Tag: Puducherry

  • ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ

    ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ

    ಪುದುಚೆರಿ: ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ (Model), ಸೋಶಿಯಲ್ ಮೀಡಿಯಾ ಸ್ಟಾರ್ ಸ್ಯಾನ್ ರೆಚಲ್ (San Rechal) ಪುದುಚೆರಿಯಲ್ಲಿ (Puducherry) ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    26 ವರ್ಷದ ಸ್ಯಾನ್ ರೆಚಲ್ ತನ್ನ ತಂದೆಯ ಮನೆಗೆ ಭೇಟಿ ನೀಡಿದ ಸಂದರ್ಭ ಹೆಚ್ಚಿನ ಸಂಖ್ಯೆಯ ಮಾತ್ರೆಗಳನ್ನು ಸೇವಿಸಿದ್ದರು. ಮೊದಲಿಗೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಯಾನ್ ರೆಚಲ್ ಸಾವನ್ನಪ್ಪಿದ್ದಾರೆ. ಆರ್ಥಿಕ ಒತ್ತಡ ಮತ್ತು ವೈಯಕ್ತಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಸ್ಯಾನ್ ರೆಚಲ್ ಡೆತ್ ನೋಟ್‌ನಲ್ಲಿ ಆಕೆಯ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಸದ್ಯ ಡೆತ್ ನೋಟ್ ವಶಪಡಿಸಿಕೊಂಡ ಪೊಲೀಸರು ಆಕೆಯ ವೈವಾಹಿಕ ಜೀವನದ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: 1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    ಲಂಡನ್, ಜರ್ಮನಿ ಮತ್ತು ಫ್ರಾನ್ಸ್ನಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ರೆಚಲ್, ತಮ್ಮ ಸಾಧನೆಗಳ ಮೂಲಕ ಯುವತಿಯರಿಗೆ ಸ್ಫೂರ್ತಿಯಾಗಿದ್ದರು. ಸ್ಯಾನ್ ರೆಚಲ್ ಕೇವಲ ಮಾಡೆಲಿಂಗ್ ಲೋಕದಲ್ಲಿ ಮಿಂಚಿದ್ದಲ್ಲದೇ ವರ್ಣಭೇದ ನೀತಿಯನ್ನು ಪ್ರಶ್ನಿಸಿ, ಮಹಿಳಾ ಸುರಕ್ಷತೆಗಾಗಿ ಹೋರಾಡಿದ್ದರು. ಇದನ್ನೂ ಓದಿ: ಶಕ್ತಿಗೆ ಇಂದು 500 ಕೋಟಿ ಟಿಕೆಟ್‌ ಸಂಭ್ರಮ- ಕಂಡಕ್ಟರ್‌ ಆಗಿ ಟಿಕೆಟ್‌ ಹಂಚಿದ ಸಿಎಂ

    2020ರಲ್ಲಿ ಮಿಸ್ ಪುದುಚೇರಿ, 2019ರಲ್ಲಿ ಮಿಸ್ ಬೆಸ್ಟ್ ಆಟಿಟ್ಯೂಡ್, 2019ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಮತ್ತು 2022 ರಲ್ಲಿ ಕ್ವೀನ್ ಆಫ್ ಮದ್ರಾಸ್ ಖ್ಯಾತಿಗಳನ್ನು ಗಳಿಸಿದ್ದ ರೆಚಲ್, 2023ರಲ್ಲಿ ಮಿಸ್ ಆಫ್ರಿಕಾ ಗೋಲ್ಡನ್ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್-ಅಪ್ ಆಗಿ ಸ್ಯಾನ್ ರೆಚಲ್ ಮಿಂಚಿದ್ದರು. ಇದನ್ನೂ ಓದಿ: ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

  • Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು

    Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು

    ಚೆನ್ನೈ: ಫೆಂಗಲ್ ತೂಫಾನ್ (Fengal Cyclone) ತಮಿಳುನಾಡು-ಪುದುಚ್ಚೆರಿಯಲ್ಲಿ (Tamilnadu Puducherry) ಜಲ ಪ್ರಳಯವನ್ನೇ ಸೃಷ್ಟಿಸಿದೆ. ಶನಿವಾರ ಅರ್ಧರಾತ್ರಿಯೇ ಪುದುಚ್ಚೇರಿ ಸಮೀಪ ತೀರ ದಾಟಿದ ಫೆಂಗಲ್, ಹವಾಮಾನ ಇಲಾಖೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿತು.

    ಭಾನುವಾರ ಮಧ್ಯಾಹ್ನದವರೆಗೂ ಅಂದರೆ ಬರೋಬ್ಬರಿ 17 ಗಂಟೆ ಸಮಯ ಅಲ್ಲೇ ಕೇಂದ್ರೀಕೃತವಾದ ಫೆಂಗಲ್‌ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬೀಸಿದ ರಣಗಾಳಿಗೆ ಮಳೆ ಜೊತೆಯಾದ ಪರಿಣಾಮ ಪುದುಚ್ಚೆರಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕರ್ನಾಟಕ, ಕೇರಳದತ್ತ ಫೆಂಗಾಲ್ ಸೈಕ್ಲೋನ್- ಕೊಡಗಿಗೆ ರೆಡ್‌, ಯಾವ ಜಿಲ್ಲೆಗಳಿಗೆ ಯಾವ ಅಲರ್ಟ್‌?

     

    510 ಮಿಲಿಮೀಟರ್ ಮಳೆಗೆ ರಸ್ತೆಗಳು, ಕಾಲನಿಗಳು ಜಲಾವೃತವಾಗಿವೆ. ವಾಹನಗಳು ಮುಳುಗಡೆ ಆಗಿವೆ. ರಕ್ಷಣಾ ಪಡೆಗಳು ಸಂತ್ರಸ್ತರ ರಕ್ಷಣೆ ಮಾಡಿವೆ. ನೆರೆಯ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿಯೇ ಕಂಡುಕೇಳರಿಯದ ರೀತಿಯಲ್ಲಿ ದಾಖಲೆಯ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದ 4 ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ

    ಚೆನ್ನೈ, ತಿರುವಣ್ಣಮಲೈ, ಕೃಷ್ಣಗಿರಿ, ಕಲ್ಲಕುರಿಚ್ಚಿ, ವಿಲ್ಲುಪ್ಪುರಂ, ಕಡಲೂರು, ಕಾಂಚಿಪುರಂ, ವೆಲ್ಲೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುವಣ್ಣಾಮಲೈನಲ್ಲಿ ಗುಡ್ಡ ಕುಸಿದು ಏಳು ಮಂದಿ ಕಣ್ಮರೆಯಾಗಿದ್ದಾರೆ. ಅವರ ಪತ್ತೆಗೆ ಕಳೆದ ರಾತ್ರಿಯಿಂದ ನಿರಂತರ ಕಾರ್ಯಚರಣೆ ನಡೆದಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ.

    ಸದ್ಯ ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿರುವ ಫೆಂಗಲ್ ತುಂಬಾ ನಿಧಾನವಾಗಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದೆ. ಇಂದು ಮಧ್ಯರಾತ್ರಿಯವರೆಗೂ ಪುದುಚ್ಚೆರಿ, ಉತ್ತರ ತಮಿಳುನಾಡಿನಲ್ಲೇ ಕೇಂದ್ರೀಕೃತವಾಗಿ ಇರಲಿದೆ. ಮಳೆ ಸಂಬಂಧಿ ಅವಘಡಗಳಿಂದ ತಮಿಳುನಾಡು-ಪುದುಚ್ಚೆರಿಯಲ್ಲಿ ಈವರೆಗೂ ಕನಿಷ್ಠ 11 ಮಂದಿ ಬಲಿ ಆಗಿದ್ದಾರೆ.

    ಎಲ್ಲೆಲ್ಲಿ ಏನಾಗಿದೆ?
    ಪುದುಚ್ಚೆರಿ ಜಲಮಯವಾಗಿದ್ದು ಮನೆಗಳ ಬಳಿ ಪ್ರವಾಹದಂತೆ ನೀರು ಹರಿಯುತ್ತಿದೆ. ತಿರುವಣ್ಣಾಮಲೈಯಲ್ಲಿ ಮನೆಗಳ ಮೇಲೆ ಬಂಡೆ ಉರುಳಿದರೆ ದೇವಸ್ಥಾನದ ಗೋಡೆಗಳು ಕುಸಿದಿವೆ. ಎರ್ಕಾಡ್ ಮುಖ್ಯರಸ್ತೆಯಲ್ಲಿ ಭೂಕುಸಿತವಾಗಿದೆ.

    ಕೃಷ್ಣಗಿರಿಯಲ್ಲಿ ಕೆರೆ ಕೋಡಿ ಒಡೆದು ಮನೆಗಳು ಜಲಾವೃತವಾಗಿದ್ದು ನಿಂತಿದ್ದ ವಾಹನಗಳು ನೀರುಪಾಲಾಗಿವೆ. ಪೊಲೀಸ್‌ ಠಾಣೆಯ ಮುಳುಗಿದೆ.

    ವಿಳ್ಳುಪುರಂ-ವೇಲೂರು ಹೆದ್ದಾರಿ ಮುಳುಗಡೆಯಾಗಿದೆ. ಬೋಟ್ ಮೂಲಕ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ.

     

  • ಫೆಂಗಲ್ ಚಂಡಮಾರುತ ಎಫೆಕ್ಟ್‌ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!

    ಫೆಂಗಲ್ ಚಂಡಮಾರುತ ಎಫೆಕ್ಟ್‌ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!

    – ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗೂ ಯೆಲ್ಲೋ ಅಲರ್ಟ್
    – ಕೋಲಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ಬೆಂಗಳೂರು: ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ (Cyclone Fengal) ಅಬ್ಬರಿಸಿ ಹೈರಾಣಾಗಿಸಿದ್ರೆ, ಇತ್ತ ಬೆಂಗಳೂರಿನಲ್ಲಿ (Bengaluru) ಸೈಲೆಂಟ್ ಆಗೇ ಕಾಟ ಕೊಡ್ತಿದೆ. ಎರಡು ದಿನದಿಂದ ಬಿಸಿಲು ಕಾಣದ ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಮಳೆಯ ಕಾಟ ಎದುರಾಗಲಿದ್ದು, ಮುಂದಿನ ಎರಡ್ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ.

    ಫೆಂಗಲ್ ಚಂಡಮಾರುತ ಆಂಧ್ರ, ತಮಿಳುನಾಡು (TamilNadu) ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿ ಅವಾಂತರ ಸೃಷ್ಟಿಸಿದೆ. ಅತ್ತ ಜೋರು ಮಳೆಗಾಳಿಗೆ ಜನ ಕಂಗಾಲಾಗಿದ್ರೆ, ಇತ್ತ ರಾಜ್ಯದಲ್ಲಿ ಫೆಂಗಲ್ ಸೈಲೆಂಟ್ ಎಫೆಕ್ಟ್‌ಗೆ ಹೈರಾಣಾಗಿದ್ದಾರೆ. ಎರಡು ದಿನದಿಂದ ಜಿಟಿ ಜಿಟಿ ಮಳೆ, ಗಾಳಿ, ಚಳಿಗೆ ಬೇಸರಗೊಂಡಿರುವ ಬೆಂಗಳೂರಿಗರಿಗೆ ಮುಂದಿನ ಎರಡ್ಮೂರು ದಿನ ಇದೇ ವಾತವರಣ ಕಾಟ ಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದು ಟ್ರೈನಿಂಗ್‌ ಮುಕ್ತಾಯ.. ನಾಳೆ DySP ಆಗಿ ಚಾರ್ಜ್‌ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಅಂತ್ಯ

    ಹೌದು. ಚಂಡಮಾರುತದ (Cyclone) ಎಫೆಕ್ಟ್ ಮುಂದಿನ ಮೂರ್ನಾಲ್ಕು ದಿನ ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ನಿನ್ನೆಯಿಂದಲೇ ಹಲವೆಡೆ ಮಳೆಯಾಗುತ್ತಿದೆ. ಮುಂದುವರಿದು ಬೆಂಗಳೂರಿನಲ್ಲಿ ನಿನ್ನೆಯಿಂದಲೇ ವರುಣ ಕಾಟ ಆರಂಭವಾಗಿದೆ.

    ಬಿಟ್ಟು ಬಿಟ್ಟು ಜಿಟಿ ಜಿಟಿಯಾಗಿ ಸುರಿಯುತ್ತಿರೋ ಮಳೆರಾಯ ಸೋಮವಾರ-ಮಂಗಳವಾರ ಸಹ ಕಾಟ ಕೊಡುವ ಸಾಧ್ಯತೆ ಇದೆ. ವಾರದ ಆರಂಭದ ದಿನವಾಗಿರೋ ಕಾರಣ ಮಳೆಯ ಎಫೆಕ್ಟ್ ನಗರದಲ್ಲಿ ಕೊಂಚ ಹೆಚ್ಚಾಗಿಯೇ ತಟ್ಟುವ ಸಾಧ್ಯತೆ ಇದೆ. ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳಿಗೆ ಮಳೆಯಿಂದ ಸ್ವಲ್ಪ ಎದುರಿಸುವ ಸಾಧ್ಯತೆ ಇದೆ. ಜೊತೆಗೆ ಕನಿಷ್ಠ ಉಷ್ಣಾಂಶ ಬೆಂಗಳೂರು ನಗರದಲ್ಲಿ ಇಳಿಯಾಗಲಿದ್ದು, ದಿನವಿಡೀ ಮೋಡ ಕವಿದ ವಾತವರಣ ಉಂಟಾಗಿ ಚಳಿಯು ಮತ್ತು ಶೀತಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ

    ಇನ್ನೂ ಇದರ ಎಫೆಕ್ಟ್ ಬೆಂಗಳೂರು ಹೊರತುಪಡಿಸಿ ದಕ್ಷಿಣ ಒಳನಾಡು ಜಿಲ್ಲೆಗಳಿಗೂ ತಟ್ಟಲಿದೆ. ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ ಜಿಲ್ಲೆಗಳಿಗಿಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಕೆಲವೊಮ್ಮೆ ಈ ಜಿಲ್ಲೆಗಳ ಹಲವೆಡೆ ಗುಡುಗು ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ತ.ನಾಡಿನ ಅಣ್ಣಾಮಲೈಯಾರ್ ಬೆಟ್ಟದಲ್ಲಿ ಭೂಕುಸಿತ – ಮಕ್ಕಳು ಸೇರಿ 7 ಮಂದಿ ಸಿಲುಕಿರುವ ಶಂಕೆ

    ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಮತ್ತು ಕರಾವಳಿ ಪ್ರದೇಶಗಳಲ್ಲೂ ಕೆಲವು ಕಡೆ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟಾರೆ ಬೆಂಗಳೂರಿಗೂ ಫೆಂಗಲ್ ಎಫೆಕ್ಟ್ ತಟ್ಟುತ್ತಿದ್ದು, ಮುಂದಿನ ಎರಡು ಮೂರು ದಿನ ಇದೆ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

  • Cyclone Fengal | ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ – ಭೂಕುಸಿತ ಸಾಧ್ಯತೆ

    Cyclone Fengal | ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ – ಭೂಕುಸಿತ ಸಾಧ್ಯತೆ

    – ಶಾಲಾ, ಕಾಲೇಜುಗಳು ಬಂದ್‌
    – 2,229 ಪರಿಹಾರ ಕೇಂದ್ರಗಳ ಸ್ಥಾಪನೆ
    – ಐಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌

    ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಫೆಂಗಲ್‌ ಚಂಡಮಾರುತ (Cyclone Fengal) ತೀವ್ರತೆ ಪಡೆದಿದ್ದು, ಶನಿವಾರ (ಇಂದು) ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು (Tamil Nadu) ಹಾಗೂ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

    ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಜೊತೆಗೆ ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಿಣಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ

    ಅಲ್ಲದೇ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ತಮಿಳುನಾಡು, ಪುದುಚೇರಿಯ ಜೊತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್‌ ಅಲರ್ಟ್‌ ಘೋಷಿಸಿದೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುದಾನ ಕೋರಿದ ಡಿಕೆಶಿ: ಏನೇನು ಮನವಿ ಮಾಡಲಾಗಿದೆ?

    ಈಗಾಗಲೇ ತಮಿಳುನಾಡಿನಲ್ಲಿ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಫೆಂಗಲ್‌ ಚಂಡಮಾರುತವು ಭಾರಿ ಮಳೆ ತರಲಿದ್ದು ಮತ್ತು ಗಂಟೆಗೆ 70 ರಿಂದ 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ರಾಜ್ಯ ಸರ್ಕಾರ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ನಿಯಮ ಜಾರಿಗೊಳಿಸುವಂತೆ ಸೂಚಿಸಿದೆ. ಮಳೆ ಮುನ್ಸೂಚನೆ ಹೊಂದಿರುವ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

    2,229ರ ಪರಿಹಾರ ಶಿಬಿರ ಸ್ಥಾಪನೆ:
    ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ರಾಜ್ಯಾದ್ಯಂತ 2,229 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಆಶ್ರಯ ಅಗತ್ಯವಿರುವವರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಲಾಗಿದೆ. ಈವರೆಗೆ ತಿರುವಳ್ಳೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ 164 ಕುಟುಂಬಗಳ 471 ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದೆ. ಸಂಭವನೀಯ ಪ್ರವಾಹದ ನಿರೀಕ್ಷೆಯಲ್ಲಿ ಸ್ಥಳೀಯ ಅಧಿಕಾರಿಗಳು ಮೋಟಾರ್‌ ಪಂಪ್‌ಗಳು, ಜನರೇಟರ್‌ಗಳು ಮತ್ತು ದೋಣಿಗಳು ಸೇರಿದಂತೆ ಅಗತ್ಯ ಸಾಧನಗಳನ್ನು ಚೆನ್ನೈ, ಕಡಲೂರು ಮತ್ತು ಮೈಲಾಡುತುರೈ ಮುಂತಾದ ಪೀಡಿತ ಪ್ರದೇಶಗಳಿಗೆ ನಿಯೋಜಿಸಿದ್ದಾರೆ.

    ಶ್ರೀಲಂಕಾದಲ್ಲಿ 12 ಸಾವು:
    ಶ್ರೀಲಂಕಾದಲ್ಲೂ ಫೆಂಗಲ್‌ ಹಾವಳಿಗೆ ಜನರು ತತ್ತರಿಸಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಮಳೆ ಸಂಬಂಧಿತ ದುರ್ಘ‌ಟನೆಗಳಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ಗೆ ತೆರಳುವಂತೆ ಶಾಹಿ ಈದ್ಗಾ ಸಮಿತಿಗೆ ಸೂಚನೆ; ʻಹೈʼಆದೇಶ ಬರೋವರೆಗೆ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ

  • Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    ನವದೆಹಲಿ: ಜಮ್ಮು ಕಾಶ್ಮೀರ ಚುನಾವಣಾ (Jammu Kashmir) ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಐವರು ಶಾಸಕರಾಗಿ ನಾಮನಿರ್ದೇಶನವಾಗಿದ್ದು, ಈ ಐವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

    ಹೌದು, ಲೆಫ್ಟಿನೆಂಟ್‌ ಗವರ್ನರ್‌ (Lieutenant Governor) ಮನೋಜ್‌ ಸಿನ್ಹಾ (Manoj Sinha) ಐವರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಗೆ ತಿದ್ದುಪಡಿಗಳ ಭಾಗವಾಗಿ ಇಬ್ಬರು ಮಹಿಳೆಯರು, ಇಬ್ಬರು ಕಾಶ್ಮೀರಿ ಪಂಡಿತರು ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಿಂದ ಆಗಮಿಸಿದ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

    90 ಸ್ಥಾನಗಳಿಗೆ ಚುನಾವಣೆ ನಡೆದರೂ ಐವರು ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇರುವ ಕಾರಣ ಜಮ್ಮು ಕಾಶ್ಮೀರ ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 95ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುಮತಕ್ಕೆ 48 ಸದಸ್ಯರ ಬೆಂಬಲ ಬೇಕು. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

    ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಈ ಐವರ ಪಾತ್ರ ಭಾರೀ ಮಹತ್ವ ಪಡೆದಿದೆ.

    ಸರ್ಕಾರ ರಚನೆಗೂ ಮೊದಲೇ ಗವರ್ನರ್‌ ನಾಮನಿರ್ದೇಶನ ಮಾಡಿದ್ದಕ್ಕೆ ಕಾಂಗ್ರೆಸ್‌ (Congress) ಆಕ್ಷೇಪ ವ್ಯಕ್ತಪಡಿಸಿದೆ. ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವೀಂದ್ರ ಶರ್ಮಾ, ಐವರು ಶಾಸಕರ ನಾಮ ನಿರ್ದೇಶನವನ್ನು ನಾವು ವಿರೋಧಿಸುತ್ತೇವೆ. ಸರ್ಕಾರ ರಚನೆಗೂ ಮೊದಲೇ ನಾಮ ನಿರ್ದೇಶನ ಅಗತ್ಯವಿಲ್ಲ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲದೇ ಜನರ ತೀರ್ಪನ್ನು ಅಗೌರವಿಸುವ ನಡೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರಾಡಳಿತ ರಾಜ್ಯವಾಗಿರುವ ಜಮ್ಮು ಕಾಶ್ಮೀರ ಪುದುಚೇರಿ (Puducherry) ವಿಧಾನಸಭಾ ಮಾದರಿಯಲ್ಲಿ ರಚನೆಯಾಗಿದೆ. ಅಲ್ಲಿ ಮೂವರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡಬಹುದು. ಅವರು ಚುನಾಯಿತ ಶಾಸಕರಂತೆ ಕೆಲಸ ಮಾಡುತ್ತಾರೆ ಮತ್ತು ಮತದಾನ ಮಾಡುವ ಹಕ್ಕನ್ನು ಸಹ ಹೊಂದಿದ್ದಾರೆ.

    ಸುಪ್ರೀಂ ಹೇಳಿದ್ದೇನು?
    2017 ರಲ್ಲಿ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ಕಿರಣ್ ಬೇಡಿ ಅವರು ಮೂವರನ್ನು ನಾಮನಿರ್ದೇಶನ ಮಾಡಿದ್ದನ್ನು ಕಾಂಗ್ರೆಸ್‌ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ನಮ್ಮ ಸರ್ಕಾರವನ್ನು ಕೇಳದೇ ನಾಮ ನಿರ್ದೇಶನ ಮಾಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್‌ ವಾದಿಸಿತ್ತು. ಆದರೆ ಅಂತಿಮವಾಗಿ 2018 ರಲ್ಲಿ ಸುಪ್ರೀಂ ಕೋರ್ಟ್ ಲೆಫ್ಟಿನೆಂಟ್‌ ಗವರ್ನರ್‌ ನಿರ್ಧಾರವನ್ನು ಎತ್ತಿ ಹಿಡಿದು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು.

    ಪುದುಚೇರಿ ವಿಧಾನಸಭೆಗೆ ನಾಮನಿರ್ದೇಶನ ಮಾಡುವುದು ಪುದುಚೇರಿ ಸರ್ಕಾರದ ವ್ಯವಹಾರವಲ್ಲ. ಇದು ಕೇಂದ್ರ ಸರ್ಕಾರದ ವ್ಯವಹಾರ ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರ ಪೀಠ ಹೇಳಿತ್ತು.

     

  • ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್‌ ರಾಜೀನಾಮೆ – ಬಿಜೆಪಿಯಿಂದ ಕಣಕ್ಕೆ?

    ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್‌ ರಾಜೀನಾಮೆ – ಬಿಜೆಪಿಯಿಂದ ಕಣಕ್ಕೆ?

    ನವದೆಹಲಿ: ತೆಲಂಗಾಣ ಮತ್ತು ಪುದುಚೇರಿ (Telangana Puducherry) ರಾಜ್ಯಪಾಲರಾಗಿದ್ದ (Governor) ತಮಿಳಿಸೈ ಸೌಂದರರಾಜನ್ (Dr. Tamilisai Soundararajan) ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ರಾಜೀನಾಮೆ ಸಲ್ಲಿಸಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ತಮಿಳುನಾಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.   ಇದನ್ನೂ ಓದಿ: ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಗುದ್ದಿದ ಟ್ರಕ್: ತಪ್ಪಿದ ಭಾರೀ ಅನಾಹುತ

     

    ತಮಿಳಿಸೈ ಸೌಂದರರಾಜನ್ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದ್ದು ಬಿಜೆಪಿಯ (BJP) ಮೂರನೇ ಪಟ್ಟಿಯಲ್ಲಿ ಅವರ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ. ಇವರು 2019 ರವರೆಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದರು.

    2019 ರಲ್ಲಿ ಕೇರಳದಿಂದ ಸ್ಪರ್ಧಿಸಲು ಮಿಜೋರಾಂ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

  • ಪುದುಚೇರಿಯಲ್ಲಿ ಇನ್ಮುಂದೆ ಕಾಟನ್ ಕ್ಯಾಂಡಿ ಬ್ಯಾನ್ – ಕಾರಣವೇನು?

    ಪುದುಚೇರಿಯಲ್ಲಿ ಇನ್ಮುಂದೆ ಕಾಟನ್ ಕ್ಯಾಂಡಿ ಬ್ಯಾನ್ – ಕಾರಣವೇನು?

    ಪುದುಚೇರಿ: ಕಾಟನ್ ಕ್ಯಾಂಡಿ (Cotton Candy) ತಯಾರಿಕೆಯಲ್ಲಿ ವಿಷಕಾರಿ ಆಂಶವನ್ನು ಬಳಸಲಾಗುತ್ತೆ ಎಂದು ಪುದುಚೇರಿಯಲ್ಲಿ  (Puducherry) ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ.

    ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕವನ್ನು ಬಳಸಿರುವುದನ್ನು ಸರ್ಕಾರಿ ಅಧಿಕಾರಿಗಳು ಪತ್ತೆ ಹಚ್ಚಿದ ನಂತರ ಅದರ ಮಾರಾಟವನ್ನು ನಿಷೇಧಿಸಲಾಗಿದೆ. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ (Tamilisai Soundararajan) ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ಹಂಚಿಕೊಂಡು ನಿಷೇಧವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

    ಮಕ್ಕಳಿಗೆ ಕಾಟನ್ ಕ್ಯಾಂಡಿ ಖರೀದಿಸುವುದನ್ನು ತಡೆಯಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಏಕೆಂದರೆ ಅದರಲ್ಲಿ ಇರುವ ರಾಸಾಯನಿಕ ಆಂಶಗಳು ಮಕ್ಕಳ ಆರೋಗ್ಯವನ್ನು ಹಾನಿ ಮಾಡುತ್ತದೆ. ವಿಷಕಾರಿ ವಸ್ತುವಾದ ರೋಡಮೈನ್-ಬಿ ಎಂಬ ಅಂಶವಿರುವುದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ – ಸಿಐಡಿಯಿಂದ ಆರೋಗ್ಯ ಇಲಾಖೆಗೆ ವರದಿ ಕೊಡಲು ಸಿದ್ಧತೆ

    ಕಾಟನ್ ಕ್ಯಾಂಡಿ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ವಿಷಕಾರಿ ಅಂಶ ಕಂಡುಬಂದಲ್ಲಿ ಅಂಗಡಿಗಳನ್ನು ವಶಕ್ಕೆ ಪಡೆಯುವಂತೆ ತಿಳಿಸಿದ್ದಾರೆ. ಇದೇ ವೇಳೆ ಬಣ್ಣ ಮಿಶ್ರಿತ ಯಾವುದೇ ಅಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ರೋಡಮೈನ್- ಬಿ ರಾಸಾಯನಿಕ ಅಂಶವಾಗಿದ್ದು, ಅದು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಆಹಾರದೊಂದಿಗೆ ಬೆರೆಸಿದಾಗ ಸಾಮಾನ್ಯವಾಗಿಯೇ ದೇಹವನ್ನು ಪ್ರವೇಶಿಸುತ್ತದೆ. ನಂತರ ಜೀವಕೋಶ ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಇದನ್ನು ಆಹಾರದಲ್ಲಿ ದೀರ್ಘಕಾಲದವರೆಗೆ ಬಳಸುವುದರಿಂದ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗಬಹುದು. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

  • ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಕೋವಿಡ್-19 (Covid-19) ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇದೀಗ ಹಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ (Mask) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

    ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಭೆಯನ್ನು ನಡೆಸಿದ್ದು, ಕೋವಿಡ್-19 ಕೇಸ್‌ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಾಗರೂಕರಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಏಪ್ರಿಲ್ 10 ಹಾಗೂ 11 ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಅಣುಕು ಡ್ರಿಲ್ ನಡೆಸುವಂತೆ ಆರೋಗ್ಯ ಮಂತ್ರಿಗಳನ್ನು ಕೇಳಿಕೊಂಡಿದ್ದಾರೆ. ಮಾತ್ರವಲ್ಲದೇ ಕೋವಿಡ್ ಟೆಸ್ಟ್‌ಗಳನ್ನು ಹೆಚ್ಚಿಸುವಂತೆ ಮತ್ತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿದ್ದಾರೆ.

    ಇದೀಗ ಕೋವಿಡ್ ಕೇಸ್‌ಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಹಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹರ್ಯಾಣ (Haryana) ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ. ಇದನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತ ಮತ್ತು ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.

    ಕೇರಳದಲ್ಲಿ (Kerala) ಗರ್ಭಿಣಿಯರು, ವೃದ್ಧರು ಮತ್ತು ಅನಾರೋಗ್ಯಕ್ಕೊಳಗಾದವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೋವಿಡ್ ಸಂಬಂಧಿತ ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ವರದಿಯಾಗಿವೆ ಎಂದು ಹೇಳಿದರು. ಆರೋಗ್ಯ ಇಲಾಖೆಗೆ ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದು, ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳ ವಿಶೇಷ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಪುದುಚೇರಿಯಲ್ಲಿ (Puducherry) ತಕ್ಷಣವೇ ಜಾರಿಗೆ ಬರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆ, ಹೋಟೆಲ್, ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ಆತಿಥ್ಯ ಮತ್ತು ಮನರಂಜನಾ ವಲಯಗಳು, ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  • ನಾಡಬಾಂಬ್ ಎಸೆದು BJP ಮುಖಂಡನ ಕೊಲೆ

    ನಾಡಬಾಂಬ್ ಎಸೆದು BJP ಮುಖಂಡನ ಕೊಲೆ

    ಪುದುಚೇರಿ: ಬಿಜೆಪಿ (BJP) ಮುಖಂಡನ ಮೇಲೆ ದುಷ್ಕರ್ಮಿಗಳ ಗುಂಪೊಂದು ನಾಡಬಾಂಬ್ ಎಸೆದು ಬರ್ಬರವಾಗಿ ಹತ್ಯೆಗೈದ ಘಟನೆ ಪುದುಚೇರಿಯಲ್ಲಿ (Puducherry) ನಡೆದಿದೆ.

     ಬಿಜೆಪಿ ಮುಖಂಡ ಸೆಂಥಿಲ್ ಕುಮಾರ್ (Senthil Kumar) ಮೃತ ವ್ಯಕ್ತಿ. ಭಾನುವಾರ ರಾತ್ರಿ ವಿಲಿಯನೂರು ಹಾಗೂ ಪುದುಚೇರಿ ರಸ್ತೆಯ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಸೆಂಥಿಲ್ ಕುಮಾರ್ ಮೇಲೆ ನಾಡಬಾಂಬ್ ಎಸೆದಿದ್ದಾರೆ. ನಂತರ ಸೆಂಥಿಲ್ ಕುಮಾರ್ ಬಳಿ ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ.

    ಸೆಂಥಿಲ್ ಕುಮಾರ್ ಪುದುಚೇರಿ ಗೃಹ ಸಚಿವ ನಮಚಿವಾಯಂ ಅವರ ದೂರದ ಸಂಬಂಧಿಯಾಗಿದ್ದು, ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದ ಅವರು, ನಮಚಿವಾಯಂ ಜೊತೆಗೆ ಬಿಜೆಪಿಗೆ ತೆರಳಿದ್ದರು. ಘಟನೆಗೆ ಸಂಬಂಧಿಸಿ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

    ವೀಡಿಯೋದಲ್ಲಿ ಏನಿದೆ?: ಬೈಕ್‍ನಲ್ಲಿ (Bike) ಬಂದ ದುಷ್ಕರ್ಮಿಗಳು ಬಿಜೆಪಿ ಮುಖಂಡನ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ನೋಡುಗರು ನೋಡ ನೋಡುತ್ತಿದ್ದಂತೆ ದಾಳಿ ಕೋರರು ಸೆಂಥಿಲ್ ಕುಮಾರ್ ಇದ್ದ ಬಳಿ ಹೋಗಿ ಕೋಲಿನಿಂದ ಥಳಿಸಿ ಚಾಕುವಿನಿಂದ ಇರಿದ್ದಾರೆ. ದುಷ್ಕರ್ಮಿಗಳ ಹಲ್ಲೆ ಪರಿಣಾಮ ಸೆಂಥಿಲ್ ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ರಾಜಕೀಯ ಘಟಾನುಘಟಿಗಳ ತವರು

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು 4 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ಟೀ ಸ್ಟಾಲ್‍ನಿಂದ ಹತ್ತಿರದ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮಹಿಳಾ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಸಾವಿರಾರು ಸೀರೆಗಳು ಜಪ್ತಿ

  • ಕರ್ನಾಟಕದ ಉದ್ಯಮಿಗಳು ಪುದುಚೇರಿಯಲ್ಲಿ ಉದ್ಯಮ ಮಾಡಲು ಸಕಲ ನೆರವು: ಪುದುಚೇರಿ ಗೃಹಸಚಿವ

    ಕರ್ನಾಟಕದ ಉದ್ಯಮಿಗಳು ಪುದುಚೇರಿಯಲ್ಲಿ ಉದ್ಯಮ ಮಾಡಲು ಸಕಲ ನೆರವು: ಪುದುಚೇರಿ ಗೃಹಸಚಿವ

    ಮಂಗಳೂರು: ಕರ್ನಾಟಕದ (Karnataka) ಯುವ ಉದ್ಯಮಿಗಳು ಪುದುಚೇರಿಗೆ (Puducherry) ಬಂದು ಪ್ರವಾಸೋದ್ಯಮ, ಐಟಿ, ಎಲೆಕ್ಟ್ರಿಕ್ ವೆಹಿಕಲ್ ಮತ್ತಿತರ ಉದ್ಯಮವನ್ನು ಸ್ಥಾಪಿಸುವುದಾದರೆ ಸರ್ಕಾರ ಎಲ್ಲಾ ರೀತಿಯ ನೆರವು ಕಲ್ಪಿಸಲಾಗುವುದು ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ (A. Namassivayam) ಹೇಳಿದರು.

    ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು, ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.

    ಈ ವೇಳೆ ಮಾತನಾಡಿದ ಅವರು, ಪುದುಚೇರಿ ಸಣ್ಣ ರಾಜ್ಯವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಪುದುಚೇರಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಯ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಕ್ಕೆ ಒತ್ತು, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಗಮನ ನೀಡಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಉತ್ತಮ ಅಭಿವೃದ್ಧಿ ಹೊಂದುತ್ತಿದೆ ಎಂದು ನುಡಿದರು. ಇದನ್ನೂ ಓದಿ: ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

    ಕಟೀಲೇಶ್ವರಿ ಕೋಲ್ ಕಾರ್ಪೋರೇಷನ್ ಪಾಲುದಾರರಾದ ನಾಗರಾಜ್ ಅಮೀನ್, ಮಂಜುನಾಥ್ ನೋಟಗಾರ್, ಬಾಲಮುರಳಿ, ಗಣೇಶ್, ಅಶ್ರಫ್ ಸಿಬ್ಬಂದಿಯಾದ ಶಿವು, ಮುಹಮ್ಮದ್ ರಿಲ್ವಾನ್, ಶಿವಕುಮಾರ್ ನೋಟಗಾರ್, ಶ್ರುತಿ, ಶಬೀರ್, ದೇವು ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್

    Live Tv
    [brid partner=56869869 player=32851 video=960834 autoplay=true]