Tag: Punjab Kings

  • ಪಂಜಾಬ್‍ಗೆ ಕಿಂಗ್ ಆದ ರಾಹುಲ್- ಕೋಲ್ಕತ್ತಾ ವಿರುದ್ಧ 5 ವಿಕೆಟ್ ಜಯ

    ಪಂಜಾಬ್‍ಗೆ ಕಿಂಗ್ ಆದ ರಾಹುಲ್- ಕೋಲ್ಕತ್ತಾ ವಿರುದ್ಧ 5 ವಿಕೆಟ್ ಜಯ

    ದುಬೈ: ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಆರಂಭಿಕರಾಗಿ ಬಂದು ಕಡೆಯ ಓವರ್ ವರೆಗೂ ಬ್ಯಾಟ್‍ಬೀಸಿ ಪಂಜಾಬ್‍ಗೆ ಗೆಲುವಿನ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸದರೂ ಕೂಡ, ಅಂತಿಮವಾಗಿ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ 5 ವಿಕೆಟ್‍ಗಳ ಜಯಗಳಿಸಿ ಗೆಲುವಿನ ನಗೆ ಬೀರಿದೆ.


    ಪಂಜಾಬ್ ಪರ ಭರ್ಜರಿಯಾಗಿ ಆಡಿದ ರಾಹುಲ್ 67ರನ್(55 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಂತಿಮ ಓವರ್‍ ನಲ್ಲಿ ವಿಕೆಟ್ ಒಪ್ಪಿಸಿದರೆ ಇವರಿಗೆ ಉತ್ತಮವಾಗಿ ಸಾತ್ ನೀಡಿದ ಶಾರೂಕ್ ಖಾನ್ ಕೇವಲ 9 ಎಸೆತದಲ್ಲಿ 22ರನ್(2 ಸಿಕ್ಸ್, 1 ಬೌಂಡರಿ)ಸಿಡಿಸಿ ಇನ್ನೂ ಮೂರು ಎಸೆತ ಬಾಕಿ ಇರುವಂತೆ ಪಂಜಾಬ್‍ಗೆ ಗೆಲುವು ತಂದು ಕೊಟ್ಟರು.

    ಕೋಲ್ಕತ್ತಾ ನೀಡಿದ 166ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಪಂಜಾಬ್ ತಂಡಕ್ಕೆ ಆರಂಭಿಕ ಜೋಡಿ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 70ರನ್(54 ಎಸೆತ)ಗಳ ಜೊತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 40ರನ್(27 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ನಿಕೂಲಸ್ ಪೂರನ್ 12ರನ್(7 ಎಸೆತ, 1 ಸಿಕ್ಸ್)ಗೆ ಸುಸ್ತಾದರು. ನಂತರ ಬಂದ ಏಡನ್ ಮಾಕ್ರಮ್ 18ರನ್(ಎಸೆತ, 1ಸಿಕ್ಸ್) ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಅಯ್ಯರ್ ಆರ್ಭಟ
    ಟಾಸ್ ಗೆದ್ದ ಪಂಜಾಬ್, ಕೋಲ್ಕತ್ತಾ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕೋಲ್ಕತ್ತಾದ ಯುವ ಆಟಗಾರ ವೆಂಕಟೇಶ್ ಅಯ್ಯರ್ ಆರಂಭದಿಂದಲೇ ಪಂಜಾಬ್ ಬೌಲರ್‍ ಗಳ ಮೇಲೆರಗಿದರು. ಶುಭಮನ್ ಗಿಲ್ 7ರನ್(7 ಎಸೆತ, 1 ಬೌಂಡರಿ) ಸಿಡಿಸಿ ಅರ್ಶ್‍ದೀಪ್ ಸಿಂಗ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ರಾಹುಲ್ ತ್ರಿಪಾಠಿ ಮತ್ತು ಅಯ್ಯರ್ 2ನೇ ವಿಕೆಟ್‍ಗೆ 72ರನ್(55 ಎಸೆತ) ಜೊತೆಯಾಟವಾಡಿದರು. ರಾಹುಲ್ ತ್ರಿಪಾಠಿ 34ರನ್(26 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ನಿತೇಶ್ ರಾಣಾ ವೇಗವಾಗಿ ಬ್ಯಾಟ್‍ಬೀಸಿ 31ರನ್(18 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ನಿರ್ಗಮಿಸಿದರು. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಅರ್ಶ್‍ದೀಪ್ ಸಿಂಗ್ ಅಘಾತ
    ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಭರ್ಜರಿ ಬ್ಯಾಟ್‍ಬೀಸಿದ ಅಯ್ಯರ್ 67ರನ್(49 ಎಸೆತ, 9 ಬೌಂಡರಿ, 1 ಸಿಕ್ಸ್)ಅರ್ಧಶತಕ ಸಿಡಿಸಿ ಔಟ್ ಆದರು. ನಂತರ ವಿಕೆಟ್ ಕಳೆದುಕೊಂಡು ಸಾಗಿದ ಕೋಲ್ಕತ್ತಾ ಅಂತಿಮವಾಗಿ 20 ಓವರ್‍ಗಳ ಮುಕ್ತಾಯಕ್ಕೆ 165ರನ್ ಗಳಿಸಿತು. ಪಂಜಾಬ್ ತಂಡದ ಬೌಲರ್ ಅರ್ಶ್‍ದೀಪ್ ಸಿಂಗ್ ಕೋಲ್ಕತಾದ ಪ್ರಮುಖ ಮೂರು ವಿಕೆಟ್ ಕಿತ್ತು ರನ್ ಕಡಿವಾಣ ಹಾಕಿದರು. ರವಿ ಬಿಷ್ನೋಯಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

  • 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ದುಬೈ: ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ, ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಬಯೋಬಬಲ್‍ಗೆ ಬೇಸತ್ತು 14ನೇ ಐಪಿಎಲ್‍ನಿಂದ ಹೊರ ನಡೆದಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‍ನ ಭಾಗವಾಗಿದ್ದೇನೆ. ಈಗ ನಾನು ಮಾನಸಿಕವಾಗಿ ಸಿದ್ಧವಾಗಲು ಮತ್ತು ರಿಫ್ರೆಶ್ ಆಗಲು ಬಯಸುತ್ತೇನೆ ಎಂದು ಗೇಲ್ ಹೇಳಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲಿ ವಿರಾಮ ಪಡೆಯುತ್ತಿದ್ದೇನೆ. ನನಗೆ ಅನುಮತಿ ನೀಡಿದ ಪಂಜಾಬ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು ಎಂದು ಗೇಲ್ ಹೇಳಿದ್ದಾರೆ.

    ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ಟ್ವೀಟ್ ಮಾಡಿದೆ.

    42 ವರ್ಷದ ಗೇಲ್ ಈ ವರ್ಷ ವೆಸ್ಟ್ ಇಂಡೀಸ್, ಸೈಂಟ್ ಕೀಟ್ಸ್, ನೆವಿಸ್ ಪ್ಯಾಟ್ರಿಯಾಟ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಟೂರ್ನಿಗಳು ಬಯೋಬಬಲ್ ಆಡಿಯಲ್ಲಿ ನಡೆದಿತ್ತು. ಹೀಗಾಗಿ ಆಟಗಾರರು ಕೋವಿಡ್ 19 ನಿಯಮವನ್ನು ಉಲ್ಲಂಘಿಸುವಂತಿಲ್ಲ.

  • ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

    ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

    ದುಬೈ: 14ನೇ ಅವೃತ್ತಿಯ ಐಪಿಎಲ್ ಪಂದ್ಯಗಳು ದಿನೇ ದಿನೇ ರೋಚಕತೆ ಪಡೆದುಕೊಳ್ಳತ್ತಿವೆ. ಟೂರ್ನಿಯ ಕೊನೆಯ ಹಂತದ ಕೆಲವೇ ಕೆಲವು ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ಇನ್ನೂ ಪ್ಲೇ ಆಫ್‍ಗೆ ಯಾವ ತಂಡಗಳು ಎಂಟ್ರಿ ಕೊಡಲಿವೆ ಎಂಬುದು ಖಚಿತವಾಗಿಲ್ಲ.

    ದುಬೈನಲ್ಲಿ ನಡೆಯುತ್ತಿರುವ ದ್ವಿತೀಯಾರ್ಧದ ಐಪಿಎಲ್ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣ ನೀಡುತ್ತಿವೆ. ಇದುವರೆಗೂ ಒಟ್ಟು ಲೀಗ್‍ನಲ್ಲಿ 43 ಪಂದ್ಯಗಳು ನಡೆದಿದೆ. ಇನ್ನೂ 13 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದರೂ ಯಾವ ಯಾವ ತಂಡಗಳು ಪ್ಲೇ ಆಫ್‍ಗೆ ಲಗ್ಗೆಯಿಡಲಿವೆ ಎಂಬುದು ಕೂತಹಲಕಾರಿಯಾಗಿದೆ. 10 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್, 8 ಗೆಲುವು ಹಾಗೂ 2 ಸೋಲುಗಳಿಂದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. 11 ಪಂದ್ಯಗಳನ್ನಾಡಿರುವ ಡೆಲ್ಲಿ, 8 ಗೆಲುವು ಹಾಗೂ 3 ಸೋಲುಗಳಿಂದ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ

    ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಚೆನ್ನೈ ಹಾಗೂ ಡೆಲ್ಲಿ ನಂತರದ ಸ್ಥಾನದಲ್ಲಿದೆ. 11 ಪಂದ್ಯಗಳನ್ನಾಡಿರುವ ಆರ್‍ಸಿಬಿ 7 ಗೆಲುವು ಹಾಗೂ 4 ಸೋಲುಗಳಿಂದ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 5 ಗೆಲುವು, 6 ಸೋಲು ಕಂಡಿರುವ ಕೆಕೆಆರ್ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 5 ಗೆಲುವು, 6 ಸೋಲುಗಳಿಂದ 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಮ್ಯಾಕ್ಸ್‌ವೆಲ್ ಅಬ್ಬರ -ರಾಜಸ್ಥಾನ ವಿರುದ್ಧ ಬೆಂಗಳೂರಿಗೆ 7 ವಿಕೆಟ್ ಜಯ

    ಎಲ್ಲಾ ತಂಡಗಳಿಗೂ 10 ಪಂದ್ಯಗಳೂ ಮುಗಿದರೂ ಇನ್ನೂ ಪ್ಲೇ ಆಫ್ ಲಗ್ಗೆಯಿಡಲು ಮಾತ್ರ ಸಾಧ್ಯವಾಗಿಲ್ಲ. ಉಳಿದ 13 ಲೀಗ್ ಪಂದ್ಯಗಳ ನಂತರವಷ್ಟೇ ಮುಂದಿನ ಹಂತಕ್ಕೆ ಹೋಗುವ ತಂಡಗಳು ಯಾವುವು ಎಂಬುದು ಖಚಿತವಾಗುತ್ತದೆ.

    ಚೆನ್ನೈ, ಡೆಲ್ಲಿ ಪ್ಲೇ ಆಫ್ ಖಚಿತ

    ಈಗಾಗಲೇ 16 ಅಂಕಗಳೊಂದಿಗೆ ಕ್ರಮವಾಗಿ ಒಂದು ಹಾಗೂ 2ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‍ನತ್ತ ಮುನ್ನಡೆದಿವೆ. ಉಳಿದಿರುವ 4 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದ, ಡೆಲ್ಲಿ 3ರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ. ಎರಡು ತಂಡಗಳ ನೆಟ್ ರನ್‍ರೇಟ್ ಕೂಡ ಉತ್ತಮವಾಗಿದೆ.

    ಒಂದು ಪಂದ್ಯ ಗೆದ್ದೂ ಆರ್​ಸಿಬಿ ಪ್ಲೇ ಆಫ್‍ಗೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉಳಿದಿರುವ 3 ಪಂದ್ಯಗಳಲಿ ನೆಟ್ ರನ್‍ರೇಟ್ ಜೊತೆಗೆ ಒಂದು ಪಂದ್ಯ ಗೆದ್ದರೂ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ನಿನ್ನೆ ರಾಜಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಜಯಗಳಿಸಿರುವ ಬೆಂಗಳೂರು, ಚೆನ್ನೈ ಹಾಗೂ ಡೆಲ್ಲಿ ಜೊತೆ ಪ್ಲೇ ಆಫ್‍ಗೆ ಎಂಟ್ರಿ ಕೊಡಲಿದೆ.

    ಸನ್ ರೈಸರ್ಸ್, ರಾಜಸ್ತಾನ್, ಪಂಜಾಬ್ ದೂರ

    ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಈಗಾಗಲೇ ಪ್ಲೇ ಆಫ್ ಕನಸನ್ನು ಕೈ ಚೆಲ್ಲಿದೆ. ರಾಜಸ್ಥಾನ, ಪಂಜಾಬ್ 11 ಪಂದ್ಯಗಳಿಂದ 8 ಅಂಕ ಪಡೆದಿದ್ದರೂ ಪ್ಲೇ ಆಫ್ ಪ್ರವೇಶ ಕಷ್ಟ. ಎರಡು ತಂಡಗಳು, ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೂ ನೆಟ್ ರನ್‍ರೇಟ್ ಕೊರತೆಯುಂಟಾಗಿ ಟೂರ್ನಿಯಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ.

    ಕೆಕೆಆರ್, ಮುಂಬೈ, ಪಂಜಾಬ್ ನಡುವೆ ಪ್ಲೇ ಆಫ್‍ಗಾಗಿ ಹಣಾಹಣಿ

    ಪ್ಲೇ ಆಫ್‍ಗಾಗಿ ಮೂರು ತಂಡಗಳಿಗೂ ಉಳಿದಿರುವ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. 5 ಜಯದೊಂದಿಗೆ 10 ಅಂಕಗಳಿಸಿರುವ ಮುಂಬೈ ಕೆಕೆಆರ್ ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿವೆ. ಮುಂದಿನ ಪಂದ್ಯಗಳನ್ನು ಗೆದ್ದು ನೆಟ್ ರನ್‍ರೇಟ್‍ನಲ್ಲಿ ಚೇತರಿಕೆ ಕಂಡು ಸೆಮಿಸ್ ಹಂತಕ್ಕೆ ತಲುಪಲು ಕೆಕೆಆರ್ ಹಾಗೂ ಮುಂಬೈ ಹರಸಾಹಸ ಪಡಬೇಕಿದೆ.

  • ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ಅಬುಧಾಬಿ: ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಯುಎಇನಲ್ಲಿ ಗೆಲುವಿನ ಖಾತೆ ತೆರೆದಿದೆ.

    ಪಂಜಾಬ್ ನೀಡಿದ್ದ 136 ರನ್‍ಗಳ ಗುರಿಯನ್ನು ಬೆನ್ನತ್ತಿದ ಮುಂಬೈ, ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‍ನಿಂದಾಗಿ 19 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಇದನ್ನೂ ಓದಿ: ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಮುಂಬೈ ದಾಳಿಯ ವಿರುದ್ಧ ರನ್‍ಗಳಿಸಲು ತಿಣುಕಾಡಿತು. ಆರಂಭಿಕರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 5.2 ಓವರ್‍ಗಳಿಗೆ 36 ರನ್ ಕಲೆ ಹಾಕಿತು. ದೊಡ್ಡ ಇನ್ನಿಂಗ್ಸ್ ಮುನ್ಸೂಚನೆ ನೀಡಿದ್ದ ರಾಹುಲ್, ಪೊರ್ಲಾಡ್‍ಗೆ ವಿಕೆಟ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಗೇಲ್ ಹಾಗೂ ಮಂದೀಪ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೆಡ್ ನಡೆಸಿದರು.

    ಪಂಜಾಬ್ ಪರ ರಾಹುಲ್ 21 ರನ್ (22 ಎಸೆತ 2 ಬೌಂಡರಿ) ಗಳಿಸಿದರು. ಮಂದೀಪ್ ಸಿಂಗ್ 15ರನ್ (14 ಎಸೆತ 2 ಬೌಂಡರಿ) ಗಳಿಸಿದರೆ, ಮಾಕ್ರ್ರಮ್ 42 ರನ್ (29 ಎಸೆತ 6 ಬೌಂಡರಿ) ಸಿಡಿಸಿದರು. ಉಳಿದಂತೆ ದೀಪಕ್ ಹೂಡ 28ರನ್ (26 ಎಸೆತ 1 ಬೌಂಡರಿ 1 ಸಿಕ್ಸರ್) ಹೊಡೆದರು. ನಿಗದಿತ 20 ಓವರ್‍ನಲ್ಲಿ ಪಂಜಾಬ್ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಮುಂಬೈ ಪರ ಪೊರ್ಲಾಡ್ ಹಾಗೂ ಬುಮ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    136 ರನ್‍ಗಳ ಗುರಿ ಬೆನ್ನತ್ತಿದ ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ 8, ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ವಿಕೆಟ್ ಕೀಪರ್ ಡಿ ಕಾಕ್ 38 ರನ್ (32 ಎಸೆತ 3 ಬೌಂಡರಿ) ಗಳಿಸಿ ತಂಡಕ್ಕೆ ರನ್ ಗಳಿಸಲು ಕೊಂಚ ನೆರವಾದರು. ಮಿಡಲ್ ಆರ್ಡರ್ ಆಡಲು ಬಂದ ಸೌರಭ್ ತಿವಾರಿ 45 ರನ್ ( 37 ಎಸೆತ 3 ಬೌಂಡರಿ 2 ಸಿಕ್ಸರ್) ಚಚ್ಚುವ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು. ಸೌರಭ್ ತಿವಾರಿ ವಿಕೆಟ್ ಪತನದ ಬಳಿಕ ಕ್ರಿಸ್‍ಗಿಳಿದ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್‍ಗಳನ್ನು ಚಂಡಾಡಿ, ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಐದನೇ ಹಾಗೂ ಯುಎಇಯಲ್ಲಿ ಮೊದಲ ಜಯ ದಾಖಲಿಸಿತು.

     

  • ಗಬ್ಬರ್ ಅಬ್ಬರ-ಡೆಲ್ಲಿಗೆ 7 ವಿಕೆಟ್ ಭರ್ಜರಿ ಜಯ

    ಗಬ್ಬರ್ ಅಬ್ಬರ-ಡೆಲ್ಲಿಗೆ 7 ವಿಕೆಟ್ ಭರ್ಜರಿ ಜಯ

    ಅಹಮದಾಬಾದ್: ಡೆಲ್ಲಿ ತಂಡದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಅವರ ಬ್ಯಾಟಿಂಗ್ ಅಬ್ಬರದ ಫಲವಾಗಿ ಡೆಲ್ಲಿ ಕ್ಯಾಪಿಟಲ್ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಗೆಲ್ಲಲು 167 ರನ್‍ಗಳ ಗುರಿ ಪಡೆದ ಡೆಲ್ಲಿ 17.5 ಓವರ್‍ ಗಳಲ್ಲಿ 167 ರನ್ ಸಿಡಿಸಿ ಭರ್ಜರಿ ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಆರ್​ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಜೊಡಿ ಮೊದಲ ವಿಕೆಟ್‍ಗೆ 63 ರನ್(38 ಎಸೆತ) ಜೊತೆಯಾಟವಾಡಿತು. ಪೃಥ್ವಿ ಶಾ 39 ರನ್(22 ಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಸ್ವೀವ್ ಸ್ಮಿತ್ 24ರನ್ (22 ಸೆತ, 1 ಸಿಕ್ಸ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಅದರೆ ಇತ್ತ ಧವನ್ ಮಾತ್ರ ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿ ತಂಡದ ಗೆಲುವಿನ ಗಡಿ ಮುಟ್ಟಿಸಿದರು. ಉತ್ತಮವಾಗಿ ಬ್ಯಾಟ್ ಬೀಸಿದ ಧವನ್ 69 ರನ್(47 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗದೆ ಉಳಿದರು. ಇವರಿಗೆ ಕಡೆಯಲ್ಲಿ ಉತ್ತಮ ಸಾಥ್ ನೀಡಿದ ಶಿಮ್ರಾನ್ ಹೆಟ್ಮಿಯರ್ ಬೌಂಡರಿ ಸಿಕ್ಸ್ ಬಾರಿಸಿ 16ರನ್(4 ಎಸೆತ, 1 ಬೌಂಡರಿ, 2 ಸಿಕ್ಸ್) ಮಾಡಿ ಮಿಂಚಿದರು.

    ಮಯಾಂಕ್ ಅಗರ್​ವಾಲ್ ನಾಯಕನ ಆಟ
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಹಂಗಾಮಿ ನಾಯಕ ಮಯಾಂಕ್ ಅಗರ್​ವಾಲ್ ತಂಡಕ್ಕೆ ಆಧಾರವಾಗಿ ಕಡೆಯವರೆಗೆ ಬ್ಯಾಟಿಂಗ್ ಮಾಡಿ ಮಿಂಚಿದರು. ಒಂದು ಕಡೆಯಲ್ಲಿ ಪಂಜಾಬ್ ತಂಡದ ವಿಕೆಟ್ ಪತನವಾಗುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಮಯಂಕ್ ಏಕಾಂಗಿಯಾಗಿ ತಂಡವನ್ನು ಆಧರಿಸಿದರು. ಕ್ರಿಸ್ ಗೇಲ್ 13ರನ್(16 ಎಸೆತ, 1 ಸಿಕ್ಸ್) ಸಿಡಿಸಿ ರಬಾಡಗೆ ಬಲಿಯಾದರು. ನಂತರ ಬಂದ ಡೇವಿಡ್ ಮಲಾನ್ ಸಿಡಿಯುವ ಸೂಚನೆ ನೀಡಿದರು ಕೂಡ 26ರನ್(26 ಎಸೆತ 1 ಬೌಂಡರಿ, 1ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ತಂಡಕ್ಕೆ ನೆರವಾಗಲಿಲ್ಲ. ಆದರೆ ನಾಯಕ ಮಯಾಂಕ್ ಅಗರ್​ವಾಲ್ ಆರಂಭಿಕನಾಗಿ ಬಂದು ಕಡೆಯ ವರೆಗೆ ಬ್ಯಾಟ್ ಬೀಸಿ 99ರನ್(58 ಎಸೆತ, 8 ಬೌಂಡರಿ, 4 ಸಿಕ್ಸ್) ಸಿಡಿಸಿ ಔಟ್ ಆಗದೆ ಉಳಿದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 166ರನ್ ಗಳಿಸಿತು.

    ಡೆಲ್ಲಿ ಪರ ಬೌಲಿಂಗ್‍ನಲ್ಲಿ ಮಿಂಚಿದ ಕಗಿಸೋ ರಬಾಡ 3 ವಿಕೆಟ್ ಪಡೆದರೆ. ಆವೀಶ್ ಖಾನ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

  • ಬೆಂಗಳೂರು ಮೇಲೆ ರಾಹುಲ್ ದಾಳಿ – ಪಂಜಾಬ್‍ಗೆ 35 ರನ್‍ಗಳ ಜಯ

    ಬೆಂಗಳೂರು ಮೇಲೆ ರಾಹುಲ್ ದಾಳಿ – ಪಂಜಾಬ್‍ಗೆ 35 ರನ್‍ಗಳ ಜಯ

    – 5ನೇ ಸ್ಥಾನಕ್ಕೆ ಏರಿದ ಪಂಜಾಬ್
    – 3ನೇ ಸ್ಥಾನದಲ್ಲಿ ಮುಂದುವರಿದ ಬೆಂಗಳೂರು

    ಅಹಮದಾಬಾದ್: ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‍ನಿಂದಾಗಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 35 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.

    ಗೆಲುವಿಗೆ 180 ರನ್‍ಗಳ ಗುರಿ ಪಡೆದ ಆರ್​ಸಿಬಿ ತಂಡ 20 ಓವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ ಪಂಜಾಬ್ ತಂಡ 5ನೇ ಸ್ಥಾನಕ್ಕೆ ಏರಿದೆ.

    ಪಂಜಾಬ್ ಪರ ಉತ್ತಮ ಬೌಲಿಂಗ್ ದಾಳಿ ಮಾಡಿದ ಹಪ್ರ್ರೀತ್ ಬ್ರಾರ್ 4 ಓವರ್ ಎಸೆದು ಒಂದು ಮೇಡನ್ ಸಹಿತ 3 ವಿಕೆಟ್ ಪಡೆದು ಆರ್​ಸಿಬಿ ಕುಸಿತಕ್ಕೆ ಕಾರಣರಾದರು.

    ಆರ್‍ಸಿಬಿ ಪರ ವಿರಾಟ್ ಕೊಹ್ಲಿ 35 ರನ್(34 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಜಾತ್ ಪಟೀದಾರ್ 31 ರನ್(30 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಕೊನೆಯಲ್ಲಿ ಹರ್ಷಲ್ ಪಟೇಲ್ 31ರನ್ (13 ಎಸೆತ, 3 ಬೌಂಡರಿ, 2 ಸಿಕ್ಸ್) ಕೈಲ್ ಜೇಮಿಸನ್ 16ರನ್( 11 ಎಸೆತ, 1 ಬೌಂಡರಿ, 1 ಸಿಕ್ಸ್,) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್ ಮ್ಯಾನ್‍ಗಳು ರನ್ ಗಳಿಸಲು ಪರದಾಡಿದರು.

    ರವಿ ಬಿಷ್ನೊಯ್ 2 ವಿಕೆಟ್, ರಿಲೇ ಮೆರಡಿತ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡ್‍ನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    ಟಾಸ್ಕ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡದ ಪರ ಮೊದಲ ಬಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ಪ್ರಭಿಸಿಮ್ರಾನ್ ಸಿಂಗ್ ಆರಂಭಿಕರಾಗಿ ರಾಹುಲ್ ಜೊತೆ ಕಾಣಿಸಿಕೊಂಡರು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಪ್ರಭಿಸಿಮ್ರಾನ್ 7ರನ್(7 ಎಸೆತ 1ಬೌಂಡರಿ) ಸಿಡಿಸಿ ನಿರಾಸೆ ಮೂಡಿಸಿದರು.

    ರಾಹುಲ್-ಗೇಲ್ ಜುಗಲ್ ಬಂದಿ
    ನಂತರ ಜೊತೆಯಾದ ರಾಹುಲ್ ಮತ್ತು ಗೇಲ್ ಆರ್​ಸಿಬಿ ಬೌಲರ್‍ ಗಳಿಗೆ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ ಸಿಕ್ಸರ್‍ ಗಳ ಮಳೆ ಸುರಿಸಿದ ಈ ಜೊಡಿ ಎರಡನೇ ವಿಕೆಟ್‍ಗೆ 80ರನ್(45 ಎಸೆತ)ಜೊತೆಯಾಟವಾಡಿತು. ಕ್ರಿಸ್ ಗೇಲ್ 46ರನ್(24 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಕೈ ಚೆಲ್ಲಿಕೊಂಡರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ತಂಡಕ್ಕೆ ನೆರವಾಗಲಿಲ್ಲ. ಆದರೆ ಒಂದು ಕಡೆಯಲ್ಲಿ ಅಬ್ಬರಿಸುತ್ತಿದ್ದ ಕೆ.ಎಲ್ ರಾಹುಲ್ 91 ರನ್(57 ಎಸೆತ, 7 ಬೌಂಡರಿ, 5 ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದರು. ಇವರಿಗೆ ಕಡೆಯಲ್ಲಿ ಉತ್ತಮ ಸಾಥ್ ನೀಡಿದ ಹಪ್ರ್ರೀತ್ ಬ್ರಾರ್ 25ರನ್ (17 ಎಸೆತ, 1ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು.

    17ನೇ ಓವರ್ ಅಂತ್ಯದಲ್ಲಿ 132 ರನ್ ಗಳಿಸಿದ್ದ ಪಂಜಾಬ್ ತಂಡ ಮುಂದಿನ ಮೂರು ಓವರ್‍ ಗಳಲ್ಲಿ 47 ರನ್ ಚಚ್ಚಿತು. ಅದರಲ್ಲೂ 20ನೇ ಓವರ್ ಎಸೆದ ಹರ್ಷಲ್ ಪಟೇಲ್ ಅವರು ಒಂದೇ ಓವರ್‍ ನಲ್ಲಿ 22ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 179ರನ್ ಮಾಡಿತು.

    ರನ್ ಏರಿದ್ದು ಹೇಗೆ?
    50 ರನ್-37 ಎಸೆತ
    100 ರನ್-65 ಎಸೆತ
    150 ರನ್-108 ಎಸೆತ
    179 ರನ್-120 ಎಸೆತ

  • ಕೋಲ್ಕತ್ತಾಗೆ 5 ವಿಕೆಟ್‍ಗಳ ಜಯ – 5ನೇ ಸ್ಥಾನಕ್ಕೆ ಜಿಗಿತ

    ಕೋಲ್ಕತ್ತಾಗೆ 5 ವಿಕೆಟ್‍ಗಳ ಜಯ – 5ನೇ ಸ್ಥಾನಕ್ಕೆ ಜಿಗಿತ

    ಅಹಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಜಯ ಸಾಧಿಸಿದೆ.

    ಗೆಲ್ಲಲು 124 ರನ್‍ಗಳ ಸುಲಭ ಸವಾಲನ್ನು ಪಡೆದ ಕೋಲ್ಕತ್ತಾ 16.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಹೊಡೆದು ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೋಲ್ಕತ್ತಾ ಈಗ 4 ಅಂಕದೊಂದಿಗೆ 5ನೇ ಸ್ಥಾನಕ್ಕೆ ಜಾರಿದೆ. 5ನೇ ಸ್ಥಾನದಲ್ಲಿದ್ದ ಪಂಜಾಬ್ 6ನೇ ಸ್ಥಾನಕ್ಕೆ ಜಾರಿದೆ.

    17 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರು ನಾಯಕ ಇಯಾನ್ ಮಾರ್ಗನ್ ಮತ್ತು ರಾಹುಲ್ ತ್ರಿಪಾಠಿ ಅವರು 48 ಎಸೆತಗಳಲ್ಲಿ 66 ರನ್ ಜೊತೆಯಾಟವಾಡಿ ತಂಡದ ಚೇತರಿಕೆಗೆ ಕಾರಣವಾದರು.

    ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿ 41 ರನ್(32 ಎಸೆತ, 7 ಬೌಂಡರಿ) ಹೊಡೆದು ಔಟಾದರು. ನಾಯಕ ಇಯಾನ್ ಮಾರ್ಗನ್ ಔಟಾಗದೇ 47 ರನ್(40 ಎಸೆತ, 4 ಬೌಂಡರಿ, 2 ಸಿಕ್ಸರ್) ಅಂಡ್ರೆ ರಸಲ್ 10 ರನ್, ದಿನೇಶ್ ಕಾರ್ತಿಕ್ ಔಟಾಗದೇ 12 ರನ್(6 ಎಸೆತ, 2 ಬೌಂಡರಿ) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ಎಡವಿತು. ಪಂಜಾಬ್ ಪರ ಕೆ.ಎಲ್ ರಾಹುಲ್ 19 ರನ್(20 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಇವರೊಂದಿಗೆ ಮಾಯಾಂಕ್ ಅಗರ್‍ವಾಲ್ 31 ರನ್(34 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು.

    ಬಿಗ್‍ಹಿಟ್ಟರ್ ಕ್ರಿಸ್ ಗೇಲ್ ಶೂನ್ಯ ಸುತ್ತಿದರೆ, ದೀಪಕ್ ಹೂಡಾ 1 ರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮ ಕ್ರಮಾಂಕದಲ್ಲಿ  ಕುಸಿತ ಕಂಡ ಪಂಜಾಬ್‍ಗೆ ಕೊನೆಯಲ್ಲಿ ಕ್ರಿಸ್ ಜೋರ್ಡನ್ 30ರನ್(18 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿ ಪಂಜಾಬ್ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು.

    ಕೋಲ್ಕತ್ತಾ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ಓವರ್ ಎಸೆದು 30 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಪ್ಯಾಟ್ ಕಮ್ಮಿನ್ಸ್ ಮತ್ತು ಸುನೀಲ್ ನರೇನ್ ತಲಾ 2 ವಿಕೆಟ್ ಪಡೆದರು. ಶಿವಂ ಮಾವಿ ಮತ್ತು ರೆಸೆಲ್ ತಲಾ 1 ವಿಕೆಟ್ ಕಬಳಿಸಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

  • ಆಲ್‍ರೌಂಡರ್ ಆಟ ಪ್ರದರ್ಶನ – ಹಾಲಿ ಚಾಂಪಿಯನ್ ವಿರುದ್ಧ ಪಂಜಾಬ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    ಆಲ್‍ರೌಂಡರ್ ಆಟ ಪ್ರದರ್ಶನ – ಹಾಲಿ ಚಾಂಪಿಯನ್ ವಿರುದ್ಧ ಪಂಜಾಬ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    – ಕೆಎಲ್ ರಾಹುಲ್ ಅರ್ಧಶತಕ
    – 5ನೇ ಸ್ಥಾನಕ್ಕೇರಿದ ಪಂಜಾಬ್

    ಚೆನ್ನೈ: ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 17.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಗೆಲುವಿನ ನಗೆ ಬೀರಿತು.

    ಆರಂಭಿಕ ಆಟಗಾರದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟಿಗೆ 53 ರನ್‍ಗಳ ಜೊತೆಯಾಟವಾಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತ 53 ರನ್ ಗಳಿಸಿದ್ದಾಗ 25 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಮಯಾಂಕ್ ಔಟಾದರು. ನಂತರ ಒಂದಾದ ರಾಹುಲ್ ಮತ್ತು ಕ್ರಿಸ್ ಗೇಲ್ ಮುರಿಯದ ಎರಡನೇ ವಿಕೆಟಿಗೆ 65 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಕೆಎಲ್ ರಾಹುಲ್ ಔಟಾಗದೇ 60 ರನ್(52 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದರೆ ಗೇಲ್ ಔಟಾಗದೇ 43 ರನ್(35 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಂಕಗಳಿಸಿ 5ನೇ ಸ್ಥಾನಕ್ಕೆ ಏರಿದ್ದರೆ ಮುಂಬೈ 4ನೇ ಸ್ಥಾನದಲ್ಲಿದೆ.

    ಸಾಧಾರಣ ಮೊತ್ತ: 26 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಉರುಳಿದ ಬಳಿಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಇವರಿಬ್ಬರು ಮೂರನೇ ವಿಕೆಟಿಗೆ 56 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

    ತಂಡದ ಮೊತ್ತ 105 ರನ್ ಆಗಿದ್ದಾಗ 33 ರನ್(27 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಸೂರ್ಯಕುಮಾರ್ ಯಾದವ್ ಔಟಾದರು. 112 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ 63 ರನ್(52 ಎಸೆತ, 5 ಬೌಂಡರಿ, 2 ಸಿಕ್ಸರ್) 17.3 ಓವರ್‍ಗಳಲ್ಲಿ ಔಟ್ ಆದರು. ಕೊನೆಯ ಓವರ್‍ಗಳಲ್ಲಿ ಆಟಗಾರರಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಬಾರದ ಕಾರಣ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು.

    ಮೊಹಮ್ಮದ್ ಶಮಿ, ರವಿ ಬಿಶ್ಣೋಯ್ ತಲಾ 2 ವಿಕೆಟ್ ಪಡೆದರೆ ದೀಪಕ್ ಹೂಡಾ ಮತ್ತು ಅರ್ಶದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

  • ವಾರ್ನರ್, ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟ- ಹೈದರಾಬಾದ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    ವಾರ್ನರ್, ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟ- ಹೈದರಾಬಾದ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    ಚೆನ್ನೈ: ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟದಿಂದಾಗಿ ಸನ್‍ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೊದಲ ಜಯ ದಾಖಲಿಸಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ಇನ್ನೂ 2 ಬಾಲ್ ಇರುವಾಗಲೇ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 120 ರನ್ ಪೇರಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್, ಇನ್ನೂ 8 ಬಾಲ್ ಇರುವಾಗಲೇ ಕೇವಲ 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 9 ವಿಕೆಟ್‍ಗಳ ಭರ್ಜರಿ ವಿಜಯ ಸಾಧಿಸಿದೆ.

    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್, ತಾಳ್ಮೆಯ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಾರ್ನರ್, 37 ರನ್ (37 ಎಸೆತ, 3 ಬೌಂಡರಿ, 1 ಸಿಕ್ಸ್) ಚಚ್ಚುವ ಮೂಲಕ ತಂಡಕ್ಕೆ ಭರ್ಜರಿ ರನ್‍ಗಳ ಮೊತ್ತದ ಕೊಡುಗೆ ನೀಡಿದರು. ಆದರೆ 10ನೇ ಓವರ್ ಆರಂಭದಲ್ಲಿ ವಾರ್ನರ್ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿದರು.

    ಅಲ್ಪ ಗುರಿಯಾಗಿದ್ದರಿಂದ ಕೂಲ್ ಆಗಿಯೇ ಆಡಿದ ಸನ್‍ರೈಸರ್ಸ್ ಹೈದರಾಬಾದ್, ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲೇ ರನ್ ಪೇರಿಸಿತು. ವಾರ್ನರ್ ಬಳಿಕ ಜಾನಿ ಬೈರ್‌ಸ್ಟೋವ್ ಗೆ ಜೊತೆಯಾದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡು ಪಂದ್ಯ ಮುಗಿಯುವ ವರೆಗೆ ಆಡಿದರು. ಜಾನಿ ಬೈರ್‌ಸ್ಟೋವ್ ಔಟಾಗದೆ 63 ರನ್(56 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿದರೆ, ಕೇನ್ ವಿಲಿಯಮ್ಸನ್ 16 ರನ್ (19 ಎಸೆತ) ಬಾರಿಸಿ ತಂಡವನ್ನು ಗೆಲ್ಲಿಸಿದರು.

    ವಾರ್ನರ್, ಜಾನಿ ಬೈರ್ ಸ್ಟೋವ್ ಜೊತೆಯಾಟ:
    ತಾಳ್ಮೆಯ ಜೊತೆಯಾಟವಾಡುತ್ತಿದ್ದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ 73 ರನ್ (64 ಎಸೆತ) ಚಚ್ಚುವ ಮೂಲಕ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ವಾರ್ನರ್ ಪೆವಿಲಿಯನ್ ಸೇರುತ್ತಿದ್ದಂತೆ. ಜಾನಿ ಬೈರ್‍ಸ್ಟೋವ್ ಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡರು. ಇಬ್ಬರ ಜೊತೆಯಾಟದಲ್ಲಿ 48 ರನ್ (52 ಎಸೆತ) ಸಿಡಿಸಿದರು.

    ಯುವ ಬೌಲರ್ ಖಲೀಲ್ ಅಹ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, 4 ಓವರ್ ಬೌಲಿಂಗ್‍ನಲ್ಲಿ 21 ರನ್ ನೀಡಿ, 3 ವಿಕೆಟ್ ಪಡೆದು ಮಿಂಚಿದ್ದಾರೆ. ಅಹ್ಮದ್ ಬೌಲಿಂಗ್ ದಾಳಿಯಿಂದಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಕಡಿಮೆ ರನ್‍ಗಳ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಿದೆ.

    ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಹೀಗಿರುವಾಗಲೇ 3ನೇ ಓವರ್ ಆರಂಭದಲ್ಲಿ ಕೆ.ಎಲ್.ರಾಹುಲ್ ಕೇವಲ 4 ರನ್ (6 ಎಸೆತ) ಗಳಿಸಿ ಕ್ಯಾಚ್ ನೀಡಿದರು.

    ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಮಾಯಾಂಕ್ ಅಗರ್ವಾಲ್ ಸಹ 22 (25 ಎಸೆತ, 2 ಬೌಂಡರಿ) ಸಿಡಿಸಿ 6ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ನಿಕೋಲಸ್ ಪೂರನ್ ಸಹ 7ನೇ ಓವರ್ ಮೊದಲ ಬಾಲ್‍ಗೆ ವಿಕೆಟ್ ಒಪ್ಪಿಸಿ ಸೊನ್ನೆ ಸುತ್ತಿದರು. ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್‍ಗೆ ಭಾರೀ ಆಘಾತವಾಯಿತು. ಕ್ರಿಸ್ ಗೇಲ್ ಸಹ 15 ರನ್(17 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

    11ನೇ ಓವರ್‍ನಲ್ಲಿ ತಂಡದ ಆಪತ್ಬಾಂಧವನಂತೆ ಆಗಮಿಸಿದ ಶಾರುಖ್ ಖಾನ್, ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಿದರು. ಆದರೆ 22 ರನ್(17 ಎಸೆತ, 2 ಸಿಕ್ಸ್) ಚಚ್ಚಿ 18ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು.

    19ನೇ ಓವರ್ ನಲ್ಲಿ 2 ವಿಕೆಟ್
    ದೀಪಕ್ ಹೂಡ 13 ರನ್ (11 ಎಸೆತ, 2 ಬೌಂಡರಿ) ಸಿಡಿಸಿ 11.3ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು. ಮೊಯ್ಸೆಸ್ ಹೆನ್ರಿಕ್ಸ್ 14 ರನ್(17 ಎಸೆತ) ಹೊಡೆದು ವಿಕೆಟ್ ಒಪ್ಪಿಸಿದರು. ಫೇಬಿಯೆನ್ ಆಲೆನ್ 6 ರನ್ (11 ಎಸೆತ) ಹೊಡೆದು ಔಟಾದರು. ಮುರುಗನ್ ಅಶ್ವಿನ್ 9 ರನ್ (10 ಎಸೆತ, 1 ಬೌಂಡರಿ) ಹೊಡೆದು 19ನೇ ಓವರ್ ಆರಂಭದಲ್ಲಿ ಔಟಾದರು. ಬಳಿಕ ಮೊಹಮ್ಮದ್ ಶಮಿ ಸಹ 3 ರನ್ (3 ಎಸೆತ) ಬಾರಿಸಿ ಇದೇ ಓವರ್‍ನಲ್ಲಿ ರನ್ ಔಟ್ ಆದರು. ಈ ಮೂಲಕ ಪಂಜಾಬ್ ಇನ್ನೂ 2 ಬಾಲ್ ಇರುವಾಗಲೇ ಆಲ್‍ಔಟ್ ಆಗಿ 120 ರನ್ ಮಾತ್ರ ದಾಖಲಿಸಿತು.

  • ಧವನ್ ಭರ್ಜರಿ ಆಟ, 6 ವಿಕೆಟ್‌ಗಳ ಜಯ – 2ನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

    ಧವನ್ ಭರ್ಜರಿ ಆಟ, 6 ವಿಕೆಟ್‌ಗಳ ಜಯ – 2ನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

    ಮುಂಬೈ: ಶಿಖರ್ ಧವನ್ ಅವರ ಸ್ಫೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಜಯವನ್ನು ಸಾಧಿಸಿದೆ.

    ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಡೆಲ್ಲಿ 18.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಹೊಡೆದು ಜಯಶಾಲಿಯಾಯಿತು. ಮೂರು ಪಂದ್ಯವಾಡಿ ಎರಡರಲ್ಲಿ ಜಯ ಸಾಧಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರಥಮ ಸ್ಥಾನದಲ್ಲಿ ಆರ್‌ಸಿಬಿ ಇದೆ.

    ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 59 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಪೃಥ್ವಿ ಶಾ 32 ರನ್(17 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದರೆ, ಸ್ಟೀವ್ ಸ್ಮಿತ್ 9 ರನ್ ಗಳಿಸಿ ಔಟಾದರು.

    14.5 ಓವರ್‌ನಲ್ಲಿ ತಂಡದ ಮೊತ್ತ 152 ಆಗಿದ್ದಾಗ ಶಿಖರ್ ಧವನ್ ಔಟಾದರು. ಸ್ಫೋಟಕ 92 ರನ್ (48 ಎಸೆತ, 13 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ಬಾಗಿಲ ಬಳಿ ತಂದು ಧವನ್ ಔಟಾದರು. ರಿಷಭ್ ಪಂತ್ 15 ರನ್ ಹೊಡೆದರೆ ಮಾರ್ಕಸ್ ಸ್ಟೋಯಿನ್ಸ್ ಔಟಾಗದೇ 27 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್), ಲಲಿತ್ ಯಾದವ್ ಔಟಾಗದೇ 12 ರನ್(6 ಎಸೆತ, 1 ಬೌಂಡರಿ) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    122 ರನ್‌ಗಳ ಜೊತೆಯಾಟ
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಕೆ.ಎಲ್ ರಾಹುಲ್ 61 ರನ್(51 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಮಯಾಂಕ್ ಅಗರ್ ವಾಲ್ 69 ರನ್ (36 ಎಸೆತ, 7 ಬೌಂಡರಿ,4 ಸಿಕ್ಸರ್) ಸಿಡಿಸಿ ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 77 ಎಸೆತದಲ್ಲಿ 122 ರನ್ ಕಲೆ ಹಾಕಿತು. ಈ ಜೋಡಿಯನ್ನು ಬೇರ್ಪಡಿಸಲು ಡೆಲ್ಲಿಯ ಬೌಲರ್‌ಗಳು ಪರದಾಟ ನಡೆಸಿದರು.

    12ನೇ ಓವರ್ ಎಸೆಯಲು ಮುಂದಾದ ಕಗಿಸೋ ರಬಾಡ ಮಯಾಂಕ್ ವಿಕೆಟ್ ಕಬಳಿಸುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಂತರ ಬಂದ ಕ್ರೀಸ್ ಗೇಲ್ 11 ರನ್( 9 ಎಸೆತ, 1 ಸಿಕ್ಸ್) ಸಿಡಿಸಿ ಬಂದಷ್ಟೇ ವೇಗವಾಗಿ ಪೇವಿಲಿಯನ್ ಸೇರಿಕೊಂಡರು. ನಂತರ ಸ್ಲಾಗ್ ಓವರ್‌ಗಳಲ್ಲಿ ಬಿಂದಾಸ್ ಆಗಿ ಬ್ಯಾಟ್ ಬೀಸಿದ ದೀಪಕ್ ಹೂಡ 22 ರನ್( 13 ಎಸೆತ, 2 ಸಿಕ್ಸರ್) ಮತ್ತು ಶಾರುಖ್ ಖಾನ್ 15 ರನ್ (5 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಪಂಜಾಬ್ ತಂಡದ ರನ್ 190ರ ಗಡಿ ದಾಟುವಂತೆ ನೋಡಿಕೊಂಡರು. ಅಜೇಯರಾಗಿ ಉಳಿದ ಈ ಜೋಡಿ 5ನೇ ವಿಕೆಟ್‌ಗೆ 7 ಎಸೆತದಲ್ಲಿ 16 ರನ್‌ಗಳ ಜೊತೆಯಾಟವಾಡಿತು.

    ಡೆಲ್ಲಿ ಪರ ಬೌಲಿಂಗ್ ಮಾಡಿದ 6 ಜನ ಬೌಲರ್ಸ್ ಕೂಡ ದುಬಾರಿಯಾದರು. ಕ್ರೀಸ್ ವೋಕ್ಸ್, ಅವೇಶ್ ಖಾನ್, ಕಗಿಸೋ ರಬಾಡ ಮತ್ತು ಲುಕ್ಮನ್ ಮೆರಿವಾಲಾ ತಲಾ ಒಂದು ವಿಕೆಟ್ ಪಡೆದರು.