Tag: Punjab Kings

  • ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಪುಣೆ: ಪಂಜಾಬ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಹೋರಾಟದ ನಡುವೆಯು ಗೆಲುವು ಮರಿಚಿಕೆಯಾಯಿತು.

    198 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಫಾತ ಎದುರಾಯಿತು ಇಶಾನ್ ಕಿಶನ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ 28 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮುಂಬೈ ಬೌಲರ್‌ಗಳಿಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸುವಂತೆ ಬ್ಯಾಟ್ ಬೀಸಲು ಆರಂಭಿಸಿ 8ನೇ ಓವರ್‌ನ ಕೊನೆಯ 4 ಎಸೆತಗಳನ್ನು ಸತತ ಸಿಕ್ಸರ್‌ಗಟ್ಟಿ ಅಬ್ಬರಿಸಿ ಬೊಬ್ಬಿರಿದರು. ಇನ್ನೇನು ಅರ್ಧಶತಕದ ಹೊಸ್ತಿಲಲ್ಲಿದ್ದ ವೇಳೆ ಬ್ರೆವಿಸ್ 49 ರನ್ (25 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ನಂತರ ಸೂರ್ಯ ಕುಮಾರ್ ಯಾದವ್ 43 ರನ್ (30 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡಂತೆ ಮುಂಬೈ ಗೆಲುವು ಮತ್ತಷ್ಟು ದೂರವಾಯಿತು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಲಷ್ಟೆ ಶಕ್ತವಾಗಿ 13 ರನ್‍ಗಳಿಂದ ಸೋಲು ಕಂಡಿತು.

    ಈ ಮೊದಲು ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮೊರೆ ಹೋಯಿತು. ಮಯಾಂಕ್ ಅಗರ್‌ವಾಲ್ ಮತ್ತು ಶಿಖರ್ ಧವನ್ ಮುಂಬೈ ಬೌಲರ್‌ಗಳ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಬಡಿದಟ್ಟಿದರು. ಈ ಜೋಡಿ ಮೊದಲ ವಿಕೆಟ್‍ಗೆ 97 ರನ್ (57 ಎಸೆತ)ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮುರುಗನ್ ಅಶ್ವಿನ್ ಬರಬೇಕಾಯಿತು. ಮಯಾಂಕ್ ಅಗರ್‌ವಾಲ್ 52 ರನ್ (32 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.

    ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಇತ್ತ ಧವನ್ ಮಾತ್ರ ತಮ್ಮ ಹೊಡಿಬಡಿ ಆಟ ಮುಂದುವರಿಸಿದರು. ಅಂತಿಮವಾಗಿ 70 ರನ್ (50 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಗೆ ಜಿತೇಶ್ ಶರ್ಮಾ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅಜೇಯ 30 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.

  • ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಮುಂಬೈ: ಕೊನೆಯ ಎಸೆತದವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಸಿಡಿಸಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳ ನೆರವಿನಿಂದ ಪಂಜಾಬ್ ವಿರುದ್ಧ ಗುಜರಾತ್ 6 ವಿಕೆಟ್‍ಗಳ ರೋಚಕ ಜಯ ಸಾಧಿಸಿತು.

    ಗೆದ್ದಿದ್ದು ಹೇಗೆ:
    ಕೊನೆಯ 12 ಎಸೆತಗಳಲ್ಲಿ 32 ರನ್ ಬೇಕಾಗಿತ್ತು 18ನೇ ಓವರ್‌ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಪಂಜಾಬ್ ನೀಡಿದ 190 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 6 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಗಿಲ್ ಮತ್ತು ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಾಯಿ ಸುದರ್ಶನ್ 35 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಗಿಲ್ ಜೊತೆ 101 ರನ್ (68 ಎಸೆತ)ಗಳ ಜೊತೆಯಾಟವಾಡಿದರು. ಗಿಲ್ 96 ರನ್ (59 ಎಸೆತ, 11 ಬೌಂಡರಿ, 1 ಸಿಕ್ಸ್) ವೇಳೆ ಔಟ್ ಆಗಿ ಶತಕ ವಂಚಿತರಾದರು.

    ಈ ಮೊದಲು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಈ ಪಂದ್ಯದಲ್ಲೂ ಕೂಡ ನಾಯಕ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ 35 ರನ್ (30 ಎಸೆತ, 4 ಬೌಂಡರಿ) ಬಾರಿಸಿ ಔಟ್ ಆದರು.


    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಲಿವಿಂಗ್ಸ್ಟೋನ್ ಬೌಂಡರಿ, ಸಿಕ್ಸರ್‌ಗಳ ಅಬ್ಬರದ ಆಟದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಆದರೆ 64 ರನ್ (27 ಎಸೆತ, 7 ಬೌಂಡರಿ, 4 ಸಿಕ್ಸ್) ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಮತ್ತೆ ಪಂಜಾಬ್ ಕುಸಿತ ಕಂಡಿತು. ಅಂತಿಮವಾಗಿ ರಾಹುಲ್ ಚಹರ್ ಬಿರುಸಿನ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು.

    ಅಂತಿಮವಾಗಿ 20 ಓವರ್‌ಗಳಲ್ಲಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 189 ರನ್ ಕಲೆ ಹಾಕಿತು. ಗುಜರಾತ್ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ದರ್ಶನ್ ನಲ್ಕಂಡೆ 2, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.

  • ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಮುಂಬೈ: ಚೆನ್ನೈಗೆ ಬೃಹತ್ ಮೊತ್ತ ಟಾರ್ಗೆಟ್ ನೀಡಿ ಬೌಲಿಂಗ್ ಮೂಲಕ ಕಟ್ಟಿಹಾಕಿದ ಪಂಜಾಬ್ ಕಿಂಗ್ಸ್ 54 ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡ 18 ಓವರ್‌ಗಳಲ್ಲಿ 126 ರನ್‍ಗಳಿಗೆ ಆಲೌಟ್ ಆಯಿತು. ಅಲ್ಲದೇ ಟೂರ್ನಿಯಲ್ಲಿ ಸತತ ಮೂರನೇ ಸೋಲನುಭವಿಸಿತು.

    180 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಪಂಜಾಬ್ ಬೌಲರ್‌ಗಳು ಶಾಕ್ ಮೇಲೆ ಶಾಕ್ ನೀಡಿದರು. ಚೆನ್ನೈ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ರಾಬಿನ್ ಉತ್ತಪ್ಪ 13 ರನ್, ಗಾಯಕ್ವಾಡ್ 1, ಅಂಬಾಟಿ ರಾಯುಡು 13 ರನ್, ಮೊಯಿನ್ ಅಲಿ ಮತ್ತು ಜಡೇಜಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು.

    ಬಳಿಕ ಒಂದಾದ ಶಿವಂ ದುಬೆ ಮತ್ತು ಮಹೇಂದ್ರ ಸಿಂಗ್ ತಂಡಕ್ಕೆ ಚೇತರಿಕೆ ನೀಡದರು ಕೂಡ ಯಾವುದೇ ಪ್ರಯೋಜನ ಸಿಗಲಿಲ್ಲ. ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಧೋನಿ 23 ರನ್ (28 ಎಸೆತ,1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ 17.6 ಎಸೆತಗಳಲ್ಲಿ 126 ರನ್‍ಗಳಿಗೆ ಸರ್ವಪತನ ಕಂಡಿತು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಕೇವಲ 4 ರನ್ (2 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿದರು. ಆದರೆ ಇತ್ತ ಶಿಖರ್ ಧವನ್ ಎಂದಿನಂತೆ ಬ್ಯಾಟಿಂಗ್ ಮುಂದುವರಿಸಿ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.

    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಬೌಂಡರಿ, ಸಿಕ್ಸರ್‌ಗಳನ್ನು ಮನಬಂದಂತೆ ಚಚ್ಚಿದ ಲಿವಿಂಗ್ಸ್ಟೋನ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಶಿಖರ್ ಧವನ್ ಜೊತೆ 3ನೇ ವಿಕೆಟ್‍ಗೆ 95 ರನ್ (52 ಎಸೆತ) ಜೊತೆಯಾಟವಾಡಿ ಮಿಂಚಿದರು. ಲಿವಿಂಗ್ಸ್ಟೋನ್ ಆಟ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಬಾರಿಸಿ ಆಟ ಕೊನೆಗೊಳಿಸಿದರು. ನಂತರ ಜಿತೇಶ್ ಶರ್ಮಾ 26 ರನ್ (17 ಎಸೆತ, 3 ಸಿಕ್ಸ್) ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 180 ರನ್ ಸಿಡಿಸಿತು.

     

  • ಒಂದೇ ಓವರ್‌ನಲ್ಲಿ 30 ರನ್ ಚಚ್ಚಿ ಕೆಕೆಆರ್‌ಗೆ ಗೆಲುವು ತಂದು ಕೊಟ್ಟ ರೆಸೆಲ್, ಬಿಲ್ಲಿಂಗ್ಸ್

    ಒಂದೇ ಓವರ್‌ನಲ್ಲಿ 30 ರನ್ ಚಚ್ಚಿ ಕೆಕೆಆರ್‌ಗೆ ಗೆಲುವು ತಂದು ಕೊಟ್ಟ ರೆಸೆಲ್, ಬಿಲ್ಲಿಂಗ್ಸ್

    ಮುಂಬೈ: ಕೋಲ್ಕತ್ತಾ ತಂಡದ ಸ್ಟಾರ್ ಆಲ್‍ರೌಂಡರ್ ಆಂಡ್ರೆ ರೆಸೆಲ್ ಆಟಕ್ಕೆ ಬೆಚ್ಚಿಬಿದ್ದ ಪಂಜಾಬ್ ಕೆಕೆಆರ್‌ಗೆ ತಲೆಬಾಗಿದೆ.

    ಗೆಲುವಿಗೆ 138 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ರೆಸೆಲ್ ಮತ್ತು ಬಿಲ್ಲಿಂಗ್ಸ್ 12 ಓವರ್‌ನಲ್ಲಿ ಬರೋಬ್ಬರಿ 30 ರನ್ ಚಚ್ಚಿದ್ರು. 12ನೇ ಓವರ್ ಎಸೆಯಲು ಬಂದ ಓಡೆನ್ ಸ್ಮಿತ್‍ರ ಮೊದಲ ಎಸೆತವನ್ನು ಬೌಂಡರಿಗಟ್ಟಿದ ರೆಸೆಲ್ ಮುಂದಿನ 2 ಎಸೆತಗಳನ್ನು ಸಿಕ್ಸರ್‌ಗಟ್ಟಿದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತ ಮತ್ತೆ ಸಿಕ್ಸ್, ಕೊನೆಯ ಎಸೆತ ನೋ ಬಾಲ್ 2 ರನ್ ಬಂತು. ಫ್ರಿ ಹಿಟ್‍ನಲ್ಲಿ ಬಿಲ್ಲಿಂಗ್ಸ್ ಸಿಕ್ಸ್ ಸಿಡಿಸಿ ಒಟ್ಟು 30 ರನ್ ಕಸಿದರು.

    ಅಂತಿಮವಾಗಿ ರಸೆಲ್ ಅಜೇಯ 70 ರನ್ (31 ಎಸೆತ, 2 ಬೌಂಡರಿ, 8 ಸಿಕ್ಸ್) ಮತ್ತು ಬಿಲ್ಲಿಂಗ್ಸ್ 24 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 14.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ಸಿಡಿಸಿ ಕೆಕೆಆರ್‌ಗೆ ಗೆಲುವು ತಂದುಕೊಟ್ಟರು.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಆರಂಭದಲ್ಲೇ ಉಮೇಶ್ ಯಾದವ್ ದಾಳಿಗೆ ತತ್ತರಿಸಿತು. ಪಂಜಾಬ್‍ನ ಆರಂಭಿಕ ಜೋಡಿ ಮಯಾಂಕ್ ಅಗರ್‌ವಾಲ್ 1 ರನ್ ಮತ್ತು ಶಿಖರ್ ಧವನ್ 16 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಬೇಗನೆ ಪೆವಿಯನ್ ಸೇರಿಕೊಂಡರು. ಆ ಬಳಿಕ ಭಾನುಕಾ ರಾಜಪಕ್ಸೆ 31 ರನ್ (9 ಎಸೆತ, 3 ಸಿಕ್ಸ್, 3 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಕಗಿಸೊ ರಬಾಡ ಕೊನೆಯಲ್ಲಿ 25 ರನ್ (16 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 130ರ ಗಡಿದಾಟಿಸಿದರು.

    ಅಂತಿಮವಾಗಿ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್‍ಗಳಿಗೆ ಆಲೌಟ್ ಆಯಿತು. ಉಮೇಶ್ ಯಾದವ್ 4 ವಿಕೆಟ್ ಕಿತ್ತು ಮಿಂಚಿದರೆ, ಟೀಮ್ ಸೌಥಿ 2 ಮತ್ತು ಶಿವಂ ಮಾವಿ, ಸುನೀಲ್ ನರೇನ್, ರಸೆಲ್ ತಲಾ 1 ವಿಕೆಟ್ ಕಿತ್ತರು.

  • ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

    ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

    ಮುಂಬೈ: ಪಂಜಾಬ್ ತಂಡದ ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್‍ಗೆ ಆರ್​ಸಿಬಿಯ ಬೃಹತ್ ಟಾರ್ಗೆಟ್ ಉಡೀಸ್ ಆಗಿದೆ. ಈ ಮೂಲಕ ಒಂದು ಓವರ್ ಬಾಕಿ ಇರುವಂತೆ ಪಂಜಾಬ್ ಕಿಂಗ್ಸ್ 5 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು.

    ಓಡನ್ ಸ್ಮಿತ್ ಅಜೇಯ 25 ರನ್ (8 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಶಾರೂಖ್ ಖಾನ್ 24 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಆರ್​ಸಿಬಿ ತಂಡದ ಗೆಲುವಿನ ಆಸೆಗೆ ತಣ್ಣಿರೇರಚಿದ ಈ ಜೋಡಿ, 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ ಗೆದ್ದು ಸಂಭ್ರಮಿಸಿತು.

    ಈ ಮೊದಲು ಪಂಜಾಬ್ ಪರ ಮಯಾಂಕ್ ಅಗರ್‍ವಾಲ್ 32 ರನ್ (24 ಎಸೆತ, 2 ಬೌಂಡರಿ, 2 ಸಿಕ್ಸ್), ಶಿಖರ್ ಧವನ್ 43 ರನ್ (29 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಭಾನುಕಾ ರಾಜಪಕ್ಸೆ 43 ರನ್ (22 ಎಸೆತ, 2 ಬೌಂಡರಿ, 4 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು.

    ಆರ್​ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಸಿಕ್ಕ ಅವಕಾಶವನ್ನು ಪೂರ್ತಿ ಕೈಯಿಂದ ಬಾಚಿಕೊಂಡಿತು. ಆರಂಭಿಕರಾದ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಮೊದಲ ವಿಕೆಟ್‍ಗೆ 50 ರನ್ (42 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿತು. ಅನುಜ್ ರಾವತ್ 21 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು.

    ನಂತರ ಜೊತೆಯಾದ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾದರು ಅದರಲ್ಲೂ ನಾಯಕ ಡು ಪ್ಲೆಸಿಸ್ ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಜೋಡಿ 2ನೇ ವಿಕೆಟ್‍ಗೆ 118 ರನ್ (61 ಎಸೆತ) ಜೊತೆಯಾಟವಾಡಿತು. ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟರು ಆದರೆ ಅವರ ಆಟ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್)ಗೆ ಕೊನೆಗೊಂಡಿತು.


    ಬಳಿಕ ಬಂದ ದಿನೇಶ್ ಕಾರ್ತಿಕ್ ಸ್ಲಾಗ್ ಓವರರ್‌ಗಳಲ್ಲಿ ಕೊಹ್ಲಿ ಜೊತೆಗೂಡಿ ರನ್ ಮಳೆ ಸುರಿಸಿದರು. ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬೌಂಡರಿ, 2 ಸಿಕ್ಸ್) ಮತ್ತು ಕಾರ್ತಿಕ್ 32 ರನ್ (14 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 205 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿತು.

    ರನ್ ಏರಿದ್ದು ಹೇಗೆ:
    50 ರನ್ 41 ಎಸೆತ
    100 ರನ್ 75 ಎಸೆತ
    150 ರನ್ 93 ಎಸೆತ
    205 ರನ್ 120 ಎಸೆತ

     

  • ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾಗಿದ್ದಾರೆ.

    ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ತಂಡದ ಮಾಜಿ ನಾಯಕನಾಗಿದ್ದರು. ಆದರೆ ರಾಹುಲ್ ಅವರೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ತಂಡವು ನಾಯಕನನ್ನು ಬದಲಾಯಿಸಲು ನಿರ್ಧರಿಸಿದೆ. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಐಪಿಎಲ್ 2021 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಬದಲಿಗೆ ಭಾರತೀಯ ಆಟಗಾರನನ್ನು ಚುಕ್ಕಾಣಿ ಹಿಡಿಯಲು ಪಂಜಾಬ್ ತಂಡವು ಉತ್ಸುಕವಾಗಿದೆ. ಅವರು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ.

    ಮಯಾಂಕ್ ಅವರಿಗೆ ಅಷ್ಟೇನು ಹೆಚ್ಚಿನ ನಾಯಕತ್ವದ ಅನುಭವವಿಲ್ಲ. ಐಪಿಎಲ್ 2022ರ ಮೆಗಾ ಹರಾಜಿನ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೈಪೋಟಿ ನೀಡಿ, ಧವನ್ ಅವರನ್ನು 8.25 ಕೋಟಿ ರೂ. ನೀಡಿ ಖರೀದಿಸಲು ಪಿಬಿಕೆಎಸ್ ಯಶಸ್ವಿಯಾಗಿದೆ.

    ಶಿಖರ್ ಧವನ್ ತಂಡದಲ್ಲಿರುವುದಕ್ಕೆ ಪಂಜಾಬ್ ತಂಡವು ತುಂಬಾ ಉತ್ಸುಕವಾಗಿದೆ. ಧವನ್ ಹೆಗಲ ಮೇಲೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲು ತಂಡದ ನಿರ್ವಾಹಕರು ಈಗಾಗಲೇ ಕಾದು ಕುಳಿತಿದ್ದಾರೆ. ತಂಡದ ಮುಖ್ಯ ಕೋಚ್, ಪ್ರವರ್ತಕರು ಎಲ್ಲರೂ ಪಂಜಾಬ್ ಕಿಂಗ್ಸ್ ನಾಯಕನ ಆಯ್ಕೆ ವಿಚಾರವಾಗಿ ಧವನ್ ಪರವಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವೆಬ್‍ಸೈಟ್ ವೊಂದು ತಿಳಿಸಿದೆ. ಇದನ್ನೂ ಓದಿ: ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ

    ಭಾನುವಾರ ಹರಾಜು ಮುಗಿದ ನಂತರ ಪಿಬಿಕೆಎಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಹೊಸ ನಾಯಕನ ನೇಮಕದ ಬಗ್ಗೆ ಕೇಳಲಾಗಿತ್ತು. ಈ ವೇಳೆ ಕುಂಬ್ಳೆ ಅವರು, ಧವನ್ ಹೆಸರನ್ನು ಬಹಿರಂಗಪಡಿಸಿದ್ದರು. ಧವನ್ ಅವರು ತಂಡಕ್ಕೆ ಉತ್ತಮ ಆಟಗಾರರಾಗಿದ್ದಾರೆ. ಅವರ ಪ್ರಬುದ್ಧತೆಯು ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರಲಿದೆ. ತಂಡದ ಪ್ರತಿಯೊಬ್ಬ ಆಟಗಾರರು ಈ ಅನುಭವಿ ಆಟಗಾರನಿಂದ ಕಲಿಯಬಹುದು. ಅವರು ತಂಡಕ್ಕೆ ಎಲ್ಲ ರೀತಿಯಲ್ಲೂ ಪರಿಪೂರ್ಣ ನಾಯಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

    ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

    ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ ನಿನ್ನೆ ನಡೆದ ಮೊದಲನೆಯ ದಿನದ ಐಪಿಎಲ್ ಹರಾಜು ಪ್ರಕ್ರಿಯೆಗೆ ಗೈರಾಗಿದ್ದು, ಮನೆಯಲ್ಲಿಯೇ ಕುಳಿತು ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗೆ ಮೆಗಾ ಹರಾಜನ್ನು ವೀಕ್ಷಿಸಿದ್ದಾರೆ.

    ನಿನ್ನೆ ನಡೆದ ಮೊದಲನೆಯ ಐಪಿಎಲ್ ಹರಾಜನ್ನು ನೋಡಿದ ನಂತರ ತುಂಬಾ ದಣಿದಿದ್ದೇನೆ ಪೋಸ್ಟ್‌ವೊಂದನ್ನು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Preity G Zinta (@realpz)

    ರಾತ್ರಿಯಿಡೀ ಎಚ್ಚರವಾಗಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ನೋಡಿದ ನಂತರ ನಾನು ತುಂಬಾ ದಣಿದಿದ್ದೇನೆ. ನಾಳೆಯವರೆಗೆ ನಮಗೆ ಬಹಳಷ್ಟು ಕೆಲಸಗಳಿವೆ. ಹೀಗಾಗಿ ಫೆಬ್ರವರಿ 13ನೇ ತಾರೀಖಿನ 2ನೇಯ ದಿನದ ಹರಾಜು ಪ್ರಕ್ರಿಯೆಯಲ್ಲಿಯೂ ಕೂಡಾ ನಾನು ಪಾಲ್ಗೊಳ್ಳಲಾಗುವುದಿಲ್ಲ. ಅಲ್ಲಿಯವರೆಗೆ ನೀವು ನಿಮ್ಮ ಕಾಳಜಿ ವಹಿಸಿ, ಸುರಕ್ಷಿತವಾಗಿರಿ. ಎನ್ ಚಕ್ ದೇ ಫಾಟ್ಟೆ ಅಂತ ಘೋಷ ವಾಕ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

    ಪ್ರತಿ ವರ್ಷ ಪ್ರೀತಿ ಜಿಂಟಾ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಆಟದ ಮೈದಾನದಲ್ಲಿ ಹುರಿದುಂಬಿಸುತ್ತಿರುತ್ತಾರೆ. ಆದರೆ ಅವರು ತಮ್ಮ ಅವಳಿ ಮಕ್ಕಳ ಪೋಷಣೆಯಲ್ಲಿ ತೊಡಗಿಕೊಂಡ ಕಾರಣದಿಂದಾಗಿ ಈ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.

    ಐಪಿಎಲ್ ಹರಾಜು ಈ ವರ್ಷ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರೀತಿ ತಮ್ಮ ಅವಳಿ ಮಕ್ಕಳೊಂದಿಗೆ ಮುದ್ದಾದ ಸೆಲ್ಫಿಯೊಂದಿಗೆ ಐಪಿಎಲ್ 2022 ಹರಾಜಿನ ಬಗ್ಗೆ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

    ಪ್ರೀತಿ ನಿನ್ನೆ ನಡೆದ ಮೆಗಾ ಹರಾಜನ್ನು ವೀಕ್ಷಿಸಲು ಸಿದ್ಧವಾಗುತ್ತಿದ್ದಂತೆ. ಈ ವರ್ಷ ತಮ್ಮ ಅವಳಿ ಮಕ್ಕಳು ಜೈ ಜಿಂಟಾ ಹಾಗೂ ಜಿಯಾ ಜಿಂಟಾ ಐಪಿಎಲ್ ಹರಾಜು ಪ್ಯಾಡಲ್ ಅನ್ನು ಬದಲಾಯಿಸಲಿವೆ ಎಂದು ತಮಾಷೆ ಮಾಡಿದ್ದಾರೆ.

     

    View this post on Instagram

     

    A post shared by Preity G Zinta (@realpz)

    ಇಂದು ರಾತ್ರಿ ಟಾಟಾ ಐಪಿಎಲ್‍ನ ಎರಡನೇ ಮೆಗಾ ಹರಾಜನ್ನು ವೀಕ್ಷಿಸಲು ನಾನೂ ಸಿದ್ಧವಾಗಿದ್ದೇನೆ. ಆದರೆ ಕುಟುಂಬದ ಕೆಲ ಜವಾಬ್ದಾರಿಗಳಿಂದಾಗಿ ಪಂಜಾಬ್ ತಂಡದ ಪರ ಹರಾಜು ನಡೆಸುವ ಬದಲಿಗೆ ನನ್ನ ತೋಳುಗಳಲ್ಲಿ ಮುದ್ದಾದ ಮಗುವನ್ನು ಎತ್ತಿಕೊಂಡು ಅದರ ಪೋಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಈ ವರ್ಷದ ನಮ್ಮ ಪಂಜಾಬ್ ರಾಜರ ಆಟವನ್ನು ನಾನು ನನ್ನ ಇಬ್ಬರು ಮುದ್ದಾದ ಮಕ್ಕಳೊಂದಿಗೆ ವೀಕ್ಷಿಸಲು ಬಹಳ ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

    ಇನ್‍ಸ್ಟಾಗ್ರಾಮ್‍ನ ಮೊದಲ ಪೋಸ್ಟ್‌ನಲ್ಲಿ ಪ್ರೀತಿಯವರು ಕಪ್ಪು ಕನ್ನಡಕದೊಂದಿಗೆ ಬಿಳಿಯ ಟಿ-ಶರ್ಟ್ ಅನ್ನು ಧರಿಸಿದ್ದು, ತಮ್ಮ ಗುಳಿ ಕೆನ್ನೆಯೊಂದಿಗೆ ಮುದ್ದಾದ ನಗೆಯನ್ನು ಬೀರಿದ್ದಾರೆ. ಎರಡನೇ ಪೋಸ್ಟ್‌ನಲ್ಲಿ ತಮ್ಮ ಶಿಶುವನ್ನು ಬಿಳಿಯ ವಸ್ತ್ರದೊಂದಿಗೆ ಬೆಚ್ಚಗೆ ಇರಿಸಿ ತಮ್ಮ ಎದೆಯ ಮೇಲೆ ಮಲಗಿಸಿಕೊಂಡಿದ್ದಾರೆ.

  • ಪಂಜಾಬ್ ತಂಡಕ್ಕೆ ಭಾವನಾತ್ಮಕ ಪೋಸ್ಟ್‌ ಮೂಲಕ ರಾಹುಲ್ ವಿದಾಯ ಘೋಷಣೆ

    ಪಂಜಾಬ್ ತಂಡಕ್ಕೆ ಭಾವನಾತ್ಮಕ ಪೋಸ್ಟ್‌ ಮೂಲಕ ರಾಹುಲ್ ವಿದಾಯ ಘೋಷಣೆ

    ಮುಂಬೈ: 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ತಮ್ಮ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಇನ್ನುಳಿದಂತೆ ಕೆಲ ಸ್ಟಾರ್ ಆಟಗಾರರು 8 ತಂಡಗಳಿಂದ ಹೊರಬಂದು ಹೊಸ ತಂಡ ಸೇರಿಕೊಳ್ಳಲು ಕಾತರರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ನಾಯಕನಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್‍ನ್ನು ಫ್ರಾಂಚೈಸ್ ಕೈಬಿಟ್ಟಿದೆ. ಬಳಿಕ ರಾಹುಲ್ ಸಾಮಾಜಿಕ ಜಾಲತಾಣದ ಮೂಲಕ ಪಂಜಾಬ್ ತಂಡಕ್ಕೆ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.


    ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್ ಪರ ರಾಹುಲ್ ನಾಯಕನಾಗಿ ಯಶಸ್ವಿಯಾಗದೇ ಇದ್ದರೂ ಕೂಡ ಆಟಗಾರನಾಗಿ ಭರ್ಜರಿ ಪ್ರದರ್ಶನ ನೀಡಿದ್ದರು. ಆ ಬಳಿಕ ಮೆಗಾ ಹರಾಜಿಗೆ ರಾಹುಲ್‍ರನ್ನು ಬಿಟ್ಟುಕೊಡದೆ ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿತು ಆದರೆ ರಾಹುಲ್ ಹೊರಬರಲು ಇಚ್ಚಿಸಿದ್ಧರಿಂದಾಗಿ ಪಂಜಾಬ್ ರಾಹುಲ್‍ರನ್ನು ರಿಟೈನ್ ಮಾಡಿಕೊಳ್ಳದೆ ಕೈಬಿಟ್ಟಿದೆ. ಇದೀಗ ಮುಂದಿನ ಜನವರಿಯಲ್ಲಿ ನಡೆಯುವ ಮೆಗಾ ಹರಾಜಿನಲ್ಲಿ ರಾಹುಲ್ ಬೇರೆ ತಂಡಕ್ಕೆ ಸೇಲ್ ಆಗಿ ಆ ತಂಡದ ಪರ ಆಡಲಿದ್ದಾರೆ. ಇದನ್ನೂ ಓದಿ: ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?

    ರಾಹುಲ್ ಪಂಜಾಬ್ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೊತೆಗೆ ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿದ್ದರೆ, ಕರ್ನಾಟಕ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ತಂಡದಲ್ಲಿ ಜೊತೆಗಿದ್ದರು. ಇದೀಗ ತಂಡದಿಂದ ಹೊರಬಂದಿರುವ ರಾಹುಲ್ ಪಂಜಾಬ್ ತಂಡದೊಂದಿಗಿನ ಪಯಣ ಉತ್ತಮವಾಗಿತ್ತು. ನಿಮ್ಮ ಪ್ರೀತಿಗೆ ಧನ್ಯವಾದಗಳು. ನನ್ನನ್ನು ಇನ್ನುಮುಂದೆ ಎದುರಾಳಿ ತಂಡದಲ್ಲಿ ನೋಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪಂಜಾಬ್ ಫ್ರಾಂಚೈಸ್‍ಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: IPL 2022 Retentions: ಧೋನಿಗಿಂತಲೂ ಜಡೇಜಾ ದುಬಾರಿ – ಯಾರಿಗೆ ಎಷ್ಟು ಕೋಟಿ?

     

  • ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್​ಸಿಬಿ ಕ್ಯಾಪ್ಟನ್?

    ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್​ಸಿಬಿ ಕ್ಯಾಪ್ಟನ್?

    ಬೆಂಗಳೂರು: 2022 ಆವೃತ್ತಿಯ ಐಪಿಎಲ್‍ಗೂ ಮುನ್ನವೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ನಾಯಕತ್ವಕ್ಕೆ ಗುಡ್‍ಬೈ ಹೇಳಿದ್ದಾರೆ. ಇದೀಗ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಮುಂದಿನ ಹರಾಜಿನಲ್ಲಿ ಖರೀದಿಸಿ ಆರ್​ಸಿಬಿ ತಂಡದ ನಾಯಕತ್ವದ ಜವಬ್ದಾರಿ ಕೊಡುವ ನಿಟ್ಟಿನಲ್ಲಿ ಫ್ರಾಂಚೈಸ್ ತಯಾರಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

    14ನೇ ಆವೃತ್ತಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ನಾಯಕನಾಗಿ ಯಶಸ್ವಿ ಕಾಣದಿದ್ದರೂ ಕೂಡ ಬ್ಯಾಟ್ಸ್‌ಮ್ಯಾನ್‌ ಆಗಿ 13 ಪಂದ್ಯಗಳಲ್ಲಿ ರಾಹುಲ್ 626 ರನ್ ಹೊಡೆದಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರು ತಂಡ ರಾಹುಲ್ ಮೇಲೆ ಕಣ್ಣಿಟ್ಟಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್?

    ಮುಂದಿನ ಐಪಿಎಲ್ ಆವೃತ್ತಿಗೆ 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರಿಂದಾಗಿ ಹಲವು ಬದಲಾವಣೆಗಳು ಸಂಭವಿಸಲಿದ್ದು, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಈ ಹರಾಜಿನಲ್ಲಿ ಈ ಬಾರಿ ರಾಹುಲ್‍ನ್ನು ಖರೀದಿಸಿ ತಂಡವನ್ನು ಹೊಸದಾಗಿ ಕಟ್ಟುವ ಇರಾದೆಯಲ್ಲಿ ಆರ್​ಸಿಬಿ ತಂಡವಿದೆ. ಈ ನಡುವೆ ರಾಹುಲ್ ಕೂಡ ಆರ್​ಸಿಬಿ ತಂಡವನ್ನು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲದಿನಗಳ ಹಿಂದೆ ಪಂಜಾಬ್ ತಂಡ ತೊರೆಯುವ ಬಗ್ಗೆ ರಾಹುಲ್ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದರು. ಇದು ಇದೀಗ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗಾಗಿ ಟೀಂ ಇಂಡಿಯಾ ಸೇರ್ಪಡೆಗೊಂಡ ಐಪಿಎಲ್ ಸ್ಟಾರ್ಸ್

    ರಾಹುಲ್‍ರನ್ನು ಆರ್​ಸಿಬಿ ತಂಡ ಕರೆತರುವ ಪ್ರಯತ್ನದಲ್ಲಿದ್ದರೆ, ರಾಹುಲ್ ಪಂಜಾಬ್ ತಂಡವನ್ನು ಬಿಟ್ಟು ಹೊರ ಬರಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಆದರೂ ಕೂಡ ರಾಹುಲ್‍ರನ್ನು ಆರ್​ಸಿಬಿ ತಂಡ ಸೆಳೆಯಲು ಪ್ರಯತ್ನ ಪಡುತ್ತಿದೆ ಎಂದು ವರದಿಯಾಗಿದ್ದು, ಈ ಮೂಲಕ ಕನ್ನಡದ ತಂಡಕ್ಕೆ ಕನ್ನಡಿಗನನ್ನು ಕರೆತಂದು ಅಭಿಮಾನಿಗಳ ಆಸೆ ಪೂರೈಸಲು ಫ್ರಾಂಚೈಸ್ ಸಿದ್ಧತೆ ಮಾಡಿಕೊಂಡಿದೆ.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ದುಬೈ: ನಾಯಕ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 135 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ 13 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಇನ್ನಿಂಗ್ಸ್‌ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಾಹುಲ್‌ ಔಟಾಗದೇ 98 ರನ್‌(42 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಪಂದ್ಯಕ್ಕೂ ಮೊದಲು ಪಂಜಾಬ್‌ ರನ್‌ ರೆಟ್‌ -0.241ಇತ್ತು. ಈಗ ಇದು -0.001 ಏರಿಕೆಯಾಗಿದೆ. ಪಂಜಾಬ್‌ ಪರ ರಾಹುಲ್‌ ಬಿಟ್ಟರೆ ಮಯಾಂಕ್‌ ಅಗರವಾಲ್‌ 12 ರನ್‌, ಏಡನ್ ಮಾರ್ಕ್ರಮ್ 13 ರನ್‌ ಗಳಿಸಿ ಔಟಾದರು.

    ಇಂದಿನ ಪಂದ್ಯವನ್ನು ಪಂಜಾಬ್‌ ಗೆದ್ದರೂ ಪ್ಲೇ ಆಫ್‌ಗೆ ಹೋಗುವ ಆಸೆ ಬಹಳ ಕ್ಷೀಣವಾಗಿದೆ. ಯಾಕೆಂದರೆ ರಾಜಸ್ಥಾನ ವಿರುದ್ಧ ಕೋಲ್ಕತ್ತಾ ಭಾರೀ ಅಂತರದಿಂದ ಸೋಲಬೇಕು. ಅಷ್ಟೇ ಅಲ್ಲದೇ ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಗೆಲ್ಲಬೇಕು. ಸದ್ಯದ ಮಟ್ಟಿಗೆ ಈ ಫಲಿತಾಂಶ ಬರುವುದು ಬಹಳ ಕಷ್ಟ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪಂಜಾಬ್‌ ಬೌಲರ್‌ಗಳ ಬಿಗಿಯಾದ ದಾಳಿಗೆ 6 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. ಫಾಫ್‌ ಡುಪ್ಲೆಸಿಸ್‌ 76 ರನ್‌(55 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದು ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಹೋರಾಟ ಕಂಡು ಬರಲಿಲ್ಲ.

    ರವೀಂದ್ರ ಜಡೇಜಾ ಔಟಾಗದೇ 15 ರನ್‌, ಧೊನಿ ಮತ್ತು ಋತುರಾಜ್‌ ಗಾಯಕ್‌ವಾಡ್‌ 12 ರನ್‌ ಹೊಡೆದು ಔಟಾದರು. ಚೆನ್ನೈ ಪರ ಕ್ರಿಸ್‌ ಜೋರ್ಡನ್‌, ಅರ್ಶದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ, ರವಿ ಬಿಶ್ನೋಯಿ ತಲಾ 1 ವಿಕೆಟ್‌ ಪಡೆದರು.