Tag: Punjab CM

  • ಸಿಎಂ ಕುರ್ಚಿ ನನ್ನ ಗಂಡ ಕೊಟ್ಟ ಗಿಫ್ಟ್‌ – ನವಜೋತ್ ಸಿಂಗ್‌ ಸಿಧು ಪರ ಪತ್ನಿ ಬ್ಯಾಟಿಂಗ್‌

    ಸಿಎಂ ಕುರ್ಚಿ ನನ್ನ ಗಂಡ ಕೊಟ್ಟ ಗಿಫ್ಟ್‌ – ನವಜೋತ್ ಸಿಂಗ್‌ ಸಿಧು ಪರ ಪತ್ನಿ ಬ್ಯಾಟಿಂಗ್‌

    ಚಂಡೀಗಢ: ತಮ್ಮ ಪತಿ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬ್‌ ಮುಖ್ಯಮಂತ್ರಿ ಸ್ಥಾನವನ್ನು ಭಗವಂತ್‌ ಮಾನ್‌ (Bhagwant Mann) ಅವರಿಗೆ ಉಡುಗೊರೆಯಾಗಿ ನೀಡಿರುವುದಾಗಿ ಸಿಧು ಪತ್ನಿ ನವಜೋತ್‌ ಕೌರ್‌ (Navjot Kaur) ಹೇಳಿದ್ದಾರೆ.

    ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಮಾತಿನ ಚಕಮಕಿಯ ನಡುವೆ ಕೌರ್ ಸರಣಿ ಟ್ವೀಟ್‌ಗಳ ಮೂಲಕ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಮನೆಗೆ ಸಂಗೀತಾ ಫೋಗಟ್ – ಪೊಲೀಸರಿಂದ ಘಟನೆಯ ಮರುಸೃಷ್ಟಿ

    ಸಿಧು ಅವರಿಗೇ ಪಂಜಾಬ್‌ನ ಚುಕ್ಕಾಣಿ ನೀಡಲು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಬಯಸಿದ್ದರು. ಆದ್ರೆ ಸಿಧು ಅವರು ತಮ್ಮ ಪಕ್ಷಕ್ಕೆ ದ್ರೋಹ ಬಗೆಯದಿರಲು ನಿರ್ಧರಿಸಿದ್ದರು. ಹಾಗಾಗಿ ಭಗವಂತ್‌ ಮಾನ್‌ ಅವರು ಸಿಎಂ ಆದರು ಎಂದು ಪತಿಯ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಸಿಎಂ ಭಗವಂತ್ ಮಾನ್ ಅವರೇ ಮುಚ್ಚಿಟ್ಟ ರಹಸ್ಯವೊಂದನ್ನು ನಾನಿಂದು ಬಹಿರಂಗಪಡಿಸುತ್ತೇನೆ. ನೀವು ಇಂದು ಅಲಂಕರಿಸಿರುವ ಬಹಳ ಗೌರವಾನ್ವಿತ ಕುರ್ಚಿಯನ್ನು ನಿಮ್ಮ ಹಿರಿಯ ಸಹೋದರ ನವಜೋತ್ ಸಿಂಗ್ ಸಿಧು ಅವರು ನಿಮಗೆ ಉಡುಗೊರೆಯಾಗಿ ನೀಡಿರುವುದು. ನಿಮ್ಮದೇ ಹಿರಿಯ ನಾಯಕ ಪಂಜಾಬ್ ನಾಯಕತ್ವವನ್ನು ನವಜೋತ್ ಮುನ್ನಡೆಸಬೇಕು ಎಂದು ಬಯಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯವನ್ನ ಮುನ್ನಡೆಸಲು ಸಿಧು ಅವರನ್ನು ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

    2022ರಲ್ಲಿ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನ ಸೋಲಿಸಿ ಎಎಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇದಕ್ಕೂ ಮುನ್ನ ಸಿಧು ಅವರು ಕಾಂಗ್ರೆಸ್ ತೊರೆದು ಎಎಪಿ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು.

  • ಪಂಜಾಬ್ ಸಿಎಂ ಆಯ್ಕೆ ವಿರೋಧಿಸಿ ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ

    ಪಂಜಾಬ್ ಸಿಎಂ ಆಯ್ಕೆ ವಿರೋಧಿಸಿ ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ

    ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಹಮ್ಜಾ ಶಹಬಾಜ್ ಅವರ ಆಯ್ಕೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ. ಈ ಬೆನ್ನಲ್ಲೇ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಇಲಾಹಿ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ನಾಯಕ ಹಮ್ಜಾ ಶಹಬಾಜ್ ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವಾಡ್ (PML-Q) ಮತಗಳನ್ನು ಪಂಜಾಬ್ ವಿಧಾನಸಭೆ ಉಪ ಸಭಾಪತಿ ತಿರಸ್ಕರಿಸಿದ ಬಳಿಕ ಅವರು ಜಯ ಸಾಧಿಸಿದ್ದಾರೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    ಪಿಟಿಐ ಮತ್ತು ಪಿಎಂಎಲ್-ಕ್ಯೂ ಜಂಟಿ ಅಭ್ಯರ್ಥಿ ಪರ್ವೈಜ್ ಇಲಾಹಿ 186 ಮತಗಳನ್ನು ಪಡೆದರೆ, ಹಮ್ಜಾ ಶಹಬಾಜ್ 179 ಮತಗಳನ್ನು ಪಡೆದಿದ್ದರು. ಆದರೆ ಪಿಎಂಎಲ್-ಕ್ಯೂನ 10 ಮತಗಳನ್ನು ಡೆಪ್ಯುಟಿ ಸ್ಪೀಕರ್ ದೋಸ್ತ್ ಮುಹಮ್ಮದ್ ಮಜಾರಿ ಅವರು ತಿರಸ್ಕರಿಸಿದ್ದರಿಂದಾಗಿ ಪರ್ವೈಜ್ ಇಲಾಹಿ ಅವರು 176 ಮತಗಳನ್ನು ತೆಗೆದುಕೊಂಡರು. ಇದರಿಂದಾಗಿ ಇಲಾಹಿಗೆ ಸೋಲುಂಟಾಯಿತು.

    ಸಾಂರ್ಭಿಕ ಚಿತ್ರ

    ಸಿಎಂ ಆಗಿ ಮರು ಆಯ್ಕೆಯಾದ ಬಳಿಕ ಮಾತನಾಡಿದ ಹಮ್ಜಾ ಶಹಬಾಜ್, `ಕೆಲವರು ಆಯ್ಕೆ ವಿರುದ್ಧ ಈಗ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಆದರೆ ಸಂಸತ್ತಿಗೆ ನೈತಿಕತೆಯ ಅಧಿಕಾರವಿದೆ. ಪ್ರಜಾಪ್ರಭುತ್ವವು ನೈತಿಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ

    ಸಿಎಂ ಆಯ್ಕೆ ಕುರಿತು ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್ ಮುಖ್ಯಮಂತ್ರಿ ಚುನಾವಣೆಯ ಬೆಳವಣಿಗೆಯನ್ನು ಕುದುರೆ ವ್ಯಾಪಾರಕ್ಕೆ ಹೋಲಿಸಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ನಾಯಕ ಆಸಿಫ್ ಜರ್ದಾರಿ ವಿರುದ್ಧ ಕಿಡಿಕಾರಿದ್ದಾರೆ. ದೇಶದ ದೊಡ್ಡ ಡಕಾಯಿತ ಆಸಿಫ್ ಜರ್ದಾರಿ 30 ವರ್ಷಗಳಿಂದ ದೇಶವನ್ನು ದರೋಡೆ ಮಾಡುತ್ತಿದ್ದಾನೆ ದೂರಿದ್ದಾರೆ.

    ಬೇರೆ ಯಾವುದೇ ಸಮಾಜದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಇಂದು ರಾತ್ರಿ ಪಂಜಾಬ್ ಅಸೆಂಬ್ಲಿ ಬೆಳವಣಿಗೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ದಾಖಲಿಸಲು ನಾನು ರಾಷ್ಟ್ರಕ್ಕೆ ಮನವಿ ಮಾಡುತ್ತೇನೆ ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್

    ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್

    ಲಕ್ನೋ: ಕಾಂಗ್ರೆಸ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮತಕ್ಕಾಗಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ಬಿಜೆಪಿ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಚನ್ನಿ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡುವುದನ್ನು ಖಂಡಿಸುತ್ತೇನೆ. ಪ್ರಿಯಾಂಕಾ ಗಾಂಧಿ ಕೂಡ ಉತ್ತರ ಪ್ರದೇಶಕ್ಕೆ ಸೇರಿದವರು. ಆದ್ದರಿಂದ ಅವರನ್ನು ಬರಲು ಬಿಡಬಾರದು ಎಂದು ವಾಗ್ದಾಳಿ ನಡೆಸಿದ್ದರು.

    ಇದೀಗ ಸಂದರ್ಶನವೊಂದರಲ್ಲಿ ಯೋಗಿ ಆದಿತ್ಯನಾಥ್ ಅವರು ಗಾಂಧಿ ಮತ್ತು ನೆಹರು ಹೆಸರಿನಲ್ಲಿ ದೇಶಕ್ಕೆ ಪದೇ, ಪದೇ ದ್ರೋಹ ಮಾಡಲಾಗುತ್ತಿದೆ. ಜಾತಿವಾದ, ಪ್ರಾದೇಶಿಕತೆ, ಭಾಷಾವಾದ, ಭಯೋತ್ಪಾದನೆ, ನಕ್ಸಲಿಸಂ ಇವೆಲ್ಲವೂ ಭಾರತಕ್ಕೆ ಕಾಂಗ್ರೆಸ್ ನೀಡಿದ ಗಾಯಗಳಾಗಿವೆ ಮತ್ತು ಕಾಂಗ್ರೆಸ್ ಇಂದು ತಾನು ಬಿತ್ತಿದ್ದನ್ನು ಕೊಯ್ಯುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

    ಉತ್ತರ ಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಚರಣ್‍ಜಿತ್ ಸಿಂಗ್ ಚನ್ನಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪಂಜಾಬ್ ಸಿಎಂ ರವಿದಾಸ್ ಜಯಂತಿ ಪ್ರಯುಕ್ತ ವಾರಣಾಸಿಗೆ ಬಂದಿದ್ದರು. ಅವರು ಸಂತ ರವಿದಾಸ್ ಅವರಿಂದ ಸ್ವಲ್ಪ ಸ್ಫೂರ್ತಿ ಪಡೆದಿದ್ದರೆ, ಅಂತಹ ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು

  • ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡ: ಪಂಜಾಬ್ ಸಿಎಂ

    ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡ: ಪಂಜಾಬ್ ಸಿಎಂ

    ಚಂಡೀಗಢ: ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿರುವ ನೂತನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಛನ್ನಿ ನಾನೊಬ್ಬ ಎಲ್ಲರಂತೆ ಸಾಮಾನ್ಯ ಮನುಷ್ಯ ನನಗೆ ಸೆಕ್ಯೂರಿಟಿ ಬೇಡವೆಂದು ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ.

    ಈ ಬಗ್ಗೆ ಘೋಷಣೆ ಹೊರಡಿಸಿರುವ ಚರಣ್‍ಜಿತ್ ಸಿಂಗ್, ನಾನೊಬ್ಬ ನಿಮ್ಮಂತೆ ಸಾಮಾನ್ಯ ಮನುಷ್ಯ ಹಾಗಾಗಿ ನನಗೆ 1000 ಭದ್ರತಾ ಸಿಬ್ಬಂದಿ ಮತ್ತು 300 ಕಾರ್‍ ಗಳ ರಕ್ಷಣಾ ವ್ಯವಸ್ಥೆ ಬೇಡವೆಂದು ನಯವಾಗಿಯೇ ತಿರಸ್ಕರಿಸಿದ್ದಾರೆ. ದೊಡ್ಡದಾದ ಭದ್ರತಾ ಪಡೆಯನ್ನು ಇಟ್ಟುಕೊಂಡು ಆಡಳಿತ ನಡೆಸುವುದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇದಲ್ಲದೆ ನನ್ನೊಂದಿಗೆ ಬರುವ ವಾಹನಗಳ ಸಂಖ್ಯೆ ಕೂಡ ಕಡಿತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೂತನ ಸಿಎಂ ಆಗಿ ಆಯ್ಕೆಮಾಡಿತ್ತು. ಚರಣ್‍ಜಿತ್ ಸಿಂಗ್ ದಲಿತಸಮುದಾಯದವರಾಗಿದ್ದು, ಸಿಖ್ಖರಲ್ಲಿ ಅತ್ಯಂತ ಕೆಳ ವರ್ಗ ಚಮ್ಮಾರ ಸಮುದಾಯಕ್ಕೆ ಸೇರಿದವರು. 2007ರಿಂದ ಸತತವಾಗಿ ಚಾಮ್‍ಕೌರ್ ಸಾಹೀಬ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದರು. 2015ರಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಮರೀಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕಶಿಕ್ಷಣ ಸಚಿವರಾಗಿದ್ದ ಚರಣ್‍ಜಿತ್ ಸಿಂಗ್ ಇದೀಗ ಪಂಜಾಬ್ ಸಿಎಂ ಆಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.

    https://twitter.com/CMOPb/status/1441079286387990537

    ನಾನು ಸಾಮಾನ್ಯ ಮನುಷ್ಯ ಎಂದು ಹೇಳಿಕೊಂಡಿರುವ ಚರಣ್‍ಜಿತ್ ಸಿಂಗ್ ಸಿಎಂ ಆದ ಬಳಿಕ ಕೇವಲ 240 ಕಿ.ಮೀ ದೂರವಿರುವ ದೆಹಲಿಗೆ ಪ್ರೈವೇಟ್ ಜೆಟ್‍ನಲ್ಲಿ ಪ್ರಮಾಣ ಬೆಳೆಸಿದ್ದರು ಈ ಬಗ್ಗೆ ಇದೀಗ ವಿಪಕ್ಷಗಳು ವ್ಯಂಗ್ಯವಾಡುತ್ತಿವೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ!

  • ಸಿಧು ರಾಜೀನಾಮೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮ್ಮತಿ

    ಸಿಧು ರಾಜೀನಾಮೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮ್ಮತಿ

    ಚಂಡೀಗಢ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ಸಚಿವ ಸ್ಥಾನದ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವೀಕರಿಸಿದ್ದಾರೆ.

    ಅಮರಿಂದರ್ ಸಿಂಗ್ ಜೊತೆಗಿನ ಅಸಮಾಧಾನದ ಬಳಿಕ ನವಜೋತ್ ಸಿಂಗ್ ಸಿಧು ಜುಲೈ 14ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಹಾಕಿಕೊಂಡಿದ್ದರು. ಸಿಧು ಅವರ ರಾಜೀನಾಮೆಯನ್ನು ಕಾಯ್ದಿರಿಸಿದ್ದ ಅಮರಿಂದರ್ ಸಿಂಗ್ ಇಂದು ಸಮ್ಮತಿ ಸೂಚಿಸಿದ್ದಾರೆ.

    ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವು ಜೂನ್‍ನಲ್ಲಿ ಸಂಪುಟ ಪುನಾರಚನೆ ಮಾಡಿತ್ತು. ಈ ವೇಳೆ ನವಜೋತ್ ಸಿಂಗ್ ಸಿಧು ಅವರಿಂದ ಸಂಸ್ಥೆಗಳ ಖಾತೆ ಹಿಂಪಡೆದು, ಇಂಧನ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆಗೆ ಸಚಿವರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಕ್ಯಾಪ್ಟನ್ ಅವರ ಈ ನಡೆಯಿಂದ ನವಜೋತ್ ಸಿಧು ಅಸಮಾಧಾನ ಹೊರ ಹಾಕಿದ್ದರು. ಈ ಇಬ್ಬರು ನಾಯಕರ ನಡುವೆ ಶೀತಲ ಸಮರ ಮುಂದುವರಿದು, ರಾಜೀನಾಮೆ ಹಂತಕ್ಕೆ ಬಂದು ನಿಂತಿತ್ತು.

    ನವಜೋತ್ ಸಿಂಗ್ ಸಿಧು ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ಜುಲೈ 14ರಂದು ತಮ್ಮ ರಾಜೀನಾಮೆ ಪತ್ರವನ್ನು ಪಂಜಾಬ್ ಸಿಎಂಗೆ ಕಳುಹಿಸಿರುವುದಾಗಿ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದರು.