Tag: punjab election

  • ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮಾಡಿದಂತೆ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಹರಿದಾಡಿ ಸುದ್ದಿಯಾದರು. ಇದೀಗ ಪಂಜಾಬ್‌ನಲ್ಲಿ ಚುನಾವಣೆ ಗೆಲ್ಲುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ(ಎಎಪಿ) ಅಭ್ಯರ್ಥಿ ಭಗವಂತ್ ಮಾನ್ ಪಂಜಾಬ್‌ನ ಝೆಲೆನ್ಸ್ಕಿ ಎಂದೇ ಟ್ರೆಂಡ್ ಆಗುತ್ತಿದ್ದಾರೆ.

    ಝೆಲೆನ್ಸ್ಕಿಗೂ ಮಾನ್‌ಗೂ ಏನು ಸಂಬಂಧ ಎಂದು ಹಲವರಲ್ಲಿ ಪ್ರಶ್ನೆ ಕಾಡುತ್ತಿದೆ. ಇವರಿಬ್ಬರಿಗೂ ಸಂಬಂಧ ಇಲ್ಲದಿದ್ದರೂ ಒಂದೇ ಹಿನ್ನೆಲೆಯಿಂದ ರಾಜಕೀಯಕ್ಕೆ ಪ್ರವೇಶಿಸಿರುವುದರಿಂದ ಇವರಿಬ್ಬರನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ `ಆಪ್’ ಸುನಾಮಿಗೆ ಕಾಂಗ್ರೆಸ್ ತತ್ತರ- ಚನ್ನಿ, ಸಿಧು, ಕ್ಯಾಪ್ಟನ್‍ಗೆ ಹೀನಾಯ ಸೋಲು

    ಹೌದು, ರಷ್ಯಾ ಉಕ್ರೇನ್ ಯುದ್ಧಕ್ಕೂ ಮೊದಲು ಝೆಲೆನ್ಸ್ಕಿ ಹೆಸರನ್ನೂ ಕೇಳಿರದವರು ಆತ ಒಬ್ಬ ಹಾಸ್ಯ ನಟನಾಗಿ ಬಳಿಕ ರಾಜಕೀಯಕ್ಕೆ ಪ್ರವೆಶಿಸಿದ್ದ ವಿಷಯ ತಿಳಿದುಕೊಂಡರು. ಈ ವಿಚಾರವಾಗಿ ಭೀಕರ ಯುದ್ಧದ ಮಧ್ಯೆಯೂ ಝೆಲೆನ್ಸ್ಕಿ ಟ್ರೆಂಡ್ ಆಗಿದ್ದರು. ಇದೀಗ ಭಗವಂತ್ ಮಾನ್ ಅವರ ಸರದಿ.

    ಭಗವಂತ್ ಮಾನ್ ಸಹ ರಾಜಕೀಯ ಸೇರುವ ಮೊದಲು ಪಂಜಾಬ್‌ನ ಹಾಗೂ ರಾಷ್ಟ್ರೀಯ ಚ್ಯಾನೆಲ್‌ಗಳಲ್ಲಿ ಹಾಸ್ಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ಈ ಮೂಲಕ ಜನಪ್ರಿಯತೆ ಗಳಿಸಿ ಮಾನ್ ಬಳಿಕ ರಾಜಕೀಯ ಪ್ರವೇಶಿಸಿದರು. ಇದನ್ನೂ ಓದಿ: ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಭಗವಂತ್ ಮಾನ್ ಇಬ್ಬರೂ ಒಂದೇ ಹಿನ್ನೆಲೆಯಿಂದ ರಾಜಕೀಯ ಪ್ರವೆಶಿಸಿರುವುದಾಗಿ ಭಾರೀ ಸುದ್ದಿಯಾಗುತ್ತಿದ್ದಾರೆ. ಪಂಜಾಬ್‌ನ ಚುನಾವಣೆಯಲ್ಲಿ ಭಗವಂತ್ ಮಾನ್ ಭರ್ಜರಿ ಗೆಲುವು ಸಾಧಿಸಿ ಪಂಜಾಬ್‌ನ ಝೆಲೆನ್ಸ್ಕಿ ಎನಿಸಿಕೊಂಡಿದ್ದಾರೆ.

  • ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು: ಕೇಜ್ರಿವಾಲ್

    ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು: ಕೇಜ್ರಿವಾಲ್

    ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯ ಹೊಸ್ತಿಲಲ್ಲಿದ್ದು, ಪಂಜಾಬ್ ಜನತೆಗೆ ಆಮ್ ಆದ್ಮಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.

    ಪಂಜಾಬ್‍ನಲ್ಲಿ ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರನ್ನು ಭೇಟಿಯಾದ ಅವರು, ಆಮ್ ಆದ್ಮಿ ಪಕ್ಷದ ಕೇಂದ್ರಾಡಳಿತವಾಗಿರುವ ದೆಹಲಿಗಿಂತ ಭಿನ್ನವಾಗಿ ಹಾಗೂ ಪೂರ್ಣ ರಾಜ್ಯವನ್ನು ನಡೆಸುವ ಅವಕಾಶವನ್ನು ಪಂಜಾಬ್ ಗೆಲುವು ನೀಡಿದೆ. ಈ ಕ್ರಾಂತಿಗಾಗಿ ಪಂಜಾಬ್‍ನ ಜನತೆಗೆ ಧನ್ಯವಾದವನ್ನು ತಿಳಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್ ಅವರು ಭಗವಂತ್ ಮಾನ್ ಅವರ ಜೊತೆ ವಿಜಯದ ಸಂಕೇತ ತೋರಿಸುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

    ಮಧ್ಯಾಹ್ನ 1ಗಂಟೆಯ ಟ್ರೆಂಡ್ ಪ್ರಕಾರ ಆಪ್ 91, ಕಾಂಗ್ರೆಸ್ 17, ಶಿರೋಮಣಿ ಅಖಾಲಿ ದಳ 06, ಬಿಜೆಪಿ 2, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಮನೆಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಇದನ್ನೂ ಓದಿ:  ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?

  • ಪಂಜಾಬ್‌ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ

    ಪಂಜಾಬ್‌ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ

    ಚಂಡೀಗಢ: ಪಂಜಾಬ್‌ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ ಆಮ್‌ ಆದ್ಮಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಪ್ರತಿಕ್ರಿಯಿಸಿದ್ದಾರೆ.

    ಪಂಜಾಬ್‌ ಮಾಫಿಯಾಗಳಿಂದ ಕೂಡಿದೆ. ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಮಾಫಿಯಾ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅವರು (ಕಾಂಗ್ರೆಸ್)‌ ಏನನ್ನೂ ಬಿಟ್ಟಿಲ್ಲ. ಮರಳು ಮಾಫಿಯಾ, ಭೂ ಮಾಫಿಯ, ಕೇಬಲ್‌ ಮಾಫಿಯಾ, ಟ್ರಾನ್ಸ್‌ಪೋರ್ಟ್‌ ಮಾಫಿಯಾ, ಅಬಕಾರಿ ಮಾಫಿಯಾ ಕೂಡ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    ಸಿಎಂ ಅಂದರೆ ಕಾಮನ್‌ ಮ್ಯಾನ್.‌ ಖ್ಯಾತಿ ಯಾವಾಗಲೂ ನನ್ನ ಜೀವನದ ಭಾಗವಾಗಿದೆ. ಈಗಲೂ ಜನರ ಮಧ್ಯೆ ಹೋಗಿ ಅವರಿಗಾಗಿ ಕೆಲಸ ಮಾಡುತ್ತೇನೆ. ಜನರು ಹಳೆಯ ಪಂಜಾಬ್‌ ಅನ್ನು ಮರಳಿ ಬಯಸುತ್ತಾರೆ ಎಂದು ತಿಳಿಸಿದ್ದಾರೆ.

    ಪಂಜಾಬ್‌ ಅನ್ನು ಮತ್ತೆ ಪಂಜಾಬ್‌ ಆಗಿ ಮಾಡುತ್ತೇವೆ. ಅದನ್ನು ಪ್ಯಾರಿಸ್‌, ಲಂಡನ್‌ ಅಥವಾ ಕ್ಯಾಲಿಫೋರ್ನಿಯಾ ಆಗಿ ಪರಿವರ್ತಿಸುವ ಅಗತ್ಯವಿಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಪಂಜಾಬ್‌ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ವರದಿಗಳು ಬಿಡುಗಡೆಯಾಗಿವೆ. ಪಂಜಾಬ್‌ನಲ್ಲಿ ಎಎಪಿ ಪಕ್ಷ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ವರದಿಗಳು ತಿಳಿಸಿವೆ.

  • ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚಂಡೀಗಢ: ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭವಿಷ್ಯ ನುಡಿದರು.

    ಪಟಿಯಾಲಾದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಭಿನ್ನ ಜಗತ್ತಿನಲ್ಲಿ ವಾಸಿಸುತ್ತಿದೆ. ಇದರಿಂದಾಗಿ ಈ ಬಾರಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಟೀಕಿಸಿದ ಅವರು, ತಾವು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ಎಎಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಗವಂತ್ ಮಾನ್ ದೇಶ ವಿರೋಧಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯದಲ್ಲಿ ಸಕಾರಾತ್ಮಕ ವರದಿಗಳು ಬರುತ್ತಿವೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮೈತ್ರಿ, ಮತ್ತು ಬಿಜೆಪಿ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಮೈತ್ರಿ ಈ ಬಾರಿ ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಲಿದೆ. ಇಂದು ಎಲ್ಲಾ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಚಂಡೀಗಢ: ಈ ವಿಧಾನಸಭಾ ಚುನಾವಣೆಯೂ ಪಂಜಾಬ್ ರಾಜ್ಯವನ್ನು ಇಷ್ಟ ಪಡುತ್ತಿರುವವರ ಹಾಗೂ ಮಾಫಿಯಾ ವ್ಯವಸ್ಥೆಯ ನಡುವಿನ ಸ್ಪರ್ಧೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು ಭಯೋತ್ಪಾದನೆಯಿಂದ ಒಂದು ಪೀಳಿಗೆಯನ್ನೆ ಕಳೆದುಕೊಂಡಿದೆ. ಮತ್ತೆ ಮಾಫಿಯಾ ವ್ಯವಸ್ಥೆಗೆ ಬೆಂಬಲ ನೀಡಿದರೆ ಮುಂದಿನ ಪೀಳಿಗೆಯನ್ನು ಕಳೆದುಕೊಳ್ಳುವ ಆತಂಕ ಎದುರಗುತ್ತದೆ. ಇದರಿಂದಾಗಿ ಮತದಾರರು ಯೋಚನೆಯಿಂದ ಮತಚಲಾಯಿಸಿ ಎಂದು ಮನವಿ ಮಾಡಿದರು.

    ಈ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಬಾದಲ್ ಅವರ ಕುಟುಂಬಗಳ ಮಾಫಿಯಾಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪಂಜಾಬ್ ಅನ್ನು ಲೂಟಿ ಮಾಡಿದರೆ ಮತ್ತೊಂದೆಡೆ ರಾಜ್ಯವನ್ನು ಪ್ರೀತಿಸುವ ಹಾಗೂ ಜನರ ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷಗಳ ನಡುವಿನ ಪೈಪೋಟಿಯಾಗಿದೆ ಎಂದು ನುಡಿದರು. ಇದನ್ನೂ ಓದಿ: ಭಾರತೀಯ ಧರ್ಮ, ಪರಂಪರೆ ಇತರ ಧರ್ಮಗಳ ವಿರುದ್ಧ ಇಲ್ಲ: ಆರಗ ಜ್ಞಾನೇಂದ್ರ

    ಒಟ್ಟು 2.15 ಕೋಟಿ ಮತದಾರರನ್ನು ಹೊಂದಿರುವ ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 24,740 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕಾಂಗ್ರೆಸ್‌ಗೆ ಆಪ್ ಪಕ್ಷ ಪ್ರಬಲ ಪೈಪೋಟಿಯನ್ನು ನೀಡಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ನವದೆಹಲಿ: ಉತ್ತರ ಪ್ರದೇಶದ 16 ಜಿಲ್ಲೆಗಳ 59 ಕ್ಷೇತ್ರಗಳಿಗೆ ಇಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲೂ ಇಂದು ಒಂದೇ ಹಂತದಲ್ಲಿ ಮತದಾನವಾಗಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಯಲಿದೆ.

    ಉತ್ತರಪ್ರದೇಶದಲ್ಲಿ 2.15 ಕೋಟಿ ಮತದಾರರು 3ನೇ ಹಂತದಲ್ಲಿ 627 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮೈನ್‌ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಡೆಯುತ್ತಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ.

    ಉತ್ತರಪ್ರದೇಶದ ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ್ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

    ಈಗಾಗಲೇ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಅಭಯ್ ರಾಮ್ ಯಾದವ್ ಇಟಾವಾ ಜಿಲ್ಲೆಯ ಸೈಫೈನಲ್ಲಿ ಈಗಾಗಲೇ ಮತ ಚಲಾಯಿಸಿದರು. ಇದನ್ನೂ ಓದಿ:  ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಪಂಜಾಬ್‌ನಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 93 ಮಹಿಳೆಯರು ಸೇರಿದಂತೆ 1,304 ಅಭ್ಯರ್ಥಿಗಳ ಭವಿಷ್ಯವನ್ನು 2.14 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ. ಪಂಜಾಬ್‌ನ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಸಿಎಂಗಳಾದ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಬಾದಲ್ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಭವಿಷ್ಯವೂ ಇಂದೇ ನಿರ್ಧಾರವಾಗಲಿದೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    bjp - congress

    2017ರ ಚುನಾವಣೆಯಲ್ಲಿ, ಬಿಜೆಪಿಯು ಈ 59 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ 9 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ ಬಹುಜನ ಸಮಾಜವಾದಿ ಪಕ್ಷವೂ ಈ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.

  • ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಚಂಡೀಗಢ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಇತರ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಂಜಾಬ್ ಮುಖ್ಯ ಚುನಾವಣಾಧಿಕಾರಿ ಅವರು ಸಾಹಿಬ್ಜಾದಾ ಅಜಿತ್ ಸಿಂಗ್ ನಗರದ ಹಿರಿಯ ಎಸ್‌ಪಿಗೆ ಆದೇಶ ಹೊರಡಿಸಿದ್ದಾರೆ.

    ಶಿರೋಮಣಿ ಅಕಾಲಿ ದಳದ ದೂರಿನನ್ವಯ ಕೇಜ್ರಿವಾಲ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಹಾಗೂ ಇತರೆ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ದಂಡದ ಕ್ರಮಕ್ಕೆ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    ಪ್ರಚಾರ ಮುಗಿದ ನಂತರವೂ ಮಾನಸಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸ್ ವಾಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಎಪಿ ದೂರಿನ ಆಧಾರದ ಮೇಲೆ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

  • ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರತ್ಯೇಕತಾವಾದಿ ಎಂದು ಹೇಳಿಕೆ ನೀಡಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಕುಮಾರ್‌ ವಿಶ್ವಾಸ್‌ ಅವರಿಗೆ ʼವೈʼ ಶ್ರೇಣಿ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಶ್ವಾಸ್‌ ಅವರಿಗೆ ಬೆದರಿಕೆ ಇದೆ ಎಂದು ಭದ್ರತೆ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಭದ್ರತೆ ಒದಗಿಸಲು ಮುಂದಾಗಿದೆ. ಇದನ್ನೂ ಓದಿ: ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಪರಿಶೀಲನೆಯ ನಂತರ, ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮೂಲಕ ವಿಶ್ವಾಸ್‌ ಅವರಿಗೆ ʼವೈʼ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

    ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೇಜ್ರಿವಾಲ್‌ ಅವರು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ್‌ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಕೇಜ್ರಿವಾಲ್‌ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ಪಂಜಾಬ್‌ ವಿಧಾನಸಭಾ ಚುನಾವಣೆಗೆ ಫೆ.20 ರಂದು ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರ ಬೀಳಲಿದೆ.

  • ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಪ್ರಧಾನಿಯಾಗಬೇಕೆಂದು ಬಯಸಿದ್ದರು ಎಂದು ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ಮಾಡಿದ ಆರೋಪವು ದಿನದಿಂದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಗ್ಗೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

    ಈ ಆರೋಪದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು, ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುವುದು. ಜೊತೆಗೆ ಶೀಘ್ರದಲ್ಲೇ ಕೇಜ್ರಿವಾಲ್ ಅವರನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಪಂಜಾಬ್‍ನ ಮುಖ್ಯಮಂತ್ರಿ ಚನ್ನಿಗೆ ಭರವಸೆ ನೀಡಿದರು.

    ರಾಜಕೀಯ ಪಕ್ಷ ಉಗ್ರವಾದಿ ಸಂಘಟನೆಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಹಾಗೂ ಅವುಗಳ ಬೆಂಬಲ ಪಡೆಯುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಅಧಿಕಾರಕ್ಕಾಗಿ ಪ್ರತ್ಯೇಕವಾದಿಗಳೊಡನೆ ಕೈಜೋಡಿಸುವುದು ಖಂಡನೀಯ. ಪಂಜಾಬ್ ರಾಜ್ಯವನ್ನು ವಿಂಗಡನೆ ಮಾಡಲು ಹೋರಟಿರುವುದನ್ನು ವಿರೋಧಿಸುತ್ತೇವೆ. ಇಂತಹ ಸಂಘಟನೆಗಳ ಅಜೆಂಡಾ ರಾಷ್ಟ್ರ ವಿರೋಧಿಗಳ ಅಜೆಂಡಾಗಳಿಗಿಂತ ಭಿನ್ನವಲ್ಲ. ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಾನೇ ಸ್ವತಃ ಇದನ್ನು ಪರಿಶೀಲನೆ ನಡೆಸುತ್ತೇನೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡಲ್ಲ ಎಂದು ತಿಳಿಸಿದರು.

    ಈ ಹಿಂದೆ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಆರೋಪಿ ತನಿಖೆಗೆ ಪಂಜಾಬ್‍ನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಹಾಗೂ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ಅಲ್ಲದೆ ಆಪ್‍ಗೆ ಸಿಖ್ಸ್ ಫಾರ್ ಜಸ್ಟಿಸ್ ಎಂಬ ಖಲಿಸ್ತಾನಿ ಸಂಘಟನೆ ಬೆಂಬಲ ವ್ಯಕ್ತಪಡಿಸಿ ಬರದಿರುವ ಪತ್ರವನ್ನು ಗಮನ ಸೆಳೆದಿದ್ದರು. ಇದನ್ನೂ ಓದಿ: ಮೋದಿಯನ್ನು ಹತ್ಯೆ ಮಾಡಲೆಂದೇ ಉಗ್ರರಿಂದ ಆಸ್ಪತ್ರೆಯಲ್ಲಿ ಬಾಂಬ್‌ ಸ್ಫೋಟ!

    ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಗೆ ಪತ್ರ ಬರೆದು ತನಿಖೆಗೆ ಒತ್ತಾಯೊಸಲು ಕೇಳಿಕೊಂಡಿದೆ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ನನ್ನ ವಿರುದ್ಧ ಎಫ್‍ಐಆರ್‍ನ್ನು ದಾಖಲಿಸುತ್ತದೆ ಎಂದು ಕೇಳಲ್ಪಟ್ಟಿದ್ದೇನೆ. ನನ್ನ ಮೇಲೆ ಬಂದಿರುವ ಎಲ್ಲಾ ಕೇಸ್‍ಗಳನ್ನು ಸ್ವಾಗತಿಸುತ್ತೇನೆ. ಆದರೆ ಕೇಂದ್ರವು ಭದ್ರತೆಯ ಬಗ್ಗೆ ಈ ರೀತಿ ವ್ಯವಹರಿಸುತ್ತಿರುವುದು ನನಗೆ ಸಾಕಷ್ಟು ಚಿಂತೆಯನ್ನು ಉಂಟು ಮಾಡಿದೆ. ಜೊತೆ ರಾಷ್ಟ್ರೀಯ ಭದ್ರತೆಯನ್ನು ಕೇಂದ್ರ ಹಾಸ್ಯ ಮಾಡಿತ್ತಿದೆ. ಎಲ್ಲಾ ಭ್ರಷ್ಟರು ಒಂದಾಗಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

  • 1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

    1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

    ನವದೆಹಲಿ: ಭಾರತ 1947ರಲ್ಲಿ ಹುಟ್ಟಲಿಲ್ಲ ಎಂದು ಹಿರಿಯ ಸಿಖ್‌ ನಾಯಕರೊಂದಿಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

    ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ ಪ್ರಧಾನಿ ಮೋದಿ, 1947ರಲ್ಲಿ ಈ ದೇಶ ಹುಟ್ಟಲಿಲ್ಲ. ನಮ್ಮ ಗುರುಗಳು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವು ತುಂಬಾ ದಬ್ಬಾಳಿಕೆ ಅನುಭವಿಸಿದ್ದೇವೆ. ಆ ಸಮಯದಲ್ಲಿ ನಾನೂ ಭೂಗತನಾಗಿದ್ದೆ. ನಾನು ಅಡಗಿಕೊಳ್ಳಲು ಸಿಖ್‌ ವೇಷ ಧರಿಸುತ್ತಿದ್ದೆ. ನಾನು ಪಗ್ಡಿ ಧರಿಸುತ್ತಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

    1947ರ ವಿಭಜನೆಯ ಸಂದರ್ಭದಲ್ಲಿ ಸಿಖ್‌ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್‌ ಅನ್ನು ಭಾರತದಲ್ಲಿಯೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಕರ್ತಾರ್‌ಪುರ ಸಾಹಿಬ್‌ ಪಾಕಿಸ್ತಾನದಲ್ಲಿದ್ದು, ಪಂಜಾಬ್‌ನಿಂದ ಸುಮಾರು ಆರು ಕಿ.ಮೀ. ದೂರದಲ್ಲಿದೆ ಎಂದರು.

    ಗುರು ಗ್ರಂಥ ಸಾಹಿಬ್‌ ಅನ್ನು ಅಫ್ಘಾನಿಸ್ತಾನದಿಂದ ಮರಳಿ ತರಬೇಕು. ನಾವು ಅದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅದಕ್ಕಾಗಿ ವಿಶೇಷ ವಿಮಾನ ಒದಗಿಸಿದ್ದೇವೆ. ಅದನ್ನು ಗೌರವದಿಂದ ವಾಪಸ್‌ ತರಿಸಿಕೊಳ್ಳಲು ನಾನು ಸಚಿವರಿಗೆ ಹೇಳಿದ್ದೇನೆ. ಅದು ನಮ್ಮ ಜೀವನದ ಅಮೂಲ್ಯವಾಗಿದೆ ಗುರು ಗೋಬಿಂದ್‌ ಸಿಂಗ್‌ ಅವರು ಗುಜರಾತ್‌ನವರಾಗಿದ್ದರಿಂದ ನಾನು ನಿಮ್ಮ ರಕ್ತ ಸಂಬಂಧಿಯೇ ಆಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್‍ಜಿತ್ ಸಿಂಗ್ ಚನ್ನಿ

    ಇದೇ ಫೆ.20ರಂದು ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರ ಬೀಳಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಎಎಪಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ.