Tag: Punjab Zelensky

  • ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮಾಡಿದಂತೆ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಹರಿದಾಡಿ ಸುದ್ದಿಯಾದರು. ಇದೀಗ ಪಂಜಾಬ್‌ನಲ್ಲಿ ಚುನಾವಣೆ ಗೆಲ್ಲುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ(ಎಎಪಿ) ಅಭ್ಯರ್ಥಿ ಭಗವಂತ್ ಮಾನ್ ಪಂಜಾಬ್‌ನ ಝೆಲೆನ್ಸ್ಕಿ ಎಂದೇ ಟ್ರೆಂಡ್ ಆಗುತ್ತಿದ್ದಾರೆ.

    ಝೆಲೆನ್ಸ್ಕಿಗೂ ಮಾನ್‌ಗೂ ಏನು ಸಂಬಂಧ ಎಂದು ಹಲವರಲ್ಲಿ ಪ್ರಶ್ನೆ ಕಾಡುತ್ತಿದೆ. ಇವರಿಬ್ಬರಿಗೂ ಸಂಬಂಧ ಇಲ್ಲದಿದ್ದರೂ ಒಂದೇ ಹಿನ್ನೆಲೆಯಿಂದ ರಾಜಕೀಯಕ್ಕೆ ಪ್ರವೇಶಿಸಿರುವುದರಿಂದ ಇವರಿಬ್ಬರನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ `ಆಪ್’ ಸುನಾಮಿಗೆ ಕಾಂಗ್ರೆಸ್ ತತ್ತರ- ಚನ್ನಿ, ಸಿಧು, ಕ್ಯಾಪ್ಟನ್‍ಗೆ ಹೀನಾಯ ಸೋಲು

    ಹೌದು, ರಷ್ಯಾ ಉಕ್ರೇನ್ ಯುದ್ಧಕ್ಕೂ ಮೊದಲು ಝೆಲೆನ್ಸ್ಕಿ ಹೆಸರನ್ನೂ ಕೇಳಿರದವರು ಆತ ಒಬ್ಬ ಹಾಸ್ಯ ನಟನಾಗಿ ಬಳಿಕ ರಾಜಕೀಯಕ್ಕೆ ಪ್ರವೆಶಿಸಿದ್ದ ವಿಷಯ ತಿಳಿದುಕೊಂಡರು. ಈ ವಿಚಾರವಾಗಿ ಭೀಕರ ಯುದ್ಧದ ಮಧ್ಯೆಯೂ ಝೆಲೆನ್ಸ್ಕಿ ಟ್ರೆಂಡ್ ಆಗಿದ್ದರು. ಇದೀಗ ಭಗವಂತ್ ಮಾನ್ ಅವರ ಸರದಿ.

    ಭಗವಂತ್ ಮಾನ್ ಸಹ ರಾಜಕೀಯ ಸೇರುವ ಮೊದಲು ಪಂಜಾಬ್‌ನ ಹಾಗೂ ರಾಷ್ಟ್ರೀಯ ಚ್ಯಾನೆಲ್‌ಗಳಲ್ಲಿ ಹಾಸ್ಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ಈ ಮೂಲಕ ಜನಪ್ರಿಯತೆ ಗಳಿಸಿ ಮಾನ್ ಬಳಿಕ ರಾಜಕೀಯ ಪ್ರವೇಶಿಸಿದರು. ಇದನ್ನೂ ಓದಿ: ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಭಗವಂತ್ ಮಾನ್ ಇಬ್ಬರೂ ಒಂದೇ ಹಿನ್ನೆಲೆಯಿಂದ ರಾಜಕೀಯ ಪ್ರವೆಶಿಸಿರುವುದಾಗಿ ಭಾರೀ ಸುದ್ದಿಯಾಗುತ್ತಿದ್ದಾರೆ. ಪಂಜಾಬ್‌ನ ಚುನಾವಣೆಯಲ್ಲಿ ಭಗವಂತ್ ಮಾನ್ ಭರ್ಜರಿ ಗೆಲುವು ಸಾಧಿಸಿ ಪಂಜಾಬ್‌ನ ಝೆಲೆನ್ಸ್ಕಿ ಎನಿಸಿಕೊಂಡಿದ್ದಾರೆ.