ಕೊಪ್ಪಳ: ಜಿಲ್ಲೆಯ ಯೋಧರೊಬ್ಬರು (Soldier) ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಪಂಜಾಬ್‍ನಲ್ಲಿ (Punjab) ನಡೆದಿದೆ.
ಕುಷ್ಟಗಿ ತಾಲೂಕಿನ ಕಡಿವಾಲ ಗ್ರಾಮದ ವೀರಪ್ಪ ಹಿರೇಹಾಳ (39) ಮೃತಪಟ್ಟ ಯೋಧ ಎಂದು ತಿಳಿದು ಬಂದಿದೆ. ಅವರು ಪಂಜಾಬ್ ಯುನಿಟ್ 4 ರಲ್ಲಿ ಕಾರ್ಯನರ್ವಹಿಸುತ್ತಿರುವಾಗ ಈ ಅವಘಡ ಸಂಭವಿಸಿದೆ. ಅವರು ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶಾಲೆಯ ಬಳಿ ಗ್ಯಾಸ್ ಲೀಕ್ – ಹಲವು ಮಕ್ಕಳು ಅಸ್ವಸ್ಥ
ವೀರಪ್ಪ ಅವರು 2003 ರಲ್ಲಿ ಬೆಂಗಳೂರಿನಲ್ಲಿ ಎಂಇಜಿ ಬೆಟಾಲಿಯನ್‍ಗೆ ಆಯ್ಕೆಯಾಗಿದ್ದರು. ಈ ವರ್ಷ ಅಗಸ್ಟ್ 30 ರಂದು ಅವರು ನಿವೃತ್ತಿ ಹೊಂದಲಿದ್ದರು. ಆದರೆ ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ಮೃತಪಟ್ಟಿದ್ದಾರೆ. ಶುಕ್ರವಾರ ಯೋಧನ ಮೃತದೇಹ ಸ್ವಗ್ರಾಮಕ್ಕೆ ತಲುಪಲಿದೆ. ಅವರಿಗೆ 6 ಹಾಗೂ 8 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಬುಧವಾರವೇ ಯೋಧ ಮೃತಪಟ್ಟಿದ್ದರೂ ಇಲ್ಲಿಯವರೆಗೂ ಯಾವ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ
ಚಂಡೀಗಢ: ಶಾಲೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ (Gas leak) ಹಲವಾರು ವಿದ್ಯಾರ್ಥಿಗಳು (Students) ಮತ್ತು ಶಿಕ್ಷಕರು (Teachers) ಪ್ರಜ್ಞಾಹೀನರಾದ (Unconscious) ಘಟನೆ ಪಂಜಾಬ್‍ನಲ್ಲಿ (Punjab) ಗುರುವಾರ ನಡೆದಿದೆ.
ಅಸ್ವಸ್ಥಗೊಂಡ ಮಕ್ಕಳು ಹಾಗೂ ಶಿಕ್ಷಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯನ್ನು ಮುಚ್ಚಲಾಗಿದ್ದು, ಉಳಿದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಪೊಲೀಸರು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಘಟನೆಗೆ ಕಾರಣವೇನೆಂದು ಪರಿಶೀಲನೆ ನಡೆಸಲಾಗುತ್ತಿದೆ. ಶಾಲೆಯ ಸಮೀಪದಲ್ಲಿರುವ ಎರಡು ದೊಡ್ಡ ಕೈಗಾರಿಕಾ ಘಟಕಗಳು ಅನಿಲ ಸೋರಿಕೆಯ ಮೂಲಗಳೆಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ
ಸ್ಥಳದಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಅಂಬುಲೆನ್ಸ್‌ಗಳನ್ನು ಘಟನಾ ಸ್ಥಳದಲ್ಲಿ ಇರಿಸಲಾಗಿದೆ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಚಂಡೀಗಢ: ಗೋಲ್ಡನ್ ಟೆಂಪಲ್ (Golden Temple) ಬಳಿ ಬುಧವಾರ ತಡರಾತ್ರಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ (Punjab) ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಅಮೃತಸರದ (Amritsar) ಹೆರಿಟೇಜ್ ಸ್ಟ್ರೀಟ್ ಬಳಿ ಈ ಸ್ಫೋಟ ಸಂಭವಿಸಿತ್ತು. ಗೋಲ್ಡನ್ ಟೆಂಪಲ್ ಬಳಿ ಕಳೆದ ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿತ್ತು. ಆರೋಪಿಗಳು ಈ ಮೂರು ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ – ಮಹಿಳೆಯ ಚಿನ್ನಾಭರಣದೊಂದಿಗೆ ಯುವಕ ಪರಾರಿ
ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮತ್ತು ಪಂಜಾಬ್ ಪೊಲೀಸರು ಘಟನೆ ನಡೆದ ಸ್ಥಳದಿಂದ ಸ್ಫೋಟಕ್ಕೆ ಬಳಸಲಾದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ತೀವ್ರ ಸ್ಫೋಟಕ ಬಳಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನ ವಿರೋಧಿಸಿ ಪಂಜಾಬ್‍ನಲ್ಲಿ (Punjab) ಪ್ರತಿಭಟನೆ ನಡೆಸುತ್ತಿರುವ 1000 ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರಲ್ಲಿ 945 ಮಂದಿ ಕಾನೂನು ಉಲ್ಲಂಘಿಸಿದ್ದಾರೆ. ಉಳಿದವರು ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮಾಜಿ ಪ್ರಧಾನಿಯನ್ನು ಪಾಕಿಸ್ತಾನದ ಪ್ಯಾರಾ ಮಿಲಿಟರಿ ಪಡೆ ಬಂಧಿಸಿತ್ತು. ನಂತರ ಉಂಟಾದ ಹಿಂಸಾಚಾರದಲ್ಲಿ 130 ಅಧಿಕಾರಿಗಳು ಗಾಯಗೊಂಡಿದ್ದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates
ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‍ನ ಹೈಕೋರ್ಟ್ (Islamabad High Court) ತೆರಳುತ್ತಿದ್ದ ವೇಳೆಯೇ ಇಮ್ರಾನ್‍ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು. ಪೇಶಾವರದಲ್ಲಿ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿತ್ತು.
ಛತ್ತೀಸ್‍ಗಢ: ಪಂಜಾಬ್‍ನ (Punjab) ಸ್ವರ್ಣಮಂದಿರದ (Golden Temple) ಬಳಿಯ ಹೆರಿಟೇಜ್ ಸ್ಟ್ರೀಟ್‍ನಲ್ಲಿ (Heritage Street) ಸೋಮವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ. ಕಳೆದ 3 ದಿನಗಳಲ್ಲಿ ಸ್ವರ್ಣ ಮಂದಿರದ ಬಳಿಯಲ್ಲಿ ನಡೆದ 2ನೇ ಸ್ಫೋಟ ಇದಾಗಿದೆ.
ಮೇ 6ರಂದು ಸ್ಫೋಟ ಸಂಭವಿಸಿದ ಸ್ಥಳದ ಸಮೀಪವಿರುವ ಹೆರಿಟೇಜ್ ಸ್ಟ್ರೀಟ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಜೊತೆಗೆ ಯಾವುದಕ್ಕೂ ಹಾನಿ ಸಂಭವಿಸಿಲ್ಲ. ಸ್ಫೋಟಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಮಾಬಾದ್: ಖಲಿಸ್ತಾನ್ ಸಂಘಟನೆಯ ಕಮಾಂಡೋ ಫೋರ್ಸ್ (Khalistan Commando Force) ಮುಖ್ಯಸ್ಥ ಪರಮ್‍ಜಿತ್ ಸಿಂಗ್ ಪಂಜ್ವಾರ್ ಅಕಾ ಮಲಿಕ್ ಸರ್ದಾರ್ ಸಿಂಗ್‍ನನ್ನು ಶನಿವಾರ ಪಾಕಿಸ್ತಾನದ (Pakistan) ಲಾಹೋರ್‌ನ (Lahore) ಜೋಹರ್ ಟೌನ್‍ನಲ್ಲಿ ಇಬ್ಬರು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ.
ಜೋಹರ್ ಟೌನ್‍ನಲ್ಲಿರುವ ಸೂರ್ಯಕಾಂತಿ ಸೊಸೈಟಿಯಲ್ಲಿರುವ ಅವರ ನಿವಾಸದ ಬಳಿ ಮುಂಜಾನೆ ಬೈಕಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಿಂಗ್ ಹಾಗೂ ಅವರ ಅಂಗರಕ್ಷಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪರಮ್‍ಜಿತ್ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಅಂಗರಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಗುಂಡೇಟು – ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಬರ್ಬರ ಹತ್ಯೆ
ಭಾರತದ ಪಂಜಾಬ್‍ಗೆ (Punjab) ಡ್ರೋನ್‍ಗಳನ್ನು ಬಳಸಿಕೊಂಡು ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಪರಮ್‍ಜಿತ್, ತರನ್ ಬಳಿಯ ಪಂಜ್ವಾರ್ ಕುಗ್ರಾಮದಲ್ಲಿ ಜನಿಸಿದ್ದ. 1986 ರಲ್ಲಿ ಅವನ ಸೋದರ ಸಂಬಂಧಿ ಲಾಭ್ ಸಿಂಗ್‍ನಿಂದ ತೀವ್ರಗಾಮಿಯಾದ, ನಂತರ ಕೆಸಿಎಫ್‍ಗೆ (KCF) ಸೇರಿದ್ದ. ಅದಕ್ಕೂ ಮೊದಲು ಸೋಹಾಲ್‍ನ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಕೆಲಸ ಮಾಡಿದ್ದ.
1990ರ ದಶಕದಲ್ಲಿ ಭಾರತೀಯ ಭದ್ರತಾ ಪಡೆಗಳಿಂದ (Indian security forces) ಲಾಭ್ ಸಿಂಗ್ ಹತ್ಯೆಯ ನಂತರ, ಪಂಜ್ವಾರ್ ಕೆಸಿಎಫ್‍ನ ಕಮಾಂಡೋ ಸ್ಥಾನ ವಹಿಸಿಕೊಂಡಿದ್ದ. ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿ, ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ (Wanted Terrorists) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಹೆರಾಯಿನ್ ಕಳ್ಳಸಾಗಣೆ ಮೂಲಕ ಹಣಕಾಸು ಪಡೆಯುವ ಮೂಲಕ ಕೆಸಿಎಫ್‍ನನ್ನು ಅಸ್ತಿತ್ವದಲ್ಲಿ ಇಟ್ಟುಕೊಂಡಿದ್ದ.
1999ರ ಜೂ. 30 ರಂದು ಚಂಡೀಗಢದ (Chandigarh) ಪಾಸ್‌ಪೋರ್ಟ್ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ನಡೆಸಿದ್ದ. ಈ ಸ್ಫೋಟದಲ್ಲಿ 4 ಮಂದಿ ಗಾಯಗೊಂಡಿದ್ದು, ಹಲವು ವಾಹನಗಳಿಗೂ ಹಾನಿಯಾಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್
ಚಂಡೀಗಢ: ಕಾರ್ಖಾನೆಯೊಂದರಲ್ಲಿ (Factory) ವಿಷ ಅನಿಲ ಸೋರಿಕೆಯಾದ (Gas Leak) ಪರಿಣಾಮ 9 ಜನರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಲೂಧಿಯಾನದಲ್ಲಿ (Ludhiana) ಭಾನುವಾರ ನಡೆದಿದೆ.
ಲೂಧಿಯಾನದ ಶೇರ್‌ಪುರ್ ಚೌಕ್ ಬಳಿಯ ಸುವಾ ರಸ್ತೆಯಲ್ಲಿರುವ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾಗಿದೆ. ಭಾನುವಾರ ಬೆಳಗ್ಗೆ 7:15ರ ವೇಳೆಗೆ ಅನಿಲ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದು ಹತ್ತಾರು ಜನರು ವಿಷ ಅನಿಲ ಸೇವಿಸಿ ಅಸ್ವಸ್ಥರಾಗಿದ್ದಾರೆ. ಕಾರ್ಖಾನೆಯಲ್ಲಿ ಇನ್ನೂ ಅನೇಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
#WATCH | Punjab: NDRF personnel reach the spot in Giaspura area of Ludhiana where a gas leak claimed 9 lives; 11 others are hospitalised.
ವರದಿಗಳ ಪ್ರಕಾರ ಡೈರಿ ಉತ್ಪನ್ನಗಳನ್ನು ಉತ್ಪಾದಿಸುವ ಕಾರ್ಖಾನೆಯಾದ ಗೋಯಲ್ ಮಿಲ್ಕ್ ಪ್ಲಾಂಟ್‌ನ ಕೂಲಿಂಗ್ ಸಿಸ್ಟಮ್‌ನಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಸಮೀಪದ ನಿವಾಸಿಗಳು ತಮ್ಮ ಮನೆಗಳಲ್ಲಿಯೇ ಮೂರ್ಛೆ ಹೋಗಿದ್ದಾರೆ. ಅನಿಲ ಸೋರಿಕೆ ವಿಚಾರ ಬೆಳಕಿಗೆ ಬರುತ್ತಲೇ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್
ಭಟಿಂಡಾದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (NDRF) ರಕ್ಷಣಾ ಕಾರ್ಯಾಚರಣೆಗೆ ಕರೆಸಲಾಗಿದ್ದು, ರಕ್ಷಣಾ ತಂಡ ಇಡೀ ಪ್ರದೇಶವನ್ನು ಸುತ್ತುವರಿದಿದೆ. ಗ್ಯಾಸ್ ಲೀಕ್ ಆಗಿರುವ ಪ್ರದೇಶದೆಡೆಗೆ ಯಾರೂ ಪ್ರವೇಶಿಸದಂತೆ ತಡೆಯಲಾಗಿದೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ
ಚಂಡೀಗಢ: ಶಾಲೆಯೊಂದರ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸಿದ ಶಿಕ್ಷಕನನ್ನು ಪಂಜಾಬ್ (Punjab) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಜೀವ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಗೋಬಿಂದಪುರ ಮೊಹಲ್ಲಾದ (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ (Vulgar Gestures) ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ
ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತ್ನಾಂಪುರನ (Satnampura) ಠಾಣಾಧಿಕಾರಿ ಗುರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ
ಚಂಡೀಗಢ: ಪಂಜಾಬ್‌ನ (Punjab) ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಳಿದಳದ (Shiromani Akali Dal) ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ (Parkash Singh Badal) ಅವರು ಪಂಜಾಬ್‌ನ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
5 ಬಾರಿ ಮುಖ್ಯಮಂತ್ರಿಯಾಗಿದ್ದ 95 ವರ್ಷದ ಬಾದಲ್ ಅವರನ್ನು ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಪ್ರಕಾಶ್ ಸಿಂಗ್ ಬಾದಲ್ ಅವರು ಅಸುನಿಗಿದ್ದಾರೆ. ಇದನ್ನೂ ಓದಿ: ಶೆಟ್ಟರ್, ಸವದಿ ಸೋಲಿಸಲು ಬೊಮ್ಮಾಯಿ, ಬಿಎಸ್‌ವೈಗೆ ಟಾಸ್ಕ್
ಬಾದಲ್ ಅವರ ಅಂತಿಮ ಸಂಸ್ಕಾರ ಭಟಿಂಡದ ಬಾದಲ್ ಗ್ರಾಮದಲ್ಲಿ ನಡೆಯಲಿದೆ. ಬುಧವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಮೊಹಾಲಿಯಿಂದ ಬಾದಲ್ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರ ಮಗ, ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಆಸ್ತಮಾದಿಂದಾಗಿ ಬಾದಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರನ್ನು ಕೋವಿಡ್ ನಂತರದ ಆರೋಗ್ಯ ತಪಾಸಣೆಗಾಗಿ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಈ ಸಮಯದಲ್ಲೂ ಅವರು ಹೃದಯ ಮತ್ತು ಶ್ವಾಸಕೋಶದ ತಪಾಸಣೆಗೆ ಒಳಗಾಗಿದ್ದರು. ಇದನ್ನೂ ಓದಿ:ಮೋಸ ಮಾಡಿದ್ದಕ್ಕೆ ಮದ್ವೆ ಮಂಟಪಕ್ಕೆ ಬಂದು ವರನಿಗೆ ಆ್ಯಸಿಡ್ ಎರಚಿದ ಮಾಜಿ ಗೆಳತಿ
ನವದೆಹಲಿ: ಪ್ರತ್ಯೇಕ ಖಲಿಸ್ತಾನ (Khalistan) ಪ್ರತಿಪಾದಕ ಅಮೃತ್‌ಪಾಲ್ ಸಿಂಗ್‌ನನ್ನು (Amritpal Singh) ಪಂಜಾಬ್ (Punjab) ಪೊಲೀಸರು ಬಂಧಿಸಿದ್ದು, ಅಸ್ಸಾಂನ (Assam) ದಿಬ್ರುಗಢ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಪಂಜಾಬ್‌ನಲ್ಲಿ ಬಂಧಿಸಿ ಅಸ್ಸಾಂ ಜೈಲಿಗೆ ಯಾಕೆ ಶಿಫ್ಟ್ ಮಾಡಿದರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟುಕೊಂಡಿದೆ.
ಅಮೃತ್‌ಪಾಲ್ ಸಿಂಗ್ ಅಷ್ಟೇ ಅಲ್ಲ, ಆತನ ಎಂಟು ಮಂದಿ ಆಪ್ತರು ಸಹ ಈಗಾಗಲೇ ಅತ್ಯಂತ ಸುರಕ್ಷಿತ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಇದು ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಮತ್ತು ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಪರಾರಿಯಾಗಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸರೆಂಡರ್
ಅಸ್ಸಾಂ ಜೈಲಿಗೆ ಶಿಫ್ಟ್ ಮಾಡಿದ್ದೇಕೆ?
ಉತ್ತರ ಭಾರತ ಭಾಗದ ಜೈಲುಗಳಲ್ಲಿ ಅಮೃತ್‌ಪಾಲ್ ಸಿಂಗ್ ಅಥವಾ ಪ್ರತ್ಯೇಕತಾವಾದಿ ಚಳವಳಿಯೊಂದಿಗೆ ಸಂಬಂಧ ಹೊಂದಿರುವ ದರೋಡೆಕೋರು ಇರುವ ಸಾಧ್ಯತೆಯಿದೆ. ಈ ಸಂಪರ್ಕ ಕೊಂಡಿಯನ್ನು ಕಡಿತಗೊಳಿಸುವುದು ಮುಖ್ಯವಾಗಿದೆ.
ಆರೋಪಿಗಳು ಇತರ ಕೈದಿಗಳು ಮತ್ತು ಜೈಲು ಸಿಬ್ಬಂದಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಡೆಯುವಲ್ಲಿ ಭಾಷೆಯೂ ಮುಖ್ಯ ಪಾತ್ರ ವಹಿಸುತ್ತದೆ. ದಿಬ್ರುಗಢವು ಅತ್ಯಂತ ಸುರಕ್ಷಿತ ಜೈಲು. ಅಲ್ಲದೇ, ಸ್ಥಳೀಯ ಸಿಖ್ ಸಮುದಾಯವು ಖಲಿಸ್ತಾನ್ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿಲ್ಲ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ. ಇದನ್ನೂ ಓದಿ: ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ
ದಿಬ್ರುಗಢ ಜೈಲು 170 ವರ್ಷಗಳ ಇತಿಹಾಸದಲ್ಲಿ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ಇದು ಅತ್ಯಂತ ಸುರಕ್ಷಿತ ಜೈಲು ಎಂಬ ಖ್ಯಾತಿ ಹೊಂದಿದೆ. ದಿಬ್ರುಗಢ ಪಟ್ಟಣದ ಮಧ್ಯಭಾಗದಲ್ಲಿರುವ ಜೈಲಿನ ಸ್ಥಳವು, ಬಂಧಿತರು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ತಡೆಯಲು ಅಧಿಕಾರಿಗಳಿಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಪೊಲೀಸರು.
ಭದ್ರತೆ ಹೆಚ್ಚಳ
ಅಮೃತ್‌ಪಾಲ್ ಸಿಂಗ್ ಸಹಾಯಕರನ್ನು ಹೊಂದಿರುವ ಸೆಲ್‌ಗಳ ಮುಂದೆ ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಮೆರಾಗಳನ್ನು ಸಹ ಸರಿಪಡಿಸಲಾಗಿದೆ. ಕೆಲವನ್ನು ಬದಲಾಯಿಸಲಾಗಿದೆ. ದಿನದ 24 ಗಂಟೆ ಅವಧಿಯಲ್ಲೂ ಪಾಳಿಯಲ್ಲಿ ಪೊಲೀಸರ ಸರ್ಪಗಾವಲು ವಿಧಿಸಲಾಗಿದೆ. ಇದನ್ನೂ ಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್
1860 ರಲ್ಲಿ ಬ್ರಿಟಿಷರು ನಿರ್ಮಿಸಿದ ಈ ಜೈಲಿನಲ್ಲಿ 680 ಕೈದಿಗಳಿದ್ದಾರೆ. ಅಸ್ಸಾಂ ಸರ್ಕಾರವು ಬಿಡುಗಡೆ ಮಾಡುವ ಪಾಕ್ಷಿಕ ಜೈಲು ಜನಸಂಖ್ಯೆಯ ದಾಖಲೆಗಳಲ್ಲಿ ಈ ಮಾಹಿತಿ ಇದೆ. ದಿಬ್ರುಗಢ ಜೈಲು ಪ್ರಸ್ತುತ ರಾಜ್ಯದ ಮೂರನೇ ಅತಿ ಹೆಚ್ಚು ಕೈದಿಗಳನ್ನು ಹೊಂದಿರುವ ಕೇಂದ್ರ ಕಾರಾಗೃಹವಾಗಿದೆ.
ಪ್ರತ್ಯೇಕ ಖಲಿಸ್ತಾನ ಚಳವಳಿ, ಶಸ್ತ್ರಾಸ್ತ್ರಗಳ ಸಂಗ್ರಹ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರಿಗೆ ಬೆದರಿಕೆ ಹಾಕಿದ ಆರೋಪಗಳಡಿ ಅಮೃತ್‌ಪಾಲ್ ಸಿಂಗ್ ವಿರುದ್ಧ ಕಾರ್ಯಚರಣೆ ನಡೆಸಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿಂದ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್