Tag: punjab

  • ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಡಾ.ಗುರುಪ್ರೀತ್ ಕೌರ್ ಅವರನ್ನು ಇಂದು ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ವಿಶೇಷವೆಂದರೆ ಈ ಮದುವೆ ಸಮಾರಂಭದಲ್ಲಿನ ಫುಡ್ ಮೆನು ಎಲ್ಲರ ಗಮನ ಸೆಳೆದಿದೆ.

    ಸಾಮಾನ್ಯವಾಗಿ ಮದುವೆ ಸಮಾರಂಭ ಊಟವಿಲ್ಲದೇ ಪರಿಪೂರ್ಣವಾಗುವುದಿಲ್ಲ. ಮದುವೆ ವೇಳೆ ಅನೇಕ ವಿವಿಧ ಖಾದ್ಯಗಳನ್ನು ಮಾಡಿಸಲಾಗಿರುತ್ತದೆ. ಸದ್ಯ ಭಗವಂತ್ ಮಾನ್ ಅವರು ತಮ್ಮ ಮದುವೆಗೆ ಆಗಮಿಸಿರುವ ಅಥಿತಿಗಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ. ಎಲ್ಲ ರೀತಿಯ ಖಾದ್ಯಗಳು ಎಲ್ಲರ ಬಾಯಿಯಲ್ಲಿ ನೀರು ತರಿಸುವಂತಿದೆ. ಇದನ್ನೂ ಓದಿ: ನಿಮ್ಮ ಮದುವೆ ಯಾವಾಗ – ರಾಘವ್ ಚಡ್ಡಾಗೆ ಪ್ರಶ್ನೆ

    Bhagwant Maan

    ಹೌದು ಭಗವಂತ್ ಮಾನ್ ಅವರ ಮದುವೆ ಸಮಾರಂಭದಲ್ಲಿ ಅತಿಥಿಗಳಿಗಾಗಿ ಕರಾಹಿ ಪನೀರ್, ತಂದೂರಿ ಕುಲ್ಚಾ, ದಾಲ್ ಮಖಾನಿ, ನವರತನ್ ಬಿರಿಯಾನಿ, ಮೌಸಮಿ ಸಬ್ಜಿಯಾನ್, ಏಪ್ರಿಕಾಟ್ ಸ್ಟಫ್ಡ್ ಕೋಫ್ತಾ, ಲಸಾಗ್ನಾ ಸಿಸಿಲಿಯಾನೋ ಮತ್ತು ಬಿರಿಯಾನಿ ರೈತಾ ಸೇರಿದಂತೆ ಭಾರತೀಯ ಮತ್ತು ಇಟಾಲಿಯನ್ ಫುಡ್‍ಗಳನ್ನು ಮಾಡಿಸಲಾಗಿದೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

    ಇನ್ನೂ ಸಿಹಿ ತಿಂಡಿ ವಿಚಾರಕ್ಕೆ ಬಂದರೆ ಫ್ರೆಶ್ ಫ್ರೂಟ್ ಟ್ರಫಲ್, ಮೂಂಗ್ ದಾಲ್ ಹಲ್ವಾ, ಶಾಹಿ ತುಕ್ಡಾ, ಅಂಗೂರಿ ರಸಮಲೈ ಮತ್ತು ಡ್ರೈ ಫ್ರೂಟ್ ರಬರಿ, ಬಿಸಿ ಗುಲಾಬ್ ಜಾಮೂನ್‍ನಂತಹ ವಿವಿಧ ಸಿಹಿತಿಂಡಿಗಳಿವೆ ಮತ್ತು ಆರೋಗ್ಯ ಸಮಸ್ಯೆಗೆ ಹೊಂದಿರುವವರಿಗೆ ವಿವಿಧ ರೀತಿಯ ಸಲಾಡ್‍ಗಳ ವ್ಯವಸ್ಥೆಗೊಳಿಸಲಾಗಿದೆ.

    ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಮದುವೆ ಯಾವಾಗ – ರಾಘವ್ ಚಡ್ಡಾಗೆ ಪ್ರಶ್ನೆ

    ನಿಮ್ಮ ಮದುವೆ ಯಾವಾಗ – ರಾಘವ್ ಚಡ್ಡಾಗೆ ಪ್ರಶ್ನೆ

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಚಂಡೀಗಢದಲ್ಲಿ ಡಾ. ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಲಿದ್ದಾರೆ. ಈ ನಡುವೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಯಾವಾಗ ಮದುವೆಯಾಗುತ್ತಾರೆ ಎಂಬ ಚರ್ಚೆ ಭಾರೀ ಜೋರಾಗಿದೆ.

    Bhagwant Mann

    ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ರಾಘವ್ ಚಡ್ಡಾ ಅವರು, ಭಾರತದ ಸಂಪ್ರದಾಯದ ಪ್ರಕಾರ ಕುಟುಂಬದಲ್ಲಿ ಮೊದಲು ಹಿರಿಯರು ಮದುವೆಯಾಗುತ್ತಾರೆ. ಕಿರಿಯರು ಹಿರಿಯರನ್ನು ಅನುಸರಿಸುತ್ತಾರೆ ಎಂದು ಹೇಳುವ ಮೂಲಕ ಭಗವಂತ್ ಮಾನ್ ಅವರನ್ನು “ಹಿರಿಯ ಸಹೋದರ” ಎಂದು ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

     

    ಮದುವೆಯಾಗುವುದಕ್ಕೆ ಈಗಾಗಲೇ ಆಫರ್‌ಗಳು ಬರುತ್ತಿದೆ. ಸಾಕಷ್ಟು ಮಂದಿ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ಮದುವೆಯಾಗಲು ನಿರ್ಧರಿಸಿದ ಬಳಿಕ ಖಂಡಿತವಾಗಿಯೂ ನನ್ನ ಮದುವೆ ಯಾವಾಗ ಎಂಬುವುದನ್ನು ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    ಭಗವಂತ್ ಮಾನ್ ಅವರ ಮದುವೆ ಕಾರ್ಯಕ್ರಮದ ನಿರ್ವಹಣೆಯನ್ನು ರಾಘವ್ ಚಡ್ಡಾ ಅವರು ವಹಿಸಿದ್ದು, ಈ ಕುರಿತಂತೆ ಮಾತನಾಡಿದ ಅವರು, ಇದೊಂದು ಖಾಸಗಿ ಸಮಾರಂಭವಾಗಿದ್ದು, ಬೆರಳೆಣಿಕೆಯಷ್ಟು ಪಕ್ಷದ ಸದಸ್ಯರು ಮತ್ತು ಎರಡೂ ಕುಟುಂಬಸ್ಥರ ಆಪ್ತ ವರ್ಗದವರು ಮಾತ್ರ ಭಾಗವಹಿಸಲಿದ್ದಾರೆ. ಅಲ್ಲದೇ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

    ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

    ನವದೆಹಲಿ: ಪಂಜಾಬ್‍ನ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದ ಆರೋಪಿಗಳ ಗ್ಯಾಂಗ್ ಕಾರಿನಲ್ಲಿ ಗನ್‍ಗಳನ್ನು ತೋರಿಸುತ್ತ ಸಂಭ್ರಮಿಸುತ್ತಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಇಂದು ದೆಹಲಿ ಪೊಲೀಸರ ತಂಡ ಲಾರೆನ್ಸ್ ಬಿಷ್ಣೋಯ್ ಗೋಲ್ಡಿ ಬ್ರಾರ್ ಗ್ಯಾಂಗ್‍ಗೆ ಸೇರಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ನಾಲ್ವರ ಪೈಕಿ ಅಂಕಿತ್ ಸಿರ್ಸಾ, ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಒಬ್ಬ ಎಂದು ತಿಳಿಸಿದ್ದಾರೆ. ಅಂಕಿತ್ ಸಿರ್ಸಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತನ ಮೊಬೈಲ್‍ನಲ್ಲಿ ಈ ವೀಡಿಯೋ ಕಂಡುಬಂದಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ- ಸಶಸ್ತ್ರಪಡೆಗಳಿಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣಿ

    ವೀಡಿಯೋದಲ್ಲಿ ಐವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಪಂಜಾಬಿ ಹಾಡು ಕಾರ್‍ನಲ್ಲಿ ಕೇಳಿಬರುತ್ತಿದ್ದು ಹಾಡಿಗೆ ತಕ್ಕಂತೆ ಕೈನಲ್ಲಿ ಗನ್ ಹಿಡಿದು ಆರೋಪಿಗಳು ಸಂಭ್ರಮಿಸಿದ್ದಾರೆ. ಈ ವೀಡಿಯೋದಲ್ಲಿ ಬಂಧಿತ ಆರೋಪಿ ಅಂಕಿತ್ ಸಿರ್ಸಾ ಕೂಡ ಕಾಣಿಸಿಕೊಂಡಿದ್ದಾನೆ. 18ರ ಹರೆಯದ ಅಂಕಿತ್ ಸಿರ್ಸಾ ಕಳೆದ ರಾತ್ರಿ ದೆಹಲಿಯಬಸ್ ಟರ್ಮಿನಲ್‌ನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ.

    ಪಂಜಾಬಿ ಗಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದಲ್ಲದೇ, ಅಂಕಿತ್ ಸಿರ್ಸಾ ರಾಜಸ್ಥಾನದಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಲ್ಲೂ ಭಾಗಿಯಾಗಿದ್ದ. ಬಂಧಿತ ಇನ್ನೋರ್ವ ಆರೋಪಿ ಸಚಿನ್ ಭಿವಾನಿ, ಸಿಧು ಮೂಸೆವಾಲಾ ಹತ್ಯಾ ಪ್ರಕರಣದಲ್ಲಿ 4 ಜನ ಶೂಟರ್‌ಗಳಿಗೆ ಆಶ್ರಯ ನೀಡಿದ್ದ ಹಾಗಾಗಿ ಇವರಿಬ್ಬರೊಂದಿಗೆ ಮತ್ತಿಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯಾ ಪ್ರಕರಣ – ದೆಹಲಿಯಲ್ಲಿ ಗುಂಡು ಹಾರಿಸಿದವನ ಬಂಧನ

    ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಪಂಜಾಬ್‍ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಅವರ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದುಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಪೊಲೀಸರಿಂದ 9 ಟೆರರಿಸ್ಟ್ ಬಂಧನ

    ಪಾಕ್ ಪೊಲೀಸರಿಂದ 9 ಟೆರರಿಸ್ಟ್ ಬಂಧನ

    ಇಸ್ಲಾಮಾಬಾದ್: ಪಾಕಿಸ್ತಾನದ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ 9 ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಲ್ಲಿ ನಾಲ್ವರು ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ಪಾಕ್ ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಪಾಕಿಸ್ತಾನದ ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಸುಳಿವಿನ ಮೇರೆಗೆ ದಾಳಿ ನಡೆಸಿ, 9 ಭಯೋತ್ಪಾದಕರನ್ನು ಬಂಧಿಸಿದೆ. ಅದರಲ್ಲಿ ನಾಲ್ವರು ಐಸಿಸ್‌ಗೆ ಸೇರಿದವರಾಗಿದ್ದು, ಇತರರು ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನದ(ಟಿಟಿಪಿ) ವಿವಿಧ ಬಣಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಒಬ್ಬ ಲಷ್ಕರ್-ಎ-ಜಾಂಗ್ವಿ(ಎಲ್‌ಇಜೆ) ಸಂಘಟನೆಯ ಸದಸ್ಯ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

    ಬಂಧನವಾಗಿರುವ ಎಲ್ಲಾ ಭಯೋತ್ಪಾದಕರನ್ನೂ ಹೆಚ್ಚಿನ ತನಿಖೆಗಾಗಿ ಅಜ್ಞಾತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಕಳೆದ ವಾರ ಪಂಜಾಬ್ ಪ್ರಾಂತ್ಯದಲ್ಲಿ ಟಿಟಿಪಿಗೆ ಸೇರಿದ 11 ಭಯೋತ್ಪಾದಕರನ್ನು ಸಿಟಿಡಿ ಬಂಧಿಸಿದೆ. ಸದ್ಯ ಬಂಧಿತ ಭಯೋತ್ಪಾದಕರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

     

    Live Tv

  • ಆಟವಾಡುತ್ತಾ ಭಾರತದ ಗಡಿ ಪ್ರವೇಶಿಸಿದ ಪಾಕ್‍ನ 3 ವರ್ಷದ ಮಗು

    ಆಟವಾಡುತ್ತಾ ಭಾರತದ ಗಡಿ ಪ್ರವೇಶಿಸಿದ ಪಾಕ್‍ನ 3 ವರ್ಷದ ಮಗು

    ಚಂಡೀಗಢ: ಪಾಕಿಸ್ತಾನದ ಗಡಿ ದಾಟಿ ಭಾರತ ಪ್ರವೇಶಿಸಿದ್ದ 3 ವರ್ಷದ ಮಗುವೊಂದನ್ನು ಭಾರತದ ಭದ್ರತಾಪಡೆ ಮತ್ತೆ ಹೆತ್ತವರಿಗೆ ಹಸ್ತಾಂತರಿಸಿದ ಘಟನೆ ಪಂಜಾಬ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.

    ಭಾರತದ ಗಡಿಭಾಗವಾದ ಪಂಜಾಬ್‍ನ ಫಿರೋಜ್‍ಪುರ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಮಗುವೊಂದು ಆಟವಾಡುತ್ತಾ ತನಗರಿವಿಲ್ಲದೇ ಭಾರತಕ್ಕೆ ನುಸುಳಿತ್ತು. ರಾತ್ರಿ ವೇಳೆ ಆ 3 ವರ್ಷದ ಮಗು ದಾರಿ ಕಾಣದೆ ಸುತ್ತಾಡುತ್ತಿತ್ತು.

    ಈ ವೇಳೆ ಮಗು ಅಳುತ್ತಿರುವ ಶಬ್ದವನ್ನು ಬಿಎಸ್‍ಎಫ್ ಯೋಧರು ಗಮನಿಸಿದ್ದಾರೆ. ಅದರಂತೆ ಬಿಎಸ್‍ಎಫ್ ಪಂಜಾಬ್ ಫ್ರಾಂಟಿಯರ್‌ನ 182 ಬೆಟಾಲಿಯನ್ ಸೈನಿಕರು ಪಾಕಿಸ್ತಾನಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪಾಕಿಸ್ತಾನದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕನ್ಹಯ್ಯ ಕೊಲೆ ಹಸಿರಾಗಿರುವಾಗಲೇ ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ

    ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್‍ಎಫ್ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿಗೆ ತೆರಳಿ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಭಾರತ ಸೈನಿಕರು ಸೌಹಾರ್ದತೆಯನ್ನು ಮೆರೆದಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    Live Tv

  • ಕಾಂಗ್ರೆಸ್ ತೊರೆದ 8 ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರಾ ಅಮರಿಂದರ್ ಸಿಂಗ್?

    ಕಾಂಗ್ರೆಸ್ ತೊರೆದ 8 ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರಾ ಅಮರಿಂದರ್ ಸಿಂಗ್?

    ಚಂಡೀಗಢ: ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಬೆನ್ನು ಶಸ್ತ್ರಚಿಕಿತ್ಸೆಗಾಗಿ ಲಂಡನ್ ತೆರಳಿದ್ದರು. ಮುಂದಿನ ವಾರ ಅವರು ಲಂಡನ್‌ನಿಂದ ಭಾರತಕ್ಕೆ ಮರಳಲಿದ್ದು, ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2.5 ವರ್ಷಗಳ ಹಿಂದೆಯೇ ಸೇನಾ ನಾಯಕನಿಗೆ ಬಿಜೆಪಿ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರೆ MVA ಹುಟ್ಟುತ್ತಿರಲಿಲ್ಲ: ಠಾಕ್ರೆ

    ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, 5 ದಶಕಗಳ ವರೆಗೆ ಕಾರ್ಯ ನಿರ್ವಹಿಸಿದ್ದ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಿಂಗ್ ಬರೆದಿದ್ದ ಪತ್ರದಲ್ಲಿ, ತಾವು ನಾಯಕತ್ವದಲ್ಲಿ 3 ಬಾರಿ ಅವಮಾನಕ್ಕೊಳಗಾಗಿದ್ದೇನೆ. ಇನ್ನು ಮುಂದೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.

    3 ಬಾರಿ ಸಿಎಂ ಆಗಿದ್ದ ಅಮರಿಂದರ್ ಸಿಂಗ್ ಕಾಂಗ್ರೆಸ್‌ನಿಂದ ಅವಮಾನಕ್ಕೊಳಗಾದರೂ ಬಿಜೆಪಿ ಸೇರಲು ನಿರಾಕರಿಸಿದ್ದರು. ಕಳೆದ ವರ್ಷ ಕಾಂಗ್ರೆಸ್ ಅನ್ನು ತೊರೆದ ಬಳಿಕ ತಮ್ಮದೇ ಪಕ್ಷವನ್ನು ಪ್ರಾರಂಭಿಸಿದರು. ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರು. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    ಅಮರಿಂದರ್ ಸಿಂಗ್ ಅವರ ಶಸ್ತ್ರಚಿಕಿತ್ಸೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಶೀಘ್ರವೇ ಅವರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    Live Tv

  • ಇಂದಿನಿಂದ ಪಂಜಾಬ್ ಪ್ರತಿಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ: ಭಗವಂತ್ ಮಾನ್

    ಇಂದಿನಿಂದ ಪಂಜಾಬ್ ಪ್ರತಿಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ: ಭಗವಂತ್ ಮಾನ್

    ಚಂಡೀಗಢ: ಪಂಜಾಬ್‍ನಲ್ಲಿ ಜುಲೈ 1ರಿಂದ ಗೃಹ ಬಳಕೆಗಾಗಿ ತಿಂಗಳಿಗೆ 300 ಯೂನಿಟ್‍ಗಳ ಉಚಿತ ವಿದ್ಯುತ್ ಪೂರೈಸುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಘೋಷಿಸಿತ್ತು. ಅದರಂತೆ ಇಂದಿನಿಂದ ಪಂಜಾಬ್‍ನ ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪೂರೈಸುತ್ತಿದೆ.

    2022 ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ ನೀಡಿದ ಪ್ರಮುಖ ಭರವಸೆಗಳಲ್ಲಿ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದು ಕೂಡ ಒಂದಾಗಿತ್ತು. ಅದರಂತೆ ಜುಲೈ 1 ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಸರ್ಕಾರ ಸೋಮವಾರ ಘೋಷಿಸಿತ್ತು. ಇದನ್ನೂ ಓದಿ : ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

    ಈ ಕುರಿತಂತೆ ಟ್ವೀಟ್ ಮಾಡಿರುವ ಭಗವಂತ ಮಾನ್ ಅವರು, ಹಿಂದಿನ ಸರ್ಕಾರಗಳು ಚುನಾವಣೆಯ ಸಮಯದಲ್ಲಿ ಭರವಸೆಗಳನ್ನು ನೀಡುತ್ತಿದ್ದವು. ಅವರು ನೀಡಿದ ಭರವಸೆಗಳನ್ನು ಈಡೇರಿಸುವಷ್ಟರಲ್ಲಿ 5 ವರ್ಷ ಕಳೆದೆ ಹೋಗುತ್ತಿತ್ತು. ಆದರೆ ನಮ್ಮ ಸರ್ಕಾರ ಪಂಜಾಬ್ ಇತಿಹಾಸದಲ್ಲಿಯೇ ಹೊಸ ಮಾದರಿಯನ್ನು ಸ್ಥಾಪಿಸಿದೆ. ನಾವು ಪಂಜಾಬ್ ಜನತೆಗೆ ನೀಡಿದ ಭರವಸೆಯನ್ನು ಇಂದು ಈಡೇರಿಸುತ್ತಿದ್ದೇವೆ. ಇಂದಿನಿಂದ ಪಂಜಾಬ್‍ನ ಪ್ರತಿ ಕುಟುಂಬಗೂ ತಿಂಗಳಿಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ : ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

    ಮತ್ತೊಂದೆಡೆ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು, ಇಂದು ಐತಿಹಾಸಿಕ ದಿನವಾಗಿದ್ದು, ದೆಹಲಿಯ ನಂತರ ಜನರಿಗೆ ಉಚಿತ ವಿದ್ಯುತ್ ಒದಗಿಸುತ್ತಿರುವ ಎರಡನೇ ರಾಜ್ಯ ಪಂಜಾಬ್ ಆಗಿದೆ. ಪಂಜಾಬ್ ಜನತೆಗೆ ಕೇಜ್ರಿವಾಲ್ ನೀಡಿದ ಗ್ಯಾರಂಟಿ ನಿಜವಾಗುತ್ತಿದೆ ಎಂದು ಹೇಳಿದ್ದಾರೆ.

    Live Tv

  • ಅಗ್ನಿಪಥ್ ಯೋಜನೆ ವಿರುದ್ಧ ಪಂಜಾಬ್ ವಿಧಾನಸಭೆ ನಿರ್ಣಯ ಅಂಗೀಕಾರ

    ಅಗ್ನಿಪಥ್ ಯೋಜನೆ ವಿರುದ್ಧ ಪಂಜಾಬ್ ವಿಧಾನಸಭೆ ನಿರ್ಣಯ ಅಂಗೀಕಾರ

    ಚಂಡೀಗಢ: ಕೇಂದ್ರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.

    ಅಗ್ನಿಪಥ್ ವಿರೋಧಿ ನಿರ್ಣಯವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸದನದಲ್ಲಿ ಮಂಡಿಸಿದ್ದು, ಶೀಘ್ರದಲ್ಲೇ ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಣಯವನ್ನು ಬಿಜೆಪಿಯ ಶಾಸಕರಾದ ಅಶ್ವಿನಿ ಶರ್ಮಾ ಹಾಗೂ ಜಂಗಿ ಲಾಲ್ ಮಹಾಜನ್ ವಿರೋಧಿಸಿದ್ದಾರೆ.

    ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಟೀಕಿಸಿದ ಮಾನ್, ಈ ಯೋಜನೆ ದೇಶದ ಯುವಜನತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಬಾಜ್ವಾ ಆಗ್ರಹಿಸಿದ್ದಾರೆ. ಶಿರೋಮಣಿ ಅಕಾಲಿ ದಳದ ಶಾಸಕ ಮನ್‌ಪ್ರೀತ್ ಸಿಂಗ್ ಅಯಾಲಿಯೂ ಈ ನಿರ್ಣಯವನ್ನು ಬೆಂಬಲಿಸಿದ್ದು, ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: 107 ನಾಮಪತ್ರ ತಿರಸ್ಕೃತ, ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಲ್ಲಿ ಪೈಪೋಟಿ

    ನಿರ್ಣಯದ ಪ್ರಕಾರ, ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವಂತೆ ಸದನ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಭಾರತ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧವಾಗಿ ಪಂಜಾಬ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ನಡೆದಿವೆ ಎಂದು ಮಾನ್ ತಿಳಿಸಿದ್ದಾರೆ.

    ಯುವಕರಿಗೆ ಕೇವಲ 4 ವರ್ಷಗಳ ವರೆಗೆ ಮಾತ್ರವೇ ಸೇನೆಯಲ್ಲಿ ಉದ್ಯೋಗ ನೀಡಲಾಗುವುದು. ಬಳಿಕ ಅದರಲ್ಲಿ ಕೇವಲ ಶೇ.25 ರಷ್ಟು ಅಗ್ನಿವೀರರನ್ನು ಸೇನೆಯಲ್ಲಿ ಉಳಿಸಿಕೊಳ್ಳಲಾಗುವುದು. ಈ ಯೋಜನೆ ರಾಷ್ಟ್ರೀಯ ಭದ್ರತೆ ಅಥವಾ ದೇಶದ ಯುವಕರ ಹಿತದೃಷ್ಟಿಯಿಂದ ಮಾಡಲಾಗಿಲ್ಲ. ಈ ಯೋಜನೆ ಸೇನೆಯಲ್ಲಿ ದೀರ್ಘಕಾಲದ ವರೆಗೆ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಅಸಮಾಧಾನ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

    Live Tv

  • ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಸಾವು

    ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಸಾವು

    ಚಂಡೀಗಢ: ಗುಂಡಿನ ದಾಳಿಗೆ ಇಬ್ಬರು ಸೇನಾ ಅಧಿಕಾರಿಗಳು ಬಲಿಯಾಗಿರುವ ಘಟನೆ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಭಾರತೀಯ ಸೇನೆಗೆ ಸೇರಿದ ಯೋಧನೇ ಇಬ್ಬರು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ

    ಅಧಿಕಾರಿಗಳು ಮಲಗಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 60 ಕಿ.ಮೀ ಒಳಗಿನ ಎಲ್ಲ ಟೋಲ್ ತೆರವಿಗೆ ಸೂಚಿಸಿದ್ರೂ ದ.ಕನ್ನಡ ಜಿಲ್ಲೆಯಲ್ಲಿದೆ 48 ಕಿ.ಮೀನಲ್ಲಿ 4 ಟೋಲ್

    ಯೋಧನೇ ಅಧಿಕಾರಿಗಳಿಗೆ ಗುಂಡು ಹಾರಿಸಿರುವ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    Live Tv

  • ಪ್ರಿಯಕರನನ್ನು ಭೇಟಿ ಆಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ ಯುವತಿಯನ್ನು ತಡೆದ ಪೊಲೀಸರು

    ಪ್ರಿಯಕರನನ್ನು ಭೇಟಿ ಆಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ ಯುವತಿಯನ್ನು ತಡೆದ ಪೊಲೀಸರು

    ಚಂಡೀಗಢ: ತನ್ನ ಪ್ರಿಯಕರನನ್ನು ಭೇಟಿಗೆ ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ ಯುವತಿಯನ್ನು ಗಡಿಯಲ್ಲಿ ಪಂಜಾಬ್ ಪೊಲೀಸರು ತಡೆದ ಘಟನೆ ನಡೆದಿದೆ.

    ಫಿಜಾ ಖಾನ್ (24) ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಯುವತಿ. ಈಕೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಫಿಜಾ ಖಾನ್ ನಾಪತ್ತೆ ಆಗಿದ್ದಾಳೆ ಎಂದು ಅವಳ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.

    ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಆಕೆ ಪಾಕಿಸ್ತಾನದ ದಿಲ್ಶಾಸ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿ ಆತನನ್ನು ಪ್ರೀತಿಸುತ್ತಿದ್ದಾಳೆ. ನಂತರ ಆಕೆ ಆತನನ್ನು ಮದುವೆಯಾಗಲು ಪಾಸ್‍ಪೋರ್ಟ್ ಸಹ ಮಾಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 30 ದಿನಗಳ ವಿಸಾವನ್ನು ಪಡೆದಿದ್ದಾಳೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಲಕನನ್ನು ಅಪಹರಿಸಿ 1 ಲಕ್ಷಕ್ಕೆ ಮಾರಿದ್ರು – ನರ್ಸ್ ಜೊತೆ ಪತಿ ಕೈಗೂ ಕೋಳ

    ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿ ಆಕೆಯನ್ನು ಗಡಿಯಲ್ಲಿ ತಡೆದಿದ್ದಾರೆ. ನಂತರ ಆಕೆಯನ್ನು ಅಮೃತಸರದ ನಾರಿನಿಕೇತನದಲ್ಲಿ ಇರಿಸಿದ್ದ ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಿದರು. ನಂತರ ಅವಳನ್ನು ಕರೆದುಕೊಂಡು ಹೋಗಲು ಬಂದ ಕುಟುಂಬ ಸದಸ್ಯರೊಂದಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    Live Tv