Tag: punjab

  • ರೇಷನ್‍ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ: ಭಗವಂತ್ ಮಾನ್

    ರೇಷನ್‍ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ: ಭಗವಂತ್ ಮಾನ್

    ಚಂಡೀಗಢ: ಉತ್ತಮ ಗುಣಮಟ್ಟದ ಪಡಿತರವನ್ನು ತಮ್ಮ ಮನೆಯ ಬಾಗಿಲಿಗೆ ತಲುಪಿಸುವುದರಿಂದ ಬಡವರು ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

    ಈ ಕುರಿತಂತೆ ಆಮ್ ಆದ್ಮಿ ಪಕ್ಷ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಭಗವಂತ್ ಮಾನ್ ಅವರು, ಪಡಿತರ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸಲು ಎಎಪಿ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ಉತ್ತಮ ಗುಣಮಟ್ಟದ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು ಮತ್ತು ಇದಕ್ಕಾಗಿ ಯಾರೂ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನಮ್ಮ ಅಧಿಕಾರಿಗಳು ಫಲಾನುಭವಿಗಳಿಗೆ ಫೋನ್ ಕರೆ ಮಾಡುತ್ತಾರೆ ಮತ್ತು ಅವರ ಅನುಕೂಲಕ್ಕೆ ಅನುಗುಣವಾಗಿ ಪಡಿತರವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

    ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿಯೂ ಈ ಯೋಜನೆಯನ್ನು ಪ್ರಾರಂಭಿಸಿದ್ದರು, ಆದರೆ ದುರದೃಷ್ಟವಶಾತ್ ದೆಹಲಿಯಲ್ಲಿ ಈ ಯೋಜನೆಯನ್ನು ನಿಲ್ಲಿಸಲಾಯಿತು. ಆದರೆ ಪಂಜಾಬ್‍ನಲ್ಲಿ ನಾವು ಈ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಮತ್ತು ಯಶಸ್ವಿಯಾಗಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

    ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ ಸರ್ಕಾರ ಜನರಿಗೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ನೀತಿಯನ್ನು ಜಾರಿಗೆ ತಂದರೆ, ಇತರ ರಾಜ್ಯಗಳಲ್ಲಿನ ನಾಗರಿಕರೂ ಬೇಡಿಕೆ ಇಡಲು ಪ್ರಾರಂಭಿಸುತ್ತಾರೆ ಎಂದರು. ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಈ ನೀತಿಯ ಅನುಷ್ಠಾನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

  • ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

    ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

    ಚಂಡೀಗಢ: ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದರು. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್, ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ಬಲವಾಗಿ ಹೋರಾಡಲಿದೆ ಎಂದು ಆಕ್ರೋಶ ಹೊರಹಾಕಿದರು.

    ಅಮಿತ್ ಶಾ ಅವರ ಹೇಳಿಕೆ ಕುರಿತು ಭಗವಂತ್ ಮಾನ್ ಅವರು ಸೋಮವಾರ(ಇಂದು) ಟ್ವಿಟ್ಟರ್‍ನಲ್ಲಿ, ಚಂಡೀಗಢದ ಆಡಳಿತಕ್ಕೆ ಇತರ ರಾಜ್ಯಗಳು ಮತ್ತು ಸೇವೆಗಳಿಂದ ಅಧಿಕಾರಿಗಳನ್ನು ಕರೆತರುವ ಮೂಲಕ ಪಂಜಾಬ್ ಮರುಸಂಘಟನೆ ಕಾಯಿದೆ 1966 ಅನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

    ಕೇಂದ್ರ ಸರ್ಕಾರವು ಚಂಡೀಗಢದ ಆಡಳಿತದಲ್ಲಿ ಇತರ ರಾಜ್ಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಂತಹಂತವಾಗಿ ಹೇರುತ್ತಿದೆ. ಇದು ಪಂಜಾಬ್ ಮರುಸಂಘಟನೆ ಕಾಯಿದೆ 1966ರ ಪತ್ರ ಮತ್ತು ಸ್ಪೂರ್ತಿಗೆ ವಿರುದ್ಧವಾಗಿದೆ. ಪಂಜಾಬ್ ಚಂಡೀಗಢದ ಮೇಲಿನ ತನ್ನ ಹಕ್ಕಿಗಾಗಿ ಬಲವಾಗಿ ಹೋರಾಡುತ್ತದೆ ಎಂದು ಬರೆದು ಟ್ವೀಟ್ ಮಾಡಿದರು.

    ಅಮಿತ್ ಶಾ ಅವರು ಭಾನುವಾರ, ಇಂದು, ಮೋದಿ ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ಮಾಡಿದೆ. ನಾಳೆ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗುವುದು. ಮುಂಬರುವ ಬಜೆಟ್‍ನಲ್ಲಿ(ಏಪ್ರಿಲ್ 1) ನೀವು ಪ್ರಯೋಜನವನ್ನು ಪಡೆಯುತ್ತೀರಿ. ಇದು ಚಂಡೀಗಢದ ದೀರ್ಘಕಾಲದ ಬೇಡಿಕೆಯಾಗಿದೆ. ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಮಾಡಿದೆ ಎಂದು ಉಲ್ಲೇಖಿಸಿದ್ದರು.

    ಅಮಿತ್ ಶಾ ಅವರ ಈ ಹೇಳಿಕೆಯು ಪಂಜಾಬ್‍ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷಗಳಾದ ಅಕಾಲಿದಳ ಮತ್ತು ಕಾಂಗ್ರೆಸ್‍ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿಯ ಉದಯದ ಬಗ್ಗೆ ಬಿಜೆಪಿ ಹೆದರಿದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: SSLC ಪರೀಕ್ಷೆಗೆ ಬರೆಯಲು ಬಂದ 6 ನಕಲಿ ವಿದ್ಯಾರ್ಥಿಗಳು ಪೋಲಿಸರ ವಶ

  • ದುಬಾರಿ ಗಿಫ್ಟ್ ನೀಡೋದಾಗಿ ಮಹಿಳೆಗೆ 5.10 ಲಕ್ಷ ರೂ. ವಂಚಿಸಿದ ಸ್ನೇಹಿತ!

    ದುಬಾರಿ ಗಿಫ್ಟ್ ನೀಡೋದಾಗಿ ಮಹಿಳೆಗೆ 5.10 ಲಕ್ಷ ರೂ. ವಂಚಿಸಿದ ಸ್ನೇಹಿತ!

    ಚಂಡೀಗಢ: ಮಹಿಳೆಗೆ ಫೇಸ್‍ಬುಕ್ ಸ್ನೇಹಿರೊಬ್ಬರು ಇಂಗ್ಲೆಂಡ್‍ನಿಂದ ದುಬಾರಿ ಉಡುಗೊರೆ ಕಳುಹಿಸುತ್ತೇನೆ ಎಂದು ನಂಬಿಸಿ 5.10 ಲಕ್ಷ ರೂ.ನ್ನು ವಂಚಿಸಿದ ಘಟನೆ ಲುಧಿಯಾನದಲ್ಲಿ ನಡೆದಿದೆ.

    ಪ್ರಿಯಾ ಚೋಪ್ರಾ(36) ವಂಚಿತೆ ಹಾಗೂ ರಿಚೆಲ್ ರಿಚರ್ ಆರೋಪಿ. ಪ್ರಿತಾ ಬರೇವಾಲ್ ರಸ್ತೆಯ ಮಧುಬನ್ ಎನ್‍ಕ್ಲೇವ್‍ನಲ್ಲಿ ವಾಸಿಸುತ್ತಿದ್ದಾರೆ. 2020ರಲ್ಲಿ ಪ್ರಿಯಾ ಚೋಪ್ರಾಗೆ ಮಹಾರಾಷ್ಟ್ರದ ಪುಣೆಯ ರಿಚೆಲ್ ರಿಚರ್ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದರು. ರಿಚೆಲ್ ಅವರು ತಾನು ಇಂಗ್ಲೇಂಡ್‍ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡು ಸ್ನೇಹ ಬೆಳೆಸಿದ್ದ.

    ಹೀಗೆ ದಿನ ಕಳೆದಂತೆ ಆತ ದುಬಾರಿ ಗಿಫ್ಟ್‍ನ್ನು ಇಂಗ್ಲೆಂಡ್‍ನಿಂದ ಕಳುಸುತ್ತಿದ್ದೇನೆ. ಆದರೆ ದೆಹಲಿಯ ಕಸ್ಟಮ್ ಇಲಾಖೆಯಲ್ಲಿ ಸಿಲುಕಿಕೊಂಡಿದೆ. ಕಸ್ಟಮ್ ಸುಂಕವನ್ನು ಪಾವತಿಸಿದ ನಂತರ ಅದನ್ನು ತೆಗೆದುಕೊಳ್ಳಬಹುದಾಗಿದೆ. ಈಗ ನೀವು ನೀಡಿ, ಆಮೇಲೆ ಎಲ್ಲಾ ಹಣವನ್ನು ವಾಪಸ್ ನೀಡುತ್ತೇನೆ ಎಂದು ನಂಬಿಸಿದ್ದಾನೆ.

    ಇದೆಲ್ಲದರ ಮಧ್ಯೆ ಪ್ರಿಯಾಗೆ ಕಸ್ಟಮ್ ಇಲಾಖೆ ಅಧಿಕಾರಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯಿಂದ ಅನೇಕ ಬಾರಿ ಕರೆ ಬಂದಿದೆ. ಉಡುಗೋರೆಯನ್ನು ತೆಗೆದುಕೊಳ್ಳಲು 5.10ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೇ ಇಲಾಖೆಯೂ ರಿಚರ್ಡ್ ಹಾಗೂ ಪ್ರಿಯಾ ವಿರುದ್ಧ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಪ್ರಿಯಾ ಭಯಗೊಂಡು ಹಣವನ್ನು ಪಾವತಿಸುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಕರೆ ಮಾಡಿದವರು ನೀಡಿದ್ದ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದರು. ಇದನ್ನೂ ಓದಿ: ಮಕ್ಕಳ ಸ್ನೇಹಿಯಾಗಿ ಪ್ರಶ್ನೆ ಪತ್ರಿಕೆ ಇರಲಿದೆ: ಬಿಸಿ ನಾಗೇಶ್

    ಇದಾದ ಬಳಿಕ ಪ್ರೀಯಾ ಎಷ್ಟೇ ಬಾರಿ ಪ್ರಯತ್ನಿಸಿದರೂ ರಿಚರ್ಡ್ ಕರೆ ಸ್ವೀಕರಿಸಲಿಲ್ಲ. ಜೊತೆ ಸಾಮಾಜಿಕ ಜಾಲತಾಣದಲ್ಲೂ ಆಕೆಯನ್ನು ನಿರ್ಬಂಧಿಸಿದ್ದಾನೆ. ಪ್ರಿಯಾ ಈ ಬಗ್ಗೆ ಸೈಬರ್ ಕ್ರೈಮ್ ಆರೋಪದಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಧರ್ಮ ಸಂಘರ್ಷದ ನಡುವೆ ಸಾಮರಸ್ಯದ ಬದುಕು- ಹಿಂದೂ ಸ್ನೇಹಿತನ ಕಷ್ಟಕ್ಕೆ ನೆರವಾದ ಮುಸ್ಲಿಂ ಗೆಳೆಯ

    ಈ ಬಗ್ಗೆ ತನಿಖಾಧಿಕಾರಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅಮೃತಪಾಲ್ ಶರ್ಮಾ ಮಾತನಾಡಿ, ಸೈಬರ್ ಕ್ರೈಂ ಆರೋಪಿಗಳು ಬಳಸಿದ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಲಾಗಿದೆ. ಮಾಹಿತಿಯ ಆಧಾರದ ಮೇಲೆ, ರಿಚರ್ಡ್ ಮತ್ತು ಅವರ ಅಪರಿಚಿತ ಸಹಚರನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

  • ಇನ್ಮುಂದೆ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

    ಇನ್ಮುಂದೆ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

    ಚಂಡೀಗಢ: ಪಂಜಾಬ್ ಮಾಜಿ ಶಾಸಕರು 2 ಬಾರಿ, 5 ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಸಲ್ಲಿಸಿದ್ದ ಸೇವೆಗೆ ಪ್ರತಿ ಅವಧಿಗೂ ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.

    Bhagwant Mann

    ಶುಕ್ರವಾರ ವೀಡಿಯೋ ಸಂದೇಶವೊಂದರಲ್ಲಿ ಮಾತನಾಡಿರುವ ಅವರು, ಈ ಹಿಂದೆ ಶಾಸಕರಾಗಿದ್ದ ಹಲವಾರು ಸಂಸದರು ಸಹ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ಇನ್ನು ಮುಂದೆ ಅವರ ಪಿಂಚಣಿಯನ್ನು ಒಂದು ಅವಧಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    `ನಮ್ಮ ರಾಜಕೀಯ ನಾಯಕ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮತ ಪಡೆದು ಗೆಲ್ಲುತ್ತಾರೆ. ಆದರೆ 3-4 ಬಾರಿ ಗೆದ್ದ ನಂತರವೂ ಹಲವು ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸೋತರು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಭಗವಂತ್ ಮಾನ್ ಹೇಳಿದ್ದಾರೆ.

    Bhagwant Mann

    ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕಪಟ್ಟಿದ್ದಾರೆ.  ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಜೀವನಪರ್ಯಂತ ಪಿಂಚಣಿ ಹಣ ನೀಡಲಾಗುತ್ತದೆ. ಆದರೆ ಪಂಜಾಬ್‌ನ ಭಗವಂತ್ ಮಾನ್ ಸರ್ಕಾರಲ್ಲಿ ಈ ಯೋಜನೆಗೆ ಕಡಿವಾಣ ಹಾಕಲು ಮುಂದಾಗಿದೆ. ಇನ್ಮುಂದೆ ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ ಪಡೆಯಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

  • ಮೋದಿ ಬಳಿ 50 ಸಾವಿರ ಕೋಟಿ ಅನುದಾನ ಕೋರಿದ ಪಂಜಾಬ್ ಸಿಎಂ

    ಮೋದಿ ಬಳಿ 50 ಸಾವಿರ ಕೋಟಿ ಅನುದಾನ ಕೋರಿದ ಪಂಜಾಬ್ ಸಿಎಂ

    ಚಂಡೀಗಢ: ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪಂಜಾಬ್ ಸ್ಥಿತಿಗತಿ ಹಾಗೂ ಮುಂದೆ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.

    ಇದೇ ವೇಳೆ ಪಂಜಾಬ್ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಪ್ರತಿ ವರ್ಷ 50 ಸಾವಿರ ಕೋಟಿ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು. ಹಣ ಬಿಡುಗಡೆ ಮಾಡಿದರೆ, ಮುಂದಿನ 2 ವರ್ಷದಲ್ಲಿ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣಲಿದೆ ಎಂದು ಮಾನ್ ಪ್ರಸ್ತಾಪಿಸಿದರು. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ಸ್ಫೋಟ- ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಸುನೀಲ್ ಕುಮಾರ್

    ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಪ್ರಧಾನಿ ನರೇಂದ್ರ ಮೋದಿ, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು. ಪಂಜಾಬ್ ಮತ್ತು ಅಲ್ಲಿನ ಜನರ ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದು ಶುಭಕೋರಿದರು. ಇದನ್ನೂ ಓದಿ: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಸಿದ್ದು

  • ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    ಚಂಡೀಗಢ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ ನೀಡಲಾಗುವುದು ನೂತನ ಆಪ್ ಸರ್ಕಾರ ಘೋಷಣೆ ಮಾಡಿದೆ.

    ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿ ವರ್ಷ ಮಾರ್ಚ್ 23 ರಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

    ಭಗತ್ ಸಿಂಗ್ ಒಬ್ಬ ಭಾರತೀಯ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಅತ್ಯಂತ ಪ್ರಸಿದ್ಧ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು. ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಜನರು ಅವರ ಹುಟ್ಟೂರು ಖಟ್ಕರ್ ಕಲಾನ್‌ಗೆ ತೆರಳಿ ನಮನ ಸಲ್ಲಿಸಲು ಅನುಕೂಲವಾಗಲು ರಜೆ ಘೋಷಿಸಲಾಗಿದೆ ಎಂದು ವಿಧಾನ ಸಭೆಯಲ್ಲಿ ಭಗವಂತ್ ಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

    ಭವಗಂತ್ ಮಾನ್ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಕಾರ್ಯಕ್ರಮವನ್ನು ಕೂಡಾ ಭಗತ್ ಸಿಂಗ್‌ರ ಊರು ಖಟ್ಕರ್ ಕಲಾನ್‌ನಲ್ಲಿಯೇ ಆಯೋಜಿಸಲಾಗಿತ್ತು.

  • ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು

    ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು

    ಚಂಡೀಗಢ: ಪಂಜಾಬ್‍ನ ರಾಜ್ಯಸಭಾ ನಾಮನಿರ್ದೇಶಿತರಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೊರತು ಪಡಿಸಿ ಉಳಿದ ಸಂಸದರೆಲ್ಲರೂ ದೆಹಲಿ ರಿಮೋಟ್ ಕಂಟ್ರೋಲ್‍ನ ಬ್ಯಾಟರಿಗಳು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟೀಕಿಸಿದರು.

    ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಂಜಾಬ್‍ನಿಂದ ಐದು ರಾಜ್ಯಸಭಾ ನಾಮನಿರ್ದೇಶಿತರ ಪಕ್ಷದ ಆಯ್ಕೆ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು.

    ಟ್ವೀಟ್‍ನಲ್ಲಿ ಏನಿದೆ?: ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆಯಾಗಿವೆ. ಹರ್ಭಜನ್ ಅವರನ್ನು ಹೊರತು ಪಡಿಸಿದರೆ, ಉಳಿದವರು ದೆಹಲಿ ರಿಮೋಟ್ ಕಂಟ್ರೋಲ್‍ಗೆ ಬ್ಯಾಟರಿಗಳಾಗಿದ್ದಾರೆ. ಇದರಿಂದ ಪಂಜಾಬ್‍ಗೆ ದ್ರೋಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದಿಂದ ಜನರಿಗೆ ಹಣದುಬ್ಬರದ ಗೀಫ್ಟ್: ಅಖಿಲೇಶ್ ಯಾದವ್

    ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ.

  • ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ನವದೆಹಲಿ : ಮಾರ್ಚ್ 31 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಅದ್ಮಿ ಪಂಜಾಬ್‍ನಿಂದ ಐದು ಮಂದಿ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಿದ್ದು ಇದರಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್‍ಸಿಂಗ್ ಕೂಡಾ ಒಳಗೊಂಡಿದ್ದಾರೆ.

    ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ

    ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ

    ಹರ್ಭಜನ್ ಸಿಂಗ್ ಆಯ್ಕೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಆಮ್ ಅದ್ಮಿ ಹಾಕಿಕೊಂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಹರ್ಭಜನ್ ಸಿಂಗ್ ಪಂಜಾಬ್‍ನಲ್ಲಿ ಸ್ಪೋರ್ಟ್ಸ್ ಐಕಾನ್ ಆಗಲಿದ್ದಾರೆ. ಈ ಮೂಲಕ ಪಂಜಾಬ್‍ನಲ್ಲಿ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವುದು ಮತ್ತು ಯುವಕರನ್ನು ಪಕ್ಷದತ್ತ ಸೆಳೆಯುವ ಲೆಕ್ಕಾಚಾರ ಹೊಂದಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

  • 4 ರಾಜ್ಯ ಗೆದ್ದರೂ ಬಿಜೆಪಿ ಇನ್ನೂ ಸರ್ಕಾರ ಮಾಡಿಲ್ಲ: ಕೇಜ್ರಿವಾಲ್‌

    4 ರಾಜ್ಯ ಗೆದ್ದರೂ ಬಿಜೆಪಿ ಇನ್ನೂ ಸರ್ಕಾರ ಮಾಡಿಲ್ಲ: ಕೇಜ್ರಿವಾಲ್‌

    ಚಂಡೀಗಢ: ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ 4 ರಾಜ್ಯಗಳನ್ನು ಬಿಜೆಪಿ ಗೆದ್ದಿದ್ದರೂ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ವಿಧಾನಸಭೆಯಲ್ಲಿ ಆಪ್ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಸಮಯ ವ್ಯರ್ಥ ಮಾಡದೆ ಸರ್ಕಾರವನ್ನು ರಚಿಸಲಾಗಿದೆ. ಈಗಾಗಲೇ ಈ ಸರ್ಕಾರವು ಪಂಜಾಬ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದರು.

    ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಸಂಪುಟದ ಪ್ರತಿಯೊಬ್ಬ ಸಚಿವರಿಗೂ ಗುರಿಯನ್ನು ನಿಗದಿಪಡಿಸಿದ್ದಾರೆ. ಅದನ್ನು ಅವರು ಪೂರೈಸದಿದ್ದರೇ ಜನರು ತೆಗೆದುಹಾಕುವಂತೆ ಒತ್ತಾಯಿಸಬಹುದು. ಪಂಜಾಬ್ ಜನತೆ ವಜ್ರವನ್ನು ಆಯ್ಕೆ ಮಾಡಿದ್ದಾರೆ. ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟದಲ್ಲಿ 92 ಜನರು ಕೆಲಸ ಮಾಡಬೇಕಾಗಿದೆ ಎಂದ ಅವರು, ಶಾಸಕರು ಜನರ ಮಧ್ಯೆ ಓಡಾಡುತ್ತಾರೆ. ಹಳ್ಳಿಗಳಿಗೆ ಹೋಗುತ್ತಾರೆ ಎನ್ನುವುದು ಪಕ್ಷದ ಮಂತ್ರವಾಗಿದೆ ಎಂದರು.

    ಭಗವಂತ್‍ಮಾನ್ ಅವರು ಈಗಾಗಲೇ ಹಳೆಯ ಮುಖ್ಯಮಂತ್ರಿಗಳ ಭದ್ರತೆಯನ್ನು ತೆಗೆದು ಹಾಕಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಭದ್ರತೆಯನ್ನು ನೀಡಿದ್ದಾರೆ ಎಂದ ಅವರು, ಶಾಸಕರು ಸಮಯಪಾಲನೆ ಮಾಡುವ ಜೊತೆಗೆ ತಮ್ಮ ಕ್ಷೇತ್ರದ ಪ್ರತಿ ಪಟ್ಟಣದಲ್ಲೂ ಕಚೇರಿಯನ್ನು ತೆರೆಯಬೇಕು. ಅವರು ದಿನದ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡೋದು ಬಿಡೋದು ಕಾಂಗ್ರೆಸ್ ಇಷ್ಟ: ಮಾಧುಸ್ವಾಮಿ

    ದೆಹಲಿಯಲ್ಲಿ ನಾನು ಗಮನಿಸುತ್ತಿದ್ದೇನೆ. ಪ್ರತಿಯೊಬ್ಬ ಶಾಸಕ ಮತ್ತು ಸಚಿವರ ಬಗ್ಗೆ ಜನರು ಏನು ಹೇಳುತ್ತಿದ್ದಾರೆಂದು ತಿಳಿದುಕೊಳ್ಳಲು ಸಮೀಕ್ಷೆ ಮಾಡಿದ್ದೇವೆ. 20-22 ಶಾಸಕರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ. ಇದರಿಂದಾಗಿ ಅವರಿಗೆ ಟಿಕೆಟ್ ರದ್ದುಗೊಳಿಸಿ ಇತರರಿಗೆ ನೀಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

  • ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜಕೀಯ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದ ಸೇನಾನೆಲೆಯಲ್ಲಿ ಭಾರೀ ಸ್ಪೋಟ ಕಂಡುಬಂದಿದ್ದು, ಸಂಚಲನ ಸೃಷ್ಟಿಸಿದೆ.

    ಉತ್ತರ ಪಾಕಿಸ್ತಾನದ ಭಾಗದ ಸಿಯಾಲ್ಕೋಟ್ ನಗರದಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದ್ದು, ಸದ್ಯ ಸ್ಪೋಟಗೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಪಂಜಾಬ್ ಪ್ರಾಂತ್ಯದ ನಿಷೇಧಿತ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಉತ್ತರ ಪಾಕಿಸ್ತಾನದ ಸಿಯಾಲ್‍ಕೋಟ್ ಸೇನಾ ನೆಲೆಯಲ್ಲಿ ಬಹು ಸ್ಫೋಟ ಉಂಟಾಗಿದ್ದು, ಪ್ರಾಥಮಿಕ ಮಾಹಿತಿಗಳು ಇದು ಮದ್ದುಗುಂಡುಗಳ ಸಂಗ್ರಹ ಪ್ರದೇಶವಾಗಿದೆ. ದೊಡ್ಡ ಬೆಂಕಿ ಹೊತ್ತಿ ಉರಿಯುತ್ತಿದೆ. ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.