Tag: Publiv Tv

  • ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಇಸ್ಲಾಮಾಬಾದ್: ಭಾರತದ ಪೈಲಟ್ ಅಭಿನಂದನ್ ಅವರು ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾಗಲಿದ್ದಾರೆ.

    ಪಾಕಿಸ್ತಾನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರನ್ನು ಶಾಂತಿಯ ಪ್ರತೀಕವಾಗಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬುಧವಾರ ಪಾಕ್ ವಾಯುಸೇನೆ ಜೊತೆಗಿನ ಹೋರಾಟದಲ್ಲಿ ಮಿಗ್ ವಿಮಾನ ಪತನಗೊಂಡಿತ್ತು. ಈ ವಿಮಾನದಲ್ಲಿ ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ನೆಲಕ್ಕೆ ಧುಮುಕಿದ್ದರು.

    ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ಬಿದ್ದಿದ್ದ ಅಭಿನಂದನ್ ಅವರನ್ನು ಪಾಕ್ ಸೇನೆ ಕಸ್ಟಡಿಗೆ ತೆಗೆದುಕೊಂಡಿತ್ತು. ಜಿನೀವಾ ಒಪ್ಪಂದ ಪ್ರಕಾರ ಪಾಕ್ ಸೇನೆ ಅಭಿನಂದನ್ ಅವರನ್ನು ಬಿಡುಗಡೆ ಮಾಡಲೇಬೇಕಿತ್ತು. ಹೀಗಾಗಿ ಪಾಕಿಸ್ತಾನ ಶುಕ್ರವಾರ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದೆ.

    ಏನಿದು ಜಿನೀವಾ ಒಪ್ಪಂದ..?
    ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ವೇಳೆ ಒಪ್ಪಂದ ನಡೆದಿತ್ತು. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿ.ಕೆ.ಸುರೇಶ್ ಅಭಿಮಾನಿಗಳ ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಲಿಂಕ್

    ಡಿ.ಕೆ.ಸುರೇಶ್ ಅಭಿಮಾನಿಗಳ ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಲಿಂಕ್

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬೆಂಬಲಿಗರ ‘ಡಿಕೆಎಸ್ ಬ್ರಿಗೇಡ್ ಗ್ರೂಪ್’ನಲ್ಲಿ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಫೋಟೋಗಳು ಶೇರ್ ಆಗಿವೆ.

    ರಾಮನಗರ ಜಿಲ್ಲೆಯ ನಾಲ್ಕು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡಿರುವ ಈ ಡಿಕೆಎಸ್ ಬ್ರಿಗೇಡ್ ಗ್ರೂಪ್‍ನಲ್ಲಿ ಅನೇಕ ಅಶ್ಲೀಲ ವಿಡಿಯೋಗಳ ಲಿಂಕ್‍ಗಳನ್ನು ಶೇರ್ ಮಾಡಲಾಗಿದೆ. ಗ್ರೂಪ್‍ನಲ್ಲಿ ಮಹಿಳೆಯರು ಕೂಡ ಇದ್ದಾರೆ. ತಡರಾತ್ರಿ 1 ಗಂಟೆ ಸುಮಾರಿಗೆ ಈ ವಿಡಿಯೋಗಳು ಬರುತ್ತಿವೆ ಅಂತ ಸಾಕಷ್ಟು ಬಾರಿ ಗ್ರೂಪ್ ಅಡ್ಮಿನ್ ವಿರುದ್ಧ ಇತರೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ವಾಟ್ಸಪ್ ಗ್ರೂಪ್‍ನಲ್ಲಿ ಈ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಲೇ ಇವೆ.

    ಡಿಕೆಎಸ್ ಬ್ರಿಗೇಡ್ ಗ್ರೂಪ್ ಅಷ್ಟೇ ಅಲ್ಲದೆ ಡಿಕೆಎಸ್ ಅಭಿಮಾನಿಗಳ ಬಳಗ ‘ಟೀಮ್ ಡಿಕೆಎಸ್’, ‘ಡಿಕೆಶಿ ಬಳಗ’ ಸೇರಿದಂತೆ ನಾಲ್ಕಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳಲ್ಲಿ ಇಂತಹ ಅಶ್ಲೀಲ ವಿಡಿಯೋಗಳ ಲಿಂಕ್ ಶೇರ್ ಮಾಡಲಾಗುತ್ತಿದೆ. ಇದರಿಂದಾಗಿ ಅನೇಕರು ಗ್ರೂಪ್‍ನಿಂದ ಹೊರ ನಡೆದಿದ್ದಾರೆ.

    ಡಿಕೆಎಸ್ ಬ್ರಿಗೇಡ್ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಸ್ವಾಮಿ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ಯಾವುದೋ ಅನೌನ್ ನಂಬರ್ ರಾತ್ರಿ ವೇಳೆ ಗ್ರೂಪ್‍ಗೆ ಸೇರುತ್ತಿದೆ. ಆ ನಂಬರ್ ಸಂಖ್ಯೆಗಳು ವಿಚಿತ್ರವಾಗಿದ್ದು, ಅದರಿಂದಲೇ ಅಶ್ಲೀಲ ವಿಡಿಯೋ ಲಿಂಕ್ ಹಾಗೂ ಫೋಟೋಗಳು ಗ್ರೂಪ್‍ಗೆ ಬರುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ತೇಜೋವಧೆಗೆ ಹೀಗೆ ಮಾಡುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಗ್ರೂಪ್ ನಲ್ಲಿ ಸೇರಿಕೊಂಡಿರುವ ವಿಚಿತ್ರ ನಂಬರ್ ನಲ್ಲಿ ಮೊದಲ ಮೂರು ಸಂಖ್ಯೆಗಳು ಮಾತ್ರ ಕಾಣಿಸುತ್ತವೆ. ಉಳಿದ ನಂಬರ್ ಗಳು ಡಾಟ್ ಡಾಟ್ ಇರುತ್ತಿದ್ದವು. ಪಕ್ಷ ಸಂಘಟನೆ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು. ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಲಿಂಕ್‍ಗಳು ಹಾಗೂ ಫೋಟೋಗಳು ಶೇರ್ ಆಗಿದ್ದರಿಂದ ಅನೇಕರು ಗ್ರೂಪ್ ನಿಂದ ಹೊರ ಹೋಗಿದ್ದಾರೆ ಎಂದು ಸ್ವಾಮಿ ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿಕಾರದ ಕುರ್ಚಿ ಕಳೆದುಕೊಂಡ್ರು ಸಿದ್ದರಾಮಯ್ಯರಿಗೆ ಬುದ್ಧಿ ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಅಧಿಕಾರದ ಕುರ್ಚಿ ಕಳೆದುಕೊಂಡ್ರು ಸಿದ್ದರಾಮಯ್ಯರಿಗೆ ಬುದ್ಧಿ ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಟಿಪ್ಪು ಸುಲ್ತಾನ್‍ಗೆ ಹೋಲಿಸಿ ಟ್ವೀಟ್ ಮಾಡಿರುವ ಹಿನ್ನೆಲೆ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿಚನ್ನಮ್ಮನನ್ನ ಟಿಪ್ಪು ಸುಲ್ತಾನ್‍ಗೆ ಹೋಲಿಸುವ ದುಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಧಿಕಾರದ ಕುರ್ಚಿ ಕಳೆದುಕೊಂಡ್ರು ಇವರಿಗೆ ಬುದ್ಧಿ ಬಂದಿಲ್ಲ. ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ ರಾಷ್ಟ್ರ ಭಕ್ತರನ್ನ ಕೊಲೆ ಮಾಡಲಿಲ್ಲ. ಸ್ವಾತಂತ್ರ್ಯಕ್ಕೊಸ್ಕರ ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರ ದ್ರೋಹಿಗಳನ್ನ ಕೊಂದ್ರು. ಇಂತಹ ಮಹಾನ್ ವ್ಯಕ್ತಿಗಳಿಗೆ ಟಿಪ್ಪುವನ್ನು ಹೋಲಿಸ್ತಾರೆ ಅಂದ್ರೆ ಕಾಂಗ್ರೆಸ್ ದುಸ್ಥಿತಿ ಎಲ್ಲಿಗೆ ಬಂತು? ಎಂದು ಈಶ್ವರಪ್ಪ ಗರಂ ಆದರು.

    ಸಿದ್ದರಾಮಯ್ಯ ಭಂಡ ರಾಜಕಾರಣಿ, ಇಂತವರನ್ನು ಕರ್ನಾಟಕದಲ್ಲಿ ನೋಡಿಯೇ ಇಲ್ಲ. ಸುಮಾರು 39 ಮಠಗಳಿಗೆ 95 ಕೋಟಿ ರೂ ಅನುಧಾನ ನೀಡಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕಿದೆ. ಆದ್ರೆ ಯಾವ ಮಠಕ್ಕೆ ಕಾಂಗ್ರೆಸ್ ಸರ್ಕಾರ ಎಷ್ಟು ಕೊಟ್ಟಿದೆ ಎಂದು ಸಿದ್ದರಾಮಯ್ಯರಿಗೆ ಕೇಳಿ? ಸ್ವಯಂ ಘೋಷಿತ ಹಿಂದುಳಿದ ನಾಯಕ, ದಲಿತ ನಾಯಕ, ಅಹಿಂದ ನಾಯಕ ಅಂತಾ ಅವರೇ ಹೇಳ್ಕೊಂಡು ತಿರುಗುತ್ತಾರೆ. ಈಗಾಗಲೇ ಚಾಮುಂಡಿಯಲ್ಲಿ ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ರು. ಇನ್ನೂ ಬಾದಾಮಿ ಜನರಿಗೆ ಸಿದ್ದರಾಮಯ್ಯ ಹಣೆಬರಹ ಗೊತ್ತಿಲ್ಲ, ಮುಂದೆ ಗೊತ್ತಾಗುತ್ತೆ ಆಗ ಅಲ್ಲಿಂದನೂ ಓಡಿಸ್ತಾರೆ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ಬೆಂಗಳೂರು: ಬಿಜೆಪಿ ಪಕ್ಷ ನಿಲುವಿಗೆ ವಿರುದ್ಧವಾಗಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಶಾಸಕ ಆನಂದ್ ಸಿಂಗ್ ಇಂದು ಬೆಳಗ್ಗೆ ಹೊಸಪೇಟೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಜೆಪಿ ನಾಯಕರಿಗೆ ಮುಜುಗರಕ್ಕೆ ಕಾರಣವಾಗಿತ್ತು. ಈ ಕುರಿತು 7 ದಿನಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರು ನೋಟಿಸ್ ಜಾರಿ ಮಾಡಿದ್ದಾರೆ.

    ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲೇ ಅದನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಂಡ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ಆನಂದ್ ಸಿಂಗ್, ಎಲ್ಲ ಜಯಂತಿಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಎಲ್ಲ ಜಯಂತಿಯಂತೆ ಟಿಪ್ಪು ಜಯಂತಿ ಕೂಡ ಒಂದು. ವಿಜಯನಗರ ಕ್ಷೇತ್ರದಲ್ಲಿ ಭೇದಭಾವವಿಲ್ಲ. ಕ್ಷೇತ್ರದ ಜನರ ಇಚ್ಛೆಯಂತೆ ಪಾಲ್ಗೊಂಡಿದ್ದೇನೆ. ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬಾರದು ಎಂದು ಯಾರು ಹೇಳಿಲ್ಲ. ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಎಲ್ಲರನ್ನು ಒಂದೇ ರೀತಿ ನೋಡಲಾಗುತ್ತಿತ್ತು. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

    ಹೊಸಪೇಟೆಯಲ್ಲಿ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ ಅನಾರೋಗ್ಯದ ಮಧ್ಯೆಯೂ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.

    ಬಳ್ಳಾರಿಯ ಸಂಸದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಪರಮಾಪ್ತನಾಗಿರುವ ಪಾಲಿಕೆಯ ಸದಸ್ಯ ಗೋವಿಂದರಾಜಲು ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಮುಂಭಾಗ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗಿತ್ತು.

    ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರು ಕಳೆದ ರಾತ್ರಿಯೇ ಸಂಸದ ಶ್ರೀರಾಮುಲು ಅನುಮತಿ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನಾಯಕರು ಬಳ್ಳಾರಿಯಲ್ಲಿ ಮುಸ್ಲಿಂ ಮತಗಳನ್ನು ಪಡೆಯಲು ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

  • ಪರಿಣೀತಿ  ಜೊತೆ ಲವ್ವಿ ಡವ್ವಿ?- ಕೊನೆಗೂ ಉತ್ತರಿಸಿದ ಪಾಂಡ್ಯ

    ಪರಿಣೀತಿ ಜೊತೆ ಲವ್ವಿ ಡವ್ವಿ?- ಕೊನೆಗೂ ಉತ್ತರಿಸಿದ ಪಾಂಡ್ಯ

    ನವದೆಹಲಿ: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮಧ್ಯೆ ಲವ್ವಿ ಡವ್ವಿ ಶುರುವಾಗಿದೆ ಎಂಬ ವದಂತಿಗೆ ಕೊನೆಗೂ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.

    ಇದ್ದೆಲ್ಲ ಮಾರ್ಕೆಟಿಂಗ್ ಗಿಮಿಕ್ಸ್. ಇದು ಯಾವಾಗ ಆಯ್ತು ಅಂತ ನನಗೆ ಗೊತ್ತಿಲ್ಲ ಎಂದು ಪಾಂಡ್ಯ ಹೇಳಿದ್ದಾರೆ.

    ನಾನು ಎಲ್ಲಾ ಕೆಲಸ ಮಾಡುವ ಹುಡುಗನಂತೆ ಕಾಣುತ್ತೇನೆ ಆದ್ದರೆ ನಾನೂ ಏನೂ ಮಾಡುವುದಿಲ್ಲ. ನಾನು ಶಿಸ್ತು ಇಲ್ಲದ ಪಾರ್ಟಿ ಮಾಡುವ ಹುಡುಗನಂತೆ ಕಾಣುತ್ತೇನೆ. ಆದರೆ ನಾನು ನನ್ನ ಆಟದತ್ತ ಗಮನ ಕೊಡುತ್ತಿದ್ದೇನೆ ಹಾಗೂ ಮೊದಲು ಕೊಡುತ್ತಿದ್ದೆ. ನನ್ನ ರೂಮ್‍ನಿಂದ ಹೊರಗೆ ಹೋಗೊದೆ ಅಪರೂಪ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

    ನಾನೂ ಏನೂ ಮಾಡಿಲ್ಲ. ಬೆಳಗ್ಗೆ ನಾನು ಮಲಗಿದ್ದೆ ಹಾಗೂ ನಾನೂ ಶ್ರೀಲಂಕಾದಲ್ಲಿ ಇದ್ದೆ. ಆಗ ನನಗೆ ಇದರ ಬಗ್ಗೆ ಗೊತಾಯ್ತು. ನನ್ನ ರೀಲೇಷನ್‍ಶಿಪ್ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ನನ್ನ ಜೊತೆ ಯಾರ ಹೆಸರು ಸೇರಿಸುತ್ತಿರ ನನಗೆ ಬೇಕಾಗಿಯೂ ಇಲ್ಲ ಎಂದು ಪಾಂಡ್ಯ ಹೇಳಿದ್ದಾರೆ.

    ನನಗೆ ಇದರ ಬಗ್ಗೆ ಉತ್ತರ ಕೊಡುವುದ್ದಕ್ಕೆ ಇನ್ನೇನೂ ಉಳಿದಿಲ್ಲ. ನನಗೆ ಪರಿಣೀತಿ ಸರಿಯಾಗಿ ಗೊತ್ತೂ ಇಲ್ಲ ಹಾಗೂ ಅವರ ಜೊತೆ ನಾನೂ ಈ ಹಿಂದೆ ಮಾತನಾಡಿಯೂ ಇಲ್ಲ. ಟ್ವಿಟ್ಟರ್ ನೋಡಿದಾಗ ಏನೋ ಪ್ರೀತಿ ಪ್ರೇಮ ಎಂಬ ಮಾತುಗಳೆಲ್ಲಾ ಶುರುವಾಗಿತ್ತು. ಅಯ್ಯೋ ಇದೆಲ್ಲಿಂದ ಬಂತಪ್ಪ ಅನ್ನಿಸಿತು ಅಂದ್ರು.

    ನಾನೂ ರಿಪ್ಲೈ ನೋಡಿದ್ದಾಗ ಗೊತ್ತಾಯಿತ್ತು ಅದು ಒಂದು ಫೋನ್ ಕಂಪೆನಿಗಾಗಿ ಅಂತ. ಜನರು ಏನೇನೋ ಸೃಷ್ಟಿಸೋದು ಹೀಗೆಯೇ. ಇದರ ಬಗ್ಗೆ ನಕ್ಕು ಸುಮ್ಮನಾಗುತ್ತೇನೆ ಅಂದ್ರು.

    ಏನಿದ್ದು ಸುದ್ದಿ: ಸೆಪ್ಟೆಂಬರ್ 3 ರಂದು ಪರಿಣೀತಿ ಸೈಕಲ್ ನ ಫೋಟೋವನ್ನು ಹಾಕಿ ಅದ್ಭುತ ವ್ಯಕ್ತಿ ಜೊತೆ ಅತ್ಯುತ್ತಮ ಪ್ರವಾಸ. ಪ್ರೀತಿಯು ಗಾಳಿಯಲ್ಲಿ ತೇಲಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು.

    ಅಭಿಮಾನಿಗಳು ಆ ಜೊತೆಗಾರ ಯಾರು ಎಂದು ಯೋಚಿಸುತ್ತಿದ್ದಾಗ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದ್ದರು. ನಾನು ಇದನ್ನು ಗೆಸ್ ಮಾಡುತ್ತೇನೆ. ಇದು ಬಾಲಿವುಡ್ ಮತ್ತು ಕ್ರಿಕೆಟ್ ನ ಲಿಂಕ್ ಇರಬಹುದಾ ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದರು.

    ಇದನ್ನೂ ಓದಿ: ಪಾಂಡ್ಯ ಜೊತೆ ಡೇಟಿಂಗ್ ಇದ್ಯಾ: ಕೊನೆಗೂ ಸ್ಪಷ್ಟನೆ ನೀಡಿದ ಪರಿಣೀತಿ

    https://twitter.com/MurlidharR777/status/904400937174745088