Tag: PUC Students

  • ದ್ವೀತಿಯ ಪಿಯುಸಿ-3 ಫಲಿತಾಂಶ ಪ್ರಕಟ – 22,446 ವಿದ್ಯಾರ್ಥಿಗಳು ಪಾಸ್‌

    ದ್ವೀತಿಯ ಪಿಯುಸಿ-3 ಫಲಿತಾಂಶ ಪ್ರಕಟ – 22,446 ವಿದ್ಯಾರ್ಥಿಗಳು ಪಾಸ್‌

    ಬೆಂಗಳೂರು: ಇದೇ ಜೂನ್‌ 9 ರಿಂದ 20ರ ವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟಗೊಂಡಿದ್ದು, 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ಜೂನ್ 9ರಿಂದ 20ರವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದರಿಂದ ಶಿಕ್ಷಣ ಇಲಾಖೆ ಇಂದೇ ಫಲಿತಾಂಶ ಪ್ರಕಟಿಸಿದೆ. 20.22% ಫಲಿತಾಂಶ ದಾಖಲಾಗಿದೆ. ಇದನ್ನೂ ಓದಿ: ಜು.1 ರಿಂದ ಹೊಸೂರು ರಸ್ತೆಯ ಟೋಲ್ ದರ ಏರಿಕೆ – ಯಾವ ವಾಹನಕ್ಕೆ ಎಷ್ಟು ಹೆಚ್ಚಳ?

    ಒಟ್ಟು 1,11,002 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 11,937 ವಿದ್ಯಾರ್ಥಿಗಳು ಫಲಿತಾಂಶ ಸುಧಾರಣೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜು.2ರಿಂದ 4 ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಇನ್ನೂ ಮೂರು ಪರೀಕ್ಷೆ ಸೇರಿ ಒಟ್ಟಾರೆ 79.81% ಫಲಿತಾಂಶ ಬಂದಿದೆ. ಮೂರು ಪರೀಕ್ಷೆಗಳಿಗೆ ಹಾಜರಾದ 7,09,968 ವಿದ್ಯಾರ್ಥಿಗಳ ಪೈಕಿ 5,66,636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

  • ನಾಪತ್ತೆಯಾಗಿದ್ದ ಪಿಯು ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಪಿಯು ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

    ದಾವಣಗೆರೆ/ವಿಜಯನಗರ: ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು (Lovers) ಹರಪನಹಳ್ಳಿ (Harapanahalli) ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಜಿಟ್ಟಿನಕಟ್ಟೆ ಗ್ರಾಮದ ಮದ್ದನಸ್ವಾಮಿ(18), ಬಂಡ್ರಿ ಗ್ರಾಮದ ದೀಪಿಕಾ(18) ನೇಣಿಗೆ ಶರಣಾದ ಪ್ರೇಮಿಗಳು. ಒಂದೇ ಮರದ ಕೊಂಬೆಗೆ ಇಬ್ಬರೂ ನೇಣುಬಿಗಿದುಕೊಂಡಿದ್ದಾರೆ. ಇದನ್ನೂ ಓದಿ: Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

    ಮದ್ದನಸ್ವಾಮಿ ಹಾಗೂ ದೀಪಿಕಾ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇವರಿಬ್ಬರು ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇಬ್ಬರೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಯಾಗಿದ್ದು, ದೀಪಿಕಾ 438 ಹಾಗೂ ಮದ್ದನಸ್ವಾಮಿ 373 ಅಂಕ ಪಡೆದಿದ್ದರು. ಇದನ್ನೂ ಓದಿ: ‘ದೂರ ತೀರ ಯಾನ’ ಚಿತ್ರದ ಮೊದಲ ಪ್ರೇಮಗೀತೆಗೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ

    ಘಟನಾ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಶೀಲನೆ ನಡೆಸಿದರು. ಪ್ರೇಮಿಗಳಿಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಇಂದಿನಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

    ಇಂದಿನಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ (ಮಾರ್ಚ್‌ 1) ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭವಾಗಲಿದ್ದು, ಮಾರ್ಚ್ 20ರ ವರೆಗೆ ಪರೀಕ್ಷೆ ನಡೆಯಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಮತ್ತು ಎಕ್ಸಾಂ ಬೋರ್ಡ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಪರೀಕ್ಷಾ ಅಕ್ರಮ ತಡೆಗೆ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಎಕ್ಸಾಂಗೂ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಲಿದೆ. ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು ಹಾಗೂ ಐವರು ತೃತೀಯ ಲಿಂಗಿಗಳಿದ್ದಾರೆ.

    ಒಟ್ಟು 1,171 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದರೊಂದಿಗೆ 2,342 ಸ್ಥಾನಿಕ ಜಾಗೃತದಳ, 76 ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳು ಹಾಗೂ 31,000 ಮೌಲ್ಯಮಾಪಕರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಪರೀಕ್ಷಾ ನಿಯಮಗಳು?
    >. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ 200 ಮೀಟರ್ ನಿಷೇಧಾಜ್ಞೆ.
    >. ಪಿಯುಸಿ ಎಕ್ಸಾಂ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ, ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಇರಲಿದೆ.
    >. ಪರೀಕ್ಷಾ ಕೇಂದ್ರದ ಸುತ್ತ ಜೆರಾಕ್ಸ್, ಸೈಬರ್ ಸೆಂಟರ್, ಕಂಪ್ಯೂಟರ್ ಸೆಂಟರ್ ಮುಚ್ಚಬೇಕು.
    >. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ.
    >. ಪ್ರಶ್ನೆ ಪತ್ರಿಕೆ ಲೀಕ್ ಮಾಡುವ, ಅಕ್ರಮ ಮಾಡುವವರ ವಿರುದ್ಧ ಕ್ರಮ.
    >. ಪ್ರಶ್ನೆ ಪತ್ರಿಕೆ ರವಾನೆ ಮಾಡೋದ್ರೀಂದ ಹಿಡಿದು ಪರೀಕ್ಷಾ ಕೇಂದ್ರಕ್ಕೆ ತೆರಳೋವರೆಗೂ ಕ್ಯಾಮೆರಾ ರೆಕಾರ್ಡ್.
    >. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.

    ದ್ವೀತಿಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ
    >. ಮಾರ್ಚ್ 1- ಕನ್ನಡ, ಅರೇಬಿಕ್.
    >. ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    >. ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
    >. ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
    >. ಮಾರ್ಚ್ 7- ಇತಿಹಾಸ, ಭೌತಶಾಸ್ತ್ರ
    >. ಮಾರ್ಚ್-10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
    >. ಮಾರ್ಚ್ 12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.
    >. ಮಾರ್ಚ್ 13- ಅರ್ಥಶಾಸ್ತ್ರ
    >. ಮಾರ್ಚ್ 15- ಇಂಗ್ಲಿಂಷ್‌
    >. ಮಾರ್ಚ್ 17- ಭೂಗೋಳಶಾಸ್ತ್ರ.
    >. ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    >. ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
    >. ಮಾರ್ಚ್ 20- ಹಿಂದಿ

  • ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    – ಮೊಲದ ಬಾರಿಗೆ ವೆಬ್ ಕ್ಯಾಸ್ಟಿಂಗ್ ಕಣ್ಗಾವಲು
    – ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ

    ಬೆಂಗಳೂರು: ರಾಜ್ಯದಲ್ಲಿ ಮಾರ್ಚ್‌ 1 ರಿಂದ (ಶನಿವಾರ) ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭವಾಗಲಿದ್ದು, ಮಾರ್ಚ್‌ 20ರ ವರೆಗೆ ಪರೀಕ್ಷೆ ನಡೆಯಲಿದೆ.

    ವೆಬ್‌ಕಾಸ್ಟಿಂಗ್‌ ಕಣ್ಗಾವಲು:
    ಈಗಾಗಲೇ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆ (Education Department) ಇದೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್‌ ಕಣ್ಗಾವಲು ವ್ಯವಸ್ಥೆ ಮಾಡಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೂ ವ್ಯವಸ್ಥೆ ಮಾಡುವ ಮೂಲಕ ಪರೀಕ್ಷಾ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಹಾಗಾದ್ರೆ ಎಕ್ಸಾಂಗೆ ಬೋರ್ಡ್ ಸಿದ್ಧತೆ ಹೇಗಿದೆ ಎಂಬುದನ್ನಿಲ್ಲಿ ನೋಡೋಣ…

    ದ್ವಿತೀಯ ಪಿಯುಸಿ ಎಕ್ಸಾಂ ಸಿದ್ಧತೆ ಏನು?
    ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು ಹಾಗೂ ಐವರು ತೃತೀಯ ಲಿಂಗಿಗಳಿದ್ದಾರೆ. ಒಟ್ಟು 1,171 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ 2,342 ಸ್ಥಾನಿಕ ಜಾಗೃತದಳ, 76 ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳು ಹಾಗೂ 31,000 ಮೌಲ್ಯಮಾಪಕರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಪರೀಕ್ಷಾ ನಿಯಮಗಳು?
    >. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ 200 ಮೀಟರ್ ನಿಷೇಧಾಜ್ಞೆ.
    >. ಪಿಯುಸಿ ಎಕ್ಸಾಂ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ, ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಇರಲಿದೆ.
    >. ಪರೀಕ್ಷಾ ಕೇಂದ್ರದ ಸುತ್ತ ಜೆರಾಕ್ಸ್, ಸೈಬರ್ ಸೆಂಟರ್, ಕಂಪ್ಯೂಟರ್ ಸೆಂಟರ್ ಮುಚ್ಚಬೇಕು.
    >. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ.
    >. ಪ್ರಶ್ನೆ ಪತ್ರಿಕೆ ಲೀಕ್ ಮಾಡುವ, ಅಕ್ರಮ ಮಾಡುವವರ ವಿರುದ್ಧ ಕ್ರಮ.
    >. ಪ್ರಶ್ನೆ ಪತ್ರಿಕೆ ರವಾನೆ ಮಾಡೋದ್ರೀಂದ ಹಿಡಿದು ಪರೀಕ್ಷಾ ಕೇಂದ್ರಕ್ಕೆ ತೆರಳೋವರೆಗೂ ಕ್ಯಾಮೆರಾ ರೆಕಾರ್ಡ್.
    >. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.

    ದ್ವೀತಿಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ
    >. ಮಾರ್ಚ್ 1- ಕನ್ನಡ, ಅರೇಬಿಕ್.
    >. ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    >. ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
    >. ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
    >. ಮಾರ್ಚ್ 7- ಇತಿಹಾಸ, ಭೌತಶಾಸ್ತ್ರ
    >. ಮಾರ್ಚ್-10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
    >. ಮಾರ್ಚ್ 12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.
    >. ಮಾರ್ಚ್ 13- ಅರ್ಥಶಾಸ್ತ್ರ
    >. ಮಾರ್ಚ್ 15- ಇಂಗ್ಲಿಂಷ್‌
    >. ಮಾರ್ಚ್ 17- ಭೂಗೋಳಶಾಸ್ತ್ರ.
    >. ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    >. ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
    >. ಮಾರ್ಚ್ 20- ಹಿಂದಿ

  • ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ಪಾಲು

    ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ಪಾಲು

    ಮಡಿಕೇರಿ: ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ನದಿ ಪಾಲಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ಮಡಿಕೇರಿ ಜೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಆಕಾಶ್, ಗಗನ್, ಶಶಾಂಕ್ ಮೃತ ದುರ್ದೈವಿಗಳು. ರಂಜಾನ್ ನಿಮಿತ್ತ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮೂವರು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಮುಂಭಾಗದ ಕಾವೇರಿ ನದಿಯಲ್ಲಿ ಈಜುತ್ತಿದ್ದಾಗ ಈ ಘಟನೆ ನಡೆದಿದೆ.

    ಈಜುವ ವೇಳೆ ಒಬ್ಬನಿಗೆ ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ನೋಡಿದ ಉಳಿದ ಇಬ್ಬರು ಆತನನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಕುಶಾಲನಗರ ನಗರ ಠಾಣೆಯ ಪೊಲೀಸರು ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳ ಮೃತದೇಹವನ್ನು ಹೊರ ತೆಗೆದಿದ್ದಾರೆ.

    ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.