Tag: Pumpkin

  • ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ನಾವಿಂದು ಹೇಳಿಕೊಡುತ್ತಿರೋ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ತುಂಬಾ ಮೃದು, ಕುಂಬಳಕಾಯಿ ಸ್ವಾದದ, ಅಗಿಯಲು ಮಜವೆನಿಸೋ ಸಖತ್ ರುಚಿಯಾದ ರೆಸಿಪಿಯಾಗಿದೆ. ಸಂಜೆ ವೇಳೆ ಒಂದು ಕಪ್ ಚಹಾದೊಂದಿಗೆ ಇಲ್ಲವೇ ಫ್ರೀ ಟೈಮ್‌ನಲ್ಲಿ ಈ ಕುಕೀಸ್ ನಿಮಗೆ ಜೊತೆಯಾಗಬಲ್ಲದು. ಇದಕ್ಕೆ ಓಟ್ಸ್ ಬೆರೆಸಿರುವುದರಿಂದ ಆರೋಗ್ಯಕರವೂ ಎನಿಸುತ್ತದೆ. ಮೃದುವಾದ ಸಿಹಿ ಕುಂಬಳಕಾಯಿ ಓಟ್ಸ್ ಕುಕೀಸ್ ಮಡೋದು ಹೇಗೆಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 1 ಕಪ್
    ದಾಲ್ಚಿನ್ನಿ ಪುಡಿ – ಅರ್ಧ ಟೀಸ್ಪೂನ್
    ಅಡುಗೆ ಸೋಡಾ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಕರಗಿಸಿದ ಬೆಣ್ಣೆ – ಅರ್ಧ ಕಪ್
    ಬ್ರೌನ್ ಶುಗರ್ – ಅರ್ಧ ಕಪ್
    ಸಕ್ಕರೆ ಪುಡಿ – ಕಾಲು ಕಪ್
    ಮೊಟ್ಟೆಯ ಹಳದಿ ಭಾಗ – 1
    ವೆನಿಲ್ಲಾ ಸಾರ – 1 ಟೀಸ್ಪೂನ್
    ಸಿಹಿ ಕುಂಬಳಕಾಯಿ ಪ್ಯೂರಿ – ಅರ್ಧ ಕಪ್
    ಓಟ್ಸ್ – ಅರ್ಧ ಕಪ್  ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟು, ದಾಲ್ಚಿನ್ನಿ ಪುಡಿ, ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಬೆಣ್ಣೆ, ಕಂದು ಸಕ್ಕರೆ, ಸಕ್ಕರೆ ಪುಡಿ ಸೇರಿಸಿ, 1-2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಮೊಟ್ಟೆಯ ಹಳದಿ ಭಾಗ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಕುಂಬಳಕಾಯಿ ಪ್ಯೂರಿಯನ್ನು ಸೇರಿಸಿ.
    * ಈಗ ಒಣ ಪದಾರ್ಥಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ನಿಧಾನವಾಗಿ ಬೆರೆಸಿ.
    * ಓಟ್ಸ್ ಅನ್ನು ಮಿಶ್ರಣಕ್ಕೆ ಹಾಕಿ ಬೆರೆಸಿ.
    * ಈಗ ಪಾತ್ರೆಗೆ ಪ್ಲಾಸ್ಟಿಕ್ ಕವರ್‌ನಿಂದ ಬಿಗಿಯಾಗಿ ಮುಚ್ಚಿ, 30 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
    * ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಹೊದಿಸಿ ಇಡಿ.
    * ಈಗ ಸುಮಾರು ಒಂದೂವರೆ ಚಮಚದಷ್ಟು ಮಿಶ್ರಣ ಬರುವಂತೆ ಕುಕೀಸ್ ಆಕಾರದಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿಕೊಳ್ಳಿ. ಪ್ರತಿ ಹಿಟ್ಟಿನ ಭಾಗಗಳ ನಡುವೆ ಸ್ವಲ್ಪ ಸ್ವಲ್ಪ ಅಂತರವಿರಲಿ.
    * ಈಗ ಬೇಕಿಂಗ್ ಶೀಟ್ ಅನ್ನು ಓವನ್‌ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಕುಕೀಸ್‌ಗಳನ್ನು ತೆಗೆದು 5 ನಿಮಿಷ ತಣ್ಣಗಾಗಿಸಿದರೆ ಮೃದುವಾದ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಂಬಳಕಾಯಿ ಕೇಳುವ ಧೈರ್ಯ ಬೆಳೆಸಿಕೊಳ್ಳಿ: ಸತೀಶ್ ಜಾರಕಿಹೊಳಿ

    ಕುಂಬಳಕಾಯಿ ಕೇಳುವ ಧೈರ್ಯ ಬೆಳೆಸಿಕೊಳ್ಳಿ: ಸತೀಶ್ ಜಾರಕಿಹೊಳಿ

    ಕೊಪ್ಪಳ: ಶೋಷಿತರು ಸದಾ ಹಿಂದೆ ಬೀಳಲು ಮುಖ್ಯ ಕಾರಣವೇ ಮೌಢ್ಯಾಚರಣೆ ಮತ್ತು ಅನಕ್ಷರತೆಯಾಗಿದ್ದು, ಅತ್ಯಂತ ಹೆಚ್ಚಿನ ಪ್ರೊಟೀನ್ ಇರುವ ಕುಂಬಳಕಾಯಿಯನ್ನೇ (Pumpkin) ನಾವು ಕೇಳಲು ಪ್ರಾರಂಭಿಸಬೇಕು ಎಂದು ಶಾಸಕ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ (Satish Jarkiholi) ಕರೆ ನೀಡಿದರು.

    ಕೊಪ್ಪಳ (Koppala) ತಾಲೂಕಿನ ಲೇಬಗೇರಿ ಹತ್ತಿರದ ಹಟ್ಟಿ ಕ್ರಾಸ್ ಬಳಿ ಖಾಸಗಿ ನಿವೇಶನದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಬಹುತ್ವ ಭಾರತದ ಸವಾಲುಗಳು ಚಿಂತನಾ ಶಿಬಿರವನ್ನು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದ ಅವರು, ಶೋಷಿತ ವರ್ಗದ ಜನರು ಶಿಕ್ಷಣವನ್ನು ಪಡೆಯುವ ಮೂಲಕ ಮೂಢನಂಬಿಕೆಯನ್ನು ಬಿಡಬೇಕು. ನಮ್ಮನ್ನು ವಿಷಕಾರಿ ಬದನೆಕಾಯಿ ತಿನ್ನಲು ಹಚ್ಚಿರುವ ಕೆಲವು ಜನರು ತಾವು ಮಾತ್ರ ಅತ್ಯಂತ ಹೆಚ್ಚಿನ ಪೋಷಕಾಂಶ ಇರುವ ಕುಂಬಳಕಾಯಿಯನ್ನು ದಾನ ಪಡೆದು ಅಲ್ಲಿಯೂ ನಮ್ಮನ್ನು ಶೋಷಿಸಿದ್ದಾರೆ ಎಂದು ಕಿಡಿಕಾರಿದರು.

    ಈ ಹಿನ್ನೆಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಮೂಲಕ ತಲಾತಲಾಂತರದಿಂದ ನಮ್ಮ ತಲೆಯಲ್ಲಿ ತುಂಬಿರುವ ಸುಳ್ಳನ್ನು ಹೋಗಲಾಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅದು ಅತ್ಯಂತ ನಿಧಾನವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ತಾವು ಸಹ ಒಂದು ದಿನ ಶಿಬಿರದಲ್ಲಿ ಪಾಲ್ಗೊಂಡು ಎಲ್ಲಾ ಅರಿತುಬಿಟ್ಟಿದ್ದೇನೆ ಎನ್ನಲು ಆಗಲ್ಲ. ಸಮಾಧಾನದಿಂದ ವರ್ಷಪೂರ್ತಿ ತಿಳಿದುಕೊಂಡು ಸಾಗಬೇಕಿದೆ ಎಂದರು.

    ಮಾನವ ಬಂಧುತ್ವ ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡಲ್ಲ. ಇದೊಂದು ಪಕ್ಷಾತೀತ ಶೋಷಿತರ ಸಂಘಟನೆಯಾಗಿದೆ. ಚುನಾವಣೆಗಳಲ್ಲಿ ಯಾರ ಪರವಾಗಿ ಮತ ಚಲಾವಣೆ ಮಾಡಬೇಕು ಎಂದು ಯೋಚಿಸುವಾಗ ಯಾರು ನಿಮ್ಮ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಗೌರವ ಹೊಂದಿದ್ದಾರೆ, ಅವುಗಳನ್ನು ರಕ್ಷಿಸುವ ಭರವಸೆ ಸಿಗುತ್ತದೆ, ಅಂತವರನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ಅಧಿಕಾರಿಗಳಂತೆ ನಟಿಸಿ ಮೊಬೈಲ್ ಟವರ್‌ನ್ನೇ ಕದ್ದ ಖದೀಮರು

    ಒಂದು ವರ್ಗ ಇತಿಹಾಸವನ್ನೇ ತಿರುಚಿ ಸುಳ್ಳನ್ನೇ ಇತಿಹಾಸ ಮಾಡುವ ಹುನ್ನಾರವಿದೆ. ದೇಶದ ಇತಿಹಾಸ ಸರಿ ಇಲ್ಲ, ಅದನ್ನು ಬದಲಿಸಿ ಬರೆಯಬೇಕಿದೆ ಎನ್ನುತ್ತಿರುವ ದೇಶದ ಆಡಳಿತ ಪಕ್ಷದ ಸಚಿವರ ಮಾತು ಖಂಡನೀಯ ಎಂದರು. ಇದನ್ನೂ ಓದಿ: ಡಿ.1 ರಿಂದ ಸುರತ್ಕಲ್ ಬಂದ್, ಹೆಜಮಾಡಿ ಟೋಲ್ ಜೊತೆ ವಿಲೀನ – ದರ ಎಷ್ಟು?

    Live Tv
    [brid partner=56869869 player=32851 video=960834 autoplay=true]

  • ದಸರಾ, ಆಯುಧಪೂಜೆ – ಗಗನಕ್ಕೇರಿದ ಹೂ, ಅಗತ್ಯ ವಸ್ತುಗಳ ಬೆಲೆ

    ದಸರಾ, ಆಯುಧಪೂಜೆ – ಗಗನಕ್ಕೇರಿದ ಹೂ, ಅಗತ್ಯ ವಸ್ತುಗಳ ಬೆಲೆ

    ಬೆಂಗಳೂರು: ದಸರಾ (Dasara) ಮತ್ತು ಆಯುಧಪೂಜೆ (Ayudha Puja) ಹಿನ್ನೆಲೆ ನಗರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿನ್ನೆಲೆ ನಾಳೆ ನಾಡಿದ್ದು ಇನ್ನಷ್ಟು ದರ ಏರಿಕೆ ಸಾಧ್ಯತೆ ಇದ್ದು, ಇಂದೇ ಜನ ಖರೀದಿಗೆ ಮುಂದಾಗಿದ್ದಾರೆ.

    ಹಬ್ಬದ ದಿನಗಳು ಹತ್ತಿರ ಬಂದರೆ ಸಾಕು ಜನಸಾಮಾನ್ಯರ ಜೇಬಿಗೆ ಹೊರೆ ಬೀಳುವುದು ಸಾಮಾನ್ಯ. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ. ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಎರಡು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ. ಇದನ್ನೂ ಓದಿ : ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು – ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ

    ಈ ಬಾರಿ ಆಯುಧಪೂಜೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಸಾಮಾನ್ಯವಾಗಿ ಆಯುಧಪೂಜೆ ಸಂದರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆಗೆ, ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ದುಪ್ಪಟ್ಟಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ದರ ಡಬಲ್ ಏರಿಕೆಯಾಗಿದೆ. ಆದರೆ ವಿಶೇಷ ಅಂದರೆ ಹಣ್ಣು ಮತ್ತು ತರಕಾರಿ ದರ ತಟಸ್ಥವಾಗಿದ್ದು, ಹೂವಿನ ದರ ಕೈಸುಡುತ್ತಿದೆ. ಇನ್ನೂ ನಾಳೆ, ನಾಡಿದ್ದು ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆ ಇದ್ದು, ಹೂ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇತ್ತ ಗ್ರಾಹಕರು ಕೂಡ ಹೂವಿನ ಬೆಲೆ ಜಾಸ್ತಿ ಆಗುವ ಸಾಧ್ಯತೆ ಹಿನ್ನೆಲೆ ಇಂದೇ ವ್ಯಾಪಾರಕ್ಕೆ ಮುಂದಾಗಿದ್ದಾರೆ.

    ಹೂವಿನ ಬೆಲೆ ಕೆಜಿಗೆ ಎಷ್ಟು?
    ಮಲ್ಲಿಗೆ ಹೂ – 1000 ಸಾವಿರ ರೂ.
    ಸೇವಂತಿಗೆ – 300-500  ರೂ.
    ಚೆಂಡು ಹೂ – 150 ರೂ .
    ಕನಕಾಂಬರ – 3 ಸಾವಿರ
    ಸುಗಂಧರಾಜ – 400 ರೂ.
    ಕಾಕಡ – 700-800 ರೂ.

    ಕೇವಲ ಹೂ ಮಾತ್ರ ಅಲ್ಲ. ಈ ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದರೆ ಕುಂಬಳಕಾಯಿ (Pumpkin) ಹಾಗೂ ಬಾಳೆ ಕಂಬ. ಇವುಗಳ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂ. ಗೆ ಏರಿಕೆ ಆಗಿದೆ. ಕಳೆದ ವಾರ 15 ರೂ. ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ. ಬಾಳೆ ಕಂಬ ಸಹ ಜೊತೆಗೆ 150 ರೂ. ಆಗಿದೆ. ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.

    ಒಟ್ಟಾರೆ ನಾಳೆ ನಾಡಿದ್ದು ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಇಂದೇ ನಿಮ್ಮ ಖರೀದಿ ಮಾಡಿ ಮುಗಿಸಿದರೆ ಸ್ವಲ್ಪ ಹಣ ಉಳಿತಾಯ ಆದರೂ ಆಗಬಹುದು. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

    Live Tv
    [brid partner=56869869 player=32851 video=960834 autoplay=true]

  • ಕುಂಬಳಕಾಯಿ 47,000 ರೂ.ಗೆ ಹರಾಜು

    ಕುಂಬಳಕಾಯಿ 47,000 ರೂ.ಗೆ ಹರಾಜು

    ತಿರುವನಂತಪುರಂ: ಕೇರಳದಲ್ಲಿ 5 ಕೆ.ಜಿ ಇರುವ ಕುಂಬಳಕಾಯಿಯು(Pumpkin) 47,000 ರೂ.ಗೆ ಮಾರಾಟವಾಗುವ(Sold) ಮೂಲಕ ಸುದ್ದಿಯಾಗಿದೆ.

    ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸಾರ್ವಜನಿಕ ಹರಾಜಿನಲ್ಲಿ(Bidding) ಭಾರೀ ಮೊತ್ತಕ್ಕೆ ಸೇಲ್‌ ಆಗಿದೆ. ಈ ವರ್ಷ ಚೆಮ್ಮನ್ನಾರ್‌ನಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಈ ವೇಳೆ ಕುಂಬಳಕಾಯಿಯು ಭಾರೀ ಮೊತ್ತಕ್ಕೆ ಮಾರಾಟವಾಗಿ ಇತಿಹಾಸವನ್ನು ನಿರ್ಮಿಸಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯ ರಸ್ತೆ ಬದಿ ಮಣ್ಣು ಕುಸಿತ – ಘನ ವಾಹನ ಸಂಚಾರ ನಿಷೇಧ ಹೇರಲು ಆಗ್ರಹ

    ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗೆ ಮಾರಾಟವಾಯಿತು. ಈ ವೇಳೆ ಬಿಡ್ಡಿಂಗ್‌ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ

    Live Tv
    [brid partner=56869869 player=32851 video=960834 autoplay=true]

  • ಕುಂಬಳಕಾಯಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು

    ಕುಂಬಳಕಾಯಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು

    ಕುಂಬಳಕಾಯಿ ಸೇವನೆಯಿಂದ ಹಲವು ಲಾಭವಿದೆ. ಕುಂಬಳಕಾಯಿಯಲ್ಲಿರುವ ಪೌಷ್ಟಿಕ ಅಂಶ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ದೂರ ಮಾಡುವುದಲ್ಲದೇ ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ. ಹೀಗಾಗಿ ಇಲ್ಲಿ ಕುಂಬಳಕಾಯಿ ಸೇವನೆಯಿಂದ ಆಗುವ ಲಾಭಗಳ ಮಾಹಿತಿಯನ್ನು ನೀಡಲಾಗಿದೆ.

    1. ಹೊಟ್ಟೆಯನ್ನು ಆರೋಗ್ಯವಾಗಿ ಇರಿಸುತ್ತದೆ: ಕುಂಬಳಕಾಯಿ ನಮ್ಮ ಹೊಟ್ಟೆಗೆ ಲಾಭದಾಯಕ. ಅದರ ಸೇವನೆಯಿಂದ ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿಯಲ್ಲಿ ಡೈಯಟ್ರಿ ಫೈಬರ್ ಇರುವುದರ ಕಾರಣ ಹೊಟ್ಟೆ ಸಂಬಂಧಿತ ಕಾಯಿಲೆಯನ್ನು ದೂರ ಮಾಡುತ್ತದೆ. ಅಲ್ಲದೇ ಇದು ನಮಗೆ ಆ್ಯಸಿಡಿಟಿ ಮತ್ತು ಹೊಟ್ಟೆ ಉರಿಯನ್ನು ದೂರ ಮಾಡುತ್ತೆ.

    2. ಡಯಾಬಿಟಿಸ್ ರೋಗಿಗಳಿಗೆ ಉತ್ತಮ: ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಇನ್ಸೂಲಿನ್‍ಗೆ ಸಮಾವಾಗಿರುತ್ತದೆ. ಅಲ್ಲದೇ ಜಾಸ್ತಿಯಾಗಿರುವ ಶುಗರ್ ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ವಾರಕ್ಕೆ ಎರಡು ಬಾರಿ ಕುಂಬಳಕಾಯಿಯನ್ನು ಸೇವಿಸಬೇಕು.

    3. ಕ್ಯಾನ್ಸರ್ ತಡೆಗಟ್ಟುತ್ತದೆ: ಕುಂಬಳಕಾಯಿಯಲ್ಲಿ ಆ್ಯಂಟಿ- ಆಕ್ಸಿಡೆಂಟ್ ಅಂಶವಿರುತ್ತದೆ. ಇದು ದೇಹದಲ್ಲಿರುವ ಕ್ಯಾನ್ಸರ್ ಸ್ಲೇಸ್ ಹೆಚ್ಚುವುದನ್ನು ತಡೆಯುತ್ತದೆ. ಹಾಗಾಗಿ ನಿಮ್ಮ ಡಯಟ್ ಲಿಸ್ಟ್ ನಲ್ಲಿ ಕುಂಬಳಕಾಯಿ ಪಲ್ಯ, ಜ್ಯೂಸ್ ಅನ್ನು ಸೇರಿಸಿಕೊಳ್ಳಿ. ಇದರ ಸೇವನೆಯಿಂದ ಕ್ಯಾನ್ಸರ್ ಅಂತಹ ಗಂಭೀರ ರೋಗವನ್ನು ತಡೆಯುತ್ತದೆ.

    4. ಒತ್ತಡವನ್ನು ದೂರ ಮಾಡುತ್ತದೆ: ಕುಂಬಳಕಾಯಿ ಸೇವನೆಯಿಂದ ಒತ್ತಡ, ನಿದ್ರಾಹೀನತೆ, ಕೋಪ, ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರ ಹೊರತು ಕುಂಬಳಕಾಯಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

    5. ಹೃದಯವನ್ನು ಆರೋಗ್ಯವಾಗಿ ಇರಿಸುತ್ತದೆ: ಕುಂಬಳಕಾಯಿ ಸೇವಿಸಿದರೆ ಅದು ನಮ್ಮ ದೇಹದ ಕೋಲೆಸ್ಟ್ರಾಲ್ ಲೆವೆಲ್ ಮೆಂಟೇನ್ ಮಾಡಿ ಹೃದಯವನ್ನು ಆರೋಗ್ಯವಾಗಿರುತ್ತದೆ. ನಿಮಗೆ ಹೃದಯ ಸಂಬಂಧಿತ ಸಮಸ್ಯೆಯಿದರೆ, ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ.

    6. ತೂಕ ಇಳಿಸಲು ಸಹಾಯ: ಕುಂಬಳಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಹಾಗೂ ಫೈಬರ್ ಜಾಸ್ತಿಯಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಪದೇ ಪದೇ ಹೊಟ್ಟೆ ಹಸಿಯುವುದಿಲ್ಲ. ಇದು ನಿಮ್ಮ ಹೊಟ್ಟೆಯನ್ನು ತುಂಬಿರಿಸುತ್ತದೆ. ಹಾಗಾಗಿ ನೀವು ಅಧಿಕ ಆಹಾರ ಸೇವಿಸುವುದಿಲ್ಲ. ಇದರಿಂದಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    7. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ: ಕುಂಬಳಕಾಯಿಯಲ್ಲಿ ವಿಟಮಿನ್ ಎ ಅಂಶವಿರುವುದರಿಂದ ನಿಮ್ಮ ಕಣ್ಣುಗಳಿಗೆ ಇದು ಒಳ್ಳೆಯದು. ದಿನ ಒಂದು ಕಪ್ ಕುಂಬಳಕಾಯಿ ಸೇವಿಸಿದರೆ, ಕೆಲವೇ ದಿನಗಳಲ್ಲಿ ಇದು ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.

    ಸದ್ಯ ಕುಂಬಳಕಾಯಿ ಸೇವನೆಯಿಂದ ಮೇಲಿರುವ ಎಲ್ಲ ಸಮಸ್ಯೆಗಳು ದೂರವಾಗಿ ನಿಮ್ಮನ್ನು ಆರೋಗ್ಯವಾಗಿ ಇರಿಸಲು ಸಹಾಯ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews