Tag: Pumpwell Flyover

  • ಮಂಗಳೂರಲ್ಲಿ ಭಾರಿ ಮಳೆ; ಪಂಪ್‌ವೆಲ್ ಸೇತುವೆ ಬಳಿ ಪ್ರವಾಹ ಪರಿಸ್ಥಿತಿ

    ಮಂಗಳೂರಲ್ಲಿ ಭಾರಿ ಮಳೆ; ಪಂಪ್‌ವೆಲ್ ಸೇತುವೆ ಬಳಿ ಪ್ರವಾಹ ಪರಿಸ್ಥಿತಿ

    ಮಂಗಳೂರು: ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಪಂಪ್‌ವೆಲ್ ಸೇತುವೆ (Pumpwell Flyover) ಬಳಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ನಿರಂತರ ಮಳೆಗೆ ರಾಜಕಾಲುವೆಯಲ್ಲಿ ನೀರು ಹರಿದಿದೆ. ನಗರದ ಪಂಪ್‌ವೆಲ್‌ನಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಪರಿಣಾಮ ಪಂಪ್‌ವೆಲ್‌ನಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಭಾರೀ ಮಳೆಗೆ ಆಟೋ ಮೇಲೆ ಮುರಿದು ಬಿದ್ದ ಮರ – ಚಾಲಕ ದುರ್ಮರಣ

    ಎರಡು ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ. ಪಂಪ್‌ವೆಲ್ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತವಾಗಿದೆ.

  • ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಮಂಗಳೂರು: ಸೆರೆಸಿಕ್ಕ ಶಾರೀಕ್‌(Shariq) ಪಂಪ್‌ವೆಲ್‌ ಫ್ಲೈ ಓವರ್‌(Pumpwell Flyover) ಬಳಿ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಪಂಪ್‌ವೆಲ್‌ ಯಾಕೆ?
    ಕೇರಳಕ್ಕೆ ಹೋಗುವ ವಾಹನಗಳ ಜೊತೆ ಹಾಸನ, ಕೊಡಗು, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಪಂಪ್‌ವೆಲ್‌ ಮೂಲಕವೇ ಸಾಗುತ್ತದೆ. ವಾಹನಗಳ ಮಂಗಳೂರು ನಗರದ ಪ್ರವೇಶ ಮತ್ತು ನಿರ್ಗಮನ ಈ ರಸ್ತೆಯ ಮೂಲಕವೇ ಆಗುತ್ತದೆ.

    ಮಂಗಳೂರಿಗೆ ಹಲವು ಬಾರಿ ಬಂದಿದ್ದ ಶಾರೀಕ್‌ ನಗರದಲ್ಲಿ ಎಲ್ಲಿ ಹೆಚ್ಚು ಜನರು ಸಂಚರಿಸುತ್ತಾರೆ ಎಂಬುದನ್ನು ತಿಳಿದಿದ್ದ. ಇಲ್ಲಿ ಯಾವುದೇ ಬಸ್‌ ಸ್ಟ್ಯಾಂಡ್‌ ಇಲ್ಲ. ಸಂಜೆಯ ವೇಳೆಗೆ ಜನ ಇಲ್ಲಿ ಬಸ್‌ ಹತ್ತಲು ನಿಂತಿರುತ್ತಾರೆ. ಅದರಲ್ಲೂ ಕೋಣಾಜೆ-ತೊಕ್ಕೊಟ್ಟು-ಉಳ್ಳಾಲ ಭಾಗಕ್ಕೆ ತೆರಳುವ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಇರುತ್ತಾರೆ. ಈ ಕಾರಣಕ್ಕೆ ಶಾರೀಕ್‌ ಪಂಪ್‌ವೆಲ್‌ ಬಳಿಯೇ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ. ಇದನ್ನೂ ಓದಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಗುರಿ- ಮಂಗಳೂರು ಸ್ಫೋಟಕ್ಕೆ ಬೆಂಗಳೂರು ಲಿಂಕ್

    ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ(Mangaluru) ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿತ್ತು. ದಾರಿ ಮಧ್ಯೆ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ ಶಾರೀಕ್‌ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ (Police) ಠಾಣೆಯ ಎದುರು ಆಟೋದ ಒಳಗೆ ಸ್ಫೋಟಗೊಂಡಿದ್ದು ಶಾರೀಕ್‌ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಬ್ಯಾನರ್ ಅಳವಡಿಕೆ

    ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಬ್ಯಾನರ್ ಅಳವಡಿಕೆ

    ಮಂಗಳೂರು: ನಗರದಲ್ಲಿರುವ ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಮೇಲ್ಸೇತುವೆ ಎಂಬ ಬ್ಯಾನರ್ ಹಾಕಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಕೆಲ ಅಪರಿಚಿತರು ಮೇಲ್ಸೇತುವೆ ಮೇಲೆ ವೀರ್ ಸಾವರ್ಕರ್ ಹೆಸರಿನ ಬ್ಯಾನರ್ ಹಾಕಿ ಪಕ್ಕದಲ್ಲಿಯೇ ಬಜರಂಗದಳ ಎಂದು ಬರೆದು ಫೋಟೋ ಕ್ಲಿಕ್ಕಿಸಿದ್ದಾರೆ. ಫೋಟೋ ಕ್ಲಿಕ್ಕಿಸಿದ ಬಳಿಕ ಬ್ಯಾನರ್ ತೆಗೆದು ಹಾಕಿದ್ದಾರೆ. ಸದ್ಯ ಸ್ಥಳೀಯ ಮಟ್ಟದಲ್ಲಿ ವೀರ್ ಸಾವರ್ಕರ್ ಬ್ಯಾನರ್ ಫೋಟೋಗಳು ಮಿಂಚಿನಂತೆ ಹರಿದಾಡುತ್ತಿವೆ.

    ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಸರ್ಕಾರ ಮುಂದಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆ ಸರ್ಕಾರ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿದೆ.

  • ಪಂಪ್‍ವೆಲ್ ಫೈಓವರ್ ಉದ್ಘಾಟನೆಯಾದ ಒಂದೇ ವಾರದಲ್ಲಿ ಅಪಘಾತ- ಓರ್ವ ಸಾವು

    ಪಂಪ್‍ವೆಲ್ ಫೈಓವರ್ ಉದ್ಘಾಟನೆಯಾದ ಒಂದೇ ವಾರದಲ್ಲಿ ಅಪಘಾತ- ಓರ್ವ ಸಾವು

    – ಫೈಓವರ್‌ನಿಂದ ಕೆಳಕ್ಕುರುಳಿದ ಕಾರು, ಇಬ್ಬರ ಸ್ಥಿತಿ ಗಂಭೀರ

    ಮಂಗಳೂರು: ಒಂದು ವಾರದ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಮಂಗಳೂರಿನ ಪಂಪ್‍ವೆಲ್ ಫೈಓವರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

    ಸ್ವಾಗತ್ ಗ್ಯಾರೇಜ್‍ನ ಮುಖ್ಯಸ್ಥ ಪ್ರವೀಣ್ ಫರ್ನಾಂಡಿಸ್ (46) ಮೃತ ದುರ್ದೈವಿ. ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಉಡುಪಿ ಕಡೆಯಿಂದ ಕಾಸರಗೋಡು ಕಡೆ ಹೋಗುತ್ತಿದ್ದ ಆಲ್ಟೋ 800 ಕಾರು ವೇಗವಾಗಿ ಹೋಗುತ್ತಿತ್ತು. ಆದರೆ ಇಂಡಿಯಾನ ಆಸ್ಪತ್ರೆ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಎದುರಿಗೆ ಬರುತ್ತಿದ್ದ ಡಸ್ಟರ್ ಕಾರಿಗೂ ಡಿಕ್ಕಿಯಾಗಿದೆ. ಕಾರಿನಿಂದ ನೂರು ಮೀಟರ್ ದೂರದಲ್ಲಿ ಇಂಜಿನ್ ಬಿದ್ದಿರುವುದು ಅಪಘಾತದ ತೀವ್ರತೆ ಎಷ್ಟು ಎಂಬುದನ್ನು ಬಿಂಬಿಸುವಂತಿತ್ತು.

    ಡಿಕ್ಕಿಯ ರಭಸಕ್ಕೆ ಅಲ್ಟೋ ಕಾರು ಫೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದು ಎರಡು ರೌಂಡ್ ಪಲ್ಟಿಯಾಗಿ ಕೆಳಗಿ ಬಿದ್ದಿದೆ. ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಡಸ್ಟರ್ ಕಾರಿನಲ್ಲಿದ್ದ ಸ್ವಾಗತ್ ಗ್ಯಾರೇಜ್‍ನ ಮುಖ್ಯಸ್ಥ ಪ್ರವೀಣ್ ಫರ್ನಾಂಡಿಸ್ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಪ್ರವೀಣ್ ಕಾರು ರಿಪೇರಿ ಮುಗಿಸಿ ಟೆಸ್ಟ್ ಡ್ರೈವ್‍ಗೆ ಬಂದಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಖರ್ಚಿಲ್ಲದೇ ಟ್ರೋಲ್ ಮಾಡಿದವರೆಲ್ಲರಿಗೂ ಧನ್ಯವಾದ: ಕಟೀಲ್

    ಖರ್ಚಿಲ್ಲದೇ ಟ್ರೋಲ್ ಮಾಡಿದವರೆಲ್ಲರಿಗೂ ಧನ್ಯವಾದ: ಕಟೀಲ್

    ಮಂಗಳೂರು: ಯಾವುದೇ ರೀತಿಯ ಖರ್ಚು ಮಾಡದೇ ಟ್ರೋಲ್ ಮೂಲಕ ನನ್ನನ್ನು ದೇಶ ವಿದೇಶದಾದ್ಯಂತ ಪ್ರಸಿದ್ಧಿಪಡಿಸಿದ ಎಲ್ಲಾ ಟ್ರೋಲ್ ಪೇಜ್ ಗಳಿಗೆ ಹಾಗೂ ಟ್ರೋಲ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುತ್ತೇನೆಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಕಳೆದ ಹತ್ತು ವರ್ಷಗಳಿಂದ ತೆವಳುತ್ತಾ ಸಾಗಿದ್ದ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೊನೆಗೂ ಪೂರ್ಣಗೊಂಡು ಇಂದು ಲೋಕಾರ್ಪಣೆಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಫ್ಲೈಓವರನ್ನು ಉದ್ಘಾಟನೆಗೊಳಿಸಿದ್ದು, ವಾಹನ ಸಂಚಾರಕ್ಕೆ ಇಂದಿನಿಂದ ಮುಕ್ತವಾಗಿದೆ.

    ಉದ್ಘಾಟನೆ ಬಳಿಕ ಸುದೀರ್ಘ ಭಾಷಣ ಮಾಡಿದ ಸಂಸದರು, ಫ್ಲೈಓವರ್ ಕೆಲಸ ನಿಧಾನಗತಿಗೆ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ನೇರ ಆರೋಪಗಳನ್ನು ಮಾಡಿದ ಕಟೀಲ್, ಫ್ಲೈಓವರ್ ತಡವಾಗಲು ಈ ಹಿಂದಿನ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತ ಮತ್ತು ಹಿಂದಿನ ಶಾಸಕ ಜೆ ಅರ್ ಲೋಬೋ ಮತ್ತು ಸಚಿವ ರಮಾನಾಥ್ ರೈ ಅಂತಾ ದೂರಿದರು.

    ಫ್ಲೈಓವರ್ ಹತ್ತು ವರ್ಷಗಳ ಪ್ರಾಜೆಕ್ಟ್ ಅಲ್ಲ. 2016ರಲ್ಲಿ ಮಹಾವೀರ ವೃತ್ತದಲ್ಲಿ ಕಲಶ ತೆಗೆದು 2017ರಲ್ಲಿ ಕಾಮಗಾರಿ ಆರಂಭವಾಯಿತು. ಪಂಪ್ ವೆಲ್ ಫ್ಲೈಓವರ್ ಕೇವಲ 2 ವರ್ಷ 2 ತಿಂಗಳಿನಲ್ಲಿ ಪೂರ್ಣಗೊಂಡಿದೆ ಅಂತ ಕಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ಉದ್ಘಾಟನೆಯಾಯ್ತು ಮಂಗ್ಳೂರು ಪಂಪ್‍ವೆಲ್ ಫ್ಲೈಓವರ್!

    ಇದೇ ವೇಳೆ ಟ್ರೋಲ್ ಪೇಜ್‍ಗಳಿಗೆ ಅಭಿನಂದನೆ ಸಲ್ಲಿಸಿದ ಕಟೀಲ್, ಖರ್ಚಿಲ್ಲದೆ ಟ್ರೋಲ್ ಪೇಜ್‍ಗಳು ನನಗೆ ಪ್ರಚಾರ ನೀಡಿದೆ. ಇಡೀ ದೇಶಕ್ಕೆ ನನ್ನ ಬಗ್ಗೆ ಮತ್ತು ಪಂಪ್‍ವೆಲ್ ಫ್ಲೈಓವರ್ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಅಂತ ಕಟೀಲ್ ವ್ಯಂಗ್ಯವಾಡಿದರು.

  • ಕೊನೆಗೂ ಪೂರ್ಣವಾಯ್ತು ಪಂಪ್‍ವೆಲ್ ಫ್ಲೈಓವರ್ – ಜ. 31 ರಂದು ಸಂಚಾರಕ್ಕೆ ಮುಕ್ತ

    ಕೊನೆಗೂ ಪೂರ್ಣವಾಯ್ತು ಪಂಪ್‍ವೆಲ್ ಫ್ಲೈಓವರ್ – ಜ. 31 ರಂದು ಸಂಚಾರಕ್ಕೆ ಮುಕ್ತ

    ಮಂಗಳೂರು: ದಶಕದ ಕಾಮಗಾರಿಯ ಇತಿಹಾಸ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು, ಜನವರಿ 31ರ ನಂತರ ಸಂಚಾರಕ್ಕೆ ಮುಕ್ತವಾಗಲಿದೆ.

    ಜನವರಿ 31ರ ಬೆಳಗ್ಗೆ ಫ್ಲೈಓವರ್ ಉದ್ಘಾಟನೆಯಾಗಲಿದ್ದು ಅಂದಿನಿಂದ ಈ ರಸ್ತೆ ಸಾರ್ವಜನಿಕರ ವಾಹನಗಳಿಗೆ ಮುಕ್ತವಾಗಲಿದೆ.

    2010ರಲ್ಲಿ ನವಯುವ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. 10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಡೆಡ್ ಲೈನ್ ಗಳನ್ನು ಕಂಡಿರುವ ಕಾಮಗಾರಿ ಈಗ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಕರಾವಳಿ ಭಾಗದಲ್ಲಿ ಸಾಮಾಜಿಕ ತಾಣಗಳಲ್ಲಿ ಫ್ಲೈಓವರ್ ಕಾಮಗಾರಿ ಭಾರೀ ಟ್ರೋಲ್ ಆಗಿತ್ತು.

    ಪೂರ್ಣಗೊಂಡಿರುವ ಪಂಪ್‍ವೆಲ್  ಮೇಲ್ಸೇತುವೆಯ ಕಾಮಗಾರಿಯನ್ನು ಬುಧವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

    ಡಿ.31ರಂದು ಸಂಸದ ನಳಿನ್‍ಕುಮಾರ್ ಕಟೀಲು ಅವರ ಅಧ್ಯಕ್ಷತೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಯವರಿಗೆ ನೀಡಲಾಗಿತ್ತು.

    ಎನ್‍ಎಚ್‍ಎಐ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಹಾಗೂ ಮಂಗಳೂರು ತಹಸೀಲ್ದಾರರು ಇರುವ ನಾಲ್ಕು ಮಂದಿಯ ಸಮಿತಿ ಕಾಮಗಾರಿಯ ದೈನಂದಿನ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಸದಸ್ಯರ ಜತೆ ಜಿಲ್ಲಾಧಿಕಾರಿ ದಿನಂಪ್ರತಿ ಸಭೆ ನಡೆಸುತ್ತಿದ್ದರು. ಸಭೆ ಬಳಿಕ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುತ್ತಿದ್ದಾರೆ.

  • ಪಂಪ್‍ವೆಲ್ ಫ್ಲೈ ಓವರ್ ಕೊನೆಗೂ ಉದ್ಘಾಟನೆ: ಸಂಸದರಿಗೆ ತರಾಟೆ

    ಪಂಪ್‍ವೆಲ್ ಫ್ಲೈ ಓವರ್ ಕೊನೆಗೂ ಉದ್ಘಾಟನೆ: ಸಂಸದರಿಗೆ ತರಾಟೆ

    – ಕಾಂಗ್ರೆಸ್ಸಿಗರಿಂದ ಅಣಕು ಉದ್ಘಾಟನೆ

    ಮಂಗಳೂರು: ಹತ್ತು ವರ್ಷಗಳಿಂದ ಪೂರ್ಣಗೊಳ್ಳದ ಪಂಪ್‍ವೆಲ್ ಫ್ಲೈಓವರ್ ಬುಧವಾರ ಏಕಾಏಕಿ ಉದ್ಘಾಟನೆಗೊಂಡಿತು. ಅರೆ ಇದೇನು ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಈ ಫೈಓವರ್ ಹೇಗೆ ಉದ್ಘಾಟನೆಗೊಂಡಿತು ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಅಣಕು ಉದ್ಘಾಟನೆ.

    ಕಳೆದ ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಾ ಇರುವ ಈ ಫೈಓವರ್ ಇಂದಿಗೂ ಕಾಮಗಾರಿ ಪೂರ್ಣಗೊಳ್ಳದೆ ಜನ ಪ್ರತಿನಿತ್ಯ ಪರಡಾಡುತ್ತಿದ್ದಾರೆ. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ಹತ್ತು ವರ್ಷದಲ್ಲಿ ಐದು ಬಾರಿ ಡೆಡ್ ಲೈನ್ ನೀಡಿ ಉದ್ಘಾಟನೆಗೆ ದಿನ ಘೋಷಿಸುತ್ತಿದ್ದರು. ಕೊನೆಯದಾಗಿ ಕಳೆದ 2019ರ ಡಿಸೆಂಬರ್ 31ರಂದು ಕಾಮಗಾರಿ ಮುಗಿಸಿ 2020 ಜನವರಿ 1ರಂದು ಉದ್ಘಾಟನೆ ಮಾಡುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ ಕೊನೆಯ ಗಡುವೂ ಮುಗಿದಿದ್ದು, ಇನ್ನೂ ಸಾಕಷ್ಟು ತಿಂಗಳ ಕಾಮಗಾರಿ ಉಳಿದಿದೆ. ಹೀಗಾಗಿ ಜನವರಿ 1 ರಂದು ಸಂಸದರಿಗೆ ಉದ್ಘಾಟನೆ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ತಂಡವೊಂದು ಅದೇ ದಿನವಾದ ಜನವರಿ 1ರಂದು ಫೈಓವರ್ ಮೇಲೆ ಹೋಗಿ ಅಣಕು ಉದ್ಘಾಟನೆ ಮಾಡಿತು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

    ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರತಿಕೃತಿ ಮಾಡಿ ಅದರ ಮೂಲಕ ಉದ್ಘಾಟನೆ ಮಾಡಿ ಸಂಸದರಿಗೆ ಟಾಂಗ್ ನೀಡಿದರು. ಬಳಿಕ ಪ್ರತಿಕೃತಿಯನ್ನು ಫೈಓವರ್ ನಿಂದ ಕೆಳಗೆ ಬಿಸಾಕುವುದರ ಮೂಲಕ ಸಂಸದರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    ಪ್ರತಿಭಟನೆಯಲ್ಲಿದ್ದ ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಮಾತನಾಡಿ, ಇಂತಹ ಸಂಸದರನ್ನು ಪಡೆದ ಮಂಗಳೂರಿನ ಜನತೆಯ ದುರಾದೃಷ್ಟ. ಸಂಸದರು ಇನ್ನೂ ಒಂದು ತಿಂಗಳ ಕಾಲಾವಕಾಶ ಕೇಳಿದ್ದು, ಆ ಡೆಡ್ ಲೈನ್‍ನಲ್ಲೂ ಕಾಮಗಾರಿ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

  • ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    – ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ತಡೆ ಹಿಡಿದ ಬಿಜೆಪಿ

    ಮಂಗಳೂರು: ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ತಲಪಾಡಿ ಟೋಲ್ ಗೇಟ್‍ನಲ್ಲಿ ಬುಧವಾರ ಟೋಲ್ ಸಂಗ್ರಹ ಸ್ಥಗಿತವಾಗಿದ್ದು, ಜನ ಒಂದು ದಿನದ ಮಟ್ಟಿಗೆ ಟೋಲ್ ಫ್ರೀ ಸಂಚಾರ ಮಾಡಿ ಖುಷಿ ಪಟ್ಟರು. ಈ ಟೋಲ್ ಸಂಗ್ರಹ ಇಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲು ಕಾರಣವಾಗಿದ್ದೂ ಅದೇ ಪಂಪ್‍ವೆಲ್ ಫೈಓವರ್ ಎನ್ನುವುದು ಒಂದು ವಿಶಿಷ್ಟ ಸುದ್ದಿ.

    ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿರುವ ಪಂಪ್‍ವೆಲ್ ಫ್ಲೈ ಓವರ್ ಇನ್ನೂ ಪೂರ್ಣಗೊಳ್ಳದಿರಲು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೂ ಸಂಸದ ನಳಿನ್ ಕುಮಾರ್ ಅವರು ಮಾತ್ರ ಅಧಿಕಾರಿಗಳ ತಲೆ ಮೇಲೆ ಹಾಕಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಪ್‍ವೆಲ್ ಫೈಓವರ್ ಬಳಿ ಭೇಟಿ ನೀಡಿದ್ದ ನಳಿನ್ ಕುಮಾರ್ ಕಟೀಲ್ ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಜನವರಿ 1ರಂದು ಫೈಓವರ್ ಉದ್ಘಾಟನೆ ಎಂದಿದ್ದರು. ಆದರೆ ಇನ್ನೂ ಕಾಮಗಾರಿ ಮುಗಿಯದಿದ್ದ ಕಾರಣ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವಾಗ ಪೂರ್ಣಗೊಳ್ಳುತ್ತೆ ಎಂದು ಸ್ಪಷ್ಟನೆ ಕೇಳಿದ್ದರು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

    ಅಧಿಕಾರಿಗಳು ಇನ್ನೂ ಕೆಲ ತಿಂಗಳ ಸಮಯ ಕೇಳಿರುವುದರಿಂದ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಗಡುವು ನೀಡಿದ್ದಾರೆ. ಜೊತೆಗೆ ಆ ಒಂದು ತಿಂಗಳ ಕಾಲ ಈ ಹೈವೇಲಿ ಸಿಗುವ ತಲಪಾಡಿ ಟೋಲ್ ಗೇಟ್‍ನಲ್ಲಿ ಯಾವುದೇ ವಾಹನಗಳಿಂದಲೂ ಟೋಲ್ ಶುಲ್ಕ ಸಂಗ್ರಹಿಸಬಾರದು ಎಂದು ಟೋಲ್ ಗುತ್ತಿಗೆ ಪಡೆದಿರುವ ನವಯುಗ್ ಕಂಪನಿಯ ಸಿಬ್ಬಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಸೂಚಿಸದ್ದರು. ಆದರೆ ಇಂದು ಮುಂಜಾನೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದ್ದನ್ನು ತಿಳಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಿಜೆಪಿ ಕಾರ್ಯಕರ್ತರೊಂದಿಗೆ ತಲಪಾಡಿ ಟೋಲ್ ಗೇಟ್‍ಗೆ ಧಾವಿಸಿದರು. ಬಳಿಕ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಸಾಂಕೇತಿಕವಾಗಿ ಇಂದು ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ಮಾಡದಂತೆ ಕೇಳಿಕೊಂಡರು.

    ಈ ವೇಳೆ ವಾಗ್ದಾದ ನಡೆದು ಬಳಿಕ ಒಂದು ದಿನ ಟೋಲ್ ಸಂಗ್ರಹ ಸ್ಥಗಿತಕ್ಕೆ ಟೋಲ್ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಸಂಸದರ ಸೂಚನೆ ಇರೋದು ಪಂಪ್‍ವೆಲ್ ಫೈಓವರ್ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂದು. ನಾಳೆಯಿಂದ ಮತ್ತೆ ಎಂದಿನಂತೆ ಟೋಲ್ ಸಂಗ್ರಹ ಇರುವುದರಿಂದ ಸಂಸದರು ಈ ಮಾತನ್ನೂ ಉಳಿಸಿಕೊಳ್ಳೋದಿಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.