Tag: punjab boy

  • ನೆಚ್ಚಿನ ಯೂಟ್ಯೂಬರ್‌ ಭೇಟಿಯಾಗಲು 250 ಕಿ.ಮೀ. ಸೈಕಲ್‌ ತುಳಿದ 13ರ ಬಾಲಕ!

    ನೆಚ್ಚಿನ ಯೂಟ್ಯೂಬರ್‌ ಭೇಟಿಯಾಗಲು 250 ಕಿ.ಮೀ. ಸೈಕಲ್‌ ತುಳಿದ 13ರ ಬಾಲಕ!

    ನವದೆಹಲಿ: ತನ್ನ ನೆಚ್ಚಿನ ಯೂಟ್ಯೂಬ್‌ ಸ್ಟಾರ್‌ ಭೇಟಿಯಾಗಲು ಪಂಜಾಬ್‌ನ ಪಟಿಯಾಲದ 13 ವರ್ಷದ ಬಾಲಕ ಬರೋಬ್ಬರಿ 250 ಕಿ.ಮೀ. ಸೈಕಲ್‌ ತುಳಿದ ಘಟನೆ ನಡೆದಿದೆ.

    ದೆಹಲಿಯಲ್ಲಿದ್ದ ಯೂಟ್ಯೂಬ್‌ನ ʼಟ್ರಿಗರ್ಡ್‌ ಇನ್ಸಾನ್‌ʼ (Triggered Insaan) ಚಾನಲ್‌ ಮೂಲಕ ಜನಪ್ರಿಯತೆ ಗಳಿಸಿರುವ ಯೂಟ್ಯೂಬರ್‌ ನಿಶ್ಚಯ್‌ ಮಲ್ಹಾನ್‌ (Nischay Malhan) ಅವರನ್ನು ಭೇಟಿಯಾಗಲು ಬಾಲಕ ಮೂರು ದಿನಗಳ ಕಾಲ ಸುಮಾರು 250 ಕಿ.ಮೀ. ಸೈಕಲ್‌ ತುಳಿದಿದ್ದಾನೆ. ಆದರೆ ದುರದೃಷ್ಟವಶಾತ್‌ ಬಾಲಕ ತನ್ನ ನೆಚ್ಚಿನ ಯೂಟ್ಯೂಬರ್‌ ಭೇಟಿಯಾಗಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಯೂಟ್ಯೂಬರ್‌ ದುಬೈಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೆಹಲಿ ಸಚಿವ ರಾಜೀನಾಮೆ

    ಇತ್ತ ಮನೆಯಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಬಾಲಕನ ಪೋಷಕರು, ಪೊಲೀಸರಿಗೆ ದೂರು ನೀಡಿದ್ದರು. 8ನೇ ತರಗತಿ ಓದುತ್ತಿರುವ ಬಾಲಕ, ಯೂಟ್ಯೂಬ್‌ನಲ್ಲಿ ʼಟ್ರಿಗರ್ಡ್‌ ಇನ್ಸಾನ್‌ʼ ಚಾನಲ್ ಮೂಲಕ ಸುಮಾರು 1.7 ಕೋಟಿ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಯೂಟ್ಯೂಬರ್‌ ಭೇಟಿಯಾಗಲು ಅ.4ರಂದು ಮನೆಯಿಂದ ಹೊರಟಿದ್ದ.

    ಬಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಹಲವಾರು ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಬಾಲಕ ಪ್ರಯಾಣಿಸಿರುವುದನ್ನು ತೋರಿಸಿವೆ. ಆದರೆ ಆತ ರಾತ್ರಿ ಎಲ್ಲಿ ಉಳಿದುಕೊಳ್ಳುತ್ತಿದ್ದ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    ಯೂಟ್ಯೂಬರ್ ಪಿತಾಂಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ದೆಹಲಿಯ ಪೊಲೀಸರು ತಿಳಿದುಕೊಂಡರು. ನಂತರ ಅಲ್ಲಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕ ಪತ್ತೆಯಾಗಿದ್ದಾನೆ. ಪೊಲೀಸರು ಮೊದಲು ಬಾಲಕನ ಸೈಕಲ್ ಅನ್ನು ಕಂಡುಹಿಡಿದರು. ನಂತರ ಉದ್ಯಾನವೊಂದರಲ್ಲಿ ಬಾಲಕನನ್ನು ಪತ್ತೆಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಚಂಢೀಗಢ: ಹತ್ತವರ್ಷದ ಬಾಲಕನೊಬ್ಬ ಶಾಲೆ ತ್ಯಜಿಸಿ, ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿರುವ ವೀಡಿಯೋವೊಂದು ಪಂಜಾಬ್‍ನಲ್ಲಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೇ ಬಾಲಕ ವಂಶ ಸಿಂಗ್‍ಗೆ ಅಚ್ಚರಿಯೊಂದು ಕಾದಿತ್ತು.

    ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಾಲಕನಿಗೆಕರೆ ಮಾಡಿ ನೀನು ಮತ್ತೆ ಶಾಲೆಗೆ ಸೇರಿಕೊ ನಿನ್ನ ವಿದ್ಯಾಭ್ಯಾಸ ಖರ್ಚನ್ನು ಪೂರ್ಣವಾಗಿ ಸರ್ಕಾರ ಹೊತ್ತುಕೊಳ್ಳುತ್ತದೆ. ನಿನ್ನ ಕುಟುಂಬಕ್ಕೆ ತಕ್ಷಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದರು.

    ಬಾಲಕನ ತಂದೆಯೂ ಜೀವನ ನಿರ್ವಹಣೆಗೆ ಸಾಕ್ಸ್ ಮಾರುತ್ತಾರೆ. ವಂಶ ಸಿಂಗ್‍ಗೆ ಮೂವರು ಸಹೋದರಿಯರು, ಒಬ್ಬ ಸಹೋದರ ಇದ್ದಾನೆ. ಬಾಲಕನಿಗೆ ಈ ಮಟ್ಟದ ಜನಪ್ರಿಯತೆ ಬರಲೂ ಒಂದು ಕಾರಣವಿದೆ. ಪ್ರಾಮಾಣಿಕತೆ ಇವನಿಗೆ ಇಂತಹ ಒಂದು ದೊಡ್ಡ ಮಟ್ಟದ ಸಾಹಯ ಸಿಗಲು ಕಾರಣವಾಗಿದೆ. ಸಾಕ್ಸ್ ಬೆಲೆಗಿಂತ 50 ರೂ. ಹೆಚ್ಚು ಕೊಡುತ್ತೇನೆಂದರೂ, ವಂಶ ಸಿಂಗ್ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಇದನ್ನು ಇಡೀ ರಾಜ್ಯವೇ ಗೌರವಿಸಿದೆ.