Tag: punjab

  • ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

    ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

    ಚಂಡೀಗಢ: ಕಸ ಹಾಕಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಮಾನ್‌ ನಿವಾಸಕ್ಕೆ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ 10,000 ರೂ. ದಂಡ ವಿಧಿಸಿದೆ.

    ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಬೆಟಾಲಿಯನ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹಜಿರ್ಂದರ್ ಸಿಂಗ್ ಅವರ ಹೆಸರಿನಲ್ಲಿ ಚಲನ್ ನೀಡಲಾಗಿದೆ.

    ಈ ಬಗ್ಗೆ ಸ್ಥಳೀಯ ಬಿಜೆಪಿ ಕೌನ್ಸಿಲರ್ ಮಹೇಶಿಂದರ್ ಸಿಂಗ್ ಸಿಧು ಮಾತನಾಡಿ, ಮನೆ ಸಂಖ್ಯೆ-7ರ ಹಿಂಭಾಗದಲ್ಲಿರುವ ಮುಖ್ಯಮಂತ್ರಿ ನಿವಾಸದ ಸಿಬ್ಬಂದಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರು. ಈ ಬಗ್ಗೆ ಅಲ್ಲಿನ ನಿವಾಸಿಗಳಿಂದ ಕೆಲವು ದಿನಗಳ ಹಿಂದೆ ದೂರುಗಳನ್ನು ಸ್ವೀಕರಿಸಲಾಗಿತ್ತು. ಇದನ್ನೂ ಓದಿ: ವಿಜಯೇಂದ್ರ ಸ್ಪರ್ಧೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳೋದು ಹೈಕಮಾಂಡ್: ಬಿಎಸ್‍ವೈ

    ದೂರಿನ ಪ್ರಕಾರವಾಗಿ ಮನೆಯ ಹೊರಗೆ ತ್ಯಾಜ್ಯ ಎಸೆಯದಂತೆ ನಗರಸಭೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ನಿಂತಿಲ್ಲ. ಹೀಗಾಗಿ ಮುಖ್ಯಮಂತ್ರಿ ನಿವಾಸಕ್ಕೆ ದಂಡ ವಿಧಿಸಲಾಗಿದೆ ಎಂದರು. ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ನಮ್ಮ ಪಕ್ಷದ ಬಾಹುಬಲಿ: ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಎನ್ ಕೌಂಟರ್ ಮೂಲಕ ಉತ್ತರ : ಗುಂಡಿನ ದಾಳಿಗೆ ನಾಲ್ವರು ಹಂತಕರ ಬಲಿ

    ಖ್ಯಾತ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಎನ್ ಕೌಂಟರ್ ಮೂಲಕ ಉತ್ತರ : ಗುಂಡಿನ ದಾಳಿಗೆ ನಾಲ್ವರು ಹಂತಕರ ಬಲಿ

    ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು ಎಂದು ಶಂಕಿಸಲಾಗಿದ್ದ ಕ್ರಿಮಿನಲ್ ಗಳಿಗೆ ಇಂದು ಗನ್ ಮೂಲಕವೇ ಉತ್ತರ ಕೊಟ್ಟಿದ್ದಾರೆ ಪಂಜಾಬ್ ಪೊಲೀಸರು. ಪಂಜಾಬ್ ನ ಅಮೃತಸರದ ಸಮೀಪದ ಒಂಟಿ ಮನೆಯೊಂದರಲ್ಲಿ ಅವಿತು ಕುಳಿತಿದ್ದ ಅವರ ಮೇಲೆ ಪೊಲೀಸರು ಗುಂಡಿನ ಮಳೆಯನ್ನೇ ಸುರಿದಿದ್ದಾರೆ. ಪಾಕಿಸ್ತಾನ ಗಡಿಯಿಂದ ಕೇವಲ 10 ಕಿಮೀ ದೂರದ ಹಳ್ಳಿಯಲ್ಲಿ ಈ ಎನ್ ಕೌಂಟರ್ ನಡೆದಿದೆ.

    ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಅದೊಂದು ರಣಭೀಕರ ಎನ್ ಕೌಂಟರ್ ಆಗಿತ್ತು ಎಂದು ಹೇಳಲಾಗುತ್ತಿದೆ. ಅಟ್ಟಾರಿ ಅಂತಾರಾಷ್ಟ್ರೀಯ ಗಡಿ ಸಮೀಪದ ಹೋಶಿಯಾರ್ ನಗರದ ಭಾಕ್ನಾ ಗ್ರಾಮದಲ್ಲಿ ಗ್ಯಾಂಗ್ ಸ್ಟರ್ ಗಳಾದ ಮನ್ ಪ್ರೀತ್ ಮನ್ನು, ಜಗರೂಪ್ ರೂಪ್ ಸೇರಿದಂತೆ ಒಟ್ಟು ನಾಲ್ಕು ಜನರು ಇದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನಾಲ್ಕೂ ಜನರನ್ನು ಎನ್ ಕೌಂಟರ್ ನಲ್ಲಿ ಹತ್ಯ ಮಾಡಲಾಗಿದೆಯಂತೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

    ಸಿಂಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್ ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು. ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್ ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಆನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತಷ್ಟು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಅಲ್ಲದೇ, ನಟ ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಇದೇ ಗ್ಯಾಂಗ್ ಜೀವ ಬೆದರಿಕೆ ಕೂಡ ನೀಡಿತ್ತು.

    ಇಂದು ನಡೆದ ಎನ್ ಕೌಂಟರ್ ನಲ್ಲಿ ಲಾರೆನ್ಸ್ ಬಿಶ್ನೋಯಿ ತಂಡದ ನಾಲ್ವರ ಸದಸ್ಯರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಒಬ್ಬ ಮಾಧ್ಯಮ ಪ್ರತಿನಿಧಿಗೆ ಕಾಲಿಗೆ ಗುಂಡೇಟು ಬಿದ್ದಿದೆ. ಎನ್ ಕೌಂಟರ್ ನಲ್ಲಿ ಭಾಗಿಯಾದ ಮೂವರು ಪೊಲೀಸರಿಗೂ ಗಾಯಗಳಾಗಿವೆ.

    Live Tv
    [brid partner=56869869 player=32851 video=960834 autoplay=true]

  • ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಿಗೂ ವೋಟು ಹಾಕಲ್ಲ: ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ ಅಕಾಲಿ ದಳ ಶಾಸಕ

    ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಿಗೂ ವೋಟು ಹಾಕಲ್ಲ: ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ ಅಕಾಲಿ ದಳ ಶಾಸಕ

    ಚಂಡೀಗಢ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಅಕಾಲಿ ದಳ ಪಕ್ಷ ತನ್ನ ಸದಸ್ಯರಿಗೆ ಸೂಚಿಸಿತ್ತು. ಆದರೆ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಶಾಸಕರೊಬ್ಬರು ರಾಷ್ಟ್ರಪತಿ ಚುನಾವಣೆಯನ್ನೇ ಬಹಿಷ್ಕರಿಸಿದ್ದಾರೆ.

    ಅಕಾಲಿ ದಳ ಪಕ್ಷದ ಶಾಸಕ ಮನ್‌ಪ್ರೀತ್‌ ಸಿಂಗ್‌ ಆಯಲಿ ಚುನಾವಣೆ ಬಹಿಷ್ಕರಿಸಿದ್ದು, ನಾನು ದ್ರೌಪದಿ ಮುರ್ಮು ಹಾಗೂ ಯಶವಂತ್‌ ಸಿನ್ಹಾ ಇಬ್ಬರಿಗೂ ವೋಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ

    ಈ ಕುರಿತು ಫೇಸ್‌ಬುಕ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಶಾಸಕ, 1984ರ ಸಿಖ್ ಹತ್ಯಾಕಾಂಡದ ಹೊಣೆ ಹೊತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಿಲ್ಲ. ಪಂಜಾಬ್‌ನ ಸಮಸ್ಯೆಗಳನ್ನು ಬಗೆಹರಿಸುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಯಾಲಿ ಹೇಳಿದ್ದಾರೆ.

    ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅವರು ಪಂಜಾಬ್‌ನ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಇದು ಸ್ವಾರ್ಥವೋ ಅಥವಾ ಇನ್ನೇನೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ.

    ಸಿಖ್ ಸಮುದಾಯದ ಭಾವನೆಗಳು, ಪಂಜಾಬ್‌ನ ಸಮಸ್ಯೆಗಳು ಮತ್ತು ನನ್ನ ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ ನಾನು ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಿಲ್ಲ ಎಂದು ಆಯಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ರಾಷ್ಟ್ರಪತಿ ಚುನಾವಣೆ – ಜು.25ಕ್ಕೆ ಪ್ರಮಾಣವಚನ

    ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯದಿಂದ ಬಂದವರು. ಅವರ ವಿಚಾರವಾಗಿ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಸಿಖ್‌ ಕೈದಿಗಳ ಬಿಡುಗಡೆ, ಚಂಡೀಗಢದ ಮೇಲೆ ಪಂಜಾಬ್‌ನ ಹಕ್ಕುಗಳು ಮತ್ತು ಸಟ್ಲೇಜ್-ಯಮುನಾ ಜೋಡಣೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಛತ್ತೀಸಗಢ: ಸರ್ಕಾರಗಳು ಹಾಗೂ ಪೊಲೀಸ್‌ ಇಲಾಖೆ ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಇದ್ದೇ ಇರುತ್ತಾರೆ. ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುವವರೇ ಹೆಚ್ಚು. ಇದಕ್ಕೆ ಬ್ರೇಕ್‌ ಹಾಕಲು ಪಂಜಾಬ್‌ ಪೊಲೀಸ್‌ ಇಲಾಖೆ ಮುಂದಾಗಿದೆ.

    ಅತಿ ವೇಗವಾಗಿ ವಾಹನ ಚಲಾಯಿಸುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಕಡ್ಡಾಯ ರಕ್ತದಾನ ಮಾಡುವ ಶಿಕ್ಷೆಯನ್ನು ವಿಧಿಸುವ ನಿಯಮ ರೂಪಿಸಲು ಮುಂದಾಗಿದೆ. ದಂಡ ಹಾಕುವುದು, ತಾತ್ಕಾಲಿಕವಾಗಿ ಲೈಸೆನ್ಸ್‌ ರದ್ದು ಮಾಡುವ ಶಿಕ್ಷೆಯ ಜೊತೆಗೆ ರಕ್ತದಾನ ಮಾಡುವ ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಅತಿ ವೇಗವಾಗಿ ವಾಹನ ಚಲಾಯಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು. ಕುಡಿದು ವಾಹನ ಚಲಾಯಿಸಿದರೆ ಅದೇ ಅವಧಿಗೆ ಪರವಾನಗಿ ಅಮಾನತುಗೊಳಿಸುವುದರ ಜೊತೆಗೆ 5,000 ರೂ. ದಂಡ ವಿಧಿಸಲಾಗುತ್ತದೆ.

    ಮತ್ತೆ ಅದೇ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೆ ಅತಿ ವೇಗದ ಚಾಲನೆಗೆ 2,000 ರೂ. ಮತ್ತು ಮೂರು ತಿಂಗಳ ಅವಧಿಗೆ ಪರವಾನಗಿ ಅಮಾನತು. ಕುಡಿದು ವಾಹನ ಚಲಾಯಿಸಿದರೆ 10,000 ರೂ. ದಂಡ ಹಾಗೂ 3 ತಿಂಗಳ ಅವಧಿಗೆ ಲೈಸೆನ್ಸ್‌ ರದ್ದು ಮಾಡಲಾಗುವುದು.

    ನಿಯಮ ಉಲ್ಲಂಘಿಸುವವರು ಸಾರಿಗೆ ಪ್ರಾಧಿಕಾರದಿಂದ ಸಂಚಾರಿ ನಿಯಮ ಕುರಿತು ತಿಳಿದುಕೊಳ್ಳಬೇಕು. ನಂತರ ಹತ್ತಿರದ ಶಾಲೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ 9 ರಿಂದ 12 ನೇ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳಿಗೆ ಅದನ್ನು ಕಲಿಸಬೇಕು. ನಂತರ ಅವರಿಗೆ ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವಾ ಆಯ್ಕೆ

    ಇದರ ಜೊತೆಗೆ ತಪ್ಪಿತಸ್ಥರು ಹತ್ತಿರದ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಸಮಾಜ ಸೇವೆ ಮಾಡಬೇಕು ಅಥವಾ ಹತ್ತಿರದ ರಕ್ತನಿಧಿಯಲ್ಲಿ ಕನಿಷ್ಠ ಒಂದು ಯೂನಿಟ್ ರಕ್ತವನ್ನು ದಾನ ಮಾಡಬೇಕು.

    ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ ಮೊದಲ ಅಪರಾಧಕ್ಕೆ 1,000 ರೂ. ಮತ್ತು ನಂತರದ ಅಪರಾಧಗಳಿಗೆ 2,000 ರೂ., ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಿದರೆ 5,000 ರೂ. ನಂತರ 10,000 ರೂ., ಓವರ್‌ಲೋಡ್ ಅಥವಾ ಗೂಡ್ಸ್ ಕ್ಯಾರೇಜ್‌ನಲ್ಲಿರುವ ವ್ಯಕ್ತಿಗಳಿಗೆ 20,000 ರೂ. ನಂತರ 2,000 ಹೆಚ್ಚುವರಿ ದಂಡ, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇದ್ದರೆ 1,000 ರೂ. ನಂತರ 2,000 ರೂ. ದಂಡ ವಿಧಿಸಲಾಗುವುದು.

    Live Tv
    [brid partner=56869869 player=32851 video=960834 autoplay=true]

  • ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

    ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

    ಚಂಡೀಗಢ: ಸಾರ್ವಜನಿಕ ಉದ್ಯಾನವನದಲ್ಲಿ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಪಂಜಾಬ್‍ನ ರಮ್ಮನ್ ಮಂಡಿಯಲ್ಲಿ ನಡೆದಿದೆ.

    ಗಾಂಧೀಜಿ ಪ್ರತಿಮೆಯನ್ನು ರಾಮನ್ ಮಂಡಿಯ ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸಲಾಗಿತ್ತು. ಅದನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದಾದ ಬಳಿಕ ಪ್ರತಿಮೆಯ ಮುಖವನ್ನು ತೆಗೆದುಕೊಂಡು ಹೋಗಿದ್ದಾರೆ.

    ಸ್ಟೇಷನ್ ಹೌಸ್ ಆಫೀಸರ್ ಹರ್ಜೋತ್ ಸಿಂಗ್ ಮಾನ್ ಮಾತನಾಡಿ, ಘಟನೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ರಮ್ಮನ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

    ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಸಿಂಗ್ಲಾ ಮಾತನಾಡಿ, ಘಟನೆಯ ಹಿಂದಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 50ರಲ್ಲಿ ಒಬ್ಬ ಶಾಸಕ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುವೆ: ಏಕನಾಥ್ ಶಿಂಧೆ

    ಇತ್ತೀಚೆಗಷ್ಟೇ ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಕೆಟ್ಟದಾಗಿ ಬರೆದು, ವಿಷ್ಣು ದೇವಾಲಯದ ಕೆಲವು ಪ್ರತಿಮೆಗಳನ್ನು ವಿರೂಪಗೊಳಿಸಿದ್ದರು. ಇದನ್ನೂ ಓದಿ: ಕೆನಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ

    ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ

    ಚಂಡೀಗಢ: ಪಂಜಾಬ್ ವಿಧಾನಸಭಾ ಮಾಜಿ ಸ್ಪೀಕರ್ ಮತ್ತು ಶಿರೋಮಣಿ ಅಕಾಲಿದಳದ ನಾಯಕ ನಿರ್ಮಲ್ ಸಿಂಗ್ ಕಹ್ಲೋನ್(79) ಅವರು ಇಂದು ನಿಧನರಾಗಿದ್ದಾರೆ.

    ಭಾನುವಾರ ಗುರುದಾಸ್‍ಪುರ ಜಿಲ್ಲೆಯ ಫತೇಘರ್ ಚುರಿಯನ್ ಬಳಿಯ ದಾದುಜೋಧ್ ಗ್ರಾಮದಲ್ಲಿ ಕಹ್ಲೋನ್‍ನ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಪುರುಷನೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

    ನಿರ್ಮಲ್ ಸಿಂಗ್ ಕಹ್ಲೋನ್ ನಿಧನಕ್ಕೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ಅಕಾಲಿದಳದ ನಾಯಕ ಮತ್ತು ಮಾಜಿ ಪಂಜಾಬ್ ವಿಧಾನಸಭಾ ಸ್ಪೀಕರ್ ಎಸ್.ನಿರ್ಮಲ್ ಸಿಂಗ್ ಕಹ್ಲೋನ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಕಹ್ಲೋನ್ ಅವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಅವರು ನೀಡುತ್ತಿದ್ದ ಸಲಹೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ದುಃಖಕರವಾದ ಸಮಯದಲ್ಲಿ ನಾನು ಕಹ್ಲೋನ್ ಕುಟುಂಬದೊಂದಿಗಿರುತ್ತೇನೆ ಎಂದು ಬಾದಲ್ ಟ್ವೀಟ್ ಮಾಡಿದ್ದಾರೆ.

    ಮತ್ತೊಂದೆಡೆ ಪಂಜಾಬ್‍ನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು, ಅಕಾಲಿದಳದ ನಾಯಕ ಮತ್ತು ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಆದೇಶದಲ್ಲಿ ವ್ಯಾಕರಣ ದೋಷ- ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ

    ನಿರ್ಮಲ್ ಸಿಂಗ್ ಕಹ್ಲೋನ್ ಅವರು 1997 ರಿಂದ 2002ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ಗಳ ರಾಜ್ಯ ಸಚಿವರಾಗಿ ಮತ್ತು 2007 ರಿಂದ 2012ರವರೆಗೆ ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಛತ್ತೀಸಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಕುರಿತು ಪಂಜಾಬ್‌ ಸಂಸದರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ.

    ಶಿರೋಮಣಿ ಅಕಾಲಿ ದಳ ಪಕ್ಷದ ಸಂಸದ ಸಿಮ್ರಂಜಿತ್‌ ಸಿಂಗ್‌ ಮಾನ್‌ ಈ ಹೇಳಿಕೆ ನೀಡಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ. ಭಗತ್ ಸಿಂಗ್ ಇಂಗ್ಲಿಷ್ ನೌಕಾ ಅಧಿಕಾರಿಯನ್ನು ಕೊಂದರು. ಅಮೃತಧಾರಿ ಸಿಖ್ ಕಾನ್‌ಸ್ಟೆಬಲ್ ಚನ್ನನ್ ಸಿಂಗ್‌ನನ್ನು ಕೊಂದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಅಸೆಂಬ್ಲಿಯ ಮೇಲೆ ಬಾಂಬ್ ಎಸೆದರು. ಈಗ ನೀವೇ ಹೇಳಿ.. ಭಗತ್ ಸಿಂಗ್ ಭಯೋತ್ಪಾದಕನೋ ಅಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿದು 5 ಸಾವು – 9 ಮಂದಿಗೆ ಗಾಯ

    ಸಂಸದ ಮಾನ್ ಅವರು ಪಂಜಾಬ್ ರಾಜಕೀಯದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಸಂಗ್ರೂರ್‌ನಿಂದ ಉಪಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ, ತಮ್ಮ ಗೆಲುವಿಗೆ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಕಾರಣ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಕಾಶ್ಮೀರದಲ್ಲಿ ಭಾರತೀಯ ಸೇನೆಯ ದೌರ್ಜನ್ಯದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಮತ್ತೊಂದು ಕಡೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.

    ಬಿಹಾರ ಮತ್ತು ಛತ್ತೀಸ್‌ಗಢದಲ್ಲಿರುವ ಬುಡಕಟ್ಟು ಜನರು ನಕ್ಸಲರು. ಅವರನ್ನು ಹತ್ಯೆ ಮಾಡಬೇಕು ಎಂದು ಸಹ ಸಿಮ್ರಂಜಿತ್ ಸಿಂಗ್ ಮಾನ್ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ದೇಶದ ಟಾಪ್‌ ಕಾಲೇಜುಗಳ ಪಟ್ಟಿ ಔಟ್‌ – ಕರ್ನಾಟಕದ ಯಾವ ಕಾಲೇಜುಗಳಿಗೆ ಎಷ್ಟನೇ ಸ್ಥಾನ?

    ಭಗತ್‌ ಸಿಂಗ್‌ ಕುರಿತು ಮಾನ್‌ ಹೇಳಿಕೆಗೆ ಪಂಜಾಬ್‌ ಆಡಳಿತಾರೂಢ ಎಎಪಿ ಕಿಡಿಕಾರಿದೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ತಮ್ಮ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದು ಎಎಪಿ ಒತ್ತಾಯಿಸಿದೆ.

    ಭಗತ್‌ ಸಿಂಗ್‌ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದು ನಾಚಿಕೆಗೇಡಿನ ಸಂಗತಿ. ಶಹೀದ್-ಎ-ಆಜಂ ಭಗತ್ ಸಿಂಗ್ ಒಬ್ಬ ವೀರ, ದೇಶಭಕ್ತ, ಕ್ರಾಂತಿಕಾರಿ ಮತ್ತು ನಿಜವಾದ ಮಣ್ಣಿನ ಮಗ. ಇಂಕ್ವಿಲಾಬ್ ಜಿಂದಾಬಾದ್” ಎಂದು ಎಎಪಿ ಸಂಸದ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೋಲ್‌ ಸಿಬ್ಬಂದಿ ಜೊತೆ WWE ಖ್ಯಾತಿಯ ಗ್ರೇಟ್‌ ಖಲಿ ಗಲಾಟೆ – ವೀಡಿಯೋ ವೈರಲ್‌

    ಟೋಲ್‌ ಸಿಬ್ಬಂದಿ ಜೊತೆ WWE ಖ್ಯಾತಿಯ ಗ್ರೇಟ್‌ ಖಲಿ ಗಲಾಟೆ – ವೀಡಿಯೋ ವೈರಲ್‌

    ಛತ್ತೀಸಗಢ: ಪಂಜಾಬ್‌ನ ಲುಧಿಯಾನದ ಟೋಲ್ ಪ್ಲಾಜಾದ ಸಿಬ್ಬಂದಿಯೊಂದಿಗೆ ‘ದಿ ಗ್ರೇಟ್ ಖಲಿ’ ಎಂದೇ ಜನಪ್ರಿಯವಾಗಿರುವ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಖಲಿ ತನ್ನ ಕಾರಿನಲ್ಲಿ ಲುಧಿಯಾನ ಮೂಲಕ ಕರ್ನಾಲ್‌ಗೆ ಪ್ರಯಾಣಿಸುತ್ತಿದ್ದಾಗ ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ. ಐಡಿ ಕಾರ್ಡ್‌ ತೋರಿಸುವಂತೆ ಕೇಳಿದಾಗ ತಮ್ಮ ಸಹೋದ್ಯೋಗಿಯೊಬ್ಬರಿಗೆ ಕುಸ್ತಿಪಟು ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೋಲ್ ಪ್ಲಾಜಾ ಸಿಬ್ಬಂದಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಕಳಪೆ ಗುಣಮಟ್ಟದ ಟೀ ನೀಡಿದ್ದ ಅಧಿಕಾರಿಗೆ ಶೋಕಾಸ್ ನೋಟಿಸ್

    ನಮ್ಮ ಸಿಬ್ಬಂದಿ ಕ್ಯಾಮೆರಾದಲ್ಲಿ ಘಟನೆಯನ್ನು ರೆಕಾರ್ಡ್ ಮಾಡುವಾಗ, ಖಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಖಲಿ ಅವರು ಟೋಲ್‌ನ ಗೇಟ್‌ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ. ನಮ್ಮ ಸಿಬ್ಬಂದಿಗೆ ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ ಎಂದು ದೂರಿದ್ದಾರೆ. ಗಲಾಟೆ ಸಂಬಂಧದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಆರೋಪ ಕುರಿತು ಪ್ರತಿಕ್ರಿಯಿಸಿರುವ ಖಲಿ, ಪಂಜಾಬ್‌ನ ಫಿಲ್ಲೌರ್‌ನ ಟೋಲ್ ಸಿಬ್ಬಂದಿ ನನ್ನ ಕಾರನ್ನು ನಿಲ್ಲಿಸಿ ಸೆಲ್ಫಿಗಾಗಿ ಅನುಚಿತವಾಗಿ ವರ್ತಿಸಿದರು. ನಾನು ಸೆಲ್ಫಿಯನ್ನು ನಿರಾಕರಿಸಿದಾಗ ಅವರು ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರೇಟರ್ ಆಫ್ ಆಗಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡಿದ್ಲು

    ನಾನೊಬ್ಬ ಸೆಲಿಬ್ರಿಟಿ. ಸೆಲಿಬ್ರಿಟಿ ಯಾರಿಗಾದರೂ ಕಪಾಳಮೋಕ್ಷ ಮಾಡಬಹುದೇ? ನಾನು ಅದರ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ನಂತರವೇ ನಾನು ಕಾರಿನಿಂದ ಇಳಿದು ಗೇಟ್‌ ತೆಗೆಯುವಂತೆ ಹೇಳಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಚಂಡೀಗಢ: ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಸ್ತೆಯಲ್ಲಿ ಮರು ಡಾಂಬರೀಕರಣ ನಡೆದಿದೆ. ಕಾರ್ಮಿಕರು ರಸ್ತೆಯಲ್ಲಿ ಡಾಂಬರ್‌ಅನ್ನು ಸುರಿಯುತ್ತಲೇ ಅದು ಮಳೆ ನೀರಿನೊಂದಿಗೆ ಕಳಚಿಕೊಂಡಿದೆ. ಇಂತಹ ಎಡವಟ್ಟಿನ ಕಾಮಗಾರಿಯನ್ನು ನಡೆಸಿರುವ ಎಂಜಿನಿಯರುಗಳನ್ನು ಪಂಜಾಬ್ ಸರ್ಕಾರ ಅಮಾನತು ಮಾಡಿದೆ.

    ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭವೇ ರಸ್ತೆಗೆ ತೇಪೆ ಹಾಕಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಜಾಬ್‌ನ ಲೋಕೋಪಯೋಗಿ ಕಟ್ಟಡ ಹಾಗೂ ರಸ್ತೆಗಳ ಇಲಾಖೆ ನಾಲ್ವರು ಎಂಜಿನಿಯರುಗಳನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

    ಹೋಶಿಯಾರ್‌ಪುರದ ಚಬ್ಬೇವಾಲ್ ಕ್ಷೇತ್ರದ ಮಹಿಲ್‌ಪುರ ಬ್ಲಾಕ್‌ನ ನಂಗಲ್ ಖಿಲಾಡಿಯನ್ ಹಾಗೂ ಶೆರ್ಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯ ನಡುವೆ ಕಾರ್ಮಿಕರು ರಸ್ತೆಗೆ ಡಾಂಬರು ಎರಚುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಉಪವಿಭಾಗದ ಎಂಜಿನಿಯರ್ ತಾರ್ಸೆಮ್ ಸಿಂಗ್, ಜೂನಿಯರ್ ಎಂಜಿನಿಯರ್ ವಿಪನ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಜಸ್ಬೀರ್ ಸಿಂಗ್ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

    ಈ ಕಾಮಗಾರಿಯ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಕಾರ್ಮಿಕನೊಬ್ಬನಲ್ಲಿ ರಸ್ತೆ ಬಾಳಿಕೆ ಬರುತ್ತಾ ಎಂದು ಪ್ರಶ್ನಿಸಿದ್ದಾನೆ. ಆದರೂ ಆತ ಹೌದು ಎಂದು ಉತ್ತರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಗಮನಿಸಿದ ಎಎಪಿ ಕಾರ್ಯಕರ್ತ ಗುರ್ವಿಂದರ್ ಸಿಂಗ್ ಸಿಎಂ ಭಗವಂತ್ ಮಾನ್ ಅವರ ಗಮನಕ್ಕೂ ತಂದಿದ್ದಾರೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ 4 ಎಂಜಿನಿಯರುಗಳನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ

    ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ

    ಚಂಡೀಗಢ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಕಾರಾಗೃಹದಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ.

    ಪಂಜಾಬ್‌ನ ಲೂಧಿಯಾನಾ ಕಾರಾಗೃಹ ಸೇರಿದ್ದ ಆರೋಪಿ ಸತ್ಬೀರ್ ಸಿಂಗ್‌ಗೆ ಇತರ ಕೈದಿಗಳು ದೈಹಿಕವಾಗಿ ಹಲ್ಲೆ ನಡೆಸಿದ್ದು, ಆತನ ತಲೆಗೆ ಗಾಯಗಳಾಗಿವೆ. ಆತನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್

    ತಲ್ವಾಡಿಯ ಕುದುರೆ ವ್ಯಾಪಾರಿಯಾಗಿದ್ದ ಆರೋಪಿ ಸತ್ಬೀರ್, ಸಿಧು ಮೂಸೆವಾಲಾ ಹಂತಕರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವಲ್ಲಿ ಭಾಗಿಯಾಗಿದ್ದ. ಬಳಿಕ ಲೂಧಿಯಾನಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಭಾರೀ ಜನಪ್ರಿಯತೆ ಹೊಂದಿದ್ದ ಮೂಸೆವಾಲಾ ಹತ್ಯೆಯಿಂದ ಆಕ್ರೋಶಿತರಾಗಿದ್ದ ಕೈದಿಗಳು ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ಸತ್ಬೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ

    ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಕಿಡಿಗೇಡಿ ಗುಂಪೊಂದು ಗುಂಡಿಕ್ಕಿ ಹತ್ಯೆ ನಡೆಸಿತ್ತು. ಹತ್ಯೆಗೂ 1 ದಿನ ಮುನ್ನ ಸಿಧು ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊAಡಿತ್ತು. ಈ ಕಾರಣಕ್ಕೆ ಹಂತಕರು ಯೋಜಿತ ಕಾರ್ಯಾಚರಣೆ ಮೂಲಕ ಹತ್ಯೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]