Tag: Puneeth Fans

  • ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಕಿಡ್ನಿ ನಿಷ್ಕ್ರಿಯಗೊಂಡಿದ್ದ ಬಾಲಕಿಗೆ ಮರುಜೀವ ನೀಡಿದ್ದ ಅಪ್ಪು

    ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಕಿಡ್ನಿ ನಿಷ್ಕ್ರಿಯಗೊಂಡಿದ್ದ ಬಾಲಕಿಗೆ ಮರುಜೀವ ನೀಡಿದ್ದ ಅಪ್ಪು

    ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿರನಿದ್ರೆಗೆ ಜಾರಿದ್ದಾರೆ. ಸದಾ ಸಹಾಯದ ಹಸ್ತ ಚಾಚುವ ಗುಣವನ್ನು ಹೊಂದಿದ್ದ ಪುನೀತ್ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ದಾವಣಗೆರೆ ಮೂಲದ ಬಾಲಕಿಯ ಶಸ್ತ್ರಚಿಕಿತ್ಸೆಗೆ ಆಸರೆಯಾಗಿ ಆರ್ಥಿಕ ಸಹಾಯ ಮಾಡಿ ಮರು ಜೀವ ನೀಡಿದ್ದರು.

    ಚನ್ನಗಿರಿಯ ಕುಮಾರ್ ಹಾಗೂ ಮಂಜುಳ ಎನ್ನುವರ ಪುತ್ರಿ ಪ್ರೀತಿ ಅಪ್ಪಟ ಅಪ್ಪು ಅಭಿಮಾನಿಯಾಗಿದ್ದಳು. 2017 ರಲ್ಲಿ ಬಾಲಕಿ ಪ್ರೀತಿಗೆ ಎರಡು ಕಿಡ್ನಿಗಳು ನಿಷ್ಕ್ರಿಯಗೊಂಡಿದ್ದವು, ಆಗ ಬಾಲಕಿ ವೀಡಿಯೋ ಮೂಲಕ ಸಾಯುವುದಕ್ಕೂ ಮೊದಲು ಪುನೀತ್ ರಾಜ್ ಕುಮಾರ್‍ರನ್ನು ನೋಡಬೇಕು ಎಂದು ಅಂಬಲಿಸುತ್ತಿದ್ದು, ಅದನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿಯನ್ನು ನೋಡಿದ ಪುನೀತ್ ರಾಜ್‍ಕುಮಾರ್ ಬಾಲಕಿ ಪ್ರೀತಿಯ ಆಸೆಯನ್ನು ಪೂರೈಸಿದ್ದರು. ಬಾಲಕಿ ಪ್ರೀತಿಯನ್ನು ಭೇಟಿಯಾಗಿ ಆಪರೇಷನ್ ಗೆ ಬೇಕಾಗುವ ಆರ್ಥಿಕ ಸಹಾಯ ಮಾಡಿದ್ದ ಪುನೀತ್ 15 ಲಕ್ಷ ರೂ ಶಸ್ತ್ರಚಿಕಿತ್ಸೆಗೆ ನೀಡಿ ಸಹಾಯ ಹಸ್ತ ಚಾಚಿದ್ದರು. ಅಲ್ಲದೆ ಆ ಬಾಲಕಿಗೆ ಒಂದು ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದು, ಯಾವುದೇ ಸಮಸ್ಯೆ ಆದರು ನನ್ನ ಬಳಿ ಬಾ ಎಂದು ಬಾಲಕಿಗೆ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರೀತಿ, ಅಂದು ಭೇಟಿ ನೀಡಿ ಉಡುಗೊರೆಯಾಗಿ ನೀಡಿದ್ದ ಬ್ಯಾಗ್ ಹಿಡಿದು ಅಪ್ಪು ಅಗಲಿಕೆಗೆ ಕಣ್ಣಿರಿಟ್ಟಳು. ಅಪ್ಪು ಸರ್ ಅಗಲಿಕೆ ನಮಗೆ ನಂಬಲಾಗುತ್ತಿಲ್ಲ. ಆದರೆ ಈಗ ನಮ್ಮನ್ನು ಅಗಲಿರುವುದು ಮಾತ್ರ ನೋವು ತಡೆಯಲಾಗುತ್ತಿಲ್ಲ ಎಂದು ದುಖಃದಿಂದ ಉತ್ತರಿಸಿದಳು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

  • ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    ಚಿಕ್ಕಮಗಳೂರು: ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.

    ಭರತ್, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಯವರ ಚಿಕ್ಕಪ್ಪನ ಮಗ. ಇಂದು ತಾಲೂಕಿನ ಭಾಗಮನೆ ಎಸ್ಟೇನ್‍ನಲ್ಲಿ ಮಾತನಾಡಿದ ಅವರು, ಪುನೀತ್‍ಗೆ ಕಾಫಿ ಅಂದರೆ ತುಂಬಾ ಇಷ್ಟ. ಜೊತೆಗೆ ಚಿಕ್ಕಮಗಳೂರಿನ ನೇಚರನ್ನು ಅವರು ತುಂಬಾ ಇಷ್ಟಪಡುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗೆಲ್ಲಾ ನನ್ನ ಚಿಕ್ಕ ವಯಸ್ಸಲ್ಲಿ ಮಾಡಿದ ಚಿತ್ರದ ಸ್ಥಳಕ್ಕೆ ಹೋಗಬೇಕು ಎಂದು ತುಂಬಾ ಹೇಳುತ್ತಿದ್ದರು. ಅವರಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ತುಂಬಾ ಇಷ್ಟವಿತ್ತು. ಪುನೀತ್ ತುಂಬಾ ಡೌನ್ ಟು ಅರ್ಥ್ ವ್ಯಕ್ತಿ. ಬಹಳ ಸಿಂಪಲ್. ಅವರ ಸಿಂಪ್ಲಿಸಿಟಿ ಯಾರಿಗೂ ಬರುವುದಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಮೇರು ವ್ಯಕ್ತಿತ್ವ ಅವರದ್ದು. ದಾನ-ಧರ್ಮ ಮಾಡುವುದು ಅವರಿಗೆ ತುಂಬಾ ಇಷ್ಟ. ತುಂಬಾ ಮಾಡಿದ್ದಾರೆ. ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದು ಅವರೊಂದಿಗಿನ ಒಡನಾಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಜನ ಮೆಚ್ಚುವ ಸಿನಿಮಾ ಹಾಗೂ ಯುವಜನತೆಗೆ ಪ್ರೇರೇಪಣೆ ನೀಡುವಂತಹಾ ಸಿನಿಮಾ ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತು. ಅವರು ಕಾಫಿಯನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ನಮ್ಮನ್ನು ಕಂಡಾಗ ಜೊತೆ ಕೂತು ಅವರು ಮಾತನಾಡುತ್ತಿದ್ದ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಅವರ ಸಂಬಂಧ ಬಹಳ ಆತ್ಮಿಯವಾಗಿತ್ತು. ಅವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಬೆಂಗಳೂರಿಗೆ ಹೋದಾಗ ಸಿಗುತ್ತಿದ್ದರು. ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು. ಸದಾ ಖುಷಿಯಿಂದ ಇರುತ್ತಿದ್ದರು. ಬೆಟ್ಟದ ಹೂ ಚಿತ್ರ ಮಾಡಿದ ನೆನಪನ್ನು ಆಗಾಗ ಮೆಲುಕು ಹಾಕುತ್ತಿದ್ದರು ಎಂದರು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

    ಮಲೆನಾಡ ಊಟ ಅಂದರೆ ಅವರಿಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಮಲೆನಾಡ ಊಟ ಮಾಡಿಕೊಂಡು ಎಲ್ಲರ ಜೊತೆಯೂ ಆತ್ಮೀಯತೆಯಿಂದ ಇರುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗ ನನ್ನನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಚಿಕ್ಕಮಗಳೂರಿಗೆ ಬರುವಾಗಲೂ ಬರುತ್ತಿದ್ದೇನೆ ಎಂದು ಹೇಳಿ ಬರುತ್ತಿದ್ದರು. ಮೊನ್ನೆ ಕೂಡ ಫೋನ್ ಮಾಡಿದ್ದರು. ಆದರೆ, ಇಂದು ಟಿವಿ ನೋಡಿ ಶಾಕ್ ಆಗಿದೆ. ನಾಳೆ ಬೆಂಗಳೂರಿಗೆ ಹೋಗಿ ಅವರ ಅಂತಿಮ ದರ್ಶನ ಪಡೆಯಲಿದ್ದೇನೆ ಎಂದು ಭರತ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊಗಳಿದರೆ ಮಾತು ಬೇರೆ ಟಾಪಿಕ್‌ಗೆ ಹೋಗುತ್ತಿತ್ತು, ಮೂಡಾಫ್ ಆಗಿದ್ದನ್ನು ನೋಡಿಲ್ಲ 

  • ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    -ಈಡೇರಲೇ ಇಲ್ಲ ಅಪ್ಪು ಆಸೆ

    ರಾಯಚೂರು: ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಹಿನ್ನೆಲೆ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ, ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಪುನೀತ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ. ಡಾ.ರಾಜ್‍ಕುಮಾರ್ ಕುಟುಂಬ ರಾಯರ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ ಮಠಕ್ಕೆ ತಪ್ಪದೇ ಬಂದು ಹೋಗುತ್ತಾರೆ. ಮೂರು ಜನ ಅಣ್ಣತಮ್ಮಂದಿರು ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದಾಗಿ ಪುನೀತ್ ಹೇಳಿದ್ದರು. ರಾಯರ ಆರಾಧನ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತೇವೆ ಎಂದಿದ್ದರು ಆದರೆ ಅದು ಈಡೇರಲೇ ಇಲ್ಲ ಎಂದರು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

    ಪುನೀತ್ ರಾಜ್‍ಕುಮಾರ್ ಚಿಕ್ಕವರಿದ್ದಾಗಿನಿಂದಲೂ ವಾರ ಬಂತಮ್ಮ ಗುರುವಾರ ಬಂತಮ್ಮ ಹಾಡನ್ನು ಹೇಳುತ್ತಿದ್ದರು. ಅಪ್ಪು ಅಗಲಿಕೆಯ ನೋವು ಭರಿಸುವಂತ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದರು.

    ರಾಯಚೂರಿನಲ್ಲಿ ಅಪ್ಪು ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶ್ರದ್ಧಾಂಜಲಿ ಅರ್ಪಿಸಿದರು. ನಗರದ ಅಂಬೇಡ್ಕರ್ ವೃತ್ತ ಹಾಗೂ ಗಾಂಧಿ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು