Tag: Publicv TV

  • ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ, ರಕ್ತದಾನ ಮಾಡಿ: ರಾಗಿಣಿ

    ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ, ರಕ್ತದಾನ ಮಾಡಿ: ರಾಗಿಣಿ

    ಬೆಂಗಳೂರು: ಕೋವಿಡ್ ಸಂಕಷ್ಟದಿಂದಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆಹಾರ ಪೆÇಟ್ಟಣ್ಣ ನೀಡುವ ಮೂಲಕ ರಾಗಿಣಿ ದ್ವಿವೇದಿ ನೆರವಾಗುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

    ನಟಿ ರಾಗಿಣಿ ದ್ವಿವೇದಿ ಇಂದು ರಕ್ತದಾನ ಮಾಡಿದ್ದಾರೆ. ಇಂದು ವಿಶೇಷ ದಿನವಾಗಿದೆ. ರಕ್ತ ಮತ್ತು ಪ್ಲಾಸ್ಮಾಕ್ಕೆ ತುಂಬಾ ಅಗತ್ಯವಿರುವುದರಿಂದ ನಾನು ರಕ್ತದಾನವನ್ನು ಮಾಡಿದ್ದೇನೆ. ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ರಕ್ತದಾನವನ್ನು ಮಾಡಿ ಎಂದು ಮನವಿ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ರಕ್ತ ದಾನ ಮಾಡಿ ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಎಲ್ಲೆಡೆ ಕೊರೊನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಬೇರೆ ರೋಗಿಗಳಿಗೆ, ಅಪಘಾತಕ್ಕೊಳಗಾದವರು ಸೇರಿದಂತೆ ಹಲವರಿಗೆ ರಕ್ತದ ಅಭಾವ ಎದುರಾಗಲಿದೆ ಎಂದು ಸಾಕಷ್ಟು ಮಂದಿ ಸೆಲೆಬ್ರಿಟಿಗಳು ರಕ್ತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಂತೆಯೇ ರಾಗಿಣಿ ಸಹ ಇಂದು ರಕ್ತದಾನ ಮಾಡುವ ಮೂಲಕ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ. ನಿತ್ಯ ಆಹಾರ ಪೆÇಟ್ಟಣ್ಣಗಳನ್ನು ಅಗತ್ಯವಿರುವವರಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರೆಟಿ ಸ್ಟಾರ್‍ಗಳು ಹಲವರು ಸಹಾಯವನ್ನು ಮಾಡುತ್ತಿದ್ದಾರೆ.

  • ಜಲ್ಲಿಕಟ್ಟು ಹಬ್ಬದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪ್ರಾಣಬಿಟ್ಟ ಹೋರಿಗಳು!

    ಜಲ್ಲಿಕಟ್ಟು ಹಬ್ಬದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪ್ರಾಣಬಿಟ್ಟ ಹೋರಿಗಳು!

    ಬೆಂಗಳೂರು: ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆ ಜಲ್ಲಿಕಟ್ಟುವಿನಲ್ಲಿ ಭಾಗವಹಿಸಿದ್ದ 2 ಹೋರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಬಳಿ ನಡೆದಿದೆ.

    ಹೊಸೂರು ಸಮೀಪದ ಉದ್ದಾನಪಲ್ಲಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ಈ ವೇಳೆ ಸರ್ಧೆಯಲ್ಲಿ ಓಡುತ್ತಿದ್ದ ಹೊರಿಯನ್ನು ಹಿಡಿಯಲು ಜನರು ಮುಗಿಬಿದ್ದಿದ್ದು, ಓರ್ವ ಯುವಕನನ್ನು ಹೋರಿಯೊಂದು ಗುದ್ದಿ ಬೀಳಿಸಿದೆ. ಬಳಿಕ ವಿರುದ್ಧ ದಿಕ್ಕಿನಲ್ಲಿ ಓಡಿ ಬಂದ ಮತ್ತೊಂದು ಹೋರಿಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ಹೋರಿಗಳು ಸ್ಥಳದಲ್ಲೇ ಸಾವನಪ್ಪಿದೆ.

    ಸಂಕ್ರಾಂತಿ ಹಬ್ಬದಿಂದ ತಮಿಳುನಾಡಿನಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದುಕಡೆ ಜಲ್ಲಿಕಟ್ಟು ಆಯೋಜಿಸಲಾಗುತ್ತದೆ. ಬರೋಬ್ಬರಿ ಮೂರು ತಿಂಗಳ ಕಾಲ ನಡೆಯುವ ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿ ಸಾಕಿದವರು ತಮ್ಮ ಹೋರಿಗಳನ್ನು ಸಿಂಗರಿಸಿ ಓಟದಲ್ಲಿ ಬಿಡುತ್ತಾರೆ. ಆದ್ರೆ ಈ ಭಾರಿ ಹೊಸೂರು ಸುತ್ತಮುತ್ತ ನಡೆದ ಜಲ್ಲಿಕಟ್ಟುವಿನಲ್ಲಿ ಸುಮಾರು 5 ಹೋರಿಗಳು ಪರಸ್ಪರ ಡಿಕ್ಕಿಹೊಡೆದುಕೊಂಡು ಸಾವನಪ್ಪಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರಿನ ಮುಂದೆ ಸ್ಕೂಟಿ ನಿಲ್ಲಿಸಿದ್ದಕ್ಕೆ ಶೂಟ್ ಮಾಡಿದ ಯುವಕರು!

    ಕಾರಿನ ಮುಂದೆ ಸ್ಕೂಟಿ ನಿಲ್ಲಿಸಿದ್ದಕ್ಕೆ ಶೂಟ್ ಮಾಡಿದ ಯುವಕರು!

    ನವದೆಹಲಿ: ತಮ್ಮ ಕಾರಿನ ಮುಂದೆ ವ್ಯಕ್ತಿಯೊಬ್ಬ ಸ್ಕೂಟಿ ನಿಲ್ಲಿಸಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ದ್ವಿಚಕ್ರ ವಾಹನದ ಮಾಲೀಕನ ಮೇಲೆ ಯುವಕರು ಗುಂಡಿನ ದಾಳಿ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಗುಲ್ಜಾರ್(28) ಜಾವೆದ್(34) ಗುಂಡಿನ ದಾಳಿ ನಡೆಸಿದ ಆರೋಪಿಗಳು. ಸದರ್ ಬಜಾರ್ ಪ್ರದೇಶದ ನಿವಾಸಿಯಾದ ಜುಬೈರ್ ಮೇಲೆ ಯುವಕರು ಗುಂಡು ಹಾರಿಸಿದ್ದಾರೆ. ಭಾನುವಾರ ರಾತ್ರಿ ಜುಬೈರ್ ತನ್ನ ಸ್ನೇಹಿತ ಬಿಲಾಲ್ ಜತೆ ಸ್ಕೂಟಿಯಲ್ಲಿ ಅಜ್ಮೇರ್ ಗೆ ತೆರಳಿದ್ದರು. ಈ ವೇಳೆ ಅದೇ ಸ್ಥಳದಲ್ಲಿದ್ದ ಗುಲ್ಜಾರ್ ಹಾಗೂ ಜಾವೆದ್ ಕುಳಿತ್ತಿದ್ದ ಕಾರಿನ ಮುಂದೆ ಜುಬೈರ್ ತನ್ನ ಸ್ಕೂಟಿಯನ್ನು ನಿಲ್ಲಿಸಿದ್ದಾರೆ.

    ಈ ವೇಳೆ ಇಬ್ಬರು ಯುವಕರು ಜುಬೈದ್ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಅವರ ನಡುವೆ ಈ ವಿಷಯಕ್ಕೆ ಜಗಳ ಕೂಡ ಆಗಿದೆ. ಇಷ್ಟಕ್ಕೆ ಕೋಪಗೊಂಡ ಗುಲ್ಜಾರ್ ಪಿಸ್ತೂಲಿನಿಂದ ಜುಬೈರ್ ಗೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಜುಬೈರ್ ಕಾಲಿಗೆ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದ ತಕ್ಷಣ ಕಾರಿನ ಸಂಖ್ಯೆಯನ್ನು ಗಮನಿಸಿಕೊಂಡ ಬಿಲಾಲ್ ಪೊಲೀಸರಿಗೆ ದೂರು ನೀಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ.

    ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಬಳಸಿದ್ದ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv