Tag: Pudina Pulao

  • ಪುದೀನಾ ಪಲಾವ್ ಮಾಡಿ ರಾಯಿತಾದೊಂದಿಗೆ ಸವಿಯಿರಿ

    ಪುದೀನಾ ಪಲಾವ್ ಮಾಡಿ ರಾಯಿತಾದೊಂದಿಗೆ ಸವಿಯಿರಿ

    ಸಿಟಿಯಲ್ಲಿ ರೈಸ್‍ನಲ್ಲಿ ಮಾಡುವ ಬೆಳಗ್ಗಿನ ಆಹಾರ ಫೇಮಸ್. ರೈಸ್‍ನಲ್ಲಿ ಭಿನ್ನ-ಭಿನ್ನ ಶೈಲಿಯ ಅಡುಗೆ ಮಾಡಬಹುದು. ಅದರಲ್ಲಿಯೂ ಪಲಾವ್ ಇಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನುವ ತಿಂಡಿಯಲ್ಲಿ ಒಂದು. ಅದಕ್ಕೆ ಇಂದು ನಾವು ನಿಮಗೆ ‘ಪುದೀನಾ ಪಲಾವ್’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ಈ ವಿಧಾನ ಸಿಂಪಲ್ ಆಗಿದ್ದು, ರಾಯಿತಾದೊಂದಿಗೆ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ಪುದೀನ ಸೊಪ್ಪು – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಮೂರರಿಂದ ನಾಲ್ಕು ಕಡ್ಡಿ
    * ಲವಂಗ – 3
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಮೆಣಸಿನಕಾಯಿ – 2
    * ಈರುಳ್ಳಿ – ಅರ್ಧ ಕಪ್
    * ತುರಿದ ತೆಂಗಿನಕಾಯಿ – 2 ಟೇಬಲ್ಸ್ಪೂನ್
    * ಏಲಕ್ಕಿ – 1 ರಿಂದ 3
    * ಲವಂಗ – 5
    * ದಾಲ್ಚಿನ್ನಿ – 1 ಇಂಚು
    * ಮೆಣಸು ಅರ್ಧ ಟೀಸ್ಪೂನ್
    * ತುಪ್ಪ – 2 ಟೇಬಲ್ಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಪಲಾವ್ ಎಲೆ – 2
    * ಗೋಡಂಬಿ – 10
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್
    * ಆಲೂಗಡ್ಡೆ – 1
    * ಕ್ಯಾಪ್ಸಿಕಂ – 1


    * ಕ್ಯಾರೆಟ್ – 1
    * ನೆನೆಸಿದ ಬಟಾಣಿ – 2 ಟೇಬಲ್ಸ್ಪೂನ್
    * ಬೀನ್ಸ್ – 5
    * ನೀರು – 2 ಕಪ್
    * ಉಪ್ಪು – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ಸ್ವಲ್ಪ ಪುದೀನ ಮತ್ತು ಕೊತ್ತಂಬರಿಯನ್ನು ತೆಗೆದುಕೊಳ್ಳಿ. ಅದಕ್ಕೆ ಲವಂಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನಕಾಯಿ, ಈರುಳ್ಳಿ ಮತ್ತು ಟೀಸ್ಪೂನ್ ತೆಂಗಿನಕಾಯಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಮೆಣಸು ಸೇರಿಸಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಪಕ್ಕಕ್ಕೆ ಇರಿಸಿ.
    * ಆಲೂಗಡ್ಡೆ, ಕ್ಯಾಪ್ಸಿಕಂ, ಬೀನ್ಸ್ ಮತ್ತು ಕ್ಯಾರೆಟ್ ಕಟ್ ಮಾಡಿ.

    * ಪ್ರೆಶರ್ ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಸುವಾಸನೆ ಬರುವವರೆಗೆ ಬಿಸಿ ಮಾಡಿ.
    * ಅದಕ್ಕೆ ಗೋಡಂಬಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಅದಕ್ಕೆ ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ ಆಲೂಗಡ್ಡೆ, ಕ್ಯಾಪ್ಸಿಕಂ, ಕ್ಯಾರೆಟ್, ಬಟಾಣಿ ಮತ್ತು ಬೀನ್ಸ್ ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಮಸಾಲಾ ಪೇಸ್ಟ್‌ನ್ನು ಸೇರಿಸಿ. 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಬಾಸ್ಮತಿ ಅಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಅದನ್ನು ಕವರ್ ಮಾಡಿ ಮತ್ತು ಪ್ರೆಶರ್ ಕುಕ್ಕರ್‍ನಲ್ಲಿ 2 ಸೀಟಿಗಳು ಬರುವವರೆಗೆ ಬೇಯಿಸಿ.

    – ಅಂತಿಮವಾಗಿ, ಪುದೀನಾ ಪಲಾವ್/ ಪುದೀನ ರೈಸ್ ಪಾಕವಿಧಾನ ರೈತಾದೊಂದಿಗೆ ಬಡಿಸಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]