Tag: punjab

  • ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಚಂಡಿಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ.

    ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ  (PPCC) ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಪಕ್ಷದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

    ಮನುಷ್ಯನ ಸ್ವಭಾವದ ಕುಸಿತವು ರಾಜಿ ಮೂಲೆಯಿಂದ ಹುಟ್ಟಿಕೊಂಡಿದೆ. ಪಂಜಾಬ್‍ನ ಭವಿಷ್ಯ ಮತ್ತು ಪಂಜಾಬ್‍ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆಯನ್ನು ಮುಂದುವರಿಸುತ್ತೇನೆ ಎಂದು ನವಜೋತ್ ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

    ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿಗೆ ಮುನ್ನ ಅವರ ಮುಂದಿನ ಕ್ರಮದ ಬಗ್ಗೆ ಊಹಾಪೋಹಗಳ ನಡುವೆಯೇ ಸಿಧು ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 18 ರಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆರಾಜೀನಾಮೆ ನೀಡಿದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊದಲ ರಾಜಧಾನಿಗೆ ಭೇಟಿ ಇದಾಗಲಿದೆ. ಪಂಜಾಬ್ ಕಾಂಗ್ರೆಸ್‍ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

    2004ರಲ್ಲಿ ಬಿಜೆಪಿ ಸೇರಿದ್ದ ಸಿಧು ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2004, 2009 ರಲ್ಲಿ ಸಿಧು ಜಯಗಳಿಸಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ಅಮೃತಸರದ ಟಿಕೆಟ್ ನೀಡಲಾಗಿತ್ತು. ಇದರಿಂದ ಬಹಿರಂಗವಾಗಿ ಬಂಡಾಯ ಸಾರಿದ್ದ ಸಿಧು ಬಿಜೆಪಿಯನ್ನು ತೊರೆದು 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದನ್ನೂ ಓದಿ:  ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    2017ರಲ್ಲಿ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಸಿಧು ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ಆಸೆಗೆ ಕೊಕ್ಕೆ ಹಾಕಿದ್ದರು. ಆದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಇಷ್ಟ ಇಲ್ಲದೇ ಇದ್ದರೂ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಇಲ್ಲಿಂದ ಸಿಧು ಮತ್ತು ಅಮರಿಂದರ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು

    2019ರ ಲೋಕಸಭೆ ಚುನಾವಣಾ ಸಮಯದಲ್ಲಿ ಸಿಧು ಪತ್ನಿ ನವಜೋತ್ ಕೌರ್ ಚಂಡೀಗಢ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದಕ್ಕೆ ಅಮರಿಂದರ್ ಕಾರಣ ಎಂದು ಆರೋಪಿಸುವುದರೊಂದಿಗೆ ಸಂಘರ್ಷ ಮತ್ತಷ್ಟು ಜಾಸ್ತಿಯಾಯಿತು. 2019ರ ಜುಲೈನಲ್ಲಿ ಸಿಧು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕವೂ ಪಂಜಾಬ್ ಸರ್ಕಾರ, ಅಮರಿಂದರ್ ವಿರುದ್ಧ ಸಿಧು ಟೀಕೆ ಮುಂದುವರಿಸಿದರು. ಈ ನಡುವೆ ಪಂಜಾಬ್‍ನಲ್ಲಿ ಬಲ ಜಾಸ್ತಿ ಆಗುತ್ತಿದ್ದು, ಸಿಧು ಆಪ್ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡತೊಡಗಿತು. ಇದನ್ನೂ ಓದಿ: ಸಿಎಂಗೆ ಮುಖ ತೋರಿಸಲು ಆಗುತ್ತಿಲ್ಲ: ಶಾಸಕ ಹರ್ಷವರ್ಧನ್

    ಮುಂದಿನ ವಿಧಾಸಭಾ ಚುನಾವಣೆಯಲ್ಲಿ ನಾಯಕರೇ ಬಡಿದಾಡುವುದು ಬೇಡ ಎಂದು ತೀರ್ಮಾನಿಸಿ ಸಿಧು ಆಸೆಯಂತೆ ಅವರನ್ನು ಹೈಕಮಾಂಡ್ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತನ್ನ ವಿರುದ್ಧವೇ ಬಂಡಾಯ ಸಾರಿದ್ದ ಸಿಧುವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಮರಿಂದರ್ ಸಿಟ್ಟಾಗಿದ್ದರು. ಈ ನಡುವೆ ಸಿಧು ಸಲಹೆಗಾರರಾಗಿದ್ದ ಮಾಲ್ವಿಂದರ್ ಸಿಂಗ್ ಕಾಶ್ಮೀರ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಅಮರಿಂದರ್ ಅವರನ್ನು ವಜಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ತನ್ನ ಆಪ್ತನನ್ನು ವಜಾ ಮಾಡಿದ ವಿಚಾರದಲ್ಲಿ ಸಿಟ್ಟಾಗಿದ್ದ ಸಿಧು ಅಮರಿಂದರ್ ಆಡಳಿತದ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತಲೇ ಇದ್ದರು.

    ಪಂಜಾಬ್‍ನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅಮರಿಂದರ್ ಸಿಂಗ್ ಅವರನ್ನು ಕೆಳಗಡೆ ಇಳಿಸಲೇ ಬೇಕು ಎಂದು ಸಿಧು ಬಣ ಹೈಕಮಾಂಡ್‍ಗೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತರಿಕ ಸಮೀಕ್ಷೆಯನ್ನು ಮಾಡಿತ್ತು ಎನ್ನಲಾಗುತ್ತಿದೆ. ಕೊನೆಗೆ ಹಲವು ನಾಯಕರ ಅಪಸ್ವರಕ್ಕೆ ಮಣಿದ ಕಾಂಗ್ರೆಸ್ ಬಿಜೆಪಿಯಂತೆ ಅಮರಿಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಹೀಗಾಗಿ ಕೊನೆಗೆ ಅಮರಿಂದರ್ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಸಿಧು ಸಹ ಅಧ್ಯಕ್ಷ ಪಟ್ಟಕ್ಕೆ ರಾಜೀನಾಮೆ ನೀಡಿ ಕುತೂಹಲ ಮೂಡಿಸಿದ್ದಾರೆ.

  • ವಾಹನ ನಿಲ್ಲಿಸಿ ಪಂಜಾಬ್ ನೂತನ ಸಿಎಂನಿಂದ ನವ ಜೋಡಿಗೆ ವಿಶ್ – ವೀಡಿಯೋ ವೈರಲ್

    ವಾಹನ ನಿಲ್ಲಿಸಿ ಪಂಜಾಬ್ ನೂತನ ಸಿಎಂನಿಂದ ನವ ಜೋಡಿಗೆ ವಿಶ್ – ವೀಡಿಯೋ ವೈರಲ್

    ಚಂಡೀಗಢ: ಪಂಜಾಬ್ 16ನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ಚರಣಜಿತ್ ಸಿಂಗ್ ಚನ್ನಿ ಈಗಾಗಲೇ ಜನರ ಹೃದಯ ಗೆಲ್ಲಲು ಆರಂಭಿಸಿದ್ದಾರೆ. ಸದ್ಯ ಭಾನುವಾರ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ಜೋಡಿಗೆ ಸಿಎಂ ತಮ್ಮ ವಾಹನವನ್ನು ನಿಲ್ಲಿಸಿ ವಿಶ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Charanjit Singh Channi

    ಪಂಜಾಬ್ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಚರಣಜಿತ್ ಸಿಂಗ್ ಚನ್ನಿಯವರು ಭಟಿಂಡಾಗೆ ಭೇಟಿ ನೀಡಿದಾಗ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ನವ ದಂಪತಿಯನ್ನು ಮಂಡಿ ಕಲಾನ್ ಹಳ್ಳಿಯಲ್ಲಿ ಕಂಡು ಇದ್ದಕ್ಕಿಂತೆ ತಮ್ಮ ವಾಹನವನ್ನು ನಿಲ್ಲಿಸಿ ಶುಭಾಶಯ ತಿಳಿಸಿದ್ದಾರೆ.  ಇದನ್ನೂ ಓದಿ: ಗುಲಾಬ್ ಚಂಡಮಾರುತ ಎಫೆಕ್ಟ್- ಬೀದರ್‌ನಲ್ಲಿ ಮುಂದುವರಿದ ಮಳೆಯ ಅಬ್ಬರ

    ವೀಡಿಯೋದಲ್ಲಿ ಚರಣಜಿತ್ ಸಿಂಗ್ ಚನ್ನಿ ವರನನ್ನು ತಬ್ಬಿ, ವಧುವಿಗೆ ಕಾಣಿಕೆ ಅರ್ಪಿಸಿ ವಿಶ್ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಸಿಎಂ ಸುತ್ತ ಪೊಲೀಸರು ಸುತ್ತುವರೆದಿರುತ್ತಾರೆ ಮತ್ತು ಇದೇ ವೇಳೆ ಚರಣಜಿತ್ ಸಿಂಗ್ ಚನ್ನಿ ಜೋಡಿಯ ಕುಟುಂಬದವರು ತಟ್ಟೆಯಲ್ಲಿಟ್ಟುಕೊಂಡಿದ್ದ ಸಿಹಿ ಖಾದ್ಯವನ್ನು ಸವಿದಿದ್ದಾರೆ.

    ಕೆಲವು ದಿನಗಳ ಹಿಂದೆ ಚರಣಜಿತ್ ಸಿಂಗ್ ಚನ್ನಿಯವರು ಪಂಜಾಬ್‍ನ ಜಾನಪದ ನೃತ್ಯ ಭಾಂಗ್ರಾವನ್ನು ಕಪುರ್ತಲಾದಲ್ಲಿ ನಡೆದ ಕಾರ್ಯಕ್ರದಲ್ಲಿ ಪ್ರದರ್ಶಿಸಿದ್ದರು.  ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

  • ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

    ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

    ಚಂಡೀಗಢ: ಪಂಜಾಬ್‍ನಲ್ಲಿ ಚರಣ್‍ಜಿತ್ ಸಿಂಗ್ ಛನ್ನಿ ಸರ್ಕಾರದ ನೂತನ ಸಚಿವ ಸಂಪುಟ ರಚನೆ ಕಸರತ್ತು ಅಂತಿಮಗೊಂಡಿದ್ದು, ಇಂದು ಸಂಜೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಐವರು ಹಳೆ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ.

    ಈಗಾಗಲೇ ಸಚಿವ ಸಂಪುಟ ಅಂತಿಮಗೊಂಡಿದ್ದು, ಮಾಜಿ ಸಿಎಂ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಸಾಧು ಸಿಂಗ್ ಧರ್ಮಸೋತ್, ಸುಂದರ್ ಶ್ಯಾಮ್, ರಾಣಾ ಸೋಡಿ, ಗುರ್ಪ್ರೀತ್ ಕಾಂಗಡ್ ಮತ್ತು ಬಲ್ವೀರ್ ಸಿದುಗೆ ಕೂಕ್ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಸಂಪುಟದಲ್ಲಿದ್ದ ಎಂಟು ಜನ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಏಳು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಂಪುಟ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಏಳು ಹೊಸ ಮುಖಗಳಿಗೆ ಮಣೆ:
    ಗುರ್‍ಕೀರತ್ ನಾಗ್ರಾ, ಪರ್ಗಟ್ ಸಿಂಗ್, ಸಂಗತ್ ಗಿಲ್ಜಿಯಾ, ರಾಣಾ ಗುರ್‍ಜಿತ್, ರಾಜ್‍ಕುಮಾರ್ ವೆರ್ಕಾ ಮತ್ತು ಅಮರೀಂದರ್ ಸಿಂಗ್, ರಾಜಾ ವಡಿಂಗ್ ಏಳು ಜನರು ಹೊಸದಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಸಂಪುಟ ವಿಸ್ತರಣೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಲೆದುತೂಗಿ ನಿರ್ಧಾರಗಳನ್ನು ಕೈಗೊಂಡಿದ್ದು, ಮೂರು ಬಾರಿ ಸಭೆ ನಡೆದರೂ ಪಟ್ಟಿ ಅಂತಿಮಗೊಂಡಿರಲಿಲ್ಲ. ರಾಹುಲ್ ಗಾಂಧಿ ಶುಕ್ರವಾರ ರಾತ್ರಿ ಚರಣ್‍ಜಿತ್ ಸಿಂಗ್ ಜೊತೆ ಮಾತನಾಡಿ ಅಂತಿಮ ಪಟ್ಟಿ ರಚಿಸಿದ್ದಾರೆ. ಈ ನಡುವೆ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಸಂಪುಟದಿಂದ ಕೈಬಿಟ್ಟ ಸಚಿವರು ಅಮರೀಂದರ್ ಜೊತೆಗೂಡಿ ಸರ್ಕಾರ ವಿರುದ್ಧ ತೊಡೆತಟ್ಟುವ ಸಾಧ್ಯತೆ ಹೆಚ್ಚಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಇದೀಗ ಅಮರೀಂದರ್ ಸಿಂಗ್ ಮುಂದಿನ ನಡೆ ಕೂಡ ಪಂಜಾಬ್ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    https://twitter.com/CHARANJITCHANNI/status/1441687749799473157

    ಪಂಜಾಬ್‍ನಲ್ಲಿ ರಾಜಕೀಯ ಬೆಳವಣಿಗೆ ಬಳಿಕ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಬಳಿಕ ಮುಖ್ಯಮಂತ್ರಿಯಾಗಿ ಚರಣ್‍ಜಿತ್ ಸಿಂಗ್, ಡಿಸಿಎಂ ಆಗಿ ಸುಖ್‍ಜಿಂದರ್ ರಂಧಾವಾ ಮತ್ತು ಓ.ಪಿ. ಸೋನಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸಚಿವ ಸಂಪುಟ ರಚನೆಗೊಂಡು ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

  • ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ಚಂಡೀಗಢ: ತಮ್ಮ ರಾಜೀನಾಮೆಗೆ ಕಾರಣರಾದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತು ಸಿಧು ವಿರುದ್ಧ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಅನುಭವದ ಕೊರತೆ ಇದೆ ಇದನ್ನು ಸಿಧು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    2022ರ ವಿಧಾನಸಭೆ ಚುನಾವಣೆಯಲ್ಲಿ ಸಿಧು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಹಾಕಲಿದ್ದೇನೆ. ಸಿಧು ಸಿಎಂ ಅಭ್ಯರ್ಥಿಯಾಗುವುದನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇನೆ, ಅವನೊಬ್ಬ ಅಪಾಯಕಾರಿ ವ್ಯಕ್ತಿಯಾಗಿದ್ದು, ಅವನಿಂದ ರಾಜ್ಯವನ್ನು ರಕ್ಷಿಸಬೇಕಿದೆ ಎಂದು ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ಮೂರು ವಾರಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೆ, ಆದರೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದರು. ಸೈನಿಕನಾಗಿ ನಾನು ಹೇಗೆ ಕೆಲಸ ಮಾಡಬೇಕು, ಹೇಗೆ ಹಿಂತಿರುಗಬೇಕು ಎಂದು ಗೊತ್ತಿದೆ ಎಂದರು. ಇನ್ನೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನನ್ನ ಮಕ್ಕಳಿದ್ದಾಗೆ, ಅವರಿಗೆ ಅನುಭವ ಇಲ್ಲ, ಅವರಿಗೆ ತಪ್ಪು ಸಲಹೆಗಳನ್ನು ನೀಡಲಾಗುತ್ತಿದೆ. ಯಾವುದು ಹೀಗೆ ಆಗಬಾರದು, ಇದರಿಂದ ನನಗೆ ದುಃಖವಾಗಿದೆ ಎಂದು ಹೇಳಿದ್ದಾರೆ.

  • ಸಿಧು ನೇತೃತ್ವದಲ್ಲೇ 2022ರ ಪಂಜಾಬ್ ಚುನಾವಣೆ: ಹರೀಶ್ ರಾವತ್

    ಸಿಧು ನೇತೃತ್ವದಲ್ಲೇ 2022ರ ಪಂಜಾಬ್ ಚುನಾವಣೆ: ಹರೀಶ್ ರಾವತ್

    ಚಂಡೀಗಢ: ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿಯೇ 2022ರ ಪಂಜಾಬ್ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಿಧು ಒಬ್ಬ ಜನಪ್ರಿಯ ನಾಯಕರಾಗಿದ್ದಾರೆ. ಹೀಗಾಗಿ ಅವರ ನೇತೃತ್ವದಲ್ಲಿಯೇ ಮುಂಬರುವ ಪಂಜಾಬ್ ಚುನಾವಣೆಯನ್ನು ಎದುರಿಸುತ್ತೇವೆ. ಆದರೆ ಈ ಕುರಿತು ಕಾಂಗ್ರೆಸ್ಸಿನ ರಾಷ್ಟ್ರಾಧ್ಯಕ್ಷರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಂದು ತಿಳಿಸಿದ್ದಾರೆ.

    ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಒಮ್ಮತದ ಅಭಿಪ್ರಾಯದಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಇದು ಪೂರ್ವ ನಿಯೋಜಿತವಲ್ಲ ಎಂದು ಇದೇ ವೇಳೆ ರಾವತ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ, ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದವರೆಗೂ ಅವರೇ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಮುಖ್ಯಮಂತ್ರಿ ಎಂದು ಹೈಕಮಾಂಡ್ ತಿಳಿಸಿತ್ತು.

    ಪಂಜಾಬ್ ಕಾಂಗ್ರೆಸ್ಸಿನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿತ್ತು. ಕಡೆಗೂ ಸಿಎಂ ಸ್ಥಾನಕ್ಕೆ ಶನಿವಾರ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ರೇಸ್‍ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸುಖ್‍ಜಿಂದರ್ ಸಿಂಗ್ ಕಡೆಗೆ ಒಲವು ವ್ಯಕ್ತಪಡಿಸಿತ್ತು. ಅಂತಿಮ ಕ್ಷಣದಲ್ಲಿ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ದಲಿತ ನಾಯಕ ಚರಣ್‍ಜಿತ್ ಸಿಂಗ್ ಛನ್ನಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

  • ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಇದರ ಬೆನ್ನಲೇ ಅವರ ಮೇಲೆ 2018ರಲ್ಲಿ ದಾಖಲಾಗಿದ್ದ ಮೀಟೂ ಆರೋಪ ಮುನ್ನೆಲೆಗೆ ಬಂದಿದೆ.

    ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಚರಣ್‍ಜಿತ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಲ್ಲದೆ ಅಂದಿನ ಸಿಎಂ ಅಮರೀಂದರ್ ಸಿಂಗ್ ಅವರಲ್ಲಿ ದೂರು ಕೂಡ ನೀಡಿದ್ದರು. ಇದೀಗ ಚರಣ್‍ಜಿತ್ ಸಿಂಗ್ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸುತ್ತಿದ್ದಂತೆ ಅವರ ಮೇಲಿದ್ದ ಮೀಟೂ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿಬಿಡಲಾಗುತ್ತಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ‘ವೆಲ್ ಡನ್ ರಾಹುಲ್’ ಎಂದು ಚರಣ್‍ಜಿತ್ ಛನ್ನಿ ಆಯ್ಕೆಗೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚರಣ್‍ಜಿತ್ ಸಿಂಗ್ ಹಿನ್ನೆಲೆ:
    48 ವರ್ಷದ ಚರಣ್‍ಜಿತ್ ಸಿಂಗ್ ದಲಿತಸಮುದಾಯದವರು. ಸಿಖ್ಖರಲ್ಲಿ ಅತ್ಯಂತ ಕೆಳ ವರ್ಗ ಚಮ್ಮಾರ ಸಮುದಾಯಕ್ಕೆ ಸೇರಿದವರು. 2007ರಿಂದ ಸತತವಾಗಿ ಚಾಮ್‍ಕೌರ್ ಸಾಹೀಬ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದಾರೆ. 2015ರಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಮರೀಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕಶಿಕ್ಷಣ ಸಚಿವರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಯುವ ನಾಯಕ ಚರಣ್‍ಜಿತ್ ಸಿಂಗ್ ಛನ್ನಿಗೆ ಮಣೆ ಹಾಕಿದೆ. ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದ ಹೈಕಮಾಂಡ್ ಚರಣ್ ಜಿತ್ ಹೆಸರನ್ನು ಘೋಷಿಸಿತು. ಈ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಚರಣ್‍ಜಿತ್ ಸಿಂಗ್, ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ. ನಾಳೆ 11 ಗಂಟೆಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದವರೆಗೂ ಅವರೇ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ಘೋಷಿಸಿದೆ. ಇದನ್ನೂ ಓದಿ:  ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

  • ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದ ವರೆಗೂ ಅವರೆ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ತಿಳಿಸಿದೆ. ಇದನ್ನೂ ಓದಿ: ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    ಪಂಜಾಬ್ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿತ್ತು. ನಿನ್ನೆ ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ರೇಸ್‍ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸುಖ್‍ಜಿಂದರ್ ಸಿಂಗ್ ಕಡೆಗೆ ಒಲವು ವ್ಯಕ್ತಪಡಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ದಲಿತ ನಾಯಕ ಚರಣ್‍ಜಿತ್ ಸಿಂಗ್ ಛನ್ನಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

  • ಪಂಜಾಬ್ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ

    ಪಂಜಾಬ್ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಂಧಾವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದರು, ಪಂಜಾಬ್‍ನಲ್ಲಿ ಸಿಧು ನಾಯಕತ್ವಕ್ಕೆ ಅಮರೀಂದರ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಸಿಧು ಆಪ್ತ ಸುಖ್‍ಜಿಂದರ್ ಸಿಂಗ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    ಪಂಜಾಬ್ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿತ್ತು. ನಿನ್ನೆ ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ರೇಸ್‍ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸುಖ್‍ಜಿಂದರ್ ಸಿಂಗ್  ಕಡೆಗೆ ಒಲವು ವ್ಯಕ್ತಪಡಿಸಿ ಅಂತಿಮ ಘೋಷಣೆಗೆ ಸಿದ್ಧತೆ ನಡೆಸಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

  • ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    ಚಂಡೀಗಢ: ಅಮರಿಂದರ್ ಸಿಂಗ್ ವಿರುದ್ಧ ಬಹಿರಂಗವಾಗಿ ಆಗಾಗ ಹೇಳಿಕೆಯಲ್ಲೇ ಸಿಕ್ಸರ್ ಸಿಡಿಸುತ್ತಿದ್ದ ಸಿಧು ಕೊನೆಗೂ ಅವರನ್ನು ಪಂಜಾಬ್ ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    2004ರಲ್ಲಿ ಬಿಜೆಪಿ ಸೇರಿದ್ದ ಸಿಧು ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2004, 2009 ರಲ್ಲಿ ಸಿಧು ಜಯಗಳಿಸಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ಅಮೃತಸರದ ಟಿಕೆಟ್ ನೀಡಲಾಗಿತ್ತು. ಇದರಿಂದ ಬಹಿರಂಗವಾಗಿ ಬಂಡಾಯ ಸಾರಿದ್ದ ಸಿಧು ಬಿಜೆಪಿಯನ್ನು ತೊರೆದು 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

    2017ರಲ್ಲಿ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಸಿಧು ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ಆಸೆಗೆ ಕೊಕ್ಕೆ ಹಾಕಿದ್ದರು. ಆದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಇಷ್ಟ ಇಲ್ಲದೇ ಇದ್ದರೂ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಇಲ್ಲಿಂದ ಸಿಧು ಮತ್ತು ಅಮರಿಂದರ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಕೊಂಡಿತು.

    2019ರ ಲೋಕಸಭೆ ಚುನಾವಣಾ ಸಮಯದಲ್ಲಿ ಸಿಧು ಪತ್ನಿ ನವಜೋತ್ ಕೌರ್ ಚಂಡೀಗಢ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದಕ್ಕೆ ಅಮರಿಂದರ್ ಕಾರಣ ಎಂದು ಆರೋಪಿಸುವುದರೊಂದಿಗೆ ಸಂಘರ್ಷ ಮತ್ತಷ್ಟು ಜಾಸ್ತಿಯಾಯಿತು. 2019ರ ಜುಲೈನಲ್ಲಿ ಸಿಧು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಭಿನ್ನಮತ – ಸತ್ಯಕ್ಕೆ ಸೋಲಿಲ್ಲ ಎಂದ ನವಜೋತ್ ಸಿಂಗ್ ಸಿಧು

    ರಾಜೀನಾಮೆ ಬಳಿಕವೂ ಪಂಜಾಬ್ ಸರ್ಕಾರ, ಅಮರಿಂದರ್ ವಿರುದ್ಧ ಸಿಧು ಟೀಕೆ ಮುಂದುವರಿಸಿದರು. ಈ ನಡುವೆ ಪಂಜಾಬ್‍ನಲ್ಲಿ ಆಪ್ ಬಲ ಜಾಸ್ತಿ ಆಗುತ್ತಿದ್ದು, ಸಿಧು ಆಪ್ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡತೊಡಗಿತು.

    ಮುಂದಿನ ವಿಧಾಸಭಾ ಚುನಾವಣೆಯಲ್ಲಿ ನಾಯಕರೇ ಬಡಿದಾಡುವುದು ಬೇಡ ಎಂದು ತೀರ್ಮಾನಿಸಿ ಸಿಧು ಆಸೆಯಂತೆ ಅವರನ್ನು ಹೈಕಮಾಂಡ್ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತನ್ನ ವಿರುದ್ಧವೇ ಬಂಡಾಯ ಸಾರಿದ್ದ ಸಿಧುವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಮರಿಂದರ್ ಸಿಟ್ಟಾಗಿದ್ದರು. ಇದನ್ನೂ ಓದಿ: ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?

    ಈ ನಡುವೆ ಸಿಧು ಸಲಹೆಗಾರರಾಗಿದ್ದ ಮಾಲ್ವಿಂದರ್ ಸಿಂಗ್ ಕಾಶ್ಮೀರ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಅಮರಿಂದರ್ ಅವರನ್ನು ವಜಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ತನ್ನ ಆಪ್ತನನ್ನು ವಜಾ ಮಾಡಿದ ವಿಚಾರದಲ್ಲಿ ಸಿಟ್ಟಾಗಿದ್ದ ಸಿಧು ಅಮರಿಂದರ್ ಆಡಳಿತದ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತಲೇ ಇದ್ದರು.

    ಪಂಜಾಬ್‍ನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅಮರಿಂದರ್ ಸಿಂಗ್ ಅವರನ್ನು ಕೆಳಗಡೆ ಇಳಿಸಲೇ ಬೇಕು ಎಂದು ಸಿಧು ಬಣ ಹೈಕಮಾಂಡ್‍ಗೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತರಿಕ ಸಮೀಕ್ಷೆಯನ್ನು ಮಾಡಿತ್ತು ಎನ್ನಲಾಗುತ್ತಿದೆ. ಕೊನೆಗೆ ಹಲವು ನಾಯಕರ ಅಪಸ್ವರಕ್ಕೆ ಮಣಿದ ಕಾಂಗ್ರೆಸ್ ಬಿಜೆಪಿಯಂತೆ ಅಮರಿಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು.

    ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಪ್ರಿಯಾಂಕಾ ಗಾಂಧಿ ಸಿಧು ಪರವಾಗಿದ್ದಾರೆ. ಆಡಳಿತ ವಿರೋಧಿ ಅಲೆ, ಈ ಹಿಂದೆ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸದ ಪರಿಣಾಮ ಹೈಕಮಾಂಡ್ ಮಟ್ಟದಲ್ಲಿ ಅಮರಿಂದರ್ ಪರ ಬ್ಯಾಟ್ ಮಾಡುವ ನಾಯಕರಿಲ್ಲ. ಹೀಗಾಗಿ ಕೊನೆಗೆ ಅಮರಿಂದರ್ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದಾರೆ.

  • ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

    ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇದೀಗ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಮೂಡಿದ್ದು, ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರಗಳು ಕೇಳಿಬರುತ್ತಿದೆ.

    ಹೈಕಮಾಂಡ್ ಒತ್ತಡದ ಹಿನ್ನೆಲೆಯಲ್ಲಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು, ಪಕ್ಷದ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಪದೇ ಪದೇ ಅವಮಾನ ಆಗ್ತಿದೆ. ಇದನ್ನು ಅವಮಾನ ಎಂದೇ ಪರಿಗಣಿಸುತ್ತಿರುವೆ. ಬಹುಷಃ ಹೈಕಮಾಂಡ್‍ಗೆ ನನ್ನ ಮೇಲೆ ನಂಬಿಕೆ ಇಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಅವರಿಗೆ ಯಾರ ಮೇಲೆ ನಂಬಿಕೆ ಇದ್ಯೋ ಅವರು ಸಿಎಂ ಆಗ್ಲಿ. ನನ್ನ ಮುಂದೆ ಆಯ್ಕೆಗಳು ಮುಕ್ತವಾಗಿವೆ ಎಂದಿದ್ದಾರೆ. ಈ ಮೂಲಕ ಪಕ್ಷ ತೊರೆಯುವ ಸುಳಿವನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ನೀಡಿದ್ದಾರೆ.

    https://twitter.com/ANI/status/1439219430584508417

    ಪಂಜಾಬ್ ಕಾಂಗ್ರೆಸ್‍ನ ಬಹುತೇಕ ಶಾಸಕರು ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಒತ್ತಡ ಹೇರಿದ್ರು. ಬಳಿಕ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದರು. ಈ ಬೆನ್ನಲ್ಲೇ ಚಂಡೀಗಢದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದ್ದು, ಈ ನಡುವೆ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿದೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

    67 ವರ್ಷದ ಸುನಿಲ್ ಜಾಖರ್ ಪಂಜಾಬ್ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಸ್ಥರಾಗಿದ್ದರು. ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು 2019 ರಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಎದುರು ಪರಾಭವಗೊಂಡಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ಸುನಿಲ್ ಜಾಖರ್ ಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇವರ ಹೆಸರು ಕೂಡ ಸಿಎಂ ರೇಸ್‍ನಲ್ಲಿ ಮುಂಚೂಣಿಯಲ್ಲಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ಪಂಚಾಬ್ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ. ರಾಜಸ್ಥಾನದಲ್ಲೂ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಶೀಘ್ರವೇ ಕಾಂಗ್ರೆಸ್‍ಗೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್