Tag: punjab

  • ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

    ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

    ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಭವಿಷ್ಯ ಮಾ.10 ರಂದು ನಿಜವಾದರೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ದಾಖಲೆ ಸೃಷ್ಟಿಸಲಿದೆ.

    ಪಂಜಾಬ್‌ನಲ್ಲಿ ಆಪ್‌ ಭರ್ಜರಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ಮೂಲಕ ದೆಹಲಿ ಬಿಟ್ಟು ಮತ್ತೊಂದು ರಾಜ್ಯವನ್ನು ಆಪ್‌ ಹಿಡಿದಂತಾಗಿದೆ. ಗೋವಾ, ಉತ್ತರಾಖಂಡ್‌, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

    ಉತ್ತರ ಪ್ರದೇಶ:
    ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಅದರಲ್ಲೂ ಉತ್ತರ ಪ್ರದೇಶದ ಎಲೆಕ್ಷನ್ ರಿಸಲ್ಟ್, ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‍ಗೆ ಫಲಕೊಟ್ಟಿಲ್ಲ. ಬಿಎಸ್‍ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, 300ಕ್ಕಿಂತ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ: ಅಖಿಲೇಶ್ ಯಾದವ್

    ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
    ಇಂಡಿಯಾ ಟುಡೇ:
    ಬಿಜೆಪಿ 288-326, ಎಸ್‍ಪಿ+ 71-101, ಬಿಎಸ್‌ಪಿ 03-09, ಕಾಂಗ್ರೆಸ್‌ 01-03 ಇತರರು 2-3

    ರಿಪಬ್ಲಿಕ್:
    ಬಿಜೆಪಿ 262-277, ಎಸ್‌ಪಿ + 119-134, ಬಿಎಸ್‌ಪಿ 7-15, ಕಾಂಗ್ರೆಸ್‌ 3-08, ಇತರರು 00

    ಟೈಮ್ಸ್ ನೌ:
    ಬಿಜಪಿ 225, ಎಸ್‌ಪಿ 151, ಬಿಎಸ್‌ಪಿ 14, ಕಾಂಗ್ರೆಸ್‌ 04, ಇತರರು 00

    ಟುಡೇಸ್‌ ಚಾಣಕ್ಯ
    ಬಿಜೆಪಿ 294, ಎಸ್‌ಪಿ 105, ಬಿಎಸ್‌ಪಿ 2, ಕಾಂಗ್ರೆಸ್‌ 1, ಇತರರು 1

    ಜನ್‍ಕೀ ಬಾತ್:
    ಬಿಜೆಪಿ 222-260, ಎಸ್‌ಪಿ 135-165, ಬಿಎಸ್‌ಪಿ 04-09, ಕಾಂಗ್ರೆಸ್‌ 01-03, ಇತರರು 3-4

    2017 ಫಲಿತಾಂಶ:
    ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು- 18

    ಪಂಜಾಬ್:
    ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಅಂದ್ರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‍ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಎಲ್ಲಾ ಎಕ್ಸಿಟ್ ಪೊಲ್‍ಗಳು ಎಎಪಿಗೆ ಗದ್ದುಗೆ ಏರಲಿವೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದಕ್ಕೂ ಬಿಜೆಪಿಗೆ ಇಲ್ಲಿ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

    ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
    ಇಂಡಿಯಾ ಟುಡೇ:
    ಆಪ್‌ 76-90, ಕಾಂಗ್ರೆಸ್‌ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01

    ರಿಪಬ್ಲಿಕ್‌:
    ಆಪ್‌ 62-70, ಕಾಂಗ್ರೆಸ್‌ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3

    ಟೈಮ್ಸ್‌ ನೌ:
    ಆಪ್‌ 70, ಕಾಂಗ್ರೆಸ್‌ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1

    ಟುಡೇಸ್ ಚಾಣಕ್ಯ
    ಆಪ್‌ 100, ಕಾಂಗ್ರೆಸ್‌ 10, ಅಕಾಲಿ ದಳ 06, ಬಿಜೆಪಿ 01, ಇತರರು 00

    ಜನ ಕೀ ಬಾತ್‌
    ಆಪ್‌ 72, ಕಾಂಗ್ರೆಸ್‌ 24, ಅಕಾಲಿ ದಳ 15, ಬಿಜೆಪಿ + 05, ಇತರರು 01

    2017ರ ಫಲಿತಾಂಶ:
    ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ  18, ಇತರರು 02

    ಗೋವಾ:
    ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು.

    ಸ್ಥಳೀಯ ನಾಯಕರು ಇಲ್ಲದೇ ಹೋದ್ರೂ, ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ.. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ.. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಈ ಎಕ್ಸಿಟ್ ಪೋಲ್‍ನಲ್ಲಿ ಸಿಕ್ಕಿವೆ.  ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್

    ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
    ಇಂಡಿಯಾ ಟುಡೇ
    ಬಿಜೆಪಿ 14-18, ಕಾಂಗ್ರೆಸ್‌+ 15-20, ಆಪ್‌ – 0, ಟಿಎಂಸಿ 2-5, ಇತರರು 0-4

    ರಿಪಬ್ಲಿಕ್‌
    ಬಿಜೆಪಿ 13-17, ಕಾಂಗ್ರೆಸ್‌+ 13-17, ಆಪ್‌ 2-6, ಟಿಎಂಸಿ 2-4, ಇತರರು 0-4

    ಟೈಮ್ಸ್‌ ನೌ
    ಬಿಜೆಪಿ 14, ಕಾಂಗ್ರೆಸ್‌+ 16, ಆಪ್‌ 0, ಟಿಎಂಸಿ 0, ಇತರರು 10

    ಜನ್‍ ಕೀ ಬಾತ್
    ಬಿಜೆಪಿ 14-19, ಕಾಂಗ್ರೆಸ್+‌ 13-19, ಆಪ್‌ 2-1, ಟಿಎಂಸಿ 5-2 ಇತರರು 1-3

    2017 ಫಲಿತಾಂಶ
    ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10

    ಉತ್ತರಾಖಂಡ
    ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಬಿಜೆಪಿ ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆಯಿದೆ.

    ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
    ಇಂಡಿಯಾ ಟುಡೇ
    ಬಿಜೆಪಿ + 41, ಕಾಂಗ್ರೆಸ್‌ 25, ಆಪ್ 0, ಬಿಎಸ್‌ಪಿ 3, ಇತರರು 4

    ರಿಪಬ್ಲಿಕ್‌
    ಬಿಜೆಪಿ+ 35-39, ಕಾಂಗ್ರೆಸ್‌ 28-24, ಆಪ್‌ 0-3, ಬಿಎಸ್‌ಪಿ 0, ಇತರರು 0

    ಟೈಮ್ಸ್‌ ನೌ
    ಬಿಜೆಪಿ+ 37, ಕಾಂಗ್ರೆಸ್‌ 31, ಆಪ್‌ 01, ಬಿಎಸ್‌ಪಿ, ಇತರರು 0

    ಟುಡೇಸ್‌ ಚಾಣಕ್ಯ
    ಬಿಜೆಪಿ 43, ಕಾಂಗ್ರೆಸ್‌ 24, ಇತರರು 3

    ಜನ ಕೀ ಬಾತ್‌
    ಬಿಜೆಪಿ 32 -41, ಕಾಂಗ್ರೆಸ್‌ 27-35, ಆಪ್‌ 0-1, ಇತರರು 0

    ಒಟ್ಟು ಸ್ಥಾನ 70 ಬಹುಮತಕ್ಕೆ 36
    2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2

    ಮಣಿಪುರ
    ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದಿವೆ

    ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
    ಇಂಡಿಯಾ ಟುಡೇ
    ಬಿಜೆಪಿ 33-43, ಕಾಂಗ್ರೆಸ್‌ 4-8, ಎನ್‌ಪಿಎಫ್‌ 0, ಎನ್‌ಪಿಪಿ 4-8, ಇತರರು 6-15

    ರಿಪಬ್ಲಿಕ್‌
    ಬಿಜೆಪಿ 27-31, ಕಾಂಗ್ರೆಸ್‌ 11-17, ಎನ್‌ಪಿಎಫ್‌ 6-10, ಎನ್‌ಪಿಪಿ 2-6, ಇತರರು 3-7

    ಟೈಮ್ಸ್‌ ನೌ
    ಬಿಜೆಪಿ 32-38, ಕಾಂಗ್ರೆಸ್‌ 12-17, ಎನ್‌ಪಿಎಫ್‌ 3-5, ಎನ್‌ಪಿಪಿ 2-5, ಇತರರು 0

    ಜನಕೀ ಬಾತ್‌
    ಬಿಜೆಪಿ 23-28, ಕಾಂಗ್ರೆಸ್‌ 14-10, ಎನ್‌ಪಿಎಫ್‌ 8-5, ಎನ್‌ಪಿಪಿ 7-8, ಇತರರು 0

    2017ರ ಫಲಿತಾಂಶ
    ಬಿಜೆಪಿ 21, ಕಾಂಗ್ರೆಸ್ 28, ಇತರರು 11

  • EXIT POLL 2022: ಪಂಚರಾಜ್ಯಗಳ ಬಗ್ಗೆ ಚಾಣಕ್ಯ ಫಲಿತಾಂಶ ಏನು?

    EXIT POLL 2022: ಪಂಚರಾಜ್ಯಗಳ ಬಗ್ಗೆ ಚಾಣಕ್ಯ ಫಲಿತಾಂಶ ಏನು?

    ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿವೆ. ಚುನಾವಣೆಗೆ ಸಂಬಂಧಿಸಿದಂತೆ ಟುಡೇಸ್‌ ಚಾಣಕ್ಯ (Today’s Chanakya) ಸಮೀಕ್ಷೆ ಫಲಿತಾಂಶ ಹೀಗಿದೆ.

    ಉತ್ತರ ಪ್ರದೇಶ: ಟುಡೇಸ್‌ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ 294 ± 19, ಎಸ್‌ಪಿ 105 ± 19, ಬಿಎಸ್‌ಪಿ 2 ± 2, ಕಾಂಗ್ರೆಸ್‌ 1 ± 1, ಇತರೆ 1 ± 1 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.

    ಪಂಜಾಬ್‌: ರಾಜ್ಯದಲ್ಲಿ ಎಎಪಿ 100 ± 11, ಕಾಂಗ್ರೆಸ್‌ 10 ± 7, ಎಸ್‌ಎಡಿ 6 ± 5, ಬಿಜೆಪಿ 1 ± 1, ಇತರೆ 0 + 1 ಸ್ಥಾನಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

    ಉತ್ತರಾಖಂಡ: ಇಲ್ಲಿ ಬಿಜೆಪಿ 43 ± 7, ಕಾಂಗ್ರೆಸ್‌ 24 ± 7, ಇತರೆ 3 ± 3 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ವಿವರಿಸಿದೆ.

  • ಪಂಚರಾಜ್ಯ ಚುನಾವಣೆ Exit Pollನಲ್ಲಿ ಯಾರು ಮೇಲುಗೈ..?

    ಪಂಚರಾಜ್ಯ ಚುನಾವಣೆ Exit Pollನಲ್ಲಿ ಯಾರು ಮೇಲುಗೈ..?

    ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಐದು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದು, ಯಾರು ಅಧಿಕಾರಕ್ಕೆ ಬರಬಹುದೆಂಬ ಕುತೂಹಲ ಮನೆ ಮಾಡಿದೆ. ಸುದ್ದಿ ಸಂಸ್ಥೆಗಳು, ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ವಿವರ ಹೀಗಿದೆ.

    ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‌ಗೆ ಫಲಕೊಟ್ಟಿಲ್ಲ. ಬಿಎಸ್‌ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ

    ಉತ್ತರಪ್ರದೇಶ (403)
    ರಿಪಬ್ಲಿಕ್‌
    ಬಿಜೆಪಿ-262-277
    ಎಸ್‌ಪಿ-119-134
    ಬಿಎಸ್‌ಪಿ-7-15
    ಕಾಂಗ್ರೆಸ್-3-08 ‌
    ಇತರೆ-00

    ಪೋಲ್‌ಸ್ಟ್ರೈಟ್‌
    ಬಿಜೆಪಿ-211-225
    ಎಸ್‌ಪಿ-146-160
    ಬಿಎಸ್‌ಪಿ-14-24
    ಕಾಂಗ್ರೆಸ್‌-4-06
    ಇತರೆ-00

    ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯವೆಂದರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‌ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎಎಪಿಗೆ ಗದ್ದುಗೆ ಏರಲಿದೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದು ಬಿಜೆಪಿಗೆ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಈ ಚುನಾವಣೆ ಮೇಲೆ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ರೈತ ಹೋರಾಟ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭಾ 13 ಸ್ಥಾನಗಳಿಗೆ ಮಾರ್ಚ್‌ 31ರಂದು ಚುನಾವಣೆ

    ಪಂಜಾಬ್ (117)
    ಆಕ್ಸಿಸ್ ಮೈ ಇಂಡಿಯಾ
    ಕಾಂಗ್ರೆಸ್‌-19-31
    ಎಎಪಿ-76-90
    ಎಸ್‌ಎಡಿ-7-11
    ಬಿಜೆಪಿ-00
    ಇತರೆ-00-02

    ಪೋಲ್‌ಸ್ಟ್ರೈಟ್‌
    ಕಾಂಗ್ರೆಸ್‌-26
    ಎಎಪಿ-58
    ಎಸ್‌ಎಡಿ-24
    ಬಿಜೆಪಿ-03
    ಇತರೆ-06

    ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು. ನಾಯಕರು ಇಲ್ಲದೇ ಇದ್ದರೂ ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ದರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಸಮೀಕ್ಷೆಯಲ್ಲಿ ಸಿಕ್ಕಿವೆ.

    ಗೋವಾ(40)
    ಜೀ ನ್ಯೂಸ್‌
    ಕಾಂಗ್ರೆಸ್‌-14-19
    ಬಿಜೆಪಿ-13-18
    ಎಎಪಿ-1-3
    ಇತರೆ-3-8

    ಟೈಮ್ಸ್ ನೌ
    ಕಾಂಗ್ರೆಸ್‌-16
    ಬಿಜೆಪಿ-14
    ಎಎಪಿ-04
    ಇತರೆ-06

    ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುತ್ತಾ..? ಕಾಂಗ್ರೆಸ್ ಬರುತ್ತಾ..? ಮಣಿಪುರದಲ್ಲಿ ಏನಾಗಬಹುದು ಫಲಿತಾಂಶ ಎಂಬ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿವೆ ಎಂಬುದನ್ನು ನೋಡೋಣ. ಇದನ್ನೂ ಓದಿ: ಜನೌಷಧಿ ಕೇಂದ್ರದಿಂದ ಮಧ್ಯಮ ವರ್ಗ, ಬಡವರಿಗೆ ಲಾಭ: ಮೋದಿ

    ಉತ್ತರಾಖಂಡ್(70)
    ಟೈಮ್ಸ್‌ ನೌ
    ಬಿಜೆಪಿ-37
    ಕಾಂಗ್ರೆಸ್‌-31
    ಇತರೆ-02

    ಸಿ ವೋಟರ್
    ಬಿಜೆಪಿ-26-32
    ಕಾಂಗ್ರೆಸ್‌-32-38
    ಇತರೆ-00-02

    ಮಣಿಪುರ(60)
    ಜೀ ನ್ಯೂಸ್
    ಬಿಜೆಪಿ-32-38
    ಕಾಂಗ್ರೆಸ್‌-12-17
    ಇತರೆ-7-14

    ಇಂಡಿಯಾ ನ್ಯೂಸ್‌
    ಬಿಜೆಪಿ-23-28
    ಕಾಂಗ್ರೆಸ್‌-10-14

  • ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

    ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ ಮಾಲವಿಕಾ ಸೂದ್ ಅವರು ಪಂಜಾಬ್ ಚುನಾವಣಾ ಅಭ್ಯರ್ಥಿಯಾಗಿ ಮೊಗದಿಂದ ಸ್ಫರ್ಧೆ ಮಾಡಿದ್ದಾರೆ. ಮತದಾನ ನಡೆಯುವ ಸ್ಥಳಕ್ಕೆ ಸೋನು ಭೇಟಿ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಏಫ್‍ಐಆರ್ ದಾಖಲು ಮಾಡಲಾಗಿದೆ.

    ಟ್ವೀಟ್‍ನಲ್ಲಿ ಏನಿದೆ?: ಮೊಗಾ ಕ್ಷೇತ್ರದಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿ ಸೋನು ಸೂದ್ ಟ್ವೀಟ್ ಮಾಡಿ, ಮೊಗಾ ಪೊಲೀಸರ ಜೊತೆಗೆ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಟ್ಯಾಗ್ ಮಾಡಿದ್ದರು.

    ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬಜಿರ್ಂದರ್ ಸಿಂಗ್, ಅಲಿಯಾಸ್ ಮಖನ್ ಬ್ರಾರ್, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದು ಕೇವಲ ಪಾರ್ಕಿಂಗ್ ಸಮಸ್ಯೆಯಾಗಿತ್ತು. ವಾಹನವನ್ನು ಸರಿಯಾಗಿ ನಿಲ್ಲಿಸಿರಲಿಲ್ಲ. ಬೇರೆ ಏನೂ ಇರಲಿಲ್ಲ ಎಂದು ಸೋನು ಸೂದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ನಡೆದಿದ್ದೇನು?: ಸೋನು ಅವರ ಸಹೋದರಿ ಮಾಳವಿಕಾ ಸೂದ್  ಮೊಗಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಪಂಜಾಬ್‍ನ ಮೋಗಾ ಜಿಲ್ಲೆಯಲ್ಲಿ ಎಸ್‍ಎಡಿ ಭಾನುವಾರದಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಸೋನು ಸೂದ್ ವಿರುದ್ಧ ದೂರು ದಾಖಲಿಸಲಾಗಿದೆ. ನಟ ತನ್ನ ತಾರಾ ವರ್ಚಸ್ಸನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಬೂತ್‍ಗಳಿಗೆ ಭೇಟಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ನಂತರ ಪೊಲೀಸರು ಅವರ ವಾಹನವನ್ನು ವಶಪಡಿಸಿಕೊಂಡು ಮನೆಯೊಳಗೆ ಇರುವಂತೆ ಸೂಚಿಸಿದ್ದರು.

    ನೀತಿ ಸಂಹಿತೆಗೆ ಸಂಬಂಧಿಸಿದಂತೆ ಮೊಗಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಮತದಾನದ ದಿನದಂದು, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮ ಸೋದರಿ ಪರ ಸೋನು ಸೂದ್ ಲಂಧೇಕೆ ಗ್ರಾಮದಲ್ಲಿ ಮತ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

    ಸೋನು ಸೂದ್ ವಿರುದ್ಧ ಪ್ರಚಾರದ ದೂರು ಬಂದಾಗ, ನಟನಿಗೆ ಮನೆಯೊಳಗೆ ಇರಲು ತಿಳಿಸಲಾಗಿತ್ತು. ಅಲ್ಲದೇ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದನ್ನು ಅವರ ಮನೆಯ ಹೊರಗೆ ನಿಯೋಜಿಸಲಾಗಿತ್ತು ಎಂದು ಚುನಾವಣಾಧಿಕಾರಿ ಸತ್ವಂತ್ ಸಿಂಗ್ ತಿಳಿಸಿದ್ದಾರೆ.

  • ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಚಂಡೀಗಢ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ ಮತ್ತು ಅವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬದಲಿಗೆ ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಯಾವುದೇ ಬದಲಾವಣೆಯಾಗುವುದಿಲ್ಲ, ಏಕೆಂದರೆ ಅವರು ಎಲ್ಲಾ ಕಡೆಯಿಂದ ತಿರಸ್ಕರಿಸಲ್ಪಟ್ಟ ರಾಜಕೀಯ ನಾಯಕರನ್ನು ಹೊಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕ್ರಾಂತಿಕಾರಿಯೂ ಅಲ್ಲ ಅಥವಾ ಭಗತ್ ಸಿಂಗ್ ಶಿಷ್ಯರೂ ಅಲ್ಲ ಎಂದು ಕಿಡಿಕಾರಿದ್ದಾರೆ.

    ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ, ದೊಡ್ಡ ದೊಡ್ಡ ಸುಳ್ಳುಗಳನ್ನೇ ಹೇಳುತ್ತಾರೆ. ಕೆಲವೊಮ್ಮೆ ಅವರು ನೀಡಿದ ಹೇಳಿಕೆಗಳನ್ನೇ ತಿರುಗಿಸುತ್ತಾರೆ. ಮತ್ತೆ ಕೆಲವೊಮ್ಮೆ ಕ್ಷಮೆಯಾಚಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

    ಇದೇ ವೇಳೆ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಅವರು ಸ್ಪರ್ಧಿಸುತ್ತಿರುವ ಎರಡೂ ಸ್ಥಾನಗಳಲ್ಲಿ ಉತ್ತಮ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

  • ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚಂಡೀಗಢ: ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭವಿಷ್ಯ ನುಡಿದರು.

    ಪಟಿಯಾಲಾದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಭಿನ್ನ ಜಗತ್ತಿನಲ್ಲಿ ವಾಸಿಸುತ್ತಿದೆ. ಇದರಿಂದಾಗಿ ಈ ಬಾರಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಟೀಕಿಸಿದ ಅವರು, ತಾವು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ಎಎಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಗವಂತ್ ಮಾನ್ ದೇಶ ವಿರೋಧಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯದಲ್ಲಿ ಸಕಾರಾತ್ಮಕ ವರದಿಗಳು ಬರುತ್ತಿವೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮೈತ್ರಿ, ಮತ್ತು ಬಿಜೆಪಿ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಮೈತ್ರಿ ಈ ಬಾರಿ ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಲಿದೆ. ಇಂದು ಎಲ್ಲಾ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಚಂಡೀಗಢ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಾಲಿವುಡ್ ನಟ ಸೋನು ಸೂದ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಪಂಜಾಬ್‍ನ ಮೋಗಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅವರು ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಮೊಗಾ ಜಿಲ್ಲೆಯ ಪಿಆರ್‍ಒ ಪ್ರದ್ಭದೀಪ್ ಸಿಂಗ್ ಪ್ರಕಾರ, ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಅವರನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‍ಗಳಲ್ಲಿ ಬೆದರಿಕೆ ಕರೆಗಳ ಬಗ್ಗೆ ನನಗೆ ತಿಳಿದಿತ್ತು. ಕೆಲವು ಬೂತ್‍ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು. ಈಗ ನಾನು ಮನೆಯಲ್ಲಿದ್ದೇನೆ. ನ್ಯಾಯಯುತ ಚುನಾವಣೆ ನಡೆಯಬೇಕು ಎಂದರು.

    ಚುನಾವಣೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಳವಿಕಾ ಸೂದ್, ಈ ಹಿಂದೆ ಪಂಜಾಬ್‍ನ ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸುತ್ತಿರುವುದಾಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದೇನೆ ಅಂತ ಹೇಳಿದ್ದರು. ನಾನು ಇಂದು ಸಕಾರಾತ್ಮಕ ಭಾವನೆ ಹೊಂದಿದ್ದೇನೆ. ವಿದೇಶದಿಂದ ಬಂದವರು ಸೇರಿದಂತೆ ಬಹಳಷ್ಟು ಜನರು ಕರೆ ಮಾಡುತ್ತಿದ್ದಾರೆ. ನನ್ನ ಬೆಂಬಲಕ್ಕಾಗಿ ಹುರಿದುಂಬಿಸುತ್ತಿದ್ದಾರೆ. ಅವರಲ್ಲಿ ಹಲವರು ಇಂದು ನನಗೆ ಮತ ಹಾಕುವಂತೆ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ನಾನು ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಬೇರೆ ಯಾವುದೇ ಅಭ್ಯರ್ಥಿಗಳು ಇಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ ಅಂತ ನಾನು ಭಾವಿಸುವುದಿಲ್ಲ ಎಂದರು.

    ಈ ವರ್ಷದ ಜನವರಿ 10 ರಂದು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‍ನ ಮೊಗಾದಲ್ಲಿ ಕಾಂಗ್ರೆಸ್‍ಗೆ ಸೇರಿದರು. ರಾಜ್ಯದ 2.14 ಕೋಟಿ ಮತದಾರರು ಭಾನುವಾರ 117 ಕ್ಷೇತ್ರಗಳಿಂದ ಕಣದಲ್ಲಿರುವ 1304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

    ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಪಂಜಾಬ್ ಈ ಬಾರಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷದ ಮೈತ್ರಿ, ಮತ್ತು ಭಾರತೀಯ ಜನತಾ ಪಾರ್ಟಿ-ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಒಕ್ಕೂಟದೊಂದಿಗೆ ಸ್ಪರ್ಧೆಗೆ ಸಾಕ್ಷಿಯಾಗಿದೆ.

  • ಖಲಿಸ್ತಾನ್ ಜೊತೆಗೆ ಕೇಜ್ರಿವಾಲ್ ಲಿಂಕ್ ಪಂಜಾಬ್‍ಗೆ ಮಾರಕ: ಚರಣ್‍ಜಿತ್ ಸಿಂಗ್ ಚನ್ನಿ

    ಖಲಿಸ್ತಾನ್ ಜೊತೆಗೆ ಕೇಜ್ರಿವಾಲ್ ಲಿಂಕ್ ಪಂಜಾಬ್‍ಗೆ ಮಾರಕ: ಚರಣ್‍ಜಿತ್ ಸಿಂಗ್ ಚನ್ನಿ

    ಚಂಡೀಗಢ: ಖಲಿಸ್ತಾನ್ ಮತ್ತು ಖಲಿಸ್ತಾನಿಗಳೊಂದಿಗಿನ ಅರವಿಂದ್ ಕೇಜ್ರಿವಾಲ್ ಸಂಪರ್ಕ ಹೊಂದಿರುವುದರಿಂದ ಪಂಜಾಬ್‍ಗೆ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಟಾಂಗ್ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಅವರು, ಕೇಜ್ರಿವಾಲ್ ತಮ್ಮ ಮೇಲಿನ ಆರೋಪಗಳನ್ನು ಸಹ ನಿರಾಕರಿಸಿಲ್ಲ. ಅವರೇ ‘ನಾನು ಭಯೋತ್ಪಾದಕ’ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಖಲಿಸ್ತಾನ್ ಬಗ್ಗೆ ಮಾತನಾಡುತ್ತಾರೆ, ಖಲಿಸ್ತಾನಿಗಳನ್ನು ಬೆಂಬಲಿಸುತ್ತಾರೆ. ಎಲ್ಲೋ ಕೇಜ್ರಿವಾಲ್ ಅವರು ಹೊಂದಿರುವ ಈ ಲಿಂಕ್ ಪಂಜಾಬ್‍ಗೆ ಮಾರಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪಿಎಂ – ಕುಮಾರ್ ವಿಶ್ವಾಸ್ ವೀಡಿಯೋ ವೈರಲ್

    ಅರವಿಂದ್ ಕೇಜ್ರಿವಾಲ್ ಅವರು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪ್ರಧಾನಿಯಾಗಲು ಬಯಸಿದ್ದಾರೆ ಎಂಬ ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಆರೋಪದ ಬಳಿಕ ಈ ವಿಚಾರದ ಬಗ್ಗೆ ಭಾರೀ ಚರ್ಚೆ ಆರಂಭವಾಯಿತು. ಇದನ್ನೂ ಓದಿ: ಕುಮಾರ್ ವಿಶ್ವಾಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ: ಕೇಜ್ರಿವಾಲ್‍ಗೆ ರಾಹುಲ್ ಪ್ರಶ್ನೆ

    ಅರವಿಂದ್ ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳ ನಾಯಕರಿಗೆ ಈ ಭ್ರಷ್ಟರೆಲ್ಲ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವ, ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸುವ ವಿಶ್ವದ ಮೊದಲ ಭಯೋತ್ಪಾದಕ ನಾನು. ನಾನು ವಿಶ್ವದ ಮೊದಲ ಸಿಹಿಯಾದ ಭಯೋತ್ಪಾದಕ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ಒಂದು ವೇಳೆ ನಾನು ಪ್ರತ್ಯೇಕತಾವಾದಿಗಳ ಪರ ಎಂದಿದ್ದರೆ ಪ್ರಧಾನಿ ಮೋದಿ ಅವರು ಈ ಆರೋಪಗಳನ್ನು ಏಕೆ ಸಾಬೀತುಪಡಿಸಲಿಲ್ಲ ಅಥವಾ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

  • ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಪ್ರಧಾನಿಯಾಗಬೇಕೆಂದು ಬಯಸಿದ್ದರು ಎಂದು ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ಮಾಡಿದ ಆರೋಪವು ದಿನದಿಂದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಗ್ಗೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

    ಈ ಆರೋಪದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು, ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುವುದು. ಜೊತೆಗೆ ಶೀಘ್ರದಲ್ಲೇ ಕೇಜ್ರಿವಾಲ್ ಅವರನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಪಂಜಾಬ್‍ನ ಮುಖ್ಯಮಂತ್ರಿ ಚನ್ನಿಗೆ ಭರವಸೆ ನೀಡಿದರು.

    ರಾಜಕೀಯ ಪಕ್ಷ ಉಗ್ರವಾದಿ ಸಂಘಟನೆಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಹಾಗೂ ಅವುಗಳ ಬೆಂಬಲ ಪಡೆಯುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಅಧಿಕಾರಕ್ಕಾಗಿ ಪ್ರತ್ಯೇಕವಾದಿಗಳೊಡನೆ ಕೈಜೋಡಿಸುವುದು ಖಂಡನೀಯ. ಪಂಜಾಬ್ ರಾಜ್ಯವನ್ನು ವಿಂಗಡನೆ ಮಾಡಲು ಹೋರಟಿರುವುದನ್ನು ವಿರೋಧಿಸುತ್ತೇವೆ. ಇಂತಹ ಸಂಘಟನೆಗಳ ಅಜೆಂಡಾ ರಾಷ್ಟ್ರ ವಿರೋಧಿಗಳ ಅಜೆಂಡಾಗಳಿಗಿಂತ ಭಿನ್ನವಲ್ಲ. ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಾನೇ ಸ್ವತಃ ಇದನ್ನು ಪರಿಶೀಲನೆ ನಡೆಸುತ್ತೇನೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡಲ್ಲ ಎಂದು ತಿಳಿಸಿದರು.

    ಈ ಹಿಂದೆ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಆರೋಪಿ ತನಿಖೆಗೆ ಪಂಜಾಬ್‍ನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಹಾಗೂ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ಅಲ್ಲದೆ ಆಪ್‍ಗೆ ಸಿಖ್ಸ್ ಫಾರ್ ಜಸ್ಟಿಸ್ ಎಂಬ ಖಲಿಸ್ತಾನಿ ಸಂಘಟನೆ ಬೆಂಬಲ ವ್ಯಕ್ತಪಡಿಸಿ ಬರದಿರುವ ಪತ್ರವನ್ನು ಗಮನ ಸೆಳೆದಿದ್ದರು. ಇದನ್ನೂ ಓದಿ: ಮೋದಿಯನ್ನು ಹತ್ಯೆ ಮಾಡಲೆಂದೇ ಉಗ್ರರಿಂದ ಆಸ್ಪತ್ರೆಯಲ್ಲಿ ಬಾಂಬ್‌ ಸ್ಫೋಟ!

    ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಗೆ ಪತ್ರ ಬರೆದು ತನಿಖೆಗೆ ಒತ್ತಾಯೊಸಲು ಕೇಳಿಕೊಂಡಿದೆ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ನನ್ನ ವಿರುದ್ಧ ಎಫ್‍ಐಆರ್‍ನ್ನು ದಾಖಲಿಸುತ್ತದೆ ಎಂದು ಕೇಳಲ್ಪಟ್ಟಿದ್ದೇನೆ. ನನ್ನ ಮೇಲೆ ಬಂದಿರುವ ಎಲ್ಲಾ ಕೇಸ್‍ಗಳನ್ನು ಸ್ವಾಗತಿಸುತ್ತೇನೆ. ಆದರೆ ಕೇಂದ್ರವು ಭದ್ರತೆಯ ಬಗ್ಗೆ ಈ ರೀತಿ ವ್ಯವಹರಿಸುತ್ತಿರುವುದು ನನಗೆ ಸಾಕಷ್ಟು ಚಿಂತೆಯನ್ನು ಉಂಟು ಮಾಡಿದೆ. ಜೊತೆ ರಾಷ್ಟ್ರೀಯ ಭದ್ರತೆಯನ್ನು ಕೇಂದ್ರ ಹಾಸ್ಯ ಮಾಡಿತ್ತಿದೆ. ಎಲ್ಲಾ ಭ್ರಷ್ಟರು ಒಂದಾಗಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

  • ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ಚಂಡೀಗಢ: ಪಂಜಾಬ್‍ನಲ್ಲಿ ಪ್ರಾಮಾಣಿಕವಾದಂತಹ ಸರ್ಕಾರವನ್ನು ರಚಿಸಲು ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

    ಫೆಬ್ರವರಿ 20ರಂದು ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನವಾಗಿದ್ದು, ಎಎಪಿಯ ಪ್ರತಿಸ್ಪರ್ಧಿಗಳು ಕಾಂಗ್ರೆಸ್ ಅನ್ನು ಸೋಲಿಸಲು ಕೈಜೋಡಿಸಿದ್ದಾರೆ. ಆದರೆ ಪಂಜಾಬ್‍ನ ಜನರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಮನಸ್ಸು ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಹತ್ಯೆ ಮಾಡಲೆಂದೇ ಉಗ್ರರಿಂದ ಆಸ್ಪತ್ರೆಯಲ್ಲಿ ಬಾಂಬ್‌ ಸ್ಫೋಟ!

    ಕಳೆದ 70 ವರ್ಷಗಳಿಂದ ಕಾಂಗ್ರೆಸ್ಸಿಗರು ಪಂಜಾಬ್ ಅನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಅದನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ. ಪಂಜಾಬ್‍ನಲ್ಲಿ ಎಎಪಿ ಸರ್ಕಾರ ರಚಿಸಿದರೆ, ಅದನ್ನು ಶಾಶ್ವತವಾಗಿ ತಡೆಯಲಾಗುತ್ತದೆ ಎಂಬ ಭಯದಿಂದಾಗಿ ಎಎಪಿಯನ್ನು ತಡೆಯಲು ಒಗ್ಗೂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಎಲ್ಲ ಜನರು ಒಗ್ಗೂಡಿ ಅವರ ಲೂಟಿ ಮತ್ತು ಭ್ರಷ್ಟಾಚಾರದ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಜನರಿಗೆ ವಿನಂತಿಸಿದರು. ಎಎಪಿ ಅಧಿಕಾರಕ್ಕೆ ಬರಲಿದೆ ಮತ್ತು ಪಂಜಾಬ್‍ನಲ್ಲಿ ಪ್ರಾಮಾಣಿಕ ಸರ್ಕಾರ ರಚನೆಯಾಗುತ್ತದೆ. ಸಂಪನ್ಮೂಲಗಳ ಲೂಟಿ ಕೊನೆಗೊಳ್ಳಲಿದೆ. ಪಂಜಾಬ್‍ನ ಹಣವನ್ನು ಈಗ ರಾಜ್ಯದ ಜನತೆಗಾಗಿ ಖರ್ಚು ಮಾಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ – IPS ಅಧಿಕಾರಿ ಅರೆಸ್ಟ್

    ಈ ಬಾರಿ ಪಂಜಾಬ್ ಉಳಿಸಲು ನಾವು ಮತ ಹಾಕಬೇಕು. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮತ ಚಲಾಯಿಸಿ. ಪಂಜಾಬ್‍ನಿಂದ ಭ್ರಷ್ಟಾಚಾರ ಮತ್ತು ಮಾಫಿಯಾವನ್ನು ಕೊನೆಗೊಳಿಸಲು ಮತ ಚಲಾಯಿಸಿ ಎಂದು ಹೇಳುತ್ತಾ, ಕೇಜ್ರಿವಾಲ್ ಅವರು ಜಲಾಲಾಬಾದ್ ಮತ್ತು ಅಬೋಹರ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.