Tag: pulikeshinagar

  • ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ

    ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ

    ಬೆಂಗಳೂರು: ಹಾಡಹಗಲೇ ಡ್ರ್ಯಾಗರ್ ಹಿಡಿದುಕೊಂಡು ಪುಂಡ ಯುವಕನೊಬ್ಬ ನಡು ರಸ್ತೆಯಲ್ಲಿ ಯುವತಿಗೆ (Woman) ಕಿರುಕುಳ (Molest) ನೀಡಿರುವ ಆಘಾತಕಾರಿ ಘಟನೆ ಪುಲಿಕೇಶಿನಗರದಲ್ಲಿ (Pulikeshinagar) ನಡೆದಿದೆ.

    ನಗರದ ವಿವೇಕಾನಂದ ರೆಸಿಡೆನ್ಸಿ ಬಳಿ ಯುವಕನೊಬ್ಬ ಡ್ರ್ಯಾಗರ್ ಹಿಡಿದುಕೊಂಡು ಯುವತಿಗೆ ಕಿರುಕುಳ ನೀಡಿದ್ದಾನೆ. ಯುವತಿಯನ್ನು ಬೆನ್ನಟ್ಟುತ್ತಾ ಬಂದ ಅಪರಿಚಿತ ಯುವಕ ಆಕೆಯ ಮೊಬೈಲ್ ಅನ್ನು ಕಸಿಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಮಹಿಳೆಯೊಬ್ಬರು ಇದನ್ನು ಗಮನಿಸಿ ಯುವತಿಯ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಹಲಸೂರು ಗೇಟ್ ಸಂಚಾರಿ ಎಎಸ್‌ಐ ಮಲಗಿದ್ದಲ್ಲೇ ಸಾವು

    ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸರಿಯಾಗಿ ಹೊಯ್ಸಳ ಪೆಟ್ರೋಲಿಂಗ್ ಆಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?

  • ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು

    ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು

    ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದ ಗೋಶಾಲೆಯಲ್ಲಿ ನಡೆದ ರೌಡಿಶೀಟರ್ ರಂಜಿತ್ ಕೊಲೆ ಪ್ರಕರಣದ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಬ್ಬರು ಯುವಕರು ಕಟುಕರನ್ನು ಮೀರಿಸುವ ರೀತಿಯಲ್ಲಿ ರಂಜಿತ್‍ನನನ್ನ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ. ಗುರುವಾರ ರಾತ್ರಿ ಪುಲಿಕೇಶಿನಗರದ ಪೊಲೀಸರು ಈ ಇಬ್ಬರು ಆರೋಪಿಗಳಾದ ಶ್ಯಾಮ್ ಮತ್ತು ಸಂತೋಷ್ ಮೇಲೆ ಗುಂಡು ಹಾರಿಸಿದ್ದಾರೆ. ಬಾಣಸವಾಡಿ ಫ್ಲೈಓವರ್ ಬಳಿ ಆರೋಪಿಗಳನ್ನ ಅರೆಸ್ಟ್ ಮಾಡಲು ಮುಂದಾದ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ರು. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.

    ಫ್ರೇಜರ್ ಟೌನ್‍ನ ರೌಡಿಶೀಟರ್ ರಂಜಿತ್ ಬುಧವಾರ ರಾತ್ರಿ ಸುಮಾರು 12.30ರ ವೇಳೆಯಲ್ಲಿ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ಗೋಶಾಲೆಯಲ್ಲಿ ಊಟಕ್ಕೆ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಬಂದು ಏಕಾಏಕಿ ರಂಜಿತ್ ಮೇಲೆ ಮಾರಕಾಸ್ತ್ರಗಳಿಂದ ಇರಿದಿದ್ದರು. ಪರಿಣಾಮ ವಿಪರೀತ ರಕ್ತಸ್ತಾವವಾಗಿ ರಂಜಿತ್ ಗೋವುಗಳ ನಡುವೆ ಪ್ರಾಣಬಿಟ್ಟಿದ್ದ.

    ಈ ಹಿಂದೆ ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿಯೂ ಕೆಲ ಕೇಸ್ ದಾಖಲಾಗಿದ್ದವು.

    ಕೊಲೆಗೆ ಸಂಬಂಧಿಸಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    https://www.youtube.com/watch?v=U7-TcO2IuDw&feature=youtu.be

  • ಊಟ ಮಾಡ್ತಿದ್ದಾಗ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‍ನ ಬರ್ಬರ ಹತ್ಯೆ

    ಊಟ ಮಾಡ್ತಿದ್ದಾಗ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‍ನ ಬರ್ಬರ ಹತ್ಯೆ

    ಬೆಂಗಳೂರು: ಊಟ ಮಾಡುತ್ತಿದ್ದ ವೇಳೆಯಲ್ಲೇ ದುಷ್ಕರ್ಮಿಗಳು ಬಂದು ರೌಡಿಶೀಟರೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.

    ರಂಜಿತ್(30) ಕೊಲೆಯಾದ ರೌಡಿ ಶೀಟರ್. ಈ ಘಟನೆ ನಿನ್ನೆ ತಡರಾತ್ರಿ ಸುಮಾರು 12.30ರ ವೇಳೆಯಲ್ಲಿ ಫ್ರೇಜರ್ ಟೌನ್ ಬಳಿಯ ಗೋಶಾಲೆಯಲ್ಲಿ ನಡೆದಿದೆ.

    ಫ್ರೇಜರ್ ಟೌನ್‍ನ ರೌಡಿ ಶೀಟರ್ ರಂಜಿತ್ ಬುಧವಾರ ರಾತ್ರಿ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ಗೋಶಾಲೆಯಲ್ಲಿ ಊಟಕ್ಕೆ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಬಂದು ಏಕಾಏಕಿ ರಂಜಿತ್ ಮೇಲೆ ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ಪರಿಣಾಮ ವಿಪರೀತ ರಕ್ತಸ್ತಾವವಾಗಿ ರಂಜಿತ್ ಗೋವುಗಳ ನಡುವೆ ಪ್ರಾಣಬಿಟ್ಟಿದ್ದಾನೆ.

    ಈ ಹಿಂದೆ ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿಯೂ ಕೆಲ ಕೇಸ್ ದಾಖಲಾಗಿದ್ದವು. ಸದ್ಯ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.