Tag: Pudi Dosa

  • ದಕ್ಷಿಣ ಭಾರತೀಯ ಜನಪ್ರಿಯ ಉಪಹಾರ ‘ಪುಡಿ ದೋಸೆ’ ಮಾಡಿ

    ದಕ್ಷಿಣ ಭಾರತೀಯ ಜನಪ್ರಿಯ ಉಪಹಾರ ‘ಪುಡಿ ದೋಸೆ’ ಮಾಡಿ

    ದೋಸೆ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ. ದೋಸೆಯನ್ನು ಹಲವು ಶೈಲಿಯಲ್ಲಿ ಮಾಡಬಹುದು. ಮಸಾಲಾ ದೋಸೆ, ಈರುಳ್ಳಿ ದೋಸೆ ರೆವೆ ದೋಸೆ ಮತ್ತು ರಾಗಿ ದೋಸೆ ಇದೇ ರೀತಿ ಹಲವು ವಿಧಗಳಿವೆ. ಆದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್ ಕ್ರಿಯೇಟ್ ಮಾಡಿರುವ ‘ಪುಡಿ ದೋಸೆ’ ಮಾಡುವ ವಿಧಾನವನ್ನು ನಾವು ಇಂದು ಹೇಳಿಕೊಡುತ್ತಿದ್ದೇವೆ. ನೀವು ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಎಳ್ಳು – 2 ಟೇಬಲ್ಸ್ಪೂನ್
    * ಎಣ್ಣೆ – 1 ಟೀಸ್ಪೂನ್
    * ಉದ್ದಿನ ಬೇಳೆ – ಅರ್ಧ ಕಪ್
    * ಕಡ್ಲೆ ಬೇಳೆ – ಅರ್ಧ ಕಪ್
    * ಒಣಗಿದ ಕೆಂಪು ಮೆಣಸಿನಕಾಯಿ – 6


    * ಕರಿ ಬೇವಿನ ಎಲೆಗಳು – 6 ರಿಂದ 10
    * ಕೊಬ್ಬರಿ ತುರಿ – 2 ಟೇಬಲ್ಸ್ಪೂನ್
    * ಹುಣಿಸೇಹಣ್ಣು – 50 ಗ್ರಾಂ
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ತವಾ ಮೇಲೆ ಬಿಳಿ ಎಳ್ಳನ್ನು ಕಡಿಮೆ ಉರಿಯಲ್ಲಿ ಹುರಿದು ಪಕ್ಕಕ್ಕೆ ಇಡಿ.
    * ಅದೇ ತವಾ ಮೇಲೆ ಎಣ್ಣೆಯನ್ನು ಬಿಸಿ ಮಾಡಿ, ಉದ್ದಿನ ಬೇಳೆ, ಕಡ್ಲೆ ಬೇಳೆಯನ್ನು ಹಾಕಿ ಫ್ರೈ ಮಾಡಿ. ಇದಲ್ಲದೆ, ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಒಣ ತೆಂಗಿನಕಾಯಿ ಸೇರಿಸಿ ತೆಂಗಿನಕಾಯಿ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ. ಈ ಎಲ್ಲ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮಿಕ್ಸಿಗೆ ವರ್ಗಾಯಿಸಿ. ರುಬ್ಬಿಕೊಳ್ಳಿ.
    * ಅದಕ್ಕೆ ಹುಣಿಸೇಹಣ್ಣು, ಅರಿಶಿನ ಮತ್ತು ಉಪ್ಪು ಸೇರಿಸಿ. ಯಾವುದೇ ನೀರನ್ನು ಸೇರಿಸದೆ ಒರಟಾದ ಪುಡಿಗೆ ರುಬ್ಬಿಕೊಳ್ಳಿ.
    * ನಂತರ ತವವನ್ನು ಬಿಸಿ ದೋಸೆ ಹಿಟ್ಟನ್ನು ಹಾಕಿ. ಅದರ ಮೇಲೆ ತಯಾರಾದ ಪೆÇಡಿಯನ್ನು ಹಾಕಿ 1-2 ಟೀಸ್ಪೂನ್ ತುಪ್ಪವನ್ನು ಹಾಕಿ ಬೇಯಿಸಿ.
    * 30 ಸೆಕೆಂಡುಗಳ ಕಾಲ ದೋಸೆಯು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.

    – ಅಂತಿಮವಾಗಿ, ಚಟ್ನಿ ಮತ್ತು ಸಾಂಬಾರ್‍ನೊಂದಿಗೆ ‘ಪುಡಿ ದೋಸೆ’ಯನ್ನು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]