Tag: punjab

  • ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

    ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

    ಚಂಡೀಗಢ: ಆಮ್ ಆದ್ಮಿ ಪಾರ್ಟಿ (AAP) ಯ ಶಾಸಕ ಲಾಭ್ ಸಿಂಗ್ ಉಗೋಕೆಯವರ ತಂದೆ ಆತ್ಮಹತ್ಯೆಗೆ ಯತ್ನಿಸಿದ ಅಚ್ಚರಿಯ ಘಟನೆಯೊಂದು ಇಂದು ಪಂಜಾಬ್‍ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತತ್ನಿಸಿದವರನ್ನು ದರ್ಶನ್ ಸಿಂಗ್ (Darshan Singh) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನು ಸ್ವತಃ ಪಂಜಾಬ್ (Punjab) ಶಾಸಕರೇ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

    ದರ್ಶನ್ ಸಿಂಗ್ ಅವರು ಇಂದು ಮಧ್ಯಾಹ್ನದ ಬಳಿಕ ವಿಷಯುಕ್ತ ಪದಾರ್ಥವನ್ನು ಸೇವಿಸಿದ್ದಾರೆ. ಪರಿಣಾಮ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದರ್ಶನ್ ಸಿಂಗ್ ಆತ್ಮಹತ್ಯೆಗೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಲಾಭ್ ಸಿಂಗ್ (Labh Singh Ugoke) ಅವರು ಪ್ರತಿಕ್ರಿಯಿಸಿ, ತಂದೆ ಬೆಳಗ್ಗಿನವರೆಗೆ ಚೆನ್ನಾಗಿಯೇ ಇದ್ದರು. ಆದರೆ ನಾನು ಸಚಿವ ಸಂಪುಟ ಸಭೆ (Cabinet Meeting) ಗೆಂದು ಚಂಢೀಗಢಕ್ಕೆ ಬಂದ ಬಳಿಕ ಏನಾಯ್ತೋ ಗೊತ್ತಿಲ್ಲ ಎಂದು ತಿಳಿಸಿರು.

    ವರದಿಗಳ ಪ್ರಕಾರ, ದರ್ಶನ್ ಅವರ ಹಿರಿಯ ಸಹೋದರ ಸುಖಚೈನ್ ಸಿಂಗ್ ಅವರು ಕುಡಿತದ ದಾಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮನೆಯಲ್ಲಿ ಶಾಸಕರ ತಂದೆ ಜಗಳವಾಡಿದ್ದಾರೆ. ಇದಾದ ಬಳಿಕ ಅವರು ವಿಷಕಾರಿ ವಸ್ತುವೊಂದನ್ನು (Poisonous Substance) ಸೇವಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿಂದ ಅವರನ್ನು ಲೂಧಿಯಾನದ ಡಿಸಿಎಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸದ್ಯ ಶಾಸಕರ ತಂದೆಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಶಾಸಕರು ತಮ್ಮ ತಂದೆ ಚಿಕಿತ್ಸೆ ಪಡೆಯುತ್ತಿರುವ ಲೂಧಿಯಾನ ಡಿಎಂಸಿಗೆ ತಲುಪಿದ್ದಾರೆ. ಈ ಮಧ್ಯೆ ಉಗೋಕೆ ಅವರ ಆಪ್ತ ಸಹಾಯಕ ಗುರ್ತೇಜ್ ಸಿಂಗ್ ಅವರು ಮಾತನಾಡಿ, ಶಾಸಕರ ತಂದೆಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ ಎಂದು ಹೇಳಿಕೆ ನೀಡಿದ್ದರು.

    ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ನಂತರ ಲಾಭ್ ಸಿಂಗ್ ಉಗೋಕೆ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಭಗವಂತ್ ಮಾನ್ ವಿಶೇಷ ಅಧಿವೇಶನದ ಬೇಡಿಕೆಯನ್ನು ತಿರಸ್ಕರಿಸಿದ ಪಂಜಾಬ್ ಗವರ್ನರ್

    ಭಗವಂತ್ ಮಾನ್ ವಿಶೇಷ ಅಧಿವೇಶನದ ಬೇಡಿಕೆಯನ್ನು ತಿರಸ್ಕರಿಸಿದ ಪಂಜಾಬ್ ಗವರ್ನರ್

    ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ತಮ್ಮ ಬಹುಮತವನ್ನು ಸಾಬೀತುಪಡಿಸಲು ವಿಶೇಷ ಅಧಿವೇಶನವನ್ನು (Special Session) ಕರೆದಿದ್ದರು. ಆದರೆ ಪಂಜಾಬ್‌ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Banwarilal Purohit) ಅವರು ಇದಕ್ಕೆ ಅನುಮತಿಯನ್ನು ನಿರಾಕರಿಸಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ (BJP) ತನ್ನ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ (AAP) ಈ ಹಿಂದೆ ಆರೋಪಿಸಿತ್ತು. ಈ ಹಿನ್ನೆಲೆ ಸೋಮವಾರ ಭಗವಂತ್ ಮಾನ್ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದ್ದರು. ಆದರೆ ವಿಶ್ವಾಸಮತ ಸಾಬೀತುಪಡಿಸಲು ಕರೆದಿರುವ ಅಧಿವೇಶನ ನಿಯಮಾನುಸಾರವಾಗಿಲ್ಲ ಎಂದು ರಾಜಭವನ ವಿಶೇಷ ಅಧಿವೇಶನದ ಆದೇಶವನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ʼPAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ

    ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಹಾಗೂ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮ ಅವರು ಕೇವಲ ವಿಶ್ವಾಸ ನಿರ್ಣಯ ಮಂಡಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ಯಾವುದೇ ಕಾನೂನು ಅವಕಾಶವಿಲ್ಲ ಎಂದು ವಾದಿಸಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರು ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ಈ ಬೆಳವಣಿಗೆಯ ಬಳಿಕ ಟ್ವೀಟ್ ಮಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಂಪುಟ ಕರೆದ ಅಧಿವೇಶನವನ್ನು ರಾಜ್ಯಪಾಲರು ಹೇಗೆ ನಿರಾಕರಿಸಲು ಸಾಧ್ಯ? ಪ್ರಜಾಪ್ರಭುತ್ವ ಕೊನೆಗೊಂಡಿದೆ ಎನ್ನಲು ಇದುವೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಚಂಡೀಗಢ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಪ್ರಕರಣದಿಂದ ವಿವಾದಕ್ಕೆ ಕಾರಣವಾದ ಚಂಡೀಗಢ ವಿಶ್ವವಿದ್ಯಾಲಯದಂತೆ (Chandigarh University) ಈಗ ಮತ್ತೊಂದು ವಿವಿ ಭಾರೀ ಸುದ್ದಿಯಲ್ಲಿದೆ. ಪಂಜಾಬ್‌ನ (Punjab) ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (Lovely Professional University) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ಮೂಲದ 21 ವರ್ಷದ ವಿದ್ಯಾರ್ಥಿ ಮಂಗಳವಾರ ಸಂಜೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಚುಲರ್ ಆಫ್ ಡಿಸೈನಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಅಗ್ನಿ ಎಸ್. ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಳೀಸರು ತಿಳಿಸಿದ್ದಾರೆ.

    ಸದ್ಯ ಪ್ರತಿಭಟನೆಯನ್ನು ನಿಭಾಯಿಸಿದ್ದೇವೆ. ಆತ್ಮಹತ್ಯೆ ಬಗ್ಗೆ ಮೃತನ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಅವರ ಹೇಳಿಕೆ ಆಧರಿಸಿ ನಾವು ತನಿಖೆ ಮುಂದುವರಿಸುತ್ತೇವೆ ಎಂದು ಫಗ್ವಾರಾ ಪೊಲೀಸ್‌ ವರಿಷ್ಠಾಧಿಕಾರಿ ಮುಖ್ತಿಯಾರ್‌ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಪ್ರತಿಭಟನೆಯಿಂದ ವಿವಿಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರ ವಹಿಸಲು ಕ್ಯಾಂಪಸ್‌ನಲ್ಲಿ ಹೆಚ್ಚಿನ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

    ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

    ಚಂಡೀಗಢ: ಹಾಸ್ಟೆಲ್‌ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ (leaked objectional videos) ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಚಂಗೀಗಢ ವಿಶ್ವವಿದ್ಯಾಲಯವನ್ನು (Chandigarh University) ಐದು ದಿನ ಬಂದ್‌ ಮಾಡಲಾಗಿದೆ.

    ಚಂಡೀಗಢ ವಿವಿಯನ್ನು ಸೆ.24ರವರೆಗೆ ಬಂದ್‌ ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕರು ಹಾಸ್ಟೆಲ್‌ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಲಗೇಜ್‌ ಪ್ಯಾಕ್‌ ಮಾಡಿಕೊಂಡು ವಿದ್ಯಾರ್ಥಿನಿಯರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    ಸ್ನಾನದ ವೀಡಿಯೋ ಲೀಕ್‌ ಮಾಡಿದ ವಿದ್ಯಾರ್ಥಿನಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮತ್ತೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣ ಕುರಿತು ಬೇಸರ ವ್ಯಕ್ತಪಡಿಸಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ (Bhagawant mann), ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೂ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ – ನಾಳೆಯಿಂದ 2 ದಿನ ವಿಶ್ವವಿದ್ಯಾಲಯ ಬಂದ್

    Live Tv
    [brid partner=56869869 player=32851 video=960834 autoplay=true]

  • ಭಗವಂತ್ ಮಾನ್ ಸರ್ಕಾರ ಉರುಳಿಸಲು ಬಿಜೆಪಿಯಿಂದ ತಲಾ 25 ಕೋಟಿ ಆಫರ್ – ಆಪ್

    ಭಗವಂತ್ ಮಾನ್ ಸರ್ಕಾರ ಉರುಳಿಸಲು ಬಿಜೆಪಿಯಿಂದ ತಲಾ 25 ಕೋಟಿ ಆಫರ್ – ಆಪ್

    ಚಂಢೀಗಡ: ಪಂಜಾಬ್‌ನಲ್ಲಿ (Panjab) ಭಗವಂತ್ ಮಾನ್ (Bhagwant Mann) ಸರ್ಕಾರ ಉರುಳಿಸಲು ಬಿಜೆಪಿ (BJP) ಆಮ್ ಆದ್ಮಿ ಪಕ್ಷ(AAP)ದ 10 ಮಂದಿ ಶಾಸಕರಿಗೆ ತಲಾ 25 ಕೋಟಿ ಆಫರ್ ನೀಡಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿದೆ.

    ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ (Harpal Singh Cheema) ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬಿಜೆಪಿಯು ರಾಜ್ಯದಲ್ಲಿ `ಆಪರೇಷನ್ ಕಮಲ’ (Operation Kamala) ನಡೆಸಲು ಮುಂದಾಗಿದೆ. ಆ ಪಕ್ಷದ ನಾಯಕರು ನಮ್ಮ ಪಕ್ಷದ ಕೆಲ ಶಾಸಕರನ್ನು (MLAs) ಸಂಪರ್ಕಿಸಿ ಹಣದ ಆಮಿಷ ಒಡ್ಡಿದ್ದಾರೆ. ಜೊತೆಗೆ ಸಚಿವ ಸ್ಥಾನದ ಆಮಿಷವನ್ನೂ ಒಡ್ಡಿದ್ದಾರೆ ಎಂದು ದೂರಿದ್ದಾರೆ.

    BhagwantMann

    ಬಿಜೆಪಿಯ ಕೇಂದ್ರ ನಾಯಕರ ಸೂಚನೆ ಮೇರೆಗೆ ಆ ಪಕ್ಷದ ಕೆಲ ಮುಖಂಡರು ದೂರವಾಣಿ ಮೂಲಕ ನಮ್ಮ ಪಕ್ಷದ ಶಾಸಕರನ್ನ ಸಂಪರ್ಕಿಸಿದ್ದಾರೆ. ಪಕ್ಷದ ಹಿರಿಯ ನಾಯಕರೊಂದಿಗಿನ ಮಾತುಕತೆಗಾಗಿ ನವದೆಹಲಿಯಲ್ಲಿ (NewDelhi) ಸಭೆ ನಿಗದಿಪಡಿಸುವುದಾಗಿಯೂ ಹೇಳಿದ್ದಾರೆ. ಶಾಸಕರು ತಮ್ಮ ಜೊತೆ ಇನ್ನಷ್ಟು ಶಾಸಕರನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ಹಣ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಈಗಾಗಲೇ ಮಧ್ಯಪ್ರದೇಶ (MadhyaPradesh) ಹಾಗೂ ಇತರೇ ರಾಜ್ಯಗಳಲ್ಲಿ ಅನೇಕ ಶಾಸಕರನ್ನು ಖರೀದಿಸಿರುವ ಬಿಜೆಪಿಗೆ ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಕನಿಷ್ಠ 35 ಶಾಸಕರು ಬೇಕಾಗಿದೆ. ಹಾಗಾಗಿ 92 ಶಾಸಕರ ಬಲವನ್ನು ಹೊಂದಿರುವ ಎಎಪಿ ಸರ್ಕಾರದಲ್ಲಿ 55 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು 1,375 ಕೋಟಿ ಇಟ್ಟುಕೊಂಡಿದೆ. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

    bjP

    ಈ ಹಿಂದೆಯೂ 800 ಕೋಟಿ ಖರ್ಚು ಮಾಡಿ ದೆಹಲಿ ಆಪ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿತ್ತು. ಆ ಪ್ರಯತ್ನದಲ್ಲಿ ಪಕ್ಷಕ್ಕೆ ಫಲ ಸಿಗಲಿಲ್ಲ. ಹೀಗಾಗಿ ಈಗ ಪಂಜಾಬ್‌ನಲ್ಲಿ ಶಾಸಕರ ಖರೀದಿಗೆ ಮುಂದಾಗಿದೆ. ಒಂದು ವಾರದಿಂದ ನಿರಂತರವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ಸೂಕ್ತ ಸಮಯದಲ್ಲಿ ಈ ಕುರಿತ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ.

    ಸದ್ಯ ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆ ನಿಲ್ಲಿಸಲು ಶಾಲೆಗೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿ

    ಪರೀಕ್ಷೆ ನಿಲ್ಲಿಸಲು ಶಾಲೆಗೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿ

    ಚಂಡೀಗಢ: ಗಣಿತ ಪರೀಕ್ಷೆ ನಡೆಯುವುದನ್ನು ತಡೆಯುವುದಕ್ಕಾಗಿ ವಿದ್ಯಾರ್ಥಿಯೊಬ್ಬ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿರುವ ವಿಚಾರ ಪೊಲೀಸರು ತನಿಖೆಯಿಂದ ಬೆಳಕಿಗೆ ಬಂದಿದೆ.

    ಅಮೃತಸರದ ಖಾಸಗಿ ಶಾಲೆಯೊಂದಕ್ಕೆ ಹುಸಿ ಬಾಂಬ್ ನೆಪ ಬೆದರಿಕೆ ಕರೆಯೊಂದು ಬಂದಿತ್ತು. ಇದರಲ್ಲಿ ವಿದ್ಯಾರ್ಥಿಯ ಪಾತ್ರ ಇರುವುದನ್ನು ಕಂಡು ಪೊಲೀಸರು ನಿಬ್ಬೆರಗಾಗಿದ್ದಾರೆ. ಇದನ್ನೂ ಓದಿ: 89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ

    ಸೆಪ್ಟೆಂಬರ್ 16 ರಂದು ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಸಂದೇಶದ ಮೂಲವನ್ನು ವಿದ್ಯಾರ್ಥಿಯ ತಂದೆಯ ಮೊಬೈಲ್ ಫೋನ್‌ನಿಂದ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಇದು ಅಮೃತಸರದಲ್ಲಿ ಒಂದು ವಾರದಲ್ಲಿ ವರದಿಯಾದ ಎರಡನೇ ಘಟನೆಯಾಗಿದ್ದು, ನಗರದಲ್ಲಿ ಭೀತಿ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ನಗರದ ಶಾಲೆಯೊಂದು ಸೆಪ್ಟೆಂಬರ್ 7 ರಂದು ಬಾಂಬ್ ಬೆದರಿಕೆಯನ್ನು ವರದಿ ಮಾಡಿತ್ತು. ಇದನ್ನೂ ಓದಿ: ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    Live Tv
    [brid partner=56869869 player=32851 video=960834 autoplay=true]

  • ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    ಚಂಡೀಗಢ: 2013ರಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಅವರ ಪತ್ನಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

    ಸಿಂಗ್ ಅವರ ಪತ್ನಿ ಸುಖಪ್ರೀತ್ ಕೌರ್ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರು. ಇಲ್ಲಿನ ಫತೇಪುರ್ ಬಳಿ ಅಪಘಾತವಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    jail

    ಕೌರ್‌ ಅವರು ಅವರು ಪೂನಂ ಮತ್ತು ಸ್ವಪಂದೀಪ್ ಕೌರ್ ಎಂಬ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ತರ್ನ್ ತರಣ್‌ನಲ್ಲಿರುವ ಅವರ ಸ್ಥಳೀಯ ಸ್ಥಳ ಭಿಖಿವಿಂಡ್‌ನಲ್ಲಿ ನಡೆಯಲಿದೆ.

    ತನ್ನ ಸಹೋದರನನ್ನು ಜೈಲಿನಿಂದ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ವಿವಿಧ ವೇದಿಕೆಗಳಲ್ಲಿ ಧ್ವನಿ ಎತ್ತಿದ್ದ ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ಎದೆನೋವಿನಿಂದ ಜೂನ್‌ನಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಎಲೆಕ್ಟ್ರಿಕ್‌ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ

    ಸರಬ್ಜಿತ್ ಸಿಂಗ್ (49) ಅವರು ಏಪ್ರಿಲ್ 2013 ರಲ್ಲಿ ಲಾಹೋರ್ ಜೈಲಿನಲ್ಲಿ ಸಾವನ್ನಪ್ಪಿದ್ದರು. ಆಪಾದಿತ ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಅವರನ್ನು 1991 ರಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಆದಾಗ್ಯೂ ಸರ್ಕಾರವು 2008 ರಲ್ಲಿ ಅನಿರ್ದಿಷ್ಟ ಅವಧಿಗೆ ಸಿಂಗ್‌ ಮರಣದಂಡನೆಯನ್ನು ತಡೆಹಿಡಿಯಿತು. ಮರಣದ ನಂತರ, ಸರಬ್ಜಿತ್ ಅವರ ಮೃತದೇಹವನ್ನು ಲಾಹೋರ್‌ನಿಂದ ಅಮೃತಸರಕ್ಕೆ ತರಲಾಯಿತು. ಅಲ್ಲಿ ಅವರ ಅಂತಿಮ ವಿಧಿಗಳನ್ನು ನಡೆಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

    ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

    ಚಂಡೀಗಢ: ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲೆ ಪುರುಷರ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರ ಮೇಲೆ ಪತಿ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪಂಜಾಬ್ ನಿವಾಸದಲ್ಲಿ ಬಲ್ಜಿಂದರ್ ಕೌರ್ ಮೇಲೆ ಶಾಸಕರಾಗಿರುವ ಪತಿ ಹಲ್ಲೆ ನಡೆಸಿರುವುದನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ವೀಡಿಯೋ ಹಲವು ಟೀಕೆಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    ಪಂಜಾಬ್‍ನ ತಲ್ವಾಂಡಿ ಸಾಬೋ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿರುವ ಸುಖರಾಜ್ ಸಿಂಗ್ ಅವರೊಂದಿಗೆ ಪತ್ನಿ ಬಲ್ಜಿಂದರ್ ಕೌರ್ ವಾದ ಮಾಡುತ್ತಿರುತ್ತಾರೆ. ಈ ವೇಳೆ ಆಕ್ರೋಶಗೊಂಡ ಸುಖರಾಜ್ ಪತ್ನಿಗೆ ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೇಳೆ ಕೆಲವರು ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ತಳ್ಳಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಅವರು, ನಾನು ಗಲಾಟೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂ ಪ್ರೇರಿತ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮಹಿಳೆಯೇ ಮನೆಯಲ್ಲಿ ಕಿರುಕುಳ ಎದುರಿಸುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್: ಪಂಜಾಬಿ ಜನಪ್ರಿಯ ಗಾಯಕ ನಿಧನ

    ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್: ಪಂಜಾಬಿ ಜನಪ್ರಿಯ ಗಾಯಕ ನಿಧನ

    ಸೆಡಾನ್ ನ 23 ವರ್ಷದ ಚಾಲಕನ ನಿರ್ಲಕ್ಷ್ಯದಿಂದಾಗಿ ಪಂಜಾಬಿಯ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ ನಲ್ಲಿರುವ ಬುಲ್ಲಾ ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೆಲ್ಬೋರ್ನ್ ಬಳಿ ಒಟ್ಟು ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಎರಡು ಮಕ್ಕಳ ತಂದೆಯಾಗಿರುವ, 42ರ ವಯಸ್ಸಿನ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಪಂಜಾಬ್ ಸಂಗೀತ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಬಂದಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಪಂಜಾಬ್ ನ ಕುರಾಲಿ ಪ್ರದೇಶದ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ್ದರು. ಒಂದಷ್ಟು ದಿನ ಟ್ಯಾಕ್ಸಿ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ, ಹಲವಾರು ಆಲ್ಬಂಗೂ ಇವರು ಹಾಡಿದ್ದರು. ಮೈ ಟರ್ನ್ ಎಂಬ ಆಲ್ಬಂಗೆ ಹಾಡಿದ ‘ತೆರೆ ಬಿನಾ’ ಹಾಡು ಇಂದಿಗೂ ಫೇಮಸ್.

    Live Tv
    [brid partner=56869869 player=32851 video=960834 autoplay=true]

  • ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ

    ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ

    ಚಂಡೀಗಢ: ಸಿಖ್ಖರ ಉನ್ನತ ತಾತ್ಕಾಲಿಕ ಸ್ಥಾನದ ಮುಖ್ಯಸ್ಥ ಅಕಲ್ ತಖ್ತ್ ಜಥೇದಾರ್ ಅವರು ಕ್ರಿಶ್ಚಿಯನ್ ಮಿಷನರಿಗಳು ಬಲವಂತದ ಮತಾಂತರ ಮಾಡಿಸಿರುವುದಾಗಿ ಆರೋಪಿಸಿದ್ದು, ಈ ಹಿನ್ನೆಲೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಜನರ ಗುಂಪೊಂದು ಮಂಗಳವಾರ ರಾತ್ರಿ ಸ್ಥಳೀಯ ಚರ್ಚ್ಗೆ ನುಗ್ಗಿ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ಮಾತ್ರವಲ್ಲದೇ ಚರ್ಚ್‌ನ ಪಾದ್ರಿಯ ಕಾರಿಗೂ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.

    ಕ್ರೈಸ್ತ ಮಿಷನರಿಗಳು ಮೋಸದ ಆಚರಣೆಗಳ ಮೂಲಕ ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಪಂಜಾಬ್‌ನ ಸಿಖ್ ಮತ್ತು ಹಿಂದೂಗಳನ್ನು ದಾರಿ ತಪ್ಪಿಸಿ ಮತಾಂತರಗೊಳಿಸಲಾಗುತ್ತಿದೆ. ಇದು ಸರ್ಕಾರದ ಕಣ್ಣೆದುರಲ್ಲೇ ನಡೆಯುತ್ತಿದೆ. ಕಾನೂನಿನಲ್ಲಿ ಮೂಢನಂಬಿಕೆ ಆಚರಣೆಗಳನ್ನು ಮಟ್ಟ ಹಾಕುವ ಅವಕಾಶಗಳಿವೆ. ಆದರೆ ವೋಟ್‌ಬ್ಯಾಂಕ್ ರಾಜಕೀಯದಿಂದಾಗಿ ಯಾವುದೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ವಕೀಲ ಗಿಯಾನಿ ಹರ್‌ಪ್ರೀತ್ ಸಿಂಗ್ ನಿನ್ನೆ ಫೇಸ್‌ಬುಕ್ ಲೈವ್ ವೀಡಿಯೋದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಗುಡ್ಡದಲ್ಲಿ ಅನ್ಯಕೋಮಿನ ಜೋಡಿ ಪತ್ತೆ- ವಿದ್ಯಾರ್ಥಿ ತಂಡದಿಂದ ಹಲ್ಲೆ

    ಈ ಬೆನ್ನಲ್ಲೇ ಪಂಜಾಬ್‌ನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಮತಾಂತರ ಪ್ರಯತ್ನಗಳ ವಿರುದ್ಧ ಸಿಖ್ ಮುಖಂಡರು ದನಿಯೆತ್ತಿದ್ದಾರೆ. ನಿನ್ನೆ ರಾತ್ರಿ ತರ್ನ್ ತರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಥಕರ್‌ಪುರ ಗ್ರಾಮದಲ್ಲಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸ್ಥಳೀಯ ಚರ್ಚ್‌ನ ಏಸು ಹಾಗೂ ಮೇರಿಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದಯವಿಟ್ಟು ಬೆಂಗಳೂರನ್ನು ಕಾಪಾಡಿ- ಪ್ರಧಾನಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮನವಿ

    ಪಂಜಾಬ್ ಗಡಿ ರಾಜ್ಯವಾಗಿದ್ದು, ಮತಾಂತರ ಮಾಡಿಸಲು ಅಲ್ಲಿಗೆ ವಿದೇಶಗಳಿಂದ ಹಣ ಬರುತ್ತದೆ ಎಂಬುದು ನಮಗೆ ತಿಳಿದು ಬಂದಿದೆ. ನಕಲಿ ಪಾದ್ರಿಗಳು ಸಿಖ್ಖರ ದಾರಿ ತಪ್ಪಿಸುತ್ತಿದ್ದಾರೆ ಹಾಗೂ ಮತಾಂತರ ಮಾಡುತ್ತಿದ್ದಾರೆ. ಈ ಕೂಡಲೇ ಇದನ್ನು ನಿಯಂತ್ರಿಸಬೇಕು. ಈ ನಕಲಿ ಪಾದ್ರಿಗಳ ವಿರುದ್ಧ ಮೂಢನಂಬಿಕೆಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹರ್‌ಪ್ರೀತ್ ಸಿಂಗ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]