ಚಂಡೀಗಢ: 82 ವರ್ಷದ ವೃದ್ಧನೊಬ್ಬ ತನ್ನ ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದಿರುವ ಹೃದಯವಿದ್ರಾವಕ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಬಲ್ವಂತ್ ಸಿಂಗ್ ತನ್ನ ದತ್ತು ಪುತ್ರ ಸುಖ್ವಿಂದರ್ ಸಿಂಗ್ ಜೊತೆ ವಾಸವಿದ್ದರು. ವೃದ್ಧ ವಯೋಸಹಜವಾಗಿ ಹೆಚ್ಚೇನೂ ಮಾತನಾಡದೇ ಇರುತ್ತಿದ್ದು, ತನ್ನ ಮಗ ಮೃತಪಟ್ಟಿರುವ ಬಗ್ಗೆ ತಿಳಿಯದೇ ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಲ್ವಂತ್ ಸಿಂಗ್ ಇದ್ದ ಮನೆಯಿಂದ ದುರ್ನಾತ ಬರುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮೊದಲಿಗೆ ಪೊಲೀಸರು ಮನೆಯೊಳಗಿರುವವರನ್ನು ಹೊರಗೆ ಕರೆಯಲು ಪ್ರಯತ್ನಿಸಿದ್ದರು. ಆದರೆ ಯಾರೂ ಉತ್ತರಿಸದ ಕಾರಣ ತಾವೇ ಬಾಗಿಲು ಮುರಿದು ಒಳ ಹೊಕ್ಕಿದ್ದಾರೆ. ಇದನ್ನೂ ಓದಿ: ಶೀತಲ ಸಮರವನ್ನು ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

ಪೊಲೀಸರು ಮನೆ ಒಳಗೆ ಹೊಕ್ಕಾಗ ವೃದ್ಧ ತನ್ನ ಮಗನ ಶವದ ಪಕ್ಕದಲ್ಲಿ ಕುಳಿತಿದ್ದಿದ್ದು ಕಂಡುಬಂದಿದೆ. ಅಸ್ವಸ್ಥನಾಗಿ, ಅರೆಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧನನ್ನು ಬಳಿಕ ಪೊಲೀಸರು ಹಿರಿಯ ನಾಗರಿಕ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಮೆನೆಯಲ್ಲಿ ಪತ್ತೆಯಾದ ಶವ ಬಲ್ವಂತ್ ಸಿಂಗ್‌ನ ದತ್ತು ಪುತ್ರ. ಅವರಿಗೆ ಸ್ವಂತ ಮಕ್ಕಳಿಲ್ಲ. ಅವರನ್ನು ಯಾರೂ ಕೂಡಾ ಭೇಟಿಯೂ ಆಗುತ್ತಿರಲಿಲ್ಲ. ಕಳೆದ 1 ತಿಂಗಳಿನಿಂದ ವೃದ್ಧ ಮನೆಯ ಒಳಗೆಯೇ ಇದ್ದರು. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿರುವುದು ನಮ್ಮ ಗಮನಕ್ಕೆ ಬಂದ ಬಳಿಕ ಅನುಮಾನಗೊಂಡ ನಾವು ಪೊಲೀಸರಿಗೆ ಕರೆ ಮಾಡಿದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು



























