Tag: punjab election 2022

  • ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಚಂಡೀಗಢ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸಿಧು ಅವರು ಹೀನಾಯ ಸೋಲನುಭವಿಸಿದ್ದಾರೆ.

    ಪಾಟಿಯಾಲ ನಗರ ಕ್ಷೇತ್ರದಲ್ಲಿ ಅಮರೀಂದರ್‌ ಸಿಂಗ್‌ ಸ್ಪರ್ಧಿಸಿದ್ದರು. ಸಿಂಗ್‌ ವಿರುದ್ಧ ಆಮ್‌ ಆದ್ಮಿ ಪಕ್ಷದ ಅಜಿತ್‌ ಪಾಲ್‌ ಸಿಂಗ್‌ ಕೊಹ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    2017ರ ಚುನಾವಣೆಯಲ್ಲಿ ಸಿಂಗ್‌ ಅವರ ಗೆಲುವಿನ ಅಂತರವು ಶೇ.49 ರಷ್ಟಿತ್ತು. ಆದರೆ ಈ ಬಾರಿ ಎಎಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.

    ಅಮರೀಂದರ್‌ ಸಿಂಗ್‌ ಆಡಳಿತ ವಿರೋಧಿ ಅಲೆ ಪಕ್ಷದೊಳಗಡೇ ಎದ್ದಿತ್ತು. ಆಂತರಿಕ ಕಲಹದಿಂದಾಗಿ ಸಿಂಗ್‌ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಅಮರೀಂದರ್‌ ಸಿಂಗ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

     

  • ಪಂಜಾಬ್ ಚುನಾವಣಾ ಫಲಿತಾಂಶ ಕರ್ನಾಟಕ ಕಾಂಗ್ರೆಸ್‌ಗೆ ಪಾಠವಾಗುತ್ತಾ?

    ಪಂಜಾಬ್ ಚುನಾವಣಾ ಫಲಿತಾಂಶ ಕರ್ನಾಟಕ ಕಾಂಗ್ರೆಸ್‌ಗೆ ಪಾಠವಾಗುತ್ತಾ?

    ಬೆಂಗಳೂರು: ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶವು ರಾಜಕೀಯ ವಲಯದಲ್ಲಿ ಹೊಸ ದಿಕ್ಕು ತೋರಿಸಿದೆ. ಸುಮಾರು ೭೦ ದಶಕಗಳ ಕಾಲ ಆಡಳಿತ ನಡೆಸಿದ ಎಸ್‌ಎಡಿ-ಬಿಜೆಪಿ, ಕಾಂಗ್ರೆಸ್ ಬಿಟ್ಟು ಜನ ಬದಲಾವಣೆಯನ್ನು ಬಯಸಿದ್ದು, ಎಎಪಿಗೆ ಬೆಂಬಲ ಸೂಚಿಸಿದ್ದಾರೆ. ಪಂಜಾಬ್ ಚುನಾವಣೆ ಫಲಿತಾಂಶವು ಕರ್ನಾಟಕ ರಾಜ್ಯದ ಕಾಂಗ್ರೆಸ್‌ಗೆ ಪಾಠವಾಗುತ್ತಾ ಎಂಬ ಚರ್ಚೆ ಹುಟ್ಟುಕೊಂಡಿದೆ.

    ರಾಜ್ಯ ಕಾಂಗ್ರೆಸ್ ಸ್ಥಿತಿಗೂ ಪಂಜಾಬ್ ರಾಜ್ಯ ಕಾಂಗ್ರೆಸ್ ಸ್ಥಿತಿಗೂ ಹೋಲಿಕೆ ಇದೆ. ಅಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ವರ್ಸಸ್ ನವಜೋತ್ ಸಿಂಗ್ ನಡುವೆ ಫೈಟ್ ಇದ್ದಂತೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ವರ್ಸಸ್ ಡಿ.ಕೆ.ಶಿವಕುಮಾರ್ ಫೈಟ್ ಇದೆ. ಪಂಜಾಬ್ ಫಲಿತಾಂಶ ರಾಜ್ಯ ಕಾಂಗ್ರೆಸ್ ಪಾಲಿಗೂ ಎಚ್ಚರಿಕೆಯ ಗಂಟೆ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

    ಒಗ್ಗಟ್ಟಿನಿಂದ ಹೋದರಷ್ಟೆ ಅನಕೂಲಕರ ಎಂಬ ಸಂದೇಶ ರವಾನೆಯಾಗಿದೆ. ಪರಸ್ಪರ ಕಚ್ಚಾಡಿಕೊಂಡಿರೆ ಪಂಜಾಬ್ ರೀತಿಯೇ ಆಗುವ ಎಚ್ಚರಿಕೆ ನೀಡಿದೆ. ಇದರಿಂದ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.

    ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ಹಂತದಲ್ಲೂ ಏಕ ಅಭಿಪ್ರಾಯ ಮೂಡಿಸಬೇಕಾದ ಅನಿವಾರ್ಯತೆ ಇದೆ. ಪಕ್ಷ ಸಂಘಟನೆಗೂ ಸಿದ್ದರಾಮಯ್ಯ, ಡಿಕೆಶಿ ಜೊತೆ ಜೊತೆಯಾಗಿಯೇ ಓಡಾಡಬೇಕಾದ ಅನಿವಾರ್ಯತೆ ಇದೆ. ಯಾವುದೇ ಸಂದರ್ಭದಲ್ಲೂ ಒಂದೇ ರೀತಿಯ ಹೇಳಿಕೆ ಕೊಡಲೇಬೇಕು ಎನ್ನುವಂತಾಗಿದೆ. ಇದನ್ನೂ ಓದಿ:  ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?

    ಇಬ್ಬರು ಸಹ ಸ್ವಪ್ರತಿಷ್ಠೆ ಬಿಟ್ಟು ಒಂದಾಗಲೇಬೇಕಾದ ಅನಿವಾರ್ಯತೆ ಇದೆ. ಪಕ್ಷದ ಇತರೆ ನಾಯಕರನ್ನು ಇಬ್ಬರೂ ವಿಶ್ವಾಸಕ್ಕೆ ತಗೆದುಕೊಳ್ಳಬೇಕಿದೆ. ಹಿರಿಯರ ಬಣವನ್ನು ಮನವೊಲಿಸಿ ವಿಶ್ವಾಸಕ್ಕೆ ತಗೆದುಕೊಳ್ಳಲೇಬೇಕು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

  • ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?

    ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) 88 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಸಾಗಿದೆ. ಕಳೆದ 70 ವರ್ಷಗಳಿಂದ ಪಂಜಾಬ್ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (SDA) ಸಾಂಪ್ರದಾಯಿಕ ಪಕ್ಷಗಳಿಗಿಂತ ಈಗ ಎಎಪಿ ಮುನ್ನಡೆ ಸಾಧಿಸಲು ಐದು ಪ್ರಮುಖ ಕಾರಣಗಳಿವೆ.

    ಪಂಜಾಬ್‌ನಲ್ಲಿ ಬಿಜೆಪಿ-ಅಕಾಲಿದಳ, ಕಾಂಗ್ರೆಸ್ ಸರ್ಕಾರಗಳ ಆಡಳಿತವನ್ನು ನೋಡಿದ್ದರು. ಹೊಸ ಪಕ್ಷಕ್ಕೆ ಅಧಿಕಾರ ನೀಡುವ ಬಯಕೆಯನ್ನು ಹೊಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಒಂದು ಅವಕಾಶವನ್ನು ಎಎಪಿ ಕೇಳಿತ್ತು. ದೆಹಲಿ ಸರ್ಕಾರದ ಜನಪ್ರಿಯ ಯೋಜನೆಗಳು ಪಂಜಾಬ್ ಜನರ ಗಮನ ಸೆಳೆದಿವೆ. ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್ – ನೀರು ಜನರನ್ನು ಸೆಳೆಯಲು ಮತ್ತೊಂದು ಕಾರಣವಾಗಿದೆ. ಬಿಜೆಪಿಗೆ ಅಸ್ತಿತ್ವ ಇಲ್ಲ, ಮಾಜಿ ಸಿಎಂ ಅಮರೀಂದರ್ ಸಿಂಗ್ ವಯಸ್ಸಿನ ಕಾರಣ ಪಂಜಾಬ್ ಜನರು ಕೈ ಬಿಟ್ಟರು ಎಂದು ವಿಶ್ಲೇಷಿಸಲಾಗಿದೆ.

    ಅಕಾಲಿದಳ ಬಿಜೆಪಿ ಜೊತೆಗಿದ್ದ ಕಾರಣ ಮತ್ತು ಈಗಾಗಲೇ ಆಡಳಿತ ನೋಡಿರುವ ಕಾರಣ ಜನ ತಿರಸ್ಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಒಳ ಬಂಡಾಯ, ನಾಯಕರ ನಡುವಿನ ಜಗಳ, ಸಿಎಂ ಅಭ್ಯರ್ಥಿ ಘೋಷಣೆ ವಿಳಂಬವೂ ಆಪ್‌ಗೆ ನೆರವುವಾಗಿದೆ. ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಆಪ್ ಈ ಬಾರಿ ಅದ್ಭುತವಾಗಿ ಆಗಿ ಪ್ರಚಾರ ನಡೆಸಿತ್ತು. ಗೊಂದಲಗಳಿಗೆ ಅವಕಾಶ ನೀಡದೇ ಅಭಿವೃದ್ಧಿಯ ಮೇಲೆ ಚುನಾವಣೆಗೆ ತೆರಳಿತ್ತು.

    AAP ಮುನ್ನಡೆಗೆ ಪ್ರಮುಖ ಕಾರಣಗಳೇನು?
    1.ಬದಲಾವಣೆಯ ಕೂಗು
    ಪಂಜಾಬ್‌ನಲ್ಲಿ 1997ರಿಂದ 2001ರವರೆಗೆ ಅಂದರೆ ಸುಮಾರು 24 ವರ್ಷಗಳು ಬಿಜೆಪಿಯೊಂದಿಗೆ ಎಸ್‌ಡಿಎ ಪಾಲುದಾರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಅಧಿಕಾರ ನಡೆಸಿತ್ತು. 2007 ಮತ್ತು 2012 ಗೆದ್ದಿದ್ದ ಕಾಂಗ್ರೆಸ್‌ಗೆ ಪರ್ಯಾಯವಾಗಿದೆ. ಈ ಬಾರಿ ಪಂಜಾಬ್‌ನಲ್ಲಿ ಮತದಾರರು ಬದಲಾವಣೆಗೆ ಮತ ಹಾಕಿದ್ದಾರೆ. ಎರಡು ದೊಡ್ಡ ಪಕ್ಷಗಳ 70 ವರ್ಷಗಳ ಆಡಳಿತವನ್ನು ಮತದಾರರು ನೋಡಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಅವಕಾಶ ನೀಡುವ ಕಾಲ ಬಂದಿದೆ. ಈ ಬಾರಿ ನಾವು ಮೂರ್ಖರಾಗುವುದಿಲ್ಲ. ಭಗವಂತ್ ಮಾನ್ ಮತ್ತು ಕೇಜ್ರಿವಾಲ್‌ಗೆ ಅವಕಾಶ ನೀಡುತ್ತೇವೆ’ ಎಂಬ ಎಎಪಿ ಘೋಷಣೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತು.

    ದೆಹಲಿ ಮಾದರಿ
    ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೆಹಲಿ ಮಾದರಿಯ ಆಡಳಿತದ ಮೂಲಕ ಪಂಜಾಬ್ ಮತದಾರರ ಗಮನ ಸೆಳೆದರು. ಗುಣಮಟ್ಟದ ಸರ್ಕಾರಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ಅಗ್ಗದ ದರದಲ್ಲಿ ನೀರು ಪೂರೈಕೆ ಅವರ ಪ್ರಮುಖ ಸಾಧನೆಗಳಾಗಿವೆ. ಹಾಲಿ ಮತ್ತು ಹಿಂದಿನ ಸರ್ಕಾರಗಳ ಅಧಿಕಾರ ದಾಹ, ವಿವಿಧ ವಲಯಗಳಲ್ಲಿ ಮಿತಿ ಮೀರಿದ್ದ ದರಗಳು, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಜನರಲ್ಲಿ ಬೇಸರ ಮೂಡಿಸಿತ್ತು.

    ಯುವಸಮುದಾಯ ಮತ್ತು ಮಹಿಳೆಯರು
    ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಬಯಸುವ ಯುವಜನರು ಮತ್ತು ಮಹಿಳಾ ಮತದಾರರಿಂದ ಎಎಪಿ ಬೆಂಬಲ ಪಡೆದಿದೆ. ರಾಜ್ಯದಲ್ಲಿ ಮಿತಿಮೀರಿರುವ ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೊಗೆಯುವ ಕೇಜ್ರಿವಾಲ್ ಅವರ ಭರವಸೆ ಈ ಎರಡು ಸಮುದಾಯಗಳನ್ನು ಆಕರ್ಷಿಸಿತು. ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡುವುದನ್ನು ಕೇಜ್ರಿವಾಲ್ ಅವರು ಒತ್ತಿ ಹೇಳಿದ್ದರು. ರಾಜ್ಯದ ಮಹಿಳೆಯರ ಖಾತೆಗಳಿಗೆ ತಿಂಗಳಿಗೆ 1,000 ರೂಪಾಯಿ ಜಮೆ ಮಾಡುವ ಭರವಸೆಯನ್ನೂ ನೀಡಿದ್ದರು. ಆ ಮೂಲಕ ಯುವಜನತೆ ಮತ್ತು ಮಹಿಳೆಯರನ್ನು ಓಲೈಸುವಲ್ಲಿ ಎಎಪಿ ಯಶಸ್ವಿಯಾಗಿದೆ.

    ಭಗವಂತ್ ಮಾನ್ ಸಿಎಂ ಅಭ್ಯರ್ಥಿಯಾಗಿದ್ದು
    ಭಗವಂತ್ ಮಾನ್ (Bhagwant Mann) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಪಂಜಾಬ್‌ನಲ್ಲಿ ಎಎಪಿ ಮುನ್ನಡೆಗೆ ಸಹಾಯವಾಗಿದೆ. ರಾಜಕೀಯ ಮತ್ತು ಸಾಮಾಜಿಕ ವಿಡಂಬನೆಗಳ ಮೂಲಕವೇ ಪಂಜಾಬ್ ಜನತೆಯ ಹೃದಯದಲ್ಲಿ ಭಗವಂತ್ ಮಾನ್ ಸ್ಥಾನ ಪಡೆದಿದ್ದಾರೆ. ಇತರೆ ರಾಜಕಾರಣಿಗಳಿಗಿಂತ ಭಿನ್ನ ಧ್ವನಿ ಮತ್ತು ಮಣ್ಣಿನ ಮಗ ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ವ್ಯಕ್ತಿತ್ವದಲ್ಲಿ ಸರಳವಾಗಿ ಗುರುತಿಸಿಕೊಂಡಿದ್ದಾರೆ. ಇದು ಕೂಡ ಪಂಜಾಬ್ ಜನತೆ ಎಎಪಿ ಕಡೆ ಮುಖಮಾಡಲು ಕಾರಣವಾಗಿದೆ.

    ಕೃಷಿ ಕಾಯ್ದೆಗಳ ವಿರುದ್ಧದ ಆಂದೋಲನ
    ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ ರೈತರು ಭಾರೀ ಸಂಖ್ಯೆಯಲ್ಲಿ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಎಎಪಿ ಕೂಡ ಸಹಕಾರ ನೀಡಿತ್ತು. ಇಂತಹ ಪ್ರಮುಖ ಬೆಳವಣಿಗೆಗಳು ಪಂಜಾಬ್ ರಾಜಕೀಯ ವಲಯದಲ್ಲಿ ಬದಲಾವಣೆ ಗಾಳಿ ಬೀಸಲು ಕಾರಣವಾಗಿವೆ.