Tag: punjab

  • ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್

    ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್

    ಚಂಡೀಗಢ: 2022ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಗೆಲವು ಸಾಧಿಸಿದ್ದಾರೆ. ಇವರ ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪಂಜಾಬ್‍ನಲ್ಲಿ ತನ್ನ ಮಗ ಗೆದ್ದ ನಂತರವೂ ಬಲ್ದೇವ್ ಕೌರ್ ಅವರು ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಉಗೋಕೆ ಅವರ ತಂದೆ ದರ್ಶನ್ ಸಿಂಗ್ ಚಾಲಕರಾಗಿದ್ದಾರೆ. ಅವರು ಸಹ ನಮ್ಮ ಕುಟುಂಬವು ಹಿಂದಿನ ರೀತಿಯಲ್ಲಿಯೇ ಮುಂದುವರಿಯುತ್ತದೆ. ಮಗ ಶಾಸಕರಾದ ನಂತರ ಹೆಚ್ಚೇನೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನ ಚಾಮುಂಡೇಶ್ವರಿ ಕ್ಷೇತ್ರದ ಜನರೇ ತಿರಸ್ಕಾರ ಮಾಡಿದ್ದಾರೆ: ಸಿದ್ದು ಕಾಲೆಳೆದ ಬಿಜೆಪಿ

    ಬಲ್ದೇವ್ ಕೌರ್ ಮಾತನಾಡಿ, ನಾವು ಬಹಳ ಹಿಂದಿನಿಂದಲೂ ಹಣ ಸಂಪಾದಿಸಲು ಕಷ್ಟಪಟ್ಟು ಶ್ರಮಿಸಿದ್ದೇವೆ. ನನ್ನ ಮಗ ಈಗ ಶಾಸಕನಾಗಿದ್ದಾನೆ. ಆತ ಗೌರವಾನ್ವಿತ ಸ್ಥಾನ ಪಡೆದರೂ, ನನ್ನ ಹಳೆಯ ಕಾಯಕವನ್ನು ನಾನು ಮುಂದುವರೆಸುತ್ತೇನೆ. ನಾನು ಶಾಲೆಯಲ್ಲಿ ಈಮುನ್ನ ನಿರ್ವಹಿಸುತ್ತಿದ್ದ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

    ತಮ್ಮ ಮಗನ ಗೆಲುವು ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದು ಅವರು ಖುಷಿಗೊಂಡಿದ್ದಾರೆ. ಅಲ್ಲದೇ ಅವರಿಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಮಗ ಗೆಲ್ಲುತ್ತಾನೆ ಎಂದು ಭಾರೀ ವಿಶ್ವಾಸ ಇತ್ತು. ಲಭ್ ಸಿಂಗ್ ಉಗೋಕೆ ಆಮ್ ಆದ್ಮಿ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಎಎಪಿ ಅಭ್ಯರ್ಥಿಯಾಗಿ ಪಕ್ಷದ ಚಿಹ್ನೆ ಪೊರಕೆಯಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಾಂತರ ಕೇವಲ ಊಹಾಪೋಹ: ಬೊಮ್ಮಾಯಿ

    ಪಂಜಾಬ್‍ನ ಭದೌರ್ ವಿಧಾನಸಭಾ ಕ್ಷೇತ್ರದಲ್ಲಿ 37,550 ಮತಗಳ ಅಂತರದಿಂದ ಲಭ್ ಸಿಂಗ್ ಉಗೋಕೆ, ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ಅವರ ಸೋಲಿಸಿದ್ದಾರೆ. ಈಮೂಲಕ ಮಗ ಶಾಸಕನಾದರೂ ತಮ್ಮ ಮೊದಲಿನ ಕೆಲಸವನ್ನೇ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

     

  • ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್

    ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್

    ನವದೆಹಲಿ: ರಾಹುಲ್ ಗಾಂಧಿ ಅವರು ಕಾಂಗ್ರೆಸ್‍ನ ಮುಖ್ಯಸ್ಥರಾಗಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನವದೆಹಲಿಯಲ್ಲಿ ಅಭಿಪ್ರಾಯಪಟ್ಟರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್ ಅನ್ನು ಮುಸ್ಲಿಂ ಪಕ್ಷ ಎಂದು ಪ್ರಚಾರ ಮಾಡಿದೆ. ಆದರೆ ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮ ಮಾರ್ಗವಾಗಿದೆ. ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ಧರ್ಮದ ವಿಷಯವನ್ನು ಮುಂಚೂಣಿಯಲ್ಲಿ ಇಡುತ್ತದೆ. ಆದರೆ ಹಣದುಬ್ಬರ ಹಾಗೂ ಉದ್ಯೋಗ ಸಮಸ್ಯೆಯನ್ನು ಹಿನ್ನಡೆ ಮಾಡುತ್ತದೆ ಎಂದು ಕಿಡಿಕಾರಿದರು.

    2007ರಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿತ್ತು. ಇದರಿಂದಾಗಿ ನಾವು ಪಂಜಾಬ್‍ನಲ್ಲಿ ಜಯ ಸಾಧಿಸಿದೆವು. ಚನ್ನಿ ಮುಖ್ಯಮಂತ್ರಿಯಾದ ನಂತರ ಪರಿಸರವೂ ಅನುಕೂಲಕರವಾಗಿತ್ತು. ಆದರೆ ಆಂತರಿಕ ಸಂಘರ್ಷದಿಂದಾಗಿ ನಾವು ಪಂಜಾಬ್ ಚುನಾವಣೆಯಲ್ಲಿ ಸೋಲನುಭವಿಸಿದೆವು. ಇದು ನಮ್ಮ ತಪ್ಪಾಗಿದೆ ಎಂದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!

    ರಾಹುಲ್ ಗಾಂಧಿ ಅವರು ಪಕ್ಷ ಅಧ್ಯಕ್ಷರಾಗಬೇಕು. ಕಳೆದ ಮೂರು ದಶಕಗಳಿಂದ ಗಾಂಧಿ ಕುಟುಂಬದಿಂದ ಯಾರೂ ಪ್ರಧಾನಿ ಅಥವಾ ಮಂತ್ರಿ ಆಗಲಿಲ್ಲ. ಕಾಂಗ್ರೆಸ್‍ನ ಒಗ್ಗಟ್ಟಿಗೆ ಗಾಂಧಿ ಕುಟುಂಬ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ನಿಕಟವಾಗಿ ವೀಕ್ಷಿಸಿದ ಸಭೆಗೆ ಮುಂಚಿತವಾಗಿ, ಪಂಚರಾಜ್ಯ ಚುನಾವಣೆಯಲ್ಲಿ ಭಾರೀ ಸೋಲಿನ ಬಗ್ಗೆ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ಅಮಾನತು ಪ್ರಕರಣ – ಸಭಾಪತಿ ಹೊರಟ್ಟಿ ವಿರುದ್ಧ ಪ್ರತಿಭಟನೆ

  • ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಚಂಡೀಗಢ: ಯಾವುದೇ ಧರ್ಮದ ಬಗ್ಗೆ ಅಗೌರವವನ್ನು ತೋರಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಹೋಶಿಯಾರ್‍ಪುರದಲ್ಲಿ ನಡೆದ ಗೋವುಗಳ ಹತ್ಯೆಯನ್ನು ಪಂಜಾಬ್‍ನ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಖಂಡಿಸಿದ್ದಾರೆ.

    ಹೋಶಿಯಾರ್‍ಪುರದಿಂದ ಸುಮಾರು 36 ಕಿಮೀ ದೂರದಲ್ಲಿರುವ ಜಾನ್ಸ್ ಹಳ್ಳಿಯ ಸಮೀಪದಲ್ಲಿರುವ ರೈಲ್ವೆ ಹಳಿ ಬಳಿ ಶನಿವಾರ ಬೆಳಗ್ಗೆ ಸುಮಾರು 19 ಹಸುಗಳ ಮೃತದೇಹಗಳು ಪತ್ತೆಯಾಗಿವೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಭಗವಂತ್ ಮಾನ್ ಅವರು, ಯಾವುದೇ ಬೆಲೆ ತೆತ್ತಾದರೂ ಪಂಜಾಬ್‍ನಲ್ಲಿ ಶಾಂತಿ ಮತ್ತು ಸಹೋದರತ್ವ ಹದಗೆಡಲು ನಾವು ಬಿಡುವುದಿಲ್ಲ. ಪಂಜಾಬ್‍ನಲ್ಲಿ ಶಾಂತಿ ಕದಡುವ ಸಮಾಜ ವಿರೋಧಿಗಳ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ರಾಜ್ಯದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    ಘಟನೆಯ ತನಿಖೆಗಾಗಿ ಪಂಜಾಬ್ ಗೋವು ಸೇವಾ ಆಯೋಗವು ದ್ವಿಸದಸ್ಯ ಸಮಿತಿಯನ್ನು ರಚಿಸಿದ್ದು, ಈ ವಿಚಾರವಾಗಿ ಏಳು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಪೊಲೀಸ್ ವರಿಷ್ಠಾಧಿಕಾರಿ (ತನಿಖೆ) ಮುಖ್ತಿಯಾರ್ ರೈ ಅವರು, ಜಾನ್ಸ್ ಹಳ್ಳಿಯ ಸಮೀಪದಲ್ಲಿ ರೈಲ್ವೇ ಹಳಿ ಬಳಿ ಕೈಬಿಟ್ಟ ಸ್ಥಳದಲ್ಲಿ ತಲೆ ಇಲ್ಲದ ಕನಿಷ್ಠ 19 ಹಸುಗಳ ಶವಗಳು ಪತ್ತೆಯಾಗಿದ್ದು, ಜೊತೆಗೆ ಆಲೂಗಡ್ಡೆ ತುಂಬಿದ ಸುಮಾರು 12 ಗೋಣಿ ಚೀಲಗಳು ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಸುಗಳನ್ನು ಮತ್ತು ಆಲೂಗಡ್ಡೆ ತುಂಬಿದ ಗೋಣಿ ಚೀಲಗಳನ್ನು ಎಸೆದಿದ್ದಾರೆ. ಗೋಹತ್ಯೆ ಮಾಡಿದ ಬಳಿಕ ಅವುಗಳ ಚರ್ಮವನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಬೆಳಗ್ಗೆ ಸ್ಥಳೀಯರು ಹಸುಗಳು ಸತ್ತಿರುವುದನ್ನು ಕಂಡು ತಾಂಡಾ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

  • 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ಚಂಡೀಗಢ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಅವರು ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬೆನ್ನೆಲ್ಲೇ ರಾಜ್ಯದ ಅನೇಕ ವಿವಿಐಪಿಗಳು ಸೇರಿದಂತೆ 122 ಮಾಜಿ ಸಂಸದರು ಮತ್ತು ಶಾಸಕರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ.

    ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್ ಕುಟುಂಬಕ್ಕೆ ಭದ್ರತೆ ನೀಡಲಾಗಿದ್ದು, ಮಾಜಿ ಸಿಎಂಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚರಣ್‍ಜಿತ್ ಸಿಂಗ್ ಚನ್ನಿ, ಉಳಿದ ಎಲ್ಲ ಕಾಂಗ್ರೆಸ್ ಮತ್ತು ಅಕಾಲಿದಳದ ನಾಯಕರಿಗೆ ನೀಡಿದ ಭದ್ರತೆಯನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: ಗೆಳತಿ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್

    ಒಂದೆಡೆ ಪೊಲೀಸ್ ಠಾಣೆಗಳು ಖಾಲಿ ಬಿದ್ದಿದ್ದರೆ, ಮತ್ತೊಂದೆಡೆ ನಾಯಕರ ಮನೆ ಮುಂದೆ ಟೆಂಟ್ ಹಾಕಿ ಭದ್ರತೆ ಕಲ್ಪಿಸಲಾಗಿದೆ. ಆದರೆ ಈ ಎಲ್ಲದಕ್ಕಿಂತಲೂ ಮೂರೂವರೆ ಕೋಟಿ ಜನರಿಗೆ ಸುರಕ್ಷತೆ ಒದಗಿಸುವುದು ಹೆಚ್ಚು ಮುಖ್ಯ. ಇದರ ಹೊರೆಯನ್ನು ಪೊಲೀಸರ ಮೇಲೆ ಹೊರೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

    ಪಂಜಾಬ್ ಚುನಾವಣೆಯಲ್ಲಿ ಭಾರೀ ಗೆಲುವಿನ ನಂತರ ಭಗವಂತ್ ಮಾನ್ ಅವರು ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಮಾರ್ಚ್ 16ರಂದು ಮಧ್ಯಾಹ್ನ 12:30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಪಕ್ಷ 92 ಸ್ಥಾನಗಳನ್ನು ಗೆಲುವು ಸಾಧಿಸಿದೆ.

  • ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

    ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

    ಚಂಡೀಗಢ: ಪಂಜಾಬ್ ಚುನಾವಣೆಯಲ್ಲಿ ಭಾರೀ ಗೆಲುವಿನ ನಂತರ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯದ ನಿಯೋಜಿತ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮಾರ್ಚ್ 16ರಂದು ಖಟ್ಕರ್ ಕಲಾನ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಹೇಳಿದ್ದಾರೆ.

    ಇಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಮಾರ್ಚ್ 16ರಂದು ಮಧ್ಯಾಹ್ನ 12:30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಂಜಾಬ್‍ನಾದ್ಯಂತದ ಜನರು ಸಮಾರಂಭಕ್ಕೆ ಬರುತ್ತಾರೆ. ಈ ಮೂಲಕವಾಗಿ ಭಗತ್ ಸಿಂಗ್‍ಗೆ ಜನರು ಗೌರವವನ್ನು ಸಲ್ಲಿಸುತ್ತಾರೆ ಎಂದ ಅವರು, ನಮ್ಮಲ್ಲಿ ಉತ್ತಮ ಕ್ಯಾಬಿನೆಟ್ ಇರುತ್ತದೆ. ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಆದ್ದರಿಂದ ನೀವು ಕಾಯಬೇಕಾಗಿದೆ ಎಂದು ಭರವಸೆ ನೀಡಿದರು.

    ಶುಕ್ರವಾರ ಮೊಹಾಲಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಧುರಿ ಕ್ಷೇತ್ರದಿಂದ 58,000 ಮತಗಳಿಂದ ಗೆದ್ದಿರುವ ಭಗವಂತ ಮಾನ್ ಅವರನ್ನು ಎಎಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ – ಇನ್‍ಸ್ಟಾಗ್ರಾಮ್ ನಿರ್ಬಂಧಿಸಲು ಮುಂದಾದ ರಷ್ಯಾ

    ಭಗವಂತ್ ಮಾನ್ ಅವರು ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸಿದ್ದಾರೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಪಕ್ಷ 92 ಸ್ಥಾನಗಳನ್ನು ಗೆಲುವು ಸಾಧಿಸಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

  • ಅಹಂಕಾರಿಗಳಾಗಬೇಡಿ, ಮತದಾರರನ್ನು ಗೌರವಿಸಿ: ಭಗವಂತ್ ಮಾನ್

    ಅಹಂಕಾರಿಗಳಾಗಬೇಡಿ, ಮತದಾರರನ್ನು ಗೌರವಿಸಿ: ಭಗವಂತ್ ಮಾನ್

    ಚಂಡೀಗಢ: ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ್ದು, ಭಗವಂತ್ ಮಾನ್ ಅವರು ತಮ್ಮ ಶಾಸಕರಿಗೆ ಅಹಂಕಾರಿಗಾಗಬೇಡಿ, ಮತದಾರರನ್ನು ಗೌರವಿಸಿ ಎಂದು ಸಂದೇಶವನ್ನು ಸಾರಿದರು.

    ಮೊಹಾಲಿಯಲ್ಲಿ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಹಂಕಾರಿಯಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕಿದವರಿಗಾಗಿ ಕೆಲಸ ಮಾಡಿ. ನೀವು ಪಂಜಾಬಿನ ಶಾಸಕರು. ಅವರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ನಾವು ಕೆಲಸ ಮಾಡಬೇಕು. ಎಲ್ಲ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಎಂಎಲ್‍ಎಗಳು ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

    ಪಂಜಾಬ್ ಚುನಾವಣೆಯಲ್ಲಿ ಎಎಪಿಯ ಭರ್ಜರಿ ಗೆಲುವನ್ನು ಸಾಧಿಸಿದ ಬಳಿಕ, ಭಗವಂತ್ ಮಾನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಶುಕ್ರವಾರ ರಾಷ್ಟ್ರ ರಾಜಧಾನಿಗೆ ತೆರಳಿದ್ದರು. ಮಾರ್ಚ್ 16 ರಂದು ಹೊಸ ಪಂಜಾಬ್ ಕ್ಯಾಬಿನೆಟ್‍ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭಗವಂತ್ ಮಾನ್ ಆಹ್ವಾನಿಸಿದ್ದಾರೆ.

    ಪಂಜಾಬ್‍ನಲ್ಲಿ ತಮ್ಮ ಪಕ್ಷ ಗೆದ್ದಿರುವ ಬಗ್ಗೆ ಭಗವಂತ್ ಮಾನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಲು ಅಗತ್ಯವಿರುವ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

  • ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

    ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

    ಚಂಡೀಗಢ: ಸಚಿವರು, ಎಂಎಲ್‍ಎಗಳು ತಮ್ಮ – ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ರಾಜಧಾನಿ ಚಂಡೀಗಢದಲ್ಲಿ ಅಲ್ಲ ಎಂದು ಚುನಾವಣೆ ಗೆದ್ದ ಒಂದು ದಿನದ ನಂತರ ಶಾಸಕರನ್ನು ಪಂಜಾಬ್ ಸಿಎಂ ಆಗಿ ಆಯ್ಕೆಯಾಗಿರುವ ಭಗವಂತ್ ಮಾನ್ ತರಾಟೆಗೆ ತೆಗೆದುಕೊಂಡರು.

    ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ನಾವು ಕೆಲಸ ಮಾಡಬೇಕು. ಎಲ್ಲ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಎಂಎಲ್‍ಎಗಳು ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ಮುಖ್ಯಮಂತ್ರಿ ಹೊರತುಪಡಿಸಿ 17 ಮಂದಿ ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಬಹುದು. ಇದರಿಂದ ಯಾರೂ ಅಸಮಾಧಾನಗೊಳ್ಳಬೇಕಾಗಿಲ್ಲ. ನೀವೆಲ್ಲರೂ ಕ್ಯಾಬಿನೆಟ್ ಮಂತ್ರಿಗಳು ಎಂದು ಅವರು ತಮ್ಮನ್ನು ಒಳಗೊಂಡಂತೆ 92 ಶಾಸಕರ ಸಭೆಯಲ್ಲಿ ಹೇಳಿದರು.

    'Spend Time In Your Constituencies, Not...': AAP's Bhagwant Mann To MLAs

    ಕೆಲಸ ಮಾಡಬೇಕಾದರೆ ಯಾವುದೇ ರೀತಿಯ ದುರಹಂಕಾರ ಬೇಡ ಎಂದು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕದವರಿಗಾಗಿ ಕೆಲಸ ಮಾಡಿ. ನೀವು ಪಂಜಾಬಿ ಶಾಸಕರು. ನಮ್ಮ ಸರ್ಕಾರವನ್ನು ಅವರು ಆಯ್ಕೆ ಮಾಡಿದ್ದಾರೆ ಎಂದು ಸ್ಫೂರ್ತಿ ತುಂಬಿದರು.

    ನಿನ್ನೆ ಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ಈ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯವನ್ನು ಗಳಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಸೋಲಿತು. ಎಎಪಿಗೆ 117 ಸ್ಥಾನಕ್ಕೆ 92 ಸ್ಥಾನ ಗೆಲ್ಲುವ ಮೂಲಕ ಭರ್ಜರಿ ಜಯವನ್ನು ಗಳಿಸಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

  • ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚಂಡೀಗಢ: ಪಂಜಾಬ್‍ನಲ್ಲಿ ಹೀನಾಯ ಸೋಲನುಭವಿಸಿದ ಕಾರಣ ಚರಣ್‍ಜಿತ್ ಸಿಂಗ್ ಚನ್ನಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಅಲ್ಲದೇ ತಾವೂ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಚರಣ್‍ಜಿತ್ ಸಿಂಗ್ ಚನ್ನಿ ರಾಜೀನಾಮೆ ನೀಡಿದ್ದಾರೆ. ಇಂದು ಚನ್ನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜೀನಾಮೆ ಸಲ್ಲಿಸಿದ್ದಾರೆ.

    ಪಂಜಾಬ್ ಚುನಾವಣೆ: ಸಿಎಂ ಚನ್ನಿ ಎರಡು ಕ್ಷೇತ್ರಗಳಿಂದ ಕಣಕ್ಕೆ | Punjab Poll: Chief Minister Channi To Contest From 2 Seats - Kannada Oneindia

    ರಾಜೀನಾಮೆ ನೀಡಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಜನರ ನಡುವೆಯೇ ಇದ್ದು, ದುಡಿಯುತ್ತಲೇ ಇರುತ್ತೇನೆ. ಈ ವೇಳೆ ತಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಮುಂದೆ ಬರುವ ಸರ್ಕಾರ ನಡೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೋಲಿನ ನಂತರ, ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ! 

    ಪಂಜಾಬ್‍ನ ಜನರು ಬದಲಾವಣೆಯನ್ನು ಬಯಸಿದ್ದು, ಬೇರೆ ಪಕ್ಷಕ್ಕೆ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಲಿದೆ. ಅವರ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ. 111 ದಿನಗಳ ನಮ್ಮ ಕೆಲಸ, ನಿರ್ಧಾರಗಳನ್ನು ಹೊಸ ಸರ್ಕಾರ ಮುಂದುವರಿಸಲಿ ಎಂದಿದ್ದಾರೆ.

    N. Biren Singh

    ಮಣಿಪುರ ಸಿಎಂ ರಾಜೀನಾಮೆ
    ಮಣಿಪುರದಲ್ಲಿ ಬಿಜೆಪಿ ಸತತವಾಗಿ ಎರಡನೇ ಬಾರಿಗೆ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ ಸೋಲನುಭವಿಸಿದ ಎನ್.ಬಿರೇನ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ಶುಕ್ರವಾರ ರಾಜ್ಯಪಾಲ ಲಾ ಗಣೇಶನ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಆದರೆ ರಾಜ್ಯಪಾಲರು, ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಕೇಳಿಕೊಂಡಿದ್ದು, ಅದಕ್ಕೆ ಬಿರೇನ್ ಸಿಂಗ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರಿಂಗ್ ಯುವಕರು

  • ಕಾಂಗ್ರೆಸ್ ಸೋಲಿನ ನಂತರ ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ!

    ಕಾಂಗ್ರೆಸ್ ಸೋಲಿನ ನಂತರ ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ!

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ರಾಜ್ಯದ ಅಡ್ವೊಕೇಟ್ ಜನರಲ್(ಎಜಿ) ದೀಪಿಂದರ್ ಸಿಂಗ್ ಪಟ್ವಾಲಿಯಾ ಇಂದು ಪಂಜಾಬ್‍ನ ಉನ್ನತ ಸರ್ಕಾರಿ ವಕೀಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ದೀಪಿಂದರ್ ಸಿಂಗ್ ಅವರು, ದೀರ್ಘಕಾಲದ ಸಾಂವಿಧಾನಿಕ ಸಮಾವೇಶವನ್ನು ಇಟ್ಟುಕೊಂಡು ಈ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ದೀಪಿಂದರ್ ಸಿಂಗ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಎಜಿ ಆಗಿ ಆಯ್ಕೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಪಂಜಾಬ್‍ನಲ್ಲಿ ಸೋತ ನಂತರ ದೀಪಿಂದರ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ ಜಾರಿ: ಕಲಬುರಗಿ ಡಿಸಿ 

    ಎಜಿ ಸಾಂಪ್ರದಾಯಿಕವಾಗಿ ಸರ್ಕಾರ ಬದಲಾವಣೆಯಾಗುತ್ತಿದಂತೆ ರಾಜೀನಾಮೆ ನೀಡುತ್ತಾರೆ. ಏಕೆಂದರೆ ಅವರು ಆಡಳಿತ ಸರ್ಕಾರದ ಸಲಹೆಯ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತೆ.

  • ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರಿಂದ ತಿರುಗೇಟು: ಕೋಡಿಹಳ್ಳಿ ಚಂದ್ರಶೇಖರ್

    ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರಿಂದ ತಿರುಗೇಟು: ಕೋಡಿಹಳ್ಳಿ ಚಂದ್ರಶೇಖರ್

    ಬೀದರ್: ಪಂಚರಾಜ್ಯಗಳಲ್ಲಿ ಬಂದಿರುವ ಫಲಿತಾಂಶವನ್ನು ನಾವು ಗೌರವಿಸುತ್ತೇವೆ. ಆದರೆ ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರು ತಿರುಗೇಟು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಟಾಂಗ್ ನೀಡಿದರು.

    ಬೀದರ್‍ನ ಗಾಂಧಿಗಂಜ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಯಾಗಿದೆ. ಆದರೂ ಬಿದ್ದೋರಿಗೆ ಮೂಗು ಮಣ್ಣಾಗಿಲ್ಲಾ ಅನ್ನೋದೆ ಉದಾಹರಣೆಯಾಗಬಾರದು ಎಂದು ವ್ಯಂಗ್ಯವಾಡಿದರು.

    ಪಂಜಾಬ್ ಅನ್ನು ನಾವು ಮಾಡೆಲ್ ಆಗಿ ತೆಗೆದುಕೊಳ್ಳಲ್ಲಾ, 2023ಕ್ಕೆ ಕರ್ನಾಟಕವೇ ಒಂದು ಮಾಡೆಲ್ ಆಗುತ್ತದೆ. ಕರ್ನಾಟಕದ ಜನ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರತ್ತಾರೆ ಅಂದರೆ ಅದು ತಪ್ಪು. ಯಾಕೆಂದರೆ ಪಂಜಾಬ್ ಜನ ಒಂದು ಫಲಿತಾಂಶ ಕೊಟ್ಟಿದ್ದಾರೆ. ಅದಕ್ಕಿಂತಲೂ ಒಳ್ಳೆಯ ಫಲಿತಾಂಶ ಕೊಡಲು ಕರ್ನಾಟಕದ ರೈತರು ತೀರ್ಮಾನ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್

    ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ನಮ್ಮಗೂ ರಾಜಕೀಯ ಮಾಡೋಕೆ ಬರುತ್ತದೆ. ನಾವು ನಿಮಗೆ ರಾಜಕೀಯ ತೋರಿಸುತ್ತೇವೆ. ಭೂಸ್ವಾಧೀನ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ 28ರಂದು ಬೆಂಗಳೂರಿನಲ್ಲಿ ಬೃಹತ್ ರೈತರ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು