Tag: Punjab Kings

  • ಯಶಸ್ವಿ, ಪರಾಗ್‌ ಅಮೋಘ ಬ್ಯಾಟಿಂಗ್‌; ಪಂಜಾಬ್‌ಗೆ ರಾಯಲ್‌ ʻಪಂಚ್‌ʼ – ರಾಜಸ್ಥಾನ್‌ಗೆ 50 ರನ್‌ಗಳ ಭರ್ಜರಿ ಜಯ

    ಯಶಸ್ವಿ, ಪರಾಗ್‌ ಅಮೋಘ ಬ್ಯಾಟಿಂಗ್‌; ಪಂಜಾಬ್‌ಗೆ ರಾಯಲ್‌ ʻಪಂಚ್‌ʼ – ರಾಜಸ್ಥಾನ್‌ಗೆ 50 ರನ್‌ಗಳ ಭರ್ಜರಿ ಜಯ

    ಮುಲ್ಲನ್‌ಪುರ: ಸತತ ಗೆಲುವಿನ ಓಟದಲ್ಲಿ ಮುನ್ನಗ್ಗುತ್ತಿದ್ದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ರಾಜಸ್ಥಾನ ರಾಯಲ್ಸ್‌ ತಂಡ ಸೋಲಿನ ರುಚಿ ತೋರಿಸಿದೆ. ಯಶಸ್ವಿ ಜೈಸ್ವಾಲ್‌, ರಿಯಾನ್‌ ಪರಾಗ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಶನಿವಾರ ಸಂಜು ಸ್ಯಾಮ್ಸನ್‌ ನಾಯಕತ್ವದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ 5೦ ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಇದು ರಾಜಸ್ಥಾನ್‌ಗೆ ಸತತ 2ನೇ ಗೆಲುವಾದ್ರೆ. ಪಂಜಾಬ್‌ಗೆ ಮೊದಲ ಸೋಲಾಗಿದೆ.

    ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಪಂಜಾಬ್​​ಗೆ 206ರನ್​ಗಳ ಕಠಿಣ ಗುರಿಯನ್ನ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿ ಸೋಲಿಗೆ ಶರಣಾಯಿತು.

    ರಾಜಸ್ಥಾನ ನೀಡಿದ್ದ ಗುರಿ ಬೆನ್ನಟ್ಟಿದ ಪಂಜಾಬ್‌ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್‌ (ಪ್ರಿಯಾಂಶ್ ಆರ್ಯ) ವಿಕೆಟ್‌ ಕಳೆದುಕೊಂಡಿತು. ತಂಡದ ಮೊತ್ತ 50 ರನ್‌ ದಾಟುವುದರೊಳಗೆ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತು. ಪಂಜಾಬ್‌ ಪರ ನೆಹಾಲ್ ವಧೇರಾ 41 ಎಸೆತಗಳಲ್ಲಿ 3 ಸಿಕ್ಸರ್‌, 4 ಬೌಂಡರಿ ನೆರವಿಂದ 62 ರನ್‌, ಗ್ಲೆನ್ ಮ್ಯಾಕ್ಸ್‌ವೆಲ್ 21 ಎಸೆತಗಳಲ್ಲಿ 1 ಸಿಕ್ಸರ್‌, 3 ಫೋರ್‌ ಹೊಡೆದು 30 ರನ್‌, ಪ್ರಭಸಿಮ್ರನ್ ಸಿಂಗ್ 16 ಎಸೆತಗಳಲ್ಲಿ 17 ರನ್‌ ಗಳಿಸಿದರು.

    ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್, ಸಂದೀಪ್ ಶರ್ಮಾ, ಮಹೇಶ್ ತೀಕ್ಷಣ ತಲಾ 2 ವಿಕೆಟ್, ಕುಮಾರ್ ಕಾರ್ತಿಕೇಯ‌, ವನಿಂದು ಹಸರಂಗ ತಲಾ 1 ವಿಕೆಟ್‌ ಉರುಳಿಸಿದರು

    ಮೊದಲು ಬ್ಯಾಟ್‌ ಬೀಸಿದ ರಾಯಲ್ಸ್​ಗೆ ಪವರ್‌ಪ್ಲೇನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ 53 ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 11ನೇ ಓವರ್‌ ತನಕ ಬ್ಯಾಟಿಂಗ್ 89 ರನ್​ ಪೇರಿಸಿದರು. ಈ ಸಂದರ್ಭದಲ್ಲಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ 26 ಎಸೆತಗಳಲ್ಲಿ 38 ರನ್ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್ ಔಟಾದರು. ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದ ಯಶಸ್ವಿ ಜೈಸ್ವಾಲ್ ಸಂಜು ಸ್ಯಾಮ್ಸನ್ ಔಟಾದ ನಂತರ ಅಬ್ಬರಿಸಿ 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 67 ರನ್ ಗಳಿಸಿ ಫರ್ಗ್ಯುಸನ್​ ಎಸೆತಕ್ಕೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಪಂಜಾಬ್ ಬೌಲರ್​ಗಳನ್ನ ಚೆಂಡಾಡಿದ ರಿಯಾನ್ ಪರಾಗ್, 25 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 43 ರನ್​ಗಳಿಸಿದರು. ಶಿಮ್ರಾನ್ ಹೆಟ್ಮೈರ್ 12 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್​ಗಳಿಸಿದರೆ, ಧ್ರುವ್ ಜುರೆಲ್ 5 ಎಸೆತಗಳಲ್ಲಿ ಅಜೇಯ 13 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.

    ಪಂಜಾಬ್ ಪರ ಫರ್ಗ್ಯುಸನ್ 2, ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

  • ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    – ಕನ್ನಡದಲ್ಲೇ ಸಂತಸ ಹಂಚಿಕೊಂಡ ವೈಶಾಖ್

    ಅಹಮದಾಬಾದ್: ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಹೊಸ ಹೊಸ ಪ್ರತಿಭೆಗಳು ಗುರುತಿಸಿಕೊಳ್ಳುತ್ತಿವೆ. ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ (Punjab Kings), ಗುಜರಾತ್ ಟೈಟನ್ಸ್ ನಡುವಿನ ಜಿದ್ದಾಜಿದ್ದಿ ಕಣದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವೈಶಾಖ್ ವಿಜಯ್ ಕುಮಾರ್ (Vyshak Vijay Kumar) ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ.

    ಹೌದು. 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಪಂಜಾಬ್, ಟೈಟನ್ಸ್ (Gujarat Titans) ವಿರುದ್ಧ ಕೇವಲ 11 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆದ್ರೆ ಈ ರೋಚಕ ಗೆಲುವಿಗೆ ಕಾರಣವಾಗಿದ್ದು, ಕನ್ನಡಿಗ ವೈಶಾಖ್ ವಿಜಯ್ ಕುಮಾರ್. ಯಾವುದೇ ವಿಕೆಟ್ ಪಡೆಯದಿದ್ದರೂ ತಮ್ಮ ಬೌಲಿಂಗ್ ಸಾಮರ್ಥ್ಯದಿಂದ ಹೆಚ್ಚು ರನ್ ಬಿಟ್ಟುಕೊಡದೇ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 3 ಓವರ್‌ಗಳಲ್ಲಿ 28 ರನ್ ಬಿಟ್ಟುಕೊಟ್ಟು ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇನ್ನು ಪಂದ್ಯದ ಬಳಿಕ ಕನ್ನಡದಲ್ಲೇ ಮಾತನಾಡಿದ ವೈಶಾಖ್, ಫೀಲ್ಡ್ ಸೆಟ್ಟಿಂಗ್ ಮೊದಲೇ ಪ್ಲ್ಯಾನ್ ಮಾಡಿದ್ದೆವು. ಪ್ರಾಕ್ಟಿಸ್ ಪಂದ್ಯದಲ್ಲೇ ಈ ಬಗ್ಗೆ ಯೋಜನೆ ರೂಪಿಸಿದ್ದೆವು. ಅದೇ ರೀತಿ ಪಂದ್ಯದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದೆವು. ಅದು ಪಂದ್ಯ ಗೆಲ್ಲಲು ಸಹಾಯವಾಯಿತು. ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ ಎಂದರು.

     

    ವೈಶಾಖ್ ವಿಜಯ್ ಕುಮಾರ್ ಯಾರು?
    ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಹಲವು ಟೂರ್ನಿಗಳಲ್ಲಿ ಆಡಿರುವ ವೈಶಾಖ್ ವಿಜಯ್ ಕುಮಾರ್, 26 ವರ್ಷ ವಯಸ್ಸಿನ ಬಲಗೈ ವೇಗದ ಬೌಲರ್. ವೈಶಾಖ್ 1997ರ ಜನವರಿ 31ರಂದು ಬೆಂಗಳೂರಿನಲ್ಲಿ ಜನಿಸಿದರು.

    2021ರ ಫೆಬ್ರವರಿ 24ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ತಮ್ಮ ಚೊಚ್ಚಲ ಲಿಸ್ಟ್ ಎ ಪಂದ್ಯ ಆಡಿದರು. ಸರ್ವೀಸಸ್ ತಂಡದ ವಿರುದ್ಧ ಆಡಿದ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ, 25 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದು ಮಿಂಚಿದ್ದರು. 2022ರ ಫೆಬ್ರವರಿ 17ರಂದು ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

    ಈಗಾಗಲೇ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿದ ಅನುಭವ ವೈಶಾಖ್ ವಿಜಯ್‌ಗಿದೆ. ಇದುವರೆಗ ಆಡಿದ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 38 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ದೇಶಿಯ ಮಟ್ಟದಲ್ಲಿ 14 ಟಿ20 ಪಂದ್ಯಗಳನ್ನು ಆಡಿದ ಅನುಭವವಿರುವ ಯುವ ವೇಗಿ, 22 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

    ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಶಾಖ್ 10 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದರು. ಆ ಮೂಲಕ ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 6.31ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ, ತಾವು ಹೆಚ್ಚು ರನ್ ಸೋರಿಕೆಯಾಗಲು ಅವಕಾಶ ಕೊಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.

  • ಬ್ಯಾಟರ್‌ಗಳ ಆರ್ಭಟ – ಪಂಜಾಬ್‌ ವಿರುದ್ಧ ಹೈದರಾಬಾದ್‌ಗೆ 4 ವಿಕೆಟ್‌ಗಳ ಜಯ; 2ನೇ ಸ್ಥಾನಕ್ಕೆ ಜಿಗಿತ

    ಬ್ಯಾಟರ್‌ಗಳ ಆರ್ಭಟ – ಪಂಜಾಬ್‌ ವಿರುದ್ಧ ಹೈದರಾಬಾದ್‌ಗೆ 4 ವಿಕೆಟ್‌ಗಳ ಜಯ; 2ನೇ ಸ್ಥಾನಕ್ಕೆ ಜಿಗಿತ

    ಹೈದರಾಬಾದ್: ಅಭಿಷೇಕ್‌ ಶರ್ಮಾ, ಹೆನ್ರಿಚ್‌ ಕ್ಲಾಸೆನ್‌ ಬ್ಯಾಟಿಂಗ್‌ ಅಬ್ಬರದಿಂದ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) 4 ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು.

    ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಪಂಜಾಬ್‌ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 214 ಬೃಹತ್‌ ಮೊತ್ತ ಪೇರಿಸಿತು. 215 ರನ್‌ ಗುರಿ ಬೆನ್ನತ್ತಿದ ಹೈದರಾಬಾದ್‌ 19.1 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: ಖಾಸಗಿ ಸಂಭಾಷಣೆ ಪ್ರಸಾರ ಮಾಡಿದ್ದಕ್ಕೆ ಐಪಿಎಲ್ ಪ್ರಸಾರಕರಿಗೆ ರೋಹಿತ್ ಶರ್ಮಾ ತರಾಟೆ

    ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಉತ್ತಮ ಶುಭಾರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ತೈಡೆ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 97 ರನ್‌ ಪೇರಿಸಿದ್ದರು. ಅಥರ್ವ 46 ರನ್‌ (27 ಬಾಲ್‌, 5 ಫೋರ್‌, 2 ಸಿಕ್ಸರ್‌) ಗಳಿಸಿದರು. ಪ್ರಭ್‌ಸಿಮ್ರನ್‌ 71 (45 ಬಾಲ್‌, 7 ಫೋರ್‌, 4 ಸಿಕ್ಸರ್‌) ರನ್‌ಗಳ ಅಮೋಘ ಆಟವಾಡಿದರು.

    ಮೂರನೇ ಕ್ರಮಾಂಕದಲ್ಲಿ ರಿಲಿ ರಾಸ್ಸೋ 49 ರನ್‌ ಗಳಿಸಿ (24 ಬಾಲ್‌, 3 ಫೋರ್‌, 4 ಸಿಕ್ಸರ್‌) ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿ ಅರ್ಧಶತಕ ವಂಚಿತರಾಗಿ ಹೊರನಡೆದರು. ಇದನ್ನೂ ಓದಿ: ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ನಾಯಕ ಜಿತೇಶ್ ಶರ್ಮಾ 32 ರನ್‌ (15 ಬಾಲ್‌, 2 ಫೋರ್‌, 2 ಸಿಕ್ಸರ್‌) ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಹೈದರಾಬಾದ್‌ ಪರ ಟಿ ನಟರಾಜನ್ 2 ಹಾಗೂ ಪ್ಯಾಟ್ ಕಮಿನ್ಸ್, ವಿಜಯಕಾಂತ್ ವ್ಯಾಸಕಾಂತ್ ತಲಾ 1 ವಿಕೆಟ್‌ ಗಳಿಸಿದರು.

    ಪಂಜಾಬ್‌ ನೀಡಿದ 215 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್‌ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್‌ ಹೆಡ್‌ ಒಂದೇ ಬಾಲ್‌ಗೆ ವಿಕೆಟ್‌ ಕೈಚೆಲ್ಲಿ ಹೊರನಡೆದರು. ಈ ವೇಳೆ ಅಭಿಷೇಕ್ ಶರ್ಮಾ (66 ರನ್‌, 28 ಬಾಲ್‌, 5 ಫೋರ್‌, 6 ಸಿಕ್ಸರ್‌) ಹಾಗೂ ರಾಹುಲ್ ತ್ರಿಪಾಠಿ (33 ರನ್‌, 18 ಬಾಲ್‌, 4 ಫೋರ್‌, 2 ಸಿಕ್ಸರ್‌) ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ 30 ಬಾಲ್‌ಗಳಿಗೆ 72 ರನ್‌ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಪಂಜಾಬ್‌ ಬೌಲರ್‌ಗಳನ್ನು ಹೈದರಾಬಾದ್‌ ಬ್ಯಾಟರ್‌ಗಳು ಮನಬಂದಂತೆ ದಂಡಿಸಿದರು. ನಿತೀಶ್ ಕುಮಾರ್ ರೆಡ್ಡಿ (37), ಹೆನ್ರಿಕ್ ಕ್ಲಾಸೆನ್ 42, ಅಬ್ದುಲ್ ಸಮದ್ 11 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್‌ ಪರ ಅರ್ಷದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್‌ ಕಿತ್ತರು. ಹರ್ಪ್ರೀತ್ ಬ್ರಾರ್ ಮತ್ತು ಶಶಾಂಕ್ ಸಿಂಗ್ ತಲಾ 1 ವಿಕೆಟ್‌ ಗಳಿಸಿದರು.

  • IPL 2024: ಜಡೇಜಾ ಆಲ್‍ರೌಂಡ್ ಆಟ – ಪಂಜಾಬ್ ವಿರುದ್ಧ ಚೆನ್ನೈಗೆ 28 ರನ್‍ಗಳ ಜಯ

    IPL 2024: ಜಡೇಜಾ ಆಲ್‍ರೌಂಡ್ ಆಟ – ಪಂಜಾಬ್ ವಿರುದ್ಧ ಚೆನ್ನೈಗೆ 28 ರನ್‍ಗಳ ಜಯ

    ಧರ್ಮಶಾಲಾ: ರವೀಂದ್ರ ಜಡೇಜಾ ಆಲ್‍ರೌಂಟ್ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  (Chennai Super Kings) 28 ರನ್‍ಗಳ ಜಯ ಗಳಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 139 ರನ್ ಗಳಿಸಿ ಚೆನ್ನೈಗೆ ಶರಣಾಯಿತು.

    ಚೆನೈ ಪರ ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಪಂದ್ಯದ ಎರಡನೇ ಓವರ್‌ನಲ್ಲೇ 9 ರನ್‍ಗಳಿಗೆ ಆರ್ಶದೀಪ್ ಸಿಂಗ್‍ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‍ಗೆ ನಾಯಕ ಗಾಯಕ್ವಾಡ್ ಹಾಗೂ ಡೇರಿಲ್ ಮಿಚೆಲ್ 32 ಎಸೆತಗಳಲ್ಲಿ 57 ರನ್‍ಗಳ ಉತ್ತಮ ಜತೆಯಾಟವಾಡಿದರು. ಗಾಯಕ್ವಾಡ್ 32 ರನ್ ಗಳಿಸಿ ರಾಹುಲ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಕ್ರೀಸ್‍ಗಿಳಿದ ಶಿವಂ ದುಬೆ ಒಂದೇ ಎಸೆತಕ್ಕೆ ಔಟಾಗಿ ಪೆವಿಲಿಯನ್‍ಗೆ ಮರಳಿದರು. ಡೇರಿಲ್ ಮಿಚೆಲ್ 30 ರನ್ ಗಳಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 17 ರನ್ ಗಳಿಸಿ ಔಟಾದರು. 11 ರನ್ ಗಳಿಸಿದ್ದ ಮಿಚೆಲ್ ಸ್ಯಾಂಟರ್‌ಗೆ ರಾಹುಲ್ ಚಹಾರ್ ಪೆವಿಲಿಯನ್ ಹಾದಿ ತೋರಿಸಿದರು. ಶಾರ್ದೂಲ್ ಠಾಕೂರ್ 17 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಕ್ರೀಸ್‍ಗಿಳಿದು ಮೊದಲನೇ ಬಾಲ್‍ಗೆ ಗೋಲ್ಡನ್ ಡಕ್ ಆಗಿ ಎಂ.ಎಸ್.ಧೋನಿ 18 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದರು. ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್ ಬಾರಿಸಿ, ಸವಾಲಿನ ಮೊತ್ತ ದಾಖಲಿಸಲು ತಂಡಕ್ಕೆ ನೆರವಾದರು.

    ಪಂಜಾಬ್ ಕಿಂಗ್ಸ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರಾಹುಲ್ ಚಹಾರ್ 23 ರನ್ ನೀಡಿ 3 ಹಾಗೂ ಹರ್ಷಲ್ ಪಟೇಲ್ 24 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಆರ್ಶದೀಪ್ ಸಿಂಗ್ 2 ಹಾಗೂ ನಾಯಕ ಸ್ಯಾಮ್ ಕರ್ರನ್ ಒಂದು ವಿಕೆಟ್ ಕಬಳಿಸಿದರು.

    ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ಪಂಜಾಬ್ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಸೋಲನುಭವಿಸಿತು. ಆರಂಭಿಕರಾಗಿ ಕ್ರೀಸ್‍ಗಿಳಿದಿದ್ದ ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಸಿಂಗ್ (30) ಆಟಕ್ಕೆ ಸ್ಪಿನ್ನರ್ ಜಡೇಜಾ ಬ್ರೇಕ್ ಹಾಕಿದರು. ಸಿಂಗ್ ಬಳಿಕ ಯಾವೊಬ್ಬ ಆಟಗಾರನೂ ಹೆಚ್ಚು ಸಮಯ ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಜಾನಿ ಬೈಸ್ರ್ಟೋವ್ 7, ಶಶಾಂಕ್ ಸಿಂಗ್ 27, ಸ್ಯಾಮ್ ಕರ್ರನ್ 7 ರಿಂದ ಬ್ಯಾಟಿಂಗ್ ವೈಫಲ್ಯ ಕಂಡುಬಂತು. ರಿಲೀ ರೊಸೊವ್ 0, ಜಿತೇಶ್ ಶರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಅಶುತೋಷ್ ಶರ್ಮಾ 3, ಹಪ್ರ್ರೀತ್ ಬ್ರಾರ್ 17, ಹರ್ಷಲ್ ಪಟೇಲ್ 12, ರಾಹುಲ್ ಚಹಾರ್ 16 ಹಾಗೂ ಕಗಿಸೊ ರಬಾಡ (ಔಟಾಗದೇ) 11 ರನ್ ಗಳಿಸಲಷ್ಟೇ ಶಕ್ತರಾದರು.

    ಚೆನ್ನೈ ಪರ ಸ್ಪಿನ್ನರ್ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಮಿಂಚಿದರು. ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್ ತಲಾ 2, ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು.

  • ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    – ಅಂದು‌ ಮಹಿ ಯಡವಟ್ಟಿನಿಂದಲೇ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಭಾರತ

    ಚೆನ್ನೈ: ತವರಿನಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯದಲ್ಲಿ ಮಾಜಿ ನಾಯಕ ಮಹಿ (MS Dhoni) ನಡೆದುಕೊಂಡ ರೀತಿ ಅಭಿಮಾನಿಗಳಿಂದ ಭಾರೀ ಟೀಕೆಗೆ ಕಾರಣವಾಗಿದೆ.

    ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಡಿ, ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ಲೆಜೆಂಡ್‌ ಎಂ.ಎಸ್‌ ಧೋನಿ ಬ್ಯಾಟಿಂಗ್‌ ಸರದಿಯ ಕೊನೇ ಓವರ್‌ನಲ್ಲಿ ತೋರಿದ ವರ್ತನೆ ಅಭಿಮಾನಿಗಳ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

    ಹೌದು. ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿ ಪಂಜಾಬ್‌ ಕಿಂಗ್ಸ್‌ಗೆ 163 ರನ್‌ಗಳ ಗುರಿ ನೀಡಿತ್ತು.

    ಮಿಚೆಲ್‌ಗೆ ಅವಮಾನ ಮಾಡಿದ್ರಾ ಮಹಿ?
    ಚೆನ್ನೈ ಸೂಪರ್‌ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್‌ ಧೋನಿ, ಅರ್ಷದೀಪ್‌ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್‌ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್‌ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್‌ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು.

    ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದ ಡೇರಿಲ್‌ ಮಿಚೆಲ್‌ (Daryl Mitchell) ರನ್‌ ಪಡೆಯಲು ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್‌ ಮಿಚೆಲ್‌ಗೆ ವಾಪಸ್‌ ಹೋಗುವಂತೆ ಹೇಳಿದರು. ಪುನಃ ಮಿಚೆಲ್‌ ನಾನ್‌ಸ್ಟ್ರೈಕ್‌ ತುದಿಗೆ ಓಡಿಬಂದರು ಈ ವೇಳೆ ಕೂದಲೆಳೆ ಅಂತರದಲ್ಲಿ ರನ್‌ಔಟ್‌ ಆಗುವುದನ್ನು ತಪ್ಪಿಸಿಕೊಂಡಿದ್ದರು. ನಂತರ 4ನೇ ಎಸತವನ್ನೂ ಡಾಟ್‌ ಮಾಡಿಕೊಂಡ ಧೋನಿ, 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತದಲ್ಲಿ 2ನೇ ರನ್‌ ಓಡುವ ವೇಳೆ ಧೋನಿ ತಾನೇ ರನ್‌ಔಟ್‌ ಆದರು.

    ಅಂದು ಇದೇ ತಪ್ಪಿನಿಂದ ಭಾರತಕ್ಕೆ ಸೋಲಾಗಿತ್ತು:
    2014ರ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮಹಿ ಇದೇ ತಪ್ಪು ಮಾಡಿದ್ದರು. ಅಂದು 181ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 177 ರನ್‌ಗಳಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು. ಕೊನೇ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ ಬೇಕಿತ್ತು. ಮೊದಲ 2 ಎಸೆತಗಳಲ್ಲೇ 8 ರನ್‌ ಬಾರಿಸಿದ ಮಹಿ, 3ನೇ ಎಸೆತವನ್ನು ಡಾಟ್‌ ಮಾಡಿಕೊಂಡಿದ್ದರು. 4ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಇನ್ನೆರಡು ಎಸೆತಗಳಲ್ಲಿ 5 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮಹಿ ಹೊಡೆದರು, ಆದ್ರೆ ಸಿಂಗಲ್‌ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಇದು ನಾನ್‌ಸ್ಟ್ರೈಕ್‌ನಲ್ಲಿದ್ದ ಅಂಬಟಿ ರಾಯುಡು ಅವರನ್ನೂ ಟೀಕೆಗೆ ಗುರಿಯಾಗುವಂತೆ ಮಾಡಿತ್ತು. ಆದ್ರೆ ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸುವಲ್ಲಿ ವಿಫಲರಾದ ಮಹಿ ಒಂದು ರನ್‌ ಮಾತ್ರವೇ ಗಳಿಸಿದ್ದರು. ಇದರಿಂದ ಭಾರತ ತಂಡ ವಿರೋಚಿತ ಸೋಲಿಗೆ ತುತ್ತಾಗಿತ್ತು. ಇದೀಗ ಧೋನಿ ಮತ್ತೆ ಅಂತಹದ್ದೇ ತಪ್ಪು ಮಾಡಿದ್ದಾರೆ.

    ಧೋನಿ ವಿರುದ್ಧ ಫ್ಯಾನ್ಸ್ ಗರಂ:
    ಡ್ಯಾರಿಲ್ ಮಿಚೆಲ್‌ ಬಗ್ಗೆ ನನಗೆ ನೋವಾಗಿದೆ, ಅವರು ಬ್ಯಾಟಿಂಗ್‌ ಗೊತ್ತಿಲ್ಲದ ಆಟಗಾರನೇನು ಅಲ್ಲ. ಅವರಿಗೆ ಸಿಂಗಲ್‌ ರನ್‌ ನಿರಾಕರಿಸಿರುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮಿಚೆಲ್‌ ಅವರೇ 2 ರನ್‌ ಓಡಿದ್ದಾರೆ. ಧೋನಿ ಜಾಗದಲ್ಲಿ ಬೇರೆ ಯಾವುದೇ ಆಟಗಾರನಿದ್ದಿದ್ದರೇ ಅವರ ಜನ್ಮವನ್ನು ಜಾಲಾಡಲಾಗುತ್ತಿತ್ತು ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿ ಎಂಎಸ್‌ ಧೋನಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಧೋನಿ ಅಂತಹ ಆಟಗಾರರಿಂದ ಇಂತಹ ವರ್ತನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಆಟಗಾರನೊಬ್ಬನಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

  • ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಚೆನ್ನೈ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಕಟ್ಟಿ ಹಾಕಿದ ಪಂಜಾಬ್‌ ಕಿಂಗ್ಸ್‌ (Punjab Kings) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 7 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ 13 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಜಯಗಳಿಸಿತು.

    ಪಂಜಾಬ್‌ ಪರ ಜಾನಿ ಬೈರ್ಸ್ಟೋವ್ 46 ರನ್‌ (30 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಿಲೀ ರೋಸೌವ್ 43 ರನ್(23‌ ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಶಶಾಂಕ್‌ ಸಿಂಗ್‌ ಔಟಾಗದೇ 25 ರನ್‌(26 ಎಸೆತ, 1 ಬೌಂಡರಿ, 1 ಸಿಕ್ಸರ್‌), ನಾಯಕ ಸ್ಯಾಮ್‌ ಕರ್ರನ್‌ ಔಟಾಗದೇ 16 ರನ್‌ (20 ಎಸೆತ, 3 ಬೌಂಡರಿ) ಹೊಡೆದರು.

    ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ 50 ಎಸೆತಗಳಲ್ಲಿ64 ರನ್‌ ಬಂದಿತ್ತು. ಅಜಿಂಕ್ಯಾ ರಹಾನೆ 29 ರನ್‌(24 ಎಸೆತ, 5 ಬೌಂಡರಿ) ಋತುರಾಜ್‌ ಗಾಯಕ್‌ವಾಡ್‌ 62 ರನ್‌ (48 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಚೆನ್ನೈ ಸೋಲನ್ನು ಅನುಭವಿಸಿತು. ಇತರ ರೂಪದಲ್ಲಿ ಪಂಜಾಬ್‌ 18 ರನ್‌ ಬಿಟ್ಟುಕೊಟ್ಟಿದ್ದರಿಂದ ಚೆನ್ನಯ ತಂಡದ ಸ್ಕೋರ್‌ 160 ರನ್‌ಗಳ ಗಡಿ ದಾಟಿತ್ತು. ಹರ್‌ಪ್ರೀತ್‌ ಬ್ರಾರ್‌ ಮತ್ತು ರಾಹುಲ್‌ ಚಹರ್‌ ತಲಾ ಎರಡು ವಿಕೆಟ್‌ ಪಡೆದರು.

  • ರನ್‌ ಮಳೆಯಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳ ಜಯ – ಚೇಸಿಂಗ್‌ನಲ್ಲಿ ಆರ್‌ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್‌

    ರನ್‌ ಮಳೆಯಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳ ಜಯ – ಚೇಸಿಂಗ್‌ನಲ್ಲಿ ಆರ್‌ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್‌

    ಕೋಲ್ಕತ್ತಾ: ಜಾನಿ ಬೈರ್‌ಸ್ಟೋವ್‌ (Jonny Bairstow) ಭರ್ಜರಿ ಶತಕ ಹಾಗೂ ಶಶಾಂಕ್‌ ಸಿಂಗ್‌, ಪ್ರಭ್‌ ಸಿಮ್ರನ್‌ಸಿಂಗ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಲ್ಲದೇ ಐಪಿಎಲ್‌ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್‌ ಇದಾಗಿದೆ. ಇತ್ತೀಚೆಗೆ ಸನ್‌ ರೈರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ (RCB) ಚೇಸಿಂಗ್‌ನಲ್ಲಿ 262 ರನ್‌ ಗಳಿಸಿತ್ತು. ಇದು ದಾಖಲೆಯಾಗಿತ್ತು. ಇದೀಗ ಪಂಜಾಬ್‌ ಕಿಂಗ್ಸ್‌ ಸಹ 262 ರನ್‌ ಗಳಿಸಿ ಆರ್‌ಸಿಬಿ ದಾಖಲೆ ಸರಿಗಟ್ಟಿದೆ.

    262 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಪಂಜಾಬ್‌ ಕಿಂಗ್ಸ್‌ ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರು ಮಾಡಿತ್ತು. ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ ಬರೋಬ್ಬರಿ 93 ರನ್‌ ಚಚ್ಚಿತ್ತು. ಆರಂಭಿಕ ಪ್ರಭ್‌ ಸಿಮ್ರನ್‌ ಸಿಂಗ್‌ (Prabhsimran Singh) 20 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 4 ಬೌಂಡರಿ) ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ 26 ರನ್‌ ಗಳಿಸಿದ್ದ ರೀಲಿ ರೋಸೋ ಸಹ ಪೆವಿಲಿಯನ್‌ಗೆ ಮರಳಿದರು. ಬಳಿಕ ಜಾನಿ ಬೈರ್‌ಸ್ಟೋವ್‌ ಜೊತೆಗೂಡಿದ ಶಶಾಂಕ್‌ ಸಿಂಗ್‌ (Shashank Singh) ಕೆಕೆಆರ್‌ ಬೌಲರ್‌ಗಳ ವಿರುದ್ಧ ಬೆಂಕಿ-ಬಿರುಗಾಳಿಯಂತೆ ಬ್ಯಾಟಿಂಗ್‌ ನಡೆಸಿದರು. ಪರಿಣಾಮ ಪಂಬಾಜ್‌ 18.4 ಓವರ್‌ಗಳಲ್ಲೇ 262 ರನ್‌ ಚಚ್ಚಿ ವಿಜಯಮಾಲೆ ಹಾಕಿಕೊಂಡಿತು.

    ಪಂಜಾಬ್‌ ಪರ ಜಾನಿ ಬೈರ್‌ಸ್ಟೋವ್‌ 48 ಎಸೆತಗಳಲ್ಲಿ ಅಜೇಯ 108 ರನ್‌ (9 ಸಿಕ್ಸರ್‌, 8 ಬೌಂಡರಿ), ಶಶಾಂಕ್‌ ಸಿಂಗ್‌ 68 ರನ್‌ (8 ಸಿಕ್ಸರ್‌, 2 ಬೌಂಡರಿ) ಸಿಡಿಸಿ ತಂಡದ ಗೆಲುವಿಗೆ ನೆರವಾದರು.

    ರನ್‌ ಏರಿದ್ದು ಹೇಗೆ?
    21 ಎಸೆತ – 50 ರನ್‌
    44 ಎಸೆತ – 100 ರನ್‌
    66 ಎಸೆತ – 150 ರನ್‌
    90 ಎಸೆತ – 200 ರನ್‌
    112 ಎಸೆತ – 262 ರನ್‌

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಬ್ಯಾಟರ್ಸ್‌ಗಳು ಪಂಬಾಜ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಸುನೀಲ್‌ ನರೇನ್‌ ಮತ್ತು ಪಿಲ್‌ ಸಾಲ್ಟ್‌ (Phil Salt) ಜೋಡಿ ಸಿಕ್ಸರ್‌ ಬೌಂಡರಿಗಳ ಅಬ್ಬರ ಶುರು ಮಾಡಿತು. ಮೊದಲ ವಿಕೆಟ್‌ಗೆ ಈ ಜೋಡಿ 10.2 ಓವರ್‌ಗಳಲ್ಲಿ 138 ರನ್‌ ಸಿಡಿಸಿತ್ತು.

    ಸುನೀಲ್‌ ನರೇನ್‌ 32 ಎಸೆತಗಳಲ್ಲಿ ಸ್ಫೋಟಕ 71 ರನ್‌ (9 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಪಿಲ್‌ ಸಾಲ್ಟ್‌ 37 ಎಸೆಗಳಲ್ಲಿ 75 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಕಣಕ್ಕಿಳಿದ ವೆಂಕಟೇಶ್‌ ಅಯ್ಯರ್‌ 33 ರನ್‌, ಆಂಡ್ರೆ ರಸ್ಸೆಲ್‌ 24 ರನ್‌, ಶ್ರೇಯಸ್‌ ಅಯ್ಯರ್‌ ಸ್ಪೋಟಕ 28 ರನ್‌, ರಿಂಕು ಸಿಂಗ್‌ 5 ರನ್‌, ರಮಣದೀಪ್‌ ಸಿಂಗ್‌ 6 ರನ್‌ ಗಳ ಕೊಡುಗೆ ನೀಡಿದರು.

    ಕೆಕೆಆರ್‌ ಪರ ಅರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌, ಸ್ಯಾಮ್‌ ಕರ್ರನ್‌, ಹರ್ಷಲ್‌ ಪಟೇಲ್‌ ಮತ್ತು ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಏರಿದ್ದು ಹೇಗೆ?
    23 ಎಸೆತ – 50 ರನ್‌
    48 ಎಸೆತ – 100 ರನ್‌
    71 ಎಸೆತ – 150 ರನ್‌
    93 ಎಸೆತ – 200 ರನ್‌
    120 ಎಸೆತ – 261 ರನ್‌

  • ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಮುಲ್ಲನಪುರ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್‌ ಟೈಟಾನ್ಸ್‌ (Gujarat Titans) ಪಂಜಾಬ್‌ ಕಿಂಗ್ಸ್‌(Punjab Kings) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಪಂಜಾಬ್‌ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದು ಜಯಗಳಿಸಿತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ 8ನೇ ಸ್ಥಾನದಲ್ಲಿದ್ದ ಗುಜರಾತ್‌ 6ನೇ ಸ್ಥಾನಕ್ಕೆ ಜಿಗಿದಿದೆ.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 35 ರನ್‌ (29 ಎಸೆತ, 5 ಬೌಂಡರಿ), ಸಾಯಿ ಸುದರ್ಶನ್‌ 31 ರನ್‌(34 ಎಸೆತ, 3 ಬೌಂಡರಿ) ಕೊನೆಯಲ್ಲಿ ರಾಹುಲ್‌ ತೆವಾಟಿಯ ಔಟಾಗದೇ 36 ರನ್‌(18 ಎಸೆತ, 7 ಬೌಂಡರಿ) ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು. ಪಂಜಾಬ್‌ ಪರ ಹರ್ಷಲ್‌ ಪಟೇಲ್‌ 3 ವಿಕೆಟ್‌, ಲಿವಿಂಗ್‌ಸ್ಟೋನ್‌ 2 ವಿಕೆಟ್‌ ಕಿತ್ತರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ 52 ರನ್‌ ಜೊತೆಯಾಟ ಬಂದಿತ್ತು. ನಂತರ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಪಂಜಬ್‌ ಪರ ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌ ( 21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಹರ್‌ಪ್ರೀತ್‌ ಬ್ರಾರ್‌ 29 ರನ್‌ (12 ಎಸೆತ, 4 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡದ ಮೊತ್ತ 140 ರನ್‌ಗಳ ಗಡಿ ದಾಟಿತು. ಗುಜರಾತಿನ ಸಾಯ್‌ ಕಿಶೋರ್‌ 4 ವಿಕೆಟ್‌ ಕಿತ್ತರೆ ನೂರ್‌ ಅಹ್ಮದ್‌ ಮತ್ತು ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

  • ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಮುಲ್ಲನಪುರ: ಬೌಲಿಂಗ್‌, ಬ್ಯಾಟಿಂಗ್‌ ಪಡೆ ಉತ್ತಮವಾಗಿದ್ದರೆ ತಂಡ ನಿರಂತರ ಜಯ ಸಾಧಿಸುತ್ತದೆ ಎನ್ನುವುದಕ್ಕೆ ರಾಜಸ್ಥಾನ ತಂಡವೇ ಸಾಕ್ಷಿ. ಪಂಜಾಬ್‌ ಕಿಂಗ್ಸ್‌ ಭಾರೀ ಪೈಪೋಟಿ ನೀಡಿದ್ದರೂ ರಾಜಸ್ಥಾನ ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 148 ರನ್‌ಗಳ ಸವಾಲನ್ನು ಪಡೆದ ರಾಜಸ್ಥಾನ ಇನ್ನೂ 1 ಬಾಲ್‌ ಇರುವಂತೆಯೂ 7 ವಿಕೆಟ್‌ ನಷ್ಟಕ್ಕೆ 152 ರನ್‌ ಹೊಡೆದು ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲುವ ಮೂಲಕ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು.  ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಕೊನೆಯ 3 ಓವರ್‌ಗಳಲ್ಲಿ ರಾಜಸ್ಥಾನ ಗೆಲ್ಲು 34 ರನ್‌ ಬೇಕಿತ್ತು. ಹರ್ಷಲ್‌ ಪಟೇಲ್‌ ಎಸೆದ 18ನೇ ಓವರ್‌ನಲ್ಲಿ 14 ರನ್‌ ಬಂದರೆ ಕರ್ರನ್‌ ಎಸೆತ 19ನೇ ಓವರ್‌ನಲ್ಲಿ 10 ರನ್‌ ಬಂದರೂ 2 ವಿಕೆಟ್‌ ಕಳೆದುಕೊಂಡಿತ್ತು.

    ಕೊನೆಯ ಓವರ್‌ನಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ ಮೊದಲ 2 ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಾಲ್ಕನೇ ಎಸೆತದಲ್ಲಿ ಕರ್ರನ್‌ ಮಿಸ್‌ ಫಿಲ್ಡ್‌ ಮಾಡಿದ ಕಾರಣ 2 ರನ್‌ ಬಂತು. ಐದನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ತಂಡಕ್ಕೆ ಐದನೇ ಗೆಲುವು ತಂದುಕೊಟ್ಟರು.  ಇದನ್ನೂ ಓದಿ: ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

     

    ಹೇಟ್ಮೇಯರ್‌ ಔಟಾಗದೇ 27 ರನ್‌(10 ಎಸೆತ,1 ಬೌಂಡರಿ, 3 ಸಿಕ್ಸ್‌), ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 39 ರನ್‌, ತನುಶ್‌ ಕೋಟ್ಯಾನ್‌ 24 ರನ್‌, ನಾಯಕ ಸಂಜು ಸ್ಯಾಮ್ಸನ್‌ 23 ರನ್‌ ಹೊಡೆದು ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 52 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ವಿಕೇಟ್‌ ಉರುಳುತ್ತಿದ್ದರೂ ಜಿತೇಶ್‌ ಶರ್ಮಾ 29 ರನ್‌(24 ಎಸೆತ, 1 ಬೌಂಡರಿ, 2 ಸಿಕ್ಸರ್)‌, ಕೊನೆಯಲ್ಲಿ ಅಶುತೋಶ್‌ ಶರ್ಮಾ ಸ್ಫೋಟಕ 31 ರನ್‌ (16 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡ 140 ರನ್‌ಗಳ ಗಡಿ ದಾಟಿತು.

  • ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    – ಕೊನೇ 17 ಎಸೆತಗಳಲ್ಲಿ 41 ರನ್‌ ಚಚ್ಚಿದ ಪಂಜಾಬ್‌ – ಗಿಲ್‌ ನಾಯಕನ ಆಟ ವ್ಯರ್ಥ,

    ಅಹಮದಾಬಾದ್‌: ಡೆತ್‌ ಓವರ್‌ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಪೂರೈಸಿ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್‌, ಐಪಿಎಲ್‌ನಲ್ಲಿ ಹೆಚ್ಚುಬಾರಿ 200 ರನ್‌ ಗುರಿ ಬೆನ್ನಟ್ಟಿದ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

    ಕೊನೇ ಓವರ್‌ ರೋಚಕತೆ ಹೇಗಿತ್ತು?
    ಕೊನೇ ಓವರ್‌ನಲ್ಲಿ ಪಂಜಾಬ್‌ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ದರ್ಶನ್‌ ನಾಲ್ಕಂಡೆ ಬೌಲಿಂಗ್‌ನಲ್ಲಿದ್ದರು. ನಾಲ್ಕಂಡೆ ಬೌಲಿಂಗ್‌ನ ಮೊದಲ ಎಸೆತದಲ್ಲೇ ಸಿಕ್ಸರ್‌ ಪ್ರಯತ್ನಿಸಿದ ಅಶುತೋಷ್‌ ಬೌಂಡರಿ ಲಾಂಗ್‌ಆನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. 2ನೇ ಎಸೆತದಲ್ಲಿ ವೈಡ್‌ ಎಸೆದ ನಾಲ್ಕಂಡೆ 3ನೇ ಎಸೆತವನ್ನು ಬೀಟ್‌ ಮಾಡಿದ್ದರು. ಇದರಿಂದ ಪಂದ್ಯ ರೋಚಕತೆಗೆ ತಿರುಗಿತ್ತು. ಆದ್ರೆ ಕ್ರೀಸ್‌ನಲ್ಲಿದ್ದ ಹರ್ಪ್ರೀತ್‌ ಬ್ರಾರ್‌ 4ನೇ ಎಸೆತದಲ್ಲಿ 1 ರನ್‌ ತಂದುಕೊಡುತ್ತಿದ್ದಂತೆ ಬೌಂಡರಿ ಚಚ್ಚಿದ ಶಶಾಂಕ್‌ ಸಿಂಗ್‌ ಗೆಲುವನ್ನು ಪಂಜಾಬ್‌ ತಂಡದತ್ತ ವಾಲಿಸಿದರು. 5ನೇ ಎಸೆತ ಎದುರಿಸುವಲ್ಲಿ ಶಶಾಂಕ್‌ ವಿಫಲವಾದರೂ ಲೆಗ್‌ಬೈಸ್‌ ರನ್‌ ಕದಿಯುವಲ್ಲಿ ಯಶಸ್ವಿಯಾದರು. ಪರಿಣಾಮ ಪಂಜಾಬ್‌ ಕಿಂಗ್ಸ್‌ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

    ಡೆತ್‌ ಓವರ್‌ನಲ್ಲಿ ರನ್‌ ಹೊಳೆ:
    200 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್‌ ಕಿಂಗ್ಸ್‌ 15 ಓವರ್‌ಗಳಲ್ಲಿ 153 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಡೆತ್‌ ಓವರ್‌ನಲ್ಲಿ ಜೊತೆಗೂಡಿದ ಅಶುತೋಷ್‌ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಜೋಡಿ ರನ್‌ ಹೊಳೆ ಹರಿಸಿತು. ಕೊನೇ 5 ಓವರ್‌ಗಳಲ್ಲಿ ಕ್ರಮವಾಗಿ 15, 6, 16, 18, 7 ರನ್‌ ತಂಡಕ್ಕೆ ಸೇರ್ಪಡೆಯಾದ ಪರಿಣಾಮ ಪಂಜಾಬ್‌ ಗೆಲುವು ಸಾಧಿಸಿತು.

    ಪಂಜಾಬ್‌ ಕಿಂಗ್ಸ್‌ ಪರ ಶಶಾಂಕ್‌ ಸಿಂಗ್‌ ಅಜೇಯ 61 ರನ್‌ (29 ಎಸೆತ, 4 ಸಿಕ್ಸರ್‌, 6 ಬೌಂಡರಿ), ಅಶುತೋಷ್‌ ಶರ್ಮಾ 31 ರನ್‌ (17 ಎಸೆತ, 1 ಸಿಕ್ಸರ್‌, 3 ಬೌಂಡರಿ), ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌, ಶಿಖರ್‌ ಧವನ್‌ 1, ಜಾನಿ ಬೈರ್‌ಸ್ಟೋವ್‌ 22 ರನ್‌, ಸ್ಯಾಮ್‌ ಕರ್ರನ್‌ 5 ರನ್‌, ಸಿಖಂದರ್‌ ರಾಜಾ 15 ರನ್‌, ಜಿತೇಶ್‌ ಶರ್ಮಾ 16 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 1 ರನ್‌ ಕದ್ದರು.

    ಗುಜರಾತ್‌ ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ 11 ರನ್‌, ಶುಭಮನ್‌ ಗಿಲ್‌ 89 ರನ್‌ (48 ಎಸೆತ, 6 ಬೌಂಡರಿ, 4 ಸಿಕ್ಸರ್‌, ಕೇನ್‌ ವಿಲಿಯಮ್ಸನ್‌ 26 ರನ್‌, ಸಾಯಿ ಸುದರ್ಶನ್‌ 33 ರನ್‌, ವಿಜಯ್‌ ಶಂಕರ್‌ 8 ರನ್‌, ರಾವುಲ್‌ ತೆವಾಟಿಯಾ 23 ರನ್‌ (8 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದರು.