Tag: PUC Result

  • ಕಲಾ ವಿಭಾಗದಲ್ಲಿ ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಪ್ರಥಮ – 597 ಅಂಕ ಪಡೆದ ಸಂಜನಾಬಾಯಿ

    ಕಲಾ ವಿಭಾಗದಲ್ಲಿ ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಪ್ರಥಮ – 597 ಅಂಕ ಪಡೆದ ಸಂಜನಾಬಾಯಿ

    – ಕೆ.ನಿರ್ಮಲಾ ದ್ವಿತೀಯ ಸ್ಥಾನ

    ವಿಜಯನಗರ: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ (Second PUC Result) ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ವಿಜಯನಗರ (Vijayanagara) ಜಿಲ್ಲೆಯ ಸಂಜನಾಬಾಯಿ ಪ್ರಥಮ ಸ್ಥಾನಗಳಿಸಿದ್ದಾರೆ.

    600ಕ್ಕೆ 597 ಅಂಕ ಪಡೆಯುವ ಮೂಲಕ ಸಂಜನಾಬಾಯಿ ಕಲಾ ವಿಭಾಗದದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸಂಜನಾ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಂಜನಾ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದವರಾಗಿದ್ದು, ತಂದೆ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌

    ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಕೆ.ನಿರ್ಮಲಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿರ್ಮಲಾ ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ. ನಿರ್ಮಲಾ 600ಕ್ಕೆ 596 ಅಂಕ ಪಡೆದಿದ್ದಾರೆ.‌ ಇದನ್ನೂ ಓದಿ: ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

  • ಕಲಾ ವಿಭಾಗದಲ್ಲಿ ಬೆಂಗಳೂರಿನ ತಬ್ಸುಮ್ ಶೇಖ್ ಫಸ್ಟ್‌ – ಟಾಪ್‌ ವಿದ್ಯಾರ್ಥಿಗಳ ಲಿಸ್ಟ್‌ ಇಲ್ಲಿದೆ

    ಕಲಾ ವಿಭಾಗದಲ್ಲಿ ಬೆಂಗಳೂರಿನ ತಬ್ಸುಮ್ ಶೇಖ್ ಫಸ್ಟ್‌ – ಟಾಪ್‌ ವಿದ್ಯಾರ್ಥಿಗಳ ಲಿಸ್ಟ್‌ ಇಲ್ಲಿದೆ

    ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ (PUC Result)ಫಲಿತಾಂಶ ಹೊರಬಿದ್ದಿದ್ದು, ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿ 61.22% ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಜಯನಗರ ಎನ್‌ಎಂಕೆಆರ್‌ವಿ ಕಾಲೇಜಿನ ತಬ್ಸುಮ್‌ ಶೇಖ್‌ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

    ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

    593 ಅಂಕ
    ತಬ್ಸುಮ್ ಶೇಖ್, ಎನ್‍ಎಂಕೆಆರ್‌ವಿ ಮಹಿಳಾ ಕಾಲೇಜು, ಜಯನಗರ, ಬೆಂಗಳೂರು

    592 ಅಂಕ
    ಕುಶನಾಯ್ಕ್ ಜಿ.ಎಲ್, ಇಂದೂ ಇನೋವೇಟಿವ್ ಪಿಯು ಕಾಲೇಜ್, ಬಳ್ಳಾರಿ.

    ದದ್ದಿ ಕರಿಬಸಮ್ಮ, ಇಂದೂ ಐಎನ್‍ಡಿಪಿ ಪಿಯು ಕಾಲೇಜ್, ಬಳ್ಳಾರಿ.

    ಮುತ್ತೂರು ಮಲ್ಲಮ್ಮ, ಎಸ್‍ಯುಜೆಎಂ ಪಿಯು ಕಾಲೇಜ್, ಹರಪನಹಳ್ಳಿ, ಬಳ್ಳಾರಿ.

    ಪ್ರಿಯಾಂಕ ಕುಲಕರ್ಣಿ, ಲಿಂಗರಾಜ ಕಲಾ ಹಾಗೂ ವಾಣಿಜ್ಯ ಪಿಯು ಕಾಲೇಜ್, ಬೆಳಗಾವಿ.

    ರಾಹುಲ್ ಮೋತಿಲಾಲ್ ರಾಥೋಡ್ , ಎಸ್‍ಕೆ ಪಿಯು ಕಾಲೇಜ್ ತಾಳಿಕೋಟೆ ಮುದ್ದೆಬಿಹಾಳ, ವಿಜಯಪುರ. ಇದನ್ನೂ ಓದಿ: 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

    591 ಅಂಕ
    ಸಹನ ಉಲ್ಲಾವಪ್ಪ ಕಡಕೋಳ್, ಸರ್ಕಾರಿ ಪಿಯು ಕಾಲೇಜ್, ಬೈಲಹೊಂಗಲ, ಬೆಳಗಾವಿ.

    ಕೆ. ಕೃಷ್ಣ, ಇಂದೂ ಐಎನ್‍ಡಿಪಿ ಪಿಯು ಕಾಲೇಜ್ ಕೊಟ್ಟೂರು ಕೂಡ್ಲಿಗಿ, ಬಳ್ಳಾರಿ.

    ಭಾಗಪ್ಪ, ಜ್ಞಾನಭಾರತಿ ಪಿಯು ಕಾಲೇಜ್, ಬಸವನಗರ, ಸಿಂದಗಿ, ವಿಜಯಪುರ.

    ಮಂಜುಶ್ರೀ, ವಿವೇಕಾನಂದ ಪಿಯು ಕಾಲೇಜ್ ನೆಹರು ನಗರ ಪುತ್ತೂರು, ದಕ್ಷಿಣ ಕನ್ನಡ. ಇದನ್ನೂ ಓದಿ: 2nd PUC Result: ವಿಜ್ಞಾನ ವಿಭಾಗದಲ್ಲಿ ಟಾಪ್ ಅಂಕ ಗಳಿಸಿದ ವಿದ್ಯಾರ್ಥಿಗಳು

  • ವಾಣಿಜ್ಯ ವಿಭಾಗದ ಟಾಪರ್ ಲಿಸ್ಟ್ – ಬೆಂಗಳೂರಿನ ಅರವಿಂದ ಶ್ರೀವಾಸ್ತವ್ ಫಸ್ಟ್

    ವಾಣಿಜ್ಯ ವಿಭಾಗದ ಟಾಪರ್ ಲಿಸ್ಟ್ – ಬೆಂಗಳೂರಿನ ಅರವಿಂದ ಶ್ರೀವಾಸ್ತವ್ ಫಸ್ಟ್

    ಬೆಂಗಳೂರು: ಮಲ್ಲೇಶ್ವರದ ವಿದ್ಯಾಮಂದಿರ ಪಿಯು ಕಾಲೇಜಿನ ಅರವಿಂದ ಶ್ರೀವಾಸ್ತವ್ ವಾಣಿಜ್ಯ ವಿಭಾಗದಲ್ಲಿ 598 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

    ಈ ವರ್ಷ ವಾಣಿಜ್ಯ ವಿಭಾಗದ ಪರೀಕ್ಷೆಯನ್ನು ಒಟ್ಟು 2,60,131 ಮಂದಿ ತೆಗೆದುಕೊಂಡಿದ್ದು, 1,70,426 ಮಂದಿ ತೇರ್ಗಡೆಯಾಗುವ ಮೂಲಕ ಶೇ.65.52 ಫಲಿತಾಂಶ ಬಂದಿದೆ. ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.

    ಟಾಪರ್ ಪಟ್ಟಿ
    1. ಅರವಿಂದ ಶ್ರೀವಾಸ್ತವ್ – 598 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
    2. ಬೃಂದ ಜೆ.ಎನ್ – 596 ಅಂಕ, ಶ್ರೀ ಬಿಜಿಎಸ್ ಬಾಲಕಿಯರ ಪಿಯು ಕಾಲೇಜ್ ಮೈಸೂರು.
    3. ಸಿಂದು ಜಿ.ಎಂ – 595 ಅಂಕ, ಸರ್ಕಾರಿ ಬಾಲಕಿಯರ ಪಿಯು ಕಾಲೇಜ್ ಶಿವಮೊಗ್ಗ.
    3. ಅಭಿಲಾಶ್ ಎಂ ಶರ್ಮಾ – 595 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
    4. ಅನನ್ಯ ಹೆಬ್ಬಾರ್ – 594 ಅಂಕ, ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
    4. ವರ್ಷ ಆರ್ – 594 ಅಂಕ ವಿದ್ಯಾಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
    4. ಧ್ವನಿ ಜೈನ್ – 594 ಅಂಕ, ಎನ್‍ಬಿ ಮಹಾವೀರ್ ಜೈನ್ ಮಹಿಳಾ ಪಿಯು ಕಾಲೇಜ್ ಬೆಂಗಳೂರು.
    4. ಜೆ ತರುಣ್ – 594 ಅಂಕ, ವಿದ್ಯಾನಿಧಿ ಪಿಯು ಕಾಲೇಜ್ ತಮಕೂರು.
    4. ರಿತಿಕಾ ಕಾಮತ್ – 594 ಅಂಕ, ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಾರ್ಕಳ ಉಡುಪಿ
    4. ಸ್ವಾತಿ ಪೈ – 594 ಅಂಕ, ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ ಉಡುಪಿ.
    4. ಅಪೂರ್ವ ಎಂ – 594 ಅಂಕ, ವಿಕಾಸ್ ಪಿಯೂ ಕಾಲೇಜ್ ಮಂಗಳೂರು.


    5. ಮೋನಿಷಾ ಜಿ.ಟಿ 593 ಪಡೆದ ಅಂಕ, ಶಾಂತಿಧಾಮ ಪಿಯು ಕಾಲೇಜ್ ಬೆಂಗಳೂರು.
    5. ಜೈನ್ ಶ್ರೀಪಾಲ್ ಶಾ – 593 ಅಂಕ, ಎಸ್‍ಡಿಸಿ ಪಿಯು ಕಾಲೇಜ್ ಕೋಲಾರ,
    5. ಶ್ರದ್ಧಾ ಭಟ್ – 593 ಅಂಕ, ವಿದ್ಯಾನಿಧಿ ಪಿಯು ಕಾಲೇಜ್ ತುಮಕೂರು.
    5. ಪೃಥ್ವಿ ಎನ್ ಹೆಬ್ಬಾರ್ – 593 ಅಂಕ, ಶಾರದ ಪಿಯು ಕಾಲೇಜ್ ಮಂಗಳೂರು.
    5 ಹರ್ಷ ಜೆ ಆಚಾರ್ಯ – 593 ಅಂಕ, ಅಳ್ವಾಸ್ ಪಿಯು ಕಾಲೇಜ್ ಮೂಡಬಿದರೆ
    5 ದಿವ್ಯಾ ಟಿ.ವಿ – 593 ಅಂಕ, ಸದ್ವಿದ್ಯಾ ಪಿಯು ಕಾಲೇಜ್ ಮೈಸೂರು.
    6. ಜಯಸಿಂಹ ಎಂ – 592 ಅಂಕ, ಕ್ರೈಸ್ಟ್ ಪಿಯು ಕಾಲೇಜ್ ಬೆಂಗಳೂರು.
    6. ಮೊನಿಷ್ ರೆಡ್ಡಿ – 592 ಅಂಕ, ಎಸ್‍ಬಿ ಮಹಾವೀರ್ ಜೈನ್ ಪಿಯು ಕಾಲೇಜ್ ಬೆಂಗಳೂರು.
    6. ಪ್ರಶಾಂತ್ ಗೋಪಾಲ್ ನಕೋಡ್ – 592 ಅಂಕ, ಎಎಸ್‍ಎಸ್ ಪಿಯು ಕಾಲೇಜ್ ಗದಗ.
    6. ಅನ್ವಿತಾ ಶೆಟ್ಟಿ – 592 ಅಂಕ. ಪಿಇಎಸ್ ಪಿಯು ಕಾಲೇಜ್ ಬೆಂಗಳೂರು.

  • ಜುಲೈ 3ನೇ ವಾರದಲ್ಲಿ ಪಿಯುಸಿ, ಆಗಸ್ಟ್ 1ನೇ ವಾರದಲ್ಲಿ SSLC ಫಲಿತಾಂಶ: ಸುರೇಶ್ ಕುಮಾರ್

    ಜುಲೈ 3ನೇ ವಾರದಲ್ಲಿ ಪಿಯುಸಿ, ಆಗಸ್ಟ್ 1ನೇ ವಾರದಲ್ಲಿ SSLC ಫಲಿತಾಂಶ: ಸುರೇಶ್ ಕುಮಾರ್

    ಬೆಂಗಳೂರು: ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶ ನಂತರ ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

    ಇಂದು ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ ಸೇರಿ ಹಲವು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿಕೊಟ್ಟ ಸಚಿವರು, ಪರೀಕ್ಷಾ ಕೇಂದ್ರದ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ಜೊತೆಗೆ ಕರ್ತವ್ಯದಲ್ಲಿ ಹಾಜರಿದ್ದ ಸ್ಕೌಟ್ಸ್ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

    ಇದೇ ವೇಳೆ ಮಾತನಾಡಿದ ಅವರು, ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಮತ್ತು ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು. ಈಗ ಪರೀಕ್ಷೆಯಿಂದ ಹೊರಗುಳಿದಿದ್ದ 33 ಮಕ್ಕಳಿಗೆ ಆಗಸ್ಟ್ ತಿಂಗಳ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು, ಜೊತೆಗೆ ಆ ವಿದ್ಯಾರ್ಥಿಗಳನ್ನು ಫ್ರೆಶ್ ಕ್ಯಾಂಡಿಡೆಟ್ ಎಂದು ಪರಿಗಣನೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್, ಈ ವರ್ಷ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವಂತೆ ಇಲ್ಲ. ಮಾನವೀಯ ಕಾರಣಕ್ಕಾಗಿ ಶುಲ್ಕ ಹೆಚ್ಚು ಮಾಡಬಾರದು. ಒಂದು ವೇಳೆ ಹೆಚ್ಚು ಮಾಡಿದರೆ ದೂರು ನೀಡುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುವ ಅನಿವಾರ್ಯತೆಎದುರಾಗಿದೆ. ಈ ನಿಟ್ಟಿನಲ್ಲಿ ಶುಲ್ಕ ಪಡೆಯುವುದು ಅವರಿಗೆ ಅನಿವಾರ್ಯ ಎಂದರು.

    ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆಗಳು ಯಾವುದೇ ಆತಂಕವಿಲ್ಲದೇ ನಿರಾತಂಕವಾಗಿ ನಡೆದಿದೆ. ಹೀಗಾಗಿ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದಾರೆ. ಇದು ಕೇವಲ ಶಿಕ್ಷಣ ಇಲಾಖೆಯ ಪರೀಕ್ಷೆ ಆಗಿರಲಿಲ್ಲ, ಇದು ಗೃಹ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಸ್ಕೌಟ್ ಆ್ಯಂಡ್ ಗೈಡ್ಸ್ ಎಲ್ಲರ ಸಹಕಾರ ಇದೆ ಎಂದು ಸುರೇಶ್ ಕುಮಾರ್ ಅವರು ಹೇಳಿದರು.