Tag: Pune rape Case

  • ಆತ್ಮಹತ್ಯೆಗೆ ಯತ್ನಿಸಿದ್ನಾ ಪುಣೆ ಅತ್ಯಾಚಾರ ಆರೋಪಿ? – ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

    ಆತ್ಮಹತ್ಯೆಗೆ ಯತ್ನಿಸಿದ್ನಾ ಪುಣೆ ಅತ್ಯಾಚಾರ ಆರೋಪಿ? – ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

    ಮುಂಬೈ: ಪುಣೆ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್‌ ಆಗುವ ಮುನ್ನ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಆರೋಪಿ ಬಂಧನಕ್ಕೆ 13 ಪೊಲೀಸ್ ಟೀಂ, 500ಕ್ಕೂ ಹೆಚ್ಚು ಪೊಲೀಸರು ಡ್ರೋನ್, ಶ್ವಾನದಳ ಬಳಸಲಾಗಿತ್ತು. ಕೃತ್ಯದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಆರೋಪಿ ಮನೆಗೆ ಹೋಗಿದ್ದ. ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ.

    ಶಿರೂರ್‌ನ ಗುನಾತ್ ಗ್ರಾಮದ ನಿವಾಸಿ ದತ್ತಾತ್ರಾಯ ರಾಮದಾಸ್ ಗೇಡ್ (37) ಶುಕ್ರವಾರ ಮಧ್ಯಾಹ್ನ 1:10 ರ ಸುಮಾರಿಗೆ ಅರೆಸ್ಟ್‌ ಆಗಿದ್ದ. ಸಾಸೂನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಬಂಧನಕ್ಕೆ ಒಳಪಡಿಸಲಾಯಿತು.

    ಪುಣೆ ಸಿಟಿ ಪೊಲೀಸ್‌ ಆಯುಕ್ತ ಅಮಿತೇಶ್ ಕುಮಾರ್ ಅವರು, ಆರೋಪಿ ಕುತ್ತಿಗೆಯಲ್ಲಿ ಗಾಯದ ಗುರುತಿತ್ತು. ಪ್ರಾಥಮಿಕ ತನಿಖೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ಮೂಡಿದೆ ಎಂದು ತಿಳಿಸಿದ್ದಾರೆ.

    ಆರೋಪಿಯು ಮನೆಯೊಂದಕ್ಕೆ ತೆರಳಿ ನೀರು ಮತ್ತು ಆಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ. ಆ ಕುಟುಂಬ ಆರೋಪಿ ಬಂಧನಕ್ಕೆ ಪೊಲೀಸರಿಗೆ ಸಹಕಾರ ನೀಡಿದೆ.

  • ಪುಣೆ ಅತ್ಯಾಚಾರ ಕೇಸ್‌ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್‌

    ಪುಣೆ ಅತ್ಯಾಚಾರ ಕೇಸ್‌ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್‌

    ಮುಂಬೈ: ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ಸಿನಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Pune Rape Case) ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಹಸಿಲ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

    ಬಂಧಿತ ಆರೋಪಿ ಮಂಗಳವಾರ ಬೆಳಿಗ್ಗೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆತ ಆರಂಭದಲ್ಲಿ ಮಹಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ. ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್‌ ಬಳಿ ಕರೆದೊಯ್ದಿದ್ದ. ಮಹಿಳೆ ಬಸ್ಸಿನೊಳಗೆ ಲೈಟ್‌ ಆನ್‌ ಇರದ ಕಾರಣ ಬಸ್‌ ಹತ್ತಲು ಹಿಂಜರಿದಿದ್ದಳು. ಈ ವೇಳೆ, ಇದೇ ಸರಿಯಾದ ಬಸ್‌ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಆರೋಪಿಯು ಹಲವಾರು ತಿಂಗಳುಗಳಿಂದ ಪೊಲೀಸರ ಸೋಗಿನಲ್ಲಿ ಓಡಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

    ಆರೋಪಿಗಳನ್ನು ಬಂಧಿಸಲು ಮಹಾರಾಷ್ಟ್ರದಾದ್ಯಂತ ಒಟ್ಟು 13 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಶೋಧ ಕಾರ್ಯಾಚರಣೆಯ ಭಾಗವಾಗಿ ಸ್ನಿಫರ್ ಡಾಗ್ಸ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆರೋಪಿ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಪುಣೆ ಪೊಲೀಸರು ಈ ಹಿಂದೆ 1 ಲಕ್ಷ ರೂ. ನಗದು ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಇದನ್ನೂ ಓದಿ: Pune Bus Rape Case | ಅಕ್ಕ ಅಕ್ಕ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ

  • ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ್ನಾ ಪುಣೆ ಅತ್ಯಾಚಾರ ಆರೋಪಿ? – ಪೊಲೀಸರಿಂದ ಡ್ರೋನ್‌ ಬಳಸಿ ಹುಡುಕಾಟ

    ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ್ನಾ ಪುಣೆ ಅತ್ಯಾಚಾರ ಆರೋಪಿ? – ಪೊಲೀಸರಿಂದ ಡ್ರೋನ್‌ ಬಳಸಿ ಹುಡುಕಾಟ

    ಪುಣೆ: ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲೇ ನಿಲ್ಲಿಸಿದ್ದ ಸಾರಿಗೆ ಬಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ (Pune Rape case) ಎಸಗಿದ್ದ ಆರೋಪಿ ದತ್ತಾತ್ರಯ ರಾಮದಾಸ್ ಗಡೆ ತನ್ನ ಊರಿನ ವಿಶಾಲವಾದ ಕಬ್ಬಿನ ಗದ್ದೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ವಿಶಾಲವಾದ ಪ್ರದೇಶದಲ್ಲಿ ಸುಮಾರು 10 ಅಡಿ ಎತ್ತರದಲ್ಲಿ ಬೆಳೆದ ಕಬ್ಬಿನ ಗದ್ದೆಯಲ್ಲಿ ಆರೋಪಿ ಅಡಗಿರುವ ಶಂಕೆ ಇದೆ. ಆತನನ್ನು ಪತ್ತೆ ಮಾಡಲು ಪೊಲೀಸರು ದ್ರೋನ್ (Drone) ಹಾಗೂ ಸ್ನಿಫರ್ ಡಾಗ್‌ ಬಳಸುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಕೃಷಿ ಪ್ರದೇಶದಲ್ಲಿ ಹುಡುಕುವುದು ಕಷ್ಟಕರವಾಗಿದೆ. ಅದಕ್ಕಾಗಿ ಡ್ರೋಣ್‌ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ತರಕಾರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಅಡಗಿಕೊಂಡು ತನ್ನ ಊರಿಗೆ ತಲುಪಿದ್ದಾನೆ. ಅಲ್ಲಿ ಅವನು ತನ್ನ ಬಟ್ಟೆ ಮತ್ತು ಬೂಟುಗಳನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಅವನನ್ನು ಪತ್ತೆಹಚ್ಚಲು ಅಪರಾಧ ವಿಭಾಗದ 8 ಮಂದಿ ಪೊಲೀಸರು ಸೇರಿದಂತೆ 13 ವಿಶೇಷ ತಂಡಗಳನ್ನು ರಚಿಸಲಾಗಿದೆ. ಆತನ ಕುಟುಂಬದ ಸದಸ್ಯರು ಮತ್ತು ಪರಿಚಿತರನ್ನು ವಿಚಾರಿಸಲಾಗಿದೆ. ಆತನ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರ ಬೆಳಿಗ್ಗೆ 5:45 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಅತ್ಯಾಚಾರ ನಡೆದಿದೆ. ಸತಾರಾ ಜಿಲ್ಲೆಯ ತನ್ನ ಊರಿಗೆ ತೆರಳಲು ಬಸ್‌ಗೆ ಕಾಯುತ್ತಿದ್ದಾಗ, ಆರೋಪಿ ತನ್ನನ್ನು ‘ದೀದಿ’ ಕರೆದು ಮಾತಾಡಿಸಿದ್ದಾನೆ. ಬಳಿಕ ಮೂಲೆಯಲ್ಲಿ ನಿಂತಿದ್ದ ಬಸ್‌ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ದತ್ತಾತ್ರಯ ರಾಮದಾಸ್ ಗಡೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಪುಣೆ ಮತ್ತು ನೆರೆಯ ಅಹಲ್ಯಾನಗರ ಜಿಲ್ಲೆಯಲ್ಲಿ ಕನಿಷ್ಠ ಆರು ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಆರೋಪ ಆತನ ಮೇಲಿದೆ. 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • Pune Bus Rape Case | ಅಕ್ಕ ಅಕ್ಕ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ

    Pune Bus Rape Case | ಅಕ್ಕ ಅಕ್ಕ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ

    ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್‌ನೊಳಗೆ 26 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ (Pune Bus Rape Case) ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಅಕ್ಕ ಅಕ್ಕ ಎಂದು ಕರೆದವನೇ ಅತ್ಯಾಚಾರ ಮಾಡಿದ ಎಂಬ ಮನಕಲುಕುವ ವಿಷಯ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ಹೌದು. ಮಂಗಳವಾರ ಮುಂಜಾನೆ 5:45 ರಿಂದ 6 ಗಂಟೆ ಸಮಯದಲ್ಲಿ 36 ವರ್ಷದ ದತ್ತಾತ್ರೆಯ ರಾಮದಾಸ್‌ ಗಾಡೆ ಈ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯು ಸತಾರಾ ಜಿಲ್ಲೆಯಲ್ಲಿರುವ ತನ್ನ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಅರೋಪಿ ಆಕೆಯನ್ನ ʻಅಕ್ಕ… ಅಕ್ಕʼ(ದೀದಿ) ಎಂದು ಕೂಗಿದ್ದಾನೆ. ನಂತರ ಆಕೆಯನ್ನ ಡಿಪೋದ ಒಂದು ಮೂಲೆಯಲ್ಲಿ ನಿಂತಿದ್ದ ಬಸ್‌ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಆಕೆ ಬಸ್‌ ಖಾಲಿ ಇದೆಯಲ್ಲ ಎಂದು ಕೇಳಿದಾಗ.. ಇಲ್ಲ ಎಲ್ಲರೂ ಮಲಗಿದ್ದಾರೆ ಎಂದು ಸುಳ್ಳು ಹೇಳಿ ಆಕೆಯನ್ನ ಕರೆದೊಯ್ದಿದ್ದಾನೆ. ಬಸ್‌ ಹತ್ತುತ್ತಿದ್ದಂತೆ ಡೋರ್‌ ಲಾಕ್‌ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

    ಪೊಲೀಸರ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಬಸ್ಸಿನೆಡೆಗೆ ಇಬ್ಬರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

    ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ:
    ಸದ್ಯ ಆರೋಪಿಯನ್ನ ಬಂಧಿಸಲು ತ್ವರಿತ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ಇಲಾಖೆ ಶ್ವಾನದಳದೊಂದಿಗೆ 13 ತಂಡಗಳನ್ನು ನಿಯೋಜಿಸಿದೆ. ‌ ಹೆಚ್ಚುವರಿಯಾಗಿ, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೊಷಿಸಿದೆ. ಇದನ್ನೂ ಓದಿ: Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

    ಬೇರೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಕಾಮುಕ:
    ಮಂಗಳವಾರ ಬೆಳಗ್ಗೆ ಪುಣೆ ಸ್ವರ್ಗೇಟ್ ಡಿಪೋದಲ್ಲಿ ಬಸ್‌ನಲ್ಲೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಬೇರೆ ಪ್ರಕರಣಗಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಶಿರೂರು ಶಿಕ್ರಾಪುರ, ಸ್ವರ್ಗೇಟ್ ಪೊಲೀಸ್‌ ಠಾಣೆಗಳಲ್ಲಿ 6 ಕೇಸ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

  • ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

    ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

    – ಆರೋಪಿ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ

    ಪುಣೆ: ಮಹಾರಾಷ್ಟ್ರ (Maharashtra) ರಾಜ್ಯ ರಸ್ತೆ ಸಾರಿಗೆ ಬಸ್‌ನೊಳಗೆ 26 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಲು ತ್ವರಿತ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ಇಲಾಖೆ (Pune Police Department) ಶ್ವಾನದಳದೊಂದಿಗೆ 13 ತಂಡಗಳನ್ನು ನಿಯೋಜಿಸಿದೆ. ಹೆಚ್ಚುವರಿಯಾಗಿ, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೊಷಿಸಿದೆ.

    ಬೇರೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಕಾಮುಕ:
    ಮಂಗಳವಾರ ಬೆಳಗ್ಗೆ ಪುಣೆ ಸ್ವರ್ಗೇಟ್ ಡಿಪೋದಲ್ಲಿ ಬಸ್‌ನಲ್ಲೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನನ್ನು 36 ವರ್ಷದ ದತ್ತಾತ್ರೆಯ ರಾಮದಾಸ್‌ ಗಾಡೆ ಎಂದು ಗುರುತಿಸಲಾಗಿದೆ. ಈತ ಬೇರೆ ಪ್ರಕರಣಗಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಶಿರೂರು ಶಿಕ್ರಾಪುರ, ಸ್ವರ್ಗೇಟ್ ಪೊಲೀಸ್‌ ಠಾಣೆಗಳಲ್ಲಿ ಹಲವು ಕೇಸ್‌ಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌, ಡಿಸಿಎಂ ಅಜಿತ್‌ ಪವಾರ್‌ ಆದಷ್ಟು ಬೇಗ ಆರೋಪಿಯನ್ನು ಬಂಧಿಸುವಂತೆ ಪುಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ

    ಈ ಅತ್ಯಾಚಾರ ಘಟನೆಯು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೆಲಸ, ಅತ್ಯಂತ ನೋವಿನ ಹಾಗೂ ನಾಚಿಗೇಡಿನ ಸಂಗತಿಯೂ ಹೌದು. ಆರೋಪಿಗೆ ಮರಣ ದಂಡನೆಯೇ ಸೂಕ್ತವಾದ ಶಿಕ್ಷೆ ಎಂದು ಪವಾರ್‌ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಗಂಗಾ ಬಸವರಾಜ್‍ಗೆ ಸಚಿವ ಸ್ಥಾನ ಸಿಗಲಿ – ಮಹಾ ಕುಂಭಮೇಳದಲ್ಲಿ ಅಭಿಮಾನಿಗಳಿಂದ ಪ್ರಾರ್ಥನೆ 

    ಠಾಣೆ ಸಮೀಪದಲ್ಲೇ ಅತ್ಯಾಚಾರ:
    ಯುವತಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಪುಣೆಯ ಜನನಿಬಿಡ ಪ್ರದೇಶ ಸ್ವರ್ಗೇಟ್ ಬಸ್‌ ನಿಲ್ದಾಣದಲ್ಲಿ ಘಟನೆ ನಡೆದಿದೆಯಲ್ಲದೇ, ಬಸ್ ಪೊಲೀಸ್ ಠಾಣೆಯ 100 ಮೀ. ವ್ಯಾಪ್ತಿಯಲ್ಲೇ ನಿಂತಿತ್ತು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಠಾಣೆಯಿಂದ 100 ಮೀಟರ್‌ ದೂರದಲ್ಲಿ ಖಾಲಿ ಬಸ್‌ ನಿಂತಿತ್ತು. ಬೇರೆಡೆ ನಿಂತಿದ್ದ ಬಸ್ ಒಳಗೆ ಸುಳ್ಳು ಹೇಳಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ವರದಿಗಳು ತಿಳಿಸಿವೆ.