Tag: Pune Porsche Accident

  • ಪೋರ್ಶೆ ಕಾರು ಅಪಘಾತ ಕೇಸ್‌; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ

    ಪೋರ್ಶೆ ಕಾರು ಅಪಘಾತ ಕೇಸ್‌; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ

    ಮುಂಬೈ: ಪುಣೆಯಲ್ಲಿ (Pune) ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಪುಣೆ ಪೋರ್ಶೆ (Porsche Car) ಅಪಘಾತ ಪ್ರಕರಣದಲ್ಲಿ 17 ವಯಸ್ಸಿನ ಆರೋಪಿಯ ರಕ್ತ ಪರೀಕ್ಷೆಯ ವರದಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಇಬ್ಬರು ವೈದ್ಯರೊಂದಿಗೆ ನಿನ್ನ ಪ್ಯೂನ್‌ ಬಂದಿತನಾಗಿದ್ದ. ಈತ ವೈದ್ಯರಿಗೆ 3 ಲಕ್ಷ ರೂ. ಲಂಚ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಅತುಲ್ ಘಟಕಾಂಬಳೆ ಎಂಬ ಪ್ಯೂನ್ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್ ಆಸ್ಪತ್ರೆಯ ಡಾ. ಅಜಯ್ ತವಾಡೆ ಮತ್ತು ಡಾ. ಹರಿ ಹಾರ್ನರ್ ಅವರನ್ನು ಪುಣೆ ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.

    ತನಿಖೆಯಿಂದ ಡಾ. ತವಡೆ ಮತ್ತು ಹದಿಹರೆಯದ ಆರೋಪಿಯ ತಂದೆ ಅಪಘಾತದ ದಿನ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಾಪರಾಧಿಯ ತಂದೆ ವೈದ್ಯರಿಗೆ ಕರೆ ಮಾಡಿ ರಕ್ತದ ಮಾದರಿ ವರದಿಗಳನ್ನು ಬದಲಿಸಲು ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಆಸ್ಪತ್ರೆಯಲ್ಲಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಮಾದರಿಗಳು ಬಾಲಾಪರಾಧಿಗಳದ್ದಲ್ಲ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದರು. ಮೇ 19 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ, ಸ್ಯಾಸೂನ್ ಆಸ್ಪತ್ರೆಯಲ್ಲಿ ತೆಗೆದ ಅಪ್ರಾಪ್ತನ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆಯಲಾಯಿತು. ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

    ಅಪ್ರಾಪ್ತರ ರಕ್ತದ ಮಾದರಿಗಳನ್ನು ಬದಲಾಯಿಸಲಾಗಿದ್ದು, ಭಾನುವಾರ ಬಂದ ವರದಿಯಲ್ಲಿ ಮದ್ಯದ ಯಾವುದೇ ಕುರುಹು ಕಂಡುಬಂದಿಲ್ಲ. ಆದರೆ ಆ ರಾತ್ರಿ ಆತ ಭೇಟಿ ನೀಡಿದ ಬಾರ್ ಒಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.

  • ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಮುಂಬೈ: ಪುಣೆಯಲ್ಲಿ (Pune Porsche Accident) ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳ ಸಾವು ಪ್ರಕರಣದಲ್ಲಿ ಅಪ್ರಾಪ್ತನ ಜಾಮೀನನ್ನು ಬಾಲನ್ಯಾಯ ಮಂಡಳಿ ರದ್ದುಗೊಳಿಸಿದೆ.

    ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ಜಾಮೀನು ನೀಡಲಾಗಿತ್ತು. ಅಲ್ಲದೇ ರಸ್ತೆ ಅಪಘಾತದ ಬಗ್ಗೆ ಪ್ರಬಂಧವನ್ನು ಬರೆಯುವಂತೆ ಹೇಳಿತ್ತು. ಇದಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಮೂರು ದಿನದಲ್ಲಿ ಮಂಡಳಿ ಜಾಮೀನು ರದ್ದುಗೊಳಿಸಿದೆ. ಇದನ್ನೂ ಓದಿ: ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ

    ಮಂಡಳಿಯು ಬಾಲಾಪರಾಧಿಯನ್ನು ಜೂನ್ 5 ರವರೆಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದೆ. ಆದರೆ, ಆತನನ್ನು ವಯಸ್ಕನಾಗಿ ವಿಚಾರಣೆಗೆ ಒಳಪಡಿಸಬೇಕೆ ಎಂಬ ಬಗ್ಗೆ ಅದು ನಿರ್ಧಾರವನ್ನು ನೀಡಲಿಲ್ಲ.

    ಭಾನುವಾರ ಮುಂಜಾನೆ ಅಪಘಾತದ ನಂತರ, ಪುಣೆಯ ಪ್ರಮುಖ ಬಿಲ್ಡರ್‌ನ ಅಪ್ರಾಪ್ತ ಪುತ್ರನಿಗೆ 15 ಗಂಟೆಗಳ ಒಳಗೆ ಜಾಮೀನು ನೀಡಲಾಗಿತ್ತು. ವೈಯಕ್ತಿಕ ಬಾಂಡ್, ಶ್ಯೂರಿಟಿ ನೀಡುವುದು ಸೇರಿದಂತೆ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧ ಬರೆಯುವಂತೆ ಹೇಳಲಾಗಿತ್ತು. ಇದನ್ನೂ ಓದಿ: ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್‌; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್‌

  • ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್‌; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್‌

    ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್‌; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್‌

    ಮುಂಬೈ: ಪುಣೆಯಲ್ಲಿ (Pune Porsche Accident) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಐಷಾರಾಮಿ ಕಾರು ನಂಬರ್‌ ಪ್ಲೇಟ್‌ ಇಲ್ಲದೆಯೇ ತಿಂಗಳುಗಳಿಂದ ಪುಣೆ ರಸ್ತೆಗಳಲ್ಲಿ ಓಡಾಡಿಕೊಂಡಿದ್ದುದು ತಿಳಿದುಬಂದಿದೆ.

    2.5 ಕೋಟಿ ರೂ. ಮೌಲ್ಯದ ಐಷಾರಾಮಿ ಸ್ಪೋರ್ಟ್ಸ್ ಪೋರ್ಶೆ ಟೇಕಾನ್‌ ಕಾರಿನ ನೋಂದಣಿಯೇ ಆಗಿಲ್ಲ. ಎರಡೂವರೆ ಕೋಟಿ ಮೌಲ್ಯದ ಕಾರಿಗೆ ಕೇವಲ 1,758 ಶುಲ್ಕ ಪಾವತಿಸಿ ಮಾಲೀಕರು ನೋಂದಣಿ ಮಾಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿಯಲು 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ ಕಿಲ್ಲರ್‌ ಬಾಯ್‌ – ಮುಂದಾಗಿದ್ದೇನು ಗೊತ್ತೇ?

    ಬೆಂಗಳೂರಿನ ಡೀಲರ್‌ನಿಂದ ಮಾರ್ಚ್‌ನಲ್ಲಿ ಎಲೆಕ್ಟ್ರಿಕ್ ಪೋರ್ಶೆ ಕಾರನ್ನು ಆಮದು ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ತಾತ್ಕಾಲಿಕ ನೋಂದಣಿ ನಂತರ ಅಲ್ಲಿಂದ ಮಹಾರಾಷ್ಟ್ರಕ್ಕೆ ಕಾರು ಬಂದಿದೆ ಎಂದು ಮಹಾರಾಷ್ಟ್ರ ಸಾರಿಗೆ ಆಯುಕ್ತ ವಿವೇಕ್ ಭೀಮನ್ವಾರ್ ತಿಳಿಸಿದ್ದಾರೆ.

    ಕಾರನ್ನು ನೋಂದಣಿ ಮಾಡಿಸುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ಇದೆ. ಆದ್ದರಿಂದ ಈ ವಾಹನದ ನೋಂದಣಿ 1,758 – 1,500 ರೂ. ಹೈಪೋಥೆಕೇಶನ್ ಶುಲ್ಕ ಇರುತ್ತದೆ. 200 ರೂ. ಸ್ಮಾರ್ಟ್ ಕಾರ್ಡ್ ಆರ್‌ಸಿ ಶುಲ್ಕ ಮತ್ತು 58 ರೂ. ಅಂಚೆ ಶುಲ್ಕ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ

    ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಹದಿಹರೆಯದ ಯುವಕ ಪುಣೆಯ ಪ್ರಮುಖ ಬಿಲ್ಡರ್‌ ಮಗ. ಆರೋಪಿ ಅಪ್ರಾಪ್ತನ ತಂದೆಯನ್ನು ಬಂಧಿಸಲಾಗಿದೆ. ಆರೋಪಿ ಬಾಲಕನಾದ್ದರಿಂದ ಬಂಧಿಸಿದ 15 ಗಂಟೆಗಳೊಳಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.