Tag: publictv
-

ಬಿಗ್ ಬುಲೆಟಿನ್ 1 OCTOBER 2022 Part-3
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 1 OCTOBER 2022 Part-2
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 29 SEPTEMBER 2022 Part-1
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 29 SEPTEMBER 2022 Part-2
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 29 SEPTEMBER 2022 Part-3
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 29 SEPTEMBER 2022 Part 4
Live Tv
[brid partner=56869869 player=32851 video=960834 autoplay=true] -

ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ
ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಹಬ್ಬಕ್ಕೆ ಸ್ಪೆಷಲ್ ಮತ್ತು ರುಚಿಯಾಗಿ ಸಿಹಿ ತಿಂಡಿ ಮಾಡಬೇಕು ಯೋಚನೆ ಮಾಡುತ್ತೀರುವ ನಿಮಗೆ ನಾವು ಇಂದು ಸೋರೆಯಾಯಿ ಹಲ್ವವನ್ನು ಮಾಡುವುದನ್ನು ವಿವರಿಸಿದ್ದೇವೆ. ದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

ಬೇಕಾಗುವ ಸಾಮಗ್ರಿಗಳು:
* ಸೋರೆಕಾಯಿ- 2ಕಪ್
* ಹಾಲು- ಒಂದೂವರೆ ಕಪ್
* ಕೋವಾ- ಅರ್ಧ ಕಪ್
* ತುಪ್ಪ- 4 ಟೀ ಚಮಚ
* ಏಲಕ್ಕಿ ಪುಡಿ- ಅರ್ಧ ಚಮಚ
* ಸಕ್ಕರೆ- 2ಕಪ್
*ದ್ರಾಕ್ಷಿ, ಗೋಡಂಬಿ- ಅರ್ಧ ಕಪ್ ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?
ಮಾಡುವ ವಿಧಾನ:
* ಒಂದು ತವಾಗೆ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು.
* ನಂತರ ಅದೇ ಪಾತ್ರೆಗೆ ಹಾಲು, ತುರಿದ ಸೋರೆಕಾಯಿ ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?
* ಈಗ ಸಕ್ಕರೆ, ಏಲಕ್ಕಿ, ಕೋವಾ, ತುಪ್ಪ, ಹುರಿದ ಒಣ ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಗಟ್ಟಿಯಾಗಿ ಬರುವವರೆಗೆ ಬೇಯಿಸಿದರೆ ರುಚಿಯಾದ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
Live Tv
[brid partner=56869869 player=32851 video=960834 autoplay=true] -

ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು
ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ ಇಂದು ಆಚರಿಸುವ ಕೃಷ್ಣ ಜನ್ಮಾಷ್ಟಮಿಗೆ ರುಚಿ ರುಚಿಯಾದ ಹಾಗೂ ಆರೋಗ್ಯಕರವಾದ ಲಡ್ಡು ಮಾಡಿ ಸವಿದು ಹಬ್ಬವನ್ನು ಎಂಜಾಯ್ ಮಾಡಿ.

ಹಬ್ಬಕ್ಕಾಗಿ ನಾನಾ ತರಹದ ಸಿಹಿ ತಿಂಡಿಗಳನ್ನು ಮಾಡಬೇಕಾಗುತ್ತದೆ. ಆಗ ನೀವು ಮಾಡುವ ಸಿಹಿ ಅಡುಗೆಯಲ್ಲಿ ಡ್ರೈ ಫ್ರೂಟ್ಸ್ ಲಡ್ಡನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಸಿಹಿ ತಿಂಡಿಯನ್ನು ಒಣಗಿದ ಹಣ್ಣುಗಳಿಂದ ಮಾಡುವುದರಿಂದ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಈ ಸ್ವೀಟ್‍ನ್ನು 15 ರಿಂದ 20 ದಿನಗಳಕಾಲ ನೀವು ಇಟ್ಟು ತಿನ್ನಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ದ್ರಾಕ್ಷಿ- ಅರ್ಧ ಕಪ್
* ಬಾದಾಮಿ- ಅರ್ಧ ಕಪ್
* ಗೋಡಂಬಿ- ಅರ್ಧ ಕಪ್
* ಖರ್ಜೂರ- ಅರ್ಧ ಕಪ್
* ಪಿಸ್ತಾ- ಅರ್ಧ ಕಪ್
* ತುಪ್ಪ-2 ಟೇಬಲ್ ಸ್ಪೂನ್
* ಗಸಗಸೆ-1 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ-1 ಟೀ ಸ್ಪೂನ್
* ಬೆಲ್ಲ- ಅರ್ಧ ಕಪ್
* ಎಳ್ಳು- ಅರ್ಧ ಕಪ್
* ಬಾದಾಮಿ- ಅರ್ಧ ಕಪ್
* ಒಣ ಕೊಬ್ಬರಿ- ಅರ್ಧ ಕಪ್ಮಾಡುವ ವಿಧಾನ:
* ಒಂದು ಬಾಣಲೆಗೆ ಎಳ್ಳು, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
* ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಚೆನ್ನಾಗಿ ಹುರಿಯ ಬೇಕು.
* ನಂತರ ಮಿಕ್ಸಿ ಜಾರ್ ಗೆ ಒಣಗಿದ ಕೊಬ್ಬರಿ ಹಾಗೂ ಹುರಿದ ಡ್ರೈ ಫ್ರೂಟ್ಸ್, ಖರ್ಜೂರ, ಬೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

* ನಂತರ ಈ ಡ್ರೈ ಫ್ರೂಟ್ಸ್ ಮಿಶ್ರಣಕ್ಕೆ ಈ ಮೊದಲು ಹುರಿದು ತೆಗೆದಿಟ್ಟ ಎಳ್ಳು, ಗಸಗಸೆ ಹಾಕಿ ಮಿಶ್ರಣವನ್ನು ಮಾಡಿ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ರುಚಿಯಾ ದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧವಾಗುತ್ತದೆ.
Live Tv
[brid partner=56869869 player=32851 video=960834 autoplay=true] -

ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್ ದರ್ಬಾರ್ – ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು
ಬೆಂಗಳೂರು: ಮನುಷ್ಯ ದುಡ್ಡಿಗಾಗಿ ಮನುಷ್ಯತ್ವವನ್ನೇ ಮರೆತು ಬಿಟ್ಟಿದ್ದಾನೆ. ಜೀವ ಹೋಗ್ತಿದೆ ಅಂದ್ರೂ ಮನಸ್ಸು ಮಾತ್ರ ಕರಗಲ್ಲ. ಇದು ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ ನಡೆಯುತ್ತಿರುವ ದಂಧೆ.
ಹೌದು. ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳ ದರ್ಬಾರ್ ನಡೀತಿದ್ದು, ರೋಗಿಗಳು, ಸಂಬಂಧಿಕರು ಕಣ್ಣೀರಿಡ್ತಿದ್ದಾರೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಿಕ್ತಿಲ್ಲ

ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ರಾಜ್ಯದಲ್ಲಿ ಈಗಾಗಲೇ `ಜೀವರಕ್ಷಕ-108′ ಸೇವೆಯನ್ನು ಸದೃಢಗೊಳಿಸಿದ್ದೇವೆ ಅಂತಾ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಬಡವರಿಗೆ ಮಾತ್ರ ಈ ಯೋಜನೆಯ ಫಲ ತಲುಪುತ್ತಿಲ್ಲ ಎನ್ನುವುದು ರಹಸ್ಯ ಕಾರ್ಯಾಚರಣೆಯಲ್ಲಿ ಸಾಬೀತಾಗಿದೆ.
ವಿಕ್ಟೋರಿಯಾಗೆ ಸಾಮಾನ್ಯವಾಗಿ ಬೇರೆ ಆಸ್ಪತ್ರೆಯಿಂದ ಟೆಸ್ಟಿಂಗ್, ಸ್ಕ್ಯಾನಿಂಗ್‌ಗೆ ಅಂತಾ ರೋಗಿಗಳು ಬರ‍್ತಾರೆ. ಅವರನ್ನು ಆಂಬುಲೆನ್ಸ್‌ನಲ್ಲಿ ಶಿಫ್ಟ್ ಮಾಡಬೇಕಾದ್ರೇ ರೋಗಿ ಕಡೆಯವರು ಜೇಬು ತುಂಬಾ ದುಡ್ಡಿಟ್ಟುಕೊಂಡಿರಬೇಕು. ದುಡ್ಡು ಕೊಟ್ಟರೂ ಜೀವಕ್ಕೆ ಗ್ಯಾರೆಂಟಿನೇ ಇಲ್ಲ. ಯಾಕಂದ್ರೆ, ಇಲ್ಲಿ ಆಂಬುಲೆನ್ಸ್ ಡ್ರೈವರ್‌ಗಳೇ ನರ್ಸ್‌ಗಳು. ರೋಗಿಗೆ ಆಕ್ಸಿಜನ್ ಕೂಡ ಇವರೇ ಕನೆಕ್ಟ್ ಮಾಡ್ತಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೀತಿರೋ ಖಾಸಗಿ ಆಂಬುಲೆನ್ಸ್ ದಂಧೆಯನ್ನು ಹಂತ-ಹಂತವಾಗಿ ಪಬ್ಲಿಕ್ ಟಿವಿ ಬಯಲು ಮಾಡಿದೆ ನೋಡಿ. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ ಈಶ್ವರಪ್ಪ

ರಹಸ್ಯ ಬಯಲಾಗಿದ್ದು ಹೇಗೆ?
ಬೌರಿಂಗ್‌ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ಅಂತಾ ಆಕ್ಸಿಡೆಂಟ್ ಆದ ಯುವಕನನ್ನು ಕರೆತರಲಾಗಿತ್ತು. ಸ್ಕ್ಯಾನಿಂಗ್ ಮುಗಿದ ಬಳಿಕ ವಾಪಸ್ ಬೌರಿಂಗ್‌ಗೆ ಹೋಗೋಕೆ 1,500 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ. ಸರ್ಕಾರಿ ಆಂಬುಲೆನ್ಸ್ 108ಕ್ಕೆ ಕರೆ ಮಾಡಿದ್ರೇ ಸ್ಪಂದನೆ ಸಿಕ್ಕಿಲ್ಲ.ಇದೇ ವೇಳೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾರಣೆ ಮೂಲಕ ಸತ್ಯಾಸತ್ಯತೆಗಳನ್ನ ಬಯಲು ಮಾಡಿದೆ. ವೇಳೆ ವಿಕ್ಟೋರಿಯಾದಿಂದ ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲು 1,500 ರೂಪಾಯಿ ಕೇಳೋ ಆಂಬುಲೆನ್ಸ್ ಡ್ರೈವರ್.. ಗಾಡಿಲಿ ನಾನೇ ನರ್ಸ್ ಇದ್ದಂತೆ.. ನಾನೇ ಆಕ್ಸಿಜನ್ ಹಾಕೋದು ಅಂತ ಹೇಳಿದ್ದಾನೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್- ಫೈನಲ್‌ಗೆ ನೀರಜ್ ಚೋಪ್ರಾ

ಸಾಂದರ್ಭಿಕ ಚಿತ್ರ ಇದು ರೋಗಿಗಳ ಕಡೆಯವರ ಬಳಿ ವಸೂಲಿ ದಂಧೆಯಾದರೆ ಇನ್ನೂ ಆಯಾಯ ಚಾಲಕರಿಗೆ ಒಪಿಡಿ ವಾರ್ಡ್, ಎಮರ್ಜೆನ್ಸಿ ವಾರ್ಡ್ ಅಂತಾ ಪ್ರತ್ಯೇಕವಾಗಿ ಫಿಕ್ಸ್ ಮಾಡಿಕೊಂಡಿದ್ದಾರೆ. ಒಬ್ಬರ ವಲಯದ ರೋಗಿಗಳನ್ನು ಇನ್ನೊಬ್ಬರು ಕಮ್ಮಿ ರೇಟ್‌ಗೆ ಶಿಫ್ಟ್ ಮಾಡೋ ಹಾಗಿಯೇ ಇಲ್ಲ. ಸರ್ಕಾರಿ ಆಂಬುಲೆನ್ಸ್‌ನವರು ಕರೆದೆಡೆ ಬರೋದಿಲ್ಲ. ಇದು ಪ್ರೈವೆಟ್ ಆಂಬುಲೆನ್ಸ್‌ನವರಿಗೆ ವರದಾನವಾಗಿದೆ. ಆಸ್ಪತ್ರೆಯ ಸುತ್ತಾಮುತ್ತಾ ಆಂಬುಲೆನ್ಸ್ ಡೀಲ್ ಕುದುರಿಸೋಕೆ ಅಂತಾನೆ ಡೀಲ್ ರಾಜರು ಕೂತಿರ‍್ತಾರೆ ಎನ್ನುವುದು ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ.
ರಹಸ್ಯ ಕಾರ್ಯಾಚರಣೆಯ ಸಂಭಾಷಣೆ:
ಪಬ್ಲಿಕ್ ಟಿವಿ: ಬೌರಿಂಗ್ ಆಸ್ಪತ್ರೆಗೆ … ಎಷ್ಟಣ್ಣ ಬರ್ತಿರಾ?
ಡ್ರೈವರ್: ಎಲ್ಲಿದ್ದಾರೆ ಪೇಷೆಂಟ್?ಪಬ್ಲಿಕ್ ಟಿವಿ: ಸ್ಕ್ಯಾನಿಂಗ್‌ನಲ್ಲಿದ್ದಾರೆ.. ಎಷ್ಟು ಆಗುತ್ತೆ..?
ಡ್ರೈವರ್: 1,200 ಆಗುತ್ತೆಪಬ್ಲಿಕ್ ಟಿವಿ: ಜಾಸ್ತಿ ಆಯ್ತಲ್ಲ..
ಡ್ರೈವರ್: ಏನಿಲ್ಲ ಬೇರೆ ಯಾರಿಗಾದ್ರೂ ಕೇಳಿ ಅಷ್ಟೇ 1,500..ಪಬ್ಲಿಕ್ ಟಿವಿ: ರಾಮಯ್ಯಕ್ಕೆ ಎಷ್ಟು?
ಡ್ರೈವರ್: 1,500 ರೂ.ಪಬ್ಲಿಕ್ ಟಿವಿ: ನರ್ಸ್ ಇದ್ದಾರಾ?
ಡ್ರೈವರ್: ಸರ್ಕಾರದ ಆಂಬುಲೆನ್ಸ್‌ನಲ್ಲಿ ಮಾತ್ರ ಇರೋದು, ಇದ್ರಲ್ಲಿ ಬರಲ್ಲ…ಪಬ್ಲಿಕ್ ಟಿವಿ: ಆದ್ರೆ ನರ್ಸ್ ಬೇಕಲ್ಲ.
ಡ್ರೈವರ್: ನಾನೇ ಎಲ್ಲಾ ಮೇಂಟೇನ್ ಮಾಡ್ತೀನಿ …Live Tv
[brid partner=56869869 player=32851 video=960834 autoplay=true]
