Tag: punith

  • ಕೊನೆಗೂ `ಅಮ್ಮ’ನ ಈ ಆಸೆ ಈಡೇರಲಿಲ್ಲ- ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಕೊನೆಗೂ `ಅಮ್ಮ’ನ ಈ ಆಸೆ ಈಡೇರಲಿಲ್ಲ- ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಬೆಂಗಳೂರು: ತನ್ನ ಮೂರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆಂಬ ಆಸೆ ಡಾ. ಪಾರ್ವತಮ್ಮ ರಾಜ್ ಕುಮಾರ್ ಅವರಿಗಿತ್ತು. ಆದ್ರೆ ಇಂದು ಅವರು ವಿಧಿವಶರಾಗಿದ್ದು, ಅವರ ಆಸೆ ಈಡೇರಲೇ ಇಲ್ಲ ಅಂತಾ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಅವರ ಮೂವರು ಮಕ್ಕಳಾದ, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇವರುಗಳನ್ನು ಒಂದೇ ಪೌರಾಣಿಕ ಸಿನಿಮಾದಲ್ಲಿ ನೋಡೋ ದೊಡ್ದ ಆಸೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಲ್ಲಿರುವಾಗ ಬೇಗ ಗುಣಮುಖರಾಗಿ ಬನ್ನಿ ಮಾತನಾಡೋಣ ಅಂತ ಹೇಳಿದ್ದೆ. ಈ ವೇಳೆ ಅವರು ಕಣ್ಣಲ್ಲೇ ಸನ್ನೆ ಮಾಡಿದ್ರು. ಆದ್ರೆ ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ಈ ಮೂಲಕ ಮೂವರು ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡೋ ಅಮ್ಮನ ಆಸೆ ಈಡೇರಲಿಲ್ಲ ಅಂತಾ ಶ್ರೀನಿವಾಸ ಮೂರ್ತಿ ಗದ್ಗದಿತರಾದ್ರು.

    ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ಪಾರ್ವತಮ್ಮ ಅವರು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.