಾಬ್ ರಾಜ್ಯದ ಖನ್ನಾದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿಯೇ ಯುವತಿ ಸುಟ್ಟು ಭಸ್ಮವಾಗುತ್ತಿದ್ದರೂ ಸಾರ್ವಜನಿಕರು ಸಹಾಯಕ್ಕೆ ಬಂದಿಲ್ಲ ಎಂದು ವರದಿಯಾಗಿದೆ.

    ಮನ್‍ಪ್ರೀತ್ ಕೌರ್ (31) ಸಾವನ್ನಪ್ಪಿದ ಮಹಿಳೆ. ಭಟ್ಟಲ್ ಗ್ರಾಮದ ಭಜನ್ ಸಿಂಗ್ ಅವರ ಪುತ್ರಿಯಾಗಿರುವ ಮನ್‍ಪ್ರೀತಿ ಇನ್ನು ವ್ಯಾಸಂಗ ಮಾಡುತ್ತಿದ್ದಳು. ಕೆಲಸದ ನಿಮಿತ್ ಬೆಳಗ್ಗೆ ಸುಮಾರು 7 ಗಂಟೆಯಿಂದ ಮನೆಯಿಂದ ಹೊರ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆ ಮನೆಯಲ್ಲಿ ನಡೆದಿಲ್ಲ ಎಂದು ಭಜನ್ ಸಿಂಗ್ ಹೇಳಿದ್ದಾರೆ.

    ಬೆಳಗ್ಗೆ 8.30ಕ್ಕೆ ಪೊಲೀಸರಿಗೆ ಯುವತಿ ಬೆಂಕಿಗಾಹುತಿಯಾಗಿರುವ ವಿಷಯ ತಿಳಿದಿದೆ, ಪೊಲೀಸದು ದೌಡಾಯಿಸುವಷ್ಟರಲ್ಲಿ ಯುವತಿ ಸುಟ್ಟು ಭಸ್ಮವಾಗಿದದ್ದಳು. ಆತ್ಮಹತ್ಯೆ ಅಥವಾ ಕೊಲೆ ಬಗ್ಗೆ ಪೊಲೀಸರು ಗೊಂದಲದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಮನ್‍ಪ್ರೀತ್ ಕುಟುಂಬಸ್ಥರು ಮತ್ತು ಆಕೆ ಕಾಲೇಜಿನ ಸ್ನೇಹಿತರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

  • ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನು ಮುಂದೆ ಪಂಜಾಬ್ ಕಿಂಗ್ಸ್

    ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನು ಮುಂದೆ ಪಂಜಾಬ್ ಕಿಂಗ್ಸ್

    ಚಂಡೀಗಡ: 14ನೇ ಆವೃತ್ತಿಯ ಐಪಿಎಲ್‍ಗೆ ಭರ್ಜರಿ ಎಂಟ್ರಿ ಕೊಡಲು ಕಾಯುತ್ತಿರುವ ಕಿಂಗ್ಸ್ ಇಲೆವನ್ ಪಂಜಾಬ್ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದೆ.

    ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಕುರಿತು ಅಧಿಕೃತವಾಗಿ ಮಾತನಾಡಿರುವ ತಂಡದ ಸಿಇಒ ಸಂತೋಷ್ ಮೆನನ್, ಪಂಜಾಬ್ ಕಿಂಗ್ ಹೊಸತನದಲ್ಲಿ ರೂಪುಗೊಂಡಿರುವ ಬ್ರ್ಯಾಂಡ್ ಹೆಸರಾಗಿದ್ದು, ಇದು ನಮ್ಮ ಹೊಸ ಕೋರ್ ಬ್ರ್ಯಾಂಡ್ ಹೆಸರಿಸಲು ಸೂಕ್ತವಾದ ಸಮಯವಾಗಿದೆ ಎಂದಿದ್ದಾರೆ.

    ಈವರೆಗಿನ 13 ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಪಡೆದುಕೊಂಡಿಲ್ಲ. ಒಂದು ಬಾರಿ ರನ್ನರ್ ಅಪ್ ಹಾಗೂ ಇನ್ನೊಂದು ಬಾರಿ ಮೂರನೇ ಸ್ಥಾನ ಪಡೆದದನ್ನು ಬಿಟ್ಟರೆ ಇನ್ನುಳಿದ ಬಹುತೇಕ ಎಲ್ಲಾ ಆವೃತ್ತಿಗಳಲ್ಲಿ ನೀರಸ ಪ್ರದರ್ಶನದ ಮೂಲಕ ಪಂಜಾಬ್ ತಂಡ ನಿರಾಸೆ ಅನುಭವಿಸಿದೆ.

    ದುಬೈನಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಘಟಾನುಘಟಿ ಆಟಗಾರರೊಂದಿಗೆ ಮೈದಾನಕ್ಕಿಳಿದಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ಈ ಬಾರಿಯೂ ಬಲಿಷ್ಟ ಆಟಗಾರರಾದ ಕೆ.ಎಲ್ ರಾಹುಲ್, ಮಾಯಾಂಕ್ ಅರ್ಗವಾಲ್, ಕ್ರೀಸ್ ಗೇಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ದೀಪಕ್ ಹೂಡಾ ಜೊತೆಗೆ ಕೋಚ್ ಆಗಿ ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದಲ್ಲಿರುವುದು ಬಲ ಹೆಚ್ಚಿಸಿದ್ದು, ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ಹೆಸರನ್ನು ಪಂಜಾಬ್ ಕಿಂಗ್ಸ್ ಆಗಿ ಬದಲಾಯಿಸಿದ ಬಳಿಕವಾದರೂ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಪತ್ನಿ, ಮಗುವಿಗೆ ಗುಂಡಿಟ್ಟು, ಆತ್ಮಹತ್ಯೆಗೆ ಶರಣಾದ

    ಪತ್ನಿ, ಮಗುವಿಗೆ ಗುಂಡಿಟ್ಟು, ಆತ್ಮಹತ್ಯೆಗೆ ಶರಣಾದ

    – ಇಬ್ಬರನ್ನ ಕೊಂದ ಬಳಿಕ ವೀಡಿಯೋ

    ಚಂಡೀಗಢ: ಪತ್ನಿ ಮತ್ತು ನಾಲ್ಕು ವರ್ಷದ ಮಗುವಿಗೆ ಗುಂಡಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ ರಾಜ್ಯದ ಅಮೃತಸರದ ಬಹದ್ದೂರ್ ನಗರದಲ್ಲಿ ನಡೆದಿದೆ.

    ವಿಕ್ರಮ್‍ಜಿತ್ ಪತ್ನಿ ಹಾಗೂ ಮಗುವನ್ನ ಕೊಂದು ಸೂಸೈಡ್ ಮಾಡಿಕೊಂಡ ವ್ಯಕ್ತಿ, ಮೃತ ವಿಕ್ರಮಜಿತ್ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಕ್ರಮ್‍ಜಿತ್ ಒಂದಿಷ್ಟು ಹಣವನ್ನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿದೆ.

    ಪತ್ನಿ ಮತ್ತು ಮಗುವನ್ನ ಕೊಂದ ಬಳಿಕ ವೀಡಿಯೋ ಮಾಡಿರುವ ವಿಕ್ರಮ್‍ಜಿತ್, ಗೆಳೆ ಯನಿಗೆ ಸುಳ್ಳು ಹೇಳಿ ಆತನಿಂದ ತಂದ ಗನ್ ನಿಂದ ಪತ್ನಿ ಹಾಗೂ ಮಗುವನ್ನ ಕೊಂದಿದ್ದೇನೆ. ಹಾಗಾಗಿ ನನ್ನ ಗೆಳೆಯನಿಗೆ ಕಷ್ಟ ಕೊಡಬೇಡಿ ಎಂದು ತಾವು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ಶವಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ದೆಹಲಿಯ ಸಿಂಘು ಗಡಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

    ದೆಹಲಿಯ ಸಿಂಘು ಗಡಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

    ನವದೆಹಲಿ: 40 ವರ್ಷದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಹೊರವಲಯ ಸಿಂಘು ಗಡಿಯಲ್ಲಿ ನಡೆದಿದೆ. ವಿಷ ಸೇವಿಸದ ರೈತನನ್ನು ಹತ್ತಿರದ ಸೋನೆಪತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಶನಿವಾರ ಸಂಜೆ 7.30ರ ವೇಳೆಗೆ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ರೈತ ಪಂಜಾಬ್‍ನ ಘತೇಘಡ್ ಸಾಹಿಬ್ ನಿವಾಸಿ ಅಮರಿಂಧರ್ ಸಿಂಗ್(40) ಎಂದು ಗುರುತಿಸಲಾಗಿದೆ.

    ಅಮರಿಂದರ್ ನಿಧನಕ್ಕೂ ಒಂದು ಗಂಟೆ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಈ ಕುರಿತಂತೆ ಪೊಲೀಸರು ಮುಂಜಾಗ್ರತ ಕ್ರಮವಹಿಸಲಿಲ್ಲ. ಇದೀಗ ಈ ವಿಚಾರವಾಗಿ ತನಿಖೆ ಆರಂಭಿಸಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣ ಮತ್ತು ಪಂಜಾಬ್ ಮೂಲದ ಸಾವಿರಾರು ರೈತರು ಕಳೆದ 30ಕ್ಕೂ ಅಧಿಕ ದಿನಗಳಿಂದ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಇಲ್ಲಿಯವರೆಗೂ ರೈತ ಸಂಘಟನೆಗಳೊಂದಿಗೆ ಏಳು ಸುತ್ತಿನ ಸಭೆ ನಡೆಸಿದ್ದು ಎಲ್ಲವೂ ವಿಫಲಗೊಂಡಿದೆ.

    ಈ ಹಿಂದೆ ಘಾಜಿಯಾಬಾದ್ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಉತ್ತರ ಪ್ರದೇಶದ ರಾಮ್‍ಪುರ್ ಜಿಲ್ಲೆಯ ನಿವಾಸಿ ಕಾಶ್ಮೀರ್ ಸಿಂಗ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಪಂಜಾಬ್‍ನ ಫಾಸಿಲ್ಕ್ ಜಿಲ್ಲೆಯ ಜಲಲಬಾದ್‍ನಲ್ಲಿ ವಕೀಲರಾಗಿದ್ದ ಅಮರ್‍ಜಿತ್ ಸಿಂಗ್ ಟಕ್ರಿ ಗಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೂ ಡೆತ್ ನೋಟ್‍ನಲ್ಲಿ ರೈತರ ಆಂದೋಲನಕ್ಕೆ ಬೆಂಬಲಿಸುವ ಸಲುವಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ಬರೆದಿದ್ದರು.

    ಕಳೆದ ವರ್ಷ ಡಿಸೆಂಬರ್ 21ರಂದು ಸಿಂಘು ಗಡಿಯ ಪ್ರತಿಭಟನೆ ವೇಳೆ 65 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದನು. ಜೊತೆಗೆ ಡಿಸೆಂಬರ್ 20ರಂದು ಪಂಜಾಬ್‍ನ ಬಟಿಂಡಾದ ದಯಾಲ್‍ಪುರ ಮಿರ್ಜಾ ಗ್ರಾಮದ ನಿವಾಸಿಯಾದ ಗುರ್ಲಾಬ್ ಸಿಂಗ್ ಎಂಬ ರೈತ ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

  • ಪತ್ನಿಯೊಂದಿಗೆ ಕಾರು ಕದ್ದ ಖದೀಮರು – ಪೊಲೀಸರಿಗೆ ದೂರು ನೀಡಿದ ಪತಿ

    ಪತ್ನಿಯೊಂದಿಗೆ ಕಾರು ಕದ್ದ ಖದೀಮರು – ಪೊಲೀಸರಿಗೆ ದೂರು ನೀಡಿದ ಪತಿ

    ಛತ್ತೀಸ್‍ಗಡ: ವ್ಯಕ್ತಿಯೊಬ್ಬನ ಪತ್ನಿ ಮತ್ತು ಆತನ ಟಾಟಾ ಟಿಗೋ ಕಾರನ್ನು ಅಪರಿಚಿತ ವ್ಯಕ್ತಿಗಳಿಬ್ಬರು ಕದ್ದು ಬಳಿಕ ಮಹಿಳೆಯನ್ನು ಹೆದ್ದಾರಿಯೊಂದರಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿರುವ ಘಟನೆ ಪಂಜಾಬ್ ಡೇರಾ ಬಸ್ಸಿ ಸಮೀಪದ ಛತ್ತೀಸ್‍ಗಡದಲ್ಲಿ ನಡೆದಿದೆ.

    ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ರಾಜೀವ್ ಚಂದ್ ಮತ್ತು ಅವರ ಪತ್ನಿ ರಿತು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮ್ಮ ಮಕ್ಕಳ ಶಾಲೆಯ ಫೀಸ್ ಕಟ್ಟಲು ಹೋಗಿದ್ದರು. ಈ ವೇಳೆ ರಿತು ಕಾರಿನಲ್ಲಿಯೇ ಕಾಯುವುದಾಗಿ ರಾಜೀವ್‍ಗೆ ತಿಳಿಸಿದ್ದಾರೆ. ಹೀಗಾಗಿ ರಾಜೀವ್ ಕಾರು ಕೀಯನ್ನು ವಾಹನದಲ್ಲಿಯೇ ಬಿಟ್ಟು ಫೀಸ್ ಕಟ್ಟಲು ಶಾಲೆಯೊಳಗೆ ಹೋಗಿದ್ದಾರೆ.

    ಅದೇ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಇಲ್ಲದೆ ಬಂದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಅವರಲ್ಲಿ ಒಬ್ಬ ಡ್ರೈವರ್ ಸೀಟಿನಲ್ಲಿ ಕುಳಿತರೆ ಮತ್ತೊಬ್ಬ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿತುವನ್ನು ಆಕ್ರಮಿಸಿ ಅವಳ ಮುಖವನ್ನು ಮುಚ್ಚಿದರು. ಬಳಿಕ ಸುಮಾರು 5 ಕಿಮೀವರೆಗೂ ವಾಹನವನ್ನು ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಅಂಬಾಲಾ ಟೋಲ್ ಪ್ಲಾಜಾದಲ್ಲಿ ರಿತುವನ್ನು ಕಾರಿನಿಂದ ಹೊರಕ್ಕೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ.

    ನಂತರ ದಂಪತಿ ಪೊಲೀಸರನ್ನು ಸಂಪರ್ಕಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ವಿಚಾರವಾಗಿ ಪೊಲೀಸರು ತನಿಖೆ ಆರಂಭಿಸಿದ್ದೇವೆ. ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಾಗಿದ್ದು, ದರೋಡೆಕೋರರನ್ನು ಗುರುತಿಸಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.