Tag: Punjab minister

  • ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ನವಜೋತ್ ಸಿಂಗ್ ಸಿಧು

    ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ನವಜೋತ್ ಸಿಂಗ್ ಸಿಧು

    – ಪಾಕಿಸ್ತಾನದ ಜೊತೆಗೆ ಭಾರತ ಮಾತುಕತೆ ನಡೆಸಲಿ

    ನವದೆಹಲಿ: ಪಾಕಿಸ್ತಾನದ ಜೊತೆಗೆ ಭಾರತ ಮಾತುಕತೆ ನಡೆಸಲಿ ಎನ್ನುವ ಮೂಲಕ ಪಂಜಾಬ್‍ನ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪಾಕ್ ಪರ ಮತ್ತೆ ಬ್ಯಾಟ್ ಬೀಸಿದ್ದಾರೆ.

    ಈ ಸಂಬಂಧ ನವಜೋತ್ ಸಿಂಗ್ ಸಿಧು ಅವರು ಪ್ರಧಾನಿ ನೇತೃತ್ವದ ಕೆಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. ಭಾರತದ ಜೊತೆಗೆ ಮಾತುಕತೆಗೆ ಸಿದ್ಧವೆಂದ ಪಾಕಿಸ್ತಾನದ ನಿಲುವಿಗೆ ಸಿಧು ಬೆಂಬಲ ನೀಡಿದ್ದಾರೆ. ಈ ಪತ್ರಗಳನ್ನು ತಮ್ಮ ಅಧಿಕೃತ ಟ್ವೀಟ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

    ಎರಡು ದೇಶಗಳ ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಉಭಯ ದೇಶಗಳು ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎನ್ನುತ್ತಿವೆ. ಆದರೆ ಯುದ್ಧವಾದರೆ ಪರಿಸ್ಥಿತಿ ಭಾರೀ ಕೆಟ್ಟದಾಗಿರುತ್ತದೆ ಹಾಗೂ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಇದನ್ನು ಎರಡೂ ದೇಶಗಳು ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.

    ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಅವರ ಕುಟುಂಬದವರ ಕಣ್ಣೀರನ್ನು ನಾನು ನೋಡಿದ್ದೇನೆ. ಭಯವು ಭಯನ್ನೇ ಹುಟ್ಟು ಹಾಕುತ್ತದೆ. ಮಾತುಕತೆಯಲ್ಲಿ ಭಯ, ಸಂಭಾಷಣೆಯಲ್ಲಿ ಭಯ, ವಿಭಿನ್ನವಾಗಿ ಯೋಚಿಸುವಲ್ಲಿ ಭಯ ನಿರ್ಮಾಣವಾಗುತ್ತದೆ. ಭಯ ಎನ್ನುವುದು ಕೆಟ್ಟ ಯೋಜನೆಗಳನ್ನು ಬೆಳೆಸುವ ಕತ್ತಲೆ ಕೊಠಡಿ ಇದ್ದಂತೆ ಎಂದು ಸಿಧು ಹೇಳಿದ್ದಾರೆ.

    ನಮ್ಮ ಹೋರಾಟ ಭಯೋತ್ಪಾದನಕರು ವಿರುದ್ಧವಾಗಿರಬೇಕು. ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರ ಹಾಗೂ ಕಾಶ್ಮೀರ ಜನತೆಯ ವಿರುದ್ಧವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಉಭಯ ದೇಶಗಳು ಉತ್ತಮ ನಿರ್ಧಾರವನ್ನು ಕೈಗೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಹೇಳಿದಂತೆ ಮಾತುಕತೆ ಹಾಗೂ ರಾಜತಾಂತ್ರಿಕ ಒತ್ತಡಗಳ ಮೂಲಕವೇ ಪಾಕಿಸ್ತಾನ ಮತ್ತು ಭಾರತಗಳ ನಡುವೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮತ್ತೆ ತಮ್ಮ ಹಳೇ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.

    ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರು ದೇಶವನ್ನು ಹಾಗೂ ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಹೋಗಿದ್ದಾರೆ. ಇದರಂತೆ ದೇಶದ ಯಾವ ಮಣ್ಣಿನ ಮಗನೂ ದೇಶ ಬಿಟ್ಟುಹೋಗಬಾರದು. ಭಯೋತ್ಪಾದನೆಯನ್ನು ತಡೆಯಲು ಶಾಂತಿ, ಅಭಿವೃದ್ಧಿ ಹಾಗೂ ಪ್ರಗತಿ ಮುಖ್ಯವಾಗಿದೆ ಹೊರತು ನಿರುದ್ಯೋಗದ ದ್ವೇಷ ಹಾಗೂ ಭಯವಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv