Tag: Puneeth. Fan

  • ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

    ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

    ಚಾಮರಾಜನಗರ: ಜಮೀನಿನಿಂದ ಹಿಂತಿರುಗಿ ಬಂದ ಅಪ್ಪು ಅಭಿಮಾನಿಯೋರ್ವ ಪುನೀತ್ ರಾಜ್‍ಕುಮಾರ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ನಡೆದಿದೆ.

    ಮುನಿಯಪ್ಪ(28) ಮೃತ ಅಪ್ಪು ಅಭಿಮಾನಿ. ಜಮೀನಿನಿಂದ ಊಟಕ್ಕೆ ಬಂದಿದ್ದ ಈತ ಟಿವಿ ಹಾಕಿದ ವೇಳೆ ಪುನೀತ್ ಸಾವಿನ ಸುದ್ದಿ ಪ್ರಸಾರವಾಗಿದೆ. ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಿದ್ದಂತೆಯೇ ಮುನಿಯಪ್ಪ ಕುಸಿದು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ. ಇದನ್ನೂ ಓದಿ: ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

    ಈ ಸಂಬಂಧ ಸ್ಥಳೀಯರು ಮೃತ ಮುನಿಯಪ್ಪ ಅಪ್ಪಟ ಪುನೀತ್ ರಾಜ್‍ಕುಮಾರ್ ಅಭಿಮಾನಿಯಾಗಿದ್ದು, ಅವರ ಎಲ್ಲಾ ಚಿತ್ರವನ್ನು ಎರಡ್ಮೂರು ಬಾರಿ ನೋಡುತ್ತಿದ್ದ. ಇಲ್ಲಿನ ಚಿತ್ರಮಂದಿರಗಳು ಚೆನ್ನಾಗಿರುವುದಿಲ್ಲವೆಂದು ಬೆಂಗಳೂರಿಗೆ ತೆರಳಿ ಅಲ್ಲೇ ಅಪ್ಪು ಚಿತ್ರಗಳನ್ನು ಎರಡು ಮೂರು ಶೋ ಗಳನ್ನು ನೋಡಿ ಬರುತ್ತಿದ್ದ. ದಿಢೀರ್ ಮೃತಪಟ್ಟ ವಿಚಾರ ತಿಳಿದು ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

  • ಪುಟ್ಟ ಬಾಲಕನ ಆಸೆ ಈಡೇರಿಸಿ ಆಸ್ಪತ್ರೆ ಖರ್ಚು ಭರಿಸಿದ ಅಪ್ಪು

    ಪುಟ್ಟ ಬಾಲಕನ ಆಸೆ ಈಡೇರಿಸಿ ಆಸ್ಪತ್ರೆ ಖರ್ಚು ಭರಿಸಿದ ಅಪ್ಪು

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿಯ ಆಸ್ಪತ್ರೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಪುನೀತ್ ರಾಜ್‍ಕುಮಾರ್ ಎಂದರೆ ಬಾಲಕನಿಗೆ ಪಂಚಪ್ರಾಣ. ಹೀಗಾಗಿ ಪುನೀತ್‍ರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂದು ಕನಸು ಕಂಡಿದ್ದನು. ಇದನ್ನೂ ಓದಿ: ಪುನೀತ್‌ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ

    ಪುನೀತ್ ಅವರನ್ನು ಒಮ್ಮೆ ಆದರೂ ಆದರ್ಶ್ ಭೇಟಿ ಮಾಡಬೇಕು ಎಂದು ಆತನ ಪೋಷಕರು ಪ್ರಯತ್ನಿಸಿದ್ದಾರೆ. ಕಳೆದ ಎರಡು ಬಾರಿ ಪುನೀತ್ ಹೊಸಪೇಟೆಗೆ ಬಂದಾಗಲೂ ಪ್ರಯತ್ನಿಸಿದ್ದು, ಆದರೆ ನೂರಾರು ಅಭಿಮಾನಿಗಳ ಅಬ್ಬರದಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಬಾಲಕನ ಕನಸು ನನಸಾಗಿದೆ. ಪುನೀತ್ ರಾಜ್‍ಕುಮಾರ್ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

    ಈ ಪುಟ್ಟ ಅಭಿಮಾನಿಯ ಬಗ್ಗೆ ತಿಳಿದ ಪುನೀತ್ ಬಾಲಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಮಂಗಳವಾರ ಪುನೀತ್ ಮನೆಗೆ ಬಂದ ಆದರ್ಶ್ ಮತ್ತು ಕುಟುಂಬದವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಬಾಲಕನ ಜೊತೆ ಕೆಲ ಸಮಯ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಬಾಲಕನ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸುವ ಮೂಲಕ ಪುನೀತ್ ಮಾನವೀಯತೆ ಮೆರೆದಿದ್ದಾರೆ.

    https://twitter.com/PuneethFC17/status/1227420352197746689

    ಪುನೀತ್ ಭೇಟಿಯಾಗಿ ಬಾಲಕನ ಕುಟುಂಬದವರ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರ್ಶ್ ಕಷ್ಟಕ್ಕೆ ನೆರವಾದ ಪುನೀತ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.