Tag: punith Rajkumar

  • ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನವಾಗಿ ಇಂದಿಗೆ ಎರಡು ತಿಂಗಳಾಗಿದೆ. ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಅವರಿಂದ ಸಾಕಷ್ಟು ಜನ ಪ್ರೇರಣೆಗೊಂಡು ನೇತ್ರದಾನ ನೋಂದಣಿಗೆ ಮುಂದಾಗುತ್ತಿದ್ದಾರೆ. ಪುನೀತ್ ಅವರ ತವರು ಜಿಲ್ಲೆ ಚಾಮರಾಜನಗರದಲ್ಲಿ ಎರಡು ತಿಂಗಳ ಅವಧಿಯಲ್ಲಿ 9,500ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.

    ಪುನೀತ್ ಅವರ ನೇತ್ರದಾನದಿಂದ ಸ್ಫೂರ್ತಿಗೊಂಡ ತವರು ಜಿಲ್ಲೆಯ ಜನತೆ ನೇತ್ರದಾನ ನೋಂದಣಿಗೆ ಮುಂದಾಗುತ್ತಿದ್ದು, ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 46ನೇ ವಯಸ್ಸಿನಲ್ಲಿ ಅಪ್ಪು ನಿಧನ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯಾದ್ಯಂತ 46 ಸಾವಿರ ಜನರನ್ನು ನೇತ್ರದಾನಕ್ಕೆ ನೊಂದಾಯಿಸುವ ಗುರಿ ಹೊಂದಿದೆ. ಇದನ್ನೂ ಓದಿ: ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ಚಾಮರಾಜನಗರ ಸರ್ಕಾರಿ ಮೆಡಿಕಲ್ ಆಸ್ಪತ್ರೆಯಲ್ಲಿ ನೇತ್ರ ಸಂಗ್ರಹಣ ಕೇಂದ್ರ ಸ್ಥಾಪನೆಗೆ ನಿರ್ಧಾರ ಮಾಡಲಾಗಿದ್ದು, ನೇತ್ರ ಸಂಗ್ರಹಣಾ ಕಾರ್ಯಕ್ಕೆ ವೈದ್ಯರು ಸೇರಿದಂತೆ ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. ಇದನ್ನೂ ಓದಿ:  ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು

  • ಅಪ್ಪಾಜಿಯ ಜೊತೆಗಿನ ಅಪರೂಪದ ನೆನಪು ಹಂಚಿಕೊಂಡ ಪವರ್ ಸ್ಟಾರ್

    ಅಪ್ಪಾಜಿಯ ಜೊತೆಗಿನ ಅಪರೂಪದ ನೆನಪು ಹಂಚಿಕೊಂಡ ಪವರ್ ಸ್ಟಾರ್

    ಬೆಂಗಳೂರು: ಡಾ. ರಾಜ್‍ಕುಮಾರ್ ಅವರ 13ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ತಂದೆಯ ಸಮಾಧಿಗೆ ನಮನ ಸಲ್ಲಿಸಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಪ್ಪಾಜಿ ನೆನಪನ್ನು ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತಿಗೆ ಅಪ್ಪಾಜಿ ಅವರ 13ನೇ ವರ್ಷದ ಪುಣ್ಯ ಸ್ಮರಣೆ. ನಮಗೂ ನಮ್ಮ ತಂದೆ ಒಳ್ಳೆಯ ಜೀವನ ಕೊಟ್ಟಿದ್ದಾರೆ. ಅಪ್ಪನ ಅಂಗಿ ಅಂದ್ರೆ ನನಗೆ ಬಿಳಿ ಬಣ್ಣ ನೆನಪಾಗುತ್ತದೆ. ಅವರು ವೈಟ್ ಬಿಟ್ಟು ಬೇರೆ ಬಣ್ಣದ ಬಟ್ಟೆ ಹಾಕಿದ್ದು ಕಡಿಮೆ. ನಾನು ಅಪ್ಪಾಜಿಗೆ ಬಟ್ಟೆ ಗಿಫ್ಟ್ ಮಾಡಿಲ್ಲ. ಟಿವಿ, ಶೂ, ಸೋಫಾ ಮಾತ್ರ ಗಿಫ್ಟ್ ಕೊಟ್ಟಿದ್ದೆ. ಅಲ್ಲದೆ ಜಾಸ್ತಿ ಬೆಲೆ ಇರುವ ವಸ್ತು ಕೊಟ್ಟರೆ ಅವರು ಬಳಸುತ್ತಿರಲಿಲ್ಲ. ಅದಕ್ಕೆ ಬೆಲೆ ಕಡಿಮೆ ಮಾಡಲು ಪ್ರೈಸ್ ಟ್ಯಾಗ್‍ನಲ್ಲಿ ಒಂದು ಝೀರೊ ಅಳಿಸಿ ಕೊಡುತ್ತಿದ್ದೆ ಎಂದು ತಂದೆಯ ನೆನಪನ್ನು ಹಂಚಿಕೊಂಡರು.

    ನಂತರ ರಾಜ್‍ಕುಮಾರ್ ಅವರ ಫಿಟ್‍ನೆಸ್ ಬಗ್ಗೆ ಮಾತನಾಡುತ್ತಾ, ಅಪ್ಪಾಜಿ ದಿನಕ್ಕೆ 40, 50 ಬಾರಿ ಮರದ ಡಂಬಲ್ಸ್ ನಲ್ಲಿ ಹೊಡೆಯುತ್ತಿದ್ದರು. ಅದೇ ನನಗೆ ಫಿಟ್‍ನೆಸ್ ಕಾಪಾಡಲು ಸ್ಫೂರ್ತಿ ಎಂದರು. ಬಳಿಕ ನಮ್ಮದು ವಜ್ರೇಶ್ವರಿ ಪ್ರೊಡಕ್ಷನ್ ಹೌಸ್ ಇದೆ. ಅದರಲ್ಲಿ ಸುಮಾರು 80ರಿಂದ 90 ಸಿನಿಮಾ ನಿರ್ಮಾಣವಾಗಿದೆ. ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಒಂದು ಹೊಸ ಹೆಸರು ಅಷ್ಟೇ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

    ಅಪ್ಪಾಜಿ ಬಯೋಪಿಕ್ ಮಾಡುವುದು ತುಂಬಾ ಕಷ್ಟ. ಸಾಧ್ಯವಾದ್ರೆ ಮುಂದೆ ನೊಡೋಣ. ಅಲ್ಲದೆ ಒಳ್ಳೆಯ ಚಿತ್ರ ಬಂದರೆ ಮೂರು ಜನ ಸಹೋದರರು ಒಟ್ಟಾಗಿ ಚಿತ್ರ ಮಾಡ್ತೀವಿ ಎಂದು ತಿಳಿಸಿದರು. ಆರಾಧ್ಯ ದೈವ ಮುತ್ತುರಾಜ ಬಳಗದಿಂದ ವೀಲ್ ಚೇರ್ ವಿತರಣೆ ಮಾಡಿರುವುದಕ್ಕೆ ಧನ್ಯವಾದಗಳು. ದೈಹಿಕ ಸಮರ್ಥರಲ್ಲದವರಿಗೆ ಇದು ಬಳಕೆ ಆಗಲಿದೆ ಎಂದು ಹೇಳಿದರು.

    ಅಮ್ಮನಿಗೆ ಮೊದಲು ನಮಸ್ಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ತಾಯಿ ಮೊದಲು ಅದೇ ದಾರಿಯಲ್ಲಿ ಬಂದೆ ಅದಕ್ಕೆ ಮೊದಲು ಅವರಿಗೆ ನಮಸ್ಕಾರ ಮಾಡಿದೆ ಅಷ್ಟೇ ಎಂದರು. ನಾನು ಕಪ್ಪು ಬಣ್ಣದ ಬಟ್ಟೆ ಜಾಸ್ತಿ ಹಾಕುತ್ತೇನೆ ಅಂತ ಅಪ್ಪ, ಅಮ್ಮ ಹೇಳ್ತಾ ಇದ್ದರು. ಆದ್ರೆ ಅವರಿಗೆ ಇಷ್ಟ ಅಂತಲೇ ಇಂದು ವೈಟ್ ಹಾಕಿದ್ದೇನೆ ಎಂದು ತಂದೆ ತಾಯಿಯನ್ನು ಪುನೀತ್ ನೆನಪಿಸಿಕೊಂಡರು.

  • ಎಂಎಲ್‍ಎ ಪ್ರಥಮ್ ಗೆ ಚಾಲೆಂಜಿಂಗ್ ಸ್ಟಾರ್ – ಪವರ್ ಸ್ಟಾರ್ ಸಾಥ್!

    ಎಂಎಲ್‍ಎ ಪ್ರಥಮ್ ಗೆ ಚಾಲೆಂಜಿಂಗ್ ಸ್ಟಾರ್ – ಪವರ್ ಸ್ಟಾರ್ ಸಾಥ್!

    ಬಿಗ್‍ಬಾಸ್ ವಿನ್ನರ್ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಈಗಾಗಲೇ ತೆರೆಗೆ ಬಂದಿದೆ. ಅದಾಗಲೇ ಪ್ರಥಮ್ ಮತ್ತೊಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ ಲಿಸ್ಟಿನಲ್ಲಿರೋ ಪ್ರಮುಖ ಚಿತ್ರ ಎಂಎಲ್‍ಎ.

    ಮಹಾ ಮಾತುಗಾರ, ಚುರುಕು ವ್ಯಕ್ತಿತ್ವದ ಪ್ರಥಮ್ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ದೇವೇಗೌಡ, ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರ ತನಕ ಎಲ್ಲರನ್ನೂ ಬಲೆಗೆ ಕೆಡವಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅಷ್ಟು ಸುಲಭಕ್ಕೆ ಯಾರ ಕೈ ಸಿಗದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರ ಮನಗೆಲ್ಲಬೇಕೆಂದರೆ, ವರ್ಷಾನುಗಟ್ಟಲೆ ವ್ರತವನ್ನೇ ಮಾಡಬೇಕು ಅನ್ನೋ ಮನಸ್ಥಿತಿ ಸದ್ಯಕ್ಕಿದೆ. ಆದರೆ ಚಾಲಾಕಿ ಪ್ರಥಮ್ ದರ್ಶನ್ ಅವರನ್ನೂ ಭೇಟಿಯಾಗಿ, ತನ್ನ ಹೆಗಲ ಮೇಲೆ ಅವರ ಕೈ ಇರಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಬಗ್ಗೆ ಬಿಗ್‍ಬಾಸ್ ಪ್ರಥಮ್ ನ ಮನದಾಳದ ಮಾತು

    ಇತ್ತೀಚೆಗೆ ದರ್ಶನ್ ಅವರ ಮೈಸೂರಿನಲ್ಲಿ ಯಜಮಾನ ಚಿತ್ರದ ಶೂಟಿಂಗಿನಲ್ಲಿ ತೊಡಗಿಕೊಂಡಿದ್ದಾಗ ಪ್ರಥಮ್ ರನ್ನು ಕರೆಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ತನ್ನ ಎಂಎಲ್‍ಎ ಸಿನಿಮಾದ ಆಡಿಯೋ ಬಿಡುಗಡೆ ನೀವೇ ಮಾಡಬೇಕು ಎನ್ನುವ ಪ್ರಥಮ್ ರ ಪ್ರೀತಿಯ ಅಹವಾಲಿಗೆ ಚಾಲೆಂಜಿಂಗ್ ಸ್ಟಾರ್ ಎಸ್ ಅಂದಿದ್ದಾರೆ. ‘ಓಕೆ ಬಿಡು ಚಿನ್ನಾ ನಿನ್ನ ಎಂಎಲ್‍ಎ ಸಿನಿಮಾ ಆಡಿಯೋ ರಿಲೀಸ್ ಗೆ ಬಂದೇ ಬರ್ತೀನಿ. ನಿನಗೆ ಒಳ್ಳೇದಾಗ್ಲಿ’ ಅಂತಾ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಅಂದ ಹಾಗೆ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ, ಮಂಜು ಮೌರ್ಯ ನಿರ್ದೇಶನದ ಎಂಎಲ್‍ಎ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಸಂಸ್ಥೆ ಖರೀದಿಸುವುದು ಪಕ್ಕಾ ಆಗಿದೆ. ಇದನ್ನೂ ಓದಿ: ಎಂಎಲ್‍ಎ ಆಗಲು ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್!

    ಈ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಹೆಚ್.ಎಂ. ರೇವಣ್ಣ ಪ್ರಥಮ್ ಎಂಎಲ್‍ಎ ಚಿತ್ರದಲ್ಲಿ ಪ್ರಮುಖವಾದೊಂದು ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ತಮ್ಮ ಭಾಗದ ಚಿತ್ರೀಕರಣವನ್ನು ರೇವಣ್ಣ ಅವರು ಮುಗಿಸಿಕೊಟ್ಟಿದ್ದರು. ಒಂದೊಳ್ಳೆ ಸಂದೇಶವನ್ನು, ಆಶಯವನ್ನು ಯುವ ಜನಾಂಗಕ್ಕೆ ರವಾನಿಸೋ ಸದುದ್ದೇಶ ಹೊಂದಿರೋ ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡು ರೇವಣ್ಣನವರು ಮುಖ್ಯಮಂತ್ರಿಯಾಗಿ ನಟಿಸಲು ಒಪ್ಪಿಕೊಂಡಿದ್ದಲ್ಲದೆ, ಚುನಾವಣೆ ಬಂದಿರೋದರಿಂದ ಕೂರಲು ನಿಲ್ಲಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರೋ ರೇವಣ್ಣ ಈ ಚಿತ್ರಕ್ಕಾಗಿ ನಾಲ್ಕು ದಿನಗಳ ಡೇಟ್ ಕೊಟ್ಟಿದ್ದರು. ಈಗ ದರ್ಶನ್ ಮಾತ್ರವಲ್ಲದೆ ಆಡಿಯೋ ಹಕ್ಕು ಪಡೆಯುವ ಮೂಲಕ ಪುನೀತ್ ರಾಜ್ ಕುಮಾರ್ ಕೂಡಾ ಪ್ರಥಮ್ ಕೈ ಹಿಡಿದಿದ್ದಾರೆ..! ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

  • ಅಮ್ಮನನ್ನು ನೆನೆದು ಭಾವುಕರಾದ್ರು ಪುನೀತ್ ರಾಜ್ ಕುಮಾರ್

    ಅಮ್ಮನನ್ನು ನೆನೆದು ಭಾವುಕರಾದ್ರು ಪುನೀತ್ ರಾಜ್ ಕುಮಾರ್

    ಬೆಂಗಳೂರು: ಇಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ಅವರನನ್ನು ನೆನೆದು ಬೇಸರ ವ್ಯಕ್ತಪಡಿಸಿದ್ರು. ಅಭಿಮಾನಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ತಿರೋದಕ್ಕೆ ಖುಷಿಯಾಗ್ತಿದೆ. ಆದ್ರೆ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಜಾರಿನ ಸಂಗಂತಿಯಾಗಿದೆ ಅಂದ್ರು. ಇದನ್ನೂ ಓದಿ: ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅದು ಅವರ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನ. ಆದ್ರೆ ಈ ಬಾರಿ ನಾನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಎರಡು ದಿನ ನಾನು ಅಭಿಮಾನಿಗಳಿಗೋಸ್ಕರ ಅಂತಾನೇ ಇಟ್ಟಿದ್ದೇನೆ. ಈ ಬಾರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಬಾರಿ ಅವರು ನಮ್ಮ ಜೊತೆ ಇಲ್ಲ. ಜೀವನದಲ್ಲಿ ಏನೇ ಸಾಧಿಸಿದ್ರೂ, ಅದಕ್ಕೆ ಅವರೇ ಕಾರಣ. ಹೀಗಾಗಿ ತುಂಬಾ ವಿಚಾರಗಳಲ್ಲಿ ಅಪ್ಪ-ಅಮ್ಮನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ-ಅಮ್ಮ ನಮ್ಮ ಜೊತೆ ಇಲ್ಲ ಆದ್ರೆ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿದ್ದಾರೆ. ಹೀಗಾಗಿ ಅವರನ್ನು ನಿರಾಸೆ ಮಾಡಕ್ಕಾಗಲ್ಲ ಅಂತ ಹೇಳಿದ್ರು.

    ರಾಜ್ ಕುಮಾರ್ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಅವರ ಮಗನಾಗಿರುವುದು ನನ್ನ ಪುಣ್ಯ. ಆ ಪ್ರೀತಿ, ವಿಶ್ವಾಸ, ಅಭಿಮಾನ ನಮ್ಮ ಕುಟುಂಬದಲ್ಲಿ ಎಲ್ಲರೂ ನೋಡುತ್ತಿದ್ದಾರೆ. ಅದಕ್ಕೆ ನಾವು ಅವರಿಗೆ ಯಾವತ್ತೂ ಚಿರಋಣಿ ಅಂದ್ರು.

    ಅಭಿಮಾನಿಗಳು ರಾಜರತ್ಸೋತ್ಸವ ಹೆಸರಲ್ಲಿ ಅದ್ಧೂರಿಯಾಗಿಯೇ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನಟಸಾರ್ವಭೌಮ ಅಂತ ಸಿನಿಮಾಗೆ ಹೆಸರಿಟ್ಟಿರೋದಕ್ಕೆ ಭಯ ಆಗ್ತಿದೆ. ಯಾಕಂದ್ರೆ ಈ ಹಿಂದೆ ರಾಜಕುಮಾರ ಅಂತ ಸಿನಿಮಾಗೆ ಹೆಸರಿಟ್ಟಾಗಲೂ ಭಯವಾಗಿತ್ತು ಅಂತ ಹೇಳಿದ್ರು. ಇದನ್ನೂ ಓದಿ: ದೊಡ್ಮನೆ ರಾಜಕುಮಾರನಿಗೆ ಹುಟ್ಟು ಹಬ್ಬದ ಸಂಭ್ರಮ- ನಟಸಾರ್ವಭೌಮ ತಂಡದಿಂದ ಫಸ್ಟ್ ಟೀಸರ್ ಗಿಫ್ಟ್

    ಇದೇ ವೇಳೆ ತಮ್ಮ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ ಅವರು, ಹೇರ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿರೋದಕ್ಕೆ ಖುಷಿಯಿದೆ. ಜುಲೈಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ ಅಂತ ತಿಳಿಸಿದ್ರು.

  • ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಬೆಂಗಳೂರು: ಸ್ಯಾಂಡಲ್ ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 43ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭಾಶಯ ಕೋರಿದ್ದಾರೆ.

    ಯಾರಿ ನಂಬರ್ ಒನ್ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದ ಶಿವಣ್ಣ ಅವರು ಅಪ್ಪು ಮನೆಗೆ ಬಂದು ಶುಭಾಶಯ ತಿಳಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಚಿಕ್ಕ ಮಗು ತರ. ಅವನನ್ನು ನಾನು ನನ್ನ ಮಗ ಅಂದ್ರು ತಪ್ಪಾಗಲ್ಲ. ಯಾಕಂದ್ರೆ ನನಗೆ 13 ವರ್ಷವಾದಾಗ ಅಪ್ಪು ಹುಟ್ಟಿದ್ದಾನೆ. ಹೀಗಾಗಿ ಅವನನ್ನ ಚಿಕ್ಕ ಮಗುವಿನಿಂದಲೂ ನೋಡ್ತಾ ಇದ್ದೀನಿ. ಎತ್ತಿ ಆಡಿಸಿದ್ದೀನಿ. ಒಟ್ಟಿನಲ್ಲಿ ಇಂದು ಹುಟ್ಟುಹಬ್ಬ ಅಂದಾಗ ಖುಷಿಯಾಗುತ್ತದೆ ಅಂದ್ರು.

    ಅಪ್ಪುಗೆ ಇಷ್ಟು ಬೇಗ 43 ವರ್ಷ ವಯಸ್ಸಾಯಿತಾ ಅಂತ ಆಶ್ಚರ್ಯವಾಗುತ್ತಿದೆ. ಹೀಗಾಗಿ ಅವನಿಗೆ ಇಷ್ಟೊಂದು ವಯಸ್ಸಾಗಿದೆ ಅಂತ ನನಗೆ ಅನಿಸೋದೇ ಇಲ್ಲ. ಇನ್ನು 20-22 ವರ್ಷದ ಹುಡುಗನ ತರ ಕಾಣ್ತಾನೆ. ಒಟ್ಟಿನಲ್ಲಿ ಇಂದು ಯುವಕರು, ಮಕ್ಕಳು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಅವರ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುವುದನ್ನು ನೋಡಿದ್ರೆ ಹೆಮ್ಮೆ ಹಾಗೂ ಖುಷಿ ಅನಿಸುತ್ತಿದೆ ಅಂತ ಹೇಳಿದ್ರು.

    ಅಪ್ಪು ತುಂಬಾ ಶ್ರಮ ಜೀವಿ. ಹೀಗಾಗಿ ಅವನ ಶ್ರಮ ಇನ್ನು ಮುಂದೆಯೂ ಹೀಗೆ ಇರುತ್ತದೆ. ಜೀವನದಲ್ಲಿ ತುಂಬಾನೆ ಕಷ್ಟ ಪಡುತ್ತಾನೆ. ಹಾಗೂ ಆತನಿಗೆ ಏನ್ ಮಾಡಬೇಕು ಎಂಬುದು ಗೊತ್ತು. ಬುದ್ಧಿವಂತ ಹಾಗೂ ಉತ್ತಮ ಮನುಷ್ಯ ಅಂತ ತಮ್ಮನ ಬಗ್ಗೆ ಅಣ್ಣ ಹೆಮ್ಮೆ ವ್ಯಕ್ತಪಡಿಸಿದ್ರು.

     

  • 55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನವರಸನಾಯಕ ಜಗ್ಗೇಶ್

    55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನವರಸನಾಯಕ ಜಗ್ಗೇಶ್

    ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನ ಇಬ್ಬರು ನಟರಿಗೆ ಹುಟ್ಟುಹಬ್ಬದ ಸಂಭ್ರಮ. ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಂಡ್ರೆ, ಇತ್ತ ಜಗ್ಗೇಶ್ ದೇವಸ್ಥಾನಕ್ಕೆ ತೆರಳಿದ್ದಾರೆ.

    ಹೌದು. ಜಗ್ಗೇಶ್ ಅವರು ತಮ್ಮ 55 ಹುಟ್ಟುಹಬ್ಬದ ನಿಮಿತ್ತ ಪತ್ನಿ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವಚಂಡಿಕಾ ಯಾಗವನ್ನು ಕೈಗೊಂಡಿದ್ದಾರೆ.

    ತಮ್ಮ ಹುಟ್ಟುಹಬ್ಬದ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ನನಗೆ ಜನ್ಮ ಕೊಟ್ಟ ನನ್ನ ದೇವರಿಗೆ ಶರಣು ಶರಣಾರ್ಥಿ.. ತಿಳಿದೋ ತಿಳಿಯದೆಯೋ ನಾನು ಮಾಡಿದ ಸರ್ವ ಅಪರಾಧ ಕ್ಷಮಿಸಿ ಹರಸಿ. ಸಾಧ್ಯವಾದಷ್ಟು ನಿಮ್ಮ ಗೌರವ ಉಳಿಸಿದ ಮಗನಾಗಿ ಗಂಡನಾಗಿ, ತಂದೆಯಾಗಿ, ತಾತನಾಗಿ ಸಮಾಜಕ್ಕೆ ತಲೆಬಾಗಿ ಗೌರವದಿಂದ ಬಾಳಿ ಬದುಕಿ ಅಸ್ತಮದ ಕಡೆಗೆ ನಡೆದಿದೆ ನಿಮ್ಮ ಮಗನ ಬದುಕು. ಇಂದಿಗೆ ನಾನು ಮಾಗುತ್ತಿರುವ 55ರ ಮನುಜ. ಈ ಸಮಯದಲ್ಲಿ ಹರಸಿದ ಆತ್ಮಗಳಿಗೆ ಶರಣು ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೊಡ್ಮನೆ ರಾಜಕುಮಾರನಿಗೆ ಹುಟ್ಟು ಹಬ್ಬದ ಸಂಭ್ರಮ- ನಟಸಾರ್ವಭೌಮ ತಂಡದಿಂದ ಫಸ್ಟ್ ಟೀಸರ್ ಗಿಫ್ಟ್

    ಪತ್ನಿ ಪ್ರಮೀಳಾ ಜಗ್ಗೇಶ್ ಅವರು ಕೂಡ ಟ್ವೀಟ್ ಮಾಡಿ, ಜಗ್ಗೇಶ್ ಅವರು ತಮ್ಮ ಮೊಮ್ಮಗನ ಜೊತೆ ಇರುವ ಫೋಟೋದೊಂದಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇಬ್ಬರು ದಿಗ್ಗಜರ ಹುಟ್ಟುಹಬ್ಬಕ್ಕೆ ಶೂಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  • ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವಕ ವಿದ್ವತ್ ನನ್ನು ನಟ ಪುನೀತ್ ರಾಜ್ ಕುಮಾರ್ ಇಂದು ಭೇಟಿ ಮಾಡಿದ್ದಾರೆ.

    ನಗರದ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ನಟ ಪುನೀತ್ ಅವರು ವಿದ್ವತ್ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಅವರು ಕಣ್ಣೀರು ಹಾಕಿದ್ದಾರೆ. ಹಲ್ಲೆಗೊಳಗಾದ ವಿದ್ವತ್, ರಾಘವೇಂದ್ರ ರಾಜ್‍ಕುಮಾರ್ ಪುತ್ರನ ಸ್ನೇಹಿತರಾಗಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, ಹಲ್ಲೆಗೊಳಗಾದ ವಿದ್ವತ್ ಫ್ಯಾಮಿಲಿ ಫ್ರೆಂಡ್. ಆತನನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೀನಿ. ಆತನು ನನಗೆ ಪರಿಚಯ. ಸದ್ಯ ಆತ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾನೆ. ವಿದ್ವತ್ ನನ್ನ ತಮ್ಮನ ಹಾಗೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ತಪ್ಪಿತಸ್ಥಿರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ಇದನ್ನೂ ಓದಿ: ನಲಪಾಡ್ ಗೆ ಋಣ ಸಂದಾಯ – ಕಬ್ಬನ್ ಪಾರ್ಕ್ ಪೊಲೀಸರ ಮತ್ತೊಂದು ಅವಾಂತರ ಬಟಾಬಯಲು!

    ಸದ್ಯ ವಿದ್ವತ್ ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

     

  • ಅಭಿಮಾನಿ ಮನೆಗೆ ತೆರಳಿ ಸರಳತೆ ಮೆರೆದ ಸ್ಯಾಂಡಲ್ ವುಡ್ ಪವರ್ ಸ್ಟಾರ್

    ಅಭಿಮಾನಿ ಮನೆಗೆ ತೆರಳಿ ಸರಳತೆ ಮೆರೆದ ಸ್ಯಾಂಡಲ್ ವುಡ್ ಪವರ್ ಸ್ಟಾರ್

    ಬಳ್ಳಾರಿ: ಸ್ಯಾಂಡಲ್ ವುಡ್ ನಟ ಪುನಿತ್ ರಾಜ್‍ಕುಮಾರ್ ಗೆ ಅಭಿಮಾನಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಪವರ್ ಸ್ಟಾರ್ ಪುನೀತ್ ಅವರನ್ನು ಅಭಿಮಾನಿಗಳು ಅತಿ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಹೀಗೆ ತಮ್ಮನ್ನು ಪ್ರೀತಿ ಮಾಡೋ ಅಭಿಮಾನಿಯೊಬ್ಬರ ಮನೆಗೆ ಪುನೀತ್ ರಾಜ್‍ಕುಮಾರ್ ಹೋಗಿ ಬಂದಿದ್ದಾರೆ.

    ರವಿವಾರ ಬಳ್ಳಾರಿಯಲ್ಲಿ ನಿರ್ದೇಶಕ ಸಂತೋಷ ಆನಂದರಾಮ್ ನಿಶ್ಚಿತಾರ್ಥ ಸಮಾರಂಭಕ್ಕೆ ಪುನೀತ್ ಆಗಮಿಸಿದ್ದರು. ಇದೇ ವೇಳೆ ಅವರು ಹೊಸಪೇಟೆಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದರು. ಕಟ್ಟಾ ಅಭಿಮಾನಿಯಾಗಿರುವ ಕಿಚಡಿ ವಿಶ್ವ ಎಂಬವರ ಮನೆಗೆ ತೆರಳಿದ ಪುನೀತ್ ರಾಜ್‍ಕುಮಾರ್ ಅವರನ್ನು ಅಭಿಮಾನಿ ಕುಟುಂಬದವರೆಲ್ಲಾ ಆರತಿ ಬೆಳಗಿ ಸ್ವಾಗತಿಸಿ, ಸನ್ಮಾನಿಸಿ, ಗೌರವಿಸಿದ್ದಾರೆ.

    ಸಹೋದರಿ ರೇಣುಕಾರ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಈ ಹಿಂದೆ ವಿಶ್ವ ಕುಟುಂಬ ಆಹ್ವಾನವನ್ನು ನೀಡಿತ್ತು. ಅದರೆ ಅಂದು ಪಾರ್ವತಮ್ಮ ರಾಜಕುಮಾರ್ ಅವರಿಗೆ ಅನಾರೋಗ್ಯ ಇದ್ದ ಹಿನ್ನಲೆಯಲ್ಲಿ ಪುನೀತ್ ರಾಜ್‍ಕುಮಾರ್ ಮದುವೆ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿಯೇ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಹೊಸಪೇಟೆಗೆ ಬಂದಾಗ ವಿಶ್ವ ಅವರು ಅಂದು ನೀಡಿದ್ದ ಆಹ್ವಾನವನ್ನು ಮರೆಯದೇ ಅವರ ನಿವಾಸಕ್ಕೆ ಭೇಟಿ ನೀಡಿ ಸರಳತೆ ಮೆರೆದಿದ್ದಾರೆ.

    ಇದನ್ನೂ ಓದಿ: `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

  • ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

    ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

    ಕೊಪ್ಪಳ: ಮೊಬೈಲ್, ಕಂಪ್ಯೂಟರ್ ಬಂದ ಮೇಲೆ ಮಕ್ಕಳ ಸಾಹಿತ್ಯ ನಶಿಸಿ ಹೋಗ್ತಿದೆ. ಆದ್ರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಗ್ರಾಮದ ಶಿಕ್ಷಕರು, ಜನಪ್ರಿಯ ಗೀತೆಗೆ ಸಾಹಿತ್ಯ ಬರೆದಿರೋ ಹಾಡು ಈಗ ಎಲ್ಲಾ ಕಡೆ ಕೇಳಿ ಬರ್ತಿದೆ.

    ಹೌದು. ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಅನ್ನೋ ಹಾಡಿಗೆ “ಬಾರೋ ಬೇಗ ನೀನು.. ಶಾಲೆ ಸೇರು ನೀನು.. ನನ್ನ ರಾಜಕುಮಾರ” ಅಂತ ಹೊಸದಾಗಿ ಸಾಹಿತ್ಯ ಬರೆದು ಮಕ್ಕಳನ್ನ ಶಾಲೆಗೆ ಬರುವಂತೆ ಮಾಡಿದ್ದಾರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಶಾಲೆಯ ಶಿಕ್ಷಕ ಸುರೇಶ್ ಕಂಬಳಿ. ಈ ಹಾಡಿಗೆ ದನಿಕೊಟ್ಟವರು ಪಕ್ಕದ ಬರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರೇವಣ್ಣ ಕೋಳೂರು. ಇನ್ನು ಮೇಷ್ಟ್ರ ಈ ಸಾಹಿತ್ಯ-ಗಾಯನಕ್ಕೆ ಮನಸೋತಿರುವ ನಟ ಪುನೀತ್ ಅವರೇ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಇದನ್ನ ಶೇರ್ ಮಾಡಿದ್ದಾರೆ.

    ಈ ಹಾಡನ್ನ ಪ್ರತಿದಿನ ಪ್ರಾರ್ಥನೆಯ ಹಾಡಿನಂತೆ ಹಾಡಿಸಲಾಗುತ್ತಿದೆ. ಮಕ್ಕಳೂ ಸಹ ಖುಷಿಯಿಂದ ಹಾಡುತ್ತಿದ್ದಾರೆ. ಈ ಹಾಡಿನ ಜೊತೆಗೆ ಇತರೆ ಹಳೇ ಹಾಡಿಗೆ ಹೊಸ ಸಾಹಿತ್ಯ ಬರೆದು ಹತ್ತು ಹಾಡುಗಳನ್ನ ಒಳಗೊಂಡ ಸಿಡಿಯೊಂದನ್ನು ಹೊರತಂದಿದ್ದಾರೆ.

    ಒಟ್ಟಿನಲ್ಲಿ ಮಕ್ಕಳನ್ನ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರ ಈ ಪ್ರಯತ್ನ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

  • ಹ್ಯಾಟ್ರಿಕ್ ಹೀರೋಗೆ ಇಂದು 55ರ ಸಂಭ್ರಮ: ಶಿವಣ್ಣನ ಬರ್ತ್ ಡೇಗೆ ಅಪ್ಪು ಕೊಟ್ಟ ಗಿಫ್ಟ್ ಏನು ಗೊತ್ತೆ?

    ಹ್ಯಾಟ್ರಿಕ್ ಹೀರೋಗೆ ಇಂದು 55ರ ಸಂಭ್ರಮ: ಶಿವಣ್ಣನ ಬರ್ತ್ ಡೇಗೆ ಅಪ್ಪು ಕೊಟ್ಟ ಗಿಫ್ಟ್ ಏನು ಗೊತ್ತೆ?

    ಬೆಂಗಳೂರು: ಸ್ಯಾಂಡಲ್ ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಂದು 55 ನೇ ಹುಟ್ಟು ಹಬ್ಬದ ಸಂಭ್ರಮ.

    ಶಿವರಾಜ್ ಕುಮಾರ್, ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು.

    ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮೊದಲಿಗೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಷನ್ ಮಾಡಿಕೊಂಡ್ರು. ಶಿವಣ್ಣನ ಹುಟ್ಟು ಹಬ್ಬಕ್ಕೆ ಪುನೀತ್ ರಾಜ್ ಕುಮಾರ್ ಮೂರು ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲೂ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.