Tag: pubs

  • ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಮತ್ತು ಸಿಸಿಬಿ ಪೊಲೀಸರು ನಗರದ 2 ಪಬ್‌ಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ.

    ನಗರದಲ್ಲಿ ಐಷಾರಾಮಿ ಟೆಕ್ನೋ ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ ಸರಬರಾಜು ಮಾಡುತ್ತಿರೋ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಶನಿವಾರ ರಾತ್ರಿ ನಗರದ ಎಂಜಿ ರೋಡ್ (MG Road) ಮತ್ತು ಕೋರಮಂಗಲದ (Koramangala) 2 ಪಬ್‌ಗಳ ಮೇಲೆ ದಾಳಿ ಮಾಡಿದ್ದರು. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ದಾಳಿ ವೇಳೆ ಪಬ್‌ಗಳಲ್ಲಿ ಡಿಜೆ ಆಪರೇಟರ್‌ಗಳಾಗಿ ಕೆಲಸ ಮಾಡ್ತಿದ್ದ ಇಬ್ಬರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಪಬ್‌ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನಿಸುತ್ತಿದ್ದರು. ಅಷ್ಟೇ ಅಲ್ಲದೇ ಹೊರಗಿನ ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡ್ತಿರೋದು ಗೊತ್ತಾಗಿದೆ. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!

    ವಿಚಾರಣೆ ವೇಳೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ ಪೆಡ್ಲರ್‌ಗಳಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

  • ರಾತ್ರೋರಾತ್ರಿ ಪಬ್‍ಗಳ ಮೇಲೆ ದಾಳಿ – ಕೇಸ್ ದಾಖಲು

    ರಾತ್ರೋರಾತ್ರಿ ಪಬ್‍ಗಳ ಮೇಲೆ ದಾಳಿ – ಕೇಸ್ ದಾಖಲು

    ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ಅತಿಯಾದ ಡಿ.ಜೆ ಸೌಂಡ್ (DJ Sound) ಹಾಕಿ ಮೋಜು ಮಸ್ತಿ ಮಾಡುತ್ತಿದ್ದ ಪಬ್ (Pubs) ಮತ್ತು ರೆಸ್ಟೋರೆಂಟ್‍ಗಳ (Restaurants) ಮೇಲೆ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದಲ್ಲಿನ ಬೋ ಟೈ, ಇಕಿಗೈ ಮತ್ತು ಸ್ಕೈ ಬಾರ್ ಸೇರಿದಂತೆ ವಿವಿಧ ಪಬ್‍ಗಳ ಮೇಲೆ ದಾಳಿ ನಡೆಸಿದ ಬೆಂಗಳೂರಿನ (Bengaluru) ಕೇಂದ್ರ ವಿಭಾಗದ ಪೊಲೀಸರ ತಂಡ, ಅತಿಯಾದ ಡಿ.ಜೆ ಸೌಂಡ್ ಹಾಕಿ ಮೋಜು ಮಸ್ತಿ ಮಾಡುತ್ತಿದ್ದ ಪಬ್‍ಗಳ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಅಪ್ರಾಪ್ತರಿಗೆ ಪಬ್‍ಗೆ ಪ್ರವೇಶ ನೀಡಿ ಮದ್ಯ ಸೇವನೆ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನೆಚ್ಚಿನ ಫುಟ್‌ಬಾಲ್‌ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು

    ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ ತಂಡಕ್ಕೆ ದಾಳಿ ವೇಳೆ ನಿಯಮ ಉಲ್ಲಂಘನೆ ಮಾಡಿರೋದು ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘಿಸಿದ ಪಬ್‍ಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋದ ಪ್ರಕರಣ – ಇಬ್ಬರ ಮೃತದೇಹ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗ್ಬೇಡಿ- ಸುಧಾಕರ್ ಮನವಿ

    ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗ್ಬೇಡಿ- ಸುಧಾಕರ್ ಮನವಿ

    – ಏರ್‌ಪೋರ್ಟ್‌ ಸಮೀಪದ ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಕೇಂದ್ರ
    – ಕರ್ನಾಟಕ ಬಂದ್ ವಿಸ್ತರಣೆ

    ಬೆಂಗಳೂರು: ವೈರಸ್‍ಗೆ ಜಾತಿ ಇಲ್ಲ. ಹಾಗಾಗಿ ಒಂದು ವಾರ ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕರ ಜೊತೆ ವೈದ್ಯಕೀಯ ಶಿಕ್ಷಣ ಸಚಿವರು ಇಂದು ಸಭೆ ನಡೆಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಿನ್ನೆ ಸಿಕ್ಕಿರುವ ಮಾಹಿತಿ ಪ್ರಕಾರ ವಿದೇಶದಿಂದ ಬಂದಿರುವ ಓರ್ವ ವಿದ್ಯಾರ್ಥಿನಿ ಹಾಗೂ ಅವರನ್ನು ಕರೆದುಕೊಂಡ ಬಂದ ವೈದ್ಯರೊಬ್ಬರಿಗೆ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

    ಕರ್ನಾಟಕ ಬಂದ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ವೈಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲದೆ ಸೋಂಕಿತರಿಗೆ ನಿಖರ ಚಿಕಿತ್ಸೆ, ಔಷಧಿ ಇಲ್ಲದೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಬಂದ್ ವಿಸ್ತರಣೆ ಮಾಡವುದು ಅಗತ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಹಾಸ್ಟೆಲ್, ಪಿಜಿಗಳನ್ನು ಖಾಲಿ ಮಾಡಿ

    ರಾಜ್ಯದಲ್ಲಿಯೇ ಬೆಂಗಳೂರಿಗೆ ವಿದೇಶಗಳಿಂದ ಹೆಚ್ಚು ಜನರು ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣ ಸಮೀಪದ ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಸೆಂಟರ್ ಸ್ಥಾಪಿಸಿ, ಅಲ್ಲಿ ಅವರನ್ನು ಇರಿಸಿ ನಿಗಾ ಇಡಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಹಿರಿಯ ನಾಯಕರು ದೆಹಲಿಯಿಂದ ಫೋನ್ ಮಾಡಿ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಅವರು ಒಪ್ಪಿದರೆ ಕ್ವಾರೆಂಟೈನ್ ಸೆಂಟರ್ ತೆರೆಯಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಜನರು ವಾಸಿಸುತ್ತಾರೆ. ಹಾಗಾಗಿ ಸಹಜವಾಗಿಯೇ ಬೆಂಗಳೂರು ಮಹಾನಗರ ಪಾಲಿಕೆ ನಮಗೆ ದೊಡ್ಡ ಸಮಸ್ಯೆ ಹಾಗೂ ಸವಾಲಾಗಿ ಪರಿಣಮಿಸಿದೆ. ಕಲಬುರಗಿಯಲ್ಲಿ ಓರ್ವರಿಂದ ಅನೇಕರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಈಗಾಗಲೇ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗದಗದಲ್ಲಿ ಮೂರುವರೆ ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕಿರುವ ಶಂಕೆ

  • ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೆಲವು ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದು, ಒಂದು ವಾರ ಕಾಲ ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದೆ.

    ಸರ್ಕಾರ ಅದ್ಧೂರಿ ಮದುವೆಯನ್ನು ನಿರ್ಬಂಧಿಸಿದ್ದರೂ ಸರಳವಾಗಿ ಕಾರ್ಯಕ್ರಮ ನಡೆಸಬಹುದು. ಈಗಾಗಲೇ ನಿಗದಿಯಾಗಿರುವ ಗರಿಷ್ಟ 100 ಮಂದಿ ಮಾತ್ರ ಪಾಲ್ಗೊಳ್ಳುವ ಮದುವೆ ಸಮಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

    ಯಾವುದು ಇರಲ್ಲ?
    ಮಾಲ್, ಸಿನಿಮಾ ಥಿಯೇಟರ್ ಬಂದ್ ಆಗಲಿದ್ದು, ನೈಟ್ ಕ್ಲಬ್, ಪಬ್ ತೆರೆಯಲು ಅನುಮತಿ ನೀಡಿಲ್ಲ. ಅದ್ಧೂರಿ ಮದುವೆ, ಹುಟ್ಟುಹಬ್ಬ, ನಾಮಕರಣ ಬಂದ್ ಆಗಲಿದ್ದು ಸಭೆ-ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ.

    ಉದ್ಯಾನವನ, ಸ್ವಿಮ್ಮಿಂಗ್ ಪೂಲ್ ಬಂದ್ ಆಗಲಿದ್ದು, ಯಾರೂ ಸಮ್ಮರ್ ಕ್ಯಾಂಪ್ ಮಾಡದಂತೆ ಸೂಚಿಸಲಾಗಿದೆ. ಶಾಲಾ, ಕಾಲೇಜ್, ಎಲ್ಲಾ ವಿವಿಗಳು ಬಂದ್ ಆಗಲಿದೆ. ಆದರೆ ಪಿಯುಸಿ ಸೇರಿದಂತೆ ಈಗಾಗಲೇ ನಿಗದಿಯಾದ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಅಧಿವೇಶನ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯಲಿದ್ದು, ಜಾತ್ರೆಗಳು ಮತ್ತು ಕ್ರೀಡಾ ಚಟುವಟಿಕೆ ಮಾಡದಂತೆ ಸೂಚಿಸಲಾಗಿದೆ.

    15 ದಿನ ರಜೆ:  ಕೊರೊನಾ ಸಾಂಕ್ರಾಮಿಕ ರೋಗ ಎಂಬುದಾಗಿ ಸರ್ಕಾರ ಘೋಷಿಸಿದ್ದು 15 ದಿನಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ  ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

    ಸಾಧ್ಯವಾದಷ್ಟು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ನೀಡಬೇಕು. ಈಗಾಗಲೇ ನಿಗದಿಯಾಗಿದ್ದ ಪ್ರವಾಸವನ್ನು ಜನರು ರದ್ದು ಮಾಡಬೇಕು ಎಂದು ಸಿಎಂ ಕೇಳಿಕೊಂಡರು.

  • 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    ಬೆಂಗಳೂರು: ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರ ಕಾಲ ಕರ್ನಾಟಕದಲ್ಲಿ ಮಾಲ್, ಸಿನಿಮಾ ಥಿಯೇಟರ್, ಎಲ್ಲ ಸಮಾರಂಭಗಳು ಬಂದ್ ಆಗಲಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ಮಾಲ್, ಚಿತ್ರ ಮಂದಿರ, ಮದುವೆ, ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿವಿಗಳು ಬಂದ್ ಆಗಲಿದ್ದು, ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.

    ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಐಟಿ ಯವರಿಗೆ ವರ್ಕ್ ಫ್ರಂ ಹೋಮ್ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಅಧಿವೇಶನ ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    https://twitter.com/publictvnews/status/1238398685504868352

    ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.