Tag: punjab

  • ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನಲ್ಲಿ ಬಿಕ್ಕಟ್ಟು ತಾರಕಕ್ಕೆ ಏರಿದೆ. ಮೊದಲು ಅಮರಿಂದರ್ Vs ನವಜೋತ್ ಸಿಂಗ್ ಸಿಧು ಇದ್ದ ಸಮರ, ಈಗ ಸಿಧು Vs ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಛನ್ನಿ ಎಂಬಂತಾಗಿದೆ.

    ಇವರಿಬ್ಬರ ನಡುವಿನ ಪ್ರತಿಷ್ಠೆಯ ಸಮರದಲ್ಲಿ ಕಾಂಗ್ರೆಸ್ ಬಡವಾಗುತ್ತಿದ್ದು, ಚರಣ್‍ಜಿತ್ ಸಿಂಗ್ ಛನ್ನಿ ನೇತೃತ್ವದ ಸರ್ಕಾರಕ್ಕೆ ನವಜೋತ್ ಸಿಂಗ್ ಸಿಧು ಕೆಲಸ ಮಾಡಲು ಬಿಡುತ್ತಿಲ್ಲ ಪದೇ ಪದೇ ಅಡ್ಡಿಯುಂಟು ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಎಪಿಎಸ್ ಡಿಯೋಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಿಧು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಕಿಡಿಕಾರಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಹೊತ್ತಿಗೆ ಬಲಹೀನ ಮಾಡಲು ಕೆಲ ರಾಜಕೀಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಡಿಯೋಲ್ ಆರೋಪ ಮಾಡಿದ್ದಾರೆ. ಈ ನಡುವೆ ನಾನು ಬಡವ ಆಗಿರಬಹುದು. ಬಡ ಕುಟುಂಬದಲ್ಲಿ ಜನಿಸಿದವನು ಆಗಿರಬಹುದು. ಆದರೆ ಬಲಹೀನನಲ್ಲ. ಆದಷ್ಟು ಬೇಗನೇ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಛನ್ನಿ ಹೇಳಿಕೆ ನೀಡುವ ಮೂಲಕ ಸಿಧುಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

  • ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ಚಂಡೀಗಢ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದ ಬಳಿಕ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಹಿರಂಗಗೊಳಿಸುವುದಾಗಿ ಅವರು ಹೇಳಿದ್ದಾರೆ.

    ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಇಂದು ಅಮರೀಂದರ್ ಸಿಂಗ್ ಚಂಡಿಗಢದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಜೊತೆಗೆ ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

    ಅಕಾಲಿದಳ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದ ಅವರು, ಚುನಾವಣಾ ಹೊಸ್ತಿಲಲ್ಲಿ ಬಹಳಷ್ಟು ಕಾಂಗ್ರೆಸ್ ನಾಯಕರು ತಮ್ಮ ಪಾರ್ಟಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

    ಇದೇ ವೇಳೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಚಾಟಿ ಬೀಸಿದ ಅವರು, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಗುತ್ತಿದೆ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಆದರೆ ಇಂತಹ ಕೀಳು ಮಟ್ಟದ ರಾಜಕೀಯದಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್

    ಅಮರೀಂದರ್ ಸಿಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನವಜೋತ್ ಸಿಧು, ಕಾಂಗ್ರೆಸ್‍ನ 78 ಶಾಸಕರು ಪಕ್ಷದ ಜೊತೆಗಿದ್ದಾರೆ. ನೀವು ಪಂಜಾಬ್‍ನ ನ್ಯಾಯ ಮತ್ತು ಅಭಿವೃದ್ಧಿಯನ್ನು ತಡೆಯುವ ನಕಾರಾತ್ಮಕ ಶಕ್ತಿಯಾಗಿದ್ದಿರಿ ಎಂದು ಟೀಕಿಸಿದ್ದಾರೆ. ಅಲ್ಲದೆ ನಾನು ಜನರ ಪರ ಧ್ವನಿ ಎತ್ತುತ್ತಿದ್ದಂತೆ, ಸತ್ಯವನ್ನು ಹೇಳುತ್ತಿದ್ದಂತೆ ನೀವು ನನ್ನನ್ನು ಮುಗಿಸಲು ಬಯಸಿದ್ದೀರಿ, ಪಂಜಾಬ್‍ನ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಂಡಿದ್ದಕ್ಕಾಗಿ ಪಂಜಾಬ್‍ನ ಜನರು ಮತ್ತೆ ನಿಮ್ಮನ್ನು ಶಿಕ್ಷಿಸಲು ಕಾಯುತ್ತಿದ್ದಾರೆ ಎಂದು ಸಿಧು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?

  • ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ

    ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ

    ಚಂಡೀಗಢ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿದು ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದ ಕ್ಯಾ.ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.

    ಮುಂದಿನ ಚುನಾವಣೆಯ ವೇಳೆ ಬಿಜೆಪಿ ಜೊತೆ ಮೈತ್ರಿಯ ಸುಳಿವನ್ನು ಅಮರೀಂದರ್‌ ನೀಡಿದ್ದಾರೆ. ಕೃಷಿ ಕಾಯ್ದೆಯನ್ನು ರದ್ದು ಪಡಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಅಮರೀಂದರ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿ ರವೀನ್ ಥುಕ್ರಲ್ ಅವರು ಸರಣಿ ಟ್ವೀಟ್‌ ಮಾಡಿ ಕ್ಯಾಪ್ಟನ್‌ ಪರವಾಗಿ ಹೇಳಿಕೆ ನೀಡಿ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಪಂಜಾಬಿನ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ಶೀಘ್ರವೇ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ  ಘೋಷಿಸುತ್ತೇನೆ. ಇದನ್ನೂ ಓದಿ: ಶೇ.40 ರಷ್ಟು ಟಿಕೆಟ್ ಮಹಿಳೆಯರಿಗೆ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

    ರೈತರ ಸಮಸ್ಯೆಯನ್ನು ಪರಿಹರಿಸಿದರೆ 2022 ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ನಮ್ಮ ಮನಸ್ಥತಿಗೆ ಸರಿ ಹೊಂದುವ ಪಕ್ಷಗಳ ಜೊತೆ ಮೈತ್ರಿ ನಡೆಸಲು ಚಿಂತನೆ ನಡೆದಿದೆ.

    ನನ್ನ ಜನರು ಮತ್ತು ನನ್ನ ರಾಜ್ಯದ ಭವಿಷ್ಯವನ್ನು ಭದ್ರಪಡೆಯುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ಪಂಜಾಬ್‌ಗೆ ರಕ್ಷಣೆ ಬೇಕು. ಶಾಂತಿ ಮತ್ತು ಭದ್ರತೆಗಾಗಿ ಪಂಜಾಬ್‌ ಜನರಿಗೆ ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.

    ಸೆಪ್ಟೆಂಬರ್‌ ಕೊನೆಯಲ್ಲಿ ಅಮರೀಂದರ್‌ ಸಿಂಗ್‌ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಈಗ ಪಕ್ಷ ಸ್ಥಾಪನೆ ಮಾಡಲು ಅಮರೀಂದರ್‌ ಮುಂದಾಗಿದ್ದು ಒಂದು ವೇಳೆ ಮೈತ್ರಿ ಯಶಸ್ವಿಯಾದರೆ ಬಿಜೆಪಿ ಪಂಜಾಬ್‌ನಲ್ಲಿ ಮತ್ತಷ್ಟು ಬಾಗಿಲು ತೆರೆದಂತಾಗುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಪಂಜಾಬ್ ವಿರುದ್ಧ ಆರ್​ಸಿಬಿಗೆ 6 ರನ್ ಜಯ – ಪ್ಲೇ ಆಫ್‍ಗೆ ಎಂಟ್ರಿ

    ಪಂಜಾಬ್ ವಿರುದ್ಧ ಆರ್​ಸಿಬಿಗೆ 6 ರನ್ ಜಯ – ಪ್ಲೇ ಆಫ್‍ಗೆ ಎಂಟ್ರಿ

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‍ಗಳ ಉತ್ತಮ ನಿರ್ವಹಣೆಯ ಫಲವಾಗಿ ಪಂಜಾಬ್ ವಿರುದ್ಧ 6 ರನ್‍ಗಳ ಜಯ ದಾಖಲಿಸಿದೆ. ಈ ಮೂಲಕ ಆರ್​ಸಿಬಿ  ಮೂರನೇ ತಂಡವಾಗಿ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟಿದೆ.

    ಗೆದ್ದಿದ್ದು ಹೇಗೆ?
    ಕೊನೆಯ 12 ಎಸೆತಗಳಲ್ಲಿ ಪಂಜಾಬ್‌ ಗೆಲ್ಲಲು 27 ರನ್‌ ಬೇಕಿತ್ತು. ಸಿರಾಜ್‌ 19ನೇ ಓವರಿನಲ್ಲಿ 8 ರನ್‌ ಮಾತ್ರ ನೀಡಿದರು. ಕೊನೆಯ 6 ಎಸೆತದಲ್ಲಿ 19 ರನ್‌ ಬೇಕಿತ್ತು. ಈ ಓವರಿನಲ್ಲಿ ಹೆನ್ರಿಕ್ಸ್‌ ಸಿಕ್ಸ್‌ ಹೊಡೆದರೂ ಪಂಜಾಬ್‌ ಕೇವಲ 12 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಆರ್‌ಸಿಬಿ ಮೂರನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿತು.

    ಕನ್ನಡಿಗರ ಬೊಂಬಾಟ್ ಬ್ಯಾಟಿಂಗ್
    165ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಪಂಜಾಬ್ ತಂಡಕ್ಕೆ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 91ರನ್(66 ಎಸೆತ) ಜೊತೆಯಾಟವಾಡಿದರು. ಆರಂಭದಲ್ಲಿ ಉತ್ತಮ ಆಡಿದ ಪಂಜಾಬ್ ತಂಡ ಕೊನೆಯಲ್ಲಿ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಒದ್ದಾಡಿತು. ಪಂಜಾಬ್ ಪರ ರಾಹುಲ್ 39ರನ್(35 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಅಗರ್ವಾಲ್ 57ರನ್(42 ಎಸೆತ 6 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದ ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಗೆಲುವಿಗಾಗಿ ಹೋರಾಟ ನಡೆಸಿದರು ಕೂಡ ಗೆಲುವು ಪಡೆಯಲು ಆರ್​ಸಿಬಿ ಬೌಲರ್‍ ಗಳು ಅಡ್ಡಿಯಾದರೂ ಅಂತಿಮವಾಗಿ 20 ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158ರನ್ ಗಳಿಸಿ 7ರನ್‍ಗಳ ಸೋಲುಕಂಡಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆಯಿತು. ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 68ರನ್(58 ಎಸೆತ) ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ 25ರನ್(24 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಪಡಿಕ್ಕಲ್ 40ರನ್(38 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.

    ಎಬಿಡಿ, ಮ್ಯಾಕ್ಸಿ ಸಿಡಿಲಬ್ಬರ:
    ನಂತರ ಜೊತೆಯಾದ  ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ಎಬಿಡಿ ವಿಲಿಯರ್ಸ್ ಬೌಂಡರಿ ಸಿಕ್ಸರ್‍ ಗಳ ಮೂಲಕ ಅಬ್ಬರದ ಆಟವಾಡಿದರು. ಈ ಜೋಡಿ 4ನೇ ವಿಕೆಟ್‍ಗೆ 73ರನ್(39 ಎಸೆತ)ಗಳ ಜೊತೆಯಾಟವಾಡಿತು. ಎಬಿಡಿ 23ರನ್(18 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ರನ್‍ಔಟ್ ಆದರೆ, ಮಾಕ್ಸಿ 57ರನ್(33 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 164ರನ್ ಗಳಿಸಿತು.

    ಪಂಜಾಬ್ ಪರ ಮೊಯಿಸ್ ಹೆನ್ರಿಕ್ಸ್ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಕಿತ್ತು ಮಿಂಚಿದರು.

     

  • ಅಧಿಕಾರ ಇರ್ಲಿ ಇಲ್ಲದೇ ಇರಲಿ ನಾನು ರಾಹುಲ್, ಪ್ರಿಯಾಂಕಾ ಜೊತೆ ಇರುತ್ತೇನೆ: ಸಿಧು

    ಅಧಿಕಾರ ಇರ್ಲಿ ಇಲ್ಲದೇ ಇರಲಿ ನಾನು ರಾಹುಲ್, ಪ್ರಿಯಾಂಕಾ ಜೊತೆ ಇರುತ್ತೇನೆ: ಸಿಧು

    ಚಂಡೀಗಢ: ಅಧಿಕಾರ ಇರಲಿ ಇಲ್ಲದೇ ಇರಲಿ ನಾನು ಮಾತ್ರ ಯಾವತ್ತು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಇರುತ್ತೇನೆ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಮಧ್ಯೆ ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಕೆಲದಿನಗಳ ಹಿಂದೆ ಸಿಧು ರಾಜೀನಾಮೆ ನೀಡಿದ್ದರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಕೂಡ ಪಕ್ಷದಲ್ಲಿ ಮುಂದುವರಿಯುದಾಗಿ ತಿಳಿಸಿದ್ದರು. ಇದೀಗ ಸಿಧು ಇಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವೇದ ವಾಕ್ಯಗಳನ್ನು ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

    ನನ್ನೊಂದಿಗೆ ಅಧಿಕಾರ ಇದ್ದರೂ ಇಲ್ಲದಿದ್ದರೂ ನಾನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಇರುತ್ತೇನೆ. ಕೆಲ ದುಷ್ಟ ಶಕ್ತಿಗಳು ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದೆ ಆದರೆ ನನ್ನೊಂದಿಗಿರುವ ಪಂಜಾಬ್ ಜನತೆಯ ಆರ್ಶೀವಾದದಿಂದ ಅದನ್ನು ಹಿಮ್ಮೆಟ್ಟಿಸುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
    ಇದನ್ನೂ ಓದಿ: ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?

  • ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?

    ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?

    ಚಂಡೀಗಢ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ತೀವ್ರಗೊಂಡಿದೆ. ತಮ್ಮನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸತ್ತು ಇತ್ತೀಚೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ನಾನು ಕಾಂಗ್ರೆಸ್‍ನಲ್ಲಿ ಉಳಿಯುವುದಿಲ್ಲ, ಬಿಜೆಪಿಗೆ ಸೇರುವುದಿಲ್ಲ ಎನ್ನುವ ಮೂಲಕ ಹೊಸ ಪಕ್ಷ ಸ್ಥಾಪನೆಯತ್ತ ದೃಷ್ಟಿ ನೆಟ್ಟಿದ್ದಾರೆ ಎಂದು ಆಪ್ತಮೂಲಗಳಿಂದ ವರದಿಯಾಗಿದೆ.

    ಅಮರೀಂದರ್ ಸಿಂಗ್ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವ ಕ್ಷಣಗಳು ಹತ್ತಿರವಾಗುತ್ತಿದೆ. ಈ ನಡುವೆ ಕಾಂಗ್ರೆಸ್‍ನಲ್ಲಿ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಮರೀಂದರ್ ಸಿಂಗ್, ಟ್ವಿಟ್ಟರ್ ಅಕೌಂಟ್‍ನಿಂದ ಕಾಂಗ್ರೆಸ್‍ಮ್ಯಾನ್ ಎಂಬ ಪದನಾಮವನ್ನು ತೆಗೆದುಹಾಕಿದ್ದಾರೆ. ಯಾವುದೇ ಕ್ಷಣದಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಸೋನಿಯಾ ಗಾಂಧಿಗೆ ಕಳುಹಿಸಲು ಸನ್ನದ್ಧರಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಮೂಲಕ ಬಿಜೆಪಿ ಸೇರದೇ ಆಯ್ಕೆಗಳನ್ನು ಮುಕ್ತವಾಗಿರಿಸಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ?

    79 ವರ್ಷದ ಹಿರಿಯ ನೇತಾರ ಅಮರೀಂದರ್ ಸಿಂಗ್ ಶೀಘ್ರವೇ ಹೊಸ ಪಕ್ಷ ಸ್ಥಾಪಿಸುವ ಸಂಭವವೂ ಇದೆ ಎಂದು ಆಪ್ತಮೂಲಗಳಿಂದ ಕೇಳಿಬರುತ್ತಿದೆ. ಈ ಮಧ್ಯೆ ಯುದ್ಧಕಾಲೆ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಇವತ್ತು ಫಿಲ್ಡಿಗೆ ಇಳಿದಿರುವ ರಾಹುಲ್ ಗಾಂಧಿ ಸಭೆ ಮೇಲೆ ಸಭೆ ನಡೆಸಿದ್ದಾರೆ. ಕಮಲ್‍ನಾಥ್, ಅಂಬಿಕಾ ಸೋನಿ ಮೂಲಕ ಸಂಧಾನ ಯತ್ನ ನಡೆಸಿದ್ದಾರೆ. ಆದರೆ ಇದು ಫಲ ಕೊಟ್ಟಿಲ್ಲ. ಇನ್ನೊಂದೆಡೆ, ಅಸಮಾಧಾನಿತ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಛನ್ನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಮಧ್ಯೆ ಸಂಧಾನ ಸೂತ್ರ ಸಿದ್ಧವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ಸೇರಲ್ಲ, ಕಾಂಗ್ರೆಸ್‍ನಲ್ಲಿ ಇರಲ್ಲ: ಕ್ಯಾ.ಅಮರೀಂದರ್ ಸಿಂಗ್

    ಅಮಿತ್  ಶಾ ಭೇಟಿ:
    ನಿನ್ನೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಮರೀಂದರ್ ಸಿಂಗ್ ಸುಧೀರ್ಘ 1ಗಂಟೆಗಳ ಮಾತುಕತೆ ನಡೆಸಿದ್ದರು. ಇದನ್ನು ಗಮನಿಸುತ್ತಿದ್ದಂತೆ ಅವರು ಬಿಜೆಪಿ ಸೇರುವುದು ಖಚಿತ ಎಂದು ವದಂತಿ ಹರಡಿತ್ತು.

  • ಬಿಜೆಪಿ ಸೇರಲ್ಲ, ಕಾಂಗ್ರೆಸ್‍ನಲ್ಲಿ ಇರಲ್ಲ: ಕ್ಯಾ.ಅಮರೀಂದರ್ ಸಿಂಗ್

    ಬಿಜೆಪಿ ಸೇರಲ್ಲ, ಕಾಂಗ್ರೆಸ್‍ನಲ್ಲಿ ಇರಲ್ಲ: ಕ್ಯಾ.ಅಮರೀಂದರ್ ಸಿಂಗ್

    ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಕ್ಯಾ. ಅಮರೀಂದರ್ ಸಿಂಗ್ ಅವರ ಮುಂದಿನ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಮರೀಂದರ್ ಸಿಂಗ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದು, ಇದೀಗ ಸ್ವತಃ ಮಾಜಿ ಸಿಎಂ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅಮರೀಂದರ್ ಸಿಂಗ್, ನಾನು ಬಿಜೆಪಿಗೆ ಸೇರಲ್ಲ, ಆದರೆ ಕಾಂಗ್ರೆಸ್ ನಲ್ಲಿಯೂ ಇರಲ್ಲ. ಸದ್ಯ ಪಕ್ಷದಲ್ಲಿಯೇ ಇದ್ದೀನಿ. ಆದರೆ ಇದೇ ಪಕ್ಷದಲ್ಲಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ?

    ಪಕ್ಷದಲ್ಲಿನ ಒಳಜಗಳದಿಂದಾಗಿ ಸೆಪ್ಟೆಂಬರ್ 18ರಂದು ಅಮರೀಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಚರಣ್‍ಜಿತ್ ಸಿಂಗ್ ಛನ್ನಿ ನೂತನ ಸಿಎಂ ಆಗಿ ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ.

    ಕೆಲದಿನಗಳಿಂದ ಅಮರೀಂದರ್ ಸಿಂಗ್ ಪಂಜಾಬ್ ಕಾಂಗ್ರೆಸ್‍ನಿಂದ ಹೊರ ಬಂದು ಬಿಜೆಪಿ ಪಕ್ಷ ಸೇರಲು ಬಯಸಿದ್ದಾರೆ ಎಂಬ ವದಂತಿ ಹರಡಿತ್ತು. ಈ ವದಂತಿಗೆ ಪುಷ್ಠಿ ನೀಡುವಂತೆ ನಿನ್ನೆ ಗೃಹ ಸಚಿವ ಅಮಿತ್ ಶಾ ಅವರನ್ನು ಅಮರೀಂದರ್ ಸಿಂಗ್ ಭೇಟಿ ಮಾಡಿದ್ದು, ತೀವ್ರ ಕುತೂಹಲ ಹುಟ್ಟಿಸುವಂತೆ ಮಾಡಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಇದೀಗ ಅಮರೀಂದರ್ ಸಿಂಗ್ ಅವರೇ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

  • ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ನವದೆಹಲಿ: ಪಂಜಾಬ್ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲಿ ಆಮ್ ಅದ್ಮಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಜೋರಾಗುತ್ತಿದೆ. ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ರಾಜಕೀಯ ಪಕ್ಷಗಳಲ್ಲಾಗುತ್ತಿರುವ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

    ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬಳಿಕ ಆಮ್ ಅದ್ಮಿ ಸೇರ್ಪಡೆಯಾಗಬಹುದು ಎಂದು ಪಂಜಾಬ್ ನಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎನ್ನುವ ಊಹೆಗಳು ಕೇಳಿ ಬಂದಿವೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

    ಈ ಚರ್ಚೆಗಳ ಬೆನ್ನಲ್ಲೇ ಪಂಜಾಬ್ ಗೆ ಭೇಟಿ ನೀಡಿದ ದೆಹಲಿಯ ಸಿಎಂ ಮತ್ತು ಆಮ್ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ನವಜೋತ್ ಸಿಂಗ್ ಸಿಧು ನಮ್ಮ ಸಂಪರ್ಕದಲ್ಲಿ ಇಲ್ಲ. ಇದೊಂದು ಊಹಾತ್ಮಕ ಪಕ್ಷ ಎಂದು ಪ್ರತಿಕ್ರಿಯಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಲೋಕಸಭಾ ಸದಸ್ಯ ಭಗವಂತ್ ಮನ್ ನನ್ನ ಕಿರಿಯ ಸಹೋದರ. ಅವರು ಪಂಜಾಬ್ ಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈ ಹೇಳಿಕೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದು, ಭಗವಂತ್ ಮನ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  • ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ?

    ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ?

    ಚಂಡೀಗಢ: ಪಂಜಾಬ್‍ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಧೀರ್ಘ 1ಗಂಟೆಗಳ ಮಾತುಕತೆ ನಡೆಸಿದ್ದಾರೆ.


    ಪಂಜಾಬ್ ಕಾಂಗ್ರೆಸ್‍ನಲ್ಲಿ ಮಹತ್ವದ ಬೆಳವಣಿಗೆಯ ನಡುವೆ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಚರಣ್‍ಜಿತ್ ಸಿಂಗ್ ಛನ್ನಿ ನೂತನ ಸಿಎಂ ಆಗಿ ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ನಡುವೆ ಕೆಲದಿನಗಳಿಂದ ಅಮರೀಂದರ್ ಸಿಂಗ್ ಪಂಜಾಬ್ ಕಾಂಗ್ರೆಸ್‍ನಿಂದ ಹೊರ ಬಂದು ಬಿಜೆಪಿ ಪಕ್ಷ ಸೇರಲು ಬಯಸಿದ್ದಾರೆ ಎಂಬ ವದಂತಿ ಹರಡಿತ್ತು. ಇದೀಗ ಈ ವದಂತಿಗೆ ಪುಷ್ಠಿ ನೀಡುವಂತೆ, ಅಮಿತ್ ಶಾ ಅವರನ್ನು ಭೇಟಿ ಆಗಿರುವುದು ಕೂತುಹಲ ಮೂಡಿಸಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

    ಪಂಜಾಬ್ ಕಾಂಗ್ರೆಸ್‍ನಲ್ಲಿ ಕೆಲದಿನಗಳಿಂದ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆನ್ನಲ್ಲೇ ಹಲವು ಶಾಸಕರು ಸಿಧು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ಬಳಿಕ ಮೊದಲ ಬಾರಿಗೆ ಮೌನಮುರಿದ ಸಿಧು, ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ. ಹೈಕಮಾಂಡ್ ಹೆದರಿಸುವ ಪ್ರಯತ್ನ ಮಾಡಿಲ್ಲ. ಯಾವುದೇ ರಾಜೀ ಇಲ್ಲದೇ ಪಂಜಾಬ್ ಹಿತಾಸಕ್ತಿಗಾಗಿ ಕೆಲಸ ಮಾಡ್ತೇನೆ ಎಂದಿದ್ದಾರೆ.

    ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಛನ್ನಿ ಈ ಬಗ್ಗೆ ಮಾತನಾಡಿ, ಸಿಧು ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಪಕ್ಷದಲ್ಲಿ ಅವರೇ ಪರಮೋಚ್ಛ. ಶೀಘ್ರವೇ ಎಲ್ಲ ಬಿಕ್ಕಟ್ಟು ಬಗೆಹರಿಯಲಿದೆ ಎಂದರು. ಈ ಬೆಳವಣಿಗೆಗಳ ನಡುವೆ ಎಎಪಿ ಸಕ್ರಿಯವಾಗಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯನ್ನು ಎದುರಿಸಲು ಸಜ್ಜುಗೊಳ್ಳುತ್ತಿದೆ. ನಾಳೆ ಪಂಜಾಬ್ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ: ಕನ್ನಯ್ಯ ಕುಮಾರ್

  • ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಚಂಡೀಗಢ: 2022ರ ಚುನಾಣೆ ಹತ್ತಿರವಾದ ಬೆನ್ನಲ್ಲೇ ಪಂಜಾಬ್ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ. ಇಂದು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೆ ನಾಲ್ವರು ನಾಯಕರು ರಾಜೀನಾಮೆ ನೀಡಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಜಿಯಾ ಸುಲ್ತಾನಾ, ಶಾಸಕ ಪರಗಟ ಸಿಂಗ್, ಪಂಜಾಬ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಗೌತಮ್ ಸೇಠ್ (ತರಬೇತಿ ಮೇಲ್ವಿಚಾರಣೆ), ಕಜಾಂಚಿ ಗುಲ್ಜರ್ ಇಂದರ್ ಚಾಹಲ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:  ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಸಿಧು ಅವರ ರಾಜೀನಾಮೆಯನ್ನು ಕಾಂಗ್ರೆಸ್ ವರಿಷ್ಠರು ಸ್ವೀಕರಿಸಿಲ್ಲ. ರಾಜ್ಯದ ಮಟ್ಟದಲ್ಲಿಯೇ ವಿಚಾರ ಬಗೆಹರಿಸಿಕೊಳ್ಳುವಂತೆ ವರಿಷ್ಠರು ಪಕ್ಷದ ಮುಖಂಡರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

    ನವಜೋತ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಪಂಜಾಬ್ ಕಾಂಗ್ರೆಸ್‍ನಲ್ಲಿ ನಡುಕ ಶುರುವಾಗಿದೆ.