Tag: publictv
-

ಬಿಗ್ ಬುಲೆಟಿನ್ 10 OCTOBER 2022 Part-2
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 10 OCTOBER 2022 Part-3
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 10 OCTOBER 2022 Part-4
Live Tv
[brid partner=56869869 player=32851 video=960834 autoplay=true] -

ಫಟಾಫಟ್ ಅಂತ ಮಾಡಬಹುದು ಬ್ರೆಡ್ ದೋಸೆ – ಒಮ್ಮೆ ಟ್ರೈ ಮಾಡಿ
ನಿಮ್ಮ ರುಚಿಗೆಟ್ಟ ನಾಲಿಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ನಾವಿಂದು ಬ್ರೆಡ್ ನಿಂದ ಬೆಳಗ್ಗಿನ ಉಪಾಹಾರಕ್ಕೆ ದೋಸೆ ಹೇಗೆ ಮಾಡ್ಬೋದು ಅಂತ ಹೇಳಿ ಕೊಡ್ತೀವಿ. ಇದು ನಿಮ್ಮ ಟೈಮ್ ಉಳಿಸುತ್ತೆ, ರುಚಿಯಾಗಿಯೂ ಇರುತ್ತೆ. ಇನ್ನೇಕೆ ತಡ ಬನ್ನಿ ಹಾಗಾದ್ರೆ ಬ್ರೆಡ್ ದೋಸೆ ಮಾಡೋದು ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು:
* ಬ್ರೆಡ್ 1 ಕಪ್
* ರವೆ- 1 ಕಪ್
* ಅಕ್ಕಿ ಹಿಟ್ಟು-1 ಕಪ್
* ಮೊಸರು- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಸಕ್ಕರೆ 1 ಕಪ್
* ಅಡುಗೆ ಸೋಡಾ
* ಅಡುಗೆ ಎಣ್ಣೆ- 1 ಕಪ್
* ಅವಲಕ್ಕಿ- ಅರ್ಧ ಕಪ್ಮಾಡುವ ವಿಧಾನ:
* ಮೊದಲಿಗೆ ಬ್ರೆಡ್ ಕತ್ತರಿಸಿ ಸಣ್ಣ ತುಂಡುಗಳಾಗಿ ಮಾಡಿ.
* ಅದಕ್ಕೆ ಅಕ್ಕಿ ಹಿಟ್ಟು, ಮೊಸರು, ರವೆ, ಟೀಸ್ಪೂನ್ ಉಪ್ಪು, ಅವಲಕ್ಕಿ, ಸಕ್ಕರೆ ಸೇರಿಸಿ ಈ ಮಿಶ್ರಣಕ್ಕೆ 1 ಕಪ್ ನೀರು ಸೇರಿಸಿ, 20 ನಿಮಿಷಗಳ ಕಾಲ ನೆನೆಯಲು ಬಿಡಿ.
* 20 ನಿಮಿಷಗಳ ನಂತರ, ಇದನ್ನು ಮಿಕ್ಸಿಗೆ ಹಾಕಿ, ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
* ಈ ಹಿಟ್ಟನ್ನು ಒಂದು ಬೌಲ್‍ಗೆ ಹಾಕಿ, ಅಡುಗೆ ಸೋಡಾ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ
* ಈಗ ದೋಸೆ ಪ್ಯಾನ್ ಬಿಸಿ ಮಾಡಿ ನೀರು ಚಿಮುಕಿಸಿ, ಟಿಶ್ಯೂ ಪೇಪರ್ ನಿಂದ ಒರೆಸಿ. ದೋಸೆ ಹಿಟ್ಟನ್ನು ಹಾಕಿ, ಸಾಧ್ಯವಾದಷ್ಟು ತೆಳುವಾಗಿ ಹರಡಿಕೊಳ್ಳಿ.
* ನಂತರ ಎಣ್ಣೆಯನ್ನು ಸ್ವಲ್ಪ ಹಾಕಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಲೋ ಫ್ಲೇಮ್‍ನಲ್ಲಿ ಬೇಯಿಸಿದರೆ ದೋಸೆ ಸವಿಯಲು ಸಿದ್ಧವಾಗುತ್ತದೆ.Live Tv
[brid partner=56869869 player=32851 video=960834 autoplay=true] -

ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ
ಸಿಹಿ ತಿಂಡಿಯನ್ನು ಹಲವರು ತುಂಬಾ ಇಷ್ಟ ಪಡುತ್ತಾರೆ. ಅಂತಹವರಿಗಾಗಿ ನಾವು ಇಂದು ಜಿಲೇಬಿ ಮಾಡುವುದನ್ನು ತಿಳಿಸಿಕೊಡುತ್ತೇವೆ. ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಾವು ಇಂದು ಈ ಸಿಹಿಯಾದ ಜಿಲೇಬಿ ಮಾಡಲು ಬೇಕಾಗಿರುವ ಪದಾರ್ಥಗಳ ಪಟ್ಟಿಗಳ ಜೊತೆಗೆ ಮಾಡುವ ಸರಳ ವಿಧಾನವನ್ನು ವಿವರಿಸಿದ್ದೇವೆ.

ಬೇಕಾಗುವ ಪದಾರ್ಥಗಳು:
* ಸಕ್ಕರೆ- 2 ಕಪ್
* ಮೈದಾ ಹಿಟ್ಟು-2 ಕಪ್
* ಮೊಸರು-1 ಕಪ್
* ಬೇಕಿಂಗ್ ಸೋಡಾ- ಸ್ವಲ್ಪ
* ಕೇಸರಿ ದಳ- ಸ್ವಲ್ಪ
* ಹಾಲು- 1 ಕಪ್
* ನಿಂಬೆ ರಸ- ಸ್ವಲ್ಪ
* ಏಲಕ್ಕಿ ಪುಡಿ- ಸ್ವಲ್ಪ
* ಅಡುಗೆ ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ
ಮಾಡುವ ವಿಧಾನ:
* ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ.
* ನಂತರ ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ.
* ನಂತರ ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.
* ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ
* ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಒಲೆಯ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಖಾಲಿ ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.* ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧವಾಗುತ್ತದೆ.
Live Tv
[brid partner=56869869 player=32851 video=960834 autoplay=true] -

ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ
ಹಬ್ಬದ ದಿನ ಸಿಹಿಯಾದ ಅಡುಗೆ ತುಂಬಾ ಸ್ಪೆಷಲ್ ಆಗಿರುತ್ತದೆ. ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಲಾಗುತ್ತದೆ. ದಸರಾ ಹಬ್ಬಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಹಬ್ಬದ ದಿನ ಭಕ್ಷ್ಯ-ಭೋಜ್ಯಗಳಿಗೆ ಮಾನ್ಯತೆಯನ್ನು ನೀಡಿತ್ತೇವೆ. 9 ದಿನ ಆಚರಿಸುವ ಈ ವಿಶೇಷ ಹಬ್ಬಕ್ಕೆಂದು ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ. ನಾವು ಇಂದು ಹುರಿಗಡಲೆ ಪೇಡಾ ಮಾಡುವ ವಿಧಾನವನ್ನು ನೋಡೋಣ.

ಬೇಕಾಗುವ ಪದಾರ್ಥಗಳು:
* ಹುರಿಗಡಲೆ ಪುಡಿ- ಅರ್ಧಬಟ್ಟಲು
* ಕೇಸರಿ- ಸ್ವಲ್ಪ
* ಹಾಲು- 1 ಕಪ್
* ತುಪ್ಪ- ಅರ್ಧ ಕಪ್
* ಸಕ್ಕರೆ ಪುಡಿ- 1ಕಪ್
* ಏಲಕ್ಕಿ ಪುಡಿ-ಅರ್ಧ ಚಮಚಮಾಡುವ ವಿಧಾನ:
* ಮೊದಲಿಗೆ ಸಣ್ಣ ಪಾತ್ರೆಗೆ ತುಪ್ಪ, ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು.
* ನಂತರ ಇದಕ್ಕೆ ಹುರಿಗಡಲೆ ಪುಡಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?
* ನಂತರ ಹಾಲಿಗೆ ಕೇಸರಿ ದಳಗಳನ್ನು ಹಾಕಿಟ್ಟುಕೊಳ್ಳಬೇಕು.
* ಈಗ ಕೇಸರಿದಳದಲ್ಲಿ ನೆನೆದ ಹಾಲನ್ನು ಸ್ವಲ್ಪ ಸ್ವಲ್ಪವೇ ಹುರಿಗಡಲೆಗೆ ಹಾಕಿ ಮೃದುವಾಗಿ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ
* ನಂತರ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ನಿಮಗೆ ಬೇಕಾದ ಆಕಾರಕ್ಕೆ ಮಾಡಿಕೊಂಡು, ಡ್ರೈಫ್ರೂಟ್ಸ್‌ನಿಂದ ಅಲಂಕರಿಸಿದರೆ ರುಚಿಕರವಾದ ಹುರಿಗಡಲೆ ಪೇಡಾ ಸವಿಯಲು ಸಿದ್ಧವಾಗುತ್ತದೆ.
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 2 OCTOBER 2022 Part-1
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ 2 OCTOBER 2022 Part-2
Live Tv
[brid partner=56869869 player=32851 video=960834 autoplay=true] -

ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್
ಆರೋಗ್ಯಕರವಾದ ಮತ್ತು ನಾಲಿಗೆಗೆ ರುಚಿ ನೀಡುವ ಆಹಾರ ಎಲ್ಲರಿಗೂ ಇಷ್ಟವಾಗುತ್ತದೆ. ನವರಾತ್ರಿ ಹಬ್ಬದಲ್ಲಿ ನೈವೇದ್ಯಕ್ಕೆ ಮಾಡುವ ನವಧಾನ್ಯ ಉಸ್ಲಿ ಎಲ್ಲ ಬಗೆಯ ವಿಟಮಿನ್‍ಗಳನ್ನು ಒಳಗೊಂಡಿದೆ. ಈ ಉಸ್ಲಿಗೆ 9 ಬಗೆಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಬೇಕಾಗುವ ಪ್ರೋಟಿನ್ ಅಂಶವನ್ನು ಒದಗಿಸುತ್ತದೆ. ಬನ್ನಿ ನವಧಾನ್ಯ ಉಸ್ಲಿ ಮಾಡುವ ವಿಧಾನವನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು:
* ಹೆಸರು – ಅರ್ಧ ಕಪ್
* ಕಾಬೂಲ್ ಕಡ್ಲೆ- ಅರ್ಧ ಕಪ್
* ಹುರುಳಿ ಕಾಳು- ಅರ್ಧ ಕಪ್
* ಅಲಸಂದೆ ಕಾಳು- ಅರ್ಧ ಕಪ್
* ಕಡ್ಲೆ-ಅರ್ಧ ಕಪ್
* ಬಿಳಿ ಬಟಾಣಿ- ಅರ್ಧ ಕಪ್
* ಬಿಳಿ ಅಲಸಂದೆ ಕಾಳು-ಅರ್ಧ ಕಪ್
* ಶೇಂಗಾ- ಅರ್ಧ ಕಪ್
* ಹಸಿರು ಬಟಾಣಿ- ಅರ್ಧ ಕಪ್
* ಒಣಮೆಣಸು- 2
* ಜೀರಿಗೆ- 1 ಟೀ ಸ್ಪೂನ್
* ತೆಂಗಿನ ಕಾಯಿ- ಅರ್ಧ ಕಪ್
* ಸಾಸಿವೆ- 1 ಟೀ ಸ್ಪೂನ್
* ಹಸಿಮೆಣಸು- 2
* ಕೊತ್ತಂಬರಿ- ಸ್ವಲ್ಪ
* ಇಂಗು- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 1 ಕಪ್
* ಕರೀಬೇವು- ಸ್ವಲ್ಪ
* ಉದ್ದಿನ ಬೆಳೆ, ಕಡ್ಲೆ ಬೆಳೆ- 1 ಟೀ ಸ್ಪೂನ್ ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ
ಮಾಡುವ ವಿಧಾನ:
* ಈ 9 ನವಧಾನ್ಯ ಕಾಳುಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಟ್ಟಿರಬೇಕು. ನಂತರ ಇದನ್ನು ಕುಕ್ಕರ್‌ನಲ್ಲಿ ಹಾಕಿ 2 ವಿಶಿಲ್ ಕುಗಿಸಿಕೊಳ್ಳಬೇಕು.* ಜೀರಿಗೆ, ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

* ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೆಳೆ, ಕಡ್ಲೆಬೆಳೆ, ಇಂಗು, ಕರಿಬೇವು, ಹಸಿಮೆಣಸು, ಒಣಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ನಂತರ ಈ ಮೊದಲೇ ಬೇಯಿಸಿಕೊಂಡ ಕಾಳನ್ನು ನೀರಿನಿಂದ ಬೇರ್ಪಡಿಸಿ ಕಾಳುಗಳನ್ನು ಮಾತ್ರ ಈ ಒಗ್ಗರಣೆಯ ಪಾತ್ರೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಫ್ರೈ ಮಾಡಿ.

* ಈ ಮೊದಲು ತಯಾರಿಸಿಟ್ಟ ಕಾಯಿಯ ಮಿಶ್ರಣ ಮತ್ತು ಕೊತ್ತಂಬರಿಯನ್ನು ಕೊನೆಯಲ್ಲಿ ಸೇರಿಸಿ ಬೇಯಿಸಿದರೆ ರುಚಿಯಾದ ನವಧಾನ್ಯ ಕಾಳುಗಳ ಉಸ್ಲಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಉಪವಾಸ- ಈ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
Live Tv
[brid partner=56869869 player=32851 video=960834 autoplay=true]
